ಸಚಿನ್‌ಗೆ ಭಾರತರತ್ನ ಕೊಟ್ಟರೂ ಕಾಂಗ್ರೆಸ್‌ಗೆ ಯುವಕರೊಲಿಯಲಿಲ್ಲ !
ಪ್ರಚಲಿತ
ವಿಜಯ್‌ ದರ್‌ಡ
ಪ್ರಧಾನಮಂತ್ರಿ ನರೇಂದ್ರಮೋದಿಯವರು ಕಾಶಿ ವಿಶ್ವನಾಥ ಧಾಮದ ಕಾರಿಡಾರ್ ಉದ್ಘಾಟನೆಯನ್ನು ಕಳೆದ ವಾರ ಮಾಡುತ್ತಿದ್ದಾಗ, ಬನಾರಸ್ ಪಟ್ಟಣದ ವಿಹಂಗಮ ನೋಟ, ಸೌಮ್ಯವಾಗಿ ಹರಿಯುತ್ತಿದ್ದ ಗಂಗಾನದಿ ಮತ್ತು ವಿಶ್ವನಾಥ ದೇಗುಲದಲ್ಲಿ ನಡೆಯುತ್ತಿದ್ದ ರುದ್ರಾಭಿಷೇಕದ ಭವ್ಯ ದೃಶ್ಯಗಳನ್ನು ನಾನುಬೆಳ್ಳಂಬೆಳಗ್ಗೆ ಕಣ್ತುಂಬಿಕೊಳ್ಳುತ್ತಿದ್ದೆ.
ಕಳೆದ ತಿಂಗಳಲ್ಲಿ ನಡೆದ ಪ್ರಪ್ರಥಮ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಬನಾರಸ್‌ಗೆ ಹೋಗಿದ್ದೆ. ಅಲ್ಲಿ ನಡೆಯುವ ಗಂಗಾರತಿಯ ದೃಶ್ಯ ಇನ್ನೂ ನನ್ನ ಮನಃಪಟಲದಲ್ಲಿ ಅಚ್ಚೊತ್ತಿ ದಂತಿದೆ. ಒಂದು ಸಂಜೆ ಸುದೀರ್ಘಕಾಲ ನಾನು ಗಂಗಾನದಿಯಲ್ಲಿ ದೋಣಿವಿಹಾರ ಮಾಡಿ, ಬನಾರಸ್ ನ ವಿಶಿಷ್ಟ ಮಸಾಲೆಭರಿತ ಚಾಟ್ ತಿನಿಸುಗಳನ್ನು ಸವಿದು ಸಂಭ್ರಮಿಸಿದೆ. ಮಂಜುಮುಸುಕಿದ ಮುಂಜಾವಿನದ್ದು ನಾನು ಭೋಲೇನಾಥನಿಗೆ ಅಭಿಷೇಕ ಸಲ್ಲಿಸಲು ಹೋಗಿದ್ದೆ.
ಇದಕ್ಕೂ ಮೊದಲು ನಾನು ಬನಾರಸ್‌ಗೆ ಅನೇಕ ಬಾರಿ ಹೋಗಿದ್ದೇನೆ. ಆದರೆ ಈ ಬಾರಿಯ ಕಾಶಿ ವಿಶ್ವನಾಥ ಧಾಮದ ಕಾರಿಡಾರ್ ಭೇಟಿ ನನ್ನ ಪಾಲಿಗೆ ಉಸ ದಾಯಕವಾಗಿತ್ತು. ಈ ಮೊದಲು ಅಲ್ಲಿದ್ದ ಗಲ್ಲಿಗಳು ತುಂಬಾ ಇಕ್ಕಟ್ಟಿನಿಂದ ಕೂಡಿದ್ದು ಅಲ್ಲಿ ಸಂಚರಿಸುವುದು ಕಷ್ಟಕರವಾಗಿತ್ತು. ಆದರೆ ಈಗ ಎಲ್ಲವೂ ತೆರವಾಗಿ ಅಗಲವಾದ ರಸ್ತೆಗಳ ನಿರ್ಮಾಣವಾಗಿದೆ. ಎಷ್ಟೇ ಜನಸಂದಣಿ ಇದ್ದರೂ ಸಲೀಸಾಗಿ ಓಡಾಡುವುದಕ್ಕೆ ಈಗ ಅವಕಾಶವಾಗಿದೆ.
ಕಾಶಿ ವಿಶ್ವನಾಥನ ಸನ್ನಿಽಯಲ್ಲಿ ಇಂತಹ ದೊಅದು ಪರಿವರ್ತನೆ ಆಗಬಹುದೆಂದು ಯಾರೂ ನಿರೀಕ್ಷೆ ಮಾಡಿರ ಲಿಲ್ಲ. ಮೊತ್ತ ಮೊದಲ ಬಾರಿಗೆ ಕಾಶಿಯ ಎಲ್ಲ ಘಾಟ್‌ಗಳೂ ಸಕಲ ವ್ಯವಸ್ಥೆಗಳಿಂದ ಸಜ್ಜಾಗಿರುವುದನ್ನು ನಾನು ಗಮನಿಸಿದೆ. ಬನಾರಸ್ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಅಡು ಸೌಂದರ್ಯ ವರ್ಧನೆ ಮಾಡಿ ಕೊಂಡಿದೆ ಎಂಬುದು ನನ್ನ ಅಭಿಪ್ರಾಯ.
ಹಲವಾರು ಸುಮಧುರ ನೆನಪುಗಳನ್ನು ಹೊತ್ತು ನಾನು ಬನಾರಸ್ ನಿಂದ ವಾಪಸಾದೆ. ಕಾಶಿ ವಿಶ್ವನಾಥದ ಸನ್ನಿಧಿಯಲ್ಲಿ ನೂತನ ಕಾರಿಡಾರ್ ಉದ್ಘಾಟನೆ ನನ್ನ ಮನಸ್ಸಿನಲ್ಲಿ ಅನೇಕ ಹಳೆಯ ನೆನಪುಗಳು ಮರು ಕಳಿಸುವಂತೆ ಮಾಡಿತು. ಕಾಶಿಯನ್ನು ಪದಗಳಲ್ಲಿ ಬಣ್ಣಿಸು ವುದು ಅಸದಳ ಎಂಬ ಪ್ರಧಾನಿ ಮೋದಿಯವರ ಮಾತನ್ನು ನಾನು ಖಂಡಿತ ಒಪ್ಪುತ್ತೇನೆ. ಅದನ್ನು ಮಾನಸಿಕ ಅನುಭೂತಿಯಿಂದ ಗ್ರಹಿಸಬೇಕೇ ವಿನಃ ಅಕ್ಷರಗಳಲ್ಲಿ ವರ್ಣಿಸಲಾಗದು. ಕಾಶಿಯಲ್ಲಿ ಹುಟ್ಟು ಮತ್ತು ಸಾವು ಎರಡೂ ಪವಿತ್ರ. ವ್ಯಕ್ತಿಯೊಬ್ಬ ಕಾಶಿಯನ್ನು ಪ್ರವೇಶಿಸಿದಾಕ್ಷಣ ಎಲ್ಲ ಬಂಧಗಳಿಂದ ಮುಕ್ತನಾಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿರುವ ಮಾತು ಸುಳ್ಳಲ್ಲ.ಅಲ್ಲಿಗೆ ಹೋದಾಗಲೆಲ್ಲ ಕಾಶಿ ವಿಶ್ವನಾಥನಲ್ಲಿರುವ ಅಲೌಕಿಕ ಶಕ್ತಿಯ ಕಾರಣದಿಂದ ನಮ್ಮ ಆತ್ಮ ಪುನೀತವಾಗುತ್ತದೆ.
ನಿಮ್ಮಲ್ಲಿ ಅಧ್ಯಾತ್ಮದ ಸೆಳಕು ಕೊಂಚವಾದರೂ ಇದ್ದರೆ ಇಂತಹದೊಂದು ಅನುಭೂತಿ ನಿಮ್ಮ ಅನುಭವಕ್ಕೆ ಖಂಡಿತ ವಾಗಿ ಬರುತ್ತದೆ. ಅದೊಂದು ಸಾಮಾನ್ಯ ನಗರಿಯಲ್ಲ, ಅಲ್ಲಿನ ವಾತಾವರಣದಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಬೆಲೆಕಟ್ಟಲಾಗದ ಪ್ರಭೆ ಆವರಿಸಿಕೊಂಡಿದೆ. ಕೆಲವರು ಕಾಶಿ ಯನ್ನು ಧಾರ್ಮಿಕಆಸ್ಥೆಯ ಪ್ರತೀಕವಾಗಿ ಭಾವಿಸಿದ್ದಾರೆ. ಅಲ್ಲಿ ಧಾರ್ಮಿಕ ನಂಬಿಕೆಗಳು, ಪುರಾಣ, ಅಧ್ಯಾತ್ಮ ಎಲ್ಲವೂ ಮಿಳಿತವಾತಿರುವಂತೆ ನನಗೆ ಭಾಸವಾಗುತ್ತದೆ. ನಾನುಕಾಶಿಗೆ ಹೋದಾಗಲೆಲ್ಲ ನನಗೆ ಕಬೀರನ ವಾಣಿ ಕೇಳಿಸಿದಂತಾಗುತ್ತದೆ. ಅ ಬಿಸ್ಮಿ ಖಾನರ ಶಹನಾಯಿ ಪ್ರತಿಧ್ವನಿಸಿದಂತಾಗುತ್ತದೆ.
ಪಂಡಿತ್ ಚನ್ನುಲಾಲ್ ಮಿಶ್ರಾ ಅವರ ಧ್ವನಿಯೂ ಕೇಳಿಸಿದಂತಾಗುತ್ತದೆ. ಬನಾರಸ್ ಹಿಂದೂ ಯುನಿವರ್ಸಿಟಿಯ ಪ್ರಭಾವಳಿ ನನ್ನ ಮನದಾಳದಲ್ಲಿ ಪ್ರಜ್ವಲಿಸುತ್ತದೆ.ಬನಾರಸ್ ಭೋಲೇನಾಥನ ತ್ರಿಶೂಲದಲ್ಲಿ ಸ್ಥಿತವಾಗಿದೆ ಎಂಬ ಪಾರಂಪರಿಕ ನಂಬಿಕೆ ಇದೆ. ಅದು ನಂಬಿಕೆಯ ಮಾತು. ಆದರೆ ಉತ್ತರ ಭಾರತದ ಜನರಜೀವನಾಡಿ ಯಾಗಿರುವ ಗಂಗೆ ಈ ಪವಿತ್ರ ಪುರಾತನ ನಗರಿಯ ಮೂಲಕ ಹಾದು ಹೋಗಿ ಇನ್ನಷ್ಟು ಪವಿತ್ರಳಾಗುತ್ತಾಳೆ. ಇದೊಂದು ಬಗೆಯ ಭೌಗೋಳಿಕವಿಸ್ಮಯವಲ್ಲವೇ? ಬೇರೆ ಪಟ್ಟಣಗಳಿಗಿಂತ ಇಲ್ಲಿ ಏನೋ ವಿಶೇಷವಾದದ್ದು ಇದೆ. ಅಲ್ಲಿ ಪೂಜೆ, ಪ್ರಾರ್ಥನೆ, ನೃತ್ಯ, ಭಜನೆ, ಸಂಗೀತ, ವಿಜ್ಞಾನ ಎಲ್ಲವೂ ಮಿಳಿತ ವಾಗಿದೆ. ಸನಾತನ ಧರ್ಮದ ಪ್ರತೀಕವಾಗಿರುವ ಈ ಜಾಗ ಅನನ್ಯ ಅನುಭವ ಕೊಡುವ ತಾಣ.
ಉತ್ತರ ಪ್ರದೇಶದಲ್ಲಿ ಚುನಾವಣೆ ಇರುವ ಕಾರಣಕ್ಕಾಗಿ, ಹಿಂದೂಗಳ ವೋಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು, ಕಾಶಿ ಕಾರಿಡಾರ್‌ನ ಮೊದಲ ಹಂತದ ಉದ್ಘಾ ಟನೆ ತರಾತುರಿಯಲ್ಲಿ ಮಾಡಲಾಗಿದೆ ಎಂದು ಕೆಲವರು ಹೇಳುತ್ತಾರೆ. ಅಂತಹದೊಂದು ಉದ್ದೇಶ ಇದ್ದರೂ ಇರಬಹುದು. ಆದರೆ ನಮ್ಮ ದೇಶದ ಮತದಾರರು ಸಾಕಷ್ಟು ಜಾಗೃತರಾಗಿzರೆ. ರಾಜಕೀಯದಲ್ಲಿ ಇದೆಲ್ಲವೂ ಸಹಜ. ಹಿಂದೊಮ್ಮೆ ಕಾಂಗ್ರೆಸ್ ಸರಕಾರ ಇದ್ದಾಗ ಸಚಿನ್ ತೆಂಡೂಲ್ಕರ್‌ಗೆ ಭಾರತರತ್ನ ಕೊಟ್ಟಾಗಲೂ, ಸರಕಾರ ಯುವ ಮತದಾರರನ್ನು ಸೆಳೆಯಲು ತಂತ್ರ ಹೂಡಿದೆ ಎನ್ನಲಾಗುತ್ತಿತ್ತು. ಆದರೆ ಯುವಕರು ಕಾಂಗ್ರೆಸ್‌ಗೆ ಮತ ಹಾಕಿದರೇ? ಯಾವ ಮತದಾರ ನನ್ನೂ ಇಂತಹ ಸಂಗತಿಗಳಿಅದ ಓಲೈಸಲಾಗುವುದಿಲ್ಲ. ಕಾಶಿ ಕಾರಿಡಾರ್ ಅಗತ್ಯವಾಗಿತ್ತು.
ಕಾಶಿಯನ್ನು ಪ್ರವಾಸೀ ತಾಣವಾಗಿಸುವ ದೃಷ್ಟಿಯಿಂದ ಇದೊಂದು ಉತ್ತಮ ಹೆಜ್ಜೆ. ಇದರಿಂದ ಹಿಂದೂಗಳಿಗೆ ಮಾತ್ರ ಪ್ರಯೋಜನವಾಗುವುದಿಲ್ಲ, ಬೇರೆ ಬೇರೆಜಾತಿ-ಜನಾಂಗಗಳ ಜನರಿಗೆ ಇಲ್ಲಿ ಉದ್ಯೋಗಾವಕಾಶ ಲಭ್ಯವಾಗುತ್ತದೆ. ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಹಿಂದೂ ಎಂಬ ಪದವಿರಬಹುದು, ಆದರೆ ಅಲ್ಲಿಹಿಂದೂಗಳಲ್ಲದವರೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಮ್ಮ ದೇಶದ ಧರ್ಮದ ಹೆಸರಿನಲ್ಲಿ ಆಡಳಿತ ನಡೆಸುತ್ತಿಲ್ಲ, ಆಡಳಿತ ನಡೆಯುತ್ತಿರುವುದು ಸಂವಿಧಾನದ ಬಲದಿಂದ. ಇದು ನಮ್ಮ ದೇಶದ ವೈಶಿಷ್ಟ್ಯ. ಸರ್ವಧರ್ಮ ಸಮನ್ವಯತೆ ನಮ್ಮ ನರನಾಡಿಗಳಲ್ಲಿದೆ. ಕಳೆದ ವಾರ ನಮ್ಮ, ಲೋಕಮತ ಪತ್ರಿಕೆಯ ನಾಗಪುರ ಆವೃತ್ತಿ ೫೦ ವರ್ಷಗಳನ್ನು ಪೂರೈಸಿತು. ಈ ಸಂದರ್ಭದಲ್ಲಿ ನಾನು ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್, ಬೌದ್ಧಮಂದಿರ ಸೇರಿದಂತೆ ಎಲ್ಲ ಸ್ಥಳಗಳಿಗೂ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿಸಿದೆ. ಏಕೆಂದರೆ ಬಾಬೂಜಿ ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದ, ಲೋಕಮತ ಪತ್ರಿಕೆ ಸ್ಥಾಪಕರೂ ಸ್ವಾತಂತ್ರ್ಯ ಹೋರಾಟಗಾರರೂ ಆದ ಜವಾಹರಲಾಲ್ ದರಡಾ ಅವರು ಎಲ್ಲ ಧರ್ಮಗಳನ್ನೂ ಗೌರವಿಸಬೇಕೆಂಬ ಪಾಠವನ್ನು ನಮಗೆ ಹೇಳಿ ಹೋಗಿದ್ದಾರೆ.
ಪತ್ರಿಕೋದ್ಯಮದ ಪಾವಿತ್ರ್ಯವನ್ನು ಅರಿತು ಇಂದು ನಮ್ಮ ಲೋಕಮತ ಪತ್ರಿಕೆಯಲ್ಲಿ ಎಲ್ಲ ಜಾತಿ-ಧರ್ಮಗಳ ಜನರು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡು ತ್ತಿದ್ದಾರೆ. ನಡವಳಿಕೆ, ಗುರಿ ಮತ್ತು ಏಕತೆ ಸರ್ವಶ್ರೇಷ್ಠ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಭೂಮಿಯ ಮೇಲಿನ ಯಾವ ಶಕ್ತಿಯೂ ಇದನ್ನು ಅಲುಗಾಡಿಸಲು ಸಾಧ್ಯವಿಲ್ಲ.