ತೆರೇಸಾರ ಸಂಸ್ಥೆಯನ್ನೇ ಕಾಪಾಡಲಿಲ್ಲ ಏಸಪ್ಪ
ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
@.
‘ಮದರ್ ತೆರೇಸಾ’ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಚಿಕ್ಕ ವಯಸ್ಸಿನಲ್ಲಿ ನಾವುಗಳು ಓದಿದ ಪಠ್ಯಪುಸ್ತಕಗಳಲ್ಲಿ ಈಕೆಯನ್ನು ಜಗತ್ತಿನಲ್ಲಿ ಸೇವೆ ಮಾಡಲೆಂದೇ ಹುಟ್ಟಿರುವ ದೇವತೆಯೆಂಬಂತೆ ಬಿಂಬಿಸಲಾಗಿತ್ತು. ನಾನು ಓದುತ್ತಿದ್ದ ಶಾಲೆಗೆ ಕ್ರಿಶ್ಚಿಯನ್ ಮಿಷನರಿಯೊಂದು ನಡೆಸುತ್ತಿದ್ದ ಹಾಸ್ಟೆಲನಿಂದ ನಿತ್ಯ 50 ರಿಂದ 60 ಮಕ್ಕಳು ಬರುತ್ತಿದ್ದರು. ಇವರಲ್ಲಿ ಬಹುತೇಕರಿಗೆ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಇತ್ತೆಂಬುದನ್ನು ಬಿಟ್ಟರೆ ಸುಸಂಸ್ಕೃತ ಕುಟುಂಬದ ಹಿನ್ನಲೆಯಿಂದ ಬಂದವರಾಗಿದ್ದರು ಹಾಗೂ ಬಹುತೇಕರು ಹಿಂದೂ ಧರ್ಮದವರಾಗಿದ್ದವ ರರು.
ಆದರೆ ಇವರ ಹಾಸ್ಟೆಲ್ ನಡೆಸುತ್ತಿದ್ದದ್ದು ಕ್ರಿಶ್ಚಿಯನ್ ಮಿಷನರಿಯಾಗಿದ್ದರಿಂದ ಪ್ರತಿನಿತ್ಯ ಮತ್ತದೇ ಏಸು ಕ್ರಿಸ್ತನ ಜಪ. ಆ ಮಕ್ಕಳ ತಲೆ ಯಲ್ಲಿ ಮದರ್ ತೆರೇಸಾರ ಹೆಸರನ್ನು ಅದೆಷ್ಟು ಆಳವಾಗಿ ತುಂಬಲಾಗಿತ್ತೆಂದರೆ, ಸೇವೆಯೆಂದರೆ ಸಾಕು ತೆರೇಸಾ ಹೆಸರು ಬಿಟ್ಟು ಮತ್ಯಾವ ಹೆಸರೂ ಕೇಳಿಸುತ್ತಿರಲಿಲ್ಲ. ಒಂದು ಹಂತದಲ್ಲಿ ನಮ್ಮಗಳ ಮನಸ್ಸಿ ನಲ್ಲಿಯೂ ಮದರ್ ತೆರೇಸಾ ದೇವರಂತೆ ಕಂಡಿದ್ದು ಸುಳ್ಳಲ್ಲ. ಈಕೆಯ ಸೇವೆ ಮೆಚ್ಚಿ 1979ರಲ್ಲಿಯೇ ನೊಬೆಲ ಶಾಂತಿ ಪುರಸ್ಕಾರ ನೀಡಲಾಗಿತ್ತು.
ಸೇವೆ ಮೆಚ್ಚಿದರೋ ಅಥವಾ ಸೇವೆ ಹೆಸರಿನಲ್ಲಿ ಆಕೆ ನಡೆಸಿದ ಮತಾಂತರ ಮೆಚ್ಚಿ ಪಾಶ್ಚಿಮಾತ್ಯ ದೇಶಗಳು ನೊಬೆಲ ಪ್ರಶಸ್ತಿ ನೀಡಿ ದವೋ? ತೆರೇಸಾ ಭಾರತಕ್ಕೆ ಬರುವ ಮೊದಲೇ ಸೋದರಿ ನಿವೇದಿತಾ ಕೊಲ್ಕತಾಕ್ಕೆ ಬಂದು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಆಕೆಯ ಸೇಯನ್ನು ನಾವ್ಯಾರೂ ಪಠ್ಯಗಳಲ್ಲಿ ಓದಲೇ ಇಲ್ಲ. ವಿವೇಕಾನಂದರ ಚಿಂತನೆಗಳನ್ನು ಅನುಷ್ಠಾನಗೊಳಿಸಲು ಆಕೆ ಪಟ್ಟಂತಹ ಕಷ್ಟಗಳ ಬಗ್ಗೆ ಉಖವೇ ಇಲ್ಲ. ಆಕೆಗೆ ನೊಬೆಲ ಬೇಡ, ಭಾರತ ರತ್ನವೂ ಸಿಗಲಿಲ್ಲ. ಯಾಕೆಂದರೆ ಆಕೆ ಪಾಶ್ಚಿಮಾತ್ಯರ ಸೇವೆಯ ಹೆಸರಿನ ಮತಾಂತರ ಮಾಡಲಿಲ್ಲ.
ಕೋಲ್ಕತಾದಲ್ಲಿ 1950ರಲ್ಲಿ ’’  ’’ ಸ್ಥಾಪನೆ ಮಾಡಿದ ಮದರ್ ತೆರೇಸಾ ಸೇವೆಗೆಂದು ಆಯ್ದು ಕೊಂಡಿದ್ದು ಕುಷ್ಠ ರೋಗಿಗಳು, ಕ್ಷಯ ರೋಗಿ ಗಳು, ಬುದ್ಧಿ ಮಾಂದ್ಯರು, ವೃದ್ಧರು. ಸಣ್ಣ ದವಾಖಾನೆಗಳು, ಆಸ್ಪತ್ರೆಗಳು, ಸೇವಾ ಕೇಂದ್ರ ಗಳನ್ನು ತೆರೆದು ಸೇವೆ ಮಾಡುತ್ತ ಬಂದಿತ್ತು ’  ’. ಏಳು ದಶಕಗಳಿಂದ ಪಾಶ್ಚಿಮಾತ್ಯ ದೇಶಗಳಿಂದ ನೂರಾರು ಕೋಟಿ ಹಣ ’  ’ಸಂಸ್ಥೆಗೆ ದೇಣಿಗೆ ರೂಪದಲ್ಲಿ ಬಂದು ಬೀಳುತ್ತಿತ್ತು.
ಸೇವೆಯ ಹೆಸರಿನಲ್ಲಿ ತೆರೇಸಾ ಮತಾಂತರ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂತು. ವಿದೇಶಿ ದೇಣಿಗೆಗಳ ಮೂಲ ಹಾಗೂ ಬಳಕೆ ಯನ್ನು ನಿಯಂತ್ರಿಸಲು ‘ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ’ ಹಲವು ನಿರ್ಬಂಧ ಹೇರಲಾಯಿತು. ಅದರನ್ವಯ ಪ್ರತಿ ವರ್ಷ ವಿದೇಶ ಗಳಿಂದ ಬರುವ ಹಣ ಹಾಗೂ ಅದರ ಬಳಕೆ ಲೆಕ್ಕ ಪರಿಶೋಧಿಸಿ ವರದಿ ನೀಡಬೇಕು. ಈ ವರದಿಗಳಲ್ಲಿ ಲೋಪಗಳು ಕಂಡು ಬಂದರೆ ಆ ಸಂಸ್ಥೆಯ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ಒಮ್ಮೆ ರದ್ದು ಮಾಡಿದರೆ, ಪುನರ್ ಪರಿಶೀಲನೆಗೊಳಪಡಿ ಸುವುದು ಸುಲಭದ ಕೆಲಸವಲ್ಲ. ಆದರೆ ೨೦೧೪ರ ವರೆಗೂ ಅಂಟೋನಿಯೋ ಮೈನೋ ನೇತೃತ್ವದ ಸರಕಾರವಿತ್ತು.
’  ’ ಎಂತಹದ್ದೇ ವರದಿ ನೀಡಿದರೂ ಸರಕಾರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಲೆ ಕೆಡಿಸಿಕೊಂಡರೂ ‘ವ್ಯಾಟಿಕನ್’ನಿಂದ ಕರೆ ಬರುತ್ತಿತ್ತು, ಸಮಸ್ಯೆ ಪರಿಹಾರವಾಗುತ್ತಿತ್ತು. ಕಳೆದ ವಾರ ’’  ’ ಸಂಸ್ಥೆ ತನ್ನ ದೇಣಿಗೆಗಳು ಹಾಗೂ ಅದರ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲದ ಕಾರಣಕ್ಕಾಗಿ, ಅದರ ಪರವಾನಗಿ ರದ್ದುಗೊಳಿಸಲಾಗಿದೆ. ಅದರ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಗೊಳಿಸಲಾಗಿದೆಯೆಂದು ಹೇಳಲಾಗುತ್ತಿದೆ. ನಿಜವಾದ ಸೇವೆಯಲ್ಲಿ ಈ ಸಂಸ್ಥೆ ತೊಡಗಿದ್ದರೆ ಪರವಾನಗಿ ರದ್ದುಗೊಳಿಸುವ ಪ್ರಮೇಯ ಬರುತ್ತಿರಲಿಲ್ಲ. ಸಂದಾಯವಾದ ಹಣ ಬೇರೆಡೆಗೆ ಬಳಕೆಯಾಗುತ್ತಿರುವ ಕಾರಣಕ್ಕಾಗಿ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈಗಾಗಲೇ ಕಮ್ಯುನಿಸ್ಟರು ಈ ಬಗ್ಗೆ ಜಾತ್ಯತೀತತೆ ಮೇಲಿನ ದಾಳಿಯೆಂದು ಹೇಳಿಕೊಂಡು ತಿರುಗುತ್ತಿದ್ದಾರೆ.
ಮಮತಾ ಬ್ಯಾನರ್ಜಿಯಂತೂ ಕೇಂದ್ರ ಸರಕಾರ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿಯೆಂದು ಹೇಳಿಕೆ ನೀಡಿಯಾಯಿತು.1994ರಲ್ಲಿ ’’ ’ಎಂಬ ಸಾಕ್ಷ್ಯಚಿತ್ರ ಬಿಡುಗಡೆಯಾಗಿತ್ತು. ಮದರ್ ತೆರೇಸಾ ನಡೆಸುತ್ತಿದ್ದ ಸಂಸ್ಥೆಯಲ್ಲಿ ಸ್ವಯಂ ಪ್ರೇರಿತ ನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಈ ಸಾಕ್ಷ್ಯಚಿತ್ರದ ರೂವಾರಿಯೆಂದು ಹೇಳಲಾಗುತ್ತದೆ. ಹೀಗಾಗಿ ಇದರಲ್ಲಿನ ಅಂಶಗಳನ್ನು ನಂಬ ಬಹುದು. ಈ ಸಾಕ್ಷ್ಯಚಿತ್ರದಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಕೊಠಡಿಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಹೇಳಲಾಗಿದೆ.
ನೂರಾರು ರೋಗಿಗಳಿರುವ ಕೊಠಡಿಗಳಿಗೆ ಒಂದು ಅಥವಾ ಎರಡು ಶೌಚಾಲಯಗಳು. ಈ ಶೌಚಾಲಯಗಳನ್ನೂ ಸರಿಯಾಗಿ ಸ್ವಚ್ಛ ಗೊಳಿಸುತ್ತಿರಲಿಲ್ಲ ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ಒಂದೇ ಸೂಜಿಯನ್ನು ಹಲವು ರೋಗಿಗಳಿಗೆ ಬಳಸುತ್ತಿದ್ದರೆಂಬ ಆರೋಪವಿದೆ. ಅದೇ ಸೂರಿನಲ್ಲಿ ’ಏಐ’ ಪೀಡಿತರಿಗೂ ಚಿಕಿತ್ಸೆ ನೀಡಲಾಗುತ್ತಿತ್ತೆಂದರೆ ಮುಂದಿನ ದನ್ನು ಅರ್ಥ ಮಾಡಿಕೊಳ್ಳಿ. ಸೂಜಿಗಳನ್ನು  ’’ ಕೂಡ ಮಾಡದೆ ಇತರ ರೋಗಿಗಳಿಗೆ ಬಳಸಲಾಗುತ್ತಿತ್ತು. ಅಂದಿನ ಕಾಲಕ್ಕೆ ಭಾರತವೆಂಬ ಬಡರಾಷ್ಟ್ರದಲ್ಲಿ ರೋಗ ಗಳಿಗೆ ಚಿಕಿತ್ಸೆ ನೀಡಲು ಬೇಕಿದ್ದಂತಹ ದೇಣಿಗೆ ಸಂಗ್ರಹ ಕಷ್ಟಗಿದ್ದ ಕಾರಣಕ್ಕಾಗಿ ಈ ರೀತಿ ನಡೆದಿರಬಹುದೆಂದು ಕೆಲವು ಕಮ್ಯುನಿಸ್ಟರು ವಾದ ಮಾಡುತ್ತಾರೆ.
ಆದರೆ ವಿದೇಶಗಳಿಂದ ಬಂದ ಮಿಲಿಯನ್‌ಗಟ್ಟಲೆ ಹಣ ಎಲ್ಲಿ ಹೋಯಿತು? ರೋಗಿಗಳ ಸೇವೆಯಲ್ಲಿ ಸರಿಯಾಗಿ ಬಳಕೆಯಾಗಿದ್ದರೆ ಈ ಸಾಕ್ಷ್ಯಚಿತ್ರದಲ್ಲಿ ಹೇಳಿರುವಂತೆ ಸೂಜಿ ಬದಲಾಯಿಸುವಷ್ಟು ಹಣವೂ ಇರಲಿಲ್ಲವೇ? ಇನ್ನು ರೋಗಿಗಳಿಗೆ ಸರಿಯಾದ ‘ಬಿಸಿ ನೀರಿನ’ ವ್ಯವಸ್ಥೆ ಇರಲಿಲ್ಲವಂತೆ. ಮಕ್ಕಳು ಹಾಗೂ ಬುದ್ಧಿಮಾಂದ್ಯರನ್ನು ಹಗ್ಗದಿಂದ ಕಟ್ಟಿ ಹಾಕಿದ ದೃಶ್ಯಗಳನ್ನು ನೋಡಿರುವವರಿದ್ದಾರೆ.
ರೋಗಿಗಳ ಮೇಲೆ ಇಷ್ಟೆಲ್ಲ ಹಿಂಸೆ ನಡೆಯುತ್ತಿದ್ದರೂ ‘ಮಾನವ ಹಕ್ಕುಗಳ ಆಯೋಗ’ ತುಟಿ ಬಿಚ್ಚಿರಲಿಲ್ಲ. ಪೊಲೀಸರು ಕ್ರಿಮಿನಲ್‌ಗಳನ್ನು ಎನ್‌ಕೌಂಟರ್ ಮಾಡಿದಾಕ್ಷಣ ಹದ್ದುಗಳಂತೆ ಓಡೋಡಿ ಬರುವ ಮಾನವ ಹಕ್ಕುಗಳ ಆಯೋಗದವರಿಗೆ ಪಾಪ ಈ ರೋಗಿಗಳು ಕಾಣಿಸಲೇ ಇಲ್ಲ. ಒಬ್ಬಿಬ್ಬರು ಗುಣ ಮುಖರಾಗಿರುವ ರೋಗಿಗಳ ವಿಡಿಯೋ ತುಣುಕನ್ನು ಜಗತ್ತಿಗೆ ತೋರಿಸಿ ಮಂಕುಬೂದಿ ಎರಚಲಾಗುತ್ತಿತ್ತು. ಚಿಕಿತ್ಸಾಲಯಗಳ ಒಳಗಿನ ವಿಡಿಯೋವನ್ನು ಸಂಪೂರ್ಣ ತೋರಿಸುವ ಧೈರ್ಯ ಮಾಡಿರಲಿಲ್ಲ.
ಇದೆಲ್ಲವನ್ನೂ ನೋಡಿದರೆ ರೋಗಿಗಳನ್ನು ಗುಣಪಡಿಸುವುದು ಬಿಡಿ, ಕನಿಷ್ಠ ಪಕ್ಷ ಅವರ ಪರಿಸ್ಥಿಯನ್ನು ಅಲ್ಪವಾದರೂ ಬದಲಾಯಿಸುವ ಕೆಲಸವನ್ನೂ ಈಕೆ ಮಾಡಿರಲಿಲ್ಲವೆಂಬ ಅನುಮಾನ ಯಾರಿಗಾದರೂ ಬರುತ್ತದೆ. ಸೇವೆ ಹೆಸರಿನಲ್ಲಿ ಮಿಷನರಿಗಳು ಈಶಾನ್ಯ ಭಾರತದ ರಾಜ್ಯಗಳ ಚಿತ್ರಣಗಳನ್ನೇ ಬದಲಾಯಿಸಿಬಿಟ್ಟಿವೆ. ಕಾಂಗ್ರೆಸ್ ನೇತೃತ್ವದ ಸರಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಕಡೆಗೆ ಹೆಚ್ಚುಗಮನ ಹರಿಸದ ಕಾರಣ ಮಿಷನರಿಗಳು ಸೇವೆಯ ಹೆಸರಿನಲ್ಲಿ ಬಹುದೊಡ್ಡ ಮತಾಂತರ ಮಾಡಿದವು. ನೋಡ ನೋಡುತ್ತಲೇ ಈ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿ ಬಿಟ್ಟರು.
ಮಿಷನರಿUಳಂತೆ ಯಾರೂ ಸೇವೆ ಮಾಡಿಲ್ಲವೆಂದು ಹೇಳಿಕೊಂಡು ತಿರುಗುವ ಮತಾಂತರಿಗಳಿಗೆ, ನಮ್ಮ ಮಠ- ಮಾನ್ಯಗಳು ಮಾಡುವ ಸೇವೆಯ ಬಗ್ಗೆ ಅರಿವಿದ್ದಂತೆ ಕಾಣುವುದಿಲ್ಲ. ತುಮಕೂರಿನ ಸಿದ್ಧಗಂಗಾ ಮಠ ಐದು ದಶಕಗಳಿಂದ ಕೋಟ್ಯಂತರ ಜನರಿಗೆ ಪ್ರತಿನಿತ್ಯ ದಾಸೋಹ ಮಾಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ನೀಡುತ್ತ ಬಂದಿದೆ. ಮಠದ ಆಸ್ಪತ್ರೆಯಲ್ಲಿ ನಿತ್ಯ ಸಾವಿರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪಳದ ಗವಿಮಠ, ಶೃಂಗೇರಿ ಶಾರದಾ ಪೀಠ, ಧರ್ಮಸ್ಥಳ, ಹೊರನಾಡಿನಲ್ಲಿ ನಡೆಯುವ ನಿತ್ಯದ ದಾಸೋಹ, ಬಾಲಗಂಗಾಧರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸುತ್ತಿರುವ ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು … ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತಲೇ  ಹೋಗುತ್ತದೆ.
ಕರೋನ ಸಂದರ್ಭದಲ್ಲಿ ಆಸ್ಪತ್ರೆಗಳು, ವಸತಿ ನಿಲಯಗಳು ಹಾಗೂ ಸಮುದಾಯ ಭವನಗಳನ್ನು ಕೋವಿಡ್ ರೋಗಿಗಳಿಗೆ ಉಚಿತ ಸೇವೆಗಾಗಿ ನೀಡಿದ್ದು ಹಿಂದೂ ಮಠಗಳೇ ಹೊರತು ಚರ್ಚುಗಳಲ್ಲ. ನಮ್ಮ ಮಠಗಳಲ್ಲಿ ಎಂದೂ ಇಂತಹದ್ದೇ ದೇವರನ್ನು ಪೂಜಿಸಬೇಕು, ಈತನೊಬ್ಬನೇ ದೇವರೆಂದು ಹೇಳಿಕೊಡುವುದಿಲ್ಲ. ಬ್ರಿಟಿಷ್ ಅಮೆರಿಕನ್ ಪತ್ರಕರ್ತ ಕ್ರಿಸ್ಟೋಫರ್ ಹಿಚೆನ್ಸ್ ಮದರ್ ತೆರೆಸಾರನ್ನು ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಯೆಂದು ಕರೆದಿದ್ದ. ಅಂದರೆ ಸೇವೆ ಹೆಸರಿನಲ್ಲಿ ನಡೆದಿರಬಹುದಾದ ಮತಾಂತರ ಊಹಿಸಬ ಹುದು.
ನೇರ ನುಡಿಗೆ ಹೆಸರಾಗಿದ್ದ ಕ್ರಿಸ್ಟೋಫರ್ ಹಿಚೆನ್ಸ್, ತೆರೇಸಾ ಬಡವರ ಸ್ನೇಹಿತೆಯಾಗಿರಲಿಲ್ಲ, ಬದಲಾಗಿ ‘ಬಡತನದ’ ಸ್ನೇಹಿತೆಯಾಗಿದ್ದಳೆಂದಿದ್ದ. ಈ ಮಾತಿನ ಆಳಕ್ಕೆ ಹೊಕ್ಕು ಯೋಚಿಸಿದರೆ ಬಡತನ ಬಳಸಿಕೊಂಡು ಮತಾಂತರ ನಡೆದಿರುವುದರಲ್ಲಿ ಅನುಮಾನವಿಲ್ಲ. ಭಾರತದಲ್ಲಿರುವ ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಆಸ್ಪತ್ರೆಗಳ ಬಗ್ಗೆ ಪುಂಖಾನುಪುಂಖವಾಗಿ ಹೊಗಳಿ ಮಾತನಾಡುವವರಿಗೆ ತಿಳಿಯದ ಮತ್ತೊಂದು ವಿಷಯವೆಂದರೆ, ಸರಿಯಾದ ವೈದ್ಯ ತರಬೇತಿಯಿಲ್ಲದ ಹಲವು ದಾದಿಯರನ್ನು ತೆರೇಸಾ ತಮ್ಮ ಶುಶ್ರೂಷಾ ಕೇಂದ್ರಗಳಲ್ಲಿ ಬಳಸಿಕೊಳ್ಳುತ್ತಿದ್ದದ್ದು. ಸಾಮಾನ್ಯವಾಗಿ ಬಡವರು, ಬುದ್ಧಿಮಾಂದ್ಯರು, ವಯಸ್ಸಾದವರು, ಒಂಟಿ ಮಹಿಳೆಯರು, ಸಮಾಜದಲ್ಲಿನ ಅಸ್ಪಶೃತೆಗೊಳಗಾದವರನ್ನೇ ಗುರಿಯಾಗಿಸಿಕೊಂಡು ಪ್ರಭಾವ ಬೀರಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಪ್ರಕ್ರಿಯೆತೆರೇಸಾ ಭಾರತಕ್ಕೆ ಕಾಲಿಡುವುದಕ್ಕೆ ಮೊದಲಿಂದಲೂ ನಡೆಯುತ್ತಲೇ ಇತ್ತು.
ಆದರೆ ರೋಗಿಗಳ ಸೇವೆಯ ಹೆಸರಿನಲ್ಲಿ ನಡೆಯುವ ಮತಾಂತರಕ್ಕೆ ಹೆಚ್ಚಿನ ವೇಗ ಸಿಕ್ಕಿದ್ದು ಮಾತ್ರ ತೆರೇಸಾರ ’  ’ ಸಂಸ್ಥೆಯ ಮೂಲಕವೇ. ಈ ಸಂಸ್ಥೆಗೆ ಎಗ್ಗಿಲ್ಲದೆ ಬರುತ್ತಿದ್ದಂತಹ ವಿದೇಶಿ ದೇಣಿಗೆಗಳಿಗೆ ಈಗ ಕತ್ತರಿ ಬಿದ್ದಿದೆ. ಸಂಸ್ಥೆ ಕೇವಲ ವಿದೇಶಿ ದೇಣಿಗೆಗಳಿಂದ ಮಾತ್ರ ತನ್ನ ಕಾರ‍್ಯವನ್ನು ನಿರ್ವಹಿಸುತ್ತಿಲ್ಲ, ಭಾರತದಲ್ಲಿನ ಅನೇಕರು ಈ ಸಂಸ್ಥೆಗೆ ದೇಣಿಗೆಯನ್ನು ನೀಡುತ್ತಾರೆ. ಆದರೆ ವಿದೇಶದಿಂದ ಬರುತ್ತಿದ್ದಂತಹ ದೇಣಿಗೆಯ ಪ್ರಮಾಣ ಹೆಚ್ಚಿದ್ದರಿಂದ ಈಗ ತನ್ನ ಕಾರ್ಯಚಟುವಟಿಕೆಗಳಿಗೆ ಕತ್ತರಿ ಬಿದ್ದಿರುವುದಂತೂ ಸುಳ್ಳಲ್ಲ. ಜಗತ್ತನ್ನೇ ಕಾಪಾಡುವ ಏಸು ಕ್ರಿಸ್ತ, ಮದರ್ ತೆರೇಸಾರ ಸಂಸ್ಥೆಯನ್ನೇ ಕಾಪಾಡಲಾಗಲಿಲ್ಲವಲ್ಲವೆಂಬುದೇ ಬಹುದೊಡ್ಡ ವಿಪರ್ಯಾಸ!