ಸುಶಾಸನದ ಹಾದಿಯಲ್ಲಿ ವಾಜಪೇಯಿ ಸಿದ್ದಾಂತ
ಸ್ಮರಣೆ
ಅರ್ಜುನ್ ರಾಮ್ ಮೇಘವಾಲ್
ಹಲವಾರು ಉಪಕ್ರಮಗಳ ಮೂಲಕ ವಾಜಪೇಯಿ ಉತ್ತಮ ಆಡಳಿತಕ್ಕೆ ಮುನ್ನುಡಿ ಹಾಡಿದ್ದರು. ವಾಜಪೇಯಿಯವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತಕ್ಕೆ ವೇಗವರ್ಧನೆಯನ್ನು ತುಂಬಿದರು. ಹಲವಾರು ಬಗೆಯ ತಾಂತ್ರಿಕ ಆವಿಷ್ಕಾರಗಳು ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿವೆ.
ಜನಕೇಂದ್ರೀತ ಉಪಕ್ರಮಗಳು ಅನುಷ್ಠಾನಕ್ಕೆ ಬಂದಿದ್ದು ಅವರು ಪ್ರಧಾನಮಂತ್ರಿಗಳಾಗಿದ್ದ ಕಾಲದಲ್ಲಿ. ದೇಶವನ್ನು ಪರಿವರ್ತನೆಯ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಅದೊಂದು ಮೈಲುಗಲ್ಲು. ಅವರ ಸ್ಪೂರ್ತಿ ಇನ್ನೂ ಜೀವಂತವಾಗಿದೆ.
ಉತ್ತಮ ಆಡಳಿತ ಅಥವಾ ಸುಶಾಸನವೆಂಬುದು ಪುರಾತನ ಭಾರತೀಯ ಸಂಸ್ಕೃತಿಯ ನೈತಿಕತೆಯ ಪಳೆಯುಳಿಕೆ. ಬುದ್ಧನ ಗಣಸಂಘದಿಂದ, ಬಸವೇಶ್ವರರ ಅನುಭವಮಂಟಪದಿಂದ, ನಾವು ಪಡೆದುಕೊಂಡಿರುವ ಪ್ರಜಾ ಸತ್ತಾತ್ಮಕವಾದ ಮೌಲ್ಯಗಳು, ಚಾಣಕ್ಯನ ಅರ್ಥಶಾಸ್ತ್ರದಿಂದ ಕಲಿತ ಪಾಠಗಳು, ಸಿಂಧೂಕೊಳ್ಳದ ಸಂಸ್ಕೃತಿಯ ನಾಗರಿಕತೆ, ಅಶೋಕ, ಮೌರ್ಯ ಮುಂತಾದ ಚಕ್ರವರ್ತಿಗಳ ಆಡಳಿತಾತ್ಮಕ ಒಳನೋಟಗಳು ಇವೆಲ್ಲವೂ ಉತ್ತಮ ಆಡಳಿತಕ್ಕೆ ಬುನಾದಿ ಹಾಕುವಲ್ಲಿ ನಮ್ಮ eನಶಾಖೆಗಳನ್ನು ವಿಸ್ತರಿಸಿದ ಮಹತ್ತರ ಕೊಡುಗೆಗಳು.
ವಾಜಪೇಯಿಯವರ ಜನ್ಮದಿನದ ನೆನಪಿಗಾಗಿ ಉತ್ತಮ ಆಡಳಿತದ ದಿವಸವನ್ನು ಆಚರಿಸಲಾಗುತ್ತಿದೆ. ಇಂತಹ ಸುಸಂದರ್ಭದಲ್ಲಿ ಅವರ ಗಮನಾರ್ಹ ಕಾರ್ಯಕ್ಷಮತೆ ಮತ್ತು ಸ್ವತಂತ್ರ ಭಾರತದಲ್ಲಿ ಆಡಳಿತ ನಿರ್ವಹಣೆ ಗೊಂದು ಸಾಂಸ್ಥಿಕ ರೂಪವನ್ನು ಕೊಟ್ಟ ಅವರ ದೂರದರ್ಶಿತ್ವಕ್ಕೊಂದು ಪ್ರಣಾಮ ಗಳನ್ನು ಸಲ್ಲಿಸಲೇಬೇಕು.
ಸ್ವಾತಂತ್ರ್ಯಾನಂತರದಲ್ಲಿ ಉತ್ತಮ ಆಡಳಿತ ಎಂಬುದು ಮರೀಚಿಕೆಯಾಗಿಯೇ ಉಳಿದಿತ್ತು. ಅದು ಕೇವಲ ಚರ್ಚೆ ಮತ್ತು ಪರಾಮರ್ಶೆಗಳ ನಡುವೆ ಹೊಯ್ದಾಡುತ್ತಿತ್ತು. ಯೋಜನಾ ಆಯೋಗದಂತ ಸಂಸ್ಥೆಗಳಲ್ಲಿ ಅದು ಚರ್ಚೆಯ ವಿಷಯವಾಗಿತ್ತೇ ವಿನಃ ವಾಸ್ತವದಲ್ಲಿ ಏನೇನೂ ಆಗುತ್ತಿರಲಿಲ್ಲ.
ವಾಜಪೇಯಿಯವರ ಆಡಳಿತ ಕಾಲದಲ್ಲಿ ಅಂದು ಹೊಸ ಹೊಳಹು ಮೂಡಿತು, ಆಡಳಿತದ ಕಾರ್ಯಕ್ಷಮತೆ ಇನ್ನಷ್ಟು ಉಜ್ವಲವಾಯಿತು. ವಾಜಪೇಯಿ ಯವರ ಸಂಸದೀಯ ಅನುಭವ ವಿಶಾಲವಾದದ್ದು. ಅವರು ಹತ್ತು ಬಾರಿ ಲೋಕಸಭಾ ಸದಸ್ಯರಾಗಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಸಾಕಷ್ಟು ಅನುಭವ ಸಂಪತ್ತನ್ನು ತಮ್ಮದಾಗಿಸಿಕೊಂಡವರು. ಅವರು ತಮ್ಮ ಕಾರ್ಯಕ್ಷಮತೆಯನ್ನು ಆಡಳಿತದಲ್ಲಿ ಉತ್ತಮಿಕೆಯನ್ನು ಸಾಧಿಸುವುದಕ್ಕೆ ಬಳಸಿಕೊಂಡರು.
ಪ್ರತಿಪಕ್ಷದ ನಾಯಕರಾಗಿ ಅವರ ಕಾರ್ಯಕ್ಷಮತೆ, ಪ್ರತ್ಯುತ್ಪನ್ನಮತಿ ವಿಶೇಷವಾದದ್ದು. ಅವರು ಸಮಾಜ ಕೇಂದ್ರಿತ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಹೊರಹೊಮ್ಮಿದ ಜನಕೇಂದ್ರಿತ ಆಡಳಿತ ವ್ಯವಸ್ಥೆ ಪರಿವರ್ತನೆಯ ಹಾದಿಯಲ್ಲಿ ನಿಜವಾಗಿಯೂ ಒಂದು ಮೈಲುಗಲ್ಲು. ಅವರ ಕಾಲದಲ್ಲಿ ಜಾರಿಗೆ ಬಂದ ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ, ಸುವರ್ಣ ಚತುಷ್ಪಥ ರಸ್ತೆ, ನದಿಗಳ ಜೋಡಣೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ, ಸರ್ವಶಿಕ್ಷಾ ಅಭಿಯಾನ, ಇವೆಲ್ಲವೂ ಜನರನ್ನು ತಳಮಟ್ಟದಲ್ಲಿ ತಲುಪಲು ಸಾಧ್ಯ ವಾಗಿದ್ದಂತೂ ಸತ್ಯಸ್ಯ ಸತ್ಯ. ಅರೆ ಸರಕಾರಿ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಅವರ ಕಾಲದಲ್ಲಿಯೇ ರಚಿತವಾಗಿತ್ತು ಮತ್ತು ಅದು ಯಶಸ್ವಿಯೂ ಆಗಿತ್ತು.
1998ರ ಮೇ ತಿಂಗಳಲ್ಲಿ ಭಾರತ ನ್ಯೂಕ್ಲಿಯರ್ ಪವರ್ ದೇಶವಾಗಿ ಹೊರಹೊಮ್ಮಿತು. ವಾಜಪೇಯಿಯವರ ಪ್ರಖ್ಯಾತ ಸಿದ್ಧಾಂತ ಮಾನವೀಯತೆ, ಶಾಂತಿ ಮತ್ತು ಕಾಶ್ಮೀರಿಗಳ ಪಾವಿತ್ರ್ಯ, ಕಾಶ್ಮೀರದ ಸಂಕಿರ್ಣ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೆಲಸ ಮಾಡಿತು. ‘ನಿಮ್ಮ ಸ್ನೇಹಿತರನ್ನು ಬದಲಿಸಬಲ್ಲಿರಿ. ಆದರೆನೆರೆಹೊರೆಯವರನ್ನಲ್ಲ’ ಎಂಬುದು ವಾಜಪೇಯಿಯವರ ಇನ್ನೊಂದು ಖ್ಯಾತ ನುಡಿಗಟ್ಟು. ಇದು ಭಾರತೀಯ ವಿದೇಶಿ ನೀತಿಯನ್ನು ರೂಪಿಸುವಲ್ಲಿ ಕೆಲಸ ಮಾಡಿತು.
ಸೇನಾ ಕಾರ್ಯಾಚರಣೆಯ ವೇಳೆ ಹುತಾತ್ಮರಾದ ಸೈನಿಕರ ಪಾರ್ಥಿವ ಶರೀರವನ್ನು ಅವರವರ ಊರುಗಳಿಗೆ ತಂದು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಪದ್ಧತಿಯನ್ನು ವಾಜಪೇಯಿ ಸರಕಾರ ಜಾರಿಗೆ ತಂದಿತು. ವಾಸ್ತವವಾದ ಮತ್ತು ಒಮ್ಮತಕ್ಕೆ ಅವರು ಬಹಳ ಮೌಲ್ಯಕೊಡುತ್ತಿದ್ದರು. ಹಾಗಾಗಿ ಚತ್ತೀಸ್‌ಗಢ, ಉತ್ತರಾಖಂಡ ಮತ್ತು ಜಾರ್ಖಂಡ ಎಂಬ ಮೂರು ಹೊಸ ರಾಜ್ಯಗಳ ಸ್ಥಾಪನೆ ೨೦೦೦ನೇ ಇಸವಿಯಲ್ಲಿ ಸಾಧ್ಯವಾಯಿತು.
ಭವಿಷ್ಯದೆಡೆಗೆ ಬಿ.ಆರ್.ಅಂಬೇಡ್ಕರ್ ಹೊಂದಿದ್ದ ಒಳನೋಟ ಚಿಂತನೆ ಮತ್ತು ರಾಷ್ಟನಿರ್ಮಾಣದ ಕುರಿತಾದ ಚಿಂತನೆಗಳಿಂದ ಅವರು ಪ್ರಭಾವಿತ ರಾಗಿದ್ದರು. ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರಕಾರ ಕೇಂದ್ರದಲ್ಲಿದ್ದಾಗ ವಾಜಪೇಯಿ ಮತ್ತು ಆಡ್ವಾಣಿಯವರ ಒತ್ತಾಯದ ಮೇರೆಗೆ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 1951ರಲ್ಲಿ ಅಂಬೇಡ್ಕರರನ್ನು ಕೇಂದ್ರ ಸಚಿವ ಮಂಡಲದಿಂದ ರಾಜೀನಾಮೆ ಕೊಟ್ಟ ನಂತರದಲ್ಲಿ ರಾಜಸ್ತಾನದ ಸಿರೋಹಿಯ ಮಹಾರಾಜರು ವಾಸ್ತವ್ಯ ಹೂಡಲು ಆಹ್ವಾನವಿತ್ತಿದ್ದ ನವದೆಹಲಿಯ ನಂ.26 ಆಲಿಪುರ್ ರಸ್ತೆಯ ನಿವಾಸವನ್ನು ಅಭಿವೃದ್ಧಿಪಡಿಸಲು ವಾಜಪೇಯಿ ಉತ್ಸುಕರಾಗಿದ್ದರು.
ಸಾಮಾಜಿಕ ಸಮಾನತೆಗಾಗಿ ಹೋರಾಡಿದ ವ್ಯಕ್ತಿಯ ನಿವಾಸವನ್ನು ಮ್ಯೂಸಿಯಂ ಮಾಡಲು ಅವರು ಉದ್ದೇಶಿಸಿದ್ದರು. 2003ರಲ್ಲಿ ಈ ಕುರಿತು ಒಡಂಬಡಿಕೆಯೂ ಆಗಿತ್ತು. ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆಯೂ ಆಗಿತ್ತು. ಆದರೆ ನಂತರ ಬಂದ ಯುಪಿಎ ಸರಕಾರ ಈ ಕಾರ್ಯವನ್ನುನನೆಗುದಿಯಲ್ಲಿಟ್ಟಿತು. ನಂತರದಲ್ಲಿ ಮೋದಿ ಸರಕಾರ ಬಂದಾಗ ಇದಕ್ಕೆ ಚಾಲನೆ ಸಿಕ್ಕು ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ೨೦೧೮ರಲ್ಲಿ ಲೋಕಾರ್ಪಣೆ ಯಾಯಿತು.
೨೧ನೇ ಶತಮಾನದ ಆದಿಯಲ್ಲಿ ಹಲವಾರು ಉಪಕ್ರಮಗಳ ಮೂಲಕ ವಾಜಪೇಯಿಯವರು ಉತ್ತಮ ಆಡಳಿತಕ್ಕೆ ಮುನ್ನುಡಿ ಹಾಡಿದ್ದರು. ವಾಜಪೇಯಿ ಯವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತಕ್ಕೆ ವೇಗವರ್ಧನೆಯನ್ನು ತುಂಬಿದರು. ಹಲವಾರು ಬಗೆಯ ತಾಂತ್ರಿಕ ಆವಿಷ್ಕಾರಗಳು ಜನರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಮಾಡಿವೆ. ಮೂಲಸಂಪರ್ಕ ಕ್ಷೇತ್ರದಲ್ಲಿ ಭಾರತಮಾಲಾ, ಸಾಗರಮಾಲಾ, ರಾಷ್ಟ್ರೀಯ ಸ್ವತ್ತು ಮಾನ್ಯೀಕರಣಯೋಜನೆ, ಕೃಷಿ ಮೂಲಸೌಕರ್ಯ ನಿಧಿ ಇವೆಲ್ಲವೂ ಅಂತಹ ಉಪಕ್ರಮಗಳ ಫಲಶ್ರುತಿ. ಆರ್ಟಿಕಲ-370ರ ರದ್ದತಿ, ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಪೂರಕವಾಗಿದೆ. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಕೇನ್-ಬಟ್ವಾ ನದಿ ಜೋಡಣೆ ಕುರಿತು ಯೋಜನೆಯೊಂದಕ್ಕೆ ಒಪ್ಪಿಗೆ ಕೊಟ್ಟಿದೆ.
‘ಮಿನಿಮಮ್ ಗವರ್ನಮೆಂಟ್ – ಮ್ಯಾಕ್ಸಿಮಮ್ ಗವರ್ನೆನ್ಸ್’ ಎಂಬ ಮಂತ್ರದೊಂದಿಗೆ ಪ್ರತಿಯೊಬ್ಬ ನಾಗರಿಕನ ಬದುಕು ಹಗುರಾಗಿಸುವ ಕೆಲಸ ಮಾಡಲಾ ಗಿದೆ. ಆಡಳಿತ ಯಂತ್ರದ ಸುಧಾರಣೆಯ -ಲಸ್ವರೂಪವಾಗಿ ಇಲಾಖೆಗಳ ನಡುವಣ ಕಂದಕವನ್ನು ಸಮನ್ವಯತೆಯ ಮೂಲಕ ಕಡಿಮೆ ಗೊಳಿಸವ ಕೆಲಸವನ್ನು ಪಿ.ಎಂ.ಗತಿಶಕ್ತಿ, ಪ್ರಗತಿ, ಕ್ಷಮತಾ ನಿರ್ಮಾಣಗಳನ್ನು ಮಿಷನ್ ಕರ್ಮಯೋಗಿ ಮೂಲಕ ಮಾಡಲಾಗಿದ್ದು, ಕಾರ್ಯವಿಧಾನಗಳ ಸರಳೀ ಕರಣ, ಹೊರೆ ಕಡಿಮೆಗೊಳಿಸುವಿಕೆ, ಸಾರ್ವಜನಿಕ ಸೇವೆಯಲ್ಲಿ ಅತ್ಯುತ್ತಮ ಆಡಳಿತಕ್ಕೆ ಒತ್ತುಕೊಡಲಾಗುತ್ತಿದೆ.
ಜಿಎಸ್‌ಟಿ ಲೇಬರ್ ಕೋಡ್. ದಿವಾಳಿತನದ ಪದ್ಧತಿ, ಹೊಸ ಶಿಕ್ಷಣ ನೀತಿ, ಮುದ್ರಾ, ಪಿ.ಎಂ. ಆವಾಸ್ ಯೋಜನಾ, ಪಿ.ಎಂ.ಕಿಸಾನ್‌ನಂತಹ ಯೋಜನೆಗಳ ಮೂಲಕ ಮತ್ತು ತೆರಿಗೆ ತಗಾದೆಗಳ ಕ್ಷಿಪ್ರ ವಿಲೆವಾರಿಯ ಮೂಲಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತದ ವಿಧಾನ ವನ್ನು ಜಾರಿಗೆ ತರಲಾಗಿದೆ. ವ್ಯವಹಾರ ಕ್ಷೇತ್ರದ ಸುಗಮ ನಿರ್ವಹಣೆಯ ಸೂಚ್ಯಂಕದಲ್ಲಿ ಭಾರತ ೨೦೧೫ರಲ್ಲಿ ೧೪೫ನೇ ಸ್ಥಾನದಲ್ಲಿತ್ತು ಅದು ೨೦೨೦ರ ವೇಳೆಗೆ ೬೩ನೇ ಸ್ಥಾನಕ್ಕೆ ಏರಿದೆ.
ಜಾಗತಿಕ ಬದಲಾವಣೆಯ ಸೂಚ್ಯಂಕದಲ್ಲಿ 81(2015) ರಿಂದ 46 (2021) ಕ್ಕೆ ಏರಿಕೆಯನ್ನು ಕಂಡಿದೆ. ರಾಷ್ಟದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಏಕಕಾಲದಲ್ಲಿ ಚುನಾವಣೆ ನಡೆಸುವ ಪದ್ಧತಿ, ನ್ಯಾಯಾಂಗದಲ್ಲಿ ಸುಧಾರಣೆ ಹೀಗೆ ಹತ್ತು ಹಲವು ಸಂಗತಿಗಳ ಮೂಲಕ ಅಭಿವೃದ್ಧಿಗೆ ಒತ್ತುಕೊಡಲಾಗಿದೆ. ಸಾಂವಿಧಾನಿಕ ಚೌಕಟ್ಟಿನ ಒಳಗಡೆ ಸಾರ್ವಜನಿಕ ಆಕಾಂಕ್ಷೆಗಳಿಗೆ ಬಲತುಂಬುವ ಕೆಲಸ ಉತ್ತಮ ಆಡಳಿತ ನಿರ್ವಹಣೆಯ ಅಡಿಯಲ್ಲಿ ವೇಗದಿಂದ ಸಾಗುತ್ತಿದೆ. ಅಟಲ್ ಜೀಯವರ ದೂರದೃಷ್ಟಿ, ನಾಯಕತ್ವ, ಮಾರ್ಗದರ್ಶನ ಮತ್ತು ಬೆಲೆಕಟ್ಟಲಾಗದ ಒಳನೋಟಗಳು ಪ್ರಸ್ತುತ ಮತ್ತು ಭವಿಷ್ಯದ ಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶ ಉತ್ತಮ ಆಡಳಿತ ನಿರ್ವಹಣಾ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಸಬ್‌ಕಾ ಪ್ರಯಾಸ್ (ಎಲ್ಲರೂ ಜೊತೆಗೂಡಿ ಎಲ್ಲರ ಪ್ರಗತಿ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದಿಂದ)’ ಎಂಬ ಉಕ್ತಿಗಳ ಕುರಿತಾಗಿ ರಾಷ್ಟ್ರನಿರ್ಮಾಣ ಮತ್ತು ಭವ್ಯಭಾರತ ಕಟ್ಟುವ ದಿಸೆಯಲ್ಲಿ ನಮ್ಮನ್ನು ನಾವು ಪುನರ್ ಆತ್ಮಾವಲೋಕನಕ್ಕೆ ಒಳಪಡಿಸಬೇಕಾಗಿದೆ.
(ಲೇಖಕರು ಕೇಂದ್ರದ ಸಂಸದೀಯ ವ್ಯವಹಾರಗಳು ಹಾಗೂ ಸಂಸ್ಕೃತಿ ಖಾತೆ ಸಚಿವರು)