ಸಂತಸ, ಸಹನೆ, ಭವಿಷ್ಯಕ್ಕೊಂದು ಸಚಿವ ಖಾತೆ ತೆರೆದರೆ ?
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
@.
ತಮ್ಮ ಹಿತವನ್ನು ಕಾಪಾಡಬೇಕಾದ ಸರಕಾರದ ಬಗ್ಗೆ ಜನರಲ್ಲಿ ಸದಾ ಬೇಸರ, ಜುಗುಪ್ಸೆ ಮೂಡಿದರೆ, ಆ ಮೂಲಕ ಜನ ಯಾವತ್ತೂ ಅಸಮಾಧಾನ ಮತ್ತು ಅಶಾಂತಿಯಿಂದ ಇರುವುದಾದರೆ, ಸುಧಾರಿತ ನಾಗರಿಕಸಮಾಜದ ಉದ್ದೇಶ ಹೇಗೆ ಈಡೇರಲು ಸಾಧ್ಯ? ಒಂದು ಸರಕಾರದ ಬಗ್ಗೆ ಯಾವತ್ತೂ ಜನರ ಅಭಿಪ್ರಾಯ ಬದಲಾಗದಿದ್ದರೆ, ಅದು ಆ ಸರಕಾರದ ದೊಡ್ಡ ಸೋಲು.
ನಾನು ಹಿಂದಿನ ತಿಂಗಳು ದುಬೈಗೆ ಹೋಗಿದ್ದಾಗ, ಅಲ್ಲಿನ ಸರಕಾರದ ಒಬ್ಬ ಅಧಿಕಾರಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರು ತಮ್ಮ ವಿಸಿಟಿಂಗ್ ಕಾರ್ಡನ್ನು ಕೊಟ್ಟಾಗ, ಅದನ್ನು ನೋಡಿ, ನನಗೆ ಸಣ್ಣ ಅಚ್ಚರಿಯಾಯಿತು. ಅವರ ಹೆಸರಿನ ಮುಂದೆ      ಎಂದುಬರೆದಿತ್ತು. ಆ ರೀತಿಯ ಹುದ್ದೆ () ಇದೆ ಎಂಬುದೇ ನನಗೆಗೊತ್ತಿರಲಿಲ್ಲ. ಕೆಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆ ಥರದ ಹುದ್ದೆಗಳಿವೆ.  Officerಎಂಬ ಹುದ್ದೆಗಳನ್ನು ಸಹ ಸೃಷ್ಟಿಸಲಾಗಿದೆ. ಇನ್ನು ಕೆಲವು ಸಂಸ್ಥೆಗಳಲ್ಲಿ    ಎಂಬ ಹುದ್ದೆಯನ್ನು ತೆರೆಯ ಲಾಗಿದೆ.
ಅದು ಕೇವಲ, ಈಗಿರುವ ಹುದ್ದೆಗಳಿಗೆ ನೀಡಿದ ಹೊಸ ಹೆಸರಲ್ಲ. ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿ ಗಳಿಗೆ, ಅಕ್ಷರಶಃ ಆರಾಮದಾಯಕ, ಸಂತೋಷದ, ನೆಮ್ಮದಿಯ () ವಾತಾವರಣವನ್ನು ಸೃಷ್ಟಿಸುವುದು ಹೇಗೆ ಎಂಬುದು ಆ ಹುದ್ದೆಯಲ್ಲಿ ಕೆಲಸ ಮಾಡುವವರ ಮುಖ್ಯವಾದ ಆಶಯ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರು ಬೇಸರದಲ್ಲಿರಬಾರದು, ಸಂಸ್ಥೆಯ ಬಗ್ಗೆಯಾವ ಸಂದರ್ಭದಲ್ಲೂ ಕೆಟ್ಟ ಭಾವನೆಯನ್ನು ಬೆಳೆಸಿಕೊಳ್ಳಬಾರದು ಎಂಬುದು ಈ ವಿಭಾಗವನ್ನು ನಿರ್ವಹಿಸುವವರ ಮೇಲಿರುವ ಹೊಣೆಗಾರಿಕೆ.
ಬೇಸರದಲ್ಲಿರುವ, ಕೊರಗುವ ಸಿಬ್ಬಂದಿ ವರ್ಗವನ್ನು ಇಟ್ಟುಕೊಂಡು ಯಾವ ಸಂಸ್ಥೆಯೂ ಉದ್ಧಾರವಾಗುವುದಿಲ್ಲ. ತನ್ನ ಸಿಬ್ಬಂದಿಗೆ ಕೈತುಂಬ ಸಂಬಳ, ಒಳ್ಳೆಯ ಪರಿಸರ, ಸೌಕರ್ಯ, ಪಿಂಚಣಿ ನೀಡಿದರಷ್ಟೇ ಉತ್ತಮ ಆಫೀಸು, ಉತ್ತಮ ಸಂಸ್ಥೆ ಎಂದು ಕರೆಯಿಸಿಕೊಳ್ಳುವುದಿಲ್ಲ. ಇವೆಲ್ಲವನ್ನು ನೀಡಿದ ನಂತರವೂ ಸಿಬ್ಬಂದಿ ಯಲ್ಲಿ ಅತೃಪ್ತಿ ತೊಟ್ಟಿಕ್ಕಬಹುದು. ಇದು ಸಂಸ್ಥೆಯ ಉತ್ಪಾದನೆಗೆ ತೊಡಕಾಗಬಹುದು. ಪರಿಣಾಮ, ಉದ್ದೇಶಿತ ಫಲ ಈಡೇರದೇ ಹೋಗಬಹುದು. ಇಲ್ಲಿ      ಅಥವಾ    ಕೆಲಸಕ್ಕೆ ಬರುತ್ತಾರೆ. ಅವರ ಮುಖ್ಯ ಹೊಣೆಗಾರಿಕೆ ಸಂಸ್ಥೆ ಯಲ್ಲಿರುವ ಎಲ್ಲರೂ ನೆಮ್ಮದಿ ಯಾಗಿರುವಂತೆ ನೋಡಿಕೊಳ್ಳುವುದು. ಯಾರೂ ಕರಕರ, ಕಿರಿಕಿರಿ, ಚಿಟಿಪಿಟಿ ಎನ್ನಬಾರದು.
ಸಿಬ್ಬಂದಿ ಬಯಸಿದ್ದೆಲ್ಲವನ್ನೂ ನೀಡಿದ ಬಳಿಕವೂ, ಎಲ್ಲರೂ ಖುಷಿಯಿಂದ ಇರುವುದಿಲ್ಲ. ಅವರ ಬೇಸರಕ್ಕೆ ಕಾರಣವೇನು ಎಂದು ಕಂಡು ಹಿಡಿಯುವುದೇ    ಅಧಿಕಾರಿಯ ಉದ್ದೇಶ. ಇದನ್ನೇ ಸರಕಾರಕ್ಕೂ ಅನ್ವಯಿಸಿ. ಸರಕಾರ ಲಕ್ಷಾಂತರ ಕೋಟಿ ರುಪಾಯಿಗಳನ್ನು ವರ್ಷ ವರ್ಷ ಜನರಕಲ್ಯಾಣಕ್ಕೆ ವಿನಿಯೋಗಿಸುತ್ತದೆ. ಆದರೂ ಸರಕಾರದ ಬಗ್ಗೆ ಯಾರಲ್ಲೂ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಯಾವ ಸರಕಾರದ ಬಗ್ಗೆಯೂಜನರಲ್ಲಿ ಸದ್ಭಾವನೆ ಇರುವುದಿಲ್ಲ. ಸರ್ಕಾರದಲ್ಲಿರು ವವರು ಅದಕ್ಷರು, ಅಪ್ರಾಮಾಣಿಕರು, ಅಯೋಗ್ಯರು ಎಂಬ ಭಾವನೆ ಜನರಲ್ಲಿಮನೆ ಮಾಡಿರುತ್ತದೆ. ಇಂಥ ಭಾವನೆಯನ್ನು ಇಟ್ಟು ಕೊಂಡಿರುವ ಜನರಿಗೆ ಅದೆಷ್ಟೇ ಉತ್ತಮ ಆಡಳಿತ ಅಥವಾ ಸರಕಾರ ವನ್ನು ನೀಡಿದರೂ ಅದು ನಿರರ್ಥಕ.
ಸರಕಾರದಲ್ಲಿರುವವರು ಜನರ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಾರೆ, ಜನರ ಹಣವನ್ನು ಲಪಟಾ ಯಿಸುತ್ತಾರೆ, ಅಧಿಕಾರದ ಮದದಲ್ಲಿ ಮೆರೆಯುತ್ತಾರೆ ಎಂದೇ ಜನ ಭಾವಿಸಿರುತ್ತಾರೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಹೌದು. ತಮ್ಮ ಹಿತವನ್ನು ಕಾಪಾಡಬೇಕಾದ ಸರಕಾರದ ಬಗ್ಗೆ ಜನರಲ್ಲಿ ಸದಾ ಬೇಸರ, ಜುಗುಪ್ಸೆ ಮೂಡಿದರೆ, ಆ ಮೂಲಕ ಜನ ಯಾವತ್ತೂ ಅಸಮಾಧಾನ ಮತ್ತು ಅಶಾಂತಿಯಿಂದ ಇರುವುದಾದರೆ, ಸುಧಾರಿತ ನಾಗರಿಕಸಮಾಜದ ಉದ್ದೇಶ ಹೇಗೆ ಈಡೇರಲು ಸಾಧ್ಯ? ಒಂದು ಸರಕಾರದ ಬಗ್ಗೆ ಯಾವತ್ತೂ ಜನರ ಅಭಿಪ್ರಾಯ ಬದಲಾಗದಿದ್ದರೆ, ಅದು ಆ ಸರಕಾರದ ದೊಡ್ಡ ಸೋಲು.
ಅದು ಅಂಥ ಸರಕಾರವನ್ನು ಆರಿಸಿದ ಪ್ರಜೆಗಳ ಸೋಲೂ ಹೌದು. ಇದು ಈಗ ಜಗತ್ತಿನ ಎದೇಶಗಳಲ್ಲಿರುವ ಸರಕಾರಗಳು ಎದುರಿಸುತ್ತಿರುವ ವಾಸ್ತವ ಮತ್ತು ಕಟು ಸತ್ಯ. ಎಂಥ ಜನಪ್ರಿಯ ನಾಯಕ ಅದೆಷ್ಟೇ ದೊಡ್ಡಬಹು ಮತಗಳಿಂದ ಆರಿಸಿ ಬಂದರೂ, ಅವರ ಅಧಿಕಾರದಿಂದ ಜನ ಸಂತೋಷದ ಬದುಕನ್ನು ಕಟ್ಟಿಕೊಳ್ಳುವ ಪರಿಸರ ನಿರ್ಮಾಣಮಾಡುತ್ತಾರೆ ಎಂಬ ಖಾತರಿ ಇಲ್ಲ. ಇದು ಜನರ ನಂಬಿಕೆ ಮೇಲೆ ಎರಗುವ ಕುಟಾರಾಘಾತ.
ಇದರಿಂದ ಸರಕಾರ ಏನು ಮಾಡಿದಂತಾಯಿತು? ಎಷ್ಟೇ ಒಳ್ಳೆಯ ಯೋಜನೆ, ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿಯೂ ಜನರು ಬೇಸರದ, ಅತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ ಅಂದ್ರೆ ಇಡೀ ವ್ಯವಸ್ಥೆಯಲ್ಲಿ ಏನೋ ದೋಷ ಇದೆ ಎಂದಂತಾಯಿತು. ಅಂದರೆ ಸರಕಾರ ಲಕ್ಷ ಲಕ್ಷ, ಕೋಟಿ ಕೋಟಿ ಹಣ ವ್ಯಯಿಸಿ ಏನು ಸಾಧಿಸಿದಂತಾಯಿತು. ತನ್ನ ಪ್ರಜೆಗಳಿಗೆ ಆರಾಮ, ನೆಮ್ಮದಿಯಪರಿಸರವನ್ನು ಕಟ್ಟಿಕೊಡದ ಸರಕಾರ ಇದ್ದರೆಷ್ಟು, ಬಿಟ್ಟರೆಷ್ಟು? ದುಬೈಯಲ್ಲಿ ಈಚಿಂತನೆಯ ಫಲದಲ್ಲಿ ಅರಳಿದ್ದೇ   , ,    .  ನಿಜಕ್ಕೂ ಇದೊಂದು ಉದಾತ್ತ, ಅದ್ಭುತ ಚಿಂತನೆ. ದುಬೈ ಸಣ್ಣದೇಶವಾಗಿರವುಹುದು. ಆಡಳಿತ ದೃಷ್ಟಿಯಿಂದ ನಿಯಂತ್ರಿಸುವುದು ಸುಲಭವಾಗಿರಬಹುದು.
ಹಾಗೆಂದ ಮಾತ್ರಕ್ಕೆ ಆ ದೇಶದ ಆಡಳಿತಗಾರರು, ನಿರ್ಮಾತೃರು ಇಂಥ ದಿಟ್ಟ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾದ ಅಗತ್ಯವೇನೂ ಇರಲಿಲ್ಲ. ಆದರೆ, ಈ ಯೋಚನೆ ಯಾರ ತಲೆಯಲ್ಲಿ ಮೊಳಕೆಯೊಡೆಯಿತೋ ಗೊತ್ತಿಲ್ಲ, ಅದನ್ನು ದುಬೈ ರೂಲರ್ ಮತ್ತು ಸಂಯುಕ್ತ ಅರಬ್‌ರಾಷ್ಟ್ರಗಳ ಪ್ರಧಾನಿ ಮಹಮದ್ ಬಿನ್ ರಶೀದ್ ಅಲ್ ಮಕ್ತೋಮ್ ಐದು ವರ್ಷಗಳ ಹಿಂದೆಯೇ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲ, ಮೊದಲ ಬಾರಿಗೆ, ಮಕ್ತೋಮ್ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯನ್ನು ತೆಗೆದು ಕೊಂಡಿದ್ದಾರೆ. ಅದೇನೆಂದರೆ ಇಪ್ಪತ್ತೆರಡು ವರ್ಷ ವಯಸ್ಸಿನವರನ್ನೇ    ಗೆ ಸಚಿವನನ್ನಾಗಿ ನೇಮಿಸಿದ್ದಾರೆ.
ಯುವಕರ ಆಶೋತ್ತರಗಳೇನು ಎಂಬುದನ್ನು ಯುವಕರ ಹೊರತಾಗಿ ಬೇರೆಯವರು ಅರಿಯಲು ಸಾಧ್ಯವಿಲ್ಲ. ಆ ಖಾತೆಗೆ ವಯಸ್ಸಾದವರನ್ನು ನೇಮಿಸಿದರೆ, ಯುವಕರನ್ನು ಅವಮಾನಿಸಿದಂತೆ ಎಂದು ಭಾವಿಸಿದ ಮಕ್ತೋಮ, ಯುವಜನ ಖಾತೆಗೆ ಕುಡಿಮೀಸೆಯ ತರುಣನನ್ನೇ ಮಂತ್ರಿಯನ್ನಾಗಿ ಮಾಡಿದ್ದಾರೆ. ಈ ಕಲ್ಪನೆಯೇ ಸುಂದರವಾಗಿದೆ. ಸರಕಾರದಲ್ಲಿ ಹಲವಾರು ಸಚಿವಾಲಯಗಳಿವೆ, ಮಂತ್ರಿ ಖಾತೆಗಳಿವೆ, ಅವುಗಳಿಗೆ ಮಂತ್ರಿಗಳಿದ್ದಾರೆ, ಹಿರಿಯ ಅಧಿಕಾರಿಗಳಿದ್ದಾರೆ. ಸರಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಲಕ್ಷಾಂತರ ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತದೆ. ಆದರೆ ಜನಸಂತಸದಿಂದ ಇದ್ದಾರಾ ಎಂದು ಕೇಳಿದರೆ ಉತ್ತರ – ಇಲ್ಲ!    ಉಪಯೋಗಕ್ಕೆ ಬರುವುದೇ ಇಲ್ಲಿ.
     ಮಹತ್ವ ಅರಿವಾಗುವುದೇ ಇಲ್ಲಿ. ಉತ್ತಮ ರಸ್ತೆಗಳು, ಮೇಲ್ಸೇತುವೆಗಳು, ಸುಸಜ್ಜಿತ ವಿಶಾಲ ರಹದಾರಿ ಗಳು, ಮೂಲಸೌಕರ್ಯವನ್ನು ಒದಗಿಸಿ, ಬೃಹತ್ ಯೋಜನೆಗಳನ್ನು ಜಾರಿಗೊಳಿಸುವುದಷ್ಟೇ ಸರಕಾರದ ಕೆಲಸವಲ್ಲ. ಇವೆಲ್ಲವುಗಳನ್ನು ಒದಗಿಸಿದ ನಂತರವೂ ಪ್ರಜೆಗಳು ಆರಾಮಾಗಿದ್ದೀರಾ, ಸಂತಸವಾಗಿದ್ದೀರಾ ಎಂದು ಸರಕಾರ ಚಿಂತಿಸಬೇಕು. ಸಂತಸವಾಗಿರದಿದ್ದರೆ ಅದಕ್ಕೆ ಕಾರಣ ಏನು ಎಂಬುದನ್ನು ಕಂಡು ಹಿಡಿಯ ಬೇಕು. ಆ ಕಾರಣಗಳ ದತ್ತಫಲವನ್ನು ಸರಕಾರದ ನೀತಿ, ನಿಯಮ ಮತ್ತು ಕಾರ್ಯಕ್ರಮಗಳ ಸುಧಾರಣೆಗೆ ಅಳವಡಿಸಿಕೊಳ್ಳಬೇಕು ಎಂಬುದು ಈ ಹೊಸ ಸಚಿವ ಖಾತೆಗಳನ್ನು ತೆರೆದಿರುವಹಿಂದಿನ ಆಶಯ ಮತ್ತು ಉದ್ದೇಶ.
2010 ರಲ್ಲಿ ಕೆಲವು ಅರಬ್ ರಾಷ್ಟ್ರಗಳಲ್ಲಿ ಅಶಾಂತಿ, ದಂಗೆ, ಗಲಭೆಗಳಾದವು. ಪರಿಣಾಮವಾಗಿ, ಅಲ್ಲಿನ ಸರಕಾರಗಳನ್ನು ಜನಕಿತ್ತೊಗೆದರು. ಇದು   ಎಂದು ಕರೆಯಿಸಿಕೊಂಡಿತು. ಇದರಿಂದ ಉತ್ತೇಜಿತರಾದ ಜನ ತಮ್ಮ ದೇಶಗಳಲ್ಲೂ, ಸರಕಾರದವಿರುದ್ಧ ಅಸಹನೆ ಮತ್ತು ಆಕ್ರೋಶವನ್ನು ವ್ಯಕ್ತ ಪಡಿಸಿದರು. ಇದು ಸುತ್ತಲಿನ ದೇಶಗಳಿಗೆ ಕಾಳ್ಗಿಚ್ಚಿನಂತೆ ಹಬ್ಬಿತು. ಜನರಲ್ಲಿಹೆಚ್ಚುತ್ತಿರುವ ಅಸಹನೆಯಿಂದ ಸಮಾಜದಲ್ಲಿ ಅಶಾಂತಿ, ಅಸ್ಥಿರತೆ ಜಾಸ್ತಿ ಯಾಗುತ್ತಿದೆ ಎಂಬುದು ವೇದ್ಯವಾಯಿತು.
ಆರೋಗ್ಯವಂತ, ಆಧುನಿಕ ಸಮಾಜ ಕಟ್ಟಲು ಜನರ ಸಹನಾಭಾವ ಅತ್ಯಂತ ಅವಶ್ಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ಜನರಲ್ಲಿ ಸಹನೆಮೂಡಿಸುವುದಕ್ಕಾಗಿಯೇ ದುಬೈ ಸರಕಾರ    ಎಂಬ ಒಂದು ಪ್ರತ್ಯೇಕ ಸಚಿವ ಖಾತೆ ತೆರೆದಿದ್ದುದಿಟ್ಟ, ದೂರದರ್ಶಿ ಕ್ರಮ.ಆ ಸಂದರ್ಭದಲ್ಲಿ ಮಕ್ತೋಮ್ ಹೇಳಿದ ಮಾತು ಮನನೀಯ –    ,        .              . ಸರಕಾರ ಎಂಥ ಆಡಳಿತ ನೀಡಬೇಕೆಂದರೆ, ಅದರಿಂದ ಜನರ ನೆಮ್ಮದಿ, ಸಮಾಧಾನದ ಮಟ್ಟ ಜಾಸ್ತಿಯಾಗಬೇಕು.
ಸಂಪತ್ತು ಸೃಷ್ಟಿಸುವುದೇಮುಖ್ಯ ಉದ್ದೇಶವಾಗಬಾರದು. ಸಂಪತ್ತು ವೃದ್ಧಿಯಾದ ಮಾತ್ರಕ್ಕೆ ಜನ ನೆಮ್ಮದಿಯಿಂದ ಇರಲಾರರು. ನೆಮ್ಮದಿ ನೀಡುವ ಪರಿಸರ, ವಾತಾವರಣ ರೂಪಿಸುವುದು ಮುಖ್ಯ ಉದ್ದೇಶ. ಉದ್ಯೋಗ, ಮೂಲಸೌಕರ್ಯಗಳೆಲ್ಲವನ್ನೂ ನೀಡಿದ ನಂತರ ಜನ ನೆಮ್ಮದಿ ಮತ್ತು ಸಮಾಧಾನದಿಂದ ಇರದಿದ್ದರೆ ಏನು ಸಾಧಿಸಿದಂತಾಯಿತು? ನೆಮ್ಮದಿಯ ಮನಸ್ಸುಗಳು ದೇಶದ ಉತ್ಪಾದನೆಯನ್ನು ಹೆಚ್ಚಿಸಬಲ್ಲರು, ಆಗ ಜನ ದೀರ್ಘ ಕಾಲ ಬಾಳಬಲ್ಲರು, ತಮ್ಮ ಸಮುದಾಯಗಳ ಮೂಲಕ ಇಡೀ ದೇಶದ ಆರ್ಥಿಕ ಅಭಿವೃದ್ಧಿಗೆ ಕ್ರಿಯಾವರ್ಧಕವಾಗಬಲ್ಲರು.’
ಕೊನೆಯಲ್ಲಿ ಮಕ್ತೋಮ್ ಒಂದು ಮಾತನ್ನು ಹೇಳುತ್ತಾರೆ -,  ,             . ಇದರ ಜತೆಗೆ ದುಬೈ ಸರಕಾರ    ಎಂಬ ಖಾತೆಯನ್ನೂ ತೆರೆದಿರುವುದು, ಭವಿಷ್ಯತ್ತಿನ ದಿನಗಳಲ್ಲಿ ದೇಶವನ್ನುಹೇಗೆ ಮುನ್ನಡೆಸಬೇಕು ಎಂಬ ಮಕ್ತೋಮ್ ಅವರ ದೂರಗಾಮಿ ಚಿಂತನೆಗೆ ಸಾಕ್ಷಿ. ಮುಂದಿನ ಹತ್ತು ವರ್ಷಗಳಲ್ಲಿ ದೇಶ ಹೇಗಿರ ಬೇಕು, ಶಿಕ್ಷಣ ವ್ಯವಸ್ಥೆ ಯಾವ ರೀತಿ ಬದಲಾಗಬೇಕು, ಅದಕ್ಕೆ ಈಗಲೇ ಹೇಗೆ ಸಿದ್ಧರಾಗಬೇಕು… ಇವೇ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಈ ಸಚಿವಾ ಲಯ ಸರ್ಕಾರಕ್ಕೇ ಕಾಲಕಾಲಕ್ಕೆ ತಜ್ಞರ ವರದಿಗಳನ್ನು ಸಲ್ಲಿಸುತ್ತಲೇ ಇರುತ್ತದೆ.
ಇದು ಒಂದು ಸರಕಾರಯೋಚಿಸಬೇಕಾದ ಸರಿಯಾದ ಕ್ರಮ. ನಮ್ಮ ರಾಜಕಾರಣಿಗಳು ತಾವು ಮತ್ತೊಮ್ಮೆ ಅಧಿಕಾರ ಹಿಡಿಯುವುದು ಹೇಗೆ, ಮತ್ತೊಮ್ಮೆ ಆರಿಸಿ ಬರುವುದು ಹೇಗೆ ಎಂದು ಯೋಚಿಸುತ್ತಾರೆಯೇ ಹೊರತು, ದೇಶ ಮುಂದಿನ ಹತ್ತು ವರ್ಷಗಳಲ್ಲಿ ಹೇಗಿರಬೇಕು, ಅದಕ್ಕೆ ಇಂದು ನಾವು ಹೇಗೆ ಸನ್ನದ್ಧರಾಗಬೇಕು ಎಂದು ಯಾರೂ ಯೋಚಿಸುವುದಿಲ್ಲ. ಆದರೆ ದುಬೈ ಸರಕಾರ ಆ ನಿಟ್ಟಿನಲ್ಲಿ ಐದು ವರ್ಷಗಳಹಿಂದೆಯೇ ಇಂಥ ಸಚಿವಾಲಯಗಳನ್ನು ತೆರೆದು ಇಡೀ ಜಗತ್ತಿನ ಸರಕಾರಗಳಿಗೆ, ಆಡಳಿತಗಾರರಿಗೆ ಮಾದರಿಯಾಗಿದೆ.
ಅಂದು ದುಬೈಯಲ್ಲಿ ಭೇಟಿಯಾದ      ನನ್ನಲ್ಲಿ ನಿಜಕ್ಕೂ ಒಂದಷ್ಟು ಸಂತಸ, ಸಕಾರಾತ್ಮಕ ಭಾವ ಮತ್ತು ಸೃಜನ ಶೀಲತೆಗಿರುವ ಅಗಾಧ ಶಕ್ತಿ ಹಾಗೂ ಪ್ರಭಾವದಲ್ಲಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರು!