ಬಿಟ್ಹಾಕಿ: ಅವಮಾನಗಳ ನಡುವೆಯೇ ಬೆಳೆದು ತೋರಿಸಿ
ಪರಿಶ್ರಮ
ಪ್ರದೀಪ್‌ ಈಶ್ವರ್‌
@.
ಮೌನದ ರಸ್ತೆಯಲ್ಲಿ ನಡೆದಾಗಲೇ, ಘರ್ಜನೆಯ ಸಾಮ್ರಾಜ್ಯ ಕಟ್ಟಲು ಸಾಧ್ಯ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಮುಂದೊಂದು ದಿನ ಫಲ ಕೊಡಲೇಬೇಕು; ಕೊಟ್ಟೆಕೊಡುತ್ತದೆ. ಸಹಿಸಲಾಗದಷ್ಟು ಅವಮಾನವಾದರೂ, ಹೇಳಿಕೊಳ್ಳಲಾಗದಷ್ಟು ನೋವು ಆವರಿಸಿದರೂ ಬಿ ಕೂಲ.
ಆತ್ಮವಿಶ್ವಾಸ ಹೆಜ್ಜೆ ಇಟ್ಟರೆ ಅಗ್ನಿಪರ್ವತವೂ ಆರಿಹೋಗುತ್ತದೆ. ಹಿಮಾಲಯವೂ ನಿಮ್ಮ ಮುಂದೆ ತಲೆಬಾಗುತ್ತದೆ. ಸುನಾಮಿಯೂ ಸದ್ದಿಲ್ಲದೇ ಹಿಂದೆ ಸರಿಯುತ್ತದೆ. ಜಗತ್ತು ನಿಮ್ಮನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವ ತಾಕತ್ತು ಆತ್ಮವಿಶ್ವಾಸಕ್ಕಿದೆ. ಪ್ರಪಂಚಕ್ಕೆ ನೀವೊಂದು ಪ್ರಶ್ನೆಯಾಗಿ ಉಳಿದರೂ ನಿಮಗೆ ನೀವೇ ಉತ್ತರವಾಗಲು ಆತ್ಮವಿಶ್ವಾಸ ಮುಖ್ಯ.
ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಲು ಹೊರಟ ವಿದ್ಯಾರ್ಥಿ, ಪ್ರೀತಿಯಲ್ಲಿ ಗೆಲ್ಲಲ್ಲು ಹೊರಟ ಯುವಕ, ದಾಂಪತ್ಯದಲ್ಲಿ ಆದರ್ಶವಾಗಿ ಉಳಿಯಲು ಬಯಸುವ ದಂಪತಿ, ಹೊಸ ವ್ಯಾಪಾರದಲ್ಲಿ ಲಕ್ಷ್ಮಿಯನ್ನ ಒಲಿಸಿಕೊಳ್ಳಲು ಬಯಸುವ ಉದ್ಯಮಿ, ಉದ್ಯೋಗದಲ್ಲಿ ಬಾಸ್‌ನ ವಿಶ್ವಾಸಗಳಿಸಲು ಪ್ರಯತ್ನಿಸುವ ಉದ್ಯೋಗಿ… ಹೀಗೆ ಎಲ್ಲರಲ್ಲೂ ಆತ್ಮ ವಿಶ್ವಾಸ ಅತಿಮುಖ್ಯ.
ಆದರ್ಶವಾಗಿ ಬದುಕಲು ಆತ್ಮವಿಶ್ವಾಸ ಮಾತ್ರವಲ್ಲ, ಅವಮಾನಗಳ ನಡುವೆ ಬದುಕುವ ಕಲೆ ಗೊತ್ತಿರಬೇಕು. ಚಿಕ್ಕ ಅವಮಾನಕ್ಕೆ ದೊಡ್ಡ ಗೆಲುವನ್ನ ಬಲಿಕೊಡುವ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮ್ರಾಜ್ಯಗಳನ್ನೇ ಕಟ್ಟಿ ಬೆಳೆಸಿ ಮಿಂಚಿದ ಅಧಿಪತಿಗಳನ್ನೇ ಅವಮಾನಿಸಿದ ಸಮಾಜವಿದು. ಸಮಯ ಸಿಕ್ಕರೆ ನಾಲ್ಕು ಕಲ್ಲುಗಳನ್ನ ಹೆಚ್ಚಾಗಿ ಎಸೆದು ಕನಸುಗಳನ್ನು ಸಮಾಧಿ ಮಾಡಿಬಿಡುತ್ತಾರೆ.
ಇಷ್ಟಕ್ಕೂ ಅವಮಾನವೆಂದರೇನು? ನಿಮ್ಮ ಸಾಮರ್ಥ್ಯವನ್ನು ಶಂಕಿಸುವುದು. ನೀವು ನಿಷ್ಪ್ರಯೊಜಕರು ಎಂದು ಹೇಳಿಬಿಡುವುದು. ನಿಮ್ಮಿಂದ ಸಾಧ್ಯವೇ ಇಲ್ಲವೆಂದು ವಾದಿಸುವುದು. ಯಶಸ್ಸು ಗಳಿಸಲು ಹೊರಟ ಪ್ರತಿಯೊ ಬ್ಬರು ಸ್ಪಷ್ಟವಾಗಿ ನೆನಪಿಡಿ, ನಿಮ್ಮ ಪ್ರಯತ್ನದಲ್ಲಿ ಪ್ರಾಣಿಕತೆಯಿದ್ದರೆ, ಸಂಕಲ್ಪಶಕ್ತಿ ನಿಯತ್ತಾಗಿದ್ದರೆ, ಗುರಿಯ ಬಗ್ಗೆ  ಇಟ್ಟರೇ, ಪಂಚಭೂತಗಳೂ ನಿಮ್ಮನ್ನ ನಿಲ್ಲಿಸಲಾರವು.
ಅವಮಾನಗಳ ನಡುವೆ ಬೆಳೆದು ತೋರಿಸುವುದು ಎಂದರೆ ಸೋತು ಸುಣ್ಣವಾಗುವುದಲ್ಲ. ಸೋತ ನಂತರ ಯಶಸ್ಸಿನ ಸಾಮ್ರಾಜ್ಯವನ್ನು ಕಟ್ಟುವುದು. ಅವಮಾನಗಳು ಪ್ರತಿಯೊಬ್ಬರಿಗೂ ಸಹಜ. ನೀವು ಸುಮ್ಮನಿದ್ದರೆ ಮುಸಂಡಿ ಅತಿ ಅಂತಾರೆ. ಆತ್ಮವಿಶ್ವಾಸದಿಂದ ಕಂಡರೆ ಅತಿಯಾದ ಆತ್ಮವಿಶ್ವಾಸ ಅಂತಾರೆ. ನಿಮ್ಮ ಪಾಡಿಗೆ ನೀವು ಇದ್ದರೆ ಸ್ವಾರ್ಥಿ ಅಂತಾರೆ. ನಾಲ್ಕು ಜನಕ್ಕೆ ಕೈ ಹಿಡಿದರೆ ಯಾರ ತಲೆ ಮೇಲೆ ಕಕಿ ದುಡಿದನೋ ಎಂದು ವಾದಿಸುತ್ತಾರೆ.ಜನರ ಅಭಿಪ್ರಾಯಕ್ಕೆ, ಭಿನ್ನಾಭಿಪ್ರಾಯಕ್ಕೆ ಸಾವಿರ ಕಾರಣಗಳಿರುತ್ತವೆ. ಅವಮಾನಗಳಿಗೆ ಅಂಜಬೇಡಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.
ಅಂದುಕೊಂಡಿದ್ದನ್ನ ಸಾಧಿಸಲು ಅವಮಾನಗಳನ್ನ ದಾಟಲೇಬೇಕು. ಅವಮಾನಿಸಿದವನು ಬೀದಿಯ ಇರ್ತಾನೆ, ಸಹಿಸಿಕೊಂಡವನು ಸೋಲನ್ನೇ ಸೋಲಿಸುತ್ತಾನೆ. ಈ ಜನರೇಷನ್ನಿನ ಅತೀ ದೊಡ್ಡ ಸಮಸ್ಯೆಯೇ ಇದು. ಯಾರು ಏನೆಂದುಕೊಳ್ತಾರೋ ಎಂಬ ಮನಃಸ್ಥಿತಿಯಿಂದ ಹೊರ ಬರಲಾಗದೇ ನರಳುತ್ತಿರುತ್ತಾರೆ. ಚಿಕ್ಕ ಅವಮಾನಗಳಿಗೂ ಕುಗ್ಗಿ ಹೋಗುತ್ತಾರೆ. ಬದುಕೇ ಮುಗಿದು ಹೋಯಿತು ಎಂಬ ಅಭದ್ರತೆಗೆ ಸಿಲುಕಿ ಬಿಡುತ್ತಾರೆ.
ಗೆಲುವಿನ ಹೊಸ್ತಿಲಲ್ಲಿರುವ ಎಷ್ಟೋ ಮಂದಿ ಅವರಿವರ ಅಭಿಪ್ರಾಯಕ್ಕೆ ಕಿವಿಕೊಟ್ಟು ಬೀದಿಗೆ ಬಿದ್ದಿರ್ತಾರೆ. ಹಾದಿ ತಪ್ಪಿದ ಯೋಚನೆಗಳಿಂದ ಬಾಳಿನ ಹಾದಿಯನ್ನೇ ಕೆಡವಿ ಕೊಳ್ತಾರೆ.  , ಗೆಲುವಿಗೆ ಫಸ್ಟ್ ಫಾರ್ಮುಲಾ ಪರಿಶ್ರಮವಲ್ಲ,   ಅಂತೂ ಅಲ್ಲ, ಯಾವನು ಏನು ಅಂದು ಕೊಳ್ತಾನೋ ಎಂಬ ರೋಗ ವಾಸಿಯಾಗಿ ಅಂತಹ ಮನಃಸ್ಥಿತಿಯಿಂದ ಹೊರಬರುವುದು. ಮಾಡುವ ಕೆಲಸದಲ್ಲಿ ಏಕಾಗ್ರತೆ ಕುದರಬೇಕಾದರೆ, ಶ್ರದ್ಧೆಜತೆಯಾಗಬೇಕೆಂದರೆ, ಹೆದರಿಕೆಗೆ ಹೆದರಿಕೆ ಹುಟ್ಟಿಸುವಷ್ಟು ಧೈರ್ಯ ನಿಮ್ಮದಾಗಬೇಕಾದರೆ, ಅವಮಾನಗಳ ನಡುವೆಯೂ ಅದ್ಭುತಗಳು ಸಾಧಿಸ ಬೇಕಾದರೆ ಯಾರ ವಿಮರ್ಶೆಗೂ ಕಿವಿಕೊಡಬೇಡಿ. ಬೊಗಳುವ ನಾಯಿಗಳು ಬೊಗಳಲಿ ’ .
ಬೈದವನು ಬೀದಿಯ ಬಿದ್ದಿರುತ್ತಾನೆ. ಸಹಿಸಿಕೊಂಡವನು ಸಾಮ್ರಾಜ್ಯವನ್ನೇ ಕಟ್ಟುತ್ತಾನೆ. ಮೌನವೆಂಬ ರಸ್ತೆಯಲ್ಲಿ ನಡೆದಾಗಲೇ, ಘರ್ಜನೆಯ ಸಾಮ್ರಾಜ್ಯ ಕಟ್ಟಲು ಸಾಧ್ಯ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಮುಂದೊಂದು ದಿನ ಫಲ ಕೊಡಲೇಬೇಕು; ಕೊಟ್ಟೆಕೊಡುತ್ತದೆ. ಸಹಿಸಲಾಗದಷ್ಟುಅವಮಾನವಾದರೂ, ಹೇಳಿಕೊಳ್ಳಲಾಗದಷ್ಟು ನೋವು ಆವರಿಸಿದರೂ ಬಿ ಕೂಲ. ಒಂದು ದಿನ ಅಂತ ಬರುತ್ತೆ, ನಿಮ್ಮ ಯಶಸ್ಸು ನೋಡಿ ನಿನ್ನ ಶತ್ರುಗಳು ನಿzಗೆಡುವ ದಿನ. ಆ ದಿನದವರೆಗೂ ಸಹನೆಯಿಂದ ವರ್ತಿಸಬೇಕು. ಯಶಸ್ಸೆಂದರೆ ಪ್ರತಿದಿನ ಎಷ್ಟುಬಾರಿ ಉಸಿರಾಡುತ್ತೀಯ ಅಂತಲ್ಲ, ನಿನ್ನ ಯಶಸ್ಸುನೋಡಿ ಎಷ್ಟು ಮಂದಿಗೆ ಉಸಿರು ನಿಲ್ಲುತ್ತದೆ ಎನ್ನುವುದೇ ಯಶಸ್ಸಿಗೆ ನಾವು ಕೊಡುವ ಗೌರವ.
ಅದು ರಾಜಸ್ಥಾನದ ಸದುಲ್ಪೂರ್ ಎಂಬ ಸಣ್ಣ ಹಳ್ಳಿ.1950. ಆ ಚಿಕ್ಕ ಹಳ್ಳಿಯಲ್ಲಿ ಜಗತ್ತೇ ಮೆಚ್ಚುವಂತಹ ವ್ಯಕ್ತಿ ಹುಟ್ಟುತ್ತಾನೆಂದು ಯಾರೂ ಊಹಿಸಿ ರಲಿಲ್ಲ. ಕಿತ್ತು ತಿನ್ನುವ ಬಡತನ, ಮಣ್ಣಿನ ನೆಲದ ಮೇಲೆ ಬದುಕಿನ ಬಂಡಿ ಸಾಗಿಸುತ್ತಿದ್ದ ಆ ವ್ಯಕ್ತಿಯ ಬಾಳಲ್ಲಿ ಧೈರ್ಯವೆಂಬುವುದು ಅದ್ಭುತಗಳನ್ನ ಸೃಷ್ಟಿಸಿದೆ. ಓದಿದ್ದು ಹಿಂದಿ ಮಾಧ್ಯಮದ ಶಾಲೆಯಲ್ಲಿ. ನಂತರ ಕೋಲ್ಕತಾದ ಕ್ಸೇವಿಯರ್ ಕಾಲೇಜಿನಲ್ಲಿ ಬಿ ಕಾಂ ತರಗತಿಗೆ ಪ್ರವೇಶ ಪಡೆದು ಶೈಕ್ಷಣಿಕ ವಾಗಿಯೂ ಯಶಸ್ಸನ್ನ ಕಂಡ. ಬದುಕಿನಲ್ಲಿ ಏನೋ ಕಳೆದುಕೊಳ್ಳುತ್ತಿದ್ದೀನಿ ಎಂಬ ತುಡಿತ ಅವನನ್ನ ಪದೇ ಪದೇ ಕಾಡುತ್ತಿತ್ತು. ಡಿಗ್ರಿ ಸರ್ಟಿಫಿಕೇಟ್ ಜತೆ ಸಂಬಂಧವಿಲ್ಲದೆ ಹೊಸ ಯೋಚನೆಯನ್ನು ಮಾಡಿದ.
ತಂದೆ ನಡೆಸುತ್ತಿದ್ದ ಉಕ್ಕಿನ ವ್ಯಾಪಾರಕ್ಕೆ ಕೈ ಹಾಕಿದ. ಮುಚ್ಚಿ ಹೋಗಿದ್ದ ಕಬ್ಬಿಣ್ಣ ಕಾರ್ಖಾನೆಗಳನ್ನ ಕಡಿಮೆ ದರಕ್ಕೆ ಕೊಳ್ಳತೊಡಗಿದ. ಅಸಾಧ್ಯವಾದ ಸಾಧನೆಯನ್ನು ಮಾಡಿ, ಯಾವುದು ಸಾಧ್ಯವಿಲ್ಲವೆಂದು ಹೇಳಿದ್ದ ಜನರ ಬಾಯಿಯ ಮೇಲೇ ಬೆರಳಿಡುವಂತೆ ಮಾಡಿದ್ದ. ಸ್ಥಳೀಯವಾಗಿ ಪ್ರಾರಂಭವಾದ ಆತನ ವ್ಯಾಪಾರ ಮೆಲ್ಲಗೆ ಇಂಡೋನೇಷ್ಯಾ ತಲುಪಿತ್ತು. ಅಲ್ಲಿಂದ ಇಂಗ್ಲೆಂಡನ್ನು ಪ್ರವೇಶಿಸಿತ್ತು. ಇವತ್ತು ವಿಶ್ವದ14ದೇಶದಲ್ಲಿ ಆತನ ಕಂಪನಿಗಳಿವೆ.1.50ಲಕ್ಷ ಕೆಲಸಗಾರರಿಗೆ ಕೆಲಸ ಕೊಟ್ಟಿದ್ದಾರೆ ಅವರು! ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.ಅವತ್ತು ರಾಜಸ್ಥಾನದ ಹಳ್ಳಿಯಿಂದ ಪಯಣ ಬೆಳೆಸಿ ಇವತ್ತು ರಾಜನಾಗಿ ಮಿಂಚುತ್ತಿರುವ ಅವರ ಹೆಸರು ಲಕ್ಷ್ಮೀನಿವಾಸ್ ಮಿತ್ತಲ್. ಇಂಗ್ಲೆಂಡಿನ ಅತಿ ಶ್ರೀಮಂತ ವ್ಯಕ್ತಿ ! ಆತನ ಮನೆಯ ಮೌಲ್ಯವೇ ಸುಮಾರು ೬೦೦ ಕೋಟಿ. ತಮ್ಮ ಮಗಳ ಮದುವೆಗೆ ೨೪೦ ಕೋಟಿ ರೂ ವೆಚ್ಚ ಮಾಡಿದ.
ಲಕ್ಷ್ಮೀನಿವಾಸ್ ಮಿತ್ತಲ್ ಮೂಲತಃ ಭಾರತೀಯರೆನ್ನುವುದು ನಮ್ಮ ಹಿರಿಮೆ. ‘ನಾನು ಹುಟ್ಟಿದ್ದು ಹಳ್ಳಿಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದಿರುವುದು, ಮನೆ ಕಡೆ ಕಷ್ಟ ಇದೆ, ನಾವು ಶ್ರೀಮಂತರಲ್ಲ, ಬಡತನ ನಮ್ಮನ್ನ ಬಿಟ್ಟು ಹೋಗುತ್ತಿಲ್ಲ…’ ಎಂಬಿತ್ಯಾದಿ ಪ್ರತಿ ದಿನ ಕೊರಗುವ ಪ್ರತಿಯೊಬ್ಬರೂ ಒಮ್ಮೆಧೈರ್ಯವಾಗಿ ಯೋಚಿಸಿದರೆ ಎಲ್ಲಿಗೆ ಬೇಕಾದರೂ ತಲುಪಬಹುದು ಎನ್ನುವುದಕ್ಕೆ ಈ ಲಕ್ಷ್ಮೀ ಪುತ್ರನೇ ಸಾಕ್ಷಿ.
ಬೆಂಗಳೂರಿನ ಬಿಟಿಎಸ್‌ನಲ್ಲಿ ಕಂಡಕ್ಟರ್ ಆಗಿದ್ದ ಹುಡುಗನಿಗೆ ಬದುಕಿನ ಬಗ್ಗೆ ಅಭದ್ರತೆಗೆ ಭಾವವಿತ್ತು. ಎಲ್ಲರಿಗೂ ಕಾಡುವಂತೆ ಭಯ ಆತನನ್ನ ಬೆಂಬಿ ಡದೆ ಕಾಡಿತ್ತು. ಅದೇನಾಯಿತೋ ಏನೋ, ಒಂದು ದಿನ ಮದ್ರಾಸ್ ನಗರದ ಕಡೆ ನಡೆದೇಬಿಟ್ಟ. ಪ್ರಾರಂಭದ ದಿನಗಳು ಪ್ರಾಣ ಹೋಗುವಷ್ಟು ದರಿದ್ರ ವಾಗಿತ್ತು. ಒಂದೊತ್ತಿಗಿದ್ರೆ, ಇನ್ನೊಂದೊತ್ತಿಗಿಲ್ಲ. ಮದ್ರಾಸಿನ ರಸ್ತೆಗಳಿಗೆ ಆ ವ್ಯಕ್ತಿಯ ಕಷ್ಟ ಗೊತ್ತು. ಆ ವ್ಯಕ್ತಿ ಅನುಭವಿಸಿದ ಯಾತನೆ ಗೊತ್ತು. ನಿದ್ದೆ ಕೆಟ್ಟ ರಾತ್ರಿಗಳ ನೀರವ ಗೊತ್ತು. ಯಾರಿಗೂ ಹೇಳಿಕೊಳ್ಳದೇ ನರಳಿದ ಕ್ಷಣಗಳು ಗೊತ್ತು. ಒಂದು ದಿನ ಆತನಿಗೆ ಬೆಳ್ಳಿ ಪರದೆಯಲ್ಲಿ ಎಂಟ್ರಿ ಸಿಕ್ತು.
ಕಾಲೆಳೆಯುವವರು ಸಂಖ್ಯೆ ಪ್ರಾರಂಭದಲ್ಲಿ ತುಂಬಾ ಟ್ರಾಫಿಕ್ ಜಾಮ್‌ನಂತೆ ಇತ್ತು. ನಂತರ ದಿನಗಳು ಕಳೆದಂತೆ ಭಯ ಬೀಳದೆ ಧೈರ್ಯವಾಗಿ ಮತ್ತಷ್ಟುಧೈರ್ಯವಾಗಿ ಬೆಳ್ಳಿ ಪರದೆಯನ್ನ ಆಕ್ರಮಿಸಿಕೊಂಡ. ಆತನನ್ನ ವಿಮರ್ಶಿಸಿದ ವಿಮರ್ಶಕರು ಇಂದು ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಬೀದಿಬದಿಯ ಇzರೆ. ಆದರೆ ಆತ ಇವತ್ತು ಸ್ಟಾರ್ ಅಲಿಯಾಸ್ ಸೂಪರ್ ಸ್ಟಾರ್ ರಜನಿಕಾಂತ್. ಚಿತ್ರ ರಂಗದ ಪ್ರೇಮಿಗಳ ಆರಾಧ್ಯ ಧೈವ, ಮಾನವೀಯತೆಗೆಮತ್ತೊಂದು ಹೆಸರು ರಜನಿಕಾಂತ್. ಇಂಥ ನೂರಾರು ಜ್ವಲಂತ ಸಾಕ್ಷಿಗಳು ನಮ್ಮ ಮುಂದಿದ್ದಾರೆ. ಜಸ್ಟ್ ಗೋ ಅಹೆಡ್.