ಮೋದಿ, ನೀವು ರಾಜೀನಾಮೆ ಕೊಟ್ಟುಬಿಡಿ !
ಅಭಿಪ್ರಾಯ
ವಿನಯ್‌ ಖಾನ್‌
vinaykhan078@.
ಒಬ್ಬ ಸಾಮಾನ್ಯ ಚಹಾ ಮಾರುವ ವ್ಯಕ್ತಿಯನ್ನು ದೇಶದ ಪ್ರಧಾನಿಯವರೆಗೂ ಬೆಳೆಯಲು ಬಿಟ್ಟಂತಹ ಇವರಿಗೆ ಏನು ಹೇಳಬೇಕು? ಪ್ರಜಾಪ್ರಭುತ್ವ ಭಾರತದ ಅತಿ ದೊಡ್ಡ ರಾಜಕೀಯ ಪಕ್ಷವನ್ನು ನಿರ್ನಾಮ ಮಾಡಲು ಮೋದಿ ಯಾಕೆ ಮುಂದಡಿ ಇಡಬೇಕಿತ್ತು? ಮೋದಿ ಇಟ್ಟ ಹೆಜ್ಜೆಯಿಂದ ಕಾಂಗ್ರೆಸ್‌ಗೆ ಅಧ್ಯಕ್ಷರೂ ಸಿಗುತ್ತಿಲ್ಲ?
ನಮ್ಮ ದೇಶದಲ್ಲಿ ಎರಡು ಪಂಗಡಗಳು ಯಾವಾಗಲೂ ಅಕ್ಟಿವ್ ಇರುತ್ತವೆ. ಒಬ್ಬರನ್ನು ಅಂಧ ಭಕ್ತರು ಎನ್ನುತ್ತಾರೆ. ಇನ್ನೊಬ್ಬರನ್ನು ಗುಲಾಮರೆನ್ನುತ್ತಾರೆ. ಅದು ಅವರವರ ಮಾನಸಿಕತೆಗೆ ಬಿಟ್ಟಿದ್ದು. ಪ್ರಧಾನಿ ನರೇಂದ್ರ ಮೋದಿ ಎಂದರೆ ಎಲ್ಲರಿಗೂ ಹಬ್ಬವೇ; ವಿರೋಧಿ ಸುವವರಿಗೂ, ಅಭಿಮಾನಿಗಳಿಗೂ!.
ಬಿಜೆಪಿಯವರಿಗೆ ಅವರ ಹೆಸರು ಹೇಳದಿದ್ದರೆ ಬೆಲೆಯಿಲ್ಲ. ಇತರ ಪಕ್ಷಗಳಿಗೆ ಮೋದಿ ವಿರೋಧಿಸದಿದ್ದರೆ ಬೇಳೆ ಬೇಯೋಲ್ಲ! ಬಿಡಿ,ಹೇಗಿದ್ದರೂ ಮೋದಿ ನಮ್ಮ ದೇಶದ ಐಕಾನ್. ಅವರು ಮಾಡುವ ಪ್ರತಿ ಕೆಲಸವೂ ಭಾರೀ ಪರ -ವಿರೋಧ ಚರ್ಚೆಗೆ ಒಳಪಡುತ್ತದೆ.ಕೊನೆಗೆ ಅವರ ಬಟ್ಟೆ, ನಡೆ, ನುಡಿಯಿಂದ ಹಿಡಿದು ರಾಜತಾಂತ್ರಿಕ ಹೆಜ್ಜೆಗಳವರೆಗೆ. ಒಂದಷ್ಟು ಜನರಿಗೆ ಅವರು ಜೀವಮಾನವಿಡೀ ಪ್ರಧಾನಿಯಾಗಿರಬೇಕು. ಇನ್ನೇಷ್ಟೋ ಜನರಿಗೆ ಅವರು ತಕ್ಷಣ ಹುದ್ದೆಯಿಂದಿಳಿಯಬೇಕು!
ಭಾರತವನ್ನು ಬೈದು, ಕೆಲವು ಸಣ್ಣ ವಿಚಾರಗಳನ್ನು ಪಾಶ್ಚಾತ್ಯ ಮೀಡಿಯಾಗಳ ಮುಂದೆ ತಂದಿಟ್ಟು ಭಾರತದ ಮಾನವನ್ನು ವಿದೇಶದ ಮುಂದೆ ಹರಾಜು ಹಾಕುವ ಅರುಂಧತಿ ರಾಯ್ ಮೊನ್ನೆ ಹೇಳುತ್ತಾರೆ. ‘ಉದಾರವಾದಿಗಳು (ಲಿಬರಲ್ಸ್)ಗಳು ಭಾರತದ ಪ್ರಧಾನಿ ಹುದ್ದೆಯಲ್ಲಿ ಐದು ವರ್ಷ ಮಾತ್ರ ಇರಬೇಕು, ನಂತರ ಬೇರೆಯವರಿಗೂ ಅವಕಾಶದೊರೆಯಲಿ’ ಅವರ ಈ ಮಾತಲ್ಲಿ ಯಾವುದೇ ಹುರುಳಿಲ್ಲ ಬಿಡಿ.
ಯಾಕೆಂದರೆ ಅವರ ಮಾತಿನಲ್ಲಿಯೇ ಇದೆ; ಉದಾರವಾದಿ(?)ಗಳು ಅಂತ ಅವರು ಇದಕ್ಕಿಂತ ಉದಾರತೆಯನ್ನು ಎಲ್ಲೂ ತೋರಿಸ ಲಿಕ್ಕಿಲ್ಲ. ಇವರ ಉದಾರತೆ ಇವರು ಬರೆಯುವ ಆರ್ಟಿಕಲ್ ಗಳಲ್ಲೇ ನಗ್ನವಾಗಿರುತ್ತದೆ. 2014ರಲ್ಲಿ ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಂದಾಗಲೇ ಭಾರತ ಬಿಡುತ್ತೀ ನೆಂದ ಎಷ್ಟೋ ಜೀವಗಳು(?) ಇನ್ನೂ ಇಲ್ಲೇ ಹೊರಳಾ ಡುತ್ತಿವೆ.
ಇವರ ಹಿಂದಿನ ಜನ್ಮದ ಪಾಪನೋ ಏನೋ, ಮೋದಿ ಎರಡನೇ ಬಾರಿಯೂ ಪ್ರಧಾನಿಯಾಗಿ ಮುನ್ನಡೆಯುತ್ತಿದ್ದಾರೆ. ದೇವರ ‘ಮೂರ್ತಿ’ ಯ ಮೇಲೆ ಉಚ್ಚೆ ಮಾಡಿದ್ದಂತ ಬರಹಗಾರನದು(?) ಭಾರೀ ಪುಣ್ಯ. ಮೋದಿ ಆಡಳಿತವನ್ನು ಸರಿಯಾಗಿ ನೋಡದೆ ಪ್ರಾಣಬಿಟ್ಟರು. ಅವರು ವಿದೇಶಕ್ಕೆ ಹೋಗಲೆಂದೇ ಜನ ಒಂದೊಂದು ರುಪಾಯಿಯನ್ನು ಭಿಕ್ಷೆ ಬೇಡಿ ಸಂಗ್ರಹಿಸಿದ್ದು ನೆನಪಿರಬಹುದು. ದೇವೆಗೌಡರಿಗಂತೂ ವಯಸ್ಸಾಯಿತು ಬಿಡಿ; ಮೊದಲೆಲ್ಲ ಮೋದಿ ವಿರುದ್ಧ ಹಾರಾಡಿ ಈಗ ಸುಮ್ಮನೆ ಇದ್ದಾರೆ. ಮೋದಿ ಬಂದ ಮೇಲೆ ದೇಶಕ್ಕೆ ಕರಿನೆರಳ ಛಾಯೆ ಎಂದಿದ್ದ ಅವರ‍್ಯಾರು ಇತ್ತೀಚೆಗೆ ಕಾಣಿಸುತ್ತಿಲ್ಲ.
ನಮ್ಮ ದೀದಿಯ ಕಾಲು ಸರಿಯಾಯ್ತು ಬುದ್ಧಿಗೇನಾಗಿದೆಯೋ ಗೊತ್ತಾಗುತ್ತಿಲ್ಲ. ಮೊದಲೆಲ್ಲ ಕಮ್ಯುನಿಸಮ್ ವಿರುದ್ಧ ಹೋರಾಡಿ. ಜಯ ಪ್ರಕಾಶ ನಾರಾಯಣರ ಕಾರಿನ ಮೇಲೆ ಕುಣಿದು ಕುಪ್ಪಳಿಸಿ ದೇಶದ ಗಮನ ಸೆಳೆದಾಕೆ. ಹಲವಾರು ಬಂಡವಳ ಶಾಹಿಗಳ ವಿರುದ್ಧಸೆಟೆದುನಿಂತು ಆಗಿನ ಕಾಲದಲ್ಲೇ ಕಾಂಗ್ರೆಸ್ ವಿರುದ್ಧ ಹೋರಾಡಿ ಸ್ವಂತ ಪಾರ್ಟಿಯನ್ನೂ ಕಟ್ಟಿದರು. ಮುಖ್ಯಮಂತ್ರಿಯಾಗಿ ಬದಲಾವಣೆಯ ನಿರೀಕ್ಷೆಯಲ್ಲಿರುವವರಿಗೆ ಕಮ್ಮಿ-ನಿಷ್ಟರಿಗಿಂತ ಒಳ್ಳೆಯ(ಅಂದುಕೊಂಡಿದ್ದಾರೆ) ಸರಕಾರವನ್ನು ಕೊಡುತ್ತಿದ್ದಾರೆ. ಆದರೆ, ದಿನ ಬೆಳಗಾದರೆ ಬಿಜೆಪಿ, ಹಿಂದೂ ಪರ ಕಾರ್ಯಕರ್ತರ ಸಾವಿಗೆ ಪಶ್ಚಿಮ ಬಂಗಾಳವನ್ನು ಮಾಡೆಲ್ ಮಾಡಿ ಮೋದಿಯವರನ್ನು ಚೆನ್ನಾ ಗಿಯೇ(?) ವಿರೋಧಿಸುತ್ತಿದ್ದಾರೆ.
ಮುಂದಿನ ಪ್ರಧಾನಿ ಅಭ್ಯರ್ಥಿಯ ಕನಸಿನಲ್ಲೂ ಖೇಲಾ ಹೋಬೆ ಮಾಡುತ್ತಿದ್ದಾರೆ. ಇನ್ನು ತಮ್ಮ ಗುಂಪಿಗೆ ಮೋದಿಯ ಕ್ಯಾಂಪ್ ನಲ್ಲಿದ್ದು, ಅವರಿಂದಲೇ ಬೆಳೆದು ‘ರಾಜಕೀಯ ಚಾಣಕ್ಯ’ ಅಂತ ಬಿರುದು ಗಿಟ್ಟಿಸಿಕೊಂಡಿದ್ದ ಪ್ರಶಾಂತ್ ಕಿಶೋರ್‌ರನ್ನು ಸೇರಿಸಿಕೊಂಡು.ಕನಸಿನ ಕೋಟೆಯಲ್ಲಿ ಭದ್ರರಾಗಿದ್ದಾರೆ ದೀದಿ. ಈ ಎಲ್ಲವನ್ನೂ ಗಮನಿಸಿದಾಗ, ಮೋದಿಯ ವರು ರಾಜೀನಾಮೆ ಕೊಡಲೇ ಬೇಕು. ಏಕೆಂದರೆ, ಇಂಥ ಬಹಳಷ್ಟು ಜನರ ವಿಶ್ವಾಸವನ್ನು ಅವರು ಮುರಿದಿದ್ದಾರೆ. ಮೊನ್ನೆಯೇ ಎಷ್ಟೋ ಜನ ಕನಸು ಕಟ್ಟಿದ್ದರು ಕರೋನಾ ನಿರ್ವಹಣೆಯಲ್ಲಿ ಭಾರತ ವಿಫಲವಾಗುತ್ತೆ ಎಂದು. ಹಾಗಾದಾಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಯೋಜಿಸಿದ್ದರು ಪಾಪ. ಆದರೆಮೋದಿ ಅದಕ್ಕೆ ಆಸ್ಪದವೇ ಕೊಡಲಿಲ್ಲ, ಎಲ್ಲ ಕೈ ಮೀರಿ ಹೊಗುತ್ತಿದೆ; ದೇಶ ಕರೋನಾ ಪಾಲಾಗುತ್ತಿದೆ ಅಂತ ಅಂದುಕೊಂಡಿ ರುವಾಗಲೇಅವರಿಗೆಲ್ಲ ಒದರಲು ಕೆಲಸವನ್ನೇ ಕೊಡಲಿಲ್ಲ.
ಆದರೂ ಅವರೇನೂ ಬಿಡಲಿಲ್ಲ ಅನ್ನಿ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ನಾಚುವಂತೆ ಭಾರತದಂತ ದೇಶದಲ್ಲೂ ಕರೋನಾ ನಿಗ್ರಹ ಮಾಡಿದರು. ಹಾಗೆಯೇ ೧೦೦ ಕೋಟಿಗೂ ಅಽಕ ಕರೋನಾ ಲಸಿಕೆ ಗುರಿ ತಲುಪುವಂತೆ ಮಾಡಿದರು. ಮೋದಿ ರಾಜೀನಾಮೆ ಕೊಡಬೇಕಿತ್ತು ಏಕೆಂದರೆ, ರಾಮ ಮಂದಿರ ಹೆಸರು ಹೇಳಿ ಬಿಜೆಪಿ ಅಸ್ಥಿತ್ವಕ್ಕೆ ಬಂತು ಆದರೆ ಎಷ್ಟೋ ವರ್ಷಗಳಿಂದ ರಾಮ ಮಂದಿರದ ಕನಸು ಕನಸಾಗೇ ಉಳಿದಿತ್ತು. ಹಲವಾರು ಜನ ರಾಮ ಮಂದಿರ ನಿರ್ಮಾಣವಾದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ ರಕ್ತದ ಕೋಡಿ ಹರಿಯುತ್ತೆ ಎಂದಿದ್ದರು. ಆದರೆ ಒಂದು ಸೊಳ್ಳೆಗೂ ಕೂಡ ಹಾನಿಯಾಗದೆ ರಾಮ ಮಂದಿರ ಭರಪೂರವಾಗಿ ನಿರ್ಮಾಣವಾಗುತ್ತಿದೆ.
ಮೋದಿ ರಾಜೀನಾಮೆ ಕೊಡಬೇಕಿತ್ತು. ಏಕೆಂದರೆ, ಕಾಶ್ಮೀರ ಯಾವತ್ತೂ ಭಾರತದ ಜತೆ ಬರಲ್ಲ, ಅದು ಸ್ವತಂತ್ರವಾಗಬೇಕೆಂದು ಎಷ್ಟೋಜನ ಕನಸು ಕಟ್ಟಿದ್ದರು. ಆದರೆ ಆರ್ಟಿಕಲ್೩೭೦ಮತ್ತು ೩೫ಎ ಅನ್ನು ರದ್ದು ಮಾಡಿ ಕಾಶ್ಮೀರ ವಿಚಾರವನ್ನು ತಿಳಿಗೊಳಿಸಿದರು. ಮೋದಿ ವಿರುದ್ಧ ಮುಸಲ್ಮಾನ್ ಹೆಣ್ಣುಮಕ್ಕಳನ್ನು ಎತ್ತಿಕಟ್ಟಿ ಕೂರಿಸ ಬೇಕೆಂದುಕೊಂಡಿದ್ದರು. ತ್ರಿವಳಿ ತಲಾಖ್ ಅನ್ನು ರದ್ದು ಮಾಡಿ ಅವರಿಗೆ ಆಸರೆಯಾದರು.
ಎನ್ ಜಿಒ ಸೋಗಿನಲ್ಲಿ ಪ್ರಪಂಚಾದ್ಯಂತ ಹಣ ಸಂಗ್ರಹಿಸಿ ಅದನ್ನು ದೇಶದ್ರೋಹ ಕೆಲಸಕ್ಕೆ ಬಳಸಿ ಅದರಿಂದ ಆರಾಮವಾಗಿದ್ದವರ ಬದುಕಿಗೆ ಕೊಳ್ಳಿಯಿಟ್ಟ ಮೋದಿ ರಾಜೀನಾಮೆ ಕೊಡಲೇಬೇಕು. ಎಷ್ಟೋ ಹಗರಣಗಳನ್ನು ಮಾಡಿ, ಜನರ ತೆರಿಗೆಯನ್ನು ಲೂಟಿ ಹೊಡೆದಿದ್ದ ವರಿಗೆ ಪುನರ್ ವಸತಿ ಕಲ್ಪಿಸಲು ಬಿಡಲಿಲ್ಲ, ಪ್ರತಿಪಕ್ಷದ ಗೂಡನ್ನು ಮತ್ತಷ್ಟು, ಮಗದಷ್ಟು ಚಿಕ್ಕದಾಗಿಸಿದ ಮೋದಿಗೆ ಏನು ಹೇಳಬೇಕು? ಬಕೆಟ್ ಹಿಡಿದು ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿದ್ದವರನ್ನು ಸೈಡ್ ಲೈನ್ ಮಾಡಿ ಹರೇಕಳ ಹಾಜಬ್ಬ, ತುಳಸಿ ಗೌಡರಂತಹ ಎಲೆಮರಿಕಾಯಿಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಕೊಡಮಾಡಿಸಿದಂತಹ ಮೋದಿಯನ್ನು ಅವಾರ್ಡ್ ವಾಪಸಿ ಗ್ಯಾಂಗ್‌ನ ಸದಸ್ಯರು ಕ್ಷಮಿಸುವವರೆ? ಫಾರೀನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಪಾಲಿಸಿಯನ್ನು ಸಡಿಲಿಸಿ ಭಾರಿ ವಿದೇಶಿ ಬಂಡವಾಳವನ್ನುಬಂದ ಮೇಲೆ ಎಷ್ಟೋ ಆರ್ಥಿಕತೆ ಸುಧಾರಣೆ ಯಾಯಿತಲ್ಲ ಅದಕ್ಕಾದರೂ ಮೋದಿಯನ್ನು ದೂಷಿಸಲೇಬೇಕು.
ಏಕೆಂದರೆ, ‘ಭಾರತ ಬರಗೆಟ್ಟ ದೇಶ, ಇಲ್ಲಿ ಕೆಲವರಿಗೆ ತಿನ್ನೂ ಅನ್ನವಿಲ್ಲ’ ಅಂಥ ಫೋಟೋ ತೋರಿಸಿ ಫಾರಿನ್ ಫಂಡ್ ತಂದುಕೊಳ್ಳ ಲಾಗುವುದಿಲ್ಲ ಈಗ. ೧೩೦ ಕೋಟಿ ಜನ ಇರುವಂತಹ ದೇಶದಲ್ಲಿ ಕೋಟ್ಯಂತರ ಜನರು ನಿರುದ್ಯೋಗದಿಂದ ಬಳಲುತ್ತಿರುವಾಗ ಅದನ್ನೇ ಚುನಾವಣೆಗಳಲ್ಲಿ ಬಂಡವಾಳ ಮಾಡಿಕೊಳ್ಳಲಾಗದಂತೆ ಮಾಡಿಬಿಟ್ಟರಲ್ಲ. ಸ್ವಂತ ಉದ್ಯೋಗ ಮಾಡಿ ಅಂತ ಬ್ಯಾಂಕ್ ನಿಂದ ಸಬ್ಸಿಡಿಯಲ್ಲಿ ಸಾಲ ದೊರೆಯುವಂತೆ ಮಾಡಿದ ಮೋದಿ ಕೆಲಸಗಾರನಲ್ಲ ಬಿಡಿ. ದೇಶದ ಆರ್ಥಿಕತೆಯನ್ನು ಮೇಡ್ ಇನ್ ಇಂಡಿಯಾದ ಮೂಲಕ ಬಲಪಡಿಸುವಂತೆ ಯಾಕೆ ಮಾಡಬೇಕಿತ್ತು? ನಮ್ಮ ದೇಶದಲ್ಲಿ ರಕ್ಷಣೆಯ ಕೊರತೆ ಕಾಡುತ್ತಿತ್ತು ತಿಂಗಳಿಗೊಂದರಂತೆ(?) ಬಾಂಬ್ ಸ್ಫೋಟ,ಭಯೋತ್ಪಾದಕರ ಅಟ್ಟಹಾಸ ನಡೆಯುತ್ತಿತ್ತು.
ಅದಕ್ಕೆಲ್ಲ ಬಲವಾದ ಆಯುಧ ಗಳನ್ನು ತಂದು ರಕ್ಷಣಾ ಕ್ಷೇತ್ರ ಬಲ ಪಡಿಸಿದ ಮೋದಿ, ಪಾಕ್ ಹಾಗೂ ಭಯೋತ್ಪಾದಕರಿಗೆ ಅನ್ಯಾಯ ಮಾಡಲಿಲ್ಲವೇ. ಆದರೂ ಉಗ್ರರು, ಪಾಕಿಗಳು ಭಾರತದ ಸೇನೆಯ ಮೇಲೆ ದಾಳಿ ಮಾಡಿದಾಗ ಅವರಿಗೆ ಪ್ರತ್ಯುತ್ತರ ನೀಡುವುದು ಯಾಕೆ ಬೇಕಿತ್ತು? ಸುಳ್ಳು(?) ಸರ್ಜಿಕಲ್ ಸ್ಟ್ರೈಕ್‌ಗಳನ್ನು ಯಾಕೆ ಮಾಡಬೇಕಿತ್ತು? ಪ್ರತಿಯೊಂದು ಚುನಾವಣೆಯಲ್ಲೂ ಕೋಟ್ಯಂತರ ರುಪಾಯಿ ಹಣ ಸುರಿದು ಗೆಲ್ಲುತ್ತಿದ್ದವರ ಮುಂದೆ, ಏನು ಇಲ್ಲದ ಸಣ್ಣ ಪುಟ್ಟ ಕಾರ್ಯಕರ್ತರನ್ನು ಕರೆತಂದು ಸಂಸತ್ ಬರೀ ತಮ್ಮ ಹೆಸರಿಂದಲೇ ಆಯ್ಕೆಯಾಗುವಂತೆ ಮಾಡಿದವರನ್ನು ಸುಮ್ಮನೆ ಬಿಡಬೇಕೆ? ಎಷ್ಟೋ ವಿಚಾರಗಳಲ್ಲಿ ಮೋದಿಯಿಂದ ಮಾಡುವುದಕ್ಕಾಗಲ್ಲ ಎಂದು ಕೊಂಡಾಗಲೆಲ್ಲ ಅವರ ಭರವಸೆಯನ್ನು ಹುಸಿ ಮಾಡಿದ ಮೋದಿ, ರಾಜೀನಾಮೆ ಕೊಡಲೇ ಬೇಕಿತ್ತು. ವಿರೋಧಿಗಳಿಗೆ ಸಿಹಿ ಊಟ ಹಾಕಿಸಲೇ ಬೇಕಿತ್ತು!
ಇನ್ನು ನಮ್ಮ ದೇಶದಲ್ಲಿ ಮೋದಿಗೆ ಸರಿಯಾಟಿಯಾಗಲು ಹೊರಟವರು ರಾಹುಲ್ ಗಾಂಧಿ, ಕನ್ಹಯ್ಯ ಕುಮಾರ್, ಚಂದ್ರ ಬಾಬು ನಾಯ್ಡು, ಮಮತಾ ಬ್ಯಾನರ್ಜಿ ಇನ್ನೂ ಹಲವರು. ಇವರುಗಳು ಯಾಕೆ ಮೋದಿಯನ್ನು ಬೆಳೆಯಲು ಬಿಟ್ಟದ್ದು? ಒಬ್ಬ ಸಾಮಾನ್ಯ ಚಹಾ ಮಾರಿ ಕೊಂಡು ಇದ್ದ ವ್ಯಕ್ತಿಯನ್ನು ದೇಶದ ಪ್ರಧಾನಿಯವರೆಗೂ ಬೆಳೆಯಲು ಬಿಟ್ಟಂತಹ ಇವರಿಗೆ ಏನು ಹೇಳಬೇಕು? ಪ್ರಜಾಪ್ರಭುತ್ವ ಭಾರತದ ಅತಿ ದೊಡ್ಡ ರಾಜಕೀಯ ಪಕ್ಷವನ್ನು ನಿರ್ಣಾಮ ಮಾಡಲು ಮೋದಿ ಯಾಕೆ ಮುಂದಡಿ ಇಡಬೇಕಿತ್ತು? ಮೋದಿ ಇಟ್ಟ ಹೆಜ್ಜೆಯಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿಗುತ್ತಿಲ್ಲ, ಅದಕ್ಕೇನು ಉತ್ತರಿಸುವಿರಿ ಮೋದಿಯವರೇ? ಲಕ್ಷಾಂತರ ಜನರ ವಿರೋಧ ನಡುವೆಯೂ ಭಾರತಕ ಏಕೆ ನೀವು ಸಿಎಎ ಕಾಯಿದೆ ಮೋದಿ ತಂದಿದ್ದು ಇದರಿಂದ ಅಲ್ಪಸಂಖ್ಯಾತರಿಗೆ ಘಾಸಿಯಾಗುವುದಿಲ್ಲವೇ? ರೈತರನ್ನು ಉದ್ಧಾರ ಮಾಡುತ್ತೀನಿ ಅಂತ ಹೊಸ ಕೃಷಿ ಕಾಯಿದೆಗಳನ್ನು ಯಾಕೆ ತರಬೇಕಿತ್ತು ಹಳೆದೇ ಸರಿಯಿರಲಿಲ್ಲವೇ? ಮೋದಿ ಯಾಕೆ ಪ್ರೆಸ್‌ಮೀಟ್ ಮಾಡಲು ಹೆದರುವುದು. ೫೪ ಇಂಚಿನ ಎದೆಗೆ ೧೦ಜನ ಮೀಡಿಯಾದವರನ್ನು ಮುಖಾಮುಖಿ ಮಾಡಲು ಆಗದೇ? ದೇಶದಲ್ಲಿ ಸರ್ವಾಧಿಕಾರಿ ಧೋರಣೆಯನ್ನುಹೋಗಲಾಡಿಸುವುದಕ್ಕಾದರೂ ಮೋದಿ ರಾಜೀನಾಮೆ ಕೊಡಲೇ ಬೇಕು.
ಇನ್ನು ಹಲವಾರು ವಿಷಯಗಳಿಗೆ ಮೋದಿ ರಾಜೀನಾಮೆ ಕೊಡಲೇ ಬೇಕು. ಕೆಲವರಿಗೆ ಮಮತಾ ಪ್ರಧಾನಿಯಾದರೆ, ಕೆಲವರಿಗೆ ರಾಹುಲ್ ಪ್ರಧಾನಿಯಾಗಲೇ ಬೇಕು, ಇನ್ನು ಕೆಲವರಿಗೆ ದೇಶ ವಿರೋಧಿ ಘೋಷಣೆ ಹಾಕಿ ದಂತಹ ಕನ್ಹಯ್ಯ ಕುಮಾರ್ ಪ್ರಧಾನಿಯಾಗಬೇಕು. ಕೆಲವರಿಗಂತೂ ಎಷ್ಟು ಜನರಿಗೆ ಪ್ರಧಾನಿಯಾಗುವ ಬಯಕೆ ಇದೆ. ಅಷ್ಟು ದೇಶ ವನ್ನು ಹೋಳುಮಾಡಿಬಿಡಿ ಅವರವರೇ ಪ್ರಧಾನಿ ಯಾಗಲಿ ಎಂದವರೂ ನಮ್ಮ ದೇಶದವರೇ. ಅವರಿಗೆಲ್ಲ ಏನು ಹೇಳಬೇಕಾಗಿಲ್ಲ ಅವರೆಲ್ಲ ಉದಾರವಾದಿಗಳು!