ಈ ವರ್ಷವಾದರೂ ನಮ್ಮೆಲ್ಲರ ಗಮನ ಝೀರೋ ವೇಸ್ಟ್‌ ಕಡೆಗಿರಲಿ !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
@.
ಖ್ಯಾತ ಮ್ಯಾನೇಜ್ಮೆಂಟ್ ಸಲಹೆಗಾರ ರಘು ರಾಮನ್ ಹೇಳಿದ ವಿಷಯ ನನಗೆ ಇಷ್ಟವಾಯಿತು. ನಾವು ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಕ್ರಮಗಳಿಂದ ಅಸಾಧಾರಣ ಬದಲಾವಣೆ ತರಬಹುದು. ಆದರೆ ನಮ್ಮಲ್ಲಿ ಅಂಥದ್ದೊಂದು ಕೆಲಸಕ್ಕೆ ಪ್ರೇರಣೆ ಇರುವುದಿಲ್ಲ.
ಆದರೆ ವೈಶಿಷ್ಟ್ಯಪೂರ್ಣ ಕ್ರಮಗಳ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಲಕ್ರಮೇಣ ಬದಲಾವಣೆ ತರಬಹುದು ಎಂದುನಾವು ಯೋಚಿಸುವುದಿಲ್ಲ. ಖಾಲಿಯಾದ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು ಕಸದಬುಟ್ಟಿಗೆ ಎಸೆಯುವ ಉದ್ದೇಶದಿಂದ ಕೈಯ್ಯಲ್ಲಿ ಹಿಡಿದುಕೊಂಡುನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಅಚಾನಕ್ಕಾಗಿ ನಾಯಿಯೊಂದು ಎದುರಾಗಿ ನಿಮ್ಮನ್ನು ಕಂಡು ಬಾಲ ಅಡಿಸಿ, ನಂತರ ಮೆಲ್ಲಗೆ ಬೊಗಳಿ ನಿಮ್ಮ ಜೊತೆಗೇ ಹೆಜ್ಜೆ ಹಾಕುತ್ತ ನಿಮ್ಮನ್ನೊಂದು ಕಡೆಗೆ ಕರೆದುಕೊಂಡು ಹೋಗುತ್ತಿದೆ ಅಂದರೆ, ನಿಶ್ಚಿತವಾಗಿ ಅದು ನಿಮ್ಮನ್ನು ಡ ಬಿನ್ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದರ್ಥ.
ಬೀದಿನಾಯಿಗೆ ಇಷ್ಟೆ ಜ್ಞಾನ ಹೇಗಿರುವುದು ಸಾಧ್ಯ ಎಂದು ನಿಮಗೆ ಅಚ್ಚರಿಯಾಗಬಹುದು. ಅದೊಂದು ಬಗೆಯ ವೆಂಡಿಂಗ್ಮಿಶನ್ ಸ್ವರೂಪದ ಕಸದ ಬುಟ್ಟಿ. ಅದರಲ್ಲಿ ನೀವು ತ್ಯಾಜ್ಯವೆ ನಿಸುವ ಪ್ಲಾಸ್ಟಿಕ್ ಬಾಟಲಿ ಹಾಕಿದಾಕ್ಷಣ ಮಶೀನಿನ ಕೆಳಭಾಗದ ಖಾನೆಯೊಂದರಿಂದ ನಾಯಿಗಳಿಗೆಂದೇ ಇರಿಸಲಾದ ತಿಂಡಿ ಹೊರಕ್ಕೆ ಬೀಳುತ್ತದೆ. ಆ ತಿಂಡಿಯ ಆಸೆಗೆ ನಾಯಿ ನಿಮ್ಮನ್ನು ಅಲ್ಲಿಯ ತನಕ ಕರೆದುಕೊಂಡು ಹೋಗುತ್ತದೆ.
ಸುಳ್ಳಲ್ಲ, ಇದು ಟರ್ಕಿಯ ಇಸ್ತಾನಬುಲ್ ನಗರದಲ್ಲಿ ಮಾಡಲಾಗಿರುವ ವ್ಯವಸ್ಥೆ. ಅಲ್ಲಿ ಎರಡು ಸಮಸ್ಯೆಗಳಿವೆ. ಪ್ಲಾಸ್ಟಿಕ್ ನಿರ್ವಹಣೆ ಅಲ್ಲಿ ತುಂಬಾ ಕಷ್ಟದ ಕೆಲಸವೆನಿಸಿದೆ, ಇನ್ನೊಂದು, ಆ ನಗರದಲ್ಲಿರುವ ಬೀದಿನಾಯಿಗಳ ಕಾಟ. ಅಲ್ಲಿ ಸರಿಸುಮಾರು ಎರಡೂವರೆ ಲಕ್ಷ ಬೀದಿನಾಯಿಗಳಿವೆ. ಆ ಮಶೀನಿಗೆ ಮಾಮಾಮಾಟಿಕ್ಸ್ಎಂಬ ಹೆಸರಿದೆ. ಆ ಹೆಸರಿನ ಅರ್ಥವೇನು ಎಂದು ತಿಳಿಯಲು ಹೋದರೆ ಅದೊಂದು ದೊಡ್ಡ ಕಥೆಯಾದೀತು.
ಆದರೆ ಜನಸಾಮಾನ್ಯರಿಗೆ ಅದೊಂದು ವೆಂಡಿಂಗ್ ಮಶೀನ.2014ರಲ್ಲಿ ಪ್ಯುರೊಡಾನ್ ಎಂಬ ಸ್ಥಳೀಯ ಕಂಪನಿಯೊ ಅದು ಈ ಯಂತ್ರ ವನ್ನು ತಯಾರಿಸಿ ರಸ್ತೆಬದಿಗಳಲ್ಲಿ ಅಲ್ಲಲ್ಲಿ ಇರಿಸಿದೆ. ಜನರು ಅದಕ್ಕೆ ಪ್ಲಾಸ್ಟಿಕ್ ಬಾಟಲಿ ಹಾಕಿದಾಗ ನಾಯಿಗಳಿಗೆ ತಿನ್ನುವ ಆಹಾರ ಸಿಗುತ್ತದೆ. ಬಾಟಲುಗಳಲ್ಲಿ ಇರಬಹುದಾದ ಅಲ್ಪಸ್ವಲ್ಪನೀರನ್ನು ಖಾಲಿ ಮಾಡುವುದಕ್ಕೂ ಆ ಮಶೀನಿನಲ್ಲಿ ಅವಕಾಶವಿದೆ. ಅದು ಕೂಡ ನಾಯಿಗಳಿಗೆ ಕುಡಿಯುವುದಕ್ಕೆ ಸಿಗುತ್ತದೆ. ಇಂಥದ್ದೊಂದು ವ್ಯವಸ್ಥೆ ಅಲ್ಲಿ ಶುರುವಾದಾಗ ಅದು ಪತ್ರಿಕೆಗಳಲ್ಲಿ ಚರ್ಚೆಯ ವಿಷಯವಾಗಿತ್ತು. ನಾಯಿಗಳಿಗೆ ಈಗ ಆ ಯಂತ್ರತುಂಬಾ ಆಪ್ಯಾಯಮಾನವಾಗಿದ್ದು ಅಪರಿಚಿತ ಜನರನ್ನು ಆಕರ್ಷಿಸಿ ಅದರತ್ತ ಕರೆದುಕೊಂಡು ಹೋಗು ವುದು ಸರ್ವೇಸಾಮಾನ್ಯವಾಗಿದೆ.
ಇದೊಂದು ಹೊಸ ವಿಚಾರ. ಈ ತರಹದ ರೀಸೈಕ್ಲಿಂಗ್ ಪರಿಕಲ್ಪನೆಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇವೆ. ನಮ್ಮಲ್ಲಿ ಬಹುತೇಕ ಮಂದಿಗೆ ಒಂದು ಅಭ್ಯಾಸವಿದೆ. ಅಡುಗೆಮನೆಯಲ್ಲಿ ಅಡುಗೆ ಸಿದ್ಧವಾದ ನಂತರ ಕಡಾಯಿಯಲ್ಲಿ ಅಳಿದುಳಿದ ಎಣ್ಣೆ ಜಿಡ್ಡನ್ನು ಕೆಲವರು ವಾಷ್ ಬೇಸಿನ್ ಗೆ ಸುರಿಯುತ್ತಾರೆ. ಇದೆಲ್ಲವೂ ಹೋಗಿ ಪೈಪಿನಲ್ಲಿ ಸಂಗ್ರಹವಾಗಿ ಬಿಡುತ್ತದೆ. ಇಂತಹದೇ ಜಿಡ್ಡುಗಳ ರವಾನೆ ಪೈಪುಗಳಲ್ಲಿ ಆಗುತ್ತಾ ಹೋದಂತೆ ಪೈಪಿನಲ್ಲಿ ನೀರು ಸರಾಗವಾಗಿ ಹೋಗದೇ ಅಡಚಣೆ ಆಗುತ್ತದೆ.
ಕಟ್ಟಡದ ಮಾಲೀಕರಿಗೋ, ನಗರಪಾಲಿಕೆಯವರಿಗೋ ಅದನ್ನು ಸರಿಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ. ಇನ್ನು ಕೆಲವರು ಬಳಸಿದ ನಂತರ ಉಳಿದ ಎಣ್ಣೆಜಿಡ್ಡನ್ನು ಕಸದ ಬುಟ್ಟಿಗೆ ಹಾಕಿಬಿಡುತ್ತಾರೆ. ಇಂತಹ ಜಿಡ್ಡು ಪದಾರ್ಥಗಳಿಂದ ಹೊರಹೊಮ್ಮುವ ಅನಿಲ ಗಳಿಂದ ಗ್ರೀನ್ ಹೌಸ್ ಗ್ಯಾಸ್ ಉತ್ಪನ್ನವಾಗುತ್ತದೆ. ಇದು ಪರಿಸರಕ್ಕೆ ಮಾರಕವಾದ ಸಂಗತಿ. ಇದಕ್ಕೇನಾದರೂ ಮಾಡಬೇಕಲ್ಲ ಎಂದು ಯೋಚಿಸಿದ ‘ಅಮೆರಿಕದ ಬೀವಾ ತಂದೀ-’ ಎಂಬ ಕಂಪನಿ ಆವಿಷ್ಕಾರವೊಂದನ್ನು ಮಾಡಿದ್ದಾರೆ.
ಅಡುಗೆ ಎಣ್ಣೆಯಿಂದ ಬಯೋಡೀಸೆಲ್ ತಯಾರಿಕೆಗೆ ಅದು ಮುಂದಾಗಿದೆ. ಬಯೋಡೀಸೆಲ್ ಪರಿಸರ ಪೂರಕವಾದ ಇಂಧನ. ಆ ಕಂಪನಿ ಯು.ಎ.ಇ. (ಯುನೈಟೆಡ್ ಅರಬ್ ಎಮಿರೇಟ್ಸ್) ಯ ಶಾರ್ಜಾದಲ್ಲಿ ತನ್ನ ಮೊದಲ ಘಟಕವನ್ನು ಸ್ಥಾಪಿಸಿದ್ದು, ಅಲ್ಲಿನ ಆಸುಪಾಸಿನ ಜನರು ವ್ಯರ್ಥವಾಗಿ ಎಸೆಯುವ ಅಡುಗೆ ಎಣ್ಣೆಯನ್ನು ಅಲ್ಲಿಗೆ ಕಳುಹಿಸಬಹುದು. ಅಲ್ಲಿ ಮನೆಮನೆಗಳಿಗೆ ಖಾಲಿಬಾಟಲಿಗಳನ್ನು ಕೊಟ್ಟು ಅಡುಗೆಎಣ್ಣೆ ಸಂಗ್ರಹಣೆ ಮಾಡಲಾಗುತ್ತದೆ. ಆ ಬಾಟಲಿಗಳಲ್ಲಿ ಟೋಲ್ ಫ್ರೀ ನಂಬರ್ ಕೂಡ ಇರುತ್ತದೆ. ಪ್ರತಿ ಬಾಟಲಿಯೂ ಒಂದು ಲೀಟರ್ ಸಾಮರ್ಥ್ಯದ್ದಾಗಿರುತ್ತದೆ. ಐದು ವರ್ಷಗಳ ಕಾಲ ಬಳಸಿದ ನಂತರ ಆ ಬಾಟಲಿಯನ್ನೂ ರೀಸೈಕಲ್ ಮಾಡಲಾಗುತ್ತದೆ.
ಎಲ್ಲ ಕಡೆಗಳಿಂದ ಸಂಗ್ರಹಿತವಾದ ಎಣ್ಣೆಯಿಂದ ಬಯೋಡೀಸೆಲ್ ತಯಾರಿಸಲಾಗುತ್ತದೆ. ಆಬಯೋಡೀಸೆಲನ್ನು ಅಮೆರಿಕದಲ್ಲಿ ಕಸ ಸಂಗ್ರಹ ಮಾಡುವ ವಾಹನಗಳ ಚಾಲನೆಗೆ ಬಳಸಲಾಗುತ್ತದೆ. ಆ ವಾಹನಗಳಿಗೆ ಗ್ರೀನ್ ಸ್ಟೇಟಸ್ ಕೊಡಲಾಗಿದ್ದು, ನಗರದ ಓಡಾಡುವ ಕಸದ ಗಾಡಿಗಳಿಂದ ಯಾವುದೇ ವಾಯು ಮಾಲಿನ್ಯಆಗುವುದಿಲ್ಲ. ಇಂತಹ ಇನ್ನೂ ಅನೇಕ ಯಂತ್ರಘಟಕಗಳನ್ನು ಅಲ್ಲಲ್ಲಿ ಸ್ಥಾಪಿಸುವ ಚಿಂತನೆಯನ್ನು ಕೂಡ ಕಂಪನಿ ಮಾಡುತ್ತಿದೆ.
ಮುಂದಿನ ಪೀಳಿಗೆ ಸುರಕ್ಷಿತವಾಗಿ ಬದುಕಬೇಕೆಂಬ ಇರಾದೆ ನಮಗಿದ್ದರೆ ೨೦೨೨ರಲ್ಲಿ ‘ಝೀರೋ ವೇ’ ನತ್ತ ನಮ್ಮ ಗಮನವನ್ನು ಹರಿಸ ಬೇಕು. ಅದರಿಂದ ಜಗತ್ತು ಇನ್ನಷ್ಟು ಸುಂದರ ಮತ್ತು ಸುರಕ್ಷಿತವಾಗುವುದು ಸಾಧ್ಯ. ನಾನೊಬ್ಬ ಇಂಥ ಕೆಲಸಕ್ಕೆ ಮುಂದಾದರೆ ಅದರಿಂದ ಪ್ರಯೋಜನವೇನು ಎಂದು ಬಹುತೇಕರು ಯೋಚಿಸುತ್ತಾರೆ. ಆದರೆ ಒಬ್ಬೊಬ್ಬರು ಮಾಡುವ ಅಪಸವ್ಯಗಳಿಂದ ನಮ್ಮಜಗತ್ತು ಇಷ್ಟೊಂದು ಅಧ್ವಾನವಾಗಿದೆ. ಆದರೆ ಇಂಥ ಸಣ್ಣ-ಪುಟ್ಟ ಉಪಕ್ರಮಗಳಿಂದ ಅಗಾಧವಾದ ಬದಲಾವಣೆ ತರಬಹುದು. ಆದರೆನಾವೆಲ್ಲರೂ ‘ಜೀರೋ ವೆ’ ನ್ನು ಸಾಧಿಸಲೇಬೇಕು ಎಂದು ಪಣ ತೊಟ್ಟರೆ, ಅದು ಅಸಾಧ್ಯವಾದ ಮಾತಲ್ಲ.
ಎಲ್ಲಕ್ಕಿಂತ ಆಶಾವಾದ ಮುಖ್ಯಮಾರ್ಟಿನ್ ಸೆಲಿಗ್ಮನ್ ಸತತ ೨೨ ವರ್ಷಗಳ ಕಾಲ ಅಧ್ಯಯನ ಮಾಡಿ ಅದರ ಸಾರಾಂಶವನ್ನು ತನ್ನ ’ಲರ್ನಡ್ ಆಪ್ಟಿಮಿಸಂ – ಪುಸ್ತಕದಲ್ಲಿ ದಾಖಲಿಸಿದ್ದಾನೆ. ಆತನ ಪ್ರಕಾರ, ಆಶಾವಾದವೆಂಬುದು ಎಲ್ಲಕ್ಕಿಂತ ಮಹತ್ವಪೂರ್ಣವಾದ ಗುಣವಿಶೇಷಣವಾಗಿದ್ದು, ಯಾರಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿ ಇರುವುದೋ ಅವರು ವ್ಯಕ್ತಿಗತವಾಗಿ ಮತ್ತು ವ್ಯಾವಹಾರಿಕವಾಗಿ ಸಫಲತೆಯನ್ನು ಕಾಣುತ್ತಾರೆ.
ಆಶಾವಾದಿ ಜನರು ಬದುಕಿನ ಎಲ್ಲ ಮಜಲುಗಳಲ್ಲಿ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತಾರೆ. ಬದುಕಿನಲ್ಲಿ ನಿಮ್ಮ ಬಹುದೊಡ್ಡ ಜವಾಬ್ದಾರಿ ಏನೆಂದರೆ ನಿಮಗೆ ಯಾವ ಕ್ಷೇತ್ರದಲ್ಲಿ ಹೆಚ್ಚು ಒಲವಿದೆ ಎಂಬುದನ್ನು ಕಂಡುಕೊಳ್ಳುವುದು. ಗಮನಿಸಿ ನೋಡಿ, ಜಗತ್ತಿನಲ್ಲಿ ಯಶಸ್ಸು ಕಂಡ ಎಲ್ಲರೂ ಈ ಸೂತ್ರವನ್ನು ಹಿಡಿದೇಮೇಲಕ್ಕೇರಿದವರಾಗಿರುತ್ತಾರೆ. ತಾವು ಮಾಡುವ ಯಾವ ಕೆಲಸ ಬೇರೆಯವರಿಗಿಂತಭಿನ್ನವಾಗಿರುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿಗೊತ್ತಿರುತ್ತದೆ.
ನಂತರದಲ್ಲಿ ಆ ಕ್ಷೇತ್ರದ ಮೇಲೆ ತಮ್ಮ ಸಂಪೂರ್ಣ ಧ್ಯಾನವನ್ನು ಕೇಂದ್ರೀಕರಿಸುತ್ತಾರೆ. ನಿಮ್ಮ ಯೋಗ್ಯತೆಗೆ ತಕ್ಕಂತೆ ನೀವು ಮಾಡುವ ಕೆಲಸದಲ್ಲೂ ನೀವು ಔನ್ನತ್ಯವನ್ನು ಪಡೆಯುವುದು ಖಂಡಿತವಾಗಿ ಸಾಧ್ಯವಿದೆ. ಇದು ನನ್ನ ಆದ್ಯತೆಯ ಕ್ಷೇತ್ರ, ಇದರಲ್ಲಿ ನಾನು ನೂರಕ್ಕೆ ನೂರು ಪ್ರಥಮಸ್ಥಾನಕ್ಕೇರುತ್ತೇನೆ ಎಂದು ಪಣತೊಟ್ಟು ಹೊರಡಿ, ಆ ಕೆಲಸ ನೀವಂದುಕೊಂಡಂತೆ ಆಗುತ್ತದೆ.
21ನೇ ಶತಮಾನದಲ್ಲಿ ನಮಗೆ ಎಲ್ಲ ಕಡೆಯಿಂದ ಮಾಹಿತಿಯ ಮಹಾಪೂರವೇ ಹರಿದು ಬರುತ್ತಲಿದೆ. ನಿಮ್ಮ ಕ್ಷೇತ್ರದಲ್ಲಿ ಶಾಂತವಾಗಿ, ಸ್ಪಷ್ಟವಾಗಿ, ಸರ್ವಶ್ರೇಷ್ಠತೆಯನ್ನು ಸಾಧಿಸಬೇಕೆಂದಾದಲ್ಲಿ ನಿಯಮಿತವಾಗಿ ತಂತ್ರಜ್ಞಾನ ಮತ್ತು ಸಂಚಾರ ಸಾಧನಗಳನ್ನು ತೊರೆದು ನೀವು ನಿಮ್ಮ ಧ್ಯೇಯಕ್ಕ್ಕೆ ಸಮಯ ಮೀಸಲಿಡಬೇಕು. ನೀವು ಈ ದಿಸೆಯಲ್ಲಿ ಏಕಾಗ್ರತೆ ಸಾಧಿಸದೇ ಇದ್ದರೆ ಗುರಿ ತಲುಪಲಾರಿರಿ. ಹೆಚ್ಚು ಮೌಲ್ಯ ಯುತ ವಸ್ತುಗಳನ್ನು ನಿಮ್ಮ ಬಳಿ ಹೆಚ್ಚಿಸಿಕೊಳ್ಳಬೇಕೆಂದಾದಲ್ಲಿ ಕಡಿಮೆ ಮೌಲ್ಯದ ಹಲವು ಸಂಗತಿಗಳನ್ನು ನೀವು ತ್ಯಜಿಸ ಬೇಕಾಗುತ್ತದೆ. ಪ್ರತಿ ಕೆಲಸಕ್ಕೆ ಕೈ ಹಾಕುವಾಗಲೂ ಇದು ಮಹತ್ವಪೂರ್ಣವಾದದ್ದೆ? ಎಂದು ನಿಮಗೆ ನೀವೇ ಪ್ರಶ್ನೆಮಾಡಿಕೊಂಡು ನಂತರ ಮುನ್ನಡೆಯಿರಿ. ಅದೃಷ್ಟ ಕೈಕೊಡದಿದ್ದರೆ, ನೀವು ಅಂದುಕೊಂಡಿದ್ದೇ ಆಗುವುದರಲ್ಲಿ ಅನುಮಾನವಿಲ್ಲ.
ಮನಸ್ಸಿನ ಭಯ ಮತ್ತು ಚಿಂತನೆಖ್ಯಾತ ಬರಹಗಾರ ಎಕ್ಹಾರ್ಟ್ ಟಾಲ್ ಒಂದು ಮಾತು ಹೇಳಿದ್ದಾನೆ – ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಸಂತೃಪ್ತಿ ಸಿಗುತ್ತಿದೆಯೇ ಎಂದು ನಿಮಗೆ ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ. ಇಲ್ಲ ಎಂದಾದಲ್ಲಿ ಒಂದು ವಿಚಾರವನ್ನು ಗಮನಿಸಿ, ನಿಮ್ಮ ಭೂತ, ಭವಿಷ್ಯ ಮತ್ತು ವರ್ತಮಾನವನ್ನು ನೀವೇ ಕತ್ತಲಕೂಪಕ್ಕೆ ತಳ್ಳುತ್ತಿದ್ದೀರಿ ಎಂದರ್ಥ.
ನೀವು ನಿಮ್ಮ ಕೈಯ್ಯನ್ನು ಬೆಂಕಿಯ ಕೆನ್ನಾಲಿಗೆಮೇಲೆ ಇಡುವುದಿಲ್ಲ ಎಂಬುದರ ಅರ್ಥ ನೀವು ಬೆಂಕಿಗೆ ಹೆದರುತ್ತೀರಿ ಎಂದಲ್ಲ. ಬೆಂಕಿಗೆ ಕೈ ಇಟ್ಟರೆ ಕೈ ಸುಟ್ಟುಹೋಗುತ್ತದೆ ಎಂಬ ಅರಿವು ನಿಮಗಿದೆ ಎಂದರ್ಥ. ಅನವಶ್ಯಕವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ತರವಲ್ಲ ಎಂಬುದು ನಿಮಗೆ ಗೊತ್ತಿದೆ, ಹಾಗಂತ ಅದರ ಕುರಿತಾಗಿನಿಮ್ಮ ಮನದಲ್ಲಿ ಹೆದರಿಕೆ ಇದೆ ಎಂದರ್ಥವಲ್ಲ.
ಇದೇನೂ ಮಹಾದೊಡ್ಡ ಸಂಗತಿಯಲ್ಲ, ಸಾಮಾನ್ಯಜ್ಞಾನ ಅಷ್ಟೆ. ಆದರೆ ಇಂತಹದೇ ಸಂಗತಿಗಳನ್ನು ವ್ಯಾವಹಾರಿಕ ಜಗತ್ತಿನಲ್ಲಿ ಅಗತ್ಯ ಬಿದ್ದಾಗ ಬಳಸಿಕೊಳ್ಳುವುದಿದೆಯಲ್ಲ, ಅದು ಜಾಣತನ. ಇದಕ್ಕಿಂತ ಭಿನ್ನವಾದ ಮನೋವೈಜ್ಞಾನಿಕ ಭಯ ಕೂಡ ನಮ್ಮ ಮನಸ್ಸಿನಲ್ಲಿ ಇರುತ್ತದೆ. ಇಂತಹ ಪ್ರಸಂಗ ಎದುರಾಗದಿರಲಿ, ಅದಾಗುವುದು ಬೇಡ, ಇದರಿಂದ ನಾನು ಇಕ್ಕಟ್ಟಿಗೆ ಸಿಕ್ಕುವಂತಾಗದಿರಲಿ ಎಂಬ ಸುಖಾಸುಮ್ಮನೆ ಭಯಗಳು ಕೂಡ ನಮ್ಮಲ್ಲಿ ಆಗಾಗ ಕಾಣಿಸಿಕೊಳ್ಳುವುದುಂಟು. ಅಂತಹ ಭಯಗಳು ಮನದ ಪರದೆಯ ಮೇಲೆ ಮೂಡಿದಾಗ ನೀವು ಭೌತಿಕವಾಗಿ ಇರುತ್ತೀರಿ, ಆದರೆ ನಿಮ್ಮ ಮನಸ್ಸು ಭವಿಷ್ಯದ ಬಗ್ಗೆ ಚಿಂತನೆಯಲ್ಲಿ ತೊಡಗಿರುತ್ತದೆ.
ಹಾಗಾದಾಗ ಮನದ ಮೂಲೆಯಂದು ವ್ಯಗ್ರತೆಯ ಭಾವ ಮೂಡಿರುತ್ತದೆ. ವರ್ತಮಾನ ಸ್ಥಿತಿಯಲ್ಲಿ ಸಹಜಭಾವದಲ್ಲಿದ್ದರೆ ನಾವು-ನೀವು.ಓದುಗರು ಮತ್ತು ಪ್ರಶ್ನೆಗಳು ! ನಮ್ಮ ಪತ್ರಿಕೆಯ ‘ಭಟ್ಟರ್ ಸ್ಕಾಚ್’ ಅಂಕಣಕ್ಕೆ ಪ್ರತಿದಿನ ನೂರಾರು ಪ್ರಶ್ನೆಗಳು ಬರುತ್ತವೆ. ಎಲ್ಲಿಂದಲೋ ಓದುಗರು ಪ್ರಶ್ನೆಗಳನ್ನು ಕಳಿಸುತ್ತಾರೆ. ಕೆಲವರು ನಿತ್ಯವೂ ಪ್ರಶ್ನೆಗಳನ್ನು ಕಳಿಸುತ್ತಾರೆ. ಇನ್ನು ಕೆಲವರು ಪ್ರತಿ ದಿನ ಹತ್ತಕ್ಕೂ ಹೆಚ್ಚುಪ್ರಶ್ನೆಗಳನ್ನು ಕಳಿಸುತ್ತಾರೆ.
ಕನಿಷ್ಠ ಒಂದಾದರೂ ಪ್ರಕಟವಾಗಲಿ ಎಂಬುದು ಅವರ ಆಶಯವಿರಬಹುದು. ಪ್ರಶ್ನೆ ಕೇಳುವುದೂ ಒಂದು ಕಲೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಾಗುವುದಿಲ್ಲ. ಅಲ್ಲದೇ ಉತ್ತರಿಸಬೇಕು ಎಂದು ಅನಿಸುವುದೂ ಇಲ್ಲ. ಸಾಮಾನ್ಯವಾಗಿ ಪ್ರಶ್ನೋತ್ತರ ಅಂಕಣ ವಾರಪತ್ರಿಕೆಗೆ ಮೀಸಲಾಗಿದ್ದು ಎಂಬ ಅಭಿಪ್ರಾಯವಿದೆ. ಯಾಕೆಂದರೆ ದಿನಪತ್ರಿಕೆಗಳು ಅದನ್ನು ಪ್ರಕಟಿಸುವುದಿಲ್ಲ. ಆದರೆ ನಮ್ಮ ಪತ್ರಿಕೆಯ ಆಕರ್ಷಣೆ ಗಳಲ್ಲಿ ಭಟ್ಟರ ಸ್ಕಾಚ್ ಅಂಕಣ ಕೂಡ ಒಂದು.
ಒಂದು ದಿನ ಇದನ್ನು ಪ್ರಕಟಿಸದಿದ್ದರೆ ಅನೇಕರು ಫೋನ್ ಮಾಡುತ್ತಾರೆ. ಪ್ರಮುಖ ಮಠವೊಂದರ ಸ್ವಾಮೀಜಿಯೊಬ್ಬರು ಸಿಕ್ಕಾಗ, ನಾನು ಭಟ್ಟರ ಸ್ಕಾಚ್ ಅಭಿಮಾನಿ ಎಂದಾಗ ನನಗೆ ತುಸು ಸೋಜಿಗವಾಗಿತ್ತು. ಅದಿರಲಿ. ಭಟ್ರೇ, ನೀವು ಯಾಕೆ ಮೀಸೆ ಬಿಡುವುದಿಲ್ಲ?’ ಎಂದು ಕನಿಷ್ಠ ಒಬ್ಬರಾದರೂ ಪ್ರಶ್ನೆ ಕಳಿಸಿರುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿ ಉತ್ತರಿಸಿ ಸಾಕಾಗಿ ಹೋಗಿದೆ.
ತಮಾಷೆ ಅಂದ್ರೆ ಈ ಪ್ರಶ್ನೆಗಳನ್ನು ಕಳಿಸುವವರು ಹೆಂಗಸರೇ! ಮೊನ್ನೆ ಒಬ್ಬಳು ಪ್ರಶ್ನೆ ಕೇಳಿದ್ದಳು – ‘ಭಟ್ರೇ, ನೀವು ಮೀಸೆ ಬಿಟ್ಟಾಗ ನನಗೆ ತಿಳಿಸುತ್ತೀರಿ ಆಲ್ವಾ?’ ಮೀಸೆ ಬಿಟ್ಟರೆ ಎಲ್ಲರಿಗೂ ಕಾಣಿಸುತ್ತದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಆಗುತ್ತಾ ? ಕೆಲವರಿಗೆ ಗೊತ್ತು, ಯಾವ ಪ್ರಶ್ನೆ ಕೇಳಿದರೆ ತಟ್ಟನೆ ಉತ್ತರ ಸಿಗುತ್ತದೆಂದು. ಅಂಥವರು ಜಾಣ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೋತ್ತರ ಅಂಕಣ ಆ ಕ್ಷಣ ಓದಿ, ನಕ್ಕು ಹಗುರಾಗಿ ಮರೆತುಬಿಡಬಹುದಾದ ಅಂಕಣ. ನಾನು ಆಗಾಗ ಒಬ್ಬ ರಾಜಕಾರಣಿ ಬಗ್ಗೆ (ಮೊಯಿಲಿ ಅಲ್ಲ) ಈ ಅಂಕಣದಲ್ಲಿ ಪ್ರಸ್ತಾಪಿಸುತ್ತಿದ್ದೆ.
ಅದರಿಂದ ಮನನೊಂದ ಅವರು ನಮ್ಮ ಕಚೇರಿಗೆ ಬಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಅವರನ್ನು ಸಮಾಧಾನ ಮಾಡುವ ಹೊತ್ತಿಗೆ ನಾನು ಸುಸ್ತು. ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಿದ್ದು ನನಗೇ ನೆನಪಿರುವುದಿಲ್ಲ. ಮೊನ್ನೆ ಓದುಗರೊಬ್ಬರು ನಮ್ಮ ಕಚೇರಿಗೆ ಬಂದಿದ್ದರು. ನಾನು ಕನ್ನಡ ಪ್ರಭ ದಲ್ಲಿದ್ದಾಗಲೂ ಇಂಥದೇ ಅಂಕಣ ಬರೆಯುತ್ತಿದ್ದೆ. ಅದಕ್ಕೆ ಕೇಳ್ರಪ್ರೋ ಕೇಳಿ ಅಂತ ಹೆಸರಿತ್ತು. ಆ ಅಂಕಣದಲ್ಲಿ ಪ್ರಕಟವಾದ ಒಂದು ಪ್ರಶ್ನೆ ಮತ್ತು ಅದಕ್ಕೆ ನಾನು ನೀಡಿದ ಉತ್ತರವನ್ನು ಅವರು ನೆನಪಿಸಿದರು.
ಪ್ರಶ್ನೆ :’ ನನಗೆ ಈಗ ಐವತ್ತೊಂಬತ್ತು ವರ್ಷ. ಹೇಳಿಕೊಳ್ಳುವಂಥ ಯಾವ ಕೆಲಸವೂ ಇಲ್ಲ. ಅಡುಗೆ ಮಾಡಲು ಬರುವುದಿಲ್ಲ. ಮನೆ ಕೆಲಸ ಗೊತ್ತಿಲ್ಲ. ಹೇಳಿಕೊಳ್ಳುವಂಥ ಸೌಂದರ್ಯವೂ ಇಲ್ಲ. ಆದರೂ ನನ್ನನ್ನು ಯಾರಾದರೂ ಮದುವೆ ಆಗ್ತಾರಾ ?’
ನನ್ನ ಉತ್ತರ : ಮದುವೆ ಆಗದಿರಲು ಇವ್ಯಾವವೂ ಕಾರಣಗಳಲ್ಲ. ನಿಮ್ಮನ್ನು ವರಿಸುವ ಮೂರ್ಖ ಈ ಜಗತ್ತಿನಲ್ಲಿ ಎಲ್ಲಾ ಇದ್ದಾನೆ ಎಂಬುದು ನಿಮಗೆ ಗೊತ್ತಿರಲಿ, ಆದರೆ ನೀವು ಮಾಯಾವತಿ ಆಗಿದ್ದರೆ ದೌಟು!’
ಹಾಗೇ ಇನ್ನೊಂದು ಪ್ರಶ್ನೆ : ಭಟ್ರೇ, ಮಹಿಳೆಯರಿಗೆ ಯಾರೂ ಟಿಕೆಟ್ ಕೊಡಲು ಮುಂದೆ ಬರುವುದಿಲ್ಲ ಏಕೆ ?ಅದಕ್ಕೆ ನನ್ನ ಉತ್ತರ – ಅವರು ಮೇಕ್ ಅಪ್ ಮಾಡಿಕೊಂಡು ಬರುವಷ್ಟರಲ್ಲಿ ಚುನಾವಣಾ ಮುಗಿದುಹೋದರೆ ?!
ಇನ್ನೊಂದು ಪ್ರಶ್ನೆ – ಒಳ್ಳೆಯವರಿಗೆ ಏಕೆ ಚುನಾವಣೆಯಲ್ಲಿ ಟಿಕೆಟ್ ಕೊಡೊಲ್ಲ ?
ಇದಕ್ಕೆ ಉತ್ತರ – ಅವರಲ್ಲಿ ಎಲ್ಲ ಇದ್ದೂ ಆರಿಸಿಬರುವ ಗುಣವೊಂದಿರುವುದಿಲ್ಲ !
ಜೀವನದ ಉಳಿದ ಭಾಗಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಟ್ರಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು ಪರಿಹರಿಸಿಕೊಂಡು ನಂತರ ಡೈವ್ ಮಾಡದಿರಲು ನಿರ್ಧರಿಸುತ್ತಾರೆ. ಬಹುತೇಕ ಜನರ ಪ್ರಶ್ನೆ ಎಷ್ಟು ನಕಾರಾತ್ಮಕವಾಗಿರುತ್ತದೆಂದರೆ ಅವೆಲ್ಲವೂ ಸಾವಿನ ಕುರಿತಾಗಿರುತ್ತದೆ.
‘ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನಾಗುತ್ತದೆ?’ ಎಂಬುದು ಎಲ್ಲರೂ ಕೇಳುವ ಪ್ರಶ್ನೆ. ಒಂದು ದಿನ ಕೆಲ ಯುವಕರು ಸ್ಕೈ ಡೈವಿಂಗ್‌ಗೆ ಬಂದರು. ಅವರಲ್ಲಿ ಒಬ್ಬ ಅದೇ ಪ್ರಶ್ನೆ ಕೇಳಿದ-‘ಮೇಲಿಂದ ಜಿಗಿದಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನು ಕತೆ?’ ಅದಕ್ಕೆ ಇನ್‌ಸ್ಟ್ರಕ್ಟರ್ ಹೇಳಿದ- ‘ಮತ್ತೊಂದು ಪ್ಯಾರಚೂಟ್‌ನ್ನು ಬಳಸಿ’.
ಅದಕ್ಕೆ ಆ ಯುವಕ ‘ಅದೂ ಓಪನ್ ಆಗದಿದ್ದರೆ ಏನು ಮಾಡುವುದು?’ ಆಗ ಇನ್‌ಸ್ಟ್ರಕ್ಟರ್ ಹೇಳಿದ- ‘ಆಗ ಏನೂ ಮಾಡಲು ಆಗೊಲ್ಲ.ಬೇರೆ ದಾರಿಯಿಲ್ಲ’ ಎಂದು ಹೇಳಿದ. ಈ ಮಾತಿಗೆ ಮತ್ತಷ್ಟು ಉದ್ವಿಗ್ನನಾದ ಯುವಕ ‘ಪ್ಯಾರಚೂಟ್ ಓಪನ್ ಆಗದ ಸನ್ನಿವೇಶದಲ್ಲಿ ನಾವು ಭೂಮಿಗೆ ಬಂದು ಅಪ್ಪಳಿಸಲು ಎಷ್ಟು ಸಮಯ ಬೇಕಾಗುತ್ತದೆ?’ ಎಂದು ಕೇಳಿದ. ಈ ಪ್ರಶ್ನೆಗೆ ಇನ್‌ಸ್ಟ್ರಕ್ಟರ್ ಸಮಾಧಾನದಿಂದ ಹೇಳಿದ ‘ರೆಸ್ಟ್ ಆಫ್ ಯುವರ್ ಲೈಫ್’.ಜೀವನದಲ್ಲಿ ಬದಲಾವಣೆ
ನನ್ನ ಸ್ನೇಹಿತರೊಬ್ಬರು ಹೇಳಿದ ಪ್ರಸಂಗವಿದು. ಒಮ್ಮೆ ಅವರು ತಮ್ಮ ಗೆಳೆಯನಿಗೆ ಫೋನ್ ಮಾಡಿದರಂತೆ. ಆಗ ಅವರಿಗೆ ಈರೆಕಾರ್ಡೆಡ್ ಮೆಸೇಜ್ ಕೇಳಿಸಿತಂತೆ-‘ನಾನು ಈಗ ನಿಮ್ಮೊಂದಿಗೆ ಮಾತನಾಡಲು ಲಭ್ಯವಿಲ್ಲ. ನೀವು ನನಗೆ ಫೋನ್ ಮಾಡಿದ್ದಕ್ಕೆಧನ್ಯವಾದಗಳು. ನಾನು ನನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇನೆ.
ಬೀಪ್ ಸೌಂಡ್ ಕೇಳಿಸಿದ ನಂತರ ನಿಮ್ಮ ಮೆಸೇಜ್ ಏನೆಂಬುದನ್ನು ಹೇಳಿ, ನಾನು ವಾಪಸ್ ಕರೆ ಮಾಡುತ್ತೇನೆ. ಒಂದು ವೇಳೆ ನಾನು ವಾಪಸ್ ಫೋನ್ ಮಾಡದಿದ್ದರೆ, ನಾನು ಜೀವನದಲ್ಲಿ ಮಾಡಿರುವ ಬದಲಾವಣೆಗಳಲ್ಲಿ ನೀವೂ ಒಬ್ಬರು ಎಂದು ಭಾವಿಸಿ’. ಎರಡು-ಮೂರು ದಿನಗಳಾದರೂ ಅವರ ಗೆಳೆಯನ ಫೋನ್ ಕರೆ ಬರಲಿಲ್ಲ. ಆತ ಜೀವನದಲ್ಲಿ ಮಾಡಿಕೊಂಡ ಬದಲಾವಣೆಗಳಲ್ಲಿ ತಾನೂ ಸೇರಿದ್ದೇ ನೆಂಬುದು ಅವರಿಗೆ ಮನವರಿಕೆಯಾಯಿತು.
ಎಂಥ ಜನ ಮಾರ್ರೇಖ್ಯಾತ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಅವರು ಅನುಭವಿಸಿದ ಈ ಸಮಸ್ಯೆ ನಿಮ್ಮದೂ ಆಗಿರಬಹುದು. ಅದನ್ನು ಅವರೇ ಹೇಳ್ತಾರೆ ಕೇಳಿ. ‘ಜ್ವರ ಬಂದು ಎರಡು ದಿನ ಮಲಗಿದ್ದೆ. ವಿಷಯ ಗೊತ್ತಾಗಿ ಫೋನ್ ಮಾಡಿದ ಆತ್ಮೀಯರೆಲ್ಲರೂ ಜ್ವರ ಹೇಗಿದೆ ಅಂತ ಕೇಳಿದರು. ಅಪ್ಪಿ ತಪ್ಪಿಯೂ ಈಗ ನೀನು ಹೇಗಿದ್ದೀಯಾ ಅಂತ ಕೇಳಲಿಲ್ಲ. ಇವರಿಗೆಲ್ಲ ನನಗಿಂತಲೂ ಜ್ವರವೇ ಮುಖ್ಯವಾಗಿ ಹೋಯ್ತ,ಎಂಥ ಜನ ಮಾರ್ರೇ..!