ಸೆಕ್ಯುಲರಿಷ್ಟರು ಬಯಸುವ ಮೃದು ಹಿಂದುತ್ವ !
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್
dascapital1205@.
ಮಾನವ ಹಿತಾಸಕ್ತಿಗೆ, ಪ್ರಗತಿಗೆ ವಿರುದ್ಧವಾಗಿದ್ದರೆ, ಅದರ ವಿರುದ್ಧ ಹೋರಾಡಿ ಮಾನವ ಕೋಟಿಯನ್ನು ವಿಮುಕ್ತಿಗೊಳಿಸುವ ಯಾವವಿಚಾರ ಧಾರೆಯೂ ಚಳವಳಿಯೂ ಸ್ವಾಗತಾರ್ಹವೂ ಸಮರ್ಥನೀಯವೂ ವಿಶ್ವಸನೀಯವೂ ಗೌರವಾರ್ಹ ಎನ್ನುತ್ತಾರೆ ಆಚಾರ್ಯರು.
ಅತ್ಯಂತ ತಮಾಷೆ ಮತ್ತು ಹಾಸ್ಯಾಸ್ಪದ ಎಂದರೆ, ನಮ್ಮ ಬೇರಿನ ಸತ್ವದಲ್ಲಿ ಹುಟ್ಟಿಲ್ಲದ ಹೊರಗಿನಿಂದ ಆಮದಾಗಿ ಬಂದ ಎಡಪಂಥೀಯ ಚಹರೆಗಳು, ಆ(ವಿ) ಕೃತಿಗಳು ಭಾರತೀಯರಿಗೆ ಸೆಕ್ಯುಲರಿಸಂ ಬೋಧೆ ಮಾಡುತ್ತಿರುವುದು.
ಸ್ವರ್ಗೀಯ ಕೆ.ಎಸ್.ನಾರಾಯಣ ಆಚಾರ್ಯರು ಈ ಹುಸಿ ಸೆಕ್ಯುಲರಿಸ್ಟರು ಬಯಸುವ ಮೃದು ಹಿಂದುತ್ವದ ಬಗ್ಗೆ ಯಥೇಚ್ಛವಾಗಿ ಜ್ವಲಂತ ನಿದರ್ಶನ, ಸ್ವಾತಂತ್ರ ಪೂರ್ವೋತ್ತರ ರಾಜಕಾರಣದ ಸಾಕ್ಷ್ಯಗಳ ಸಹಿತ ವಿಶ್ಲೇಷಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ. ಟೀಕಿಸಿದ್ದಾರೆ. ನಿಕಷ ಕ್ಕೊಡ್ಡುತ್ತಾ ವ್ಯಂಗ್ಯವೂ ವಿಡಂಬನೆಯೂ ಮಾಡಿದ್ದಾರೆ. ಈ ನೆಲದ ಸಂಸ್ಕೃತಿ ಮತ್ತು ಪರಂಪರೆಯ ಜೀವಸತ್ವ ಮತ್ತು ಉಸಿರು ಶುದ್ಧಾತಿ ಶುದ್ಧ ಸೆಕ್ಯುಲರಿಸಂ ಮೇಲೆ ಜೀವತಾ ಳಿದೆ.
ಋಗ್ವೇದದ ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ, ಇಡೀ ಮಹಾಭಾರತವನ್ನು ಹೇಳಿದ ಮೇಲೆ ವೇದವ್ಯಾಸರಿಗೆ ಅನಿಸಿದ ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ ಉದಾರ ಚರಿತಾನಾಂತು ವಸುಧೈವ ಕುಟುಂಬಕಂ, ರಾಜಾ ಪ್ರತ್ಯಕ್ಷ ದೇವತಾ- ಈ ದೇಶದ ಪೂರ್ವಸೂರಿಗಳು ಬಹಳ ಉದಾತ್ತವೆನಿಸಿದ ಮೌಲ್ಯಗಳನ್ನು ಇಂಥ ಉಕ್ತಿಗಳ ರೂಪದಲ್ಲಿ ಹೇಳಿದ್ದಾರೆ. ಆದ್ದರಿಂದ, ಸೆಕ್ಯುಲರ್ ಚಿಂತನೆ ಯನ್ನು ಭಾರತೀಯ ಪರಂಪರೆಗೆ ಯಾವ ಪಾಶ್ಚಾತ್ಯ ತತ್ವ ಸಿದ್ಧಾಂತಗಳೂ ಬೋಧಿಸುವ ಅಗತ್ಯವಾಗಲೀ ಅನಿವಾರ್ಯತೆಯಾಗಲೀ ಈ ಹಿಂದೆಯೂ ಬರಲೇ ಇಲ್ಲ.
ಯಾಕೆಂದರೆ, ಜಗತ್ತಿಗೆ ವಸುಧೈವ ಕುಟುಂಬಕಂ ಬೋಧೆಯಾಗಿದ್ದು ಭಾರತದ ನೆಲದಿಂದ. ಈ ಪರಂಪರೆಯು ಸಹಸ್ರ ವರ್ಷಗಳಿಂದಬಾಳಿಕೊಂಡು ಬಾಳಿಸಿಕೊಂಡು ಬಂದ ಬದುಕಿನ ಘನಮೌಲ್ಯಗಳಿಂದ. ಆದ್ದರಿಂದ ಭಾರತೀಯ ಸಾಹಿತ್ಯದಲ್ಲಾಗಲೀ, ಪೂರ್ವದ ಹಳಗನ್ನಡ, ಹಳಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯದಲ್ಲಾಗಲೀ ಈ ಸೆಕ್ಯುಲರ್ ಚಿಂತನೆಯು ಢಾಳಾಗಿಯೇ ಕಾಣುತ್ತದೆ. ಸೆಮೆಟಿಸಂ ಸೆಕ್ಯುಲರಿಸಂ ಸಂಬಂಧದ ಆಚಾರ್ಯರ ಈ ಮಾತನ್ನು ಗಮನಿಸಿ: ಸೆಕ್ಯುಲರಿಸಂ ಹುಟ್ಟಿದ್ದೇ ಅಲ್ಲಿ ಮತಾಂಧತೆಯ ದೆಸೆಯಿಂದ ಬಿಡುಗಡೆ ಗಾಗಿ.
ಭಾರತದಲ್ಲಿ ಮತಾಂಧತೆಯ ಇತಿಹಾಸವೋ, ಅಟ್ಟಸವೋ, ಪಿಡುಗೋ ಬಂದದ್ದು ಇಲ್ಲಿ ಇಸ್ಲಾಂ ಮತ್ತು ಈಸಾಯಿಮತಗಳು ತಳವೂರಿದ ಮೇಲೆಯೇ. ಆದುದರಿಂದ ಅವನ್ನು ನಿಯಂತ್ರಿಸುವ ಹಾದಿಯಲ್ಲಿ, ಎಲ್ಲರಿಗೂ ಧರ್ಮವನ್ನು ಸಮವಾಗಿ ತೂಗುವ ರೀತಿಯಲ್ಲಿ, ದಬ್ಬಾಳಿಕೆ,ದಬಾವಣೆಯನ್ನು ತಡೆಯುವ ರೂಪದಲ್ಲಿ. ಇಲ್ಲಿ ಮೊದಲಿಂದಲೂ ಇದ್ದ ಹಿಂದೂ ಧರ್ಮದ ಸರ್ವಸಮಾನತೆ, ಸಹಿಷ್ಣುತೆ, ಮುಕ್ತಾವಕಾಶಗಳ ಆಧಾರದ ಮೇಲೆ ಸಾಚಾ ಸೆಕ್ಯುಲರಿಸಂ, ಭಾರತೀಯ ಮೂಲದ್ದು. ಇನ್ನಷ್ಟು ಭದ್ರವಾಗಿ ಇಸ್ಲಾಂ ಈಸಾಯಿ ಮತಗಳ ಮಿತಿಮೀರಿದ ರೆಕ್ಕೆಪುಕ್ಕಗಳನ್ನು ಕತ್ತರಿಸುತ್ತ ಜಾರಿಗೆ ಬರಬೇಕಾದುದು ನ್ಯಾಯ, ಸ್ವಾಭಾವಿಕ ನಿರೀಕ್ಷಿತವೂ ಆಗಿದ್ದು, ಅದು ಹಿಂದೂಗಳ ವಿರುದ್ಧವಾಗಿಇಸ್ಲಾಂ ಈಸಾಯಿಗಳಿಗೇ ಪ್ರೋತ್ಸಾಹವಾಗುವಂತೆ, ದಿಕ್ಕು ಗೆಟ್ಟು, ಭಾರತೀಯತೆಯ ತೇಜೋವಧೆಗೆಂದೇ ಏರ್ಪಟ್ಟಿರುವುದೂ, ರಾಜಕೀಯ ಮನ್ನಣೆ ಪಡೆದಿರುವುದೂ ಒಂದು ವಿಪರ್ಯಾಸ, ವಿಪರ್ಯಯವಾಗಿದೆ!
ಸುಮಾರು ಹತ್ತು ವರ್ಷಗಳ ಹಿಂದೆ ಬರೆದ ಆಚಾರ್ಯರ ಈ ಮಾತು ಸರಿ ಹೊತ್ತಿನ ರಾಜಕೀಯ, ಹಿಂದೂ ಸಮಾಜದ ಸ್ಥಿತಿಗತಿಯನ್ನುಯಥಾವತ್ತಾಗಿ ಚಿತ್ರಿಸುತ್ತದೆ. ನಾವು ಹಿಂದೂಗಳು ಭಾವನಾತ್ಮಕರು. ಪ್ರತಿಯೊಂದನ್ನೂ ಭಾವೋದ್ರೇಕದಿಂದ ನೋಡಿಯೇ ಕಳೆದು ಕೊಳ್ಳುತ್ತಿದ್ದೇವೆ. ಎದುರಿಗೆ ಚೆನ್ನಾಗಿ ಮಾತಾಡುವ ವರನ್ನು ನಂಬಿ ನಮ್ಮ ರಹಸ್ಯಗಳನ್ನು ಬಿಚ್ಚಿಬಿಡುತ್ತೇವೆ.
ದುರಂತ ನೋಡಿ:ನಮ್ಮವರನ್ನು ನಂಬದೇ ಯಾರದ್ದೋ ಹೆಗಲಿಗೆ ಆನಿಕೊಳ್ಳುತ್ತೇವೆ. ಹಿಂದೂ ಎಚ್ಚರಗೊಳ್ಳದಿದ್ದರೆ ಸರ್ವನಾಶವನ್ನು ಅನುಭವಿಸಬೇಕಾದೀತು ಎಂದು ಒಮ್ಮೆ ಆಚಾರ್ಯರು ನನ್ನಲ್ಲಿ ಅಂದಿದ್ದರು! ಅವರ ಈ ಮಾತುಗಳನ್ನು ಗ್ರಹಿಸಿ: ಧರ್ಮ, ಮತ ಎಂಬು ದೇ ವಿಕೃತವಾಗಿದ್ದರೆ, ಅದೇ ಪ್ರಕೃತಿ ವಿರುದ್ಧವಾಗಿದ್ದರೆ, ಕೃತಕವೂ ಕ್ರೂರವೂ ಆಗಿದ್ದರೆ, ಮಾನವ ಹಿತಾಸಕ್ತಿಗೆ, ಪ್ರಗತಿಗೆ ವಿರುದ್ಧವಾಗಿದ್ದರೆ, ಅದರ ವಿರುದ್ಧ ಹೋರಾಡಿ ಮಾನವ ಕೋಟಿಯನ್ನು ವಿಮುಕ್ತಿಗೊಳಿಸುವ ಯಾವ ವಿಚಾರ ಧಾರೆಯೂ ಚಳವಳಿಯೂ ಸ್ವಾಗತಾರ್ಹವೂ ಸಮರ್ಥನೀಯವೂ ವಿಶ್ವಸನೀಯವೂ ಗೌರವಾರ್ಹವೂ ಆಗುತ್ತದೆ ಎನ್ನುತ್ತಾರೆ ಆಚಾರ್ಯರು.
ಪಾಶ್ಚಾತ್ಯರಲ್ಲಿ ಹೀಗೊಂದು ನಿರ್ಧಾರಕ ಅಂಶಗಳ ಪುರುಷಾರ್ಥ ಇಲ್ಲ ಎಂದೂ, ಇದ್ದುದು ಕೇವಲ ಅರ್ಥ ಮತ್ತು ಕಾಮಗಳ ತೃಪ್ತಿಯ ಅಧರ್ಮ ಪುರುಷಾರ್ಥ ಗಳೇ ಎಂದಿದ್ದಾರೆ. ಮನುಷ್ಯ ವೀರನಾಗಬೇಕು, ಸಾಹಸಿಯಾಗಬೇಕು, ವಿಶ್ವವನ್ನೇ ಗೆಲ್ಲಬೇಕು, ಸ್ತ್ರೀ, ಪ್ರಕೃತಿಯಿರುವುದೇ ಮಾನವನ ಭೋಗಕ್ಕಾಗಿ, ಕುಡಿತ, ಭೋಗಲಾಲಸೆ, ವಿಲಾ ಸತ್ವಗಳು ವೀರೋಚಿತ ಸೌಲಭ್ಯಗಳು, ಆಳಲು ಸಾಮರ್ಥ್ಯ ವುಳ್ಳವನೇ ದೊರೆ, ಉಳಿದವರು ಆಳು, ಸ್ವರ್ಗವೆಂಬುದು ಭೋಗಸ್ಥಾನ, ಸ್ವರ್ಗದ ದೇವತೆಗಳು ವೀರನನ್ನು ಮೆಚ್ಚುತ್ತಾರೆ, ಅವರಿಗೆ ಉಪಕರಿಸಿದರೆ ಅವರನ್ನೂ ವಶಮಾಡಿಕೊಳ್ಳ ಬಹುದು, ಮಾಂಸ ಭಕ್ಷಣ, ಜಗತ್ತನ್ನು ಗೆಲ್ಲಲು ಬೇಕಾದ ಕ್ರೌರ್ಯ, ಕುತಂತ್ರ,ಸೇನಾಬಲ ಪ್ರಯೋಗ, ಹಾದರ ಇವೆಲ್ಲ ತಪ್ಪಲ್ಲವೇ ಅಲ್ಲ.
ಇವು ವೀರನ ಹಕ್ಕುಗಳು. ಸುಖವೇ ಪುಣ್ಯ. ದುಃಖವೇ ಪಾಪ. ಇವೆಲ್ಲ ವನ್ನೂ ಹೋಮರನ ಇಲಿಯೆಡ್-ಒಡೆಸ್ಸಿ, ಗ್ರೀಕ್ ನಾಟಕಗಳು, ರೋಮನ್ ಕಾವ್ಯ- ನಾಟಕಗಳು, ಇನ್ನಿತರ ಐರೋಪ್ಯ ಸಾಹಿತ್ಯದಲ್ಲಿದೆಯೆಂದು ಆಚಾರ್ಯರು ಬರೆಯುತ್ತಾರೆ. ಸಾಕ್ರಟೀಸ್, ಪ್ಲೇಟೋ, ಪೈಥಾಗೋರಸ್, ಅರಿಸ್ಟಾಟಲ್, ಪ್ಲೊಟೇನಸ್ ಮುಂತಾದ ವಿಚಾರಧಾರೆಗಳು ಗ್ರೀಕರಲ್ಲೇ ಅಪವಾದವಾಗಿ ಪ್ರಧಾನ ವಾಹಿನಿಯನ್ನು ಬದಲಿಸಲಿಲ್ಲವಾಗಿ ಅಪ್ರಸ್ತುತವೆನಿಸಿತು ಎಂದೂ ಆಚಾರ್ಯರು ಬರೆಯುತ್ತಾರೆ.
ಸೆಕ್ಯುಲರ್ ಪ್ರವಾದಿಗಳು ಹೀಗನ್ನುತ್ತಾರೆ: ಭಾರತವು ಹಿಂದೂ ರಾಷ್ಟ್ರವಲ್ಲ. ಇಲ್ಲಿ ಬೇರೆ ಎಲ್ಲರೂ (ಕ್ರೈಸ್ತ, ಮುಸಲ್ಮಾನ, ಪಾರಸೀ, ಯಹೂದ್ಯರೂ) ಇದ್ದಾರೆ. ಇವರೆಲ್ಲ ದುಷ್ಟರಿರಲಿ, ಶಿಷ್ಟರಿರಲಿ, ಅವರ ಚರಿತ್ರೆ ಏನೇ ಇರಲಿ, ಅವರ ನಡೆವಳಿಕೆ ಗಳೇನೇ ಇರಲಿ, ಅವರ ಮತಗ್ರಂಥಗಳು ಏನೇ ಅನಾಗರಿಕ, ಅಮಾನುಷ ನೀತಿ, ಉಪದೇಶಗಳನ್ನೇ ನೀಡಲಿ, ಅವರು ಹಿಂದೂಗಳಿಗೆ ಏನೇ ಹಿಂಸೆ ಕೊಡಲು, ಕೊಟ್ಟಿರಲಿ, ಅವರ ಸ್ವಾತಂತ್ರ ವನ್ನು ರಕ್ಷಿಸುವುದು ಮುಖ್ಯವಾಹಿನಿಯಾದ ಹಿಂದೂಗಳ ಕರ್ತವ್ಯ. ಅವರು ಈ ನೆಲ ಜಲ ಜನಗಳನ್ನು ತಮ್ಮದೆಂದು ಒಪ್ಪಲಿ, ಬಿಡಲಿ, ಅವರಲ್ಲಿ ರಾಷ್ಟ್ರೀಯತೆ ಇರಲಿ, ಬಿಡಲಿ, ಅದು ಅವರ ನಂಬಿಕೆಗೆ ವಿರುದ್ಧವಾಗಿದ್ದರೆ, ಅವರು ಮಾಡುವು ದೆಲ್ಲವನ್ನು ಹಿಂದೂಗಳು ಸಹಿಸಿಕೊಂಡು ಒಂದಾಗಿ ಬಾಳಲಿಚ್ಛಿಸದವರೊಡನೆಯೂ ಏಕಮುಖವಾಗಿ ಒಂದಾಗಿ ಬಾಳಲು ಪ್ರಯತ್ನಿಸಬೇಕು. ಬಲಿದಾನ ಎಂಬುದ್ದೆಲ್ಲ ಹಿಂದೂ ಗಳದ್ದೇ ಆಗಬೇಕು.
ಉಳಿದವರು ಕೊಟ್ಟು ಕೊಳ್ಳುವ ಮನೋಭಾವವನ್ನು ಹೊಂದಬೇಕೆಂದು ಅಪೇಕ್ಷಿಸಬಾರದು. ಅವರನ್ನು ಯಾರೂ ಸುಧಾರಿಸಬಾರದು; ಅವರ ಎಲ್ಲ ಅತಿರೇಕ ವಿಚಾರ, ಭಾವನೆ, ಆಚಾರ, ನೀತಿ ಶೀಲ ಸಂಹಿತೆಗಳು, ಅಮಾನುಷ ಗ್ರಹಿಕೆಗಳು, ತಥಾಧಾರಿತ ಸಾಮಾಜಿಕ ಕಟ್ಟಳೆಗಳು, ಪಾರ ಲೌಕಿಕ ನಂಬಿಕೆಗಳು, ಎಲ್ಲವನ್ನೂ ಅವರು ಒಪ್ಪದಿರುವ ನಮ್ಮ ಸಂವಿಧಾನ ರಕ್ಷಿಸಬೇಕು. ಸಂವಿಧಾನ ರಕ್ಷಿಸದಿದ್ದರೆ ಲೋಕಸಭೆ, ಆಳುಗರು, ಮಂತ್ರಿಮಂಡಲ ಆಗಾಗ ಆ ಸಂವಿಧಾನವನ್ನೇ ತಿದ್ದಬೇಕು.
ನ್ಯಾಯ ಎಲ್ಲರಿಗೂ ಒಂದೇ ಇರಬಾರದು. ಮೊಘಲರು, ಟಿಪ್ಪು, ನವಾಬರ ಕಾಲದಲ್ಲಿ ತಲೆತಗ್ಗಿಸಿ ಮಾನ ಮರ್ಯಾದೆ ಬಿಟ್ಟು ತಲೆ ಗಂದಾಯ ಕೊಡುತ್ತ ಉಸಿರು ಹಿಡಿದು ಹೇಗೋ ಬದುಕಲು ಧಿಮ್ಮಿ ಎನಿಸುತ್ತ ಆತ್ಮಾಪಮಾನದ ಬೇಗೆಯಲ್ಲಿ ಬೇಯುತ್ತಾ ಸಾಯದೆಯೂ ಬದುಕದೆಯೂ ಇದ್ದರೋ, ಆ  ನ ಮನೋಭಾವದಲ್ಲೇ ಎಂದೆಂದೂ ಬದುಕಬೇಕು. ಅದೇ ಸಮತೆ, ಅದೇ   ಮೃದು ಹಿಂದುತ್ವ!
ಕೊನೆಯ ಮಾತು:ಹಿಂದೂ, ಹಿಂದುತ್ವ, ಹಿಂದೂ ರಾಷ್ಟ್ರೀಯತೆಯ ಬಗ್ಗೆ, ಅದನ್ನು ಕಾಯ್ದುಕೊಳ್ಳುವ ಎಚ್ಚರದ ಬಗ್ಗೆ, ಅವು ಸೆಮೆಂಟಿಕ್ ಮತಗಳ ದಾಳಿಯನ್ನು ಎದುರಿಸಿ ನಿರ್ನಾ ಮವಾಗುವ ಮಾತುಗಳನ್ನು ಬಹುಹಿಂದೆಯೇ ಆಚಾರ್ಯರು ಹೇಳುತ್ತ ಬರೆಯುತ್ತ ಬಂದರು. ಅವೆಲ್ಲ ಸತ್ಯವಾಗುತ್ತಲೇ ಬಂದವು. ವೋಟು ಬ್ಯಾಂಕ್ ರಾಜಕೀಯದ ಕರಾಳ ಮುಖ ವನ್ನು ಅನಾವರಣ ಮಾಡುತ್ತಲೇ ನಿಧನರಾದರು. ಈ ದೇಶದ ಎಲ್ಲ ಬಗೆಯ ಸಂಪತ್ತಿನ ರಕ್ಷಣೆ ಮತ್ತು ಮುಂದಿನ ತಲೆಮಾರಿಗೆ ನೀಡುವ ಬಗ್ಗೆ ಅವರಲ್ಲಿ ಅಪಾರ ಕಾಳಜಿಯಿತ್ತು.
ಅದಕ್ಕಾಗಿ ಬದುಕನ್ನು ಮುಡಿಪಾಗಿಟ್ಟರು. ಆಚಾರ್ಯರ ದೂರ ದೃಷ್ಟಿಯ ಚಿಂತನೆಗಳು ಅಸಾಮಾನ್ಯವಾಗಿದ್ದವು. ಊಹೆಗೂನಿಲುಕ ದ್ದನ್ನು ಬರೆದರು. ಅವೆಲ್ಲವೂ ನಮಗೆ ಯಾವಾಗ ಅರ್ಥವಾಗುತ್ತದೋ! ದೇವರೇ ಬಲ್ಲ.