ಮನೇಲಿ ಮಾಡಿದ್ದುಣ್ಣೋ ಮಹರಾಯ- ದರ್ಶನ್
ತುಂಟರಗಾಳಿ
ಸಿನಿಗನ್ನಡ
ಜನ ಚಿತ್ರಮಂದಿರಗಳಿಗೆ ಬರ್ತಾ ಇಲ್ಲ ಅನ್ನೋ ಈ ಕಾಲದಲ್ಲಿ, ಸಿನಿಮಾರಂಗ ವಿಭಿನ್ನ ತಂತ್ರಗಳ ಮೂಲಕ ಜನರನ್ನು ಸಿನಿಮಾ ಲೋಕಕ್ಕೆ ಮತ್ತೆ ಕರೆತರುವ ಪ್ರಯತ್ನ ಮಾಡುತ್ತಿದೆ. ಅಂಥದ್ದೇ ಒಂದು ವಿಭಿನ್ನ ಪ್ರಯತ್ನ ನಾಕ್ ಔಟ್ ಅನ್ನೋ ಕನ್ನಡ ಚಿತ್ರದ್ದು. ಜನರನ್ನು ದುಡ್ಡು ಕೊಟ್ಟು ಕರೆತಂದು,ಅವರಿಗೆ ಎಕ್ಸ್ಟ್ರಾ ಕಾಸು ಕೊಟ್ಟು, ಸ್ನ್ಯಾಕ್ಸ್ ಕೊಟ್ಟು ಬಲವಂತವಾಗಿ ಚಿತ್ರಮಂದಿರ ದಲ್ಲಿ ಕೂರಿಸೋ ಟ್ರೆಂಡ್ ಈಗ ಇದೆ.
ಇದರ ಪ್ರಕಾರ ಅವರೆಲ್ಲ ಸಿನಿಮಾ ಮುಗಿದ ತಕ್ಷಣ ಹೊರಗೆ ಬಂದು ಟಿವಿ ಚಾನೆಲ್ ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೈಕ್ ಮುಂದೆ ೧೦೦ಡೇಸ್ ಗ್ಯಾರಂಟಿ, ಸೂಪರ್ ಹಿಟ್ ಸಿನಿಮಾ ಅಂತ ಘೋಷಣೆ ಮಾಡಿ ಮನೆಗೆ ಹೋಗೋ ದಾರಿಯಲ್ಲಿ ಒಂದು ಕ್ವಾರ್ಟರ್ ಬಿಟ್ಕೊಂಡ್ ಹೋಗ್ತಾರೆ.ಆದ್ರೆ ಅದೇ ಸಿನಿಮಾಗೆ ಒಂದು ಶೋ ಬಿಟ್ಕೊಂಡ್ ಹೋದ್ರೆ ಅಲ್ಲಿ ಜನನೇ ಇರಲ್ಲ. ಆದರೆ ಇಂಥzಲ್ಲ ಗಿಮಿಕ್ ಬೇಡ ಅಂತ ನಾಕ್ ಔಟ್ ಚಿತ್ರದನಿರ್ದೇಶಕ ಅಂಬರೀಷ್ ಈಗ ಚಿತ್ರದ – ಹಾಫ್ ಫ್ರೀ, ಸಿನಿಮಾ ಇಷ್ಟ ಆದ್ರೆ ಸೆಕೆಂಡ್ ಹಾ- ನೋಡೋಕೆ ಒಳಗೆ ಹೋಗುವಾಗ ಟಿಕಟ್ ತಗೊಳ್ಳಿ ಅಂತಆಫರ್ ಬಿಟ್ಟಿದ್ದಾರೆ.
ಇದನ್ನ ನೋಡಿದ್ರೆ, ಒಂದು ನಾಟಕ ಕಂಪನಿಯ ಹಳೇ ಜೋಕು ನೆನಪಾಗುತ್ತೆ. ನಾಟಕ ಚೆನ್ನಾಗಿಲ್ಲ ಅಂತ ಜನ ಬರದೇ ಇದ್ದಾಗ, ಅದರ ಮಾಲೀಕ ಎಂಟ್ರಿ ಫ್ರೀ ಅಂತ ಮಾಡಿದನಂತೆ. ಆ ನಾಟಕ ಎ ಕೆಟ್ಟದಾಗಿತ್ತು ಅಂತ ಅವನಿಗೂ ಗೊತ್ತಿತ್ತು. ಹಾಗಾಗಿ, ಜನ ಥಿಯೇಟರ್ ಒಳಗ ಹೋದ ಮೇಲೆ ಥೇಟರ್‌ನಿಂದಅರ್ಧಕ್ಕೇ ಎದ್ದು ಹೋಗಬೇಕು ಅಂದ್ರೆ ಮಾತ್ರ ಸಾವಿರ ರುಪಾಯಿ ಕೊಡಬೇಕು ಅಂತ ರೂಲ್ ಮಾಡಿದ್ನಂತೆ. ಈ ನಾಕ್ ಔಟ್ ಚಿತ್ರದ ಕಥೆಯೂ ಒಂಥರಾಅನಾಟಕದ ಕಥೆಗೆ ತೀರಾ ಹತ್ತಿರವಾಗಿದೆ ಅಂತ ಅನಿಸಿದರೆ ಸುಳ್ಳಲ್ಲ ಬಿಡಿ.
ಲೂಸ್ ಟಾಕ್: ನರಭಕ್ಷಕ ಹುಲಿಅಲ್ಲಪ್ಪಾ, ಹಿಂಗೆಲ್ಲ ಊರೊಳಗೆ ನುಗ್ಗಿ ಮನುಷ್ಯರನ್ನ ಕೊಂದು ತಿನ್ನೋದು ತಪ್ಪಲ್ವಾ?
-ಏನ್ ತಪ್ಪು, ಹುಲಿ ಮುಪ್ಪಾದರೆ, ಹುಲ್ಲು ತಿಂತದಾ? ಉಪ್ಪು, ಹುಳಿ, ತಿಂದು ಬೆಳೆದಿರೋ ದೇಹ. ಹುಲಿ ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂಹುಲೀನೇ ಗೊತ್ತಾ, ಈಗ ನೀನ್ ಸಿಕ್ಕಿದೀಯಾ..ಕುತ್ತೇ ಮೇ ತೇರಾ ಜೂನ್ ಪೀ ಜಾವೂಂಗ
ಓ…ನೀನು ಧರ್ಮೇಂದ್ರನ ಅಭಿಮಾನಿ ಅನ್ನುತ್ತ, ಒಂದ್ ಅರ್ಧಗಂಟೆ ಇರು. ಇವತ್ತಿನ ಡೆಡ್ ಲೈನ್ ಮುಗಿಸ್ಕೊಂಡ್ ವಾಪಸ್ ಬರೀನಿ, ಆಮೇಲ್ತಿನ್ನುವಂತೆ-ಮಗಾ, ಪುಣ್ಯಕೋಟಿ ಕಾಲ ಎಲ್ಲ ಈವಾಗಿಲ್ಲಮ್ಮಾ, ಇದು ಕಲಿಗಾಲ.
ನಿಜ ಹೇಳಬೇಕೂಂದ್ರೆ, ಇದು ಹುಲಿಗಾಲ, ಅದ್ಸರಿ, ಈಗ ಬೋನೊಳಗೆ ಹಾಕಿದದ್ದಾರಲ್ಲ ನಿನ್ನ, ಈಗ ಹೇಳು, ನಿನ್ನ ಪ್ರಕಾರ ಯಾರು ಜಾಸ್ತಿ ಸ್ಟ್ರಾಂಗ್?ಮನುಷ್ಯನಾ ಅಥವಾ‘ಹುಲಿಯಾ’?-ಗೊತ್ತಿಲ್ಲ, ಕೆ.ವಿ.ರಾಜು ಅವರನ್ನೇ ಕೇಳಬೇಕು.
ಸರಿ, ಸರಿ, ಆದ್ರೆ, ‘ಕಾಡು ಹೋಗು ಅಂತಿದೆ, ಊರು ಬಾ ಅಂತಿದೆ’ ಅನ್ನೋ ನಿನ್ನ ಸಾಯಿಸ್ಬೇಕೂಂತ ಕೆಲವರು ಹೇಳಿದಾರೆ, ಏನಂತೀಯಾ?
-ಟೈಗರ್ ಪ್ರಭಾಕರ್, ಭಾಳಾ ಠಾಕ್ರೆ, ಪಟೌಡಿ ಹೀಗೆ ಹುಲಿಗಳ ಸಂತತಿ ಕಡಿಮೆಯಾಗಿದೆ. ಹಂಗಾಗಿ ನನ್ನನ್ನ ಕೊಲ್ಲಲ್ಲ ಅಂತ ಭರವಸೆ ಇದೆ.
ಸಿಕ್ಕಾಕ್ಕೊಂಡಿರೋ ಬೋನಿನಲ್ಲಿ ತಿನ್ನೋಕೆ ಬೋನ್ ಸಿಗ್ತಿಲ್ಲ, ಹಂಗೇ ಸತ್ರೂ ಸಾಯಬಹುದು ನೀನು. ಹಂಗೇನಾದ್ರೂ ಆದ್ರೆ, ನಿನ್ ಕೊನೇ ಆಸೆ ಏನು?-ನೀವ್ಯಾರೂ ನಮ್ಮ ಹುಲಿಗಳ ಆಸೆ ತೀರ್ಸಲ್ಲ ಬಿಡ್ರಪ್ಪಾ. ಒಂದಷ್ಟು ವರ್ಷಗಳ ಹಿಂದೆ ‘ಹುಲಿ ಹಿಡಿದವರು ಕಂಡಂತೆ’ ಅಂತ ನನ್ ಮೇಲೊಂದ್ ಸಿನಿಮಾಮಾಡ್ತೀನಿ ಅಂತ ಹೇಳಿದ್ರು, ಆದ್ರೆ ಮಾಡದೇ ನನ್ನ ಆಸೆಗೆ ಹುಳಿ ಹಿಂಡಿಬಿಟ್ರು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮತ್ತು ಸೋಮು -ಷನ್ ಮಾಲ್ ಒಂದರ ಕೆಟಲಾಗ್ ನೋಡ್ತಾ ಕೂತಿದ್ರು. ಅಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿರೋ ಹುಡುಗೀರು ಬಣ್ಣಬಣ್ಣದ ಬಟ್ಟೆ ಹಾಕ್ಕೊಂಡು ಪೋಸ್ ಕೊಟ್ಟು ನಿಂತ್ಕಂಡಿದ್ರು. ಪ್ರತಿ ಹುಡುಗಿಯ ಪಕ್ಕದಲ್ಲೂ ಆಯಾ ಬಟ್ಟೆಯ ದರ ಹಾಕಲಾಗಿತ್ತು. ಅದನ್ನು ಕಣ್ಣುಂಬಾ ನೋಡಿ ಖುಷಿ ಪಡುತ್ತಿದ್ದ ಖೇಮು, ಸೋಮು ಮಾತಾಡಿಕೊಳ್ಳುತ್ತಿದ್ದರು.
ಖೇಮು:ಈ ಕೆಟಲಾಗ್ನಲ್ಲಿರೋ ಹುಡುಗೀರು ಎಷ್ಟು ಚೆನ್ನಾಗಿದಾರಲ್ವಾ?ಸೋಮು:ಹೌದಲ್ವಾ..ಖೇಮು:ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕ್ಕೊಂಡು ಚಿಟ್ಟೆಗಳು ಎಷ್ಟು ಸೂಪರ್ ಆಗಿ ಕಾಣ್ತಾ ಇದಾರಲ್ವಾ..ಸೋಮು:ಹೌದು ನೋಡ್ತಾ ಇದ್ರೆ ತಗೋಬೇಕು ಅಂತ ಟೆಂ ಆಗ್ತಿದೆ…ಸೋಮು:ಹೌದು ನಿಜವಾಗೂ ಕಲರ್, ರೇಟು ನೋಡಿದ್ರೆ ನಂಗೂ ಟೆಂ ಆಗ್ತಿದೆ.ಖೇಮು:ಅಯ್ಯೋ, ಇಲ್ಲಿ ನೋಡು ರೇಟು ತೀರಾ ಕಾಸ್ಟ್ಲೀ ಏನಿಲ್ಲ, ಈ ರೇಟಿಗೆ ನಾನು ಒಬ್ಬಳನ್ನ ಕೊಂಡುಕೊಳ್ಳೋಣ ಅಂತಿದೀನಿ.ಸೋಮು:ಕೊಂಡ್ಕೊ, ಕೊಂಡ್ಕೊ, ಡೆಲಿವರಿ ಆದಾಗ ಅವಳು ನಿಜವಾಗೂ ಈ ಕೆಟಲಾಗ್‌ನಲ್ಲಿ ಇರೋ ಅಷ್ಟೇ ಚೆನ್ನಾಗಿದ್ರೆ, ನಾನೂ ಒಬ್ಬಳನ್ನ ಆರ್ಡರ್ ಮಾಡ್ತೀನಿ.
ಸರಿ, ಖೇಮು ಆರ್ಡರ್ ಮಾಡಿದ ಮೂರು ವಾರಗಳ ನಂತರ ಮತ್ತೆ ಖೇಮು, ಸೋಮು ಭೇಟಿ ಮಾಡಿದ್ರು. ಸೋಮು ಕೇಳಿದ ‘ನೀನ್ ಆರ್ಡರ್ ಮಾಡಿದ ಹುಡುಗಿ ಬಂದ್ಳಾ?’, ಅದಕ್ಕೆ ಖೇಮು ಹೇಳ್ದ ‘ಹುಡುಗಿ ಇನ್ನೂ ಬಂದಿಲ್ಲ. ಆದ್ರೆ ಇಷ್ಟರ ಬರ್ತಾಳೆ ಅನ್ನುತ್ತೆ. ನಿನ್ನೆ ತಾನೇ ಅವಳ ಬಟ್ಟೆ ಇರೋ ಲಗೇಜ್ ಕಳಿಸಿದ್ದಾರೆ.
ಲೈನ್ ಮ್ಯಾನ್
ಕಾಲ ಕಲಿಸುವ ಪಾಠ-‘ಮನೆ ಊಟ ಬಿಟ್ಟು ಹೊರಗಡೆ’ ತಿಂತಾ ಇದ್ದ ದರ್ಶನ್‌ಗೆ ಈಗ ಜೈಲಿನಲ್ಲಿ ಮನೆ ಊಟ ಬೇಕು ಅನ್ನಿಸ್ತಾ ಇರೋದು
ಮಾಡಿದ ತಪ್ಪಿಗೆ ಜೈಲಲ್ಲಿ‘ಮಾಡಿದ್ದುಣ್ಣೋ ಮಹರಾಯ’ಅಂತ ಪರಿತಪಿಸುತ್ತಿರೋ ದರ್ಶನ್ಈಗ ಮನೆ ಊಟ ಬೇಕುಅಂತಿರೋದಕ್ಕೆಬದಲಾಯಿಸಲಾಗಿರೋ ಹಳೇಗಾದೆ-‘ಮನೇಲಿ’ ಮಾಡಿದ್ದುಣ್ಣೋ ಮಹರಾಯ
ಖಾಸಗಿ ಟಿವಿ ಚಾನೆಲ್‌ಗಳಲ್ಲ ದರ್ಶನ್ ಸುದ್ದಿನೇ ತುಂಬಿರೋದ್ರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ನೋಡಬಹುದಾದ ಒಂದೇ ಒಂದುಟಿವಿ ಚಾನೆಲ್-ದೂರ‘ದರ್ಶನ್’
ಹೆಂಡ್ತಿ:ನಿಮ್ಮ ಕೂದಲು ಹಿಂಗೇ ಉದುರ್ತಾ ಇದ್ರೆ, ನಿಮಗೆ ಡೈವೋರ್ಸ್ ಕೊಡ್ತೀನಿ ಅಷ್ಟೆ.ಗಂಡ:ಹೌದಾ, ಛೇ, ನಾನೆಂತಾ ಪೆದ್ದ.. ಇಷ್ಟು ದಿನ ಕೂದಲು ಉದುರ್ಬಾರ್ದು ಅಂತ ಏನೇನೋ ಟ್ರೀಟ್ಮೆಂಟ್ ತಗೊಂಡ್ ಬಿಟ್ಟೆ
ಚಿಕ್ಕಣ್ಣ:ಗುರುಗಳೇ, ಇವತ್ತು ಪೇಪರ್‌ನಲ್ಲಿ ಎ ಟ್ರೂಪ್ ಆಫ್ ಟೆರರಿ ವಾಸ್     ಅಂತ ಇತ್ತು. ನಮ್ಮ ಇಂಡಿಯಾದ ಪೊಲೀಸ್ನವರೂ ಟೆರರಿ ಆಗ್ತಿದಾರಾ?
ಸಾಧು:ಲೋ ಚಿಕ್ಕ, ಅದು  ಅಲ್ಲ ಕಣೋ, 
‘ಇಂಗ್ಲಿಷ್‌ನಲ್ಲಿ ರೋಡ್ ಮೂವೀಸ್’ಅಂತಲೇ ಫೇಮಸ್ ಆಗಿರೋರೋಡ್‌ನಲ್ಲಿ ನಡೆಯುವ ಕಥೆಇರುವ ಚಿತ್ರಗಳಿಗೆ ಕನ್ನಡ ಚಿತ್ರರಂಗಕೊಟ್ಟ ಹೊಸ ಹೆಸರು
-‘ರೋಡಿಸಂ’ ಚಿತ್ರಗಳು
ಲೈಫಲ್ಲಿ ಜಾಸ್ತಿ ಜನ ಹುಡುಗೀರನ್ನ ಲವ್ ಮಾಡೋದರ ಅಪಾಯ-ಮುಂದೆ ಮದುವೆ ಆದಮೇಲೆ ಎಣ್ಣೆ ಹೊಡೆದು ಸ್ಯಾಡ್ ಸಾಂಗ್ ಕೇಳುವಾಗ ಯಾವ ಗರ್ಲ್ ಫ್ರೆಂಡ್‌ನ ನೆನಪಿಸ್ಕೊ ಬೇಕು ಅಂತ ಕನ್ ಫ್ಯೂಸ್ ಆಗುತ್ತೆ.
ಇವತ್ತಿಂದ ಶುರು ಮಾಡ್ತೀನಿ, ಮಾಡೇ ಮಾಡ್ತೀನಿ ಅನ್ನೋದು ಆದ್ರೆ ಮಾಡದೇ ಇರೋದು,
-ಬೆಳಗ್ಗೆ ಮುಂಚೆ ಎದ್ದು ಜಿಮ್ಗೆ, ಜಾಗಿಂಗ್ಗೆ ಹೋಗೋದು
ಎಲ್ಲರೂ ಆಗಾಗ ಇವತ್ತಿಂದ ಬಿಡ್ತೀನಿ, ಬಿಟ್ಟೇ ಬಿಡ್ತೀನಿ ಅನ್ನೋದು, ಆದ್ರೆ ಬಿಡದೇ ಇರೋದು-ಸಿಗರೇಟು, ಗುಂಡು ಮತ್ತು ಫೇಸ್ಬುಕ್
ಸಂಗಾತಿಯನ್ನ ಕೊಂದು ಫ್ರಿಜ್‌ನಲ್ಲಿಡೆಡ್ ಬಾಡಿ ಇಡೋ ಗಂಡಹೆಂಡತಿಯರ ಯುದ್ಧ-ಶೀತಲ ಸಮರ