ದೇವದಾಸ ಮನೋರೋಗಿಯಲ್ಲ, ಮಹಾಮಾರಿ !
ರಾವ್ ಭಾಜಿ
ಪಿ.ಎಂ.ವಿಜಯೇಂದ್ರ ರಾವ್
@.
ಯಾವುದೇ ಸರಕಾರಿ ಕಚೇರಿಗೆ ಹೋದಾಗ ಭೇಟಿ ಮಾಡುವ ಅಧಿಕಾರಿ, ಎಷ್ಟೇ ದೊಡ್ಡವನಿರಲಿ, ಆತನನ್ನು ಸಮಾನನಂತೆ ನೋಡುವಂಥ ವ್ಯವಸ್ಥೆ ದೇಶದಾ ದ್ಯಂತ ಬರಬೇಕು. ಅವನನ್ನು ಆದರದಿಂದ ನಡೆಸಿಕೊಳ್ಳುವ ಸಂಸ್ಕಾರ ಅಧಿಕಾರಿವರ್ಗಕ್ಕೂ ದೊರಕಬೇಕು.
ನನ್ನನ್ನು ಭೇಟಿ ಮಾಡಲು ಬಂದವರಿಗೆ ನಾನು ನಿಂತು ಮಾತನಾಡಲು ಬಿಡುವುದಿಲ್ಲ. ದ್ವಿಚಕ್ರವಿರಲಿ, ಚತುಶ್ಚಕ್ರವಿರಲಿ, ನಾನು ವಾಹನದಲ್ಲಿದ್ದಾಗ ಕಂಡಯಾರನ್ನಾದರೂ ಮಾತನಾಡಿಸಬೇಕಾಗಿ ಬಂದರೆ, ಸಂಚಾರಕ್ಕೆ ಅನನುಕೂಲವಾಗದಂತೆ, ಇಳಿದು ಮಾತನಾಡಿಸುತ್ತೇನೆ.
ಕಾರ್ಯನಿಮಿತ್ತ ಯಾರನ್ನೇ ಭೇಟಿ ಮಾಡಲು ಹೋದರೂ, ನಾನು ಅವರ ಮುಂದಿರುವ ಪೀಠವನ್ನು ಅಲಂಕರಿಸುತ್ತೇನೆ. ಕೂಡಲು ಅವರು ಹೇಳಲೆಂದು ಕಾಯುವುದಿಲ್ಲ. ಪೊಲೀಸ್ ಠಾಣೆ ಸೇರಿದಂತೆ, ಸರಕಾರಿ ಕಚೇರಿಗಳಲ್ಲಂತೂ ನಾನು ನಡೆದುಕೊಳ್ಳುವುದೇ ಹಾಗೆ. ಇದನ್ನು ನಾನು ರೂಢಿ ಮಾಡಿಕೊಂಡಿದ್ದೇನೆ. ಇದು ನನಗೆ ಅಭ್ಯಾಸವಾಗಿದ್ದು ಪತ್ರಕರ್ತನಾಗುವ ಮುನ್ನವೇ. ಈ ನನ್ನ ವರ್ತನೆ ಭೇಟಿ ಮಾಡಲು ಹೋದ ಬಹುತೇಕ ವ್ಯಕ್ತಿಗಳಿಗೆ ಇಷ್ಟವಾಗುವುದಿಲ್ಲವೆಂಬುದು ನನಗೆ ತಿಳಿದಿದೆ. ಕೆಲವೊಮ್ಮೆ ನನ್ನ ಕೆಲಸ ಸುಸೂತ್ರವಾಗಿ ನಡೆಯದಿರುವುದಕ್ಕೆ ಈ ಧೋರಣೆಯೇ ಕಾರಣ ಎಂಬುದನ್ನೂಬಲ್ಲೆ.ಇದು ಧೀಮಾಕಲ್ಲ. ನನಗೆ ನಾನು ತೋರುವ ಅತ್ಯಲ್ಪ ಆದರ.
ಇನ್ನುಳಿದಂತೆ, ಅಪರಿಮಿತ ಗತ್ತನ್ನು ತೋರುವ ದೇವೇಗೌಡರಾಗಲಿ, ಅವರ ಪುತ್ರ ಕುಮಾರಸ್ವಾಮಿಯಾಗಲಿ ಅಧಿಕಾರದ ಮೋಹದಿಂದ ಒಬ್ಬ ಯಃಕಶ್ಚಿತ್ ರಾಜಕಾರಣಿಯ ಮುಂದೆ ಕೈಕಟ್ಟಿ ತಲೆಬಾಗಿ ನಿಂತದ್ದು ಒಪ್ಪಲಾಗದ ವಿಚಾರ. ಜೀವನ್ಮರಣದ ಪ್ರಶ್ನೆಯೇ ಆದರೂ ಅವರು ಹಾಗೆ ನಡೆದುಕೊಳ್ಳಬಾರದು. ಅದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕರ್ನಾಟಕ ಜನತೆಯನ್ನು ಪ್ರತಿನಿಽಸುವುದರಿಂದ ಜನತೆಯ ಆತ್ಮಗೌರವದ ದೃಷ್ಟಿಯಿಂದಲೂ ಅವರು ಮಾಡಿದ್ದು ಸರಿಯಲ್ಲ. ಕೈಕಟ್ಟಿ ತಲೆಬಾಗಿ ನಿಲ್ಲುವ ಪರಿಸ್ಥಿತಿ ಯಾರಿಗೂ ಬರಬಾರದು.
ಶ್ರೀಸಾಮಾನ್ಯನು ಯಾವುದೇ ಸರಕಾರಿ ಕಚೇರಿಗೆ ಹೋದಾಗ ಭೇಟಿ ಮಾಡುವ ಅಧಿಕಾರಿ, ಎಷ್ಟೇ ದೊಡ್ಡವ ನಿರಲಿ, ಆತನನ್ನು ಸಮಾನನಂತೆ ನೋಡುವಂಥ ವ್ಯವಸ್ಥೆ ದೇಶದಾದ್ಯಂತ ಬರಬೇಕು. ಈ ಮಾತು ಮಂತ್ರಿವರ್ಯರಿಗೂ, ಎಲ್ಲ ಚುನಾಯಿತ ಪ್ರತಿನಿಽಗಳಿಗೂ ಅನ್ವಯಿಸುತ್ತದೆ. ಕೇವಲ ಹತ್ತು ಕ್ಷಣಕ್ಕೆ ನೀಡುವ ಭೇಟಿಗೆ ಸಂದರ್ಶಕರಿಗೆ ಪೀಠ ಒದಗಿಸುವ ಸೌಜನ್ಯ ತೋರದಿದ್ದರೆ ನಡೆಯುತ್ತದೆ. ಮಾನ್ಯ ಸಿದ್ಧರಾಮಯ್ಯನವರು ಮೊದಲ ಬಾರಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ಮೈಸೂರಿನ ಅತಿಥಿಗೃಹದಲ್ಲಿ ಸಂದರ್ಶಿಸಲು ಹೋದಾಗ ಕುರ್ಚಿ ನೀಡದೆ ಅನಾದರ ತೋರಿದ್ದರು.
ಅವರ ಬಳಿಯಿದ್ದ ಟೀಪಾಯನ್ನು ರಭಸದಿಂದ ಎಳೆದುಕೊಂಡು ಕುಳಿತು ಮಾತನಾಡಿದ್ದೆ. ಉಡಾಫೆಯಿಂದ ಉತ್ತರಿಸಿದ್ದರು. ಉದ್ವಿಗ್ನನಾಗಿ ಎದ್ದುಬಂದಿದ್ದೆ.ಸಮಯ ವ್ಯರ್ಥವಾಗಿದ್ದಕ್ಕೆ ಬೇಸರವಾಯಿತು. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ನಾನು ತಾಯಿಲ್ ಜಾಕೊಬ್ ಸೋನಿ ಜಾರ್ಜ್ ಅವರೊಡನೆ ಸೇವೆ ಸಲ್ಲಿಸಿದೆ. ಸಂಪಾದಕೀಯ ಸಲಹೆಗಾರರಾಗಿದ್ದ ಅವರ ಅಧೀನದಲ್ಲಲ್ಲ.93ವಯಸ್ಸಿನ ಜಾರ್ಜ್ ಅದ್ಭುತ ಪ್ರತಿಭೆ, ದೂಸ್ರಾ ಮಾತಿಲ್ಲ. ಲೇಖಕನಾಗಿ, ಪತ್ರಕರ್ತನಾಗಿ ಅಪಾರ ಸಾಧನೆ ಮಾಡಿದ್ದಾರೆ. ಅವರ ಬರವಣಿಗೆ ಮನಮೋಹಕ. ವರ್ತನೆಯ ದೃಷ್ಟಿಯಿಂದ ಅವರನ್ನು ಪತ್ರಿಕೋದ್ಯಮದ ಸಿದ್ಧರಾಮಯ್ಯ ಎಂದು ಕರೆಯಬಹು ದೇನೊ, ಆದರೆ ಬುದ್ಧಿವಂತ ಮತ್ತು ಮಾತುಬಲ್ಲವ ಎಂಬ ಕಾರಣಕ್ಕೆ ಈ ಸಮೀಕರಣ ಸಾಧುವೆನಿಸದು.
ಅದು ಹಾಗಿರಲಿ, ನಾನು ಕಂಡಂತೆ ಅವರ ಪ್ರತಿಭೆಗೆ ತಕ್ಕಂತೆ ಅವರ ವ್ಯಕ್ತಿತ್ವ ರೂಪುಗೊಂಡಿರಲಿಲ್ಲ. ಸಿಬ್ಬಂದಿಯನ್ನು ತುಚ್ಛವಾಗಿ ಕಾಣುತ್ತಿದ್ದರು. ನನಗೆ ಹತ್ತಿರದ ಸಹೋದ್ಯೋಗಿ ಹರಿದಾಸ್ ಎಂಬ ಮಲೆಯಾಳಿ ಪತ್ರಕರ್ತನ ಬಗ್ಗೆ ವಿಶೇಷ ಒಲವು ತೋರಿದ್ದನ್ನು ಇಷ್ಟಪಡದ ಹರಿದಾಸೇ ಅವರನ್ನು ಹಾಸ್ಯ ಮಾಡಿದ್ದ. ಬಿಹಾರದ ಸರ್ಚ್‌ಲೈಟ್ ಪತ್ರಿಕೆಯಲ್ಲಿ ಜಾರ್ಜ್ ಬರೆದ ಲೇಖನಗಳಿಂದ ಕ್ರುದ್ಧರಾದ ಆ ರಾಜ್ಯದ ಮುಖ್ಯಮಂತ್ರಿ ಕೆಬಿ ಸಹಾಯ್ ಅವರ ವಿರುದ್ಧ ದೇಶವಿರೋಧ ನಡೆಗಾಗಿ ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಿದ್ದರು. ಅಂತಹ ಚಟುವಟಿಕೆಗಾಗಿ ಕೇಸ್ ಜಡಿಸಿಕೊಂಡ ಸ್ವತಂತ್ರ ಭಾರತದ ಪ್ರಪ್ರಥಮ ಪತ್ರಕರ್ತ ಜಾರ್ಜ್. ರಕ್ಷಣಾ ಮಂತ್ರಿ ವಿಕೆಎಸ್ ಮೆನನ್ ಅವರು ಜಾಜ್ ರನ್ನು ರಕ್ಷಿಸಲು ಪಟನಾಗೆ ದೌಡಾಯಿಸಿದ್ದರು. ಮೆನನ್ ಬಗ್ಗೆ ಜಾರ್ಜ್ ಒಳ್ಳೆಯ ಪುಸ್ತಕವನ್ನು ಬರೆದರು. ಮೆನನ್‌ರ ನೇರ ಪರಿಚಯ ತಮಗಿರಲಿಲ್ಲವೆಂದು ಜಾರ್ಜ್ ಹೇಳಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಸಹಾಯ್ ಅವರ ಭ್ರಷ್ಟಾಚಾರದ ಬಗ್ಗೆ ಬರೆದದ್ದಕ್ಕೆ ತಮಗೆ ಶಿಕ್ಷೆಯಾಯಿತು ಎಂದೂ ದಾಖಲಿಸಿದ್ದಾರೆ.
ನಾನು ಎಕ್ಸ್‌ಪ್ರೆಸ್ ಸೇರಿದ್ದು ಪ್ರೊಬೇಷನರ್ ಆಗಿ. ಆರಂಭದ ದಿನಗಳ ನನಗೂ ಅವರಿಗೂ ಮಾತಿನ ಚಕಮಕಿಯಾಗಿತ್ತು. ಅದು ನನ್ನ ಡ್ಯೂಟಿಗೆ ಸಂಬಂಧಿಸಿದ್ದಲ್ಲ. ಉದ್ಯೋಗವನ್ನರಸಿ ಬಂದಿದ್ದ ನನ್ನೊಬ್ಬ ಸ್ನೇಹಿತನನ್ನು ಭೇಟಿ ಮಾಡಿ ಅವನನ್ನು ಬರಹೇಳುವ ಹೊಣೆಯನ್ನು ವಹಿಸಿದ್ದರು. ಅವನನ್ನು ಭೇಟಿ ಮಾಡಲು ಹರ ಸಾಹಸಪಟ್ಟಿದ್ದೆ, ಸಿಕ್ಕಿರಲಿಲ್ಲ. ನಾನು ಕುಳಿತಲ್ಲಿಗೇ ಬಂದ ಜಾರ್ಜ್ ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಕಾರ್ಯನಿರತನಾಗಿದ್ದೆ, ಛೇರ್ ಬಿಟ್ಟು ಏಳಲಿಲ್ಲ, ಜಾರ್ಜ್ ನಿಂತೇ ಇದ್ದರು. ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ. ಹೇಳಿದ ಪುಟ್ಟ ಕೆಲಸವನ್ನು ಸಾಧಿಸದ ನನಗೆ ಕ್ಯಾರೆಕ್ಟರ್ ಇಲ್ಲವೆಂದು ಕಟುವಾಗಿ ಹೇಳಿದರು.
ಅನುಚಿತವಾಗಿ ಮಾತನಾಡುತ್ತಿದ್ದೀರಿ, ಮಾತು ವಾಪಸ್ ಪಡೆಯಿರೆಂದು ದಬಾಯಿಸಿದೆ. ನಾನು ನಿಂತು ಮಾತಾಡಲೆಂದು ಹತ್ತಿರದಲ್ಲಿದ್ದ ನನ್ನ ಹಿರಿಯ ಸಹೋ ದ್ಯೋಗಿ ಪಣಿಕ್ಕರ್, ಜಾರ್ಜ್ ಗಮನಕ್ಕೆ ಬಾರದಂತೆ ಸನ್ನೆಯ ಮೂಲಕ ನನ್ನ ಗಮನ ಸೆಳೆಯುತ್ತಿದ್ದರು. ಜಾರ್ಜ್‌ರನ್ನು ಕಾಣಲು ಕೆನರಾ ಬ್ಯಾಂಕ್‌ನಲ್ಲಿದ್ದ ನನ್ನ ಚಿಕ್ಕಪ್ಪ ಆರ್.ಪಿ. ಗುರ್ಪುರ್ ಆಫೀಸಿಗೆ ಬಂದರು. ಭೇಟಿಯ ನಂತರ ಕ್ಯಾಬಿನ್‌ಗೆ ಹೊಂದುಕೊಂಡಿದ್ದ ಸಂಪಾದಕೀಯವಿಭಾಗದಲ್ಲಿದ್ದ ನನ್ನ ಬಳಿ ಬಂದರು. ಆಗ ತಾನೇ ಬಿಡುಗಡೆಯಾಗಿದ್ದ ಜಾರ್ಜ್‌ರ ಪುಸ್ತಕವೊಂದರ ಎರಡು ಪ್ರತ್ಯೇಕ ವಿಮರ್ಶೆಗಳನ್ನು ಚಿಕ್ಕಪ್ಪ ಓದಿ ಅವುಗಳ ತುಲನೆ ಮಾಡಿದ್ದರು.
ವಿಮರ್ಶೆ ಪ್ರಕಟವಾಗಿದ್ದು ಎರಡು ಮುಂಬಯಿ ಪತ್ರಿಕೆಗಳ ಭಾನು ವಾರದ ಆವೃತ್ತಿಯಲ್ಲಿ. ಅವರು ಭೇಟಿ ನೀಡಿದ್ದು ಬುಧವಾರ. ಜಾರ್ಜ್‌ಗೆ ಅದರ ಬಗ್ಗೆ ತಿಳಿದಿರ ಲಿಲ್ಲವಂತೆ. ತನ್ನ ಪುಸ್ತಕದ ವಿಮರ್ಶೆ ಬಗ್ಗೆ ತನಗೇ ತಿಳಿಯದ ಸಂಪಾದಕನಿರುವುದರಿಂದಲೇ ಇಂಡಿಯನ್ ಎಕ್ಸ್ ಪ್ರೆಸ್ ಹೀಗಿದೆ ಎಂದು ಜಾರ್ಜ್ ಅನ್ನು ಛೇಡಿಸಿದೆ ಎಂದು ಗಟ್ಟಿ ಗಂಟಲಲ್ಲಿ ಎಲ್ಲರಿಗೂ ಕೇಳುವಂತೆ ನಗುತ್ತ ಹೇಳಿ ಗುರ್ಪುರ್ ನಿರ್ಗಮಿಸಿದರು. ಗುರ್ಪುರ್ ನನಗೆ ತಿಳಿದವರು ಎಂದು ಜಾಜ್ ಗೆ ತಿಳಿಯಿತು. ಅದು ನನಗೆ ತಿಳಿದಾಗ ನಾನು ಪುಳಕಿತನಾಗಲಿಲ್ಲ ಎಂದರೆ ಸುಳ್ಳಾದೀತು.
ನನ್ನನ್ನು ಉಪಸಂಪಾದಕನನ್ನಾಗಿ ಆಯ್ಕೆ ಮಾಡಿದವರು ಜಾರ್ಜ್ ಅವರೇ. ಆದರೂ ಮೊದಲಿನಿಂದಲೂ ನನಗೂ ಅವರಿಗೂ ಅಷ್ಟಕ್ಕಷ್ಟೆ. ಮತ್ತೊಂದು ಸಂದರ್ಭ ದಲ್ಲಿ, ಅವರಿಗೂ ನನಗೂ ಮಾತುಕತೆಯಾಯಿತು. ಅವತ್ತೂ ಕೊಂಕು ನುಡಿದಿದ್ದರು. ಅದಾದ ಮೇಲೆ ಅವರಿಗೂ ನನಗೂ ಮತ್ತೆ ನಡೆಯಲಿಲ್ಲ. ಒಮ್ಮೆ, ಅವರನ್ನು ಕಾಣಲು ಹೋದೆ. ಅಲ್ಲಿನ ದೃಶ್ಯ ಕಂಡು ದಂಗಾದೆ. ತಮ್ಮ ಎರಡೂ ಪಾದಗಳನ್ನು ಜಾರ್ಜ್ ಡಾನ್ ಸ್ಟೈಲ್ ನಲ್ಲಿ ಟೇಬಲ್ ಮೇಲಿರಿಸಿದ್ದಾರೆ. ಅದನ್ನು ನೋಡಿ ಒಂದು ಕ್ಷಣವೂ ನಿಲ್ಲಲಿಲ್ಲ, ವಾಪಸ್ ಸೀಟಿಗೆ ಹಿಂತಿರುಗಿದೆ. ಮತ್ತೆ ಜಾಜ್ ರನ್ನು ಕಾಣಬಯಸಲಿಲ್ಲ.
ಜಾರ್ಜ್ ಕ್ಯಾಬಿನ್‌ನ ಹೊರಗೆ ಮೂಲೆಯೊಂದರಲ್ಲಿ ಅಟೆಂಡರ್‌ನ ಕುರ್ಚಿಯಿತ್ತು. ಅದಕ್ಕೆ ಹೊಂದಿಕೊಂಡಂತೆ ನಾನಾ ಮುಖ್ಯ ದಿನಪತ್ರಿಕೆಗಳನ್ನು ತಿಂಗಳುಗಳಿಗನು ಸಾರವಾಗಿ ಜೋಡಿಸಿಡಲಾಗುತ್ತಿತ್ತು. ಊಟದ ನಂತರ ಜಾರ್ಜ್ ಕ್ಯಾಬಿನ್‌ಗೆ ಬರುವ ಸಮಯಕ್ಕೆ ಸರಿಯಾಗಿ ನಾನು ಅಟೆಂಡರನ್ನು ಅಲ್ಲಿಂದ ಸಾಗುಹಾಕಿ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಪತ್ರಿಕೆಯ ಫುಲ್ ತಿರುವಿ ಹಾಕುವ ನೆಪದಲ್ಲಿ ಕಾಲುಗಳನ್ನು ನೀಳವಾಗಿ ಚಾಚಿ ಕೂಡುತ್ತಿದ್ದೆ. ಜಾರ್ಜ್ ನನ್ನನ್ನು ಹಾದುಹೋಗು ವಾಗ ನನ್ನ ಷೂ ಧರಿಸಿದ ಕಾಲುಗಳನ್ನು ಹಿಂದೆ ತೆಗೆಯುತ್ತಿರಲಿಲ್ಲ. ಜಾರ್ಜ್‌ರ ಸೊಕ್ಕಿಗೆ ಇದು ನನ್ನ ಸಾಂಕೇತಿಕ ಪ್ರತಿಭಟನೆಯಾಗಿತ್ತು. ಇದು ಹಿತವಾಗಿರಲಿಲ್ಲ, ಆದರೆ ಮಾಡದಿದ್ದರೆ ನೆಮ್ಮದಿ ಇರುತ್ತಿರಲಿಲ್ಲ.
ಹುಟ್ಟಾ ತರಲೆಯಂತೆ ಕಾಣುವ ಪಾಕಿಸ್ತಾನಿ ವಿದೇಶಾಂಗ ವ್ಯವಹಾರಗಳ ಮಂತ್ರಿ ಶಾ ಮಹಮೂದ್ ಖುರೇಶಿ ವಿವಾದಕ್ಕೆ ಸಿಲುಕಿದ್ದಾರೆ. ಭಾರತದ ಬದ್ಧ ದ್ವೇಷಿ ಯಾದ ಆತ ಮೊನ್ನೆ ತನ್ನ ದೇಶದ ಸೌದಿ ಅರೇಬಿಯಾ ರಾಯಭಾರಿನವಾಫ್ಬಿನ್ ಸೇಡ್ಆಲ್-ಮುಲ್ಕಿಜತೆಗೆ ಮಾತುಕತೆ ನಡೆಸಿದರು. ಆ ಸಂದರ್ಭದಲ್ಲಿ, ಅವರು ಕಾಲು ಮೇಲೆ ಕಾಲು ಹಾಕಿ, ತಮ್ಮ ಷೂವನ್ನು ಅತಿಥಿಗೆ ತೋರಿಸುತ್ತ ಕುಳಿತದ್ದಕ್ಕೆ ಎರಡೂ ರಾಷ್ಟ್ರಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಪಾಕಿಸ್ತಾನ್ ದಿವಾಳಿ ಎದ್ದಿದೆ. ನಮಾಜಿಗಾಗಷ್ಟೇ ಮಂಡಿ ಯೂರುತ್ತಿದ್ದ ಪ್ರಧಾನಿ ಇಮ್ರಾನ್ ಖಾನ್‌ಗೆ ಈಗ ತಿರುಪೆ ಎತ್ತುವುದಕ್ಕೂ ಮಂಡಿಯೂರಬೇಕಾದ ಸ್ಥಿತಿ. ಕಾಶ್ಮೀರದವಿಷಯದಲ್ಲಿ ಖಾನ್ ಸೌದಿ ಅರೇಬಿಯಾದ ಬೆಂಬಲ ನೀಡಲು ವಿಫಲನಾದರೂ ಆ ದೇಶದಿಂದ ಬರುತ್ತಿರುವ ಸಹಾಯ ಬತ್ತಿಲ್ಲ.
ಅಂತಹ ಸಂದರ್ಭದಲ್ಲಿ ಆ ದೇಶದ ರಾಯಭಾರಿಗೆ ಅವಮಾನ ಮಾಡಿದ್ದಕ್ಕೆ ಉಭಯ ದೇಶಗಳಲ್ಲೂ ಗುಬ್ಬಿಸಿದೆ. ತಿರುಕೆ ಜಂಭ ಅಂದರೆ ಇದೇ. ಅವಮಾನ ಕ್ಕೊಳಗಾದ ರಾಯಭಾರಿಯೇ ಇದರ ಬಗ್ಗೆ ಮೌನ ವಹಿಸಿರುವುದು ಗಮನಾರ್ಹ. ಇಸ್ಲಾಂ ಸಂಸ್ಕೃತಿ(!)ಯಲ್ಲಿ ಅತಿಥಿಗಳನ್ನು ಅವಮಾನಿಸುವ ಹಾಗಿಲ್ಲ ವಂತೆ. ಖುರೇಷಿ ಮಾಡಿದ್ದು ತಪ್ಪೆಂದು ಅವರ ದೇಶದವರೂ ಆಕ್ಷೇಪಣೆ ಎತ್ತಿದ್ದಾರೆ. ಖುರೇಷಿಯಿಂದ ಅವಮಾನಿತರಾದ ವ್ಯಕ್ತಿ ಅತಿಥಿಯಷ್ಟೇ ಅಲ್ಲ, ಪಾಕಿಸ್ತಾನದ ಅನ್ನದಾತರೂ ಹೌದು. ಅನ್ನದಾತರಿಗೆ/ಆತಿಥೇಯರಿಗೆ ಋಣ ಸಲ್ಲಿಸುವ ಗುಣವನ್ನು ನಮ್ಮ ಕರಾವಳಿಯ ಅಲ್ಪಸಂಖ್ಯಾತರೂ ಮೈಗೂಡಿಸಿಗೊಳ್ಳಲಿ.
ಹಿಂದೂ ಮಂದಿರಗಳ ಹುಂಡಿಯಲ್ಲಿ ಕಾಂಡೋಮ್‌ಗಳನ್ನು ತೂರಿಸುವುದು ನಿಲ್ಲಿಸಲಿ. ಸಶಕ್ತ ಕೊರಗಜ್ಜನ ದೇವಾಲಯವನ್ನು ಅಪವಿತ್ರಗೊಳಿಸಿದ ನವಾಜ್ ನಿಕಾಲಾದ. ಅದರ ಭಯದಲ್ಲಿ ಅವನ ಸಹ-ಪಾಪಿಗಳಾದ ರಹೀಮ್ ಮತ್ತು ತೌಫೀಕ್ ಶರಣಾದರು. ಇದಾವುದೊ ದೇವದಾಸ್ ದೇಸಾಯಿ ಎಂಬ ಪೀಡೆ ಅದೇಹೀನಕೃತ್ಯದಲ್ಲಿ ತೊಡಗಿದೆ. ತಿಪ್ಪೆಯಿಂದ ಆಯ್ದ ಬಳಸಿದ ಕಾಂಡೋಮ್‌ಗಳಿಂದ ಹಿಂದೂಗಳ ಆರಾಧನಾ ಸ್ಥಳಗಳನ್ನುಅಪವಿತ್ರಗೊಳಿಸುವುದು ಅವನ ನಿತ್ಯ ಕರ್ಮವೆಂದರೆ ಮತಾಂತರಿಗಳು ಅವನ ಮನಸ್ಸನ್ನು ಅದಾವ ರೀತಿ ಕೆಡಿಸಿದ್ದಾರೆ ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು.
ಒತ್ತಾಯದ ಮತದಾನ ನಡೆಸುತ್ತಿಲ್ಲವೆಂಬುದು ನಿಜವಾಗಿದ್ದರೆ ಈ ಧರ್ಮ ಭ್ರಷ್ಟ ದೇವದಾಸನ ಮನಸ್ಸನ್ನು ಆ ಮಟ್ಟಿಗೆ ಕೆಡಿಸಿದವರಾರು? ನೆನಪಿರಲಿ, ಮತಾಂತರ ಸ್ಥಳೀಯ ಸಮಸ್ಯೆಯಲ್ಲ. ಜಗದ್ವ್ಯಾಪಿ ರೋಗ. ಕೊರೋನಾಗಿಂತಲೂ ಭೀಕರ. ಸರ್ವಧರ್ಮ ಸಹಿಷ್ಣು ಗಳಾದ ಹಿಂದೂಗಳ ದೇವರಿಗೆ ಈ ಅಧಮ ತಲೆಬಾಗುವುದು ಬೇಡ, ತಾನೊಪ್ಪಿಕೊಂಡ ಹೊಸದೇವನ ಮುಂದೆ ತನ್ನ ನೀಚತನವನ್ನು ಒಪ್ಪಿಕೊಳ್ಳಲಿ. ಇವನ ಮತದ ಅಮಲನ್ನು ನೋಡಿದರೆ, ಆ ಸಾಧ್ಯತೆ ಇಲ್ಲ. ಆದ್ದರಿಂದ, ನೆಲದ ಕಾನೂನು ಇವನನ್ನೂ, ಇವನ ಸೂತ್ರಧಾರರನ್ನೂ ತಲೆತಗ್ಗಿಸುವಂತೆ ಮಾಡಲಿ.