ಮತ್ತಿನ ಗಮ್ಮತ್ತಿನಲ್ಲೇ ನಡೆದ ಮಹಾಯುದ್ದಗಳು
ಶಿಶಿರ ಕಾಲ
ಶಿಶಿರ್‌ ಹೆಗಡೆ
@.
ಹೀಗೊಂದು ಐಡಿಯಲ್, ಅಸಾಮಾನ್ಯ, ಹೆದರಿಕೆ, ಆಯಾಸ, ನೋವು ಇವೆಲ್ಲದರ ಪರಿವೆಯಿಲ್ಲದ, ಕ್ರೂರ, ದಯೆರಹಿತ, ವೈರಾಗ್ಯಕ್ಕೆ ಆಸ್ಪದ ಕೊಡದ ಅಸಾಮಾನ್ಯ ಸೈನಿಕರನ್ನು ಕಡಿಮೆ ಸಮಯದಲ್ಲಿ ತಯಾರಿಸಲು ಹೋದ ಜರ್ಮನಿ – ಅಫೀಮಿನಿಂದ, ಅನಂತರದಲ್ಲಿ ಅದನ್ನು ಬಿಡಿಸಲು ಹೀರೋಯಿನ್ ನ ವಿಷವರ್ತುಲದೊಳಕ್ಕೆ ಸಿಕ್ಕಿಹಾಕಿ ಕೊಂಡದ್ದು ಹಿಂದಿನ ವಾರ ಓದಿದ್ದಿರಿ.
ಆಂತರಿಕವಾಗಿ ಡ್ರಗ್ ಸಮಸ್ಯೆಯಿಂದ ಒzಡಿಹೋಗಿದ್ದ ಜರ್ಮನಿ ಮತ್ತೊಂದು ಯುಧ್ಧದ ಹೊಸ್ತಿಲಲ್ಲಿತ್ತು. ಹಾಗಾಗಿ ಹೆರೋಯಿನ್ ಗೆ ಪರ್ಯಾಯವಾಗಿ ಯುದ್ಧ ಗೆಲ್ಲಲು ಮಗ ದೊಂದು ವಿಶೇಷ ಮದ್ದು ತ್ವರಿತವಾಗಿ ಸಿದ್ಧವಾಗ ಬೇಕಿತ್ತು. ಆ ಸಮಯದಲ್ಲಿ ಅಮೆರಿಕದ ರೆಡ್ ಇಂಡಿಯನ್ ಜನಾಂಗದವರು ತಾಂಬೂಲವಾಗಿ ಒಂದು ಎಲೆಯನ್ನು ಅಗಿಯು ತ್ತಿದ್ದರು. ಇದು ಅವರಲ್ಲಿ ಎಲ್ಲಿಲ್ಲದ ಶಕ್ತಿ, ಹುಮ್ಮಸ್ಸನ್ನು, ಧೈರ್ಯವನ್ನು ತುಂಬುತ್ತಿತ್ತು. ಅದುವೇ ಕೋಕಾ ಗಿಡದ ಎಲೆ. ಔಷಧಿ ತಯಾರಕನೊಬ್ಬ ಕೋಕಾ ಗಿಡದ ಎಲೆಯಿಂದ ರಾಸಾಯನಿಕವನ್ನು ಹೊರತೆಗೆದ. ಅದುವೇ ಕೊಕೇನ್ !
ಕೊಕೇನ್ ಸೇವಿಸಿದರೆ ಮನುಷ್ಯನ ಯೋಚನಾ ಶಕ್ತಿ ನೂರ್ಮಡಿಸುತ್ತದೆ, ನೋವಿನ ಅರಿವಾಗುವುದಿಲ್ಲ. ಕೊಕೇನ್ – ಎಲ್ಲ ರೋಗಕ್ಕೂ ಒಂದೇ ಮದ್ದು ಎಂದು ಆಗಿನ ಡಾಕ್ಟರು ಗಳು ಒಪ್ಪಿಕೊಂಡುಬಿಟ್ಟರು. ಇಂದಿನಂತೆ ಔಷಧವನ್ನು ಪ್ರಯೋಗಿಸಿ ಒಪ್ಪುವ ವ್ಯವಸ್ಥೆಯಿದ್ದ ಸಮಯವಲ್ಲ. ಕೊಕೇನ್ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಎಲ್ಲರಿಗೂ ಲಭ್ಯವಾಗತೊಡಗಿತು. ಕೊಕೇನ್ ದಿವ್ಯಔಷಧ ಎಂಬ ಕಾರಣಕ್ಕೆ ಪಿಜ್ಜಾ ಗಳಲ್ಲಿ, ವೈನುಗಳಲ್ಲಿ ಕೂಡ ಹಾಕಲಾಗು ತ್ತಿತ್ತು.
ವರ್ಷದೊಳಗೆ ಕೊಕೇನ್ ಇನ್ನೊಂದು ಚಟವಾಗುವ ಡ್ರಗ್, ಹಿಂದಿನದೆಲ್ಲದಕ್ಕಿಂತ ಭೀಕರ ಎನ್ನುವ ಅರಿವು ಬಂದು- ಅದನ್ನು ನೇರವಾಗಿ ಬಳಸುವುದಕ್ಕೆ ನಿಷೇಧ ಹೇರಬೇಕಾಯಿತು. ಆದರೆ ಸಮಾಜಕ್ಕೆ ಚಟ ಅಷ್ಟರ ಹತ್ತಿಯಾಗಿತ್ತಲ್ಲ ! ಕಳ್ಳವಂತಿಕೆಯಲ್ಲಿ ಕೊಕೇನ್ ಮಾರಾಟಕ್ಕೆ ಹತ್ತಾರು ಮಾರ್ಗಗಳು – ಅದರಲ್ಲಿ ಒಂದು ವಿಶೇಷ ಮಾರ್ಗ ಅಮೆರಿಕದ ಔಷಧಿಕಾರ ಜಾನ್ ಪಿಎಂಬೆರ್ಟನ್ ನದು. ಆತ ಒಂದಂಶಕೋಲಾ ಬೀಜ (ಹೆರೋಯಿನ್ ತಯಾರಿಸಲು ಬಳಸುವ ಬೀಜ) ಮತ್ತು ಇನ್ನೊಂದು ಅಂಶ ಕೋಲಾ ಎಲೆ (ಕೊಕೇನ್ ತಯಾರಿಕೆಗೆ ಬಳಸುವ ಎಲೆ) ಇವೆರಡನ್ನೂ ಮಿಶ್ರಣ ಮಾಡಿ ಹೊಸತೊಂದು ಔಷಧವನ್ನು ಕಂಡಿಹಿಡಿದ.
ತನ್ನ ಔಷಧ ಪರಮೌಷಧ, ಇದು ಬಹುತೇಕ ರೋಗಕ್ಕೆ ಮದ್ದು, ಷಂಡತನವನ್ನು ಕೂಡ ಹೋಗಲಾಡಿಸುತ್ತದೆ ಎಂದ. ಅದುವೇ ಕೋಕಾ-ಕೋಲಾ !! ಯಸ್, ಕೋಕಾ- ಕೋಲಾ ಮೊದಲು ಬಿಡುಗಡೆಯಾದಾಗ ಅದು ಕೊಕೇನ್ ಮತ್ತುಕೆಫೇನ್‌ನ ಸಮ್ಮಿಶ್ರಣದ ಒಂದು ಔಷಧ (!). ಅದಿರಲಿ.20ನೆ ಶತಮಾನದ ಆದಿಯಲ್ಲಿ ತಲೆಶೂಲೆಯಿಂದ ಹಿಡಿದು ಟಿಬಿಯವರೆಗೆ – ಎಲ್ಲ ರೋಗಕ್ಕೂ ಕೊಕೇನ್ ಅನ್ನೇ ಬಳಸ ಲಾಗುತ್ತಿತ್ತು. ಕೊಕೇನ್ ಇಂದ್ರೀಯಗಳ ಕ್ಷಮತೆ ಯನ್ನು, ವಿಚಾರದ ವೇಗವನ್ನು, ಕಣ್ಣಿನತೀಕ್ಷ್ಣತೆ, ಮೂಗಿನ ಸೂಕ್ಷ್ಮಗ್ರಾಹಿತ್ವ ಇವೆಲ್ಲವನ್ನೂ ಹೆಚ್ಚಿಸುವುದನ್ನು ಕಂಡ ಸೈನ್ಯ, ಯಥೇಚ್ಛವಾಗಿ ಸೈನಿಕರಿಗೆ ಇದನ್ನು ಕೊಡಲು ಶುರುಮಾಡಿ ಯಾಗಿತ್ತು.
ಸಮರ್ಥ ಸೈನಿಕ ಎಂದರೆ ಅದುವೇ ಗೆಲುವು ಎನ್ನುವುದನ್ನು ಜರ್ಮನಿ ಅದಾಗಲೇ ಅರಿತಾಗಿತ್ತಲ್ಲ. ಜರ್ಮನಿಯೊಂದೇ ಅಲ್ಲ – ಮಹಾ ಯುದ್ಧದ ಬಹುತೇಕ ರಾಷ್ಟ್ರಗಳಿಗೂ ಆಗ ಇದು ತಿಳಿದು ಹೋಗಿತ್ತು. ಕೊಕೇನ್‌ನ ಅಡ್ಡ ಪರಿಣಾಮ ಸರಿಯಾಗಿ ಹೊರಬರಲು ಶುರುವಾದದ್ದು ಅದನ್ನು ಮೊದಲು, ೧೯೧೪ ರಲ್ಲಿ ಸೈನಿಕರ ಮೇಲೆ ಬಳಸಲು ಶುರುಮಾಡಿದಾಗ. ಮೊದಲ ಜಾಗತಿಕ ಯುದ್ಧ ಹಿಂದಿನ ಯಾವ ಯುದ್ಧ ದಂತಲ್ಲ.
ಜಗತ್ತು ಹಿಂದೆಂದೂ ಬಳಸದ ಮಷಿನ್ ಗನ್‌ಗಳು, ಸಲಕರಣೆಗಳು, ಯುದ್ಧ ವಿಮಾನಗಳು, ಸಬ್‌ಮರೀನ್ ಟ್ಯಾಂಕರ್‌ಗಳು ಆಗ ಯುದ್ಧಕ್ಕೆ ನಿಂತ ಎಲ್ಲ ದೇಶಗಳ ಹತ್ತಿರವಿದ್ದವು – ಅದೆಲ್ಲದರ ಜತೆ ಸೈನಿಕರ ಮನುಷ್ಯತ್ವವನ್ನು ನಾಶಮಾಡಿಬಿಡುವ, ಅವರನ್ನು ರಾಕ್ಷಸರನ್ನಾಗಿಸುವ ಕೊಕೇನ್. ಯುದ್ಧ ಸಲಕರಣೆಗಳು, ಸೈನಿಕರು ಮತ್ತು ಕೊಕೇನ್ – ಡೆಡ್ಲಿ ಕಾಂಬಿನೇಷನ್. ತಮ್ಮ ಸೈನಿಕರ ಜೀವದ ಕಾಳಜಿ ಯಾವ ದೇಶಕ್ಕೂ ಇರಲಿಲ್ಲ. ಇದು ಹಿಂದೆಂದೂ ಗತಿಸದ ಸ್ಥಿತಿ. ಹೀಗೆ ಶುರುವಾಗಿದ್ದು ಮೊದಲ ಜಾಗತಿಕ ಯುದ್ಧ. ಯುದ್ಧದಲ್ಲಿ ಜರ್ಮನ್, ರಷ್ಯನ್ ಮತ್ತು ಫ್ರೆಂಚ್ ಯೋಧರು ನಗುತ್ತಲೇ ಪ್ರಾಣ ಬಿಟ್ಟರು. ಅದಕ್ಕೆ ಕಾರಣ ದೇಶಪ್ರೇಮವೂ ಅಲ್ಲ, ಬೇರಿನ್ನೊಂದು ಮಣ್ಣಂಗಟ್ಟೆಯೂ ಅಲ್ಲ. ಇಹ ಪರವನ್ನೇ ಅರಿಯದ ಸ್ಥಿತಿಯಲ್ಲಿಯೇ, ಕೊಕೇನ್‌ನ, ಹೆರೋಯಿನ್‌ನ ‘ಹೈ’ ನಲ್ಲಿಯೇ ಈ ಯುದ್ಧ ನಡೆದದ್ದು – ಹಾಗಾಗಿ ಸೈನಿಕರುನಗುತ್ತಲೇ ಸತ್ತದ್ದು.
ಮೊದಲ ಮಹಾ ಯುದ್ಧ ಹೀಗೆ ಮತ್ತಿನಲ್ಲಿಯೇ1918ರಲ್ಲಿ ಕೊನೆಗೊಂಡಿತ್ತು. ನೋ ಡೌಟ್ – ಅಂತಹ ಕ್ರೌರ್ಯ ಈ ಭೂಮಿ ಹಿಂದೆಂದೂ ಕಂಡಿರಲಿಲ್ಲ. ಅಡಾಲ ಹಿಟ್ಲರ್. ಮೊದಲ ಮಹಾಯುದ್ಧದಲ್ಲಿ ಫೂಟ್ಸೋಲ್ಜರ್ ಆಗಿ ಮತ್ತಿನಲ್ಲಿ ಹೊಡೆದಾಡಿದ ಸೈನಿಕರಲ್ಲಿ ಆತನೂ ಒಬ್ಬ. ಯುದ್ಧದ ಮಾರನೆಯ ವರ್ಷವೇ ವರ್ಕರ್ಸ್ ಪಾರ್ಟಿ ಸೇರಿದ ಹಿಟ್ಲರ್‌ನ ಮಾತು, ನಡೆ, ವಿಚಾರ ಅದೆಷ್ಟು ಅದ್ಭುತ ವಿತ್ತು ಎಂದರೆ ಎರಡೇ ವರ್ಷದಲ್ಲಿ ಪಾರ್ಟಿಯ ಅಧ್ಯಕ್ಷನಾಗಿ, ಮಾರನೆಯ ವರ್ಷ ಅಲ್ಲಿನ ಸರಕಾರವನ್ನು ಉರುಳಿಸಲು ಸಂಚುಮಾಡಿ ಜೈಲು ಪಾಲಾದ. ಆಮೇಲೆ ವರ್ಷದೊಳಗೆ ಹೊರಬಂದ ಹಿಟ್ಲರ್ ಜನರನ್ನು ಸಂಘಟಿಸಿದ ಮತ್ತು ಇನ್ನೇ ನೇನೋ ಆದವು.
ಕೊನೆಯಲ್ಲಿ1933ಹಿಟ್ಲರ್ ಜರ್ಮನಿಯ ಚಾನ್ಸಲರ್ ಆಗಿ ಸಿಂಹಾಸನ ಏರಿಬಿಟ್ಟ. ಹಿಟ್ಲರ್ ಅಧಿಕಾರಕ್ಕೆ ಬಂದಾಗ ಈಡ್ರಗ್ಸ್’ನಸಮಸ್ಯೆಯ ಅರಿವೂ ಆತನಿಗೆ ಇತ್ತು. ಇದನ್ನು ಕಿತ್ತೊಗೆಯಬೇಕೆಂದೇ ಆತನ ಗಟ್ಟಿ ನಿಲುವಾಗಿತ್ತು. ಆದರೆ ಇನ್ನೊಂದು ಯುದ್ಧ ಪಕ್ಕಾ ಮುಂದಿದ್ದದ್ದು ಎಲ್ಲರಿಗೂ ಅಂದಾಜು ಹತ್ತಿತ್ತು. ಹಿಟ್ಲರ್‌ನಿಗೂ ಅಸಾಮಾನ್ಯ ಸೈನಿಕರ ಅವಶ್ಯಕತೆಯ ಅರಿವಿತ್ತು. ಆತ ಅಧಿಕಾರಕ್ಕೆ ಬರುವಒಂದೆರಡು ವರ್ಷದ ಮೊದಲು ಖಿನ್ನತೆ ಮತ್ತು ಹೆದರಿಕೆಯನ್ನು ಹೋಗಲಾಡಿಸಲು ಇನ್ನೊಂದು ಗುಳಿಗೆ ಆವಿಷ್ಕಾರವಾಯಿತು. ಈ ಗುಳಿಗೆ ಮನುಷ್ಯನ ಹಸಿವು, ಹೆದರಿಕೆಯನ್ನು ಹೋಗಲಾಡಿಸುವಂಥದ್ದು.
ಅದುವೇ ಪರ್ವೆಟಿನ್ / ಎಂ-ಟಾಮಿನ್. ಅದರ ಬಳಕೆ ಎಂಥಾ ಸಾಮಾನ್ಯನನ್ನೂ ಅಸಾಮಾನ್ಯನನ್ನಾಗಿಸುವಂಥದ್ದು.1939ರಲ್ಲಿ ಹಿಟ್ಲರ್ಪೋಲ್ಯಾಂಡಿನ ಮೇಲೆ ಯುದ್ಧಸಾರಿದ. ಅದು ಎರಡನೇ ವಿಶ್ವಯುದ್ಧದ ಶುರು. ಈಗ ಎಲ್ಲ ದೇಶಗಳಿಗೂ ಒಂದೊಂದುಡ್ರಗ್ಸ್ಗಳಿದ್ದವು. ಆ ಕಾರಣಕ್ಕೆ ಎರಡನೇ ಮಹಾಯುದ್ಧ ಇನ್ನಷ್ಟು ಭೀಕರವಾದದ್ದು. ಅದೆಷ್ಟು ಭೀಕರವೆನ್ನಲು ಸಾವಿನ ಸಂಖ್ಯೆಯೊಂದೇ ಸಾಕು – ೮.೫ ಕೋಟಿ ಅಂದಾಜು.ಡ್ರಗ್ಸ್ನಜತೆ ವೋಡ್ಕಾವನ್ನು ಕೊಡುವುದು ಅತ್ಯಂತ ಸಾಮಾನ್ಯವಾಗಿತ್ತು. ಒಂದೊಂದು ದೇಶದ ಸೈನಿಕರದ್ದು ಒಂದೊಂದು ನಶೆ. ಕ್ರಮೇಣ ಸೈನಿಕರಿಗೆ ನಶೆಯಿಂದಾಗಿ ದೆವ್ವ ಭೂತಗಳೆಲ್ಲ ಯುದ್ಧಭೂಮಿಯಲ್ಲಿ ಕಾಣಿಸಿಕೊಳ್ಳಲು ಶುರು ವಾದವು.
ಆತ್ಮಹತ್ಯೆಗಳು ಹೆಚ್ಚಿದವು. ಇದು ಹಿಟ್ಲರ್ ನಿಗೆ ತಲೆಬಿಸಿಯ ವಿಚಾರವಾಯಿತು. ಅದರೆ ಆ ಬಗ್ಗೆ ಕ್ಯಾರೇ ಇರಲಿಲ್ಲ. ಆತನಿಗೆ ಬೇಕಾದದ್ದು ಗೆಲುವು ಮಾತ್ರ. ಅತ್ತ ಜಪಾನ್ ಮತ್ತು ಅಮೆರಿಕ ಇನ್ನಷ್ಟುಡ್ರಗ್ಸ್ನಆವಿಷ್ಕಾರಕ್ಕೆ ಇಳಿದವು. ಜಪಾನ್‌ನ ಆವಿಷ್ಕಾರ ಹಿರಪೊನ್ ಎನ್ನುವಇನ್ನೊಂದುಡ್ರಗ್ಸ್. ಅಮೆರಿಕ ಮತ್ತು ಬ್ರಿಟೀಷರು ಎಂ-ಟಾಮಿನ್ ಎನ್ನುವ ಇನ್ನೊಂದುಡ್ರಗ್ಸ್ನಮೊರೆ ಹೋದರು. ಎಲ್ಲರೂ ಅವರವರ ಸೈನಿಕರಿಗೆ ಚುಚ್ಚಿ ಮತ್ತೇರಿಸಿಯೇ ಯುದ್ಧಕ್ಕೆ ಬಿಡುತ್ತಿದ್ದುದು. ದಿನ, ತಿಂಗಳು ಕಳೆದಂತೆ ಈ ಸೈನಿಕರು ಅಕ್ಷರಶಃ ರಾಕ್ಷಸರಾಗಿಬಿಟ್ಟಿದ್ದರು. ಅವರನ್ನು ಸಾವು, ರಕ್ತ, ಅಳು, ಆಕ್ರಂದನ ಯಾವುದೂ ಒಂದಿನಿತೂ ವಿಚಲಿತರನ್ನಾಗಿಸುತ್ತಿರಲಿಲ್ಲ.
ತಮ್ಮದೇ ಕೈ ಕಾಲು ತುಂಡಾದರೂ ಅವರು ನಗುತ್ತಿ ದ್ದರು!! ಜರ್ಮನಿಯ ಸೈನಿಕರ ಅರೋಗ್ಯ ತೀರಾ ಹದಗೆಟ್ಟಿತ್ತು – ಆದರೆ ನಶೆಯಲ್ಲಿ ಅವರ ಶೌರತ್ವಕ್ಕೆ ಕೊರತೆಯಾಗಲಿಲ್ಲ.  ! ಡ್ರಗ್ಸ್ಅನ್ನು ನಿಷೇಧಿಸಬೇಕೆಂದು ಹೇಳುತ್ತ ಅಧಿಕಾರಕ್ಕೆ ಬಂದ ಹಿಟ್ಲರ್ಡ್ರಗ್ಸ್ಅನ್ನು ಸೈನಿಕರಿಗೆ ಕೇಳಿದಷ್ಟು ಕೊಡುವುದಕ್ಕೆ ಆದೇಶಿಸಿದ್ದ. ಎರಡನೇ ಜಾಗತಿಕ ಯುದ್ಧ ಶುರುವಾಗುವುದಕ್ಕಿಂತ ನಾಲ್ಕು ವರ್ಷ ಮೊದಲು ಹಿಟ್ಲರ್ ಚರ್ಮರೋಗ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆತನ ಖಾಸಗಿ ಫೋಟೋಗ್ರಾಫರ್ ತನಗೂ ಇಂಥದ್ದೇ ರೋಗ ಬಂದಿತ್ತು, ನನ್ನ ಡಾಕ್ಟರ್ ಅದನ್ನು ಗುಣಪಡಿಸಿದರು ಎಂದಾಗ ಹಿಟ್ಲರ್ ಆ ಡಾಕ್ಟರ್‌ಗೆ ಬುಲಾವ್ ಕಳಿಸಿದ. ಆತ ಇನ್ನೊಂದು ವರ್ಷದೊಳಗೆ ಹಿಟ್ಲರ್ ಅನ್ನು ಗುಣಪಡಿಸುತ್ತೇನೆ ಎಂದು ಮಾತು ಕೊಟ್ಟ ಮತ್ತು ಔಷದೋಪಚಾರ ಶುರುವಾಯ್ತು.
ಮುಂದಿನ ಕೆಲವೇ ದಿನದಲ್ಲಿ ಹಿಟ್ಲರ್ ಆರಾಮಾಗಿದ್ದ. ಇದನ್ನು ನೋಡಿದ ಹಿಟ್ಲರ್ ಥೊಯೋಡರ್ ಮೊರೆಲ್ ಎನ್ನುವ ಆ ವೈದ್ಯನನ್ನು ನೆಚ್ಚಿ ತನ್ನ ಖಾಸಗಿ ವೈದ್ಯನನ್ನಾ ಗಿಸಿಕೊಂಡ. ಮೊರೆಲ್ ಹಿಟ್ಲರ್‌ಗೆ ಕೊಡುತ್ತಿದ್ದದ್ದು ಔಷಧಿಯಾಗಿರಲಿಲ್ಲ – ಬದಲಿಗೆಡ್ರಗ್ಸ್ಆಗಿತ್ತು. ಅದರಿಂದಾಗಿ ಹಿಟ್ಲರ್‌ನ ಹೊಟ್ಟೆ ನೋವು ಕಡಿಮೆ ಎನ್ನುವುದಕ್ಕಿಂತ ಗ್ರಹಿಕೆಗೇ ಬಾರದಂತಾಗಿ ಹೋಗಿತ್ತು. ಅಲ್ಲಿಂದ ಮುಂದೆ ಹಿಟ್ಲರ್‌ನಿಗೆ ಅರಿವಿರದಂತೆ ಬಹಳ ಕಾಲ ಡ್ರಗ್ಸನ್ನು ಇದೇ ಡಾಕ್ಟರ್ ಚುಚ್ಚುತ್ತ ಹೋದ. ಹಿಟ್ಲರ್ ಡ್ರಗ್ಅಡ್ದಿಕ್ಸ್ಆಗಿಹೋಗಿದ್ದ. ಈ ರೀತಿ ಹಿಟ್ಲರ್‌ಗೆಡ್ರಗ್ಸ್ಕೊಡುತ್ತಿದ್ದದ್ದು ಆತನ ಸೈನ್ಯಾಧಿಕಾರಿಗೆ ತಿಳಿಯಿತು. ಅದನ್ನು ಹಿಟ್ಲರ್‌ನ ಹತ್ತಿರ ಹೇಳಿದಾಗ ಆ ಸೈನ್ಯಾಧಿಕಾರಿಯನ್ನೇ ಹಿಟ್ಲರ್ ಕೊಂದು ಹಾಕುವಂತೆ ಆದೇಶಿಸಿದ. ಹಿಟ್ಲರ್ ಅಷ್ಟರ ರಾಕ್ಷಸನಾಗಿ ಹೋಗಿದ್ದ!
ಯುದ್ಧದ ಮಧ್ಯ ಕಾಲದಲ್ಲಿ ಹಿಟ್ಲರ್ಡ್ರಗ್ಸ್ಇಲ್ಲದೇ ವಿಚಾರ ಮಾಡಲು ಕೂಡ ಆಗದ ಸ್ಥಿತಿ ತಲುಪಿದ್ದ. ನೀವು ಹಿಟ್ಲರ್ ಕುಳಿತುಕೊಂಡವಿಡಿಯೊಗಳನ್ನು ನೋಡಿದರೆ ಆತ ಕೈ ಅನ್ನು ಮೊಣಕಾಲಿಗೆ ಅಥವಾ ಇನ್ನೆ ಉಜ್ಜುತ್ತಿರುವುದು ಕಾಣಿಸುತ್ತದೆ. ಇದು ಹಿಟ್ಲರ್ ತನ್ನ ಕೈ ನಡುಗುವುದನ್ನು ಮರೆಮಾಚಲು ಮಾಡುತ್ತಿದ್ದುದು. ಹಿಟ್ಲರ್ ಚೈತನ್ಯಯುತವಾಗಿ ಒಂದು ಕ್ಷಣ ಇದ್ದರೆ ಇನ್ನೊಂದು ಕ್ಷಣ ಸಿಟ್ಟಿಗೇಳುತ್ತಿದ್ದ. ತೀವ್ರ ಮೂಡ್ ಸ್ವಿಂಗ್ ಆಗುತ್ತಿರುತ್ತಿತ್ತು. ಕೆಫೀನ್, ಬೆಲಡೋನ, ಅಫೀಮ, ಕೊಕೇನ್, ಎಂ-ಟಾಮಿನ್, ಮೆಥಾಮೆಟಾಮಿನ್ – ಇದರ ಮಿಶ್ರಣವನ್ನು ಹಿಟ್ಲರ್‌ಗೆ ಈ ವೈದ್ಯ ಕೊಡುತ್ತಿದ್ದ. ಹಿಟ್ಲರ್ ಆದೇಶ, ಸೈನ್ಯದ ಪಾಲನೆ ಇವೆಲ್ಲವೂ ಡ್ರಗ್ ನಶೆಯಲ್ಲಿಯೇ. ನಂತರ ಹೀಗೆಹತ್ತಾರುಡ್ರಗ್ಸ್ಗಳು ಬಂದವು.
ವಿಶ್ವಯುದ್ಧದ ನಂತರವೂ ಕೆಲಕಾಲ ಸೈನ್ಯದಲ್ಲಿಡ್ರಗ್ಸ್ನ ಬಳಕೆ ಮುಂದುವರಿಯಿತು ಎನ್ನುವುದಕ್ಕೆ ಅಲ್ಲಲ್ಲಿ ದಾಖಲೆಗಳು ಸಿಗುತ್ತವೆ. ಆದರೆ ಈಗೊಂದು ನಾಲ್ಕು ದಶಕದ ಹಿಂದೆ ಇದೆಲ್ಲ ನಿಂತಿದೆ ಎಂದುಕೊಂಡಿದ್ದೆ. ಆದರೆ 2002ನಲ್ಲಿ ಬಂದ ಒಂದು ಸುದ್ದಿ ನಿಮಗೆ ನೆನಪಿರಬಹುದು. ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಪೈಲೆಟ್ ಗ್ಯಾರಿ ಶ್ಮಿತ್ ಬಾಂಬರ್ ಯುದ್ಧ ವಿಮಾನವನ್ನು ಹಾರಿಸುವಾಗ ತನ್ನದೇ – ಅಮೆರಿಕನ್ ಸೈನ್ಯದ ಬೇಸ್ ಮೇಲೆ ಬಾಂಬ್ ದಾಳಿ ಮಾಡಿಬಿಟ್ಟಿದ್ದ. ಇದು ಆಗ ದೊಡ್ಡ ಸುದ್ದಿಯಾಗಿತ್ತು. ನಂತರದ ವರ್ಷಗಳಲ್ಲಿ, ಇದರ ವಿಚಾರಣೆಯ ವೇಳೆಯಲ್ಲಿ ಅಮೆರಿಕದ ಕಮಾಂಡರ್‌ಗಳುಎಂ-ಟಾಮಿನ್ಮತ್ತು ಡೆಕ್ಸಾಟ್ರಿನ್ ಎನ್ನುವ ಇನ್ನೊಂದು ಮಾದಕ ಡ್ರಗ್ ಅನ್ನುತನ್ನ ಸೈನಿಕರಿಗೆ ಕೊಡುತ್ತಿದ್ದುದು ಮತ್ತು ಅದರಿಂದಾಗಿ ಮತ್ತಿನಲ್ಲಿ ಗ್ಯಾರಿ ತನ್ನ ಸೈನಿಕರ ಮೇಲೆಯೇ ಬಾಂಬ್ ದಾಳಿ ಮಾಡಿದ್ದೂ ಹೊರಬಂತು.
ಇರಾಕ್ ಯುದ್ಧದಲ್ಲಿ ಹೆಸರು ಬಹಿರಂಗಪಡಿಸದ ಡ್ರಗ್ ಒಂದನ್ನು ತನ್ನ ಸೈನಿಕರಿಗೆ ನೀಡಲು ಪೆಂಟಗಾನ್ ಅನುಮತಿ ನೀಡಿತ್ತು.9/11ಘಟನೆಯ ನಂತರದ ಯುದ್ಧದಲ್ಲಿ ಸತ್ತ ಅಮೆರಿಕನ್ ಸೈನಿಕರಲ್ಲಿ ಶೇ.22.3ರಷ್ಟು ಸತ್ತಿದ್ದು ಆತ್ಮಹತ್ಯೆಯಿಂದ. ಇದು ಅಮೆರಿಕವೊಂದರ ಸೈನ್ಯದ ಕಥೆಯೆಂದು ತಪ್ಪಾಗಿ ಅರ್ಥೈಸಬೇಡಿ. ಆಧುನಿಕ ಯುದ್ಧಡ್ರಗ್ಸ್,ಆಲ್ಕೋಹಾಲ್ ನಶೆಯಿಲ್ಲದೆ ನಡೆಯುವುದಿಲ್ಲ. ಏಕೆಂದರೆ ಯುದ್ಧಕ್ಕೆ ಬೇಕು ಸೂಪರ್, ಅಸಾಮಾನ್ಯ, ಅತಿಮಾನುಷ ಸೈನಿಕರು. ಇದೆಲ್ಲ ಬರೆಯುವಾಗ ನೆನಪಾದದ್ದು ಬಾಲಮಂಗಳದ ‘ಶಕ್ತಿ-ಮದ್ದು’, ಅಲ್ಲಿ ಒಬ್ಬ ವೈದ್ಯರು, ಒಬ್ಬ ಕೃಶಕಾಯದ ಲಂಬೋದರ.
(ಮುಗಿಯಿತು)