ಅವರು ಇತಿಹಾಸದಲ್ಲಿ ಅಡಗಿದ್ದ ಸತ್ಯವನ್ನು ತೆರೆದಿಟ್ಟರು !
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್
dascapital1205@.
ವೇದಗಳು, ವೇದಾಂಗಗಳು, ಪುರಾಣಗಳು, ಗೀತೆ, ರಾಮಾಯಣ ಮಹಾಭಾರತದ ಬಗ್ಗೆ ಪುಂಖಾನುಪುಂಖವಾಗಿ ಬರೆದರು. ಈ ಹಿನ್ನೆಲೆಯಲ್ಲಿ ಅವರ ಸೃಜನಶೀಲ ಕೃತಿಗಳಾದ ಮಹಾಮಾತೆ ಕುನ್ತೀ ಕಣ್ತೆರೆದಾಗ, ದೇವಕಿಯ ಕನಸುಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿಗಳು.
ಅಹುದು, ದಿ.ಕೆ.ಎಸ್. ನಾರಾಯಣ ಆಚಾರ್ಯರು ಶ್ರೀರಾಮ ಶ್ರೀಕೃಷ್ಣರ ಬದುಕಿನ ಬಗ್ಗೆ ಒರೆಗಲ್ಲಿಗೆ ಹಚ್ಚಿ ಸತ್ಯದರ್ಶನ ಮಾಡಿಸಿ ದರು. ಶ್ರೀರಾಮನ ಮತ್ತು ಶ್ರೀಕೃಷ್ಣರ ಬಗ್ಗೆ ಇದ್ದ ಎಲ್ಲ ಬಗೆಯ ಅಪವಾದ, ಆಕ್ಷೇಪಗಳಿಗೆ ಸತ್ಯದ ಸಾಕ್ಷ್ಯಗಳನ್ನು ಐತಿಹಾಸಿಕ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತದಿಂದ ತೆರೆದು ತೋರಿದರು.
ಸಾರ್ವಕಾಲಿಕ ಸತ್ಯವನ್ನು ಮನದಟ್ಟು ಮಾಡುವ ಪ್ರಯತ್ನವನ್ನು ಜೀವನದುದ್ದಕ್ಕೂ ಅವರು ಮಾಡುತ್ತಲೇ ದಣಿದರು. ಬರೆದು ಬರೆದು ದಣಿದು ದಣಿದು ನಮ್ಮನ್ನಗಲಿದರು. ಇದು ಅಪ್ರತಿಮವಾದ ಅಸಾಮಾನ್ಯವಾದ ಕಾರ್ಯವೆಂದು ಎಷ್ಟು ಹೊಗಳಿದರೂನಮಗೆ ಅವರ ಕಾಳಜಿ ಅರ್ಥವಾಗದೇ ಹೋಯಿತು!
ಇದರಿಂದ ಅವರು ನೊಂದುಕೊಂಡರು. ಹಾಗಂತ ತನ್ನ ಪ್ರಯತ್ನವನ್ನು ಅವರು ನಿಲ್ಲಿಸ ಲಿಲ್ಲ. ಮತ್ತು ಯಾರಿಗೂ ಕ್ಯಾರೇ ಮಾಡ ಲಿಲ್ಲ. ಸತ್ಯವನ್ನು ಹೇಳುವುದಕ್ಕೆ ಯಾವ ಭಯವೂ ಇಲ್ಲದೆ ಆ ಪ್ರಮಾಣದಲ್ಲಿ ಇತಿಹಾಸದಲ್ಲಿ ಮರೆಮಾಚಿದ ಸತ್ಯವನ್ನು ತೆರೆದಿ ಟ್ಟರು.
ಹಾಗೆ ಅ ವರುತೆರೆದಿಟ್ಟ ಸತ್ಯಗಳು:1. ವಾಲ್ಮೀಕಿ ಯಾರು? 2. ಗಾಂಧಿಯನ್ನು ಕೊಂದ ವರು ಯಾರು?
2. ಸುಭಾಷ್ಕಣ್ಮರೆ:ಅನ್ಯಾಯದ ಅಧ್ಯಾಯ. ಈ ಮೂರು ಕೃತಿಗಳು ಯಾರೂ ಹೇಳದ, ಬರೆಯದ ಸತ್ಯವನ್ನು ಹೇಳಿವೆ. ಆ ಕಾರಣಕ್ಕಾಗಿಯೇ ವಾಲ್ಮೀಕಿ ಯಾರು ಎಂಬ ಕೃತಿ ಯನ್ನು ಅಂದಿನ ಸರಕಾರ ಮುಟ್ಟುಗೋಲು ಹಾಕಿತ್ತು. ಕೊನೆಗೆ ತಾನೇ ಮುಟ್ಟು ಗೋಲು ತೆಗೆಯುವಂತಾದುದು ಬೇರೆ ಮಾತು. ಅಂದರೆ, ಸಾರಾಸಾರ ವಿಚಾರ, ವಿವೇಚನೆಯಿಲ್ಲದೆ, ತಳಸ್ಪರ್ಶಿಯಾದ ಅಧ್ಯಯನ ವಿಲ್ಲದೆ, ಸತ್ಯದ ತರ್ಕವಿಲ್ಲದೆ, ಒಣವಿತಂಡ ವಾದ ಮಾಡದೆ ಬರೆಯಬಲ್ಲ ನಾರಾಯಣ ಆಚಾರ್ಯರು ಯಾವುದೋ ಹುಕಿಗೆ ಬಿದ್ದಂತೆ ಬರೆಯಲಾರರು.
ಸ್ವರ್ಗೀಯರಾದ ಯಕ್ಷಗಾನದ ಪಾತ್ರಧಾರಿಯೂ ಅರ್ಥಧಾರಿಯೂ ಆದ ಸಿದ್ಧಕಟ್ಟೆ ಶ್ರೀ ವಿಶ್ವನಾಥ ಶೆಟ್ಟಿಯವರು ಒಮ್ಮೆ ನನ್ನಲ್ಲಿ ಆಡಿದ ಮಾತು: ಆಚಾರ್ಯರು ಯಾವುದೇ ಪ್ರಮಾಣವಿಲ್ಲದೆ ಬರೆಯಲಾರರು. ವೇದ, ಉಪನಿಷತ್ತು, ಗೀತೆ, ಪುರಾಣೇತಿಹಾಸಗಳಬಗ್ಗೆ ಗೊಂದಲವಿದ್ದರೆ ಅವರು ಬರೆದದ್ದನ್ನು ಓದಿದರೆ ಗೊಂದಲ ನೀಗುತ್ತದೆ. ಸತ್ಯ ತಿಳಿಯಬೇಕೆಂದರೆ ಆಚಾರ್ಯರ ಕೃತಿಗಳನ್ನು ಓದಬೇಕು ಎಂದಿದ್ದರು.
  ಆಚಾರ್ಯರು ಬರೆದದ್ದನ್ನು ಅಲ್ಲಗಳೆದವರೂ ಇದ್ದಾರೆ. ಇವರು ವ್ಯಾಖ್ಯಾನಿಸಿದ ಸಂಗತಿಯನ್ನು ಬೇರೆಯದೇ ಆದ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಿದವರೂ ಇದ್ದಾರೆ. ಆದರೆ, ಅದು ಆಚಾರ್ಯರು ಒಡ್ಡುವ ವಾದಕ್ಕೆ, ಮಂಡನೆಗೆ, ವ್ಯಾಖ್ಯಾನಕ್ಕೆ, ನಿಕಷಕ್ಕೆ ಸಾಟಿಯಾಗಲಾರದು ಎಂದರೆ ಉತ್ಪ್ರೇಕ್ಷೆಯಾಗಲಾರದು. ವೇದಗಳು, ವೇದಾಂಗಗಳು, ಪುರಾಣಗಳು, ಗೀತೆ, ರಾಮಾಯಣ ಮಹಾಭಾರತದ ಬಗ್ಗೆ ಪುಂಖಾನುಪುಂಖವಾಗಿ ಬರೆದರು.
ಹೊಸದನ್ನು ಬಗೆದರು. ಹೊಸ ನೋಟದಲ್ಲಿ ಬರೆದರು. ಈ ಹಿನ್ನೆಲೆಯಲ್ಲಿ ಅವರ ಸೃಜನಶೀಲ ಕೃತಿಗಳಾದ ಮಹಾಮಾತೆ ಕುನ್ತೀಕಣ್ತೆರೆದಾಗ, ದೇವಕಿಯ ಕನಸುಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿಗಳು. ಐತಿಹಾಸಿಕ ಮಹಾಕಾವ್ಯಗಳಲ್ಲಿ ಅಡಗಿರುವ ಸತ್ಯ ವನ್ನು ಅಗೆದು ಬಗೆದು ಹೊಸ ಬೆಳಕಿಗೆ ತಂದು ಬರೆದಂತೆ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಸತ್ಯವನ್ನು ಬರೆದರು. ಗಾಂಧಿ-ನೆಹರೂ ಅವರುಗಳ ರಾಜಕಾರಣದ ನಡೆಗಳ ಬಗ್ಗೆ ಬರೆದರು. ಅವರ ದೌರ್ಬಲ್ಯಗಳನ್ನು ಬರೆದರು. ಅವರ ರಾಜತಾಂತ್ರಿಕ ನೀತಿಗಳಿಂದಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾದ ಯಾವುದೇ ಸಂಗತಿಗಳನ್ನು ವಿಚಾರಗಳನ್ನು ಚೂರು ಬಿಡದೆ ದಾಖಲಿಸಿದರು.
ರಾಮಾಯಣ ಮಹಾಭಾರತದ ಪಾತ್ರಗಳನ್ನು ಕುರಿತು ಟೀಕೆ, ವಿಮರ್ಶೆ, ವಿವೇಚನೆಗಳನ್ನು ಬರೆದಂತೆ ಸ್ವಾತಂತ್ರ ಹೋರಾಟದ ಮತ್ತು ಸ್ವಾತಂತ್ರ ಪ್ರಾಪ್ತಿಯ ಸಂದರ್ಭದ ವ್ಯಕ್ತಿಗಳನ್ನು, ಘಟನೆಗಳನ್ನು ಒಳಹೊಕ್ಕು ವಿಮರ್ಶೆ ಮಾಡಿದರು. ಸರಿ ತಪ್ಪುಗಳನ್ನು ತೆರೆದಿಟ್ಟರು. ಅವರ ಭಾರತ, ಇಸ್ಲಾಮ್ ಮತ್ತು ಗಾಂಧಿ, ಸೆಕ್ಯುಲರಿಸಂ ಅಂದು-ಇಂದು, ಸೆಕ್ಯುಲರ್ ಕಥೆಗಳು-ಭಾಗ 1, ಭಾಗ-2,ರಾಷ್ಟ್ರಾವಲೋಕನ, ಮತಾಂತರ ಒಳ, ಹೊರ ಆಯಾಮಗಳು, ಸಮಾಜ ಮತ್ತು ಆಧ್ಯಾತ್ಮೀಕರಣ ಒಂದು ಸವಾಲು, ಅಗಸ್ತ್ಯ, ಚಾಣಕ್ಯ, ಸಾಂಸ್ಕೃತಿಕ ಸಂದರ್ಭಗಳ ಅರ್ಥ ’ನಿರೂಪಣೆ’ ಯಲ್ಲಿ ಅನರ್ಥ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಶ್ರೀ ಮಹಾಭಾರತ ಕಾಲ ನಿರ್ಣಯ, ಟಿ.ಎಸ್.ಎಲಿಯೆಟ್ಟನ    ಕವನದಲ್ಲಿ ಭಾರತೀಯ ತತ್ವಶಾಸ್ತ್ರಪ್ರಭಾವ(ಪಿಎಚ್.ಡಿ. ನಿಬಂಧ), ಮಹಾಮಾತೆ ಕುನ್ತೀ ಕಣ್ತೆರೆದಾಗ, ಭಾರತೀಯ ಇತಿಹಾಸ ಪುರಾಣಗಳು ಒಂದು ಕಿರು ಸಮೀಕ್ಷೆ, ಶ್ರೀಕೃಷ್ಣಾವತಾರ (2 ಸಂ.) ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ನಳ ದಮಯಂತೀ, ದಶಾವತಾರ, ವನದಲ್ಲಿ ಪಾಂಡವರು, ಶ್ರೀರಾಮ ಕಥಾವತಾರ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ರಾಷ್ಟ್ರೀಯತೆ ಮತ್ತು ಸಂಸ್ಕೃತಿ, ಡಬ್ಲ್ಯೂ ಬಿ.ಯೇಟ್ಸ್, ಆಳ್ವಾರರು ಮತ್ತು ಹರಿದಾಸರು, ವೇದ ಸಂಸ್ಕೃತಿ ಪರಿಚಯ 3 ಸಂ.)-ಇತ್ಯಾದಿ ಯಾವುದೇ ಕೃತಿಗಳನ್ನು ಓದಿದರೂ ಸಮಕಾಲೀನ ಭಾರತಕ್ಕೆ ಅನುಸಂಧಿಸಿ ಬರೆದದ್ದು ಕಾಣುತ್ತದೆ.
ಇಂಗ್ಲಿಷಲ್ಲೂ ಅವರು ಬರೆದರು:    , ,   &   ,     ,   ,   ?  ?, / ,  ,  ,    &  ,     , ,  ,     ,   –ವೇದ ವಿದ್ಯಾ ಪ್ರಕಾಶನ, ಮಾಲೋಲ ಪ್ರಕಾಶನ ಸ್ಥಾಪನೆ ಮಾಡಿದರು. ಒಬ್ಬ ಮನುಷ್ಯ ತನ್ನ ಒಟ್ಟೂ ಜೀವಿತಾವಧಿ ಯಲ್ಲಿ ಇಷ್ಟು ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವೇ ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ ಎಂಬಷ್ಟು ಬರೆದರು.
ದೇಶಾದ್ಯಂತ ತಿರುಗಾಡಿದರು. ಮಾತಾಡಿದರು. ಭಾರತೀಯ ಸಾಹಿತ್ಯ, ಪುರಾಣೇತಿಹಾಸಗಳಲ್ಲಿ ಅಡಗಿರುವ ಸತ್ಯವನ್ನು ಹೊರ ಗೆಳೆಯಲು ಕೊನೆಯ ಉಸಿರಿನವರೆಗೂ ಪ್ರಯತ್ನಿಸಿದರು.