ಹೊಸ ವರ್ಷ ಹುಟ್ಟಿದ ಹಬ್ಬಕ್ಕೆ ಎಲ್ಲರಿಗೂ ಶುಭಾಶಯಗಳು
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಈ ಡಿಸೆಂಬರ್ 30ಕ್ಕೆ ಕನ್ನಡದ ಅಭಿನಯ ಭಾರ್ಗವ ಡಾ.ವಿಷ್ಣು ವರ್ಧನ್ ಅವರು ತೀರಿ ಹೋಗಿ 11 ವರ್ಷಗಳು ಮುಗಿದು ಹನ್ನೆರಡಕ್ಕೆ ಕಾಲಿಟ್ಟಿದೆ. ಈ ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಇಂದಿಗೂ ಕೂಡ ಜನ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಅನ್ನೋದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ಅವರ ಜತೆಯಲ್ಲಿ ಕನ್ನಡ ಪ್ರೇಕ್ಷಕ ರದ್ದು ಒಂಥರಾ ವಿಶೇಷ ಬಂಧನ. ಈ ಬಂಧನದ ಕಾರಣಕ್ಕೆ ವಿಷ್ಣು ಎಂಬ ಮರೆಯಾದ ಮಾಣಿಕ್ಯವನ್ನು ಮರೆಯದೆ ನೆನಪಿಸಿಕೊಳ್ಳು ತ್ತಿದ್ದಾರೆ ಅವರ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು. ಆದರೆ ವಿಷಾದದ ವಿಷಯ ಅಂದ್ರೆ ಕನ್ನಡ ಚಿತ್ರ ರಂಗದಲ್ಲಿ ನೆನೆಗುದಿಗೆ ಬಿದ್ದಿರುವ ಎರಡು ವಿಷಯಗಳು ಅಂದ್ರೆ ತಕ್ಷಣ ನೆನಪಾಗೋದು ಹೆಸರು ಘಟ್ಟದ ಫಿಲ್ಮ್ ಸಿಟಿ ಮತ್ತು ವಿಷ್ಣುವರ್ಧನ್ ಎಂಬ ಹೆಸರಿನಲ್ಲಿ ಇರಬೇಕಾದ ಸ್ಮಾರಕ. ಚಿತ್ರರಂಗದಲ್ಲಿ ಆಗಾಗ, ಇನ್ನೇನು ಮುಗಿದೇ ಹೋಯಿತು, ಎಲ್ಲ ಫೈನಲ್ ಎಂಬ ಹಂತದ ಮಾತುಕತೆಗಳನ್ನು ಕೇಳಿದ ಮೇಲೂ ಮತ್ತೆ ಲೀಗ್ ಮ್ಯಾಚ್ ಹಂತಕ್ಕೆ ಹೋಗುವಂಥ ಎರಡು ವಿಷಯಗಳು ಇವು.
ಇದು ಕೇವಲ ವಿಷ್ಣು ಅಭಿಮಾನಿಗಳಿಗೆ ಮಾತ್ರವಲ್ಲ ಅಪ್ಪಟ ಸಿನಿಪ್ರಿಯರಿಗೆ ಇದೊಂಥರಾ ಮುಜುಗರದ ವಿಷಯ. ಈ ಹೊಸ ವರ್ಷದದ್ರೂ ವಿಷ್ಣುವರ್ಧನ್ ಅವರ ಸ್ಮಾರಕದ ಬಗ್ಗೆ ಒಂದು ಅಂತಿಮ ನಿರ್ಧಾರ ಆಗಿ ಆ ಕೆಲಸಕ್ಕೆ ಚಾಲನೆ ಸಿಗಲಿ ಅನ್ನೋದು ಎಲ್ಲರ ಆಶಯ. ಅಂದ ಹಾಗೆ, ಒಬ್ಬ ವ್ಯಕ್ತಿಯ ಹೆಸರು ಉಳಿಬೇಕು ಅಂದ್ರೆ ಸ್ಮಾರಕ ಆಗಲೇಬೇಕು ಎಂದೇನಿಲ್ಲ. ಈ ಸ್ಮಾರಕಗಳೆ ಕೇವಲ ನಾಮ್ ಕೇ ವಾಸ್ತೇ ಎನ್ನುವ ಕೆಲವರ ವಾದವೂ ನಿಜ. ಏಕೆಂದರೆ, ನಿಜವಾದ ವ್ಯಕ್ತಿತ್ವ ಜನರ ಮನದಲ್ಲಿ ಸ್ಮಾರಕವಾಗಿ ಉಳಿದಿರುತ್ತದೆ.
ಸ್ಮಾರಕ ಆಗಲಿ, ಬಿಡಲಿ, ರಾಮಾಚಾರಿಯನ್ನು ಈ ಕರುನಾಡು ಎಂದಿಗೂ ಮರೆಯೋದು ಸಾಧ್ಯವಿಲ್ಲ. ಹಾಗಾಗಿ, ನಾಗರಹಾವು ಚಿತ್ರದ ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ’ ಹಾಡಿನ ಧಾಟಿಯ ಅಪ್ಪಟ ವಿಷ್ಣು ಅಭಿಮಾನಿ ಹೇಳುತ್ತಿದ್ದಾನೆ- ನೀವು ಹೋಗಿ ಹನ್ನೆರಡು ವರುಷ, ನಮ್ಮ ಪ್ರೀತಿಗೆ ನೂರು ವರುಷ.
ಲೂಸ್ ಟಾಕ್ವಾಟಾಳ್ ನಾಗರಾಜ್ (ಕಾಲ್ಪನಿಕ ಸಂದರ್ಶನ)? ಏನ್ ಸಾರ್, ಕರ್ನಾಟಕ ಬಂದ್ ವಾಪಸ್ ತಗೊಂಡ್ ಬಿಟ್ರ, ಯಾಕೆ ?ಅದ್ ಬಂದು..? ಸಾರ್, ಬಂದ್ ಕ್ಯಾನ್ಸಲ್ ಆಯ್ತಲ್ಲ, ಇನ್ನೇನ್ ಬಂದು?-ರೀ, ಪೂರ್ತಿ ಹೇಳೋವರೆಗೂ ಕೇಳ್ರಿ, ಅದ್ ಬಂದು, ಸಿ ಎಂ ಬೊಮ್ಮಾಯಿ ಅವರು ಬಂದು, ಬಂದ್ ಮಾಡಬೇಡಿ ಅಂದ್ರು. ಅದಕ್ಕೆ ಸುಮ್ಮನಾದೆ.? ಸರಿ, ವಾಟಾಳ್ ನಾಗರಾಜ್ ಅವರು ಎಲ್ಲರನ್ನೂ ಬೈತಾರೆ ಅನ್ನೋ ಮಾತಿದೆಯಲ್ಲ,ಅದಕ್ಕೆ ಏನ್ ಹೇಳ್ತೀರಿ?-ನೋಡ್ರೀ, ನಂದು, ಬೈಯ್ಯೋದ್ರಲ್ಲಿ ಎತ್ತಿದ ಕೈ. ಅದಕ್ಕೇ ಹಾಗಂತಾರೆ ಅಷ್ಟೇ.? ಸರ್, ಎತ್ತಿದ ಕೈ ಅಂದ್ರೆ ಅದು ಹೊಡೆಯೋದ್ರಲ್ಲಿ ಅಲ್ವಾ, ಬಯ್ಯೋದ್ರಲ್ಲಿಹೆಂಗಾಗುತ್ತೆ.– ರೀ, ನೀವ್ ಹಿಂಗೆ ಮಾತ್ ಮಾತಿಗೂ ಲಾಜಿಕ್ ಮಾತಾಡಿದ್ರೆ, ನಾನ್ ಸುಮ್ನೆ ಇರಲ್ಲ. ನಿಮ್ಮ ಬಾಯಿ ಬಂದ್ ಮಾಡಬೇಕು ಅಂತ ಒತ್ತಾಯಿಸಿ ಬಂದ್ ಮಾಡಿಸ್ತೀನಿ ಅಷ್ಟೇ.
? ಹಂಗಾದ್ರೆ ನೀವು ಮಾತಾಡೋದ್ರಲ್ಲಿ -ಮಸ್ ಅಂತ ನಿಮ್ಮ ಹೆಸರನ್ನ ಯೋಗಿಆದಿತ್ಯನಾಥ್ ಅವ್ರು ವಾಚಾಳ್ ನಾಗರಾಜ್ ಅಂತ ಬದಲಾಯಿಸಿಬಿಡ್ತಾರೆ ಅಷ್ಟೇ..– ಹಂಗೆ ನನ್ ಸುದ್ದಿಗ್ ಬಂದ್ರೆ, ಆ ಯೋಗಿ ಹೆಸರನ್ನೇ ಲೂಸ್ ಮಾದ ಅಂತ ಬದಲಾಯಿಸ್ಬಿಡ್ತೀನಿ ಅಷ್ಟೇ. ಇಲ್ಲಿಗೆ ನಿಮ್ ಇಂಟರ್ ವ್ಯೂ ಬಂದ್.. ಹೋಗ್ರೀ ಸಾಕು.
ನೆಟ್ ಪಿಕ್ಸ್
ಖೇಮು ಹುಟ್ಟು ಕುರುಡ. ಒಮ್ಮೆ ಖೇಮು ಈ ಬಾರಿ ಹೊಸ ವರ್ಷವನ್ನು ತುಂಬಾ ಗ್ರ್ಯಾಂಡ್ ಆಗಿ ಆಚರಿಸಬೇಕು ಅಂತ ಅಮೆರಿಕಕ್ಕೆ ಹೋಗಿದ್ದ. ಡಿಸೆಂಬರ್31ರ ರಂದೇ ಮೊದಲೇ ಬುಕ್ ಮಾಡಿದ್ದ ಅಲ್ಲಿನ ದೊಡ್ಡ ರೆಸಾರ್ಟ್ ಒಂದರಲ್ಲಿ ಉಳಿದುಕೊಳ್ಳಲು ಹೋದ. ಖೇಮುಗೆ ಕಣ್ಣು ಕಾಣಲ್ಲ ಅಂತ, ಅವನ ಸಹಾಯಕ್ಕೆ ಅಲ್ಲಿ ಒಬ್ಬ ಸರ್ವೀಸ್ ಬಾಯ್ ಅನ್ನು ನೇಮಿಸಿದರು.
ಸರ್ವೀಸ್ ಬಾಯ್ ಖೇಮುಗೆ ಕಾಟೇಜ್ ತೋರಿಸಲು ಕರೆದುಕೊಂಡು ಹೋದ. ರೂಮಿನ ಒಳಗೆ ಹೋದ ಖೇಮು ಅಲ್ಲಿದ್ದ ಬೆಡ್ ಅನ್ನುಮುಟ್ಟಿ ನೋಡಿ ಓಹ್, ಬೆಡ್ ತುಂಬಾ ದೊಡ್ಡದಿದೆ ಅಂದ. ಅದಕ್ಕೆ ಸರ್ವೀಸ್ ಬಾಯ್ ಹೇಳಿದ ಅಮೆರಿಕದಲ್ಲಿ ಎನೂ ದೊಡ್ಡದೇ. ಓಹ್ ವಾವ್ ಅಂದ ಖೇಮು, ಸರಿ, ನಾನು ಫ್ರೆಷ್ ಆಗಿ ಬಂದು ಸ್ವಲ್ಪರೆಸ್ಟ್ತಗೊತೀನಿ.
ಸಂಜೆ ನ್ಯೂ ಇಯರ್ ಪಾರ್ಟಿ ಟೈಮಿಗೆ ನನ್ನನ್ನು ಎಬ್ಬಿಸು ಅಂತ ಸಹಾಯಕನಿಗೆ ಹೇಳಿ ನಿದ್ದೆ ಹೋದ. ಸಂಜೆ ಆಗುತ್ತಿದ್ದಂತೆ ಸಹಾಯಕ ಬಂದು ಖೇಮುವನ್ನು ಪಾರ್ಟಿಗೆ ರೆಡಿ ಮಾಡಿದ. ನಂತರ, ಖೇಮು, ನನ್ನನ್ನ ಬಾರ್ ಸೆಕ್ಷನ್‌ಗೆ ಕರೆದುಕೊಂಡು ಹೋಗು ಅಂದ. ಇಬ್ಬರೂ ಬಾರ್‌ಗೆ ಹೋದರು. ಅಲ್ಲಿ ಖೇಮು ಒಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಆ ವಿಸ್ಕಿ ಗ್ಲಾಸ್ ಮುಟ್ಟಿ ನೋಡಿದ ಖೇಮು ಓಹ್ ಎಷ್ಟು ದೊಡ್ಡ ಗ್ಲಾಸ್ ಅಂದ. ಅದಕ್ಕೆ ಸರ್ವೀಸ್ ಬಾಯ್ ಹೇಳಿದ ಅಮೆರಿಕದಲ್ಲಿ ಎನೂ ದೊಡ್ಡದೇ.
ಸರಿ ಒಂದೆರಡು ಪೆಗ್ ಆಯ್ತು. ಖೇಮು ಸ್ವಲ್ಪ ಟೈಟ್ ಆದ. ನಂತರ ಖೇಮುಗೆ ಟಾಯ್ಲೆಟ್ ಗೆ ಹೋಗಬೇಕು ಅನ್ನಿಸಿತು. ಪಕ್ಕದ ಇದ್ದ ಸರ್ವೀಸ್ ಬಾಯ್‌ನ ಕರೆದುನನ್ನ ಟಾಯ್ಲೆಟ್‌ಗೆ ಕರ್ಕೊಂಡು ಹೋಗು ಅಂದ. ಅವನೂ ಕೂಡ ನ್ಯೂ ಇಯರ್ ಪಾರ್ಟಿ ಅಂತ ಒಂದೆರಡು ಪೆಗ್ ಏರಿಸಿದ್ದ. ಹಾಗಾಗಿ ಎದ್ದು ಹೋಗಲಾರದೆ, ಹೀಗೇ ನೇರ ಹೋಗಿ, ಲೆಫ್ಟ್ ನಲ್ಲಿ ಎರಡನೇ ಡೋರ್ ಅಂತ ಹೇಳಿದ. ಕುರುಡ ಖೇಮು ನಶೆಯಲ್ಲಿ ನಡೆದುಕೊಂಡು ಹೋಗಿ, ಮಿಸ್ ಆಗಿ, ಎರಡನೇ ಡೋರ್ ಬದಲು ಮೂರನೇ ಡೋರ್‌ನಲ್ಲಿ ಎಂಟ್ರಿ ಆದ.
ಅದು ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ದಾರಿ ಆಗಿತ್ತು. ಸೀದಾ ಹೋದವನೇ ಖೇಮು ಪೂಲ್ ನೊಳಗೆ ಬಿದ್ದು ಬಿಟ್ಟ. ತಕ್ಷಣ ಗಾಬರಿಯಾದಖೇಮು ಕಿರುಚಿಕೊಳ್ಳತೊಡಗಿದ. ಅಯ್ಯೋ ಅಮೆರಿಕಾದಲ್ಲಿ ಎನೂ ದೊಡ್ಡದೇ. ಯಾರೂ ಫ್ರೆಷ್ ಮಾಡಬೇಡ್ರಪ್ಪ ಪ್ಲೀಸ್.
ಲೈನ್ ಮ್ಯಾನ್? ಕನ್ನಡಿಗರು ವಿಶಾಲ ಹೃದಯದವರಾಗಿರೋದು ತಪ್ಪೇ-ಯಾಕಂದ್ರೆ ಹಾರ್ಟ್ ಎನ್ ಲಾರ್ಜ್ ಆದ್ರೆ ಯಾರಿಗಾದ್ರೂ ಕಷ್ಟನೇ..? ಈ ಅಂತಿಮ್ ಹಿಂದಿ ಸಿನಿಮಾ ನೋಡಿದ ಮೇಲೆ ಅನ್ನಿಸಿದ್ದು-ಸಲ್ಮಾನ್ ಖಾನ್ ಹತ್ರ ಆಕ್ಟಿಂಗ್ ತೆಗೆಸೋಕೆ ಡೈರೆಕ್ಟರ್‌ಗಳ ಕೈಯಲ್ಲ ಆಗಲ್ಲ, ಅದಕ್ಕೆ ‘ಶಿಲ್ಪಿ’ಗಳೇ ಬೇಕು.
? ಅಂದ್ರೆ ಸಲ್ಮಾನ್ ಖಾನ್ ಆಕ್ಟಿಂಗ್ ಚೆನ್ನಾಗಿಲ್ವಾ ?-ಆಕ್ಟಿಂಗ್ ಮಾಡಿದ್ರೆ ತಾನೇ, ಚೆನ್ನಾಗಿದೆ, ಚೆನ್ನಾಗಿಲ್ಲ ಅಂತ ಹೇಳೋಕೆ ಸಾಧ್ಯ?
ಕಳೆದ ವಾರ ರಿಲೀಸ್ ಆಗಿದ್ದು ಎರಡು ಕನ್ನಡ ಸಿನಿಮಾ? ಒಂದು ರೈಡರ್ ಸಿನಿಮಾ-ನಿಖಿಲ್ ಕುಮಾರ್‌ಸ್ವಾಮಿದು? ಇನ್ನೊಂದು ರೈಟರ್ ಸಿನಿಮಾ-ಬಡವ ರಾಸ್ಕಲ, ಶಂಕರ್ ಗುರು ಅವರದ್ದು.? ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಹೆಸರು-ಅಖಿಲ ಕರ್ನಾಟಕ ನಿಖಿಲ ಅಭಿಮಾನಿಗಳ ಸಂಘ? ಹೊಸವರ್ಷ ಅಂದ್ರೆ ಇನ್ನೊಂದು ವರ್ಷದ ಹುಟ್ಟು. ಹಾಗಾಗಿ ಈ ಸಮಯದಲ್ಲಿವಿಭಿನ್ನವಾಗಿ ವಿಷ್ ಮಾಡೋದು ಹೇಗೆ?-ಹೊಸವರ್ಷ ಹುಟ್ಟಿದ ಹಬ್ಬಕ್ಕೆ ಎಲ್ಲರಿಗೂ ಶುಭಾಶಯಗಳು? ಹೊಸದಾಗಿ ಕಿವಿಗೆ ಶ್ರವಣ ಸಾಧನ ಹಾಕಿಸಿಕೊಂಡವರಿಗೆ ಏನಂತ ಹೇಳಬೇಕು?-‘ಹ್ಯಾಪಿ ನ್ಯೂ ಇಯರ್’? ವಿಷ್ಣುವರ್ಧನ್ ಅಂದಾಗ ನೆನಪಾಗುವ ಒಂದೇ ರೀತಿಯ ಎರಡು ವಿಷಯಗಳು-‘ಡಿಸೆಂಬರ್ 30 ಮತ್ತು ಡಿಸೆಂಬರ್ 31’? ಲೇಡೀಸ್ ಟೈಲರ್ ಗಳಿಗೆ ಒಂದು ಹೆಸರು-‘ಹುಕ್ಕಿನ’ ಮನುಷ್ಯ? ಇನ್ನೊಬ್ಬರನ್ನ ಕನ್ವಿ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ?-ಸಮಾಧಾನಕರ ಬಹುಮಾ