ಓಮೈಕ್ರಾನ್‌ಗೆ ಏಡ್ಸ್ ಕಾರಣವೇ ?
ವೈದ್ಯ ವೈವಿಧ್ಯ
ಡಾ.ಎಚ್.ಎಸ್‌.ಮೋಹನ್
@.
ಕರೋನಾ ವೈರಸ್‌ನ ಬೇರೆ ಯಾವ ಪ್ರಭೇದಗಳೂ ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟಮೊದಲು ಕಂಡುಬಂದದ್ದಿಲ್ಲ, ಆದರೆ ಒಮೈಕ್ರಾನ್ ಒಮ್ಮೆಲೇ ಈಗ ಅಲ್ಲಿ ಗೋಚರವಾಗಿದ್ದರಿಂದ ಏಡ್ಸ್ ಕಾಯಿಲೆಯಿದ್ದು ಪ್ರತಿರೋಧ ಶಕ್ತಿ ಕುಂಠಿತಗೊಂಡ ವ್ಯಕ್ತಿಗಳ ಒಮೈಕ್ರಾನ್ ಉಗಮ ವಾಗಿರಬೇಕೆಂದು ಊಹೆ ಅಷ್ಟೇ.
ಜಗತ್ತಿನಲ್ಲಿ ಒಮೈಕ್ರಾನ್ ವೇಗವಾಗಿ ಹರಡುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಒಮೈಕ್ರಾನ್ ಪ್ರಭೇದವನ್ನು ಹೊಸದಾಗಿ ಕಂಡು ಹಿಡಿದಿರುವ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳೇ ಮತ್ತೊಂದು ಹೊಸ ವಿಷಯದ ಮೇಲೂ ಬೆಳಕು ಚೆಲ್ಲುತ್ತಿದ್ದಾರೆ. ಕರೋನಾ ವೈರಸ್ ನಪ್ರಭೇದಗಳು ಹೊಸದಾಗಿ ಹುಟ್ಟಲು ಏನು ಕಾರಣ? ಇದು ಈವರೆಗೆ ವೈದ್ಯ ವಿಜ್ಞಾನಿಗಳಿಗೆ ಉತ್ತರಿಸಲು ಸಾಧ್ಯವಾಗದ ಪ್ರಶ್ನೆ.
ಎಚ್‌ಐ ವಿ ಪಾಸಿಟಿವ್ ಇದ್ದೂ ಅಂಥ ವ್ಯಕ್ತಿಗಳಲ್ಲಿ ಯಾರು ಯಾವುದೋ ಕಾರಣಗಳಿಂದ ಅದರ ಚಿಕಿತ್ಸೆ ತೆಗೆದುಕೊಳ್ಳುತ್ತಿಲ್ಲವೋ ಅಂತಹವ ರಲ್ಲಿ ಕರೋನಾ ವೈರಸ್ ಹೆಚ್ಚು ದಿನಗಳು ಇರುತ್ತವೆ – ಎಂಬುದನ್ನು ಜಗತ್ತಿನ ಹಲವಾರು ಸಂಶೋಧಕರು ಈಗಾಗಲೇ ಕಂಡುಕೊಂಡಿ ದ್ದಾರೆ. ಸಾಮಾನ್ಯವಾಗಿ ಹೊರಗಿನ ವೈರಸ್ ದೇಹವನ್ನು ಆಕ್ರಮಿಸಿ ದಾಗ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ಸುವ್ಯವಸ್ಥಿತ ವಾಗಿದ್ದರೆ ಅದನ್ನು ಹೊರ ಹಾಕುತ್ತದೆ.
ದೇಹದ ಪ್ರತಿರೋಧ ಶಕ್ತಿ ಯಾರಲ್ಲಿ ಕುಂಠಿತವಾಗಿರುತ್ತದೆಯೋ ಅಂತಹವರಲ್ಲಿ ವೈರಸ್ ಬೀಡುಬಿಡುತ್ತದೆ. ಹಾಗೆಯೇ ಸುಮ್ಮನೇ ಕುಳಿತು ರುವುದಿಲ್ಲ, ವೃದ್ದಿಗೊಳ್ಳು ತ್ತದೆ. ವೃದ್ಧಿಗೊಳ್ಳುವಾಗ ಮ್ಯುಟೇಷನ್ ಹೊಂದುತ್ತದೆ. ಹಾಗಾಗಿ ದೇಹದ ಪ್ರತಿರೋಧ ಶಕ್ತಿ ತೀವ್ರ ಕುಂಠಿತ ಗೊಂಡ ವ್ಯಕ್ತಿಗಳಲ್ಲಿ ವೈರಸ್ ಹಲವಾರು ತಿಂಗಳುಗಳು ಇರುತ್ತವೆ- ಎಂದು ದಕ್ಷಿಣ ಆಫ್ರಿಕಾದ ಡೆಸ್ಮಂಡ್ ಟುಟು ಎಚ್‌ಐವಿ ಫೌಂಡೇಶನ್‌ನ ಮುಖ್ಯಸ್ಥರಾದ ಪ್ರೊಫೆಸರ್ ಲಿಂಡಾ-ಗೈಲ್ ಬೆಕ್ಕರ್ ಅಭಿಪ್ರಾಯ ಪಡುತ್ತಾರೆ. ಆದರೆ ಏಡ್ಸ್ ಕಾಯಿಲೆ ಇದ್ದೂ ಯಾರು ಆಂಟಿರಿಟ್ರೋ ವೈರಲ್ ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುತ್ತಾರೋ ಅಂತಹವರಲ್ಲಿ ದೇಹದ ಪ್ರತಿರೋಧ ಶಕ್ತಿ ತೀವ್ರವಾಗಿ ಕುಂದಿರುವುದಿಲ್ಲ ಎಂದು ಅವರ ಅಭಿಪ್ರಾಯ.
ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಒಂದು ಕುತೂಹಲಕಾರಿ ರೋಗಿಯ ಬಗ್ಗೆ ವರದಿ ಯಾಗಿದೆ. ಒಬ್ಬ ಮಹಿಳೆಯಲ್ಲಿ ಕರೋನಾ ವೈರಸ್ 8 ತಿಂಗಳ ದೀರ್ಘಕಾಲ ಇರುವುದು ಕೋವಿಡ್ 19 ಪರೀಕ್ಷೆಗಳಿಂದ ದೃಢಪಟ್ಟಿದೆ. ಈ ತರಹದ 10 ರಿಂದ 15 ರೋಗಿಗಳ ಬಗ್ಗೆ ಯುನೈಟೆಡ್ ಕಿಂಗ್ಡಮ್ ಸೇರಿ ಜಗತ್ತಿನ ಬೇರೆ ಬೇರೆ ದೇಶಗಳಿಂದ ವರದಿಯಾಗಿದೆ ಎಂದು ಒಮೈಕ್ರಾನ್ ಬಗ್ಗೆ ಜಗತ್ತಿಗೆ ಮೊಟ್ಟ ಮೊದಲು ತಿಳಿಸಿದ ಸಂಶೋಧಕರ ಮುಖ್ಯಸ್ಥ ಪ್ರೊಫೆಸರ್ ಟುಲಿಯೋ ಡಿ ಓಲಿವಿರಾ ಅಭಿಪ್ರಾಯ ಪಡುತ್ತಾರೆ. ಈ ತರಹ ಆಗುವುದು ತುಂಬಾ ಅಪರೂಪ. ಆದರೆ ಈ ರೀತಿ ದೇಹದ ಪ್ರತಿರೋಧ ಶಕ್ತಿ ಕುಂಠಿತಗೊಂಡ ವ್ಯಕ್ತಿಗಳಲ್ಲಿಯೇ ಕರೋನಾ ವೈರಸ್ ಬೇರೆ ಬೇರೆ ಪ್ರಭೇದಗಳ ರೀತಿ ಬದಲಾಗುವುದು ಎಂದು ಅವರ ಅಭಿಮತ.
ಇಲ್ಲಿ ಗಮನಿಸಬೇಕಾದ ವಿಚಾರವೊಂದಿದೆ. ದಕ್ಷಿಣ ಆಫ್ರಿಕಾದ ಮೇಲೆ ಹೆಸರಿಸಿದ ವಿಜ್ಞಾನಿ ಮತ್ತು ಅವರ ತಂಡದ ವಿಜ್ಞಾನಿಗಳು ಒಮೈಕ್ರಾನ್ ಪ್ರಭೇದವನ್ನು ಕಂಡುಹಿಡಿದದ್ದಕ್ಕೆ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಕಟುವಾದ ಟೀಕೆಗಳು ಹಾಗೂ ಮರಣಾಂತಿಕ ಬೆದರಿಕೆಗಳು ಸಹಿತ ಬಂದಿವೆ. ಹಾಗೆ ಬರಲು ಮುಖ್ಯ ಕಾರಣ ಎಂದರೆ -ಹಲವಾರು ಪಾಶ್ಚಿಮಾತ್ಯ ದೇಶಗಳನ್ನೊಳಗೊಂಡು ಜಗತ್ತಿನ ಹಲವು ದೇಶಗಳು ಒಮೈಕ್ರಾನ್ ಶೋಧದ ನಂತರ ದಕ್ಷಿಣ ಆಫ್ರಿಕಾದೊಂದಿಗೆ ವಿಮಾನ ಪ್ರಯಾಣವನ್ನು ಒಮ್ಮೆಲೇ ನಿರ್ಬಂಧಿಸಿದ್ದ ರಿಂದ ಆ ದೇಶಕ್ಕೆ ತೀವ್ರವಾದ ಆರ್ಥಿಕ ಹೊಡೆತ ಬಿದ್ದಿದೆ.
ಪ್ರತಿರೋಧ ಶಕ್ತಿ ಕುಂದಿರುವ ವ್ಯಕ್ತಿಗಳಲ್ಲಿ ಹೊಸ ಕರೋನಾ ವೈರಸ್‌ನ ಪ್ರಭೇದ ಹುಟ್ಟಿದೆ ಅಥವಾ ಹುಟ್ಟುತ್ತದೆ ಎಂಬ ಅಂಶ ಇದುವರೆಗೆ ವೈಜ್ಞಾನಿಕವಾಗಿ ದೃಢೀಕರಣಗೊಂಡಿಲ್ಲ. ಆದರೆ ಈ ವಾದ ಹೆಚ್ಚು ಸತ್ವಯುತವಾದದ್ದು ಎಂದು ದಕ್ಷಿಣ ಆಫ್ರಿಕಾದ ಸರ್ಕಾರದ ಸಲಹೆಗಾರ ಹಾಗೂ ಎಚ್‌ಐವಿ ತಜ್ಞ ಪ್ರೊ.ಸಲೀಂ ಕರೀಮ್ ಅವರು ಅಭಿಪ್ರಾಯ ಪಡುತ್ತಾರೆ. ಈಗಾಗಲೇ ಬಂದಿರುವ ಕರೋನಾದ ೫ ಪ್ರಭೇದಗಳು ಜಗತ್ತಿನ ೪ ಭಿನ್ನ ಖಂಡಗಳಿಂದ ಬಂದಿವೆ. ಹಾಗಾಗಿ ದಕ್ಷಿಣ ಆಫ್ರಿಕಾವನ್ನು ಮಾತ್ರ ದೂರುವಂತಿಲ್ಲ ಎಂದು ಅವರ ಅಭಿಪ್ರಾಯ.
ಏಡ್ಸ್ ಅಲ್ಲದೆ ಬೇರೆ ಕಾಯಿಲೆಗಳಿಂದಲೂ ಪ್ರತಿರೋಧ ಶಕ್ತಿ ಕುಂಠಿತಗೊಂಡ ವ್ಯಕ್ತಿಗಳು ಜಗತ್ತಿನಾದ್ಯಂತ ಇದ್ದಾರೆ. ಉದಾಹರಣೆಗೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ಯುನೈಟೆಡ್ ಕಿಂಗ್ಡಮ್‌ನ ರೋಗಿಗೂ ಆಲಾ ಪ್ರಭೇದಕ್ಕೂ ಸಂಬಂಧ ಇದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ದೇಹದ ಪ್ರತಿರೋಧ ಶಕ್ತಿ ಕುಂಠಿತಗೊಳಿಸುವ ಇನ್ನಿತರ ಕಾಯಿಲೆಗಳೆಂದರೆ- ಡಯಾಬಿಟಿಸ್, ಕ್ಯಾನ್ಸರ್, ತೀವ್ರ ರೀತಿಯ ಹಸಿವು ಮತ್ತು ರಕ್ತಹೀನತೆ, ಹಲವು ಆಟೋಇಮ್ಯೂನ್ ಕಾಯಿಲೆಗಳು, ದೀರ್ಘ ಕಾಲದಿಂದ ಇರುವ ಕ್ಷಯರೋಗ ಮತ್ತುಸ್ಥೂಲಕಾಯ. ಹಾಗಾಗಿ ಈ ತರಹದ ಕಾಯಿಲೆಗೆ ಒಳಗಾದ ಒಂದು ದೊಡ್ಡ ಸಂಖ್ಯೆಯ ಜನರೇ ಜಗತ್ತಿನಾದ್ಯಂತ ಇದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಎಚ್‌ಐವಿ ವೈರಸ್ ಹೊಂದಿರುವ 8 ಮಿಲಿಯನ್ ಜನರಿದ್ದಾರೆ. ಅದರಲ್ಲಿ 1/3 ಭಾಗದಷ್ಟು ಜನರು ವಿವಿಧ ಕಾರಣ ಗಳಿಂದ ಏಡ್ಸ್ ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿಲ್ಲ. ಅಲ್ಲಿನ ಕೇಪ್ ಟೌನ್ ಸಮೀಪದ ಮಸಿ-ಮೆಲೆಲೆ ಎಂಬ ಜನನಿಬಿಡ ಪಟ್ಟಣದಲ್ಲಿ ಅಲ್ಲಿನ ಜನಸಂಖ್ಯೆಯ ೨೫% ಜನರು ಎಚ್‌ಐವಿ ವೈರಸ್ ಹೊಂದಿದ ವ್ಯಕ್ತಿಗಳು ಎನ್ನಲಾಗಿದೆ. ಏಡ್ಸ್ ಕಾಯಿಲೆಯ ಬಗ್ಗೆ ಬಹಳ ಸಾಮಾಜಿಕ ಕಳಂಕ ಇರುವುದರಿಂದ ಕಾಯಿಲೆಯಿದ್ದೂ ಚಿಕಿತ್ಸೆ ತೆಗೆದುಕೊಳ್ಳದೇ ಇರುವವರು ಹಲವರು ಆದರೆ ಕಾಯಿಲೆ ಇದೆಯೆಂಬ ಬಗ್ಗೆ ಪರೀಕ್ಷೆಯೇ ಮಾಡಿಸಿಕೊಳ್ಳದವರು ಇನ್ನೂ ದೊಡ್ಡ ಸಂಖ್ಯೆಯ ಜನರಿದ್ದಾರೆ ಎಂದು ಅಲ್ಲಿನ ಆರೋಗ್ಯ ಕಾರ್ಯಕರ್ತರ ಅಭಿಪ್ರಾಯ.
ಕರೋನಾ ವೈರಸ್‌ನ ಬೇರೆ ಯಾವ ಪ್ರಭೇದಗಳೂ ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟ ಮೊದಲು ಕಂಡುಬಂದದ್ದಿಲ್ಲ, ಆದರೆ ಒಮೈಕ್ರಾನ್ ಒಮ್ಮೆಲೇ ಈಗ ಅಲ್ಲಿ ಗೋಚರವಾಗಿದ್ದರಿಂದ ಏಡ್ಸ್ ಕಾಯಿಲೆ ಯಿದ್ದು ಪ್ರತಿರೋಧ ಶಕ್ತಿ ಕುಂಠಿತಗೊಂಡ ವ್ಯಕ್ತಿಗಳ ಒಮೈಕ್ರಾನ್ ಉಗಮ ವಾಗಿರಬೇಕೆಂದು ಊಹೆ ಅಷ್ಟೇ. ಕೋವಿಡ್ ಕಾಯಿಲೆ ಪ್ರಪಂಚದ ಸಮಸ್ಯೆಯಾದ್ದರಿಂದ ಈಗ ನಮ್ಮಲ್ಲಿರುವ ಅಸ ಅಂದರೆ ವ್ಯಾಕ್ಸೀನ್ ಹಾಕುವುದು ಮಾತ್ರ ಎಂದು ತಜ್ಞರ ಅಭಿಪ್ರಾಯ.
ಕೋವಿಡ್ ವ್ಯಾಕ್ಸಿನೇಷನ್‌ನಲ್ಲಿ ಜಗತ್ತಿನ ಬೇರೆಯ ದೇಶಗಳಿಗಿಂತ ದಕ್ಷಿಣ ಆಫ್ರಿಕಾ ತೀರಾ ಹಿಂದುಳಿದಿದೆ ಎಂಬುದು ತೀರಾ ನಿಜವಾದರೂ, ಪ್ರತಿರೋಧ ಶಕ್ತಿ ಕುಂಠಿತಗೊಂಡ ವ್ಯಕ್ತಿಗಳಲ್ಲಿ ವ್ಯಾಕ್ಸಿನೇಷನ್ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ ಎಂದು ಅಲ್ಲಿನ ತಜ್ಞರ ಅಭಿಮತ. ಅಂತಹಾ ವ್ಯಕ್ತಿಗಳಲ್ಲಿ ಸೂಕ್ತವಾದ ಪ್ರತಿರೋಧ ಪ್ರಕ್ರಿಯೆ ಜಾಗೃತಗೊಳ್ಳಲು 4 ಅಥವಾ 5 ಬೂಸ್ಟರ್ ಡೋಸ್ ಗಳ ಅವಶ್ಯಕತೆ ಇದೆ. ಇದು ಜಗತ್ತಿನ ಎಲ್ಲ ದೇಶಗಳ ಪ್ರತಿರೋಧ ಕುಂಠಿತ ವ್ಯಕ್ತಿಗಳಿಗೂ ಅನ್ವಯಿಸುತ್ತದೆ.
ಹಾಗೆ ನಾವು ಪದೇ ಪದೇ ಬೂಸ್ಟರ್ ಡೋಸ್‌ಗಳನ್ನು ಕೊಟ್ಟು ಅವರ ಪ್ರತಿರೋಧ ಶಕ್ತಿ ಹೆಚ್ಚಿಸದಿದ್ದರೆ ಕರೋನಾ ವೈರಸ್ ಪುನಃ ಪುನಃ ಹೊಸ ಪ್ರಭೇದದ ತಳೆದು ಜಗತ್ತನ್ನು ಕಾಡಿಸುತ್ತಲೇ ಇರುತ್ತದೆ ಎಂದು ಅಲ್ಲಿನ ತಜ್ಞರ ಅಭಿಪ್ರಾಯ.
ಏಡ್ಸ್ ಬರದಂತೆ ಇಂಜೆಕ್ಷನ್!ಏಡ್ಸ್ ಬಗ್ಗೆ ಮತ್ತೊಂದು ಹೊಸ ಆಶಾದಾಯಕ ಮಾಹಿತಿ ಇತ್ತೀಚಿಗೆ ಲಭ್ಯವಾಗಿದೆ. ಅಮೆರಿಕ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಎಚ್‌ಐವಿ ಸೋಂಕಿನ ಬಗ್ಗೆ ಹೊಸ ಇಂಜೆಕ್ಷನ್‌ಗೆ ಪರವಾನಗಿ ಕೊಟ್ಟಿದೆ. ಇದು ಏಡ್ಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ಹೊಸ ಅಸ್ತ್ರವಾಗಲಿದೆ. ಪ್ರತಿದಿನ ಮಾತ್ರೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಎಂದು ಎಫ್ಡಿಎದ ಔಷಧ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ದೇಬ್ರಬಿರ್ನ್ ಕ್ರಾಂತ್ ಅಭಿಪ್ರಾಯ ಪಡುತ್ತಾರೆ.
ವಿಐಐವಿ ಹೆಲ್ತ್ ಕೇರ್ ಉತ್ಪಾದಿಸಿದ  () ಇಂಜೆಕ್ಷನ್ 77 ಪೌಂಡ್‌ಗಳಿಗಿಂತ ಜಾಸ್ತಿ ಇರುವ ವಯಸ್ಕರಲ್ಲಿಮತ್ತು ಹದಿಹರೆಯದವರಲ್ಲಿ ಏಡ್ಸ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಉಪಯೋಗಿಸಬಹುದು. (ಇದು ಏಡ್ಸ್‌ಗೆ ಚಿಕಿತ್ಸೆಯಲ್ಲ).ಮೊದಲು ಒಂದು ತಿಂಗಳ ನಂತರ ಮತ್ತೊಂದು ಹೀಗೆ 2 ಇಂಜೆಕ್ಷನ್ ಕೊಡಬೇಕು. ಆನಂತರ ಪ್ರತೀ 2 ತಿಂಗಳಿಗೊಮ್ಮೆ ಒಂದು ಇಂಜೆಕ್ಷನ್ ಕೊಡಬೇಕು. ಜಗತ್ತಿನ ಹಲವಾರು ತಜ್ಞರು ಈ ಹೊಸ ಇಂಜೆಕ್ಷನ್‌ನ ಶೋಧವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಇದೊಂದು ಅದ್ಬುತ ಬೆಳವಣಿಗೆ, ಏಡ್ಸ್ ಕಾಯಿಲೆಯ ಚಿಕಿತ್ಸೆಗೆ ಒಂದು ಹೊಸ ಆಯಾಮ, ತೀರಾ ಕ್ರಾಂತಿಕಾರಿ ಬೆಳವಣಿಗೆ ಎಂದುನ್ಯೂಯಾರ್ಕ್‌ನ ನಾರ್ಥವೆಲ್ ಸಂಸ್ಥೆಯ ಡಾ ಡೇವಿಡ್ ರೊಸೆಂಥಾಲ್ ಅಭಿಪ್ರಾಯ ಪಡುತ್ತಾರೆ. ಪ್ರತೀ 2 ತಿಂಗಳಿಗೊಂದು ಇಂಜೆಕ್ಷನ್ ಕೊಡುವುದರ ಮೂಲಕ ಏಡ್ಸ್ ಕಾಯಿಲೆ ಬರುವುದನ್ನು ತಪ್ಪಿಸುವ ಈ ಚಿಕಿತ್ಸೆ ಒಂದು ಹೊಸ ಸಾಧ್ಯತೆಯನ್ನೇ ತೆರದು ನಮ್ಮ ಮುಂದಿಟ್ಟಿದೆ ಎಂದು ಅವರ ಅಭಿಪ್ರಾಯ.
ಎಚ್‌ಐವಿ ಸಂಪರ್ಕ ಹೊಂದುವ ರಿಸ್ಕ್ ಇರುವ ಜನರಿಗೆ ಇದುವರೆಗೆ ಟ್ರುವಡ ಮತ್ತು ಡೆಸ್ಕೋವಿ ಎಂಬ 2 ರೀತಿಯ ಮಾತ್ರೆಗಳಿವೆ. ಆದರೆ ಇವನ್ನು ಪ್ರತೀದಿನ ಸೇವಿಸಬೇಕು. ಈ ಮಾತ್ರೆಗಳಿಂದ ಈವರೆಗೆ ಶೇ.25 ಜನರಿಗೆ ಮಾತ್ರ ಇವುಗಳ ಪ್ರಯೋಜನ ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಏಕೆಂದರೆ ಹೆಚ್ಚಿನವರಿಗೆ ಪ್ರತಿದಿನ ಮಾತ್ರೆಗಳನ್ನು ಸೇವಿಸುವುದು ಇಷ್ಟವಿಲ್ಲ. ಹಾಗಾಗಿ 25 – 39 ವಯಸ್ಸಿನವರಲ್ಲಿ ಏಡ್ಸ್ ಬರುವ ಪ್ರಮಾಣ ಜಾಸ್ತಿಯಾಗುತ್ತಲೇ ಇದೆ ಎಂದು ತಜ್ಞರ ಅನಿಸಿಕೆ.
ಈ ಇಂಜೆಕ್ಷನ್ ಗೆ ಅನುಮೋದನೆ ದೊರಕಿಸಲು ಉತ್ಪಾದಕರು 2 ರೀತಿಯ ಕ್ಲಿನಿಕಲ್ ಟ್ರಯಲ್ ಕೈಗೊಂಡರು. ಅದರಲ್ಲಿ ಅವರು ಈ ಇಂಜೆಕ್ಷನ್ ಮತ್ತು ಟ್ರುವಡ ಔಷಧವನ್ನು ಹೋಲಿಕೆಗಾಗಿ ಉಪಯೋಗಿಸಿದರು. ಮೊದಲ ಟ್ರಯಲ್ ನಲ್ಲಿ – ಎಚ್‌ಐವಿ ಸೋಂಕು ಇಲ್ಲದ ಪುರುಷರು ಮತ್ತು ಪುರುಷರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ತೃತೀಯ ಲಿಂಗಿಗಳು ಇದ್ದರು.
ಸಹಜವಾಗಿ ಈ ಗುಂಪಿಗೆ ಏಡ್ಸ್ ಬರುವ ರಿಸ್ಕ್ ತುಂಬಾ ಜಾಸ್ತಿ ಇದೆ. ಎರಡನೇ ಟ್ರಯಲ್‌ನಲ್ಲಿ ಎಚ್‌ಐವಿ ಸೋಂಕು ಬರುವ ಹೆಚ್ಚಿನ ಸಾಧ್ಯತೆ ಇರುವ ಆದರೆ ಪ್ರಸ್ತುತ ಹೆಚ್ ಐ ವಿ ಸೋಂಕು ಇಲ್ಲದ ಮಹಿಳೆಯರು ಇದ್ದರು. ಮೊದಲ ಟ್ರಯಲ್‌ನಲ್ಲಿ ಅಪ್ರೆಟ್ಯೂಡ್ ಇಂಜೆಕ್ಷನ್ ತೆಗೆದುಕೊಂಡವರಲ್ಲಿ ಟ್ರುವಡ ಸೇವಿಸಿದವರಿಗಿಂತ ಏಡ್ಸ್ ಬರುವ ಸಾಧ್ಯತೆ 69% ಕಡಿಮೆ ಎನ್ನಲಾಗಿದೆ. ಎರಡನೇ ಟ್ರಯಲ್‌ನಲ್ಲಿ ಟ್ರುವಡ ಮಾತ್ರೆ ಸೇವಿಸಿದವರಿಗಿಂತ ಅಪ್ರೆಟ್ಯೂಡ್ ಇಂಜೆಕ್ಷನ್ ತೆಗೆದುಕೊಂಡವರಲ್ಲಿ ಎಚ್‌ಐವಿ ಬರುವ ಸಾಧ್ಯತೆ ಶೇ.90ರಷ್ಟು ಕಡಿಮೆ ಎಂದು ಗೊತ್ತಾಗಿದೆ.
ಹಾಗೆಂದು ಅಪ್ರೆಟ್ಯೂಡ್ ಇಂಜೆಕ್ಷನ್‌ಗೆ ಪಾರ್ಶ್ವ ಪರಿಣಾಮಗಳೂ ಇವೆ. ಕೆಲವರಲ್ಲಿ ತಲೆನೋವು, ಜ್ವರ, ಬೆನ್ನುನೋವು, ಮಾಂಸಖಂಡ ಗಳಲ್ಲಿ ನೋವು, ಚರ್ಮದ ತೊಂದರೆಗಳು ಕಾಣಿಸಿಕೊಳ್ಳಬಹುದು. ಈ ಇಂಜೆಕ್ಷನ್ ತೆಗೆದುಕೊಳ್ಳಲು ಬಯಸುವ ವ್ಯಕ್ತಿಗಳು  ಔಷಧವನ್ನು ಮಾತ್ರೆಯ ರೂಪದಲ್ಲಿ 4 ವಾರ ಸೇವಿಸಿ ಈ ಔಷಧ ಅವರ ದೇಹಕ್ಕೆ ಹಿಡಿಸುತ್ತದೆಯಾ ಎಂದುಪರೀಕ್ಷಿಸಿಕೊಳ್ಳಬಹುದು. ತುಂಬಾ ಮುಖ್ಯ ವಿಚಾರ ಎಂದರೆ ಎಚ್‌ಐವಿ ಪರೀಕ್ಷೆ ನೆಗೆಟಿವ್ ಬಂದವರು ಮಾತ್ರ ಮೇಲಿನ ಇಂಜೆಕ್ಷನ್ ತೆಗೆದು ಕೊಳ್ಳಬೇಕು.
ಅಂದರೆ ಇದು ಏಡ್ಸ್ ಕಾಯಿಲೆಗೆ ಚಿಕಿತ್ಸೆ ಅಲ್ಲ. ಅದು ಬರದಿರಲು ಉಪಯೋಗಿ ಸುವಂತಹುದು. ಅಮೆರಿಕದಲ್ಲಿ ಅದರ ಈಗಿನ ದರ 3700 ಡಾಲರುಗಳಷ್ಟು (ಒಂದು ಇಂಜೆಕ್ಷನ್‌ಗೆ) ತುಂಬಾ ಜಾಸ್ತಿ ಇದೆ. ಇದು ಭವಿಷ್ಯದಲ್ಲಿ ಹೇಗೆ ಉಪಯೋಗವಾಗುತ್ತದೆಂದು ಕಾದು ನೋಡ ಬೇಕಷ್ಟೆ.