ಅಷ್ಟಕ್ಕೂ ಕಾಂಗ್ರೆಸ್‌ ರಾಜ್ಯದ ಮತಾಂತರ ನಿಷೇಧ ವಿಧೆಯಕ ಖಂಡಿಸುತ್ತಿರುವುದೇಕೆ ?
ಅಭಿಪ್ರಾಯ
ಮಾರುತೀಶ್ ಅಗ್ರಾರ
ಗಾಂಧೀಜೀಯವರ Autobiographyಓದಿದವರಿಗೆ ಅವರು ಮತಾಂತರದ ಬಗ್ಗೆ ಯಾವ ನಿಲುವು ಹೊಂದಿದ್ದರು ಹಾಗೂ ಸ್ವತಃ ತಾವೇ ಮತಾಂತರದ ಜಾಲಕ್ಕೆ ಸಿಕ್ಕಿ ಹೇಗೆ ಹೊರಬಂದರು ಎಂಬುದರ ಸಾಕಷ್ಟು ವಿಷಯಗಳ ಕುರಿತು ಗಾಂಧೀಜೀಯವರೇ ಹೇಳಿಕೊಂಡಿದ್ದಾರೆ.
ಅದರಲ್ಲೂ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ಯಾವ ರೀತಿ ಒತ್ತಡಕ್ಕೆ ಒಳಗಾಗಿದ್ದರು, ತನ್ನನ್ನು ಕ್ರಿಶ್ಚಿಯಾನಿಟಿ ಕಡೆ ಸೆಳೆಯಲು ಅವರು ಎಷ್ಟೆಲ್ಲ ಪ್ರಯತ್ನಿಸಿದರು ಹಾಗೂ ಅದನ್ನೆಲ್ಲ ಎದುರಿಸಿದ ಬಗೆ ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಸಹ ಗಾಂಧೀಜಿ ತಮ್ಮ ಆತ್ಮ ಚರಿತ್ರೆಯಲ್ಲಿ ಉಖಿಸಿzರೆ. ಅದರಲ್ಲಿನ ಒಂದು ಸಣ್ಣ ಘಟನೆಯೊಂದನ್ನು ಇಲ್ಲಿ ನೆನೆಯುವುದು ಸೂಕ್ತ.
ಅದೊಮ್ಮೆ ಪ್ರಿಟೋರಿಯಾದಲ್ಲಿನ ಮಿಷನರಿಗಳು ಗಾಂಧಿಯ ಕತ್ತಿನಲ್ಲಿದ್ದ ‘ತುಳಸಿ ಮಣಿಯ ಹಾರವನ್ನು ನೋಡಿ, ನಿಮ್ಮಂತಹವರಿಗೆ ಇಂತಹ ಮೂಢನಂಬಿಕೆ ತರವಲ್ಲ. ಅದನ್ನು ಕಿತ್ತು ಎಸೆಯಿರಿ.ಇಲ್ಲ ನಾವೇ ಕಿತ್ತು ಎಸೆಯು ತ್ತೇವೆ’ ಎಂದಾಗ, ಗಾಂಧೀಜಿ ಹೇಳಿದ್ದೇನು ಗೊತ್ತಾ? ‘ಈ ತುಳಸಿ ಮಣಿಯ ಹಾರ ನನಗೆ ನನ್ನ ತಾಯಿ ಕೊಟ್ಟಿರುವ ಒಂದು ಪವಿತ್ರ ವಸ್ತು. ಅದನ್ನು ನಾನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ  ಇದು ನನ್ನ ಕ್ಷೇಮವನ್ನು ಸದಾಕಾಲ ಕಾಪಾಡುವುದೆಂದು ನಂಬಿ ಅದನ್ನು ನನ್ನ ತಾಯಿ ಪ್ರೇಮದಿಂದ ನನ್ನ ಕೊರಳಿಗೆ ಹಾಕಿದ್ದಾರೆ. ಅದು ನನ್ನ ಹಿಂದೂಧರ್ಮದ ನಂಬಿಕೆ. ಹಾಗಾಗಿ ಯಾರೇನೇ ಹೇಳಿದರೂ, ನನ್ನ ಬಗ್ಗೆ ಏನೇ ಮಾತಾಡಿಕೊಂಡರು ಈ ತುಳಸಿ ಮಣಿಯನ್ನು ಮಾತ್ರ ತೆಗೆದು ಹಾಕುವುದಿಲ್ಲ’ ಎಂದಿದ್ದರು ಗಾಂಧಿ.
ಕೊನೆಯವರೆಗೂ ಅಂದರೆ ಪ್ರಿಟೋರಿಯಾ ಬಿಟ್ಟು ಭಾರತಕ್ಕೆ ಬಂದ ಮೇಲೂ ಗಾಂಧೀಜಿಯವರು ಕ್ರೈಸ್ತ ಧರ್ಮವನ್ನು ಅದೊಂದು ಶ್ರೇಷ್ಠ ಧರ್ಮ, ಅತ್ಯುತ್ತಮ ಧರ್ಮ ಎಂದು ನಂಬದೆ, ‘ತ್ಯಾಗ ಹಾಗೂ ಸೇವೆಯ ದೃಷ್ಟಿಯಿಂದ ನೋಡಿದರೆ ಹಿಂದೂಧರ್ಮದ ಸಾಧು-ಸಂತರ ಜೀವನ ಕ್ರೈಸ್ತ ಧರ್ಮಿಯರಿಗಿಂತ ಅತಿಶ್ರೇಷ್ಠವಾದದ್ದು’ ಎಂದು ಹೇಳುತ್ತಿದ್ದರು. ಅಂದಿನ ದಿನಗಳ ಮಹಾತ್ಮ ಗಾಂಧೀಜೀಯವರು ಕ್ರೈಸ್ತ ಮಿಷನರಿಗಳು ಹಾಗೂ ಇಸ್ಲಾಂ ಧರ್ಮಿಯರು ಮಾಡುತ್ತಿದ್ದ (ಧರ್ಮವಿರೋಧಿ) ಮತಾಂತರವನ್ನು ಕಟುವಾಗಿ ವಿರೋಧಿಸುತ್ತಿದ್ದರು. ‘ಯಾವುದೇ ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ಹೇರಿ ಹೋಗಬಾರದು. ಒಂದು ವೇಳೆ ಹಾಗೇನಾದರೂ ಆದರೆ, ಅದು ಧರ್ಮವೇ ಅಲ್ಲ’ ಎಂಬುದು ಗಾಂಧೀಜೀಯವರ ಒಟ್ಟಾರೆ ಅಭಿಪ್ರಾಯ ವಾಗಿತ್ತು.
ಅಂದಹಾಗೆ ಇಂದು ಮಹಾತ್ಮ ಗಾಂಧಿಜೀ ಯವರೇನಾದರೂ ಜೀವಂತವಾಗಿದಿದ್ದರೆ ಹಾಗೂ ಆಕಸ್ಮಾತ್ ಅವರೇನಾದರೂ ಅಧಿಕಾರದಲ್ಲಿದ್ದಿದ್ದರೆ ಅವರೇ ಖುzಗಿ ‘ಮತಾಂತರ ನಿಷೇಧ ಕಾಯಿದೆಯನ್ನು ದೇಶಾದ್ಯಂತ ಜಾರಿಗೊಳಿಸುತ್ತಿದ್ದರು! ಅಷ್ಟರಮಟ್ಟಿಗೆ ಗಾಂಧಿಜೀ ಹಿಂದೂಯೇತರ ಧಾರ್ಮಿಕ ಮುಖಂಡರುಮಾಡುತ್ತಿದ್ದ ಮತಾಂತರದ ಬಗ್ಗೆ ಬೇಸರ ಹಾಗೂ ಜುಗುಪ್ಸೆಗೊಂಡಿದ್ದರು. ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಹಾದಿಯಾಗಿ ಇನ್ನು ಅನೇಕ ಮಹನೀಯರೇ ಮತಾಂತರ ಎಂಬ ಧರ್ಮವಿರೋಧಿ ಕುಕೃತ್ಯದ ವಿರುದ್ಧ ತಿರುಗಿಬಿದ್ದಿದ್ದರು. ದುರ್ದೈವವೆಂದರೆ ಗಾಂಧೀಜಿ ಮುಖ ಮುಂದಿಟ್ಟುಕೊಂಡು ದಶಕಗಳ ಕಾಲ ದೇಶದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್, ಗಾಂಧೀಜಿ ಯಾವುದನ್ನು ಕಟುವಾಗಿ ವಿರೋಧಿಸಿದ್ದರೋ(ಮತಾಂತರ)ಅದರ ಪರವಾಗಿ ನಿಂತಿದೆ.
ಈ ಕಾಯಿದೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷವೇಕೆ ಈ ಕಾಯಿದೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿದೆ? ಈ ಕಾಯಿದೆ ಜಾರಿಯಿಂದ ಕಾಂಗ್ರೆಸ್ ಪಕ್ಷಕ್ಕಾಗುವ ನಷ್ಟವೇನು? ಕಾಂಗ್ರೆಸ್ ಈ ಕಾಯಿದೆಯ ಬಗ್ಗೆ ಯಾಕಿಷ್ಟು ಕಸಿವಿಸಿ ಗೊಂಡಿದೆ? ಹಾಗಿದ್ದರೆ ಕಾಂಗ್ರೆಸ್‌ಗೆ ಹಿಂದೂಗಳು ವೈರಿಗಳಂತೆ ಕಂಡಿದ್ದೀರಾ? ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮೂಲತಃ ಕ್ರೈಸ್ತ ಸಮುದಾಯ ದವರೆಂಬುದು ಗೊತ್ತೇ ಇದೆ. ಅವರದು ರೋಮನ್ ಕ್ಯಾಥೋಲಿಕ್ ಪಂಗಡ.
ಸೋನಿಯಾ ಅಲ್ಬಿನೋ ಆಂಟೋನಿಯೊ ಮೈನೋ ಎಂಬುದು ಅವರ ನಿಜವಾದ ಹೆಸರು. ರಾಜಕಾರಣದ ದುರುದ್ದೇಶದಿಂದ ಅವರ ಹೆಸರು ಸೋನಿಯಾ ಗಾಂಧಿ  ಎಂದಾಯಿತು. ಅವರ ಮಗ ರಾಹುಲ್ ಹಿಂದೊಮ್ಮೆ ಒಂದು ಸರ್ಟಿಫಿಕೇಟ್‌ನಲ್ಲಿ ತನ್ನ ಹೆಸರನ್ನು ರೌಲ್ ವಿನ್ಸಿ(ಕ್ರಿಶ್ಚಿಯನ್ ಸಮುದಾಯದವರು ಇಡುವ ಹೆಸರು) ಎನ್ನುವುದಾಗಿ ನಮೂದಿಸಿದ್ದರು. ಆಗ ಅದು ವಿವಾದವೆದ್ದು ತಣ್ಣಗಾಯಿತು. ಕಾಂಗ್ರೆಸ್ ಹೈಕಮಾಂಡ್‌ನ ಹಿನ್ನೆಲೆ ಹೀಗಿರುವಾಗ ರಾಜ್ಯದ ಕಾಂಗ್ರೆಸ್ ನಾಯಕರುಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಲೇ ಬೇಕು!
ಅವರಿಗೆ ಬೇರೆ ದಾರಿಯೇ ಇಲ್ಲ. ಇನ್ನು ಮತಬ್ಯಾಂಕ್ ದೃಷ್ಟಿಯಿಂದ ಕ್ರಿಶ್ಚಿಯನ್ ಕಮ್ಯುನಿಟಿ ಹಾಗೂ ಮುಸ್ಲಿಂ ಸಮುದಾಯವನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಎದುರು ಹಾಕಿಕೊಳ್ಳುವಂತಿಲ್ಲ. ಇಷ್ಟೇ ಅಲ್ಲದೆ, ಕಾಂಗ್ರೆಸ್ ಗೆ ವಿದೇಶಿ ಚರ್ಚ್‌ಗಳಿಂದ, ವಿದೇಶಿ ಹಾಗೂ ದೇಶಿಯ ಕ್ರಿಶ್ಚಿಯನ್ ಸಂಘಗಳಿಂದ ನೂರಾರು ಕೋಟಿ ದೇಣಿಗೆ ಸಂದಾಯವಾಗುತ್ತಿದೆ! ಕೇವಲ ಒಂದು ಕಾಯಿದೆ ಪರವಾಗಿ ನಿಂತು ನೂರಾರು ಕೋಟಿಗಳ ಲಾಭವನ್ನು ಕಳೆದುಕೊಳ್ಳಲು ಕಾಂಗ್ರೆಸಿಗರೇನುದಡ್ಡರೇ? ಈ ಹಿಂದೆ ಇದೇ ಕ್ರಿಶ್ಚಿಯನ್ ಸಮುದಾಯದವರನ್ನು ಓಲೈಸಲು ರಾಮನಗರದ ಬಳಿ ಇರುವ ಕಪಾಲಿ(ಈಶ್ವರ)ಬೆಟ್ಟದಲ್ಲಿ ಬೃಹತ್ ಆದ ಏಸುವಿನ ಪ್ರತಿಮೆ ನಿರ್ಮಿಸಲು ರಾಜ್ಯ ಕಾಂಗ್ರೆಸ್ ಪಕ್ಷ ಮುಂದಾಗಿದ್ದನ್ನು ಇಲ್ಲಿ ನೆನೆಯಬಹುದು.
ಕಳೆದ ಲೋಕಸಭಾ ಚುನಾವಣೆಯ ಮತದಾನದ ವಿವರಗಳನ್ನು ನೋಡಿದರೆ ಹೆಚ್ಚುಕಡಿಮೆ ದಲಿತರ ಹಾಗೂ ಸಣ್ಣಪುಟ್ಟ ಜಾತಿಯ ವೋಟುಗಳು ಕಾಂಗ್ರೆಸ್‌ ನಿಂದ ದೂರವಾಗಿವೆ. ದಲಿತರು, ಹಿಂದುಳಿದ ವರ್ಗಗಳ ಜನರು ಕೂಡ ಇಷ್ಟು ವರ್ಷಗಳ ಕಾಂಗ್ರೆಸ್ ಮತಬ್ಯಾಂಕಿನ ರಾಜಕಾರಣದ ಅಜೆಂಡಾವನ್ನು ನೋಡಿ ಬೇಸತ್ತಿದ್ದಾರೆ. ಈ ಸತ್ಯ ಕಾಂಗ್ರೆಸ್‌ನ ಹೈಕಮಾಂಡ್ ಹಾಗೂ ಪಕ್ಷದ ಮುಖಂಡರಿಗೂ ಗೊತ್ತಾಗಿದೆ. ಹಾಗಾಗಿ ಕಾಂಗ್ರೆಸ್ ಈಗ ದಲಿತರ ಕಡೆ ಹೆಚ್ಚು ತಲೆಕೆಡಿಸಿ ಕೊಳ್ಳದೆ, ಉಳಿದಿರುವ ತನ್ನ ಕಾಯಂ ಮತದಾರರಾಗಿರುವ ಕ್ರೈಸ್ತರನ್ನು ಹಾಗೂ ಮುಸ್ಲಿಮರನ್ನು ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್ ತಯಾರಿಲ್ಲ. ಒಂದು ವೇಳೆ ಬಿಜೆಪಿ ಈ ಕಾಯಿದೆಯನ್ನು ಜಾರಿ ಮಾಡಿದ್ದೇ ಆದರೆ ಕಾಂಗ್ರೆಸ್ ಅಽಕಾರಕ್ಕೆ ಬಂದ ಒಂದು ವಾರ ದೊಳಗೆ ಮತಾಂತರ ನಿಷೇಧ ಕಾಯಿದೆಯನ್ನು ರದ್ದುಮಾಡುವುದಾಗಿ ಈಗಾಗಲೇ ಸಿದ್ಧರಾಮಯ್ಯನವರು ಆಶ್ವಾಸನೆ ಕೊಟ್ಟು ಬಿಟ್ಟಿದ್ದಾರೆ. ಈ ಕಾಂಗ್ರೆಸಿಗರಿಗೆ ಹಿಂದೂಗಳು ಹಾಗೂ ಹಿಂದೂ ಹೆಣ್ಣುಮಕ್ಕಳ ಜೀವನಬರ್ಬಾದ್ ಆದರೂ ಪರವಾಗಿಲ್ಲ ಮಿಷನರಿಗಳು ಹಾಗೂ ಜಿಹಾದಿ ಮನಃಸ್ಥಿತಿಗಳು ಹೂಡುತ್ತಿರುವ ಕುತಂತ್ರಗಳಿಗೆ ಹಾಗೂ ಅವರ ಧರ್ಮ ವಿಸ್ತರಣೆಯಕಾರ್ಯಗಳಿಗೆ ಒಂದಿನಿತು ಪೆಟ್ಟು ಬೀಳುವಂತಿಲ್ಲ.
ಹಾಗೇನಾದರೂ ಆದರೆ ಕಾಂಗ್ರೆಸಿಗರ ಕತ್ತು ಹಿಸುಕಿದಂತಾಗುತ್ತದೆ. ಅದರ ಪರಿಣಾಮವೇ ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯಿದೆಯನ್ನು ವಿರೋಽಸುತ್ತಿರುವುದು! ಜೆಡಿಎಸ್ ಸಹ ಈ ಕಾಯ್ದೆ ಜಾರಿಯಾಗುವುದನ್ನು ವಿರೋಽಸುತ್ತಿರುವ ಹಿಂದಿನ ಉದ್ದೇಶವೂ ಅಲ್ಪಸಂಖ್ಯಾತರು ತಮ್ಮ ಪಕ್ಷದಿಂದ ಹಿಂದೆಸರಿಯುತ್ತಾರೆ ಎನ್ನುವ ಕಾರಣದಿಂದಲೇ ಮತಾಂತರ ನಿಷೇಧ ಕಾಯಿದೆಯನ್ನು ವಿರೋಧಿಸುತ್ತಿದೆ. ಇವರಿಗೆಲ್ಲ ಅದ್ಯಾವಾಗ ಬುದ್ಧಿ ಬರುತ್ತೋ ಆದೇವರೇ ಬಲ್ಲ !