ಅಂತಾರಾಜ್ಯ ಗಡಿವಿವಾದ ಬಗೆಹರಿಸುವ ಬಗೆ ಹೇಗೆ ?
ಅವಲೋಕನ
ಕಿಶೆನ್‌ ಶಾಸ್ತ್ರಿ
@.
ಇತ್ತೀಚೆಗಷ್ಟೇ ಕರ್ನಾಟಕ ಸರಕಾರ ಮರಾಠಾ ಅಭಿವೃದ್ಧಿ ನಿಗಮವನ್ನು ಉದಾರವಾಗಿ ಘೋಷಿಸಿದೆ. ರಾಷ್ಟ್ರ ನಿರ್ಮಾಣ ಸಾಮರಸ್ಯದ ಪ್ರಕ್ರಿಯೆಯೇ ಒರತು ಗತಕಾಲದ ಗ್ರಹಿಸಿದ ಶ್ರೇಣೀಕೃತ ಶ್ರೇಷ್ಠತೆಯ ಆಧಾರದ ಮೇಲೆ ಅಲ್ಲ. ಆದ್ದರಿಂದ ಇತರ ರಾಜ್ಯಗಳೂ ಈ ಉದಾರ ನೀತಿ ಅನುಸರಿಸಿ, ಪರಸ್ಪರ ವಿಚಾರ ವಿನಿಮಯ ಮಾಡಿ, ಸೌಹಾರ್ದದಿಂದ ಬಾಳಲು ಇದುವೇ ಸುಸಮಯ.
ಅಂತಾರಾಜ್ಯ ವಿವಾದಗಳು ಭಾರತಕ್ಕೆ ಹೊಸದಲ್ಲ. ಆದಾಗ್ಯೂ, ಇದರ ಸ್ವರೂಪ ಕ್ರಮೇಣ, ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ರಾಜಕೀಯ ಲಾಭಗಳತ್ತ ಸಾಗುತ್ತಿದೆ. ಕೆಲವೊಮ್ಮೆ ತಮಿಳುನಾಡಿನ ಹುಸಿ ಗುಂಪುಗಳಿಂದ ಮತ್ತು ಇತ್ತೀಚೆಗೆ, ಮಹಾರಾಷ್ಟ್ರದ ಭಾಷಾಂಧ ಗುಂಪುಗಳಪೂರ್ವ ಮನಃಸ್ಥಿತಿಯ ನಿರ್ಧಾರಗಳಿಂದ ಕರ್ನಾಟಕದ ಪ್ರಗತಿ ಬಲಿಯಾಗುತ್ತಿದೆ.
ಅಂತಾರಾಜ್ಯ ಗಡಿ ಸಮಸ್ಯೆಯನ್ನು ಐತಿಹಾಸಿಕ ದೃಷ್ಟಿಕೋನದಿಂದ ಬಗೆಹರಿಸಲು, 1966ರಲ್ಲಿ ಮಹಾಜನ್ ಆಯೋಗದ ರಚನೆ ಯಾಯಿತು. ಆಯೋಗದ ವರದಿ ಏನು ಹೇಳುತ್ತದೆ ಎಂಬುದನ್ನಿಷ್ಟು ಮೊದಲು ಗಮನಿಸೋಣ. ‘ಈಗ್ಗೆ ಕೆಲ ವರ್ಷಗಳಿಂದ ಮಹಾರಾಷ್ಟ್ರ, ಬೆಳಗಾವಿ ತನ್ನದೆಂದು (ತಮಗೇ ಸೇರಿದ್ದು) ಎನ್ನುವ ಕ್ಯಾತೆ ತೆಗೆದಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದರೂ, ಮಹಾ ರಾಷ್ಟ್ರ ಸಂಸದರು, ವಿಶೇಷವಾಗಿ ಖಜಾನೆ ಪೀಠಗಳಿಂದ, ಬೆಳಗಾವಿ ಕರ್ನಾಟಕ ರಾಜ್ಯದ ಭಾಗವಾಗಿರುವ ತಿದ್ದುಪಡಿಯ ವಿರುದ್ಧ ಮತ ಚಲಾಯಿಸಲಿಲ್ಲ. ಬೆಳಗಾವಿ ಕಾಸ್ಮೋಪಾಲಿಟನ್ ನಗರ.
1920ರಲ್ಲಿ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆದಾಗ ಎನ್.ಸಿ.ಕೇಲ್ಕರ್ ಸೇರಿದಂತೆ ಮಹಾರಾಷ್ಟ್ರದ ಯಾವೊಬ್ಬ ನಾಯಕನೂ ಆ ರಾಜ್ಯದ ಭಾಗವಾಗಬೇಕೆಂದು ಒತ್ತಾಯಿಸಿರಲಿಲ್ಲ. ಭೌಗೋಳಿಕವಾಗಿ, ಕನ್ನಡ ಪ್ರದೇಶಗಳು ಬೆಳಗಾವಿ ನಗರವನ್ನು ಮೂರು ಕಡೆಗಳಲ್ಲಿಸುತ್ತುವರಿದಿವೆ ಮತ್ತು ನಾಲ್ಕನೆಯದರಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಕೆಲವು ಹಳ್ಳಿಗಳು ಅಲ್ಲಲ್ಲಿ ಕಂಡುಬರುತ್ತವೆ. ಇದರಿಂದಾಗಿ, ಮರು ಸಂಘಟನೆಯು ತೀವ್ರ ಸಂಕಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವುದು ಒಳ್ಳೆಯದು. ಬೆಳಗಾವಿ ನಗರದಹಕ್ಕುಗಳ ದಾಖಲೆಯಿಂದ ಬಹುತೇಕ ಜಮೀನು ಕನ್ನಡಿಗರಿಗೆ ಸೇರಿದ್ದು ಕಂಡುಬರುತ್ತದೆ.
ಮಾಮಲದಾರ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿನ ಎಲ್ಲ ಮೂಲ ದಾಖಲೆಗಳು ಕನ್ನಡದಲ್ಲಿವೆ. ಎಲ್ಲ ವಿಚಾರಗಳನ್ನು, ವಿಷಯ ಗಳನ್ನು, ದಾಖಲೆಗಳನ್ನು, ಸಮಗ್ರವಾಗಿ ವಸ್ತುನಿಷ್ಠವಾಗಿ ನಿರ್ಣಯಿಸಿದ ನಂತರ, ನಾನು ಬೆಳಗಾವಿ ನಗರವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಲು ಶಿಫಾರಸು ಮಾಡಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ.’ ಇಂದಿನ ಬೆಳಗಾವಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರಮತ್ತು ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದ ಪರಿಹರಿಸಲು 1966ರಲ್ಲಿ ಭಾರತ ಸರ್ಕಾರವು ಮಹಾಜನ್ ಆಯೋಗ ರಚಿಸಿತು. ಆಯೋಗದ ಶಿಫಾರಸಿಗೆ ಬದ್ಧವಾಗಿರುತ್ತೇವೆ ಎನ್ನುವ ತನ್ನ ಸಾರ್ವಜನಿಕ ಭರವಸೆಯನ್ನು ಮಹಾರಾಷ್ಟ್ರ ಸರಕಾರ ತಿರಸ್ಕರಿಸಿತು.
ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ನಾಯಕತ್ವ ಗಡಿ ಜಿಲ್ಲೆಯ ಸ್ಥಿತಿಯನ್ನು ಅಸ್ಥಿರಗೊಳಿಸಲು ಎಲ್ಲ ತಂತ್ರಗಳನ್ನೂ ಅಳವಡಿಸಿಕೊಂಡು, ವಾಸ್ತವ ಅರ್ಥ ಮಾಡಿಕೊಳ್ಳದೇ, ಬೆಳಗಾವಿ ನಮ್ಮದು ಎಂದು ತಗಾದೆ ಮಾಡಲು ಪ್ರಯತ್ನಿಸುತ್ತಿದೆ. ಈ ವಿವಾದಕ್ಕೆ ಇತ್ತೀಚಿನ ಸೇರ್ಪಡೆ ಕೊಪುರದಲ್ಲಿ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟುಹಾಕಿರುವುದು. ಅದರ ಪ್ರತಿಧ್ವನಿಯಾಗಿ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಪ್ರತಿಮೆಗಳನ್ನು ವಿರೂಪಗೊಳಿಸಲಾಯಿತು. ಈ ಸಂಬಂಧ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನೂ ಮಂಡಿಸಲಾಯಿತು. ಮತ್ತು ಕನ್ನಡಾಭಿಮಾನದ ಸಂಕೇತ ಗಳ ವಿರುದ್ಧ ಇಂಥನಿರಂತರ ಕಿಡಿಗೇಡಿ ಕೃತ್ಯಗಳನ್ನು ಖಂಡಿಸಿ, ಅದನ್ನು ಎದುರಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.
ಕರ್ನಾಟಕದಲ್ಲಿ ಎಲ್ಲ ಪಕ್ಷಗಳೂ ಒಮ್ಮತ ದಿಂದ ಈ ಅಪರಾಧಿ ಕೃತ್ಯ ಖಂಡಿಸಿ ಪ್ರತಿಕ್ರಿಯಿಸಿದವು. ಒಟ್ಟಾರೆ ಮೂಲ ಕೃತ್ಯ ಕನ್ನಡಕ್ಕೆಸೆಗಿದ ಅಪಚಾರ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದರ ಹಿನ್ನೆಲೆಯಲ್ಲಿ, ನಾನು ಮೂರು ಪ್ರಮುಖ ಅಂಶಗಳನ್ನು ಮಂಡಿಸಬೇಕಾಗಿದೆ.ಮೊದಲಿಗೆ ಪ್ರತಿಮೆ ವಿರೂಪಗೊಳಿಸಿದ ತಪ್ಪಿತಸ್ಥರ ವಿರುದ್ಧ ದೇಶದ್ರೋಹ ಕಾನೂನು ಮತ್ತು ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಈ ಪ್ರಕ್ರಿಯೆಯ ಸಮಸ್ಯೆಯೆಂದರೆ ಅದು ವ್ಯಕ್ತಿ ಗಳನ್ನು ಮಾತ್ರ ಗುರಿಯಾಗಿಸುತ್ತದೆ.
ಗಡಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಈ ವಿಧ್ವಂಸಕ ಘಟನೆಗಳ ಹಿಂದೆ ಎಂಇಎಸ್ ಸಂಘಟನೆಯೇ ಕಾರಣ ಎಂದು ಆರೋಪಿಸಲಾಗಿದೆ. ಈ ಘಟಕದ ಸಂಪೂರ್ಣ ಅಸ್ತಿತ್ವವು ಬೆಳಗಾವಿ ಜಿಯನ್ನು ಮಹಾರಾಷ್ಟ್ರದೊಂದಿಗೆ ವಿಶ್ವಾಸಘಾತಕವಾಗಿ ಏಕೀಕರಿಸುವ ವಿಕೃತ ರಾಜಕೀಯತಂತ್ರಗಳನ್ನು ಆಧರಿಸಿದೆ. ನಮ್ಮ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸದಸ್ಯರು ಎಂಇಎಸ್ ಮತ್ತು ಅದರ ಸಂಘಟನಾ ಯಂತ್ರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂದು ಸಂಶಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, 1985ರ ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆಗೆ ತಿದ್ದುಪಡಿಗಳನ್ನು ಮಾಡುವುದು ವಿವೇಕಯುತ ಆಲೋಚನೆ. ಗೂಂಡಾ ಕಾಯಿದೆಯಲ್ಲಿ, ಧ್ವಜವು ಕನ್ನಡ ಮತ್ತು ಕರ್ನಾಟಕವನ್ನು ಸಂಕೇತಿಸುವುದರಿಂದ ಕೆಲವು ತಿದ್ದುಪಡಿಗಳನ್ನು ಮಾಡಿ ಭಾಷೆಯನ್ನು ಮಾನ ದಂಡವಾಗಿ ಸೇರಿಸಬೇಕು.
ಅದರಲ್ಲಿ ಕನ್ನಡ ಸಮಾಜ ಮತ್ತು ಚಿಹ್ನೆಗಳ ವಿರುದ್ಧ ಅಪರಾಧಗಳನ್ನು ಮಾಡುವ ವಿಭಾಗಗಳನ್ನು ಸ್ಪಷ್ಟವಾಗಿ ಸೇರಿಸಬೇಕು. ಆಗಪುನರಾವರ್ತಿತ ಅಪರಾಧಿಗಳು ಮತ್ತು ಅವರ ಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ () ಶೈಲಿಯಲ್ಲಿ ನಿಷೇಽಸಬಹುದು. ಗೂಂಡಾ ಕಾಯಿದೆಯಡಿ, ಭಾಷೆಯನ್ನು ಮಾನದಂಡವಾಗಿ ಸೇರಿಸುವ ಮೂಲಕ, ಕರ್ನಾಟಕ ರಾಜ್ಯ ದೊಳಗೆ ನಿಯಮಿತ ಹಿಂಸಾತ್ಮಕ ಕೃತ್ಯಗಳನ್ನು ತಡೆಯಬಹುದು. ಅದಕ್ಕೆ ಸಮಿತಿಯನ್ನು ನೇಮಿಸಬಹುದು ಅಥವಾ ಕರ್ನಾಟಕದ ಕಾನೂನು ಆಯೋಗವು ತಿದ್ದುಪಡಿಗಳ ಕಾನೂನುಬದ್ಧತೆಯನ್ನು ಪರಿಶೀಲಿಸಬಹುದು.
ಎರಡನೆಯದಾಗಿ, ಮೇಲಿನವು ರಾಜ್ಯದೊಳಗಿನ ದಾಳಿ ಸುಧಾರಿಸಲು ಸಹಾಯ ಮಾಡಬಹುದು. ಆದರೆ ರಾಜ್ಯದ ಹೊರಗೆ ನಡೆದ ಬೆಂಕಿ ಹಚ್ಚುವ ಕೃತ್ಯಗಳ ಬಗ್ಗೆ ಏನು? ವಿಧಾನಸಭೆಯ ಸದಸ್ಯ ಪಾಂಡಪ್ಪ ರಾಜೀವ್, ಅತ್ಯುತ್ತಮ ಸಲಹೆ ನೀಡಿದರು. ಅವರು ಮುಖ್ಯವಾಗಿಅಂತಾರಾಜ್ಯ ಅಪರಾಧಿಗಳು ಮತ್ತು ಗ್ಯಾಂಗ್‌ಗಳ ಅಪರಾಧಗಳನ್ನು ಪರಿಹರಿಸಲು ರಚಿಸಲಾದ ಮೋಡಸ್ ಆಪರೇಂಡಿ ಬ್ಯೂರೋ () ಅನ್ನು ಬಳಸಲು ಶಿಫಾರಸು ಮಾಡಿದರು.  ತಪ್ಪಿತಸ್ಥರೆಂದು ಕಂಡುಬಂದರೆ, ಕರ್ನಾಟಕ ಸರ್ಕಾರವು ಅದನ್ನು ಗೃಹವ್ಯವಹಾರಗಳ ಸಚಿವಾಲಯದ () ಅಧೀನದಲ್ಲಿರುವ    ಗೆ ಸೇರಿಸಲು ಶ್ರಮಿಸಬೇಕು. ಆ ಮೂಲಕ ಮಹಾರಾಷ್ಟ್ರ ಸರಕಾರ ಈ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತದೆ. ಹರಿಯಾಣ ಮತ್ತು ಪಂಜಾಬ್ ನಡುವೆ ಇದೇ ರೀತಿಯ ಒಪ್ಪಂದವಿದೆ. ಇದಕ್ಕೆ ಒಪ್ಪಿಗೆ ನೀಡುವ ಮೂಲಕ ಮಹಾರಾಷ್ಟ್ರ ಕರ್ನಾಟಕದೊಂದಿಗೆ ವೈಷಮ್ಯ ಬಿಟ್ಟು ಸದ್ಭಾವನೆಯಿಂದ ವ್ಯವಹರಿಸಬಹುದು.
ಮೂರನೆಯದಾಗಿ, ಕರ್ನಾಟಕದ ಧ್ವಜವನ್ನು ಭಾರತದಾದ್ಯಂತ ಅಧಿಕೃತವಾಗಿ ಗುರುತಿಸಿದ್ದರೆ ಇವೆಲ್ಲವನ್ನೂ ನಿಷ್ಠುರವಾಗಿ ಎದುರಿಸ ಬಹುದಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಕೆಲವು ದಶಕಗಳಿಂದ ಈ ಬೇಡಿಕೆಗೆ ಒತ್ತಡ ಹಾಕುತ್ತಿದೆ. 2018 ರಲ್ಲಿ, ಸಿದ್ದ ರಾಮಯ್ಯ ಸರಕಾರ, ಕರ್ನಾಟಕ ಧ್ವಜವನ್ನು ಲಾಂಛನಗಳು ಮತ್ತು ಹೆಸರುಗಳು (ದುರುಪಯೋಗ ತಡೆಗಟ್ಟುವಿಕೆ) ಕಾಯಿದೆಯಡಿ 1950ರ ವೇಳಾಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಸಂಬಂಧಿಸಿದಂತೆ, ಈ ಇಡೀ ಕಸರತ್ತು ಎರಡು ಪ್ರಮುಖ ಪಕ್ಷಗಳ ನಡುವೆ ಗದ್ದಲವನ್ನುಂಟು ಮಾಡಿತ್ತು.
ಆಗಸ್ಟ್ 2019ರ ವಿಧಾನಸಭಾ ಚುನಾವಣೆ ಬೆನ್ನ ಬಂದ ಕಾರಣ, ದುರದೃಷ್ಟವಶಾತ್, ಸರಕಾರ ಈ ಪ್ರಸ್ತಾವನೆ ಕೈಬಿಟ್ಟಿತು. ನಮ್ಮ ರಾಜ್ಯದ ಧ್ವಜಕ್ಕೆ ಆದ ಅವಮಾನ ಪರಿಗಣಿಸಿ, ಈಗ ಈ ಸೂಕ್ಷ್ಮಭಾವನೆಗಳ ಆಧಾರದ ಮೇಲೆ ಎಲ್ಲರೂ ಪಕ್ಷಾತೀತರಾಗಿ, ನಮ್ಮ ನಾಡು ಎಂಬ ಭಾವನೆಯಿಂದ, ಧ್ವಜದ ವಿಚಾರದಲ್ಲಿ ವಿಧಾನಸಭೆಯಲ್ಲಿ ಈ ಕಾಯಿದೆಗೆ ಅಧಿಕೃತ ಸಮ್ಮತಿ ನೀಡಲೇಬೇಕಿರುವ ಸಮಯ ಬಂದಂತೆ ಕಾಣುತ್ತಿದೆ. ಆಗ, ಲಾಂಛನಗಳು ಮತ್ತು ಹೆಸರುಗಳ ಕಾಯಿದೆಯ ಆಧಾರದ ಮೇಲೆ ದೇಶದಾದ್ಯಂತ ಕನ್ನಡ ಧ್ವಜಕ್ಕೆ ಅವಮಾನ ಮಾಡುವುದು, ಸುಡುವುದು ಅಪರಾಧ ಕೃತ್ಯವೆಂದು ಪರಿಗಣಿಸಲ್ಪಡುತ್ತದೆ.
ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಗಡಿ ರಾಜ್ಯಗಳಿಂದ ಬಂದ ವಲಸಿಗರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿರ್ವಿವಾದದ ದಾಖಲೆ ಹೊಂದಿದೆ. ಕನ್ನಡಿಗರ ಈ ಉದಾರ ನೀತಿ ಮತ್ತು ಕನ್ನಡ ಸಂಪ್ರದಾಯವಾದ ದೊಂದಿಗೆ ಸೇರಿಕೊಂಡು ಬೆಂಗಳೂರು ಮತ್ತುಕರ್ನಾಟಕದ ಉಳಿದ ಭಾಗಗಳು, ಅಗಾಧ ಬೆಳವಣಿಗೆಯತ್ತ ಮುನ್ನಡೆದಿವೆ. ಕನ್ನಡ ಸಮಾಜದ ಈ ಅಂಶವನ್ನು ಸಮರ್ಥಿಸದಿದ್ದರೆ, ಗುರುತಿಸಿ ಆಚರಿಸದಿದ್ದರೆ, ಅದು ಬಲವಾದ ಅಸಮಾಧಾನಕ್ಕೆ ದಾರಿ ಮಾಡಿಕೊಡುತ್ತದೆ.
ಈಗಾಗಲೇ ಈ ಬದಲಾವಣೆಯ ಗಾಳಿ ಬೀಸುವುದನ್ನು ನಾವು ಕಾಣಬಹುದು. ಈ ಗಾಳಿಯು ಚಂಡಮಾರುತವಾಗಿ ಬದಲಾಗುವ ಮೊದಲು, ಕೆಲವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು.
(ಲೇಖಕರು ಲಂಡನ್‌ನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಅರ್ಥಶಾಸ್ತ್ರ ಸಂಶೋಧನಾ ವಿದ್ಯಾರ್ಥಿ)