ಸಿಎಂ ಬೊಮ್ಮಾಯಿ ಏಕೆ ಹಳಹಳಿಸುತ್ತಿದ್ದಾರೆ ?
ಮೂರ್ತಿ ಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಸಿಎಂ ಹುದ್ದೆಗೆ ಬಂದು ೫ ತಿಂಗಳಾದರೂ ಬೊಮ್ಮಾಯಿ ಸರ್ವ ಶಕ್ತ ನಾಯಕರಾಗಿ ಹೊರಹೊಮ್ಮಿಯೇ ಇಲ್ಲ. ಬದಲಿಗೆ ಕಾಮನ್ ಮ್ಯಾನ್ ಇಮೇಜು ತಮ್ಮನ್ನು ರಕ್ಷಿಸುತ್ತದೆ ಎಂಬ ಭ್ರಮೆಯನ್ನು ಬಿತ್ತಿಕೊಂಡು ಈಗ ಕಂಗಾಲಾಗುವ ಸ್ಥಿತಿಗೆ ಬಂದಿದ್ದಾರೆ.
ಸಂಘ ಪರಿವಾರದ ನಾಯಕ ಸಂತೋಷ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವ ಘಳಿಗೆ ಹತ್ತಿರವಾಯಿತೇ? ಅಂತಹದೊಂದು ಅನುಮಾನ ಬಿಜೆಪಿಯ ಪಡಸಾಲೆ ಯಿಂದಲೇ ಹೊರಸೂಸುತ್ತಿದೆ. ಅಂದ ಹಾಗೆ ಮುಖ್ಯಮಂತ್ರಿ ಹುzಗೆ ಬಂದು ಕೂರುವ ಸಂತೋಷ್ ಅವರ ಇಚ್ಚೆಗೆ ದಶಕಕ್ಕೂ ಹೆಚ್ಚು ಕಾಲ ಕಳೆದಿದೆ.ರಾಜ್ಯದಲ್ಲಿ ಮೊದಲ ಬಾರಿ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದ ಸರಕಾರ ರಚಿಸಿದರಲ್ಲ? ಆ ಹಂತದಲ್ಲಿ ಮೊಳಕೆಯೊಡೆದ ಸಂತೋಷ್ ಅವರ ಕನಸುಈಗ ಹೆಮ್ಮರವಾಗಿ ನಿಂತಿದೆ.
ವಸ್ತುಸ್ಥಿತಿ ಎಂದರೆ ಕಳೆದ ಜುಲೈ ತಿಂಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದು ಖಚಿತವಾದಾಗ ಪರ್ಯಾಯ ನಾಯಕನ ಜಾಗಕ್ಕೆ ಮೊದಲು ಕೇಳಿ ಬಂದಿದ್ದೇ ಸಂತೋಷ್ ಅವರ ಹೆಸರು. ಆದರೆ ಇದಕ್ಕಾಗಿ ಸಂತೋಷ್ ಅವರು ರೂಪಿಸಿದ ಖೆಡ್ಡಾದ ಬಗ್ಗೆ ಅನುಮಾನ ಮೂಡುತ್ತಿದ್ದಂತೆಯೇ ಯಡಿಯೂರಪ್ಪ ಬಣ ಹಾಹಾಕಾರ ಎಬ್ಬಿಸಿತು. ಮುಖ್ಯಮಂತ್ರಿಯಾಗಲು ಹಲವರ ಮೂಗಿಗೆ ತುಪ್ಪ ಸವರ ಲಾಗಿದೆ. ಇದನ್ನು ನಂಬಿ ಮುರುಗೇಶ್ ನಿರಾಣಿ,ಪ್ರಲ್ಹಾದ್ ಜೋಶಿ ತರದ ನಾಯಕರು ದಿಲ್ಲಿಗೆ ಎಡತಾಕುತ್ತಿzರೆ. ಆದರೆ ಇವರೆಲ್ಲರ ನಡುವೆ ಮೆಲ್ಲಗೆ ಜಾಗ ಮಾಡಿಕೊಂಡು ಬಂದು ಸಂತೋಷ್ ಗದ್ದುಗೆಯ ಮೇಲೆ ಕೂರುತ್ತಾರೆ ಎಂಬ ಪ್ರಚಾರ ವ್ಯವಸ್ಥಿತವಾಗಿ ನಡೆಯಿತು.
ಲಿಂಗಾಯತರ ನಡುವೆ ಹರಿದಾಡಿದ ಈ ಸಂದೇಶ ಅಂತಿಮವಾಗಿ, ಇದು ತಮ್ಮ ಸಮುದಾಯಕ್ಕಾಗುವ ಹೊಡೆತ. ಹೀಗಾಗಿ ತಿರುಗೇಟು ನೀಡಲು ಸಜ್ಜಾಗಿ ಎಂದು ಫರ್ಮಾನು ಹೊರಡಿಸಿತ್ತು. ಯಾವಾಗ ಇಂತಹದೊಂದು ಸಂದೇಶ ಬಿರುಗಾಳಿಯಂತೆ ಹರಡಿತೋ? ಇದಾದ ನಂತರ ದಿಲ್ಲಿ ಮಟ್ಟದಲ್ಲಿ ಗೇಮ್ ಪ್ಲಾನು  ಬದಲಾಯಿತು.
ಅಂದುಕೊಂಡಂತೆ ಮುಖ್ಯಮಂತ್ರಿ ಹುzಯ ರೇಸಿನ ಲ್ಲಿದ್ದ ಮುರುಗೇಶ್ ನಿರಾಣಿ ವಿರುದ್ಧ ಹಲವು ಆರೋಪ ಗಳನ್ನು ಮಾಡಿ ಬದಿಗೆ ಸರಿಸಲಾಯಿತು. ಪ್ರಲ್ಹಾದ್ ಜೋಶಿ ತಾವೇ ತಾವಾಗಿ ನಾನು ರೇಸಿನಲ್ಲಿಲ್ಲ ಎಂದು ಕೈ ತೊಳೆದು ಕೊಂಡರು. ಈ ಮಧ್ಯೆ ಲಿಂಗಾಯತರ ಆಕ್ರೋಶ ವನ್ನು ಮೈ ಮೇಲೆ ಎಳೆದುಕೊಳ್ಳುವುದೇಕೆ ಅಂತ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಟೆಂಪರರಿ ಆದ್ಯತೆ ಕೊಡಲು ತೀರ್ಮಾನಿಸಿತು.
ಇದರ ಫಲವಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತವರು ಬಸವರಾಜ ಬೊಮ್ಮಾಯಿ. ಆದರೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತು ಐದುತಿಂಗಳಾದರೂ ಬಸವರಾಜ ಬೊಮ್ಮಾಯಿ ಸರ್ವ ಶಕ್ತ ನಾಯಕರಾಗಿ ಹೊರಹೊಮ್ಮಿಯೇ ಇಲ್ಲ. ಬದಲಿಗೆ ಕಾಮನ್ ಮ್ಯಾನ್ ಇಮೇಜು ತಮ್ಮನ್ನು ರಕ್ಷಿಸುತ್ತದೆ ಎಂಬ ಭ್ರಮೆಯನ್ನು ಬಿತ್ತಿಕೊಂಡು ಈಗ ಕಂಗಾಲಾಗುವ ಸ್ಥಿತಿಗೆ ಬಂದಿದ್ದಾರೆ. ಅಂದ ಹಾಗೆ ಜಲಸಂಪನ್ಮೂಲ, ಲೋಕೋಪಯೋಗಿ, ಕಂದಾಯ ಸೇರಿದಂತೆ ಹಲವು ಪ್ರಮುಖ ಖಾತೆಗಳೇನಿವೆ? ಅಲ್ಲಿ ನಡೆಯುವ ವ್ಯವಹಾರಗಳ ಮೇಲೆ ಅವರಿಗೆ ನಿಯಂತ್ರಣವೇ ಇಲ್ಲ. ಸರಕಾರ ನಡೆಯಲು ಅಗತ್ಯವಾದ ರೇಷನ್ ತಂದುಹಾಕುವ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಹೊತ್ತುಕೊಂಡಿದ್ದಾರೆ.
ಹೀಗಿದ್ದಾಗ ಬಸವರಾಜ ಬೊಮ್ಮಾಯಿ ಅವರಿಗೆ ತುಂಬ ಜವಾಬ್ದಾರಿಗಳೇನಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗ ತಮಗಿರುವ ದಿವ್ಯಜ್ಞಾನವನ್ನು ಪ್ರದರ್ಶಿಸುತ್ತಾ, ಉಳಿದಂತೆ ಯಾರು ಕರೆದರೂ ತಪ್ಪಿಸದೆ ರೆಗ್ಯುಲರ್ ಆಗಿ ಮದುವೆ, ಮುಂಜಿಯಂತಹ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಾರೆ. ಯಡಿಯೂರಪ್ಪ ಅವರ ನಂತರಇಂತಹ ಮುಖವೇ ಸಿಎಂ ಹುzಯ ಮೇಲೆ ಬಂದು ಕೂರಬೇಕು ಎಂಬ ಸಂತೋಷ್ ಅವರ ಇಚ್ಚೆ ಏನಿದೆ? ಆ ಇಚ್ಚೆ ಈಡೇರಿದೆ ಎನ್ನಲು ಈಗ ಬೇರೆ ಸಾಕ್ಷಿಯೇ ಬೇಕಿಲ್ಲ.
ಹೀಗಾಗಿಯೇ ಈಗ ಬಿಜೆಪಿ ವರಿಷ್ಠರು ಮೆಲ್ಲಗೆ ಬೇರೆ, ಬೇರೆ ಮೂಲಗಳಿಂದ ಬಸವರಾಜ ಬೊಮ್ಮಾಯಿ ಅವರಿಗೆ ಕೆಲ ಸಂದೇಶಗಳನ್ನು ರವಾನಿಸುತ್ತಿದೆ. ಅರ್ಥಾತ್, ಮುಂದಿನ ದಿನಗಳಲ್ಲಿ ಕೇಂದ್ರ ಮಂತ್ರಿಯಾಗಲು ಸಜ್ಜಾಗಿ ಎಂಬುದು ಆ ಮೆಸೇಜು. ಇಂತಹ ಮೆಸೇಜು ತಲುಪಿರು ವುದರಿಂದಲೇ ಬಸವರಾಜ ಬೊಮ್ಮಾಯಿ ಇದ್ದಕ್ಕಿದ್ದಂತೆ ತತ್ವeನಿಯ ಗೆಟಪ್ಪಿಗೆ ಬದಲಾಗಿದ್ದಾರೆ. ಇತ್ತೀಚೆಗೆ ಅವರ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದ್ದದಿತರಾಗಿ ಮಾತನಾಡಿದ್ದಾರೆ.
ಅಧಿಕಾರ ಶಾಶ್ವತವಲ್ಲ, ಹೆಸರಿನ ಹಿಂದಿರುವ ಪದನಾಮ ಶಾಶ್ವತವಲ್ಲ. ಹೀಗಾಗಿ ನಾನು ಯಾವತ್ತೂ ನಿಮಗೆ ಬಸವರಾಜ ಬೊಮ್ಮಾಯಿಯಾಗಿ ಮಾತ್ರ ಇರುತ್ತೇನೆ ಎಂದಿದ್ದಾರೆ. ಕೇಳಿದರೆ, ‘ನಾನು ಭಾವುಕ, ಅದನ್ನು ತಡೆಹಿಡಿಯಬೇಕೆಂದಿದ್ದೆ. ಆದರೆ ಆಗಲಿಲ್ಲ’ ಎಂದು ಹೇಳಿದ್ದಾರೆ. ಆದರೆ ವಸ್ತುಸ್ಥಿತಿ ಎಂದರೆ ಬಸವರಾಜ ಬೊಮ್ಮಾಯಿ ಭಾವುಕ ಸ್ವಭಾವದವರಲ್ಲ, ಅವರ ರಾಜಕೀಯ ಜೀವನದಲ್ಲಿ ಅದರ ಕುರುಹುಗಳು ಕಂಡೂ ಇಲ್ಲ. ಅಂತವರು ಹೀಗೆ ಮಾತನಾಡಿ ರುವುದಕ್ಕಿರುವ ಮುಖ್ಯ ಕಾರಣ ಅವರಿಗೆ ತಲುಪಿರುವ ಮೆಸೇಜು. ಕುತೂಹಲದ ಸಂಗತಿ ಎಂದರೆ ಅವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿರುವ ಮುರುಗೇಶ್ನಿರಾಣಿ, ‘ಮುಂದೆ ಬಸವರಾಜ ಬೊಮ್ಮಾಯಿ ಕೇಂದ್ರ ಮಂತ್ರಿಯಾಗಲಿದ್ದಾರೆ’ ಎಂದು ಹೇಳಿರುವುದು.
ದಿಲ್ಲಿ ಮೂಲಗಳ ಪ್ರಕಾರ, ಬಸವರಾಜ ಬೊಮ್ಮಾಯಿ ಅವರನ್ನು ದಿಲ್ಲಿಗೆ ಕರೆಸಿಕೊಳ್ಳಲು ತಯಾರಿ ಶುರುವಾಗಿದೆ. ಅಂದ ಹಾಗೆ ಅವರನ್ನು ಯಾವಾಗ ಬೇಕಿದ್ದರೂ ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬಹುದು. ಆದರೆ ಆರು ತಿಂಗಳ ಒಳಗಾಗಿ ಅವರು ಲೋಕಸಭೆಗೆ ಇಲ್ಲವೇ ರಾಜ್ಯಸಭೆಗೆ ಆಯ್ಕೆಯಾಗಬೇಕು. ಈ ಪೈಕಿ ಲೋಕಸಭೆ ಯನ್ನು ಪ್ರವೇಶಿಸುವ, ಅದಕ್ಕಾಗಿ ಹೋರಾಡುವ ಇಚ್ಚೆ ಖುದ್ದು ಬಸವರಾಜ ಬೊಮ್ಮಾಯಿ ಅವರಿಗಿಲ್ಲ. ಹೀಗಾಗಿ ಜೂನ್ ಅಂತ್ಯದಲ್ಲಿ ಕರ್ನಾಟಕದಿಂದರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಾಗಿ ಕಾಯಬೇಕು. ಅಂದ ಹಾಗೆ ಜೂನ್ ಮೂವತ್ತರಂದು ನಿರ್ಮಲಾ ಸೀತಾರಾಮನ್, ಜೈರಾಂರಮೇಶ್ ಸೇರಿದಂತೆ ನಾಲ್ಕು ಜನ ನಿವೃತ್ತರಾಗಲಿದ್ದಾರೆ. ಈ ಪೈಕಿ ಈಗಾಗಲೇ ಒಂದು ಸ್ಥಾನ ಆಸ್ಕರ್ ಫೆರ್ನಾಂಡೀಸ್ ಅವರ ನಿಧನದಿಂದ ತೆರವಾಗಿದೆ. ಹೀಗೆ ತೆರವಾಗುವ ಸ್ಥಾನಗಳ ಪೈಕಿ ಒಂದನ್ನು ಬಸವರಾಜ ಬೊಮ್ಮಾಯಿ ಅವರಿಗೆ ನೀಡುವುದು ಲೇಟೆ ಪ್ಲಾನು.
ಹೀಗಾಗಿ ಜನವರಿ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಕೆಳಗಿಳಿಸುವುದು ಇದರ ಭಾಗ. ಹೀಗೆ ಅವರು ತೆರವು ಮಾಡುವ ಜಾಗಕ್ಕೆ ಈಗ ಕೇಳಿ ಬರುತ್ತಿರುವ ಮೊದಲ ಹೆಸರು ಬಿ.ಎಲ. ಸಂತೋಷ್ ಅವರದು. ಗಮನಿಸಬೇಕಾದ ಸಂಗತಿ ಎಂದರೆ ಅವರು ಬಂದು ಕೂರುವ ಮುನ್ನವೇ ಮತಾಂತರ ನಿಷೇಧ ಕಾಯಿದೆಯನ್ನು ವಿಧಾನ ಮಂಡಲದಲ್ಲಿ ಮಂಡಿಸುವ ಕೆಲಸವಾಗಿದೆ. ಇನ್ನು ಲವ್ ಜಿಹಾದ್ ವಿರುದ್ಧ ಕಾನೂನು ತರುವುದಾಗಿ ಖುದ್ದು ಸಂತೋಷ್ ಅವರ ಪರಮಾಪ್ತರಾದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈಗಾಗಲೇ ಸ್ವಕ್ಷೇತ್ರ ಶಿವಮೊಗ್ಗದ ಅಸೆಂಬ್ಲಿ ಟಿಕೆಟ್ ಅನ್ನು ತಮ್ಮ ಪುತ್ರ ಕಾಂತೇಶ್ ಅವರಿಗೆ ಕೊಡಿಸಿ, ಮಾರ್ಗದರ್ಶಕ್ ಹುದ್ದೆ ಅಲಂಕರಿಸಲು ಸಜ್ಜಾಗಿರುವ ಈಶ್ವರಪ್ಪ ಅವರಿಗೆ ಇಂತಹ ಕಾಯಿದೆಗಳು ಜಾರಿಗೆ ಬಂದರೆ ಹಿಂದೂ ಮತಗಳುಕ್ರೋಢೀಕರಣಗೊಳ್ಳುತ್ತವೆ. ಮತ್ತು ಮುಂದಿನ ಚುನಾವಣೆ ಯಲ್ಲಿ ಪುತ್ರ ಕಾಂತೇಶ್ ಗೆಲುವು ಸುಗಮವಾಗುತ್ತದೆ ಎಂಬ ಲೆಕ್ಕಾಚಾರವಿದೆ.
ಇಂತಹ ವ್ಯಾಪಕ ಲೆಕ್ಕಾಚಾರಗಳ ಫಲಶೃತಿಯಾಗಿ ಹೊರಹೊಮ್ಮಲು ಸಜ್ಜಾಗಿರುವವರು ಬಿ.ಎಲ್.ಸಂತೋಷ್. ಅಂದ ಜಾಗೆ ಇತ್ತೀಚೆಗೆ ನಡೆದ ಉಪ ಚುನಾವಣೆಗಳಿರಬಹುದು. ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗಳೇ ಇರಬಹುದು. ಅವು ಲಿಂಗಾಯತ ಮತಬ್ಯಾಂಕ್ ವಲಸೆಗೆ ಸಜ್ಜಾಗಿದೆ ಎಂಬುದರ ಕುರುಹು. ಹಣ ಇವತ್ತಿನ ಚುನಾವಣೆಗಳಿಗೆ ಪ್ರಮುಖ ಮಾನದಂಡ ವಾದರೂ, ಹಣವೊಂದರಿಂದಲೇ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎಂಬುದು ಬಿಜೆಪಿ ವರಿಷ್ಡರಿಗೂ ಅರ್ಥವಾಗಿದೆ.
ಏಕೆಂದರೆ ಹಾನಗಲ್ ಕ್ಷೇತ್ರದಲ್ಲಿ ಲಿಂಗಾಯತ ಮತಬ್ಯಾಂಕ್ ಪ್ರಬಲವಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಗಳಿಸಿದರು. ಇನ್ನು ವಿಧಾನಪರಿಷತ್ ಚುನಾವಣೆ ಯಲ್ಲಿ ಬಿಜೆಪಿಯ ಮನಿಬ್ಯಾಂಕ್ ಪ್ರಬಲವಾಗಿದ್ದರೂ ಪ್ರತಿಪಕ್ಷ ಕಾಂಗ್ರೆಸ್ ಹನ್ನೊಂದು ಸ್ಥಾನಗಳನ್ನು ಪಡೆಯಿತು. ಹೀಗೆ ಫಲಿತಾಂಶದ ಸ್ವರೂಪ ಕಂಡ ಬಿಜೆಪಿಗೀಗ ಒಂದು ವಿಷಯ ನಿಕ್ಕಿಯಾಗಿದೆ.ಅದೆಂದರೆ ಹಿಂದೂ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವುದು. ಅಂದ ಹಾಗೆ ಯಡಿಯೂರಪ್ಪ ಅಧಿಕಾರ ಹೀನ ಸ್ಥಿತಿಯಲ್ಲಿ ಬಿಜೆಪಿಯೊಳಗಿದ್ದರೂ ದೊಡ್ಡ ಮಟ್ಟದ ಪ್ರಯೋಜನವಿಲ್ಲ ಎಂಬುದು ಸಾಬೀತಾದ ಮೇಲೆ ಇಂತಹ ಗೇಮ್ ಪ್ಲಾನು ಮಾಡದಿದ್ದರೆ ಕಷ್ಟ ಎಂಬುದು ಅದಕ್ಕೆ ಅರ್ಥ ವಾಗಿದೆ. ಹೀಗಾಗಿ ಹಿಂದೂ ಮತಬ್ಯಾಂಕ್ ಅನ್ನು ಕ್ರೋಢೀಕರಿಸಲು ಅದು ಎಲ್ಲ ಕೋನಗಳಿಂದಲೂ ಸಜ್ಜಾಗುತ್ತಿದೆ.
ಇದಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಿ ಸಂತೋಷ್ ಅವರನ್ನು ತಂದು ಕೂರಿಸುವ ತಯಾರಿ ಭರದಿಂದ ನಡೆಯುತ್ತಿದೆ ಎಂಬುದು ಬಿಜೆಪಿ ಮೂಲಗಳಿಂದಲೇ ಕೇಳಿ ಬರುತ್ತಿರುವ ಮಾತು. ಮುಖ್ಯಮಂತ್ರಿ ಹುದ್ದೆಯ ಮೇಲೆ ಸಂತೋಷ್ ಬಂದು ಕುಳಿತರೆ ಆಡಳಿತವನ್ನು ನಿಯಂತ್ರಣಕ್ಕೆ ತರುವುದರ ಜತೆ,ಬಿಜೆಪಿಯ ಮತ ಬ್ಯಾಂಕ್ ಅನ್ನು ಸದೃಢಗೊಳಿಸುತ್ತಾರೆ ಎಂಬುದು ಸಧ್ಯದ ಲೆಕ್ಕಾಚಾರ.
ಅಧಿಕಾರ ಕಳೆದುಕೊಂಡ ಯಡಿಯೂರಪ್ಪ ಅವರು ಮುಂದಿನ ಚುನಾವಣೆಯ ವೇಳೆಗೆ ತುಂಬ ಪ್ರಯೋಜನಕ್ಕೆ ಬಾರದಿದ್ದರೂ ಪಕ್ಷದಿಂದ ಹೊರಹೋಗದಂತೆ ನೋಡಿಕೊಳ್ಳಲಾಗುತ್ತಿರುವುದು ನಿಜ. ಯಾಕೆಂದರೆ ಪಕ್ಷದ ಒಳಗಿದ್ದು ಯಡಿಯೂರಪ್ಪ ಶಕ್ತಿಹೀನರಾದರೂ ಪರವಾಗಿಲ್ಲ. ಆದರೆ ಅವರು ಹೊರಗೆ ಹೋಗಬಾರದು ಎಂಬುದು ಬಿಜೆಪಿಯ ಥಿಂಕ್ ಟ್ಯಾಂಕ್ ಲೆಕ್ಕಾಚಾರ. ಒಂದು ವೇಳೆ ಅವರು ಹೊರಹೋಗಿ ಹೊಸ ಪಕ್ಷ ಕಟ್ಟಿದರೆ, ಆನಂತರ ಕಾಂಗ್ರೆಸ್ ಜತೆ ಮೈತ್ರಿ ಮಾಡಿ ಕೊಂಡರೆ ಅದೊಂದು ಡೆಡ್ಲಿ ಕಾಂಬಿನೇಷನ್ ಆಗುತ್ತದೆ. ಹಾಗೇನಾ ದರೂ ಆದರೆ ಹಿಂದೂ ಮತಬ್ಯಾಂಕ್ ಅನ್ನು ಕ್ರೋಢೀಕರಿಸುವುದು ಕಷ್ಟವಾಗುತ್ತದೆ. ಯಾಕೆಂದರೆ ಇವತ್ತಿಗೂ ಯಡಿಯೂರಪ್ಪ ಅವರಿಗೆ ಮೃದು ಹಿಂದೂವಾದಿ ಎಂಬ ಇಮೇಜ್ ಇದೆ.
ಈ ಇಮೇಜ್ ಇರುವ ಅವರು ಬಿಜೆಪಿಯಿಂದ ಹೊರ ಹೋಗಿ ಕಾಂಗ್ರೆಸ್ ಜತೆ ಕೈಜೋಡಿಸಿದರೆ ನಿಶ್ಚಿತವಾಗಿಯೂ ಅದು ಕಾಂಗ್ರೆಸ್ ಪಕ್ಷಕ್ಕೆ ಲಾಭದಾಯಕವಾ ಗುತ್ತದೆ. ಹೀಗಾಗಿ ಅದೇನೇ ಆದರೂ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಂಡೇ ಉಗ್ರ ಹಿಂದೂವಾದಿ ಸಂತೋಷ್ ಅವರನ್ನು ತಂದು ಕೂರಿಸು ವುದು ಸೂಕ್ತ ಎಂಬುದು ವರಿಷ್ಠರ ಯೋಚನೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಕಾಲಿಗೆ ಹಗ್ಗ ಬಿಗಿಯುವ ಕೆಲಸವನ್ನು ಮುಂದುವರಿಸಿಕೊಂಡೇಬರಲಾಗುತ್ತಿದೆ.
ಇದು ಜಾರಿಯಲ್ಲಿಟ್ಟುಕೊಂಡೇ ಸಂತೋಷ್ ಅವರನ್ನು ತಂದು ಕೂರಿಸಲಾಗುತ್ತದೆ ಎಂಬುದು ಸಧ್ಯದ ಲೆಕ್ಕಾಚಾರ. ಈ ಲೆಕ್ಕಾಚಾರ ನಿಜವಾಗುತ್ತದೋ? ಅಥವಾಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ನಾಯಕರ ಲಕ್ಕು ತಿರುಗುತ್ತದೋ? ಇಲ್ಲ ಅಲುಗಾಡುತ್ತಿರುವ ಬೊಮ್ಮಾಯಿ ಅವರಿಗೆ ಇನ್ಯಾವುದೋ ಆಸರೆ ಸಿಕ್ಕು ಬಚಾವಾಗಿ ಬಿಡುತ್ತಾರೋ?ಕಾದು ನೋಡಬೇಕು.