ಅಷ್ಟಕ್ಕೂ ಅವರು ಮಾಡಿದ ತಪ್ಪು ಒಂದೇ, ಎರಡೇ !?
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್
dascapital1205@.
ತಾನು ಖಂಡಿತವಾದಿ ಲೋಕವಿರೋಧಿ ಎಂದು ತನ್ನ ಜಾತಕದ ಇದೆಯೆಂದು ಸ್ವರ್ಗೀಯ ಕೆ.ಎಸ್.ನಾರಾಯಣ ಆಚಾರ್ಯರು ಹೇಳಿದ್ದರು. ಅದೇ ಅವರು ಮಾಡಿದ ತಪ್ಪು! ರಾಷ್ಟ್ರೀಯ ಸಂಸ್ಕೃತಿಗೆ ವಿರುದ್ಧವಾದುದನ್ನು, ವಿರುದ್ಧವಾದವರನ್ನು, ಅವರು ಯಾರೇ ಆಗಿರಲಿ, ಖಂಡಿಸುತ್ತಲೇ ವಿರೋಧಿಸುತ್ತಲೇ ಕೊನೆ ಉಸಿರಿನ ವರೆಗೂ ತನ್ನ ರಾಷ್ಟ್ರೀಯ ಬದ್ಧತೆಯನ್ನು ಜತನವಾಗೇ ಉಳಿಸಿಕೊಂಡರು.
ಇಂದು ಎಡೆ ಕೇಳಿಬರುತ್ತಿರುವ ಹಿಂದೂ, ಹಿಂದುತ್ವದ ಉಳಿವಿನ ಬಗ್ಗೆ ದಶಕಗಳ ಹಿಂದೆಯೇ ಅವರು ಜಾಗೃತಿಯನ್ನು ಹುಟ್ಟಿಸಿದ್ದರು. ಎಚ್ಚರಿಸಿದ್ದರು. ಹಿಂದೂ ರಾಷ್ಟ್ರೀಯತೆಯ ಬಗ್ಗೆ ನಿರಂತರವಾಗಿ ಬರೆದರು. ಮಾತಾಡಿದರು. ಮುಸ್ಲಿಂ ಭಯೋತ್ಪಾದನೆಯ ಕ್ರೌರ್ಯದ ಆಳ ಅಗಲದ ಬಗ್ಗೆ ಬರೆದರು. ಇಂಟೆಲೆಕ್ಚುವಲ್ ಟೆರರಿಸಂ ಬಗ್ಗೆ ಎಚ್ಚರ ಮೂಡಿಸಿದರು. ಹೀಗೆ ತಾನು ಬದುಕಿನುದ್ದಕ್ಕೂ ಜತನವಾಗೇ ಉಳಿಸಿಕೊಂಡ ರಾಷ್ಟ್ರೀಯ ಬದ್ಧತೆಯ ಚಿಂತನೆಯಲ್ಲಿ ಅವರು ಕ್ರಮಿಸಿದ ರೀತಿ ಅನನ್ಯವಾದುದು. ಅಸಾಮಾನ್ಯವಾದುದು. ಅಪ್ರತಿಮವಾದುದು. ಅಸಾಧಾರಣವಾದುದು.
ಆ ಕ್ರಮದಲ್ಲಿ ಕಾಂಗ್ರೆಸ್ ಮುಂತಾದ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಹುಸಿ ಸೆಕ್ಯುಲರಿಸಂ ಭ್ರಮೆಯನ್ನು ಕಳಚಿದರು. ಮತ-ಪಂಥ-ಧರ್ಮಗಳ ಸತ್ವವನ್ನು ಸಾರವನ್ನು ಆಮೂಲಾಗ್ರವಾಗಿ ವಿಮರ್ಶಿಸಿದರು. ವ್ಯಾಖ್ಯಾ ನಿಸಿದರು. ಗುಣಾವಗುಣಗಳನ್ನು ಶ್ರೇಷ್ಠತೆ ಎತ್ತಿಹಿಡಿದರು. ಬಾಧಕಾಂಶಗಳನ್ನು ಅನಾವರಣ ಮಾಡಿ ಬರೆದರು. ರಾಷ್ಟ್ರೀಯತೆಗೆ, ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿ ರಾಜಕೀಯವನ್ನು ಮಾಡಿದ ಯಾವ ರಾಜಕಾರಣಿ ಯನ್ನೂ ಅವರು ತರಾಟೆಗೆ ತೆಗೆದು ಕೊಳ್ಳದೇ ಬಿಡಲಿಲ್ಲ. ವಿರೋಧೀಸದೇ ಬಿಡಲಿಲ್ಲ.
ಉತ್ತರದ ರಾಜಕೀಯವನ್ನು ವಿಶ್ಲೇಷಿಸಿದಂತೆ, ದಕ್ಷಿಣದ ರಾಜಕೀಯವನ್ನು ವಿಶ್ಲೇಷಿಸಲಿಲ್ಲ. ಒಂದೊಂದು ರಾಜಕೀಯ ಪಕ್ಷವನ್ನು ಅವುಗಳ ಒಟ್ಟೂ ಚರಿತ್ರೆ ಯೊಂದಿಗೇ ವಿಶ್ಲೇಷಣೆ ಮಾಡಿದರು. ಗುಣಾವಗುಣಗಳನ್ನು ಬರೆದರು. ಭೂತದ ಆಧಾರದ ಮೇಲೆ ವರ್ತಮಾನದಲ್ಲಿ ನಿಂತು ಭವಿಷ್ಯ ಹೇಳಿದರು. ಹಾಗೆಯೇ ದೇಶಪ್ರೇಮಕ್ಕೆ ಅಹಿತವಾಗಿ ನಡೆದು ಕೊಂಡ ರಾಜಕಾರಣಿಗಳನ್ನು ನೇರವಾಗೇ ಎಚ್ಚರಿಸಿದರು. ರಾಷ್ಟ್ರೀಯ ನಿಷ್ಠೆಯಲ್ಲಿ ಹೆಜ್ಜೆ ತಪ್ಪಿದವರನ್ನು ಕಟು ಟೀಕಿಸಿದರು. ಪಕ್ಷ ರಾಜಕೀಯವನ್ನು ಝಾಡಿಸಿದರು. ಕುಟುಂಬ ರಾಜಕಾರಣದ ಎಳೆ ಎಳೆಯನ್ನು ಎಳೆದು ಬಯಲು ಮಾಡಿದರು.
ಕರ್ನಾಟಕದ ರಾಜಕಾರಣದ ಬಗ್ಗೆ ಬರೆದರು. ಹಾಗೇ ಸ್ವಾತಂತ್ರ್ಯೋತ್ತರ ರಾಜಕಾರಣದ ಬಗ್ಗೆ ಬರೆದರು. ಗಾಂಧಿ, ನೆಹರೂ, ಜಿನ್ನಾ, ಪಟೇಲರೇ ಮುಂತಾದ ಅನೇಕರ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ರಾಜತಾಂತ್ರಿಕ ನಡೆಯ ಬಗ್ಗೆ ಬರೆದರು. ಭಾರತ ದಲ್ಲಿ ಶ್ರೀಕೃಷ್ಣನ ರಾಜನೀತಿ, ರಾಜಧರ್ಮದ ಬಗ್ಗೆ, ಬೃಹಸ್ಪತಿ ನೀತಿಯ ಬಗ್ಗೆ, ಶುಕ್ರನೀತಿಯ ಬಗ್ಗೆಯೂ ಬರೆದರು. ಕಣಿಕ ನೀತಿಯು ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಬುಡಸಮೇತ ಬೇರುಬಿಟ್ಟಿದ್ದನ್ನು ಬರೆಯುತ್ತಾ ಪ್ರಸಕ್ತ ರಾಜಕೀಯದಲ್ಲೂ ಅದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಇರುವುದನ್ನು ಎತ್ತಿ ತೋರಿದರು.
ಕೇವಲ ರಾಜಕಾರಣದ ಬಗ್ಗೆ ಬರೆಯಲಿಲ್ಲ. ಸಮಕಾಲೀನ ಭಾರತದ ರಾಜಕಾರಣವನ್ನು ಪುರಾಣ ಇತಿಹಾಸಗಳ ಸನ್ನಿವೇಶಗಳ ಜತೆ ಸಮೀಕರಿಸಿ ಪರಾಮರ್ಶೆ ಮಾಡಿದರು. ಸಂದರ್ಭೋಚಿತವಾಗಿ ಪಾತ್ರಗಳನ್ನು ತಾಳೆ ಮಾಡಿದರು. ಸನ್ನಿವೇಶಗಳನ್ನು ಮುಖಾಮುಖಿಯಾಗಿಸಿ ದರ್ಶಿಸಿದರು. ಜಗತ್ತಿನ ತತ್ತ್ವಶಾಸ್ತ್ರದಆಕೃತಿಗಳನ್ನು ಭಾರತೀಯ ತತ್ತ್ವಶಾಸ ದೊಂದಿಗೆ ಹೋಲಿಸಿ ಭಾರತೀಯತೆಯ ಶ್ರೇಷ್ಠತೆಯನ್ನು ಕಾಣಿಸಿದರು. ಹಿಂದೂ ಜೀವನ ಪದ್ಧತಿಯ ಉದಾತ್ತ ಅಂಶ ಗಳನ್ನು ತೆರೆದಿಟ್ಟರು. ಚಾಣಕ್ಯನನ್ನು ನಿರ್ವಚಿಸಿದ ಹಾಗೆ ಬುದ್ದನ ಫಿಲಾಸಫಿಯನ್ನು ಒರೆಗೆ ಹಚ್ಚಿದರು. ಆಚಾರ್ಯತ್ರಯರ ಬಗ್ಗೆ ಪುಟಗಟ್ಟಳೆ ಬರೆದರು.
ಗೀತೆಯ ಬಗ್ಗೆ ಮತ್ತೆ ಮತ್ತೆ ಬರೆದರು. ಹಲವು ವೇದಿಕೆಗಳಲ್ಲಿ ಮಾತಾಡಿ ದರು. ಜಗತ್ತಿನ ನಾಗರಿಕತೆಯ ಬಗ್ಗೆ ಬರೆದರು. ಸಿಂಧೂ ನಾಗರಿಕತೆಯೊಂದಿಗೆ ಜಗತ್ತಿನ ನಾಗರಿಕತೆಯನ್ನು ತುಲನೆ ಮಾಡಿದರು. ತನ್ನನ್ನು ಹಿಂದೂ ಎಂದು ಬಲವಾಗಿ ಪ್ರತಿಪಾದಿ ಸಿಕೊಂಡರು. ಹಿಂದೂಯಿಸಂ ಅನ್ನು ರವಾಗಿಸಿದರು. ಇತರರಿಗೆ ಹಿಂದುತ್ವದ ಬಗ್ಗೆ ಕಣ್ಣು ಕೋರೈಸುವ ಹಾಗೆ ಬರೆದರು. ಮುಸ್ಲಿಂ, ಕ್ರೈಸ್ತ ಮತಗ್ರಂಥಗಳಲ್ಲಿರುವ ಬೋಧೆ ಯನ್ನು ಖಂಡಿಸುತ್ತಲೇ ಉತ್ತಮವಾದುದನ್ನು ಮೆಚ್ಚಿದರು. ಶ್ಲಾಸಿದರು. ಭಯೋತ್ಪಾದನೆಯನ್ನು ಸಾರಾಸಗಟಾಗಿ ವಿರೋಧಿಸಿದರು. ಚೀನಾ , ಪಾಕಿಸ್ತಾನಗಳ ಕುಯುಕ್ತಿಯನ್ನು ಬಹಿರಂಗವಾಗಿ ಟೀಕಿಸುತ್ತ ವಿರೋಧಿಸುತ್ತಲೇರಾಷ್ಟ್ರೀಯ ಹಿತಾಸಕ್ತಿಗೆ ಬದ್ಧರಾದರು. ಬದ್ಧರಾಗಲು ಕರೆ ಕೊಟ್ಟರು. ಪಾಕನ್ನು ಬಡಿಯುತ್ತೇವೆಂದು ಹೇಳಿದರು.
ಸಮಕಾಲೀನ ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣದ ಯಾವ ಸಂಗತಿವನ್ನೂ ಬಿಡದೆ ಸೂಕ್ಷ್ಮವಾಗಿ ಅವಲೋಕಿಸಿದರು. ಅವುಗಳ ಹಿಂದಿನ ಮುಂದಿನ ಚಿಂತನೆಗಳನ್ನು ಓದುಗರಿಗೆ ಅರ್ಥಮಾಡಿಸಿದರು. ರಾಷ್ಟ್ರೀಯತೆಗೆ ವಿರುದ್ಧವಾದುದು ಇದ್ದರೆ ಅಥವಾ ಘಟಿಸಿದರೆ ದನಿಯೆತ್ತಿದರು. ಆಳುವ ವರ್ಗವನ್ನು ಎಚ್ಚರಿಸಿ ದರು. ಕಾಂಗ್ರೆಸ್ ಕಮ್ಯುನಿ ಮತ್ತು ಬಿಜೆಪಿಯೇತರ ರಾಜಕೀಯ ಪಕ್ಷಗಳನ್ನು, ರಾಜಕಾರಣಿಗಳನ್ನು ರಾಜಾರೋಷವಾಗೇ ಖಂಡತುಂಡವಾಗಿ ಧಿಕ್ಕರಿಸಿ ದರು.
ಹಾಗಂತ ಬಿಜೆಪಿಗೆ ವಿರೋಧವಾಗಿದ್ದವರನ್ನು ಮಾತ್ರ ಟೀಕಿಸಲಿಲ್ಲ. ಎಡಪಂಥೀಯ ಸಿದ್ಧಾಂತವನ್ನು, ಸಿದ್ಧಾಂತಿ ಗಳನ್ನು ಜಾಲಾಡಿದರು. ಕಮ್ಯುನಿಷ್ಠರನ್ನು ಹೀಗಳೆದಂತೆ, ಕಮ್ಯುನಿಸಂನ್ನು ಕುಟುಕಿದರು. ಸ್ವಾರ್ಥಕ್ಕಾಗಿ ಅವರು ಬರೆಯಲಿಲ್ಲ. ಮಾತಾಡಲಿಲ್ಲ. ಜಾತಿಯ ಗುಂಪನ್ನು ಕಟ್ಟಲಿಲ್ಲ. ಸ್ವಜಾತಿ ಗುಂಪುಗಾರಿಕೆ ಮಾಡಲಿಲ್ಲ. ಜಾತೀಯತೆ ಮಾಡಲಿಲ್ಲ. ಜಾತಿ ಸಂಘವನ್ನು ಕಟ್ಟಲಿಲ್ಲ. ಸ್ವಜನ ಪಕ್ಷಪಾತ ಮಾಡಲಿಲ್ಲ. ಯಾರದ್ದೇ ಬಾಲ ಬಡಿಯಲಿಲ್ಲ. ಯಾರದ್ದೇ ಎಂಜಲಿಗೆಕೈಯೊಡ್ಡಲಿಲ್ಲ. ಬೆವರು ಹರಿಸಿದರು. ಕಾಯಕದಲ್ಲಿ ದೇವರನ್ನು ಕಂಡರು. ಓದುಗರಿಗೆ ಪುಸ್ತಕದ ಜ್ಞಾನವನ್ನು ನೀಡಿದರು. ಲೋಕಾನುಭವವನ್ನು ಅಪರೋಕ್ಷವಾಗಿ ಹೇಳಿದರು. ಮೂರು ತಲೆಮಾರಿಗೆ ಜ್ಞಾನವನ್ನು ಉಣಿಸಿದರು.
ಅಹುದು, ಆಚಾರ್ಯರು ಅಪ್ಪಟ ಬಲಪಂಥೀಯರು. ಬಲಪಂಥೀಯ ಸಿದ್ಧಾಂತದ ಬಿಜೆಪಿಯ ಒಲವಿರುವವರು. ಬಿಜೆಪಿ ಪರ ಮಾತನಾಡಿದವರು. ಮೋದಿಯನ್ನು ಎತ್ತರದಲ್ಲಿ ಕಂಡವರು. ಹಾಡಿ ಹೊಗಳಿದವರು. ಸಂದರ್ಭದಲ್ಲಿ ಬಿಜೆಪಿಯವರನ್ನು ಧಿಕ್ಕರಿಸಿ ಬರೆದದ್ದೂ ಇದೆ. ಮಾತಾಡಿದ್ದೂ ಇದೆ. ಅಂದರೆ ರಾಷ್ಟ್ರನಿಷ್ಠೆಗೆ ವಿರುದ್ಧವಾದ ಅಭಿವ್ಯಕ್ತಿ ಯಾವ ದಿಸೆಯಿಂದ ಬಂದಾಗಲೂ, ಯಾರಿಂದ ಬಂದಾಗಲೂ ಪ್ರತಿಭಟಿಸಿದ, ವಿರೋಧಿಸಿದ ಆಚಾರ್ಯರು ಭೀಷ್ಮ ದ್ರೋಣರನ್ನು ಹಸ್ತಿನಾವತಿಯ ಭಯೋತ್ಪಾದಕರೆಂದು ಕರೆದಿದ್ದರು.
ಗಾಂಧಿ, ನೆಹರೂ, ಇಂದಿರಾ, ರಾಜೀವ್, ರಾಹುಲ, ಗುಲಾಂ ನಬೀ, ಚಿದಂಬರಂ, ಫಾರೂಕ್, ಮುಲಾಯಂ, ದಿಗ್ವಿಜಯ, ಕರುಣಾನಿಧಿ, ಮಮತಾ, ಮಾಯಾವತಿ, ಸ್ಟಾಲಿನ್, ರಾಜಶೇಖರ ರೆಡ್ಡಿ, ಗಣಿರೆಡ್ಡಿಗಳು, ಖರ್ಗೆ, ಧರಂಸಿಂಗರೇ ಮುಂತಾದವರ ರಾಜಕೀಯ ನಡೆ ಟೀಕಿಸಿದಂತೆ, ಬಿಜೆಪಿಯ ಮುಖಂಡರನ್ನೂ ಟೀಕಿಸಿದರು. ಆಳುಗರ ಕಣ್ಣು ಕೆಂಪಿಗೆ ಕಾರಣರಾದರು. ಆದರೂ ಹಿಂಜರಿಯಲಿಲ್ಲ. ಸತ್ಯವನ್ನೇ ಹೇಳಿದರು. ಅಪ್ರಿಯವಾದ ಸತ್ಯವನ್ನೇ ಕೆದಕಿದರು. ಇವೆಲ್ಲ ದೊಡ್ಡ ದೊಡ್ಡ ಸಾಹಸವನ್ನು, ಸಾಧನೆಯನ್ನು, ಪುಣ್ಯಕಾರ್ಯವನ್ನು ಮಾಡುವ ಬದಲು ಇವೆಲ್ಲವನ್ನೂ ಬಿಟ್ಟು ಮತ್ತೊಂದು ವರಸೆಯಲ್ಲಿ ಆಚಾರ್ಯರು ಹೀಗೆ ಮಾಡಬಹುದಿತ್ತು, ಬದುಕಬಹುದಿತ್ತು: ತನ್ನನ್ನು ಕನ್ನಡದ ದೊಡ್ಡ ಸಾಹಿತಿಯೆಂದು ಬಿಂಬಿಸಿಕೊಳ್ಳಬಹುದಿತ್ತು.
ಯಾಕೆಂದರೆ, ಅವರಿಗೆ ಕನ್ನಡ, ತಮಿಳು, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ನಾಲ್ಕರಲ್ಲೂ ಅಗಾಧ ಪಾಂಡಿತ್ಯವಿತ್ತು. ಓದಿನ ವ್ಯಾಪ್ತಿಯಿತ್ತು. ಯಾವ್ಯಾವುದೋ ಸಾಹಿತ್ಯವನ್ನು ತನ್ನದೆಂ ಬಂತೆ ಹಳೇ ಹೆಂಡವನ್ನು ಹೊಸ ಸೀಸಿಗೆ ಇಳಿಸಿ ಹೆಸರು ಮಾಡಿದವರ ಹಾಗೆ ಕ್ರಮಿಸಬಹುದಿತ್ತು. ಎಡಪಂಥೀಯ ಸಿದ್ಧಾಂತಿಯಾಗಿ ಹುಸಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಿಸುತ್ತಾ ಸವಲತ್ತು, ಸೌಲಭ್ಯ, ಅಧಿಕಾರ, ಸ್ಥಾನಮಾನ, ಪದವಿ, ಪ್ರಶಸ್ತಿಗಳನ್ನು, ಸಮ್ಮೇಳನಗಳ ಅಧ್ಯಕ್ಷತೆಯ ಗೌರವವನ್ನು ಹೊಡೆಯಬಹುದಿತ್ತು. ಹುಸಿ ಜಾತ್ಯತೀತತೆಯನ್ನು ಬೆಂಬಲಿಸುತ್ತ ಎಡಚರರಾಗಿ ಗುರುತಿಸಿ ಕೊಂಡುಬೇಕು ಬೇಕಾದಂತೆ ಬದುಕನ್ನು ಐಷಾರಾಮದಲ್ಲಿ ಸುಖಿಸಬಹುದಿತ್ತು. ವಿವಿಗಳಲ್ಲಿ ಕುಲಪತಿಯಾಗಬಹುದಿತ್ತು.
ಶಾಸಕನಾಗಿಯೋ, ಸಂಸದನಾಗಿಯೋ ಎಂಪಿಯಾಗಿಯೋ ಸಾಯುವವರೆಗೂ ಸರಕಾರದ ದುಡ್ಡನ್ನು ತಿನ್ನಬಹುದಿತ್ತು. ಕಾರು, ಪಿಎ, ಮಾಸಿಕ ಪಿಂಚಣಿಯನ್ನು ದಕ್ಕಿಸಿಕೊಳ್ಳಬಹುದಿತ್ತು. ತನ್ನದೇ ಪಟಾಲಂ ಕಟ್ಟಿಕೊಂಡು ರಂಗಭೂಮಿ, ಸಂಘ ಸಂಸ್ಥೆಗಳಲ್ಲಿ ಚುನಾವಣೆ ಅದು ಇದು ಅಂತ ಓಡಾಡಿಕೊಂಡು ಕಮಿಷನ್ತಿನ್ನುತ್ತ, ನಾಕೋ ಎಂಟೋ ಹತ್ತೋ ಪುಸ್ತಕ ಬರೆದುಕೊಂಡು ಅದನ್ನು ಇಂಗ್ಲಿಷ್ ಸೇರಿ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿಸಿಕೊಂಡು ನಿರಂತರ ಚಲಾವಣೆಯಲ್ಲಿರಬಹುದಿತ್ತು.
ಪತ್ರಿಕೆಗಳಲ್ಲಿ ನಿತ್ಯವೂ ರಾರಾಜಿಸುವ ಹಾಗೆ ಏನಾದರೊಂದು ಸುದ್ದಿಯಲ್ಲಿರ ಬಹುದಿತ್ತು. ಯಾರಿಗೆ ಗೊತ್ತಿತ್ತು: ಎಡಚರರಾಗಿದ್ದರೆ ಆಚಾರ್ಯರ ಜ್ಞಾನಕ್ಕೆ ನೊಬೆಲ್ಲು ಸಿಗುತ್ತಿತ್ತೇನೋ! ವೇದಗಳು, ಭಗವದ್ಗೀತೆ, ಉಪನಿಷತ್ತು, ರಾಮಾಯಣ- ಮಹಾಭಾರತದ ಬಗ್ಗೆ ಅತ್ತ ಒಳ್ಳೆಯದೂ ಎಂಬಂತೆ, ಇತ್ತ ವಿರೋಧಿಸುವಂತೆಯೂ ನಟಿಸುತ್ತ, ಬರೆಯುತ್ತ, ಮಾತಾಡುತ್ತ, ಸಾಂದರ್ಭಿಕವಾಗಿಯೂ, ನೈಜ ಬದುಕಿನಲ್ಲಿಯೂ ನಾಟಕವಾಡುತ್ತ ಕೃತಕತೆ ಯನ್ನು ಮೈಗೂಡಿಸಿಕೊಂಡು ಮಾಧ್ಯಮಗಳ ಮುಂದೆ ನಿಜ ಅಸ್ಮಿತೆಯನ್ನು ಮರೆಮಾಚಿ ಮುಖವಾಡವನ್ನು ಧರಿಸಿಕೊಂಡು ಸುಳ್ಳು ಸುಳ್ಳೇ ಮಾತುಗಳನ್ನಾಡುತ್ತ ದೊಡ್ಡವರಾಗಬಹುದಿತ್ತು. ನೇಮು–ಮನ್ನುಗಳಿಸಿ ಇನ್ನಷ್ಟು ಜನಪ್ರಸಿದ್ಧಿಯನ್ನು ಹೊಂದಬಹುದಿತ್ತು.
ಇಲ್ಲದ ಕಂತೆಗಳ ಆತ್ಮಚರಿತ್ರೆಯನ್ನೂ ಬರೆಯದೇ ಹೋದದ್ದು ಆಚಾರ್ಯರು ಮಾಡಿದ ದೊಡ್ಡ ತಪ್ಪು