ಸಾಧಿಸ ಹೊರಟರೆ ಸಾವಿರ ಭಯ; ಧೈರ್ಯವೊಂದೇ ದಾರಿದೀಪ
ಪರಿಶ್ರಮ
ಪ್ರದೀಪ್‌ ಈಶ್ವರ್‌
ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಧಿಸುವ ಛಲದ ಜತೆ ಧೈರ್ಯ ಬಹಳ ಮುಖ್ಯ. ಸಾಕಷ್ಟು ಮಂದಿ ವಿದ್ಯಾವಂತರ ನಡುವೆ ಕೆಲವೇ ಕೆಲವರು ಬದುಕಿನ ಯಶಸ್ಸಿನ ಸಾಮ್ರಾಜ್ಯವನ್ನು ನಿರ್ಮಿಸಿರುತ್ತಾರೆ. ಕಾರಣ ವಿದ್ಯೆಯು ಉದ್ಯೋಗ ನೀಡುತ್ತದೆ. ಆದರೆ ವಿದ್ಯೆ ಮತ್ತು ಧೈರ್ಯ ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗ ನೀಡುವ ಉದ್ಯಮಿಯಾಗಿಸುತ್ತದೆ.
ಗೆಲುವಿನ ಬೆನ್ನೇರಿ ಹೊರಟವರಿಗೆ, ಆತ್ಮವಿಶ್ವಾಸ, ಸಿದ್ಧತೆ, ಸೋತಾಗ ವುಟಿದೇಳುವ ಭರವಸೆ, ಯಾವುದಕ್ಕೂ ಅಂಜದ ಧೈರ್ಯ ಅತಿಮುಖ್ಯ. ವಿಚಿತ್ರ ಮತ್ತು ವಿಭಿನ್ನ ಭಯಗಳು ಪ್ರತಿಯೊಬ್ಬರನ್ನೂ ಕಾಡುತ್ತಿರುತ್ತವೆ. ಸಾಽಸಲು ಹೊರಟರೆ ಸಾವಿರ ಭಯಗಳು. ಆತ್ಮವಿಶ್ವಾಸ ಎಷ್ಟೇ ಇದ್ದರು ಅಭದ್ರತೆಯೆನ್ನುವುದುಗೆಲು ವನ್ನ ಹಳ್ಳ ಹಿಡಿಸಿಬಿಡುತ್ತೆ.
ಧೈರ್ಯವೆಂದರೆ ಭಯ ಇಲ್ಲದಿರುವುದಲ್ಲ. ಭಯವನ್ನ ನಿಯಂತ್ರಿಸುವುದು. ಭಯದ ಭಯದಿಂದ ಹೊರಬರು ವುದು. ಧೈರ್ಯದ ಜತೆ ಗೆಳೆತನ ಮಾಡುವುದು. ಅಹಂಕಾರವನ್ನು ಹೊಸ್ತಿಲಿನಿಂದ ಹೊರಬಿಡುವುದು. ದುರಂಕಾರದ ಜತೆ ಮುನಿಸಿಕೊಳ್ಳುವುದು. ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಧಿಸುವ ಛಲದ ಜತೆ ಧೈರ್ಯ ಬಹಳ ಮುಖ್ಯ. ಸಾಕಷ್ಟು ಮಂದಿ ವಿದ್ಯಾವಂತರ ನಡುವೆ ಕೆಲವೇ ಕೆಲವರು ಬದುಕಿನ ಯಶಸ್ಸಿನ ಸಾಮ್ರಾಜ್ಯವನ್ನು ನಿರ್ಮಿಸಿರುತ್ತಾರೆ. ಕಾರಣ ವಿದ್ಯೆ ಉದ್ಯೋಗ ನೀಡುತ್ತದೆ, ವಿದ್ಯೆ ಮತ್ತು ಧೈರ್ಯ ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗ ನೀಡುವ ಉದ್ಯಮಿಯಾಗಿಸುತ್ತದೆ. ಆ ಹುಡುಗನ ಹೆಸರು ಸಂಜೀವ್ ಅಗರ್‌ ವಾಲ್ ಅಂತ.
ರಾಜಸ್ಥಾನದ ಕೋಟ ಸಮೀಪದ ಒಂದು ಹಳ್ಳಿಯ ಹುಡುಗ. ತಂದೆ ಅನಾರೋಗ್ಯದಿಂದ ಈ ಪ್ರಪಂಚವನ್ನ ಬಿಟ್ಟುಹೋದರು. ಅಮ್ಮ ಅನಾರೋಗ್ಯದಿಂದ ನರಳುತಿದ್ದರು. ಈತನಿಗೆ ಓದಿ ವೈದ್ಯನಾಗಬೇಕು. ಜೀವನದಲ್ಲಿ ಸಾಧಿಸಬೇಕೆಂಬ ದೊಡ್ಡ ಉತ್ಸಾಹ. ಆದರೆ ಆರ್ಥಿಕ ಚೈತನ್ಯವಿರಲಿಲ್ಲ. ರಾಜಸ್ಥಾನದ ಕೋಟಾದಲ್ಲಿ ಬಹಳಷ್ಟು ಕೋಚಿಂಗ್ ಸೆಂಟರ್‌ಗಳಿವೆ. ಅಲ್ಲಿ ಕೋಚಿಂಗ್ ಪಡೆಯಬೇಕೆಂಬ ಆಸೆ. ಆದರೆ ಆರ್ಥಿಕ ಶಕ್ತಿಯಿರಲಿಲ್ಲ. ಆದರೂ ಸಂಬಂಧಿಕರಿಂದ ದುಡ್ಡು ಪಡೆದು, ಸ್ಥಳೀಯ ಕೋಚಿಂಗ್ ಸೆಂಟರ್‌ನಲ್ಲಿ ದಾಖಲಾಗಿ ದಿನಕ್ಕೆ 12 ರಿಂದ 13 ತಾಸು ಅಧ್ಯಯನ ಮಾಡಿದ.
ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್ ಗಳಿಸಿ ನಂತರ ದೇಶದ ಪ್ರತಿಷ್ಠಿತ ಏಮ್ಸ ವಿದ್ಯಾಸಂಸ್ಥೆಯಲ್ಲಿ ಸೀಟು ಗಳಿಸಿದ. ಸಂಜೀವ್ ಅಗರ್‌ವಾಲ್ ನನ್ನು ಸ್ಥಳೀಯ ಪತ್ರಿಕಾ ಮಾಧ್ಯಮದವರು ಸಂದರ್ಶಿಸಿ, ‘ಈ ಗೆಲುವು ಹೇಗೆ ಸಾಧ್ಯವಾಯಿತು?’ ಎಂದು ಪ್ರಶ್ನಿಸಿದರು. ಆತ ಹೇಳಿದ್ದೇನು ಗೊತ್ತೇ? ‘ಜಸ್ಟ್ ಗಟ್ಸ್-ಕೇವಲ ಧೈರ್ಯ. ಧೈರ್ಯವೇ ನನ್ನ ಆಸ್ತಿ’. ಸಂಜೀವ್ ಅಗರ್‌ವಾಲ್‌ರಂತಹ ಬಹಳಷ್ಟು ಹುಡುಗರು ಧೈರ್ಯವನ್ನು ನಂಬಿಕೊಂಡು ಯಶಸ್ಸಿನ ಶಿಖರವನ್ನ ಏರಿzರೆ.ಬದುಕಿನ ಪ್ರತಿ ಹಂತದಲ್ಲಿ ನಕಾರಾತ್ಮಕವಾಗಿ ಮಾತನಾಡುವವರು ಇದ್ದೇ ಇರುತ್ತಾರೆ. ಏನಾದರು ಸಾಧಿಸಲು ಹೊರಟರೆ ಬೆಕ್ಕಿಗಿಂತ ಬೆಕ್ಕಿನಂತೆ ಮನುಷ್ಯರೇ ಅಡ್ಡಿಯಾಗುತ್ತಾರೆ. ಆಕಾಶವೇ ಹಾರಿಹೋದರೂ ಆತ್ಮವಿಶ್ವಾಸ ಬಿಟ್ಟುಹೋಗಬಾರದು. ಅಚಲವಾದ ನಂಬಿಕೆ ಕಳೆದುಹೋಗಬಾರದು. ಸಾಧಿಸುವ ಹಂಬಲ ಕಡಿಮೆಯಾಗಬಾರದು.
ವಿಮರ್ಶೆಗೆ ಹೆದರಬಾರದು. ವಿಮರ್ಶಕರನ್ನ ಬಿಡದೇ ಜೋಪಾನವಾಗಿ ಕಾಪಾಡಿಕೊಂಡು ಅವರ ಮುಂದೆಯೇ ಗೆದ್ದು ತೋರಿಸಬೇಕು. ಗೆಲುವಿಗಿಂತ ಯಾವುದುಮುಖ್ಯವಲ್ಲ ಎಂದು ನಂಬಬೇಕು. ನಿನ್ನೆಯ ಬಗ್ಗೆ ಯೋಚಿಸಬಾರದು, ನಮ್ಮ ಯೋಚನೆಗಳೇನಿದ್ದರೂ ನಾಳೆಯ ಬಗ್ಗೆ ಮಾತ್ರ. ನಿನ್ನ ಧೈರ್ಯದ ಮುಂದೆ ಪ್ರಪಂಚದ ಯಾವ ಶಕ್ತಿಯಾದರು ಸೋಲುತ್ತದೆ. ಎಂತಹ ಪ್ರತಿಕೂಲದ ಪರಿಸ್ಥಿತಿಯಲ್ಲೂ ಧೈರ್ಯವಿದ್ದರೇ ಗೆಲ್ಲಬಹುದು. ಕರೀಂ ನಸೇರಿ ಇಸ್ರೇಲ್ ಮೂಲದ ವ್ಯಕ್ತಿ. ಪ್ಯಾರಿಸ್ಡಿಗಾಲೆ ಏರ್‌ಪೋರ್ಟ್‌ನಲ್ಲಿ ಬಂಽತನಾಗಿ ೧೭ ವರ್ಷಗಳನ್ನು ಕಳೆದಿದ್ದ. ಪ್ರತಿನಿತ್ಯ ಏರ್‌ಪೋಟ್‌ನಲ್ಲೇ ಸೆರೆಮನೆವಾಸ. 17 ವರ್ಷಗಳ ಕಾಲ ನಿರಂತರವಾಗಿ ಪ್ಯಾರಿಸ್ ಡಿಗಾಲಯ ಏರ್‌ಪೋರ್ಟ್‌ನಿಂದಲೇ ಹೊರಜಗತ್ತನ್ನು ಆಸೆಕಂಗಳಿಂದ ನೋಡುತ್ತ, ಸ್ವತಂತ್ರನಾಗುವ ಕನಸು ಕಾಣುತ್ತಿದ್ದ.
ಒಂದಿನಿತೂ ಧೈರ್ಯ ಕಳೆದುಕೊಳ್ಳದೆ ಪ್ರಪಂಚಕ್ಕೆ ಮತ್ತೆ ಪರಿಚಯವಾದ. ಅದೊಂದು ದಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವಾಸನಿಮಿತ್ತ ಬಂದಿದ್ದ ಖ್ಯಾತ ನಿರ್ದೇಶಕನೊಬ್ಬ ಆತನ ಬದುಕಿಯ ಕಥೆಯನ್ನ ಕೇಳಿ ‘ದಿ ಟರ್ಮಿನಲ್’ ಎಂಬ ಸಿನಿಮಾ ನಿರ್ಮಿಸಿಬಿಟ್ಟ. ಕರೀಂ ಮನೆಮಾತಾಗಿಬಿಟ್ಟ. ಹಾಗೆ ಸುದೀರ್ಘ ವನವಾಸ ಅನುಭವಿಸಿದ್ದ ಕರೀಂ ನಸೇರಿ ಧೈರ್ಯದಿಂದ ಇವತ್ತು ಪ್ರಪಂಚದಲ್ಲಿ ಹೊಸ ಬದುಕನ್ನ, ಹೊಸ ಜೀವನವನ್ನ, ಬಾಳಿನ ಹೊಸ ಹಾದಿಯನ್ನ ರೂಪಿಸಿ ಕೊಂಡಿದ್ದಾರೆ.
ಧೈರ್ಯ ಒಂದಿದ್ದರೆ ಏನನ್ನು ಕಾದರೂ ಸಾಧಿಸಬಹುದು ಎಂಬುದಕ್ಕೆ ಕರೀಂ ನಸೇರಿನಂತಹ ಬಹಳಷ್ಟು ಮಂದಿ ಸಾಕ್ಷಿ. ಅದು ಗುಜರಾತಿನ ಸಣ್ಣ ಹಳ್ಳಿ. ಕರ್ಸನ್ ಬಾಯಿ ಪಾಟೀಲ್‌ನ ತಂಗಿಯ ಮದುವೆ ನಿಶ್ಚಯವಾಗಿತ್ತು. ಹಣಕಾಸಿನ ಕೊರತೆ ಇತ್ತು. ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ದೊಡ್ಡ ಬಯಕೆ. ಆದರೂ ಆರ್ಥಿಕ ಚೈತನ್ಯವಿಲ್ಲದ ಕಾರಣ ಪರಿತಪಿಸುತ್ತಿದ್ದ . ಆತನಿಗೆ ಗೊತ್ತಿದ್ದ ಕಲೆ ತೆಗೆವ ಕಲೆಯನ್ನೇ ಬಳಸಿಕೊಂಡು ತನ್ನದೇ ಆದಂತಹ ಒಂದು ಉತ್ಪನ್ನವನ್ನ ತಯಾರಿಸಿದ. ಆ ಉತ್ಪನ್ನ ಯಾವ ಮಟ್ಟಿಗೆ ಯಶಸ್ವಿಯಾಯಿತೆಂದರೆ ಇವಾಗ ನಿರ್ಮಾ’ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಖ್ಯಾತಿಯನ್ನು, ವ್ಯಾಪ್ತಿಯನ್ನು ಗಳಿಸಿದೆ. ತಂಗಿಯ ಮೇಲೆ ಪ್ರೀತಿಗೆ ತಯಾರಾದ ಉತ್ಪನ್ನ ಇವತ್ತು ನಿರ್ಮಾ ಆಗಿ ಮಾರುಕಟ್ಟೆಯಲ್ಲಿ ತನ್ನದೇ ಆದ ಅಸ್ತಿತ್ವ, ಬ್ರಾಂಡ್ ಖ್ಯಾತಿಯನ್ನು ಕಾಪಾಡಿಕೊಂಡಿದೆ. ಅವತ್ತು ಕರ್ಸನ್ ಬಾಯಿ ಪಾಟೀಲ್ ತೋರಿದ ಧೈರ್ಯವೇ ಇವತ್ತು ಆತನನ್ನು ಈ ಎತ್ತರಕ್ಕೆ ಬೆಳೆಸಿದೆ.
ಬಡಕುಟುಂಬದಲ್ಲಿ ಹುಟ್ಟಿಬೆಳೆದ ಮುತ್ತುರಾಜ್ ಎಂಬ ಹುಡುಗ ನಂತರ ಕನ್ನಡಿಗರ ಆರಾಧ್ಯದೈವವಾಗಿದ್ದು, ಕನ್ನಡಿಗರ ಸ್ವಾಭಿಮಾನಿದ ಪ್ರತೀಕವಾಗಿ ಡಾ.ರಾಜ ಕುಮಾರ್ ಆಗಿದ್ದು ಧೈರ್ಯದಿಂದಲೇ. ಆಂಧ್ರಪ್ರದೇಶದ ತಿರುಪತಿಯ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿಬೆಳೆದಂತಹ ಹುಡುಗಿ ಭಾರತದ ಮೊದಲ ಫೀಮೇಲ್ ಸೂಪರ್ ಸ್ಟಾರ್ ಶ್ರೀದೇವಿಯಾಗಿದ್ದು ಧೈರ್ಯದಿಂದಲೇ. ಆಲ್ ಇಂಡಿಯಾ ರೇಡಿಯೋದಿಂದ ಕೆಲಸವನ್ನ ಕಳೆದುಕೊಂಡು ಅವಮಾನಕ್ಕೆ ಒಳಪಟ್ಟು ಬೇಸರದಿಂದ ಮನೆ ಸೇರಿಕೊಂಡು ಇನ್ನು ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲವೆಂದು ಕೊರಗುತ್ತಿದ್ದ ಹುಡುಗ ಬಾಲಿವುಡ್‌ನ ರೂಲ್ ಮಾಡಿದ.
ಅಮಿತಾಬ್ ಬಚ್ಚನ್ ಆಗಿದ್ದು ಧೈರ್ಯದಿಂದಲೇ, ಬೆಂಗಳೂರಿಂದ ಚನ್ನೈಗೆ ವಲಸೆ ಹೋಗಿ ಒಂದು ಹೊತ್ತು ಊಟಕ್ಕೂ ಪರಿತಪಿಸಿದ ಹುಡುಗ ಶಿವಾಜಿ ರಾವ್ ಗಾಯಕ್ವಾಡ್ ಸೂಪರ್ ಸ್ಟಾರ್ ರಜನಿಕಾಂತ್ ಆಗಿದ್ದು ಧೈರ್ಯ ದಿಂದಲೇ ತಾನೇ? ಉತ್ತರಕನ್ನಡದ ಹಳ್ಳಿಯ ಮೂಲೆಯೊಂದರ ಸಾಮಾನ್ಯ ಕುಟುಂಬದಿಂದ ಬಂದ ಹುಡುಗ ಕನ್ನಡ ಪತ್ರಿಕೋದ್ಯಮದ ತಾಕತ್ತನ್ನ ದೇಶಕ್ಕೇ ತೋರಿಸಿ ಕೊಟ್ಟು ನೂರಾರು ಯಶಸ್ವಿ ಪತ್ರಕರ್ತರನ್ನ ಸಮಾಜಕ್ಕೆ ಕೊಟ್ಟ ವಿಶ್ವೇಶ್ವರ ಭಟ್ಟರು, ಬೆಳೆದಿದ್ದು ಅದೇ ಧೈರ್ಯದಿಂದ ತಾನೇ? ಫೆಲ್ಯೂರ್, ಫೆಲ್ಯೂರ್, ಫೆಲ್ಯೂರ್ ಅಂತ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಹಂಗಿಸುತ್ತಿದ್ದರು.
ಅದೇ ಫೆಲ್ಯೂರ್ ಎಂಬ ಪಟ್ಟ ಕಟ್ಟಿಕೊಂಡಿದ್ದ ಹುಡುಗ ಮುಂದೊಂದು ದಿನ ಬ್ರಿಟನ್ ಪ್ರಧಾನಿಯಾಗಿ ಟೋನಿ ಬ್ಲೇರ್ ಆಗುತ್ತಾರೆ. ಧೈರ್ಯದಿಂದಲೇ ತಾನೇ ಇದುಸಾಧ್ಯವಾದದ್ದು? ಪೋಲೆಂಡ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಳು, ಪ್ರೀತಿಸಿ ಮದುವೆಯಾಗಿದಳು, ಒಂದು ಪುಟ್ಟ ಕಂದಮ್ಮನಿಗೂ ಜನ್ಮ ಕೊಟ್ಟಿದ್ದಳು. ಕಾರಣಾಂತರಗಳಿಂದ ಗಂಡ ಹೆಂಡತಿ ಬೇರೆಯಾದಾಗ ಇನ್ನೇನು ಸಾಯಬೇಕೆಂದು ತೀರ್ಮಾನಿಸಿದ ಆ ಹೆಣ್ಣುಮಗಳು ನಂತರ ಜೆ ಕೆ ರೌಲಿಂಗ್ ಆಗಿ ಹ್ಯಾರಿ ಪೋಟರ್ ಸೀರೀಸ್ ಲೇಖಕಿಯಾಗಿದ್ದೂ ಅದೇ ಧೈರ್ಯದಿಂದಲೇ.
೬೫ ವರ್ಷದ ವರೆಗೂ ಸತತ ಸೋಲನ್ನು ಕಂಡು ಏನನ್ನು ಸಾಧಿಸಲಾಗದೇ ಉಳಿದುಹೋಗಿದ್ದ ಕರ್ನಲ್, ಕೆಎಫ್ಸಿ ಚಿಕನ್ ಎಂಬ ಬೃಹತ್ ಸಂಸ್ಥೆಯ ಮಾಲೀಕರಾ ಗಿದ್ದು ಧೈರ್ಯದಿಂದಲೇ ತಾನೇ? ದೆಹಲಿಯ ಮ್ಯಾಕ್ ಡೊನಾಲ್ಡ್‌ ನಲ್ಲಿ ಸೇವಕಿಯಾಗಿ ಸೇವೆಸಲ್ಲಿಸಿ ಬದುಕಿನಲ್ಲಿ ತುಂಬ ಅವಮಾನಗಳನ್ನ ಅನುಭವಿಸಿದಂತಹ ಸ್ಮೃತಿ ಇರಾನಿ ಕೊನೆಗೆ ಕೇಂದ್ರ ಸಂಪುಟ ಸಚಿವೆ ಹುದ್ದೆಯವರೆಗೆ ಏರಿದರು…ಇಂಥ ನೂರಾರು, ಸಾವಿರಾರು ಉದಾಹರಣೆಗಳು ನಮ್ಮೆದುರಿವೆ.
ಬದುಕಿನಲಿ ಎಷ್ಟೋ ಸೋಲು, ನೋವು, ಅವಮಾನ, ಅಭದ್ರತೆ ಇಂಥವು ಎಷ್ಟೇ ಇದ್ದರೂ ಧೈರ್ಯವೇ ಇವರೆಲ್ಲರಿಗೆ ದಾರಿದೀಪವಾಗಿದ್ದು. ಹೀಗಾಗಿ ಬದುಕಿನಲ್ಲಿಎಷ್ಟೇ ಕಷ್ಟ ಬರಲಿ ಅಂಜಬೇಡಿ; ಧೈರ್ಯವಾಗಿರಿ. ಧೈರ್ಯವೊಂದೇ ನಿಮ್ಮನ್ನ ದಡಸೇರಿಸುತ್ತದೆ. ಸೋಲುವುದು ಸಹಜವೆಂದು ಗೊತ್ತಿದ್ದರೂ ಗೆಲ್ಲುವ ಭರವಸೆ ಕಳೆದುಕೊಳ್ಳಬಾರದು. ಸೋಲು ಎಂಬುದು ಗೆಲುವಿನ ವಿರುದ್ಧಾರ್ಥಕ ಪದವಲ್ಲ. ಸೋಲು ಗೆಲುವಿನ ಜತೆಗೆ ಇರುವಂಥದ್ದು. ಗೆಲುವಿಗೆ ಕನಸು ಕಾಣುವ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಪರೀಕ್ಷೆಯನ್ನ ಎದುರಿಸಿ ಉತ್ತೀರ್ಣರಾಗಬೇಕೆಂದು ಹೊರಟಿರುವ ವಿದ್ಯಾರ್ಥಿಯಾಗಿರಬಹುದು, ವ್ಯವಹಾರದಲ್ಲಿ ಗೆಲ್ಲಬೇಕೆಂದು ಹೊರಟಿರುವ ವಾಣಿಜ್ಯೋದ್ಯಮಿಯಾಗಿರಬಹುದು, ಪ್ರೀತಿಯಲ್ಲಿ ಗೆಲ್ಲಬೇಕೆಂದು ಹೊರಟಿರುವ ಯುವಕ – ಯುವತಿಯಾಗಿರಬಹುದು ಪ್ರತಿಯೊಂದೂಪ್ರಯತ್ನದಲ್ಲಿ ನಿಮ್ಮ ಯಶಸ್ಸಿಗೆ ಒಂದು ಸಾಧನವೇ ಧೈರ್ಯ.
ಅದು ನಿಮ್ಮೊಂದಿಗಿರಲಿ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಏಕಾಗ್ರತೆ ಕಳೆದುಕೊಳ್ಳಬೇಡಿ ಬದುಕಿನ ಬಗ್ಗೆ ದೊಡ್ಡ ಭರವಸೆ ಇರಲಿ. ನಿಮ್ಮ ನಂಬಿಕೆ ಮೇಲೆ ನಿಮಗೆ ಮತ್ತಷ್ಟು ನಂಬಿಕೆ ಹೆಚ್ಚಾಗಲಿ ಈ ಪ್ರಪಂಚದಲ್ಲಿ ಬದಲಾಗುವುದೊಂದೇ. ಅದು ಕಾಲ ಮಾತ್ರ. ಹೀಗೆ ಬದಲಾಗುವ ಎಲ್ಲ ಕಾಲದಲ್ಲೂ ಯಶಸ್ಸಿಗೆ ಇರುವ ಏಕೈಕ ಮಾರ್ಗ ಧೈರ್ಯವಾಗಿ ಮುನ್ನುಗ್ಗುವುದು. ಬದಲಾವಣೆ ಜತೆಗೆ ನಾವೂ ಬದಲಾಗದೆ ಉಳಿದುಹೋಗುವುದು ಸಲ್ಲ. ನಿಮ್ಮ ಮೇಲೆ ನಿನಗಿರುವ ನಂಬಿಕೆ ಯನ್ನು ಗಟ್ಟಿಗೊಳಿಸಿಕೊಂಡು ಧೈರ್ಯವಾಗಿ ಹೆಜ್ಜೆಯಿಡಿ, ಮುನ್ನಡೆಯಿರಿ. ನೀವು ಅಂದುಕೊಂಡಿದ್ದು ಸಾಽಸುವುದು ಖಚಿತ.
ಸಣ್ಣ ಸಣ್ಣ ವಿಷಯಗಳಲ್ಲಿ ಖುಷಿಯನ್ನ ಹುಡುಕಿ. ದುಃಖದ ಮೇಲೆ ಖುಷಿಯ ಪರದೆ ಎಳೆದರೆ ಬದುಕು ಇರುವಷ್ಟು ಕಾಲ ನೆಮ್ಮದಿ ಕಾಣಬಹುದು. ಖುಷಿಯಾಗಿರಬೇಕಾದರೇ ಧೈರ್ಯವಾಗಿರಿ. ನಾಯಿ ಬೊಗಳಿದರೆ ಸಿಂಹದ ಸಾಮ್ರಾಜ್ಯ ಹಾಳಾಗುವುದಿಲ್ಲ . ಭಯ ಬಿದ್ದವನು  ಬಾಯಿ ಬಡಿದುಕೊಳ್ಳುತ್ತಾನೆ. ಸಹಿಸಿಕೊಂಡವನುಸಾಮ್ರಾಜ್ಯ ಕಟ್ಟುತ್ತಾನೆ. ಇನ್ನೇಕೇ ತಡ ಧೈರ್ಯವಾಗಿರಿ.