ರಂಗಾಯಣ ವಾರೀಸುದಾರಿಕೆಗೆ ದಿಗ್ಬಂಧನ
ಸಂವಾದ
ಸಿಂಚನ ಎಂ.ಕೆ.ಮಂಡ್ಯ
sinchanamk1999@.
ಹಾಗೆ ನೋಡಿದರೆ ಗಿರೀಶ್ ಕಾರ್ನಾಡ್ ಒಬ್ಬರೇ ಅಲ್ಲ. ಕಾರ್ಯಪ್ಪನವರಿಗಿಂತ ಮೊದಲು ರಂಗಭೂಮಿಯ ನಿರ್ದೇಶಕರಾಗಿದ್ದ ಜನಾರ್ಧನ್, ಅದಕ್ಕೂ ಹಿಂದಿನ ಬಹುತೇಕ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಕರೆಸಿದ್ದ ಎಲ್ಲ ಅತಿಥಿಗಳೂ ಅವರವರ ವಿಚಾರಧಾರೆಗೆ ಹೊಂದುವ ವ್ಯಕ್ತಿ ಗಳೇ. ಅಂದ ಮೇಲೆ ಈಗೇಕೆ ವಿರೋಧ?
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಿನ ಪರಂಪರಾಗತ ಆಚರಣೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಇಲ್ಲಿನ ಕಲಾ ವೈಭವದ ಕಾರ್ಯಕ್ರಮಗಳಲ್ಲಿ ನಾಡ ಹಬ್ಬ ದಸರಾದ ನಂತರದ ಸ್ಥಾನ ಪಡೆದಿರುವುದು ರಂಗಭೂಮಿಯ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’. ಈಗಾಗಲೇ ಆರಂಭವಾಗ ಬೇಕಿದ್ದ ಪ್ರಸಕ್ತ ಸಾಲಿನ ‘ಬಹುರೂಪಿ’ ತಾತ್ಕಾಲಿಕವಾಗಿ ಸ್ಥಗಿತಗೊಂಡು ವಿವಾದಕ್ಕೀಡಾಗಿದೆ.
ಒಂದೇ ಮಾತಿನಲ್ಲಿ ಹೇಳುವುದಾದರೆ ಅಸಹಿಷ್ಣುತೆಯೇ ಈ ವಿವಾದದ ಮೂಲ. ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕಾ ಅವಿನಾಶ್ ಆಹ್ವಾನಿಸಿರುವುದನ್ನು ವಿರೋಧಿಸಿ ಬುದ್ಧಿ ಜೀವಿಗಳು ಹೋರಾಟ ಶುರು ಮಾಡಿದ್ದಾರೆ. ದಶಕಗಳಿಂದ ರಂಗಾಯಣವನ್ನು ತಮ್ಮ ಹೆಸರಿಗೇ ‘ಜಿಪಿಒ’ ಮಾಡಿಸಿಕೊಂಡಂತೆ’ ತಮ್ಮ ವಿಚಾರಧಾರೆಗಳನ್ನೇ ಪ್ರತಿಪಾದಿಸುತ್ತ ಬಂದಿದ್ದ ಎಡಪಂಥೀಯ ಸೋ ಕಾಲ್ಡ್ ಬುದ್ಧಿಜೀವಿಗಳು, ದೇಶ ಜಾಗೃತಗೊಂಡು ಪುಟಿದೇಳುತ್ತಿರುವ ಈ ಕಾಲದಲ್ಲೂ ಹಿಂದಿನಂತೆಯೇ ರಂಗಾಯಣದಂಥ ಸಂಸ್ಥೆಗಳು ತಮ್ಮ ಕಪಿಮುಷ್ಟಿಯ ಭದ್ರವಾಗಿರಬೇಕೆಂದು ಆಶಿಸುತ್ತಿರುವುದು ಸ್ಪಷ್ಟ.
ಸ್ವಾತಂತ್ರ್ಯಾ ನಂತರದ ಇಷ್ಟು ವರ್ಷವೂ ದೇಶವಾಸಿಗಳ ಮೇಲೆ ಮಾನಸಿಕವಾಗಿ ವೈಚಾರಿಕ ದಾಳಿ ನಡೆಸಿ, ನೆಮೂಲದ ಸಂಸ್ಕೃತಿಯನ್ನೇ ವಿಸ್ಮೃತಿಗೆ ಸರಿಸಲು ಸಕಲ ರೀತಿಗಳಲ್ಲೂ ಪ್ರಯತ್ನಿಸಿರುವುದು ವೇದ್ಯ. ಇಂದಿನ ಜಾಗೃತ ಸಮಾಜದ ಎದುರು ಅದೇ ಹಳೆಯ ಸ‘ಮಾಜಾ’ವಾದದ ಇವರ ಚಿಂತನೆ- ಬರಹಗಳು ಪೇಲವವೆನಿಸಿ ವೈಫಲ್ಯ ಕಾಣುತ್ತಿದೆ. ತ್ಯಾಗ, ಧರ್ಮ, ಶ್ರದ್ಧೆ, ನೈತಿಕತೆ, ದೇಶಭಕ್ತಿ, ಆದರ್ಶ, ಅಧ್ಯಾತ್ಮಗಳನ್ನೇ ಆಧಾರವಾಗಿರಿಸಿ ಕೊಂಡು ನಿರ್ಮಾಣವಾದ ಭರತ ಭೂಮಿ, ಆಧುನಿಕ ಕಾಲಘಟ್ಟದಲ್ಲಿ ತನ್ನ ಗತವೈಭವ ಮರುಕಳಿಸಿಕೊಳ್ಳುತ್ತಿದೆ.
ಇದೇ ಇವರೆಲ್ಲರ ಆತಂಕ, ದುಃಖ, ಹತಾಷೆ, ಪ್ರತಿಭಟನೆಗಳಿಗೆ ಕಾರಣ. ಉರಿಯನ್ನು ಸಹಿಸಲಾಗುತ್ತಿಲ್ಲ. ವಿರೋಧಿಗಳ ತಪ್ಪು ಕಂಡುಹಿಡಿಯುವುದು ಅಸಂಭವ ಪ್ರತೀತ ವಾದಾಗ ತಮಗೆ ತಾವೇ ಕಲ್ಪನಾತೀತವಾಗಿ ತಪ್ಪುಗಳನ್ನು ಸೃಷ್ಟಿಸಿಕೊಂಡು ಆಪಾದನೆ ಗಿಳಿಯುತ್ತಿದ್ದಾರೆ. ಈ ಜಾಣಕುರುಡು ಕಾರ್ಯದಲ್ಲಿ ನೂರಕ್ಕೆ ನೂರು ಪ್ರಯತ್ನಶೀಲರಾಗಿzರೆ. ಇದರ ಭಾಗವೇ ರಂಗಾಯಣಲದಲ್ಲಿ ಎಬ್ಬಿಸಿರುವ ಗದ್ದ. ನಿರುದ್ಯೋಗಿಗಳಿಗೆ ಇದಕ್ಕಿಂತ ಸುಲಭ ಉದ್ಯೋಗವನ್ನು ಹೇಗೆ ಹುಡುಕುವುದು? ಇವರ ವಿಚಾರಗಳು ಹೀಗೆ ತಮ್ಮ ಪ್ರಭಾವ ಕಳೆದುಕೊಳ್ಳುತ್ತ ಹೋದರೆ ಇವರೆಲ್ಲ ಮತ್ತೆ ನಿರುದ್ಯೋಗಿಗಳಾಗ ಬೇಕಾಗುತ್ತದೆ ಅಲ್ಲವೆ!? ವೈಚಾರಿಕತೆಯ ವಿರೋ ಧಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಖ ವಾಡ ಹಿಡಿದು ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನ ಅಸ್ತ್ರಗಳನ್ನು ಪ್ರಯೋಗಿಸುವ ಇವರು ತಮ್ಮನ್ನು ಹೊರತುಪಡಿಸಿ ಬೇರೆ ಯಾರೇ ಈ ಪದ ಗಳನ್ನು ಉಚ್ಚರಿಸಿದರೂ ಸಹಿಸಲಾರರು. ಇದರಲ್ಲೂ ತಮಗೆ ಮಾತ್ರ ಮೀಸಲಾತಿ ಇರುವಂತೆ ನಡೆದುಕೊಳ್ಳುತ್ತಾರೆ.
ಗೊತ್ತಿರಲಿ, ರಂಗಾಯಣದಲ್ಲಿ ಇದೀಗ ವಿವಾದಕ್ಕೀಡಾಗಿರುವ ಸಂಗತಿಯ ಹಿಂದೆ ದೊಡ್ಡ ಹಿನ್ನೆಲೆ ಇದೆ. ಯಾವಾಗ ಆರ್‌ಎಸ್‌ಎಸ್ ಹಿನ್ನೆಲೆಯ ಅಡ್ಡಂಡ ಸಿ. ಕಾರ್ಯಪ್ಪ ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡರೋ ಅಂದಿನಿಂದಲೇ ವಿರೋಧ ಮಾಡುತ್ತಲೇ ಬಂದಿದ್ದಾರೆ ಈ ಬುದ್ಧಿಜೀವಿಗಳು. ಕಾರ್ಯಪ್ಪ ನಿರ್ದೇಶಕರಾದ ನಂತರ ಪ್ರದರ್ಶನಗೊಂಡ ಟಿಪ್ಪು ಸುಲ್ತಾನ್ ಬಗೆಗಿನ ನಾಟಕ ಮುಂದಿಟ್ಟುಕೊಂಡು ಈ ಗುಂಪು ಗಲಾಟೆ ನಡೆಸಿತ್ತು. ನಂತರ ಇತ್ತೀಚೆಗೆ ಅಭೂತ ಪೂರ್ವ ಯಶಸ್ಸು ದಾಖಲಿಸಿದ ಪರ್ವ ಕಾದಂಬರಿ ಆಧಾರಿತ ನಾಟಕಕ್ಕೂ ವಿರೋಧ ವ್ಯಕ್ತಪಡಿಸಿದ್ದರು.
ಏನೇ ಹೇಳಿ, ಎಷ್ಟೇ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ವ್ಯಕ್ತಿಗಳು ಅವರ ಜ್ಞಾನ, ಪ್ರತಿಭೆಗಳನ್ನು ಸಮ್ಮಾನಿಸುವುದು ಮಾನವೀಯತೆಯ ಪ್ರಮುಖ ಲಕ್ಷಣ. ಆದರೆ ‘ಸರಸ್ವತಿ ಸಮ್ಮಾನ್’ ಪುರಸ್ಕೃತ ಸಮಕಾಲೀನ ಶ್ರೇಷ್ಠ ಹಾಗೂ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ದೀರ್ಘ ಕಾಲದಿಂದ ಮೈಸೂರಿನ ಇದ್ದರೂ ವಿಚಾರಧಾರೆಯ ಕಾರಣಕ್ಕಾಗಿ ಅವರನ್ನು ರಂಗಭೂಮಿಗೆ ಕರೆಸದೇ ಅವಮಾನಿಸಿದ್ದು ಎಂತಹ ದುರದೃಷ್ಟ ಕರ ಸಂಗತಿ!
ಹೌದು, ಕಾರ್ಯಪ್ಪನವರು ನಿರ್ದೇಶಕರಾದ ಮೇಲೆಯೇ ಅವರನ್ನು ಕರೆಸಿ ಗೌರವಿಸಿ, ಲೋಪ ಸರಿಪಡಿಸಿದ್ದು. ಏನೂ ಅಲ್ಲಾಡಿಸಲಾಗಲಿಲ್ಲ. ಇದೀಗಮತ್ತೆ ‘ಬಹುರೂಪಿ’ ಆಹ್ವಾನಿತರಾಗಿರುವ ಸೂಲಿಬೆಲೆ ಹಾಗೂ ಮಾಳವಿಕಾರನ್ನು ವಿರೋಧಿಸುತ್ತಿರುವುದೂ ಅದೇ ಅಜೆಂಡಾದ ಮುಂದುವರಿಕೆ. ಕಾರ್ಯಕ್ರ ಮಕ್ಕೆ ‘ತಾಯಿ’ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದ್ದು ನೆಲ, ಜಲ, ಪ್ರಕೃತಿ, ಭಾಷೆ, ರಾಜ್ಯ ಎಂಬ ವಿಷಯಗಳ ಆಧಾರದ ಮೇಲೆ ರಾಷ್ಟ್ರೀ ಯತೆಯ ಚಿಂತನೆಗಳನ್ನು ಅಳವ ಡಿಸುವ ನಿಟ್ಟಿನಲ್ಲಿ ಈ ಬಾರಿಯ ನಾಟಕೋತ್ಸವ ಆಯೋಜಿಸಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಸುಮಾರು ಲಕ್ಷಾಂತರ ಜನಕ್ಕೆ ಊಟ ಒದಗಿಸಿದ, ಸಮಾಜ ಸೇವಾ ನಿರತ ಮಾಳವಿಕಾ ಮತ್ತು ನಾಡಿನ ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ಕಟ್ಟಿಕೊಂಡು ಶ್ರಮಿಸುತ್ತಿರುವ ಸೂಲಿಬೆಲೆಯವರನ್ನು ಕರೆಸಿದ್ದರಲ್ಲಿ ತಪ್ಪೇನಿದೆ?ರಾಜ್ಯದ ಸುಮಾರು ೧೦ ನದಿಗಳು- ೨೫೦ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತಾ ಕಾರ್ಯ, ಕೋವಿಡ್ ಸಂದರ್ಭದಲ್ಲಿ ಸುಮಾರು ೨೦ ಸಾವಿರ ಖಾಸಗಿಶಿಕ್ಷಕರಿಗೆ ದಿನಸಿ ಪೂರೈಕೆ, ಸರಕಾರಿ ಶಾಲೆಗಳ ಪುನರುಜ್ಜೀವನ, ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನಗಳ ಜೀರ್ಣೋದ್ಧಾರ, ಪ್ರವಾಹ ಪರಿಸ್ಥಿತಿಯಲ್ಲಿ ಸೃಜನಾತ್ಮಕ ಕಾರ್ಯಪ್ರವೃತ್ತತೆ, ಯುವ ಜನತೆಯಲ್ಲಿ ನಿರಂತರ ರಾಷ್ಟ್ರಜಾಗೃತಿಯ ಚಿಂತನೆ ಗಳನ್ನು ಬಿತ್ತಲು ನಿರಂತರ ಭಾಷಣ- ಚರ್ಚೆಗಳು ಹೀಗೆ ಸಮಾಜಮುಖಿಯಾಗಿ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿರುವ ಚಕ್ರ ವರ್ತಿ ಸೂಲಿಬೆಲೆ ಇಂಥ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಲು ಅರ್ಹರಲ್ಲವೇ? ‘ಚಕ್ರವರ್ತಿ ಅವರನ್ನು ರೈಟ್ ವಿಂಗ್ ಎಂತಲೋ ದೊಡ್ಡ ವಾಗ್ಮಿ ಎಂತಲೋ ಕರೆಸುತ್ತಿಲ್ಲ, ಹಾಗೆಯೇ ಕೆಲವರು ಅಪಪ್ರಚಾರ ಮಾಡ ಲಾಗುತ್ತಿರುವಂತೆ ಅವರನ್ನು ಬಹುರೂಪಿ ಸಮಾರೋಪದ ಅಧ್ಯಕ್ಷತೆಗೆ ಆಹ್ವಾನಿಸಿಲ್ಲ’ ಎಂದು ಕಾರ್ಯಪ್ಪನವರು ತಿಳಿಸಿದ್ದಾರೆ.
ಈ ಕ್ಷಣಕ್ಕೆ ಹಾಗೇ ಸುಮ್ಮನೆ ಕಾರ್ಯಪ್ಪ ಅವರು ಚಕ್ರವರ್ತಿ ಅವರನ್ನು ರೈಟ್‌ವಿಂಗ್‌ನವರು ಅಥವಾ ರಾಷ್ಟ್ರೀಯತೆ- ಹಿಂದುತ್ವದ ಪ್ರತಿಪಾದಕ ಎಂದೇಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಕಲ್ಪಿಸಿಕೊಳ್ಳಿ. ಹಾಗಿದ್ದರೂ ಇದನ್ನು ಪ್ರಶ್ನಿಸುವ ನೈತಿಕತೆಯನ್ನು ಬುದ್ಧಿಜೀವಿಗಳು ಉಳಿಸಿಕೊಂಡಿದ್ದಾರೆಯೇ? ಯಾರು ತಾನೊಬ್ಬ ‘ಅರ್ಬನ್ ನಕ್ಸಲ’  ಎಂದು ಬೋರ್ಡ್ ಹಾಕಿಕೊಂಡು ಪ್ರದರ್ಶಿಸಿದರೊ ಅಂಥ ಗಿರಿಶ್ ಕಾರ್ನಾಡ್ ಅವರನ್ನೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಸಿದ್ದರು ಎಂದ ಮೇಲೆ ರೈಟ್‌ವಿಂಗ್‌ನವರನ್ನು ವಿರೋಧಿಸಲು ಹೇಗೆ ಸಾಧ್ಯ? ಹಾಗೆ ನೋಡಿದರೆ ಗಿರೀಶ್ ಕಾರ್ನಾಡ್ ಒಬ್ಬರೇ ಅಲ್ಲ.
ಕಾರ್ಯಪ್ಪನವರಿಗಿಂತ ಮೊದಲು ರಂಗಭೂ ಮಿಯ ನಿರ್ದೇಶಕರಾಗಿದ್ದ ಜನ್ನಿ (ಜನಾರ್ಧನ್) ಮತ್ತವರ ಸಂಗಡಿಗರು, ಅದಕ್ಕೂ ಹಿಂದಿನ ಬಹುತೇಕ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಕರೆಸಿದ್ದ ಎಲ್ಲ ಅತಿಥಿಗಳೂ ಅವರವರ ವಿಚಾರ ಧಾರೆಗೆ ಹೊಂದುವ ವ್ಯಕ್ತಿಗಳೇ. ನೋಡಿ ಬೇಕಿದ್ದರೆ, ದೇವು ಪತ್ತಾರ,ಸಯ್ಯದ್ ರೌಪ್ ಖಾದ್ರಿ, ಎನ್.ಸುಮತಿ, ಡಾ.ಸಿ. ಬಸವರಾಜ, ಡಾ. ಅಬ್ದುಲ್ ಹಮೀದ್ ಇವರೆಲ್ಲ ಏನು? ಇನ್ನು ಮಾಳವಿಕಾ ಅವಿನಾಶ್ ಅವರು ಒಂದು ರಾಜಕೀಯ ಪಕ್ಷದ ವಕ್ತಾರೆ ಎಂದು ಕೆಲವರು ವಿರೋಧಿಸುತ್ತಿದ್ದಾರೆ.
ಆದರೆ ಈ ಹಿಂದೆಯೂ ಅನೇಕ ರಾಜಕೀಯ ವ್ಯಕ್ತಿಗಳು ಇಲ್ಲಿ ಅತಿಥಿಗಳಾಗಿ ಭಾಗವಹಿಸಿ ರುವುದನ್ನು ನಾವು ಕಾಣಬಹುದು. ಮಾಝಿ ಸಚಿವೆ ಉಮಾಶ್ರೀರಾಜಕಾರಣಿಯಾಗಿರಲಿಲ್ಲವೇ? ತಾವು ಯಾವ ತಪ್ಪು ಮಾಡದಿದ್ದರೂ ವೈಚಾರಿಕತೆಯ ಕಾರಣದಿಂದಾಗಿ ನಿರಂತರ ವೈಯಕ್ತಿಕ ಆಕ್ರಮಣಕ್ಕೆ ಗುರಿಯಾ ಗಿರುವ ಕಾರ್ಯಪ್ಪ ಅವರು ‘ಯೋಧ ಪರಂಪರೆಯ ಕೊಡಗು ಜಿಲ್ಲೆಯವನಾದ ನಾನು ಯಾರಿಗೂ ಹೆದರುವುದಿಲ್ಲ. ಬಿಜೆಪಿ ರಕಾರದಿಂದ ನೇಮಕದವನು, ಆರ್‌ಎಸ್ಸೆಸ್ ಹಿನ್ನೆಲೆಯುಳ್ಳವನು ಎಂದು ಕೆಲವರಿಗೆ ಕಿರಿಕಿರಿಯಾಗಿದೆ. ಅವರಿಗೆ ಲಸಿಕೆ ಕಂಡು ಹಿಡಿಯುತ್ತೇವೆ.
ರಂಗಭೂಮಿಯಲ್ಲಿ ಎಡ-ಬಲ ಎಂಬುದಿಲ್ಲ. ಆಹ್ವಾನಿಸಿರುವ ಅತಿಥಿಗಳನ್ನು ಯಾವ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ’ ಎಂದು ತಮ್ಮ ದಿಟ್ಟ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಕಾಠಿಣ್ಯದ ಸವಾಲಿನ ಸಂದರ್ಭದಲ್ಲಿ ನಾವೆಲ್ಲರೂ ಅವರೊಂದಿಗೆ ಧೃಡವಾಗಿ ನಿಲ್ಲಬೇಕಿದೆ. ಬಹುರೂಪಿ ಕಾರ್ಯ ಕ್ರಮ ಶೀಘ್ರ ಆರಂಭವಾಗಿ ಯಶಸ್ವಿಯಾಗಬೇಕಿದೆ. ಗ್ರಸ್ತ ಮನೋಭಾವದ ಪರಂಪರೆ ಕೊನೆಯಾಗಬೇಕಿದೆ.
ಪ್ರಗತಿಪರರು ಎಂದು ಹೇಳಿಕೊಳ್ಳುವ ಈ ವ್ಯಕ್ತಿಗಳ ‘ಪ್ರಗತಿಯನ್ನು’ಗೆ ತಡೆಯೊಡ್ಡಿರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂದ್ರಿಯ ಭೋಗ, ಭೌತಿಕ ಸುಖವನ್ನೇ ತಮ್ಮ ಗುರಿಯಾಗಿಟ್ಟುಕೊಂಡಿರುವ ಪಾಶ್ಚಿಮಾತ್ಯರು ಕಲಿಸಿದ ಸ್ವಾತಂತ್ರ್ಯದ ಮುಖಪುಟವನ್ನು ಮುಂದಿರಿಸಿ ತಮ್ಮ ಸ್ವ-ಹಿತಾಸಕ್ತಿಗಳ ಸಾಧನೆಗಾಗಿ ಕಂಡುಕೊಂಡ ಚಿಂತನೆಗಳು ಹಾಗೂ ರಕ್ತಗತವಾಗಿಯೇ ನಮ್ಮ ಮಹಾನ್ ಪೂರ್ವಜರು ಸಾಕ್ಷಾತ್ಕಾರಿಸಿಕೊಂಡ ಅಧ್ಯಾತ್ಮವನ್ನು ಆದರ್ಶ ವಾಗಿ ಪಡೆದಿರುವ ಸನಾತನ ಸದ್ಭಾವನೆಗಳ ಸಂಘರ್ಷ ಇದು.
ನಮ್ಮ ನೆಲದಲ್ಲಿಯೇ ನಮ್ಮದನ್ನುಪ್ಪಿಕೊಳ್ಳಲು ಸಾಧ್ಯವಿಲ್ಲದಿರುವಾಗ ಅವರ ಎರವಲು ಚಿಂತನೆಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೇ? ಸನಾತನಸಂಸ್ಕೃತಿ ಮಾನವನ ಸ್ವಾತಂತ್ರ್ಯಕ್ಕೆ ನೀಡಿರುವಷ್ಟು ಪ್ರಾಮುಖ್ಯವ ಯಾವ ಇತರೆ ಸಂಸ್ಕೃತಿ, ವಿಚಾರಗಳೂ ನೀಡಿಲ್ಲ. ಆದರೆ ಮುಖಪುಟದಲ್ಲಿ ಮಾತ್ರಸ್ವಾತಂತ್ರ್ಯವೆಂದು ಬರೆದುಕೊಂಡು ಉಳಿದ ಸಂಪೂರ್ಣ ಪುಸ್ತಕದ ಹಾಳೆಗಳಲ್ಲಿ ಸ್ವಾರ್ಥ, ಲೋಭ, ಮೋಹದಂತಹ ಲೌಕಿಕ ಭೋಗಗಳನ್ನೇತುಂಬಿಕೊಂಡು ಬಂಧನದ ದಾಸ್ಯತನ ಸಾಲುಗಳನ್ನು ಗೀಚಿರುವ ಪಾಶ್ಚಾತ್ಯ ಪ್ರೇರಿತ ಪತ್ರಿಕೆಗೆ ಭಾರತೀಯ ಚಿಂತಕರೂ ಮಾರುಹೋಗಿ ರುವುದುವಿಪರ್ಯಾಸ!
ಗಂಗಾ ನದಿಯೇ ಬಳಿಯಿರುವಾಗ ಬಾವಿ ತೋಡುವ ಮೂರ್ಖ ತನದ ಕಾರ್ಯವನ್ನೇಕೆ ಮಾಡುವಿರಿ? ಅಧ್ಯಾತ್ಮವೇ ನಮ್ಮ ರಾಷ್ಟ್ರದ ಜೀವಾಳ. ಈ ಕಲಿಯುಗದ ಸ್ವಾರ್ಥ ಪ್ರಪಂಚದಲ್ಲಿ ನಮಗೆ ಹಾಗೂ ಇಡೀ ಜಗತ್ತಿಗೆ ಅತ್ಯಂತ ಅವಶ್ಯಕವಾಗಿರುವ ಅಧ್ಯಾತ್ಮದ ಆದರ್ಶ ವು ಮತ್ತಷ್ಟು ಮಗದಷ್ಟುಪ್ರಸರಣೆಯಾಗಲಿ. ಈ ಭವ್ಯ ಜೀವಸೃಷ್ಟಿಯ ಮೂಲ ಅಸ್ತಿತ್ವವೇ ವೈವಿಧ್ಯತೆಯಾಗಿರುವಾಗ, ತಂತಮ್ಮ ವೈಯಕ್ತಿಕ ವಿಚಾರಗಳ ಭಿನ್ನಾಭಿಪ್ರಾಯಗಳ ಕಾರಣದಿಂದ ಅನುಚಿತ ತೆರನಾದ ಸಂಘರ್ಷಕ್ಕಿಳಿದಿರುವುದು ಪ್ರಶ್ನಾರ್ಹ.
ಮಾತ್ರವಲ್ಲ, ಇದನ್ನು ವಿರೋಧಿಸುವುದೂ ಮುಖ್ಯ. ಹಾಗೆಂದು ಭಿನ್ನಾಭಿಪ್ರಾಯ ಹೊಂದಿರುವವರು ಏನೇ ಮಾಡಿದರೂ ಅದನ್ನು ವಿರೋಧಿಸುತ್ತ ಹೋಗುವುದು ಎಂದರೆ ಅದು ಅಪ್ರಾಮಾಣಿಕ ಅಸ್ತಿತ್ವದ ಅನಾವರಣದಂತಾಗುತ್ತದೆ. ಪ್ರಕೃತಿಯಲ್ಲಿನ ಶಕ್ತಿ, ಆವೃತ್ತಿ, ಕಂಪನಗಳಲ್ಲಿ ಸಹಜವಾಗಿರುವ ವ್ಯತ್ಯಾಸಗಳಿಂ ದಲೇ ಜೀವಜಗತ್ತು ಸಮತೋಲನ ಸಾಧಿಸಿ ಬೆಳೆಯುತ್ತಿರುವುದು. ಇವುಗಳಲ್ಲಿ ವ್ಯತ್ಯಾಸವಿಲ್ಲದಿದ್ದರೆ ಗಾಳಿ ಚಲಿಸಲಾಗುತ್ತಿರಲಿಲ್ಲ, ನೀರುಹರಿಯಲಾಗುತ್ತಿರಲಿಲ್ಲ ಹಾಗೂ ಬೆಂಕಿ ಉರಿಯಲಾಗುತ್ತಿರಲಿಲ್ಲ. ಆದ್ದರಿಂದ ಈ ಸಂವೇದನಾಶೀಲ ಸಂಗತಿಯನ್ನು ಮನಗಾಣೋಣ.