ಮದುವೆ ವಯಸ್ಸು ಬದಲು ಕ್ರಾಂತಿಗೆ ಮುನ್ನುಡಿ
ವೀಕೆಂಡ್ ವಿತ್‌ ಮೋಹನ್
ಮೋಹನ್ ವಿಶ್ವ
@.
ಮದುವೆ ವಯಸ್ಸಿನ ಹೆಚ್ಚಳ ನೇರವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಸೆದುಕೊಂಡಿದೆ. ದೇಶದಲ್ಲಿ ನೂತನ ಶಿಕ್ಷಣ ಪದ್ಧತಿಯ ಅನುಷ್ಠಾನವೂ ಸಮಾಂತರ ನಡೆಯು ತ್ತಿರುವುದು ಬಹುದೊಡ್ಡ ಬದಲಾವಣೆ ತರಲಿದೆ. ಜನಸಂಖ್ಯೆ ನಿಯಂತ್ರಿಸಲು ಈ ತಿದ್ದುಪಡಿ ತಂದಿಲ್ಲ.
ಜಗತ್ತು ಎಷ್ಟೇ ಮುಂದುವರಿದರೂ ಕೆಲವು ಅನಿಷ್ಟ ಪದ್ಧತಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಆ ಪಟ್ಟಿಯಲ್ಲಿ ಆಗಾಗ ಕೇಳಿ ಬರುವ ‘ಬಾಲ್ಯ ವಿವಾಹ’ವೂ ಒಂದು. ಶತಶತಮಾನಗಳಿಂದ ಹಲವು ಹೋರಾಟಗಳು ನಡೆದುಕೊಂಡು ಬಂದಿದ್ದರೂ ಇಪ್ಪತ್ತೊಂದನೆಯ ಶತಮಾನದಲ್ಲಿ ಭಾರತದ ಹಲವುಗ್ರಾಮೀಣ ಭಾಗಗಳಲ್ಲಿ ಆಗಾಗ ಬಾಲ್ಯವಿವಾಹ ಪ್ರಕರಣ ಗಳು ನಡೆಯುತ್ತಲೇ ಇವೆ.
ಸರಕಾರವು ಹಲವು ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತಿದೆ. ಆದರೂ ಅವಿದ್ಯಾವಂತ ವರ್ಗದ ಕೆಲವರಿಗೆ ಬಾಲ್ಯವಿವಾಹ ದಿಂದಾಗುವ ಸಮಸ್ಯೆಗಳ ಅರಿವಿಲ್ಲ. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂಡ ಕೂಡಲೇ ಮಾಡುವೆ ಮಾಡಿ ಗಂಡನಮನೆಗೆ ಕಳುಹಿಸಿದರೆ ತಮ್ಮ ಜವಾಬ್ದಾರಿ ಕಳೆಯಿತೆಂಬ ವಿಚಿತ್ರ ಮನಃಸ್ಥಿತಿಯಿಂದ ಪೋಷಕರು ಸಂಪೂರ್ಣ ಹೊರಬಂದಿಲ್ಲ. ಹೆಣ್ಣೊಬ್ಬಳು ತನ್ನ ಹುಟ್ಟಿನಿಂದಲೇ ಮತ್ತೊಂದು ಜೀವಕ್ಕೆ ಜನ್ಮ ನೀಡುವ ಬಹುದೊಡ್ಡ ವರವನ್ನು ಪಡೆದು ಬರುತ್ತಾಳೆ. ಈ ವರವೇ ಹಲವು ಬಾರಿ ಆಕೆಗೆ ಶಾಪವಾಗಿ ಪರಿಣಮಿಸುತ್ತದೆ. ಪ್ರೌಢಾವಸ್ಥೆಗೆ ಬಂದಾಗ ಆಕೆಯ ದೇಹದಗುವ ಬದಲಾವಣೆಯ ಅರಿವಾಗುವ ಮುನ್ನವೇ ಆಕೆಗೊಂದು ಮಾಡುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಒಂದು ವರ್ಷದಲ್ಲಿ ತಾಯಿ ಯಾಗುವಂತೆ ಪೀಡಿಸುತ್ತಿರುತ್ತಾರೆ.
ಈವರೆಗಿನ ಕಾನೂನಿನನ್ವಯ ಹೆಣ್ಣು ಮಕ್ಕಳ ಮದುವೆಯ ವಯಸ್ಸು 18 ದಾಟಿರಬೇಕು. ಈ ಕಾನೂನು ತಂದು ಸುಮಾರು ನಾಲ್ಕು ದಶಕಗಳು ಕಳೆದಿವೆ. 1980ರ ದಶಕದಲ್ಲಿ 18 ವರ್ಷದ ಮಿತಿ ಸರಿಯಿದ್ದಿರಬಹುದು, ಆದರೆ 2021ರಲ್ಲಿ ಅದೇ ವಯಸ್ಸಿನ ಮಿತಿ ಸರಿಯೆಂದು ಹೇಳಲಾಗುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಳೆದ ವಾರ ಈ ಕಾನೂನಿಗೆ ಮಹತ್ವದ ತಿದ್ದುಪಡಿಯನ್ನು ಮಾಡಿ ಉಭಯ ಸದನಗಳಲ್ಲಿ ಮಂಡಿಸಿದೆ. ನೂತನ ಕಾನೂನಿನನ್ವಯ ಹೆಣ್ಣು ಮಕ್ಕಳ ಮದುವೆಯ ವಯಸ್ಸಿನ ಮಿತಿಯನ್ನು 21ಕ್ಕೆ ಏರಿಸುವ ಮೂಲಕ, ಗಂಡು ಮಕ್ಕಳ ವಯಸ್ಸಿನ ಮಿತಿಗೆ ಸಮಾನಾಂತರ ವಾಗುವಂತೆ ಮಾಡಿದೆ.
ಮಹಿಳಾ ಸಬಲೀಕರಣದ ಹೆಸರಿನಲ್ಲಿ ರಾಜಕೀಯ ಮಾಡುವ ವಿರೋಧ ಪಕ್ಷಗಳು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳ ಸರಿಸಮಾನಾಂತರವಾಗಿ ನಿಲ್ಲಲು ತರುವಕಾನೂನನ್ನು ಸಹ ವಿರೋಧಿಸಿದ್ದುಅವರ ದಿವಾಳಿತನವನ್ನು ತೋರಿಸುತ್ತದೆ. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ರಸ್ತೆಗಿಳಿಯುವ ಹಲವು ಮಹಿಳಾ ಸಂಘಟನೆಗಳು ನೂತನ ತಿದ್ದುಪಡಿಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಕೆಲವು ‘’ಗಳು ಈ ತಿದ್ದುಪಡಿ ಯನ್ನುವಿರೋಧಿಸುವಮೂಲಕ ಸಮಾಜ ಸೇವೆಯ ಹೆಸರಿನಲ್ಲಿ ಮಾಡು ತ್ತಿದ್ದಂತಹ ತಮ್ಮ ರಾಜಕೀಯದ ಬಣ್ಣವನ್ನು ತಾವೇ ಬಯಲು ಮಾಡಿಕೊಂಡಿವೆ.
ಹೆರಿಗೆ ಸಂದರ್ಭದಲ್ಲಿ ಮೃತಪಡುವ ಹೆಣ್ಣುಮಕ್ಕಳಲ್ಲಿ ಬಾಲ್ಯವಿವಾಹವಾದಂತಹ ಹೆಣ್ಣು ಮಕ್ಕಳ ಸಂಖ್ಯೆ ಇಂದಿಗೂ ಶೇ.7ರಷ್ಟಿದೆ. 16 ವರ್ಷದ ಪುಟ್ಟ ಹೆಣ್ಣುಮಗುವಿನ ದೇಹವು ಒಂದು ಮಗುವನ್ನು 9 ತಿಂಗಳುಗಳ ಕಾಲ ಹೊರುವಷ್ಟು ಬೆಳವಣಿಗೆಯಾಗಿರುವುದಿಲ್ಲ. ಕೆಲವು ಹಳ್ಳಿಗಾಡಿನ ಪ್ರದೇಶ ಗಳಲ್ಲಿ ಅಪೌಷ್ಟಿಕತೆ ಯಿಂದ ಬಳಲಿ ದೊಡ್ಡವರಾದಂತಹ ಹೆಣ್ಣು ಮಕ್ಕಳು ತಮ್ಮ ಆರೋಗ್ಯವನ್ನೇ ಸರಿಯಾಗಿ ಕಾಪಾಡಿಕೊಂಡು ಹೋಗುವುದು ಕಷ್ಟವಾಗಿರುವಾಗ, ಚಿಕ್ಕ ವಯಸಿ ನಲ್ಲಿ ಮದುವೆಯನ್ನೂ ಮಾಡಿ ಜತೆಗೆ ಮಗುವನ್ನೂ ಹೆರುವಂತೆ ಪೀಡಿಸುವುದರಿಂದ ಆಕೆಯ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳಿಗೆ ಮಿತಿಯಿಲ್ಲ.
18 ವರ್ಷದ ವಯೋಮಿತಿಯಲ್ಲಿನ ಹೆಣ್ಣೂ ಸಹ ಇದಕ್ಕೆ ಹೊರತಲ್ಲ, ಆಕೆಯೂ ಸಮಾಜವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ವಯಸ್ಸಿನವಳಾಗಿರುವುದಿಲ್ಲ. ಕುಟುಂಬ ವ್ಯವಸ್ಥೆ, ಅತ್ತೆ, ಮಾವ, ಗಂಡ, ಆತನ ಸ್ನೇಹಿತರು ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಜೀವನ ನಡೆಸುವ ಪ್ರೌಢಿಮೆ ಆಕೆಯಲ್ಲಿರುವುದಿಲ್ಲ. ಗಂಡು ಹಾಗೂ ಹೆಣ್ಣಿಗೆ ವಯಸ್ಸಿನ ಅಂತರ ಹೆಚ್ಚಾದಷ್ಟು ಯೋಚಿಸುವ ಪರಿಯಲ್ಲಿ ಬಹಳಷ್ಟು ಬದಲಾವಣೆಯಾಗಿ ರುತ್ತದೆ. ಇದರಿಂದ ಸಂಸಾರದಲ್ಲಿ ಕಲಹಗಳೇ ಹೆಚ್ಚಾಗುತ್ತಿ ರುತ್ತದೆ. ಪರಿಣಾಮ ವಿಚ್ಛೇದನ ಪ್ರಕರಣಗಳೂ ಹೆಚ್ಚುತ್ತವೆ.
ಮದುವೆಯ ವಯಸ್ಸಿನ ಮಿತಿಯನ್ನು 18ಕ್ಕೆ ಸೀಮಿತಗೊಳಿಸಿದ್ದರಿಂದ ಒಂದು ಹೆಣ್ಣಿನ ವಿದ್ಯಾಭ್ಯಾಸಕ್ಕೆ ಬಹುದೊಡ್ಡ ಪೆಟ್ಟು ಬೀಳುತ್ತಿತ್ತು. ಪದವಿಪೂರ್ವ ಶಿಕ್ಷಣ ಮುಗಿಸಲೂ ಪುರುಸೊತ್ತಿಲ್ಲ, ಪೋಷಕರು ಮಗಳ ಮದುವೆಗೆ ಸಿದ್ಧತೆ ಮಾಡಿಬಿಡುತ್ತಿದ್ದರು. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಲ್ಲಿ ಬಹಳಷ್ಟು ಮಂದಿ ಓದಿನಲ್ಲಿ ಮುಂದಿದ್ದರೂ ಕನಿಷ್ಠ ಪದವಿಯನ್ನೂ ಪಡೆಯುವಲ್ಲಿ ವಿಫಲರಾಗುತ್ತಿದ್ದರು. ಒಂದು ಸರ್ವೆಯ ಪ್ರಕಾರ ಕಳೆದ ಕೆಲವು ವರ್ಷಗಳಿಂದ ಮದುವೆಯಾಗುತ್ತಿರುವ ಹೆಣ್ಣು ಮಕ್ಕಳ ಸರಾಸರಿ ವಯಸ್ಸು 22 ರಿಂದ 23ರ ಆಸುಪಾಸಿನಲ್ಲಿದೆ. ಆದರೆ 16 ರಿಂದ 18ರ ಒಳಗೆ ಮದುವೆಯಾಗುತ್ತಿರುವವರ ಸರಾಸರಿ ಶೇ.೨೪ರಷ್ಟಿದೆ.
ಈ ಸರಾಸರಿಯನ್ನು ಕಡಿಮೆ ಮಾಡಲು ಮದುವೆಯ ವಯಸ್ಸನ್ನು ಹೆಚ್ಚಿಸುವ ಅಗತ್ಯವಂತೂ ಖಂಡಿತಾ ಇತ್ತು, ಹಾಗಂತ ಕೇವಲ ಕಾಯಿದೆ ಬಂದಾಕ್ಷಣ ಎಲ್ಲವೂ ಸರಿ ಹೋಗುತ್ತದೆಯಂತಲ್ಲ. ತಳಮಟ್ಟದಲ್ಲಿ ಕಾಯಿದೆಯ ಅನುಷ್ಠಾನ ಪ್ರಕ್ರಿಯೆ ಆಗಬೇಕಿದೆ. ತಾಲೂಕು ಮಟ್ಟದಲ್ಲಿ ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಲ್ಲಿನ ಸರಕಾರಿ ಅಧಿಕಾರಿಗಳ ಮೇಲಿದೆ. ನೂತನ ತಿದ್ದುಪಡಿಯಿಂದ ಪದವಿ ಶಿಕ್ಷಣದಿಂದ ವಂಚಿತರಾಗುತ್ತಿ ದ್ದಂತಹ ಹೆಣ್ಣು ಮಕ್ಕಳು, ತಮ್ಮ ಕಾಲ ಮೇಲೆ ತಾವು ನಿಲ್ಲಲು ಬೇಕಿರುವ ಕನಿಷ್ಠ ವಿದ್ಯಾಭ್ಯಾಸ ಪಡೆಯಬಹುದಾಗಿದೆ.
ಇದರಿಂದಾಗಿ ಸಮಾಜದಲ್ಲಿ ಮಾತ್ರವಲ್ಲದೆ ಸಂಸಾರ ದಲ್ಲಿಯೂ ಗೌರವಸ್ಥರಾಗಿ, ಆರ್ಥಿಕವಾಗಿ ಸದೃಢರಾಗಬಹುದು. ಜನಸಂಖ್ಯೆ ನಿಯಂತ್ರಿಸಲು ಈ ತಿದ್ದುಪಡಿ ತಂದಿಲ್ಲ ವೆಂಬುದನ್ನು ಇಲ್ಲಿ ಸ್ಪಷ್ಟವಾಗಿ ತಿಳಿಯಬೇಕು. ಈ ತಿದ್ದುಪಡಿ ಹೆಣ್ಣುಮಕ್ಕಳನ್ನು ಗಂಡು ಮಕ್ಕಳೊಂದಿಗೆ ಸಮಾನರನ್ನಾಗಿಸಲು ತರಲಾಗಿದೆ. ಹೆಣ್ಣು ಮಕ್ಕಳಿಗೆ ಲೈಂಗಿಕತೆಯ ಜಾಗೃತಿ ಕಡಿಮೆ. ಅದರಲ್ಲಿಯೂ ಬಾಲ್ಯವಿವಾಹಕ್ಕೊಳಗಾಗುವ ಹೆಣ್ಣಿಗೆ ಬಹಳಷ್ಟು ಮಾಹಿತಿ ಕೊರತೆ ಇರುತ್ತದೆ. ಶಾಲೆಗಳಲ್ಲಿ ಎಷ್ಟೇ ಲೈಂಗಿಕ ಶಿಕ್ಷಣವನ್ನು ನೀಡಿದರೂ ಅದನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುವ ವಯಸ್ಸಾಗಿರುವುದಿಲ್ಲ.
18ರಿಂದ 21ರ ನಡುವೆ ಇಂಥವನ್ನು ಅರ್ಥ ಮಾಡಿಕೊಳ್ಳುವ ಪ್ರೌಢಿಮೆ ಬೆಳೆಸಿಕೊಂಡಿರುತ್ತಾಳೆ. ಈ ವಯಸ್ಸಿನಲ್ಲಿ ಆಕೆಯ ಮನಸ್ಸಿನಲ್ಲಿ ಬರುವ ಚಿಂತನೆಗಳು ಆಕೆಯನ್ನು ಹಲವು ಸಮಸ್ಯೆಗಳಿಂದ ಪಾರು ಮಾಡುತ್ತವೆ. ತನ್ನ ‘ಕುಟುಂಬ ಯೋಜನೆ’ಯ ಬಗ್ಗೆ ಬೇಕಿರುವ ಹೆಚ್ಚಿನ ಅರಿವನ್ನು ಈ ವಯಸ್ಸಿನಲ್ಲಿ ಆಕೆ ಪಡೆಯು ತ್ತಾಳೆ. ಗರ್ಭನಿರೋಧಕ ಮಾತ್ರೆಗಳು, ಇತರ ಸಾಧನಗಳ ಬಗ್ಗೆ ಹೆಚ್ಚಿನ ಅರಿವು ಸಿಗುವು ದರಿಂದ ದೇಹದ ಮೇಲಾಗುವ ದುಷ್ಪರಿಣಾಮಗಳಿಂದ ಆಕೆ ಪಾರಾಗ ಬಹುದು.
ಜನಸಂಖ್ಯಾ ನಿಯಂತ್ರಣದ ದೃಷ್ಟಿಯಿಂದ ಮಾತ್ರವಲ್ಲ, ತನ್ನ ದೇಹ ಯಾವ ಸಮಯದಲ್ಲಿ ಮಗುವನ್ನು ಹೆರಲು ಸಿದ್ಧವಾಗಿದೆಯೆಂಬ ಬಗ್ಗೆ ಸ್ಪಷ್ಟ ಚಿತ್ರಣ ಆಕೆಗೆ ಸಿಗಬೇಕು; ಇದರಿಂದ ಸಿಗುತ್ತದೆ. ಇನ್ನು ಚಿಕ್ಕವಯಸ್ಸಿನ ಹೆರಿಗೆ ಸಂದರ್ಭದಲ್ಲಿ ಹೆಣ್ಣು ಪೌಷ್ಟಿಕಾಂಶದ ಕೊರತೆ, ಆರೋಗ್ಯ ಸಮಸ್ಯೆಗಳಿಗೆ ಸಿಗುವ ಸಂಭವವಿದೆ. ಆಕೆ ಹೆರುವ ಮಗುವಿಗೂ ಪೌಷ್ಟಿಕಾಂಶ ಕೊರತೆ ಉಂಟಾಗುತ್ತದೆ. ಇದಕ್ಕಾಗಿ ಸರಕಾರಗಳು ಹಲವು ಆರೋಗ್ಯ, ಸಾಮಾಜಿಕ ಯೋಜನೆಗಳ ಮೂಲಕ ಸಾವಿ ರಾರು ಕೋಟಿ ರುಪಾಯಿಗಳನ್ನು ದಶಕಗಳಿಂದ ವ್ಯಯಿಸುತ್ತಿವೆ. ನೂತನ ತಿದ್ದುಪಡಿಯ ಅನುಷ್ಠಾನದಿಂದ ಆರೋಗ್ಯ ಕ್ಷೇತ್ರದಲ್ಲಿನ ಇಂಥ ವೆಚ್ಚವೂ ಕಡಿಮೆಯಾಗ ಲಿವೆ.
ದೂರದೃಷ್ಟಿಯಿಂದ ನೋಡಿದರೆ ಮುಂದಿನ 20 ವರ್ಷದಲ್ಲಿ ಭಾರತದ ಹಳ್ಳಿಯ ಹೆಣ್ಣು ಮಕ್ಕಳ ಚಿತ್ರಣವೇ ಬದಲಾಗಬಹುದು. ಈ ತಿದ್ದುಪಡಿಯನ್ನು ಬಲವಾಗಿ ವಿರೋಧಿಸಿದ್ದು ’’ ಪಕ್ಷದ ಅಸಾವುದ್ದೀನ್ ಓವೈಸಿ ಮಾತ್ರ. ಈತನೊಬ್ಬ ಕಟ್ಟರ್ ಮುಸಲ್ಮಾನ್ ಸಂಪ್ರದಾಯವಾದಿ. ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿ ಕೊಂಡು ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರಾಗುವುದೇ ಇವರ ಮೂಲ ಉದ್ದೇಶ. ನೂತನ ತಿದ್ದುಪಡಿಯಿಂದ ಮುಸಲ್ಮಾನ್ ಹೆಣ್ಣು ಮಕ್ಕಳು ಬೇಗನೆ ಮದುವೆ ಯಾಗುವುದನ್ನು ನಿಲ್ಲಿಸಿ ಉತ್ತಮ ವಿದ್ಯಾಭ್ಯಾಸ ಪಡೆದುಬಿಡುತ್ತಾರೆಂಬ ಭಯ ಈತನನ್ನು ಕಾಡುತ್ತಿದೆ.
‘ತ್ರಿವಳಿ ತಲಾಕ್ ನಿಷೇಧ’ ವಿಧೇಯಕವನ್ನು ವಿರೋಧಿಸಿದ್ದ ಮುಸಲ್ಮಾನರಿಗೆ ಈ ತಿದ್ದುಪಡಿ ಮತ್ತೊಂದು ಶಾಕ್ ನೀಡಿರುವುದಂತೂ ಸತ್ಯ. ಹೆಣ್ಣು ಮಕ್ಕಳನ್ನು ಕೇವಲ ಮಗು ಹೆರುವ ಯಂತ್ರದಂತೆ ನೋಡುವವರಿಗೆ ಈ ತಿದ್ದುಪಡಿಯು ತಮ್ಮ ಅಂಡಿಗೆ ಮೆಣಸಿನಕಾಯಿ ಇಟ್ಟಂತಾಗಿದೆ. ಮೂಲ ಶಿಕ್ಷಣದಿಂದ ಚಿತರಾಗಿರುವ ಹಲವು ಮುಸಲ್ಮಾನ್ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಟ್ಟರೆ ಈ ದೇಶದ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅತೀ ಕಿರಿಯ ವಯಸ್ಸಿನಲ್ಲಿ ಮದುವೆಯಾಗಿ, ಕೇವಲ ಒಂದೆರಡು ವರ್ಷಗಳಲ್ಲೇ ಸಂಸಾರ ನಡೆಸಲಾಗದ ಗಂಡನ ದೌರ್ಜನ್ಯಕ್ಕೆ ಒಳಗಾಗಿ ಗಂಡನ ಜತೆಗೆ ಮಕ್ಕಳನ್ನೂ ಸಾಕುವ ಹೊಣೆ ಹೊತ್ತಿರುವ ಮುಸಲ್ಮಾನ್ ಹೆಣ್ಣು ಮಕ್ಕಳ ಹಲವು ನಿದರ್ಶನಗಳಿವೆ.
‘  ನಂತಹ ಸಂಘಟನೆಗಳು ನೂರಾರು ವರ್ಷಗಳ ಹಿಂದಿನ ಸಂಪ್ರದಾಯವನ್ನು ಮುಸಲ್ಮಾನ್ ಹೆಣ್ಣು ಮಕ್ಕಳ ಮೇಲೆ ಹೇರಲು ನಿಂತಿ ರುವುದರ ವಿರುದ್ಧ ಈ ತಿದ್ದುಪಡಿ ಸಹಾಯಕವಾಗಲಿದೆ. ಒಂದು ಹೆಣ್ಣಿಗೆ ಉತ್ತಮ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಉತ್ತಮ ಶಿಕ್ಷಣ ನೀಡಿದ ಹಾಗೆಂಬ ಮಾತಿದೆ. ಸುಶಿಕ್ಷಿತ ಹೆಣ್ಣು ಇಡೀ ಸಮಾಜವನ್ನೇ ಬದಲಾಯಿಸಬಲ್ಲಳು. ಮುಸಲ್ಮಾನ್ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚು ಶಿಕ್ಷಣ ನೀಡಿದಷ್ಟೂ ಆ ಸಮುದಾ ಯದ ಮುಂದಿನ ಪೀಳಿಗೆಯವರು ಯೋಚಿಸುವ ಪರಿ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ತಿದ್ದುಪಡಿಯು ನೇರವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಸೆದುಕೊಂಡಿರುವುದು ಹಾಗೂ ದೇಶದಲ್ಲಿ ನೂತನ ಶಿಕ್ಷಣ ಪದ್ಧತಿಯ ಅನುಷ್ಠಾನವೂ ಸಮಾಂತರವಾಗಿ ನಡೆಯುತ್ತಿರುವುದು ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ. ಪದವಿಪೂರ್ವ ಶಿಕ್ಷಣ ಮುಗಿದ ನಂತರ ಓದುವ ಪ್ರತಿಯೊಂದು ಶಿಕ್ಷಣ ವರ್ಗಕ್ಕೂ ಒಂದಿಂದು ಮಾನ್ಯತೆ ದೊರೆಯುವುದರಿಂದ ಬಹಳಷ್ಟು ಹೆಣ್ಣು ಮಕ್ಕಳು ಒಂದಿಂದು ಶಿಕ್ಷಿತ ವರ್ಗಕ್ಕೆ ಸೇರಲ್ಪಡುತ್ತಾರೆ.
ಮಕ್ಕಳನ್ನು ಹೆರುವ ಹಾಗೂ ಪೋಷಿಸುವ ಕಾರ್ಯದಲ್ಲಿ ಹೆಣ್ಣು ಪ್ರಮುಖ ಪಾತ್ರ ವಹಿಸುತ್ತಾಳೆ. ತನ್ನ ಮಗು ಬೆಳೆಯುವ ವಾತಾವರಣ ಸುಶಿಕ್ಷಿತವಾಗಿದ್ದರೆ ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಪ್ರಜೆಯನ್ನು ಕೊಡುವಲ್ಲಿ ಹೆಣ್ಣು ಯಶಸ್ವಿಯಾಗು ತ್ತಾಳೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಆರಂಭಿಸಲು ಬೇಕಿರುವ ಪ್ರೌಢಿಮೆ ಯನ್ನು ಬೆಳೆಸಿಕೊಳ್ಳಲು ಮದುವೆಯ ವಯಸ್ಸಿನ ತಿದ್ದುಪಡಿಯು ಸಹಾಯವಾಗಲಿದೆ.