೨೦೨೧ರಲ್ಲಿ ದಾಖಲಾದ ವೈದ್ಯ ವಿಸ್ಮಯಗಳು
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್‌
@.
ಹೃದಯದಲ್ಲಿ 4 ಇಂಚಿನ ಸಿಮೆಂಟ್ ತುಣುಕು, ಕಣ್ಣಿನಲ್ಲಿ ತಾಮ್ರದ ಉಂಗುರ, ಮನುಷ್ಯನ ರಕ್ತದಲ್ಲಿ ಅಣಬೆ ಬೆಳೆಯುವುದು, ತನ್ನ ಕಣ್ಣಿನ ಪಾಪೆ ( ) ತಾನೇ ನಿಯಂತ್ರಿಸಿಕೊಳ್ಳುವುದು -2021ರಲ್ಲಿ ಜಗತ್ತಿನಾದ್ಯಂತ ಜರುಗಿದ ಇಂಥ ವೈದ್ಯಕೀಯ ಕೌತುಕಗಳ ಬಗ್ಗೆ ದೃಷ್ಟಿ ಹಾಯಿಸೋಣ, ಬನ್ನಿ.
1 ಹೃದಯದಲ್ಲಿ ಸಿಮೆಂಟ್ ತುಣುಕು !ಸುಮಾರು 56 ವರ್ಷದ ಈ ವ್ಯಕ್ತಿಗೆ ಒಮ್ಮೆಲೇ ಎದೆನೋವು, ಉಸಿರಾಡಲು ತೊಂದರೆ ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (  ) ಸೇರಿಸಲಾಯಿತು. ಕೆಲವು ದಿನಗಳ ಮೊದಲು ಆತನಿಗೆ ಬೆನ್ನು ಮೂಳೆ ಕುಸಿದು ವಿಪರೀತ ನೋವು ಉಂಟುಮಾಡುತ್ತಿತ್ತು.
ಹಾಗಾಗಿ ಬೆನ್ನು ಮೂಳೆ ಮುರಿತಕ್ಕೆಶಸ್ತ್ರಕ್ರಿಯೆ ಮಾಡಲಾಗಿತ್ತು. ವೈದ್ಯರು ಆಗ  ಎಂಬಶಸ್ತ್ರಕ್ರಿಯೆಮಾಡಿದ್ದರು. ಕುಸಿದ ಬೆನ್ನು ಮೂಳೆಯ () ಎತ್ತರ ಕಾಯ್ದುಕೊಂಡು ಮತ್ತೆ ಕುಸಿಯದಂತೆ ಮಾಡಲು ಒಂದು ವಿಶೇಷ ರೀತಿಯ ಸಿಮೆಂಟನ್ನು ಆ ಭಾಗಕ್ಕೆ  ಮಾಡಿ ದ್ದರು. ಈಶಸ್ತ್ರಕ್ರಿಯೆಯ ಅಪರೂಪದ ಪಾರ್ಶ್ವ ಪರಿಣಾಮ (   ) ಎಂದರೆ ಇಂಜೆಕ್ಷನ್ ಮೂಲಕ ಒಳಸೇರಿದ ಸಿಮೆಂಟ್ ಮೂಳೆ ಯಿಂದ ಹೊರಗೆ ಲೀಕ್ ಆಗಬಹುದು.
ಹಾಗೆ ಹೊರಗೆ ಬಂದ ಸಿಮೆಂಟ್ ರಕ್ತ ನಾಳವನ್ನು ಆವರಿಸಿ ರಕ್ತದ ಚಲನೆಗೆ ತಡೆ ಉಂಟು ಮಾಡಬಹುದು. ಈ ವ್ಯಕ್ತಿಯಲ್ಲೂ ಹಾಗೆಯೇ ಆಗಿ ಮೂಳೆ ಯಿಂದ ಸಿಮೆಂಟ್ ಲೀಕ್ ಆಗಿ ಮಲಿನ ರಕ್ತನಾಳ ()ಗಳಲ್ಲಿ ಗಟ್ಟಿ ಯಾಗಿ  ಉಂಟುಮಾಡಿ, ನಂತರ ಹೃದಯಕ್ಕೆ ಪ್ರಯಾಣ ಮಾಡಿತು. ವೈದ್ಯರು ಆ ಸಿಮೆಂಟ್  ಅನ್ನುಶಸ್ತ್ರಕ್ರಿಯೆಮಾಡಿ ಹೊರತೆಗೆದು ಹೃದಯದಲ್ಲಿ ಉಂಟಾದ ಸಣ್ಣ ರಂಧ್ರವನ್ನು ರಿಪೇರಿ ಮಾಡಿದರು.       ತನ್ನ ಅಕ್ಟೋಬರ್2021ರ ಸಂಚಿಕೆಯಲ್ಲಿ ಈ ಕೌತುಕವನ್ನು ವರದಿ ಮಾಡಿದೆ.
2ಕಣ್ಣಿನೊಳಗೆ ತಾಮ್ರದ ಉಂಗುರದೆಹಲಿಯ 45 ವರ್ಷದ ವ್ಯಕ್ತಿಯೊಬ್ಬ ಹೊಟ್ಟೆ ನೋವು, ಹೊಟ್ಟೆ ತುಂಬಾ ದಪ್ಪಗಾಗಿದೆ ಎಂಬ ಲಕ್ಷಣದಿಂದ ವೈದ್ಯರಲ್ಲಿ ಪರೀಕ್ಷೆಗೆ ಹೋದನು. ವೈದ್ಯರಿಗೆ ಈತನ ಕಾಯಿಲೆ ಬಗ್ಗೆ ಸಂದೇಹ ಬಂದು ನೇತ್ರ ವೈದ್ಯರಿಂದ ಕಣ್ಣು ಪರೀಕ್ಷೆ ಮಾಡಿಸಿದರು. ಆತನ ಎರಡೂ ಕಣ್ಣಿನ ತಾರಕೆಯ ()ಯನ್ನು ಸುತ್ತುವರಿದ   ಬಣ್ಣದ ಉಂಗುರ ಅಥವಾ ವರ್ತುಲಗಳು ಕಾಣಿಸಿದವು. ಇದನ್ನು ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ (ಕಪ್ಪು ಗುಡ್ಡೆ) ಭಾಗದಲ್ಲಿ ತಾಮ್ರದ ಪ್ರಮಾಣ ಜಾಸ್ತಿಯಾಗಿ ಉಂಟಾದ  &   ಎಂದು ಗುರುತಿಸಿದರು.
ಅಪರೂಪದಲ್ಲಿ ಕಂಡು ಬರುವ ಜೆನೆಟಿಕ್ ಕಾಯಿಲೆ ವಿಲ್ಸನ್ಸ್ ಕಾಯಿಲೆಯಲ್ಲಿ ಈ ರೀತಿಯ ತಾಮ್ರದ ವರ್ತುಲ ಅಥವಾ ಉಂಗುರ ರೀತಿಯಲ್ಲಿ ಕಣ್ಣಿನ ಕಾರ್ನಿಯಾದ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಜೆನೆಟಿಕ್ ಮ್ಯುಟೇಷನ್‌ನಿಂದ ಬರುವ ಈ ಅಪರೂಪದ ವಿಲ್ಸನ್ಸ್ ಕಾಯಿಲೆಯಲ್ಲಿ ದೇಹಕ್ಕೆ ಹೆಚ್ಚಾದತಾಮ್ರದ ಅಂಶವನ್ನು ಹೊರ ಹಾಕುವ ಶಕ್ತಿ ಕುಂದುತ್ತದೆ. ಹಾಗೆ ದೇಹದೊಳಗೆ ಶೇಖರಗೊಂಡ ತಾಮ್ರವು ಯಕೃತ್ತು ( ), ಮೆದುಳು ಮತ್ತು ಕಣ್ಣಿನಲ್ಲಿ ಶೇಖರಗೊಳ್ಳುತ್ತವೆ. ವಿರಳವಾದ ಈ ಕಾಯಿಲೆ ಸುಮಾರು ೩೦ ಸಾವಿರ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
ಹಾಗಾಗಿ ಈ ರೀತಿ ಶೇಖರಗೊಂಡ ತಾಮ್ರದ ಹೆಚ್ಚಿನ ಪ್ರಮಾಣ ಲಿವರ್, ಮೂತ್ರಪಿಂಡ ( ) ಮತ್ತು ನರಗಳ ಸಮಸ್ಯೆಗಳನ್ನು ಉಂಟು ಮಾಡ ಬಹುದು. ಮೇಲೆ ತಿಳಿಸಿದ ವ್ಯಕ್ತಿಯಲ್ಲಿ     ಅಂದರೆ ಯಕೃತ್ತಿನ  ಉಂಟಾಗಿತ್ತು. ಅದಕ್ಕೆ ಕೊಡ ಬೇಕಾದ   ಗಳನ್ನು ಉಪಯೋಗಿಸಿ ಹೆಚ್ಚುವರಿ ತಾಮ್ರದ ಅಂಶವನ್ನು ಹೊರಹಾಕಲಾಯಿತು. ಭಾರತದಲ್ಲಿ ಜರುಗಿದ ಈ ಅಪರೂಪದ ವೈದ್ಯಕೀಯ ಕೌತುಕವು ಸೆಪ್ಟೆಂಬರ್ 2021 ರ       ನಲ್ಲಿ ಪ್ರಕಟಗೊಂಡಿದೆ.
3ರಕ್ತದಲ್ಲಿ ಶಿಲೀಂಧ್ರದ ಬೆಳವಣಿಗೆ  ಎಂಬ ಮಾನಸಿಕ ಕಾಯಿಲೆ ೩೦ ವರ್ಷದ ಈತನಿಗೆ ಇತ್ತು. ಅಲ್ಲದೆ ಆತ ಅಫೀಮಿನ ದಾಸನಾಗಿದ್ದ. ಅವನು ಆಗಾಗ ತನ್ನ ಕಾಯಿಲೆಯ ಲಕ್ಷಣ ಗಳಿಗೆ ತಾನೇ ಏನೇನೋ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ. ಆತ   ಎಂಬ ಅಣಬೆಯನ್ನು ಟೀ ರೀತಿಯಲ್ಲಿ ಕಾಯಿಸಿ ಕುದಿಸಿ, ನಂತರ ಅದನ್ನು ತನ್ನ ದೇಹಕ್ಕೆ ತಾನೇ ಇಂಜೆಕ್ಟ್ ಮಾಡಿಕೊಂಡ. ಈ   ನಲ್ಲಿ  ಎಂಬ ಮತ್ತು ಬರಿಸುವ ವಸ್ತು ಇರುತ್ತದೆ. ಅದರ ನಂತರ ಆತನಿಗೆ ವಾಂತಿ ಬರುವಂತೆ ಉಬ್ಬಳಿಕೆ ಆರಂಭವಾಯಿತು, ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತ ಬಂದಿತ್ತು.
ನಂತರ ರಕ್ತವಾಂತಿ ಮಾಡಲು ಆರಂಭಿಸಿದ. ಕೂಡಲೇ ಆತನ ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಪರೀಕ್ಷಿಸ ಲಾಗಿ ಆತನ ಲಿವರ್, ಮೂತ್ರಪಿಂಡ () ಇಂತಹಾ ಮುಖ್ಯ ಅಂಗಗಳು ಕರ್ತವ್ಯ ವಿಮುಖವಾಗಿ ಶಿಥಿಲಗೊಳ್ಳತೊಡಗಿದವು. ನಂತರ ಪೂರಕ ಪರೀಕ್ಷೆಗಳಲ್ಲಿ ಆತನ ರಕ್ತದಲ್ಲಿ   ಎಂಬ ಶಿಲೀಂಧ್ರದ () ಸೋಂಕು ಇರುವುದು ಗೊತ್ತಾಯಿತು. ಆತ ರಕ್ತಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದ   ನದ್ದೇ ಅಂಶ ಇದು.
ಮತ್ತೊಂದು ವಿಧದಲ್ಲಿ ಹೇಳುವುದಾದರೆ ಈ ವಿಶಿಷ್ಟ ಅಣಬೆಯ ಶಿಲೀಂಧ್ರವು ಆತನ ರಕ್ತದಲ್ಲಿ ಬೆಳೆಯಲಾರಂಭಗೊಂಡಿತ್ತು. ಆತನಿಗೆ ಸೂಕ್ತ ಆಂಟಿ ಬಯೋಟಿಕ್ ಮತ್ತು ಆಂಟಿ ಫಂಗಲ್ ಔಷಧಗಳನ್ನು ಕೊಟ್ಟು ಚಿಕಿತ್ಸೆ ಮಾಡಿದುದೇ ಅಲ್ಲದೆ ಆತನಿಗೆ ಹಲವಾರು ದಿನಗಳ ಕಾಲ ಆತನನ್ನು ವೆಂಟಿಲೇಟರ್‌ನಲ್ಲಿರಿಸುವ ಅನಿವಾರ್ಯ ಒದಗಿತು. 22 ದಿನಗಳ ನಂತರ ಸಂಪೂರ್ಣ ಗುಣಹೊಂದಿ ಆತ ಆಸ್ಪತ್ರೆಯಿಂದ ನಿರ್ಗಮಿಸಿದ ಎಂಬುದು ಆಶಾದಾಯಕ ವಿಚಾರ. ಇದು ಜನವರಿ 2021 ರ       &   ಯಲ್ಲಿ ಪ್ರಕಟಗೊಂಡಿದೆ.
೪ಕಣ್ಣಿನ ಪಾಪೆ ನಿಯಂತ್ರಿಸಬಲ್ಲ!ಜರ್ಮನಿಯ ಈ ಯುವಕನಿಗೆ ತನ್ನ ಕಣ್ಣು ಪಾಪೆ ()ಯನ್ನು ಸಣ್ಣದು ಮತ್ತು ದೊಡ್ಡದು ಮಾಡುವ ಅಸಾಧ್ಯ ಮತ್ತು ಅಸಾಧಾರಣ ಸಾಮರ್ಥ್ಯ ಇತ್ತು. ಈ ತರಹದ ಶಕ್ತಿ ಅಥವಾ ಸಾಮರ್ಥ್ಯ ಯಾರಲ್ಲೂ ಇರಲು ಸಾಧ್ಯವಿಲ್ಲ ಎಂದು ವೈದ್ಯ ವಿಜ್ಞಾನಿಗಳು ಹಾಗೂ ಸಂಶೋಧಕರು ಈವರೆಗೆ ಭಾವಿಸಿದ್ದರು. ಸಾಮಾನ್ಯವಾಗಿ ನಮ್ಮ ಕಣ್ಣಿನ ಪಾಪೆ  ಕತ್ತಲೆ ಮತ್ತು ಬೆಳಕಿನ ವಾತಾವರಣಕ್ಕೆ ತಕ್ಕ ಹಾಗೆ ಹಿಗ್ಗುವುದು ಅಥವಾ ಕುಗ್ಗುವುದು ಆಗುತ್ತದೆ. ಮಾಂಸಖಂಡಗಳನ್ನು ನಿಯಂತ್ರಿಸುವಂತೆ ಈ ಹಿಗ್ಗಿಸುವ ಮತ್ತು ಕುಗ್ಗಿಸುವ ಕ್ರಿಯೆ ನಮಗೆ ಇಚ್ಛೆ ಬಂದಂತೆ ಬದಲಾಯಿಸಲು ಬರುವುದಿಲ್ಲ ಎಂಬ ವಿಜ್ಞಾನಿಗಳ, ಸಂಶೋಧಕರ ಇಲ್ಲಿಯವರೆಗಿನ ನಂಬಿಕೆಯನ್ನು ಈತ ಸುಳ್ಳಾಗಿಸಿದ.
23 ವರ್ಷದ ಈ ಯುವಕ ತನ್ನ ಕಣ್ಣು ಪಾಪೆಯನ್ನು ಯಾವಾಗ ಬೇಕಾದರೂ ಹಿರಿದಾಗಿಸುವುದು ( ) ಮತ್ತು ಕಿರಿದಾಗಿಸುವುದು() ಮಾಡಲು ಶಕ್ತನಾಗಿದ್ದ. ಹಾಗೆಂದು ಇದಕ್ಕೆ ಆತ ಕತ್ತಲೆಯ ಅಥವಾ ಬೆಳಕಿನ ವಾತಾವರಣವನ್ನು ಮನಸ್ಸಿನಲ್ಲಿ ಕಲ್ಪಿಸಿ ಟ್ರಿಕ್ ಅಥವಾ ಮ್ಯಾಜಿಕ್ ಏನೂ ಮಾಡುತ್ತಿರಲಿಲ್ಲ. ಆತನನ್ನು ಪ್ರಶ್ನಿಸಲಾಗಿ ತನ್ನ ಕಣ್ಣಿನ ಮೇಲಿನ ಗಮನವನ್ನು ಕೇಂದ್ರೀಕರಿಸಿ ಹದಿಹರೆಯದ ವಯಸ್ಸಿನಿಂದಲೂ ಆತ ಹಾಗೆ ಮಾಡುವುದನ್ನು ಕಲಿತಿದ್ದ. ಪಾಪೆ ಕಿರಿದಾಗಿಸ ಬೇಕು ಎಂದರೆ ಕಣ್ಣನ್ನು ಬಿಗಿ ಹಿಡಿಯುತ್ತೇನೆ.
ಹಿರಿದಾಗಿಸಬೇಕೆಂದರೆ ಸಂಪೂರ್ಣ ಕಣ್ಣಿನ ಹಿಡಿತವನ್ನು ಸಡಿಲ ಬಿಟ್ಟು ಕಣ್ಣನ್ನು ರಿಲ್ಯಾಕ್ಸ್ ಆಗುವಂತೆ ಮಾಡುತ್ತಿ ಎಂದು ಸಂಶೋಧಕರಲ್ಲಿ ಆತ ನುಡಿದ. ಈ ಕೌತುಕ ಆಗಸ್ಟ್ 2021 ರ     ಯಲ್ಲಿ ಪ್ರಕಟವಾಗಿದೆ. ಈ ರೀತಿ ಕಣ್ಣಿನ ಪಾಪೆ ನಿಯಂತ್ರಿಸಲು ಬೇರೆಯ ಇತರರಿಗೆ ಸಾಧ್ಯವೇ ಎಂದು ಸಂಶೋಧಕರು ಈಗ ಅಧ್ಯಯನನಡೆಸುತ್ತಿದ್ದಾರೆ. ಅಂದರೆ ಈತ ಸಂಶೋಧಕರಿಗೇ ಅಧ್ಯಯನ ಮಾಡಲು ವಿಷಯ ಕೊಟ್ಟು ಅಧ್ಯಯನಕ್ಕೆ ಹಚ್ಚಿಸಿದ ಅನ್ನಬಹುದು.
೫ಬೆಕ್ಕಿಂದ ಮಹಿಳೆಗೆ ಹಸುವಿನ ಸಿಡುಬು !ಯುನೈಟೆಡ್ ಕಿಂಗ್‌ಡಮ್‌ನ 28 ವರ್ಷದ ಈ ಮಹಿಳೆ ಕಣ್ಣಿನಲ್ಲಿ ತೀವ್ರ ನೋವು, ಕಣ್ಣು ದಪ್ಪ ಆಗುತ್ತದೆ ಎಂಬ ಲಕ್ಷಣದೊಂದಿಗೆ ನೇತ್ರ ವೈದ್ಯರಲ್ಲಿ ಪರೀಕ್ಷೆಗೆ ಬಂದಳು. ವೈದ್ಯರು ಪರೀಕ್ಷಿಸಲಾಗಿ ಆಕೆಯ ಕಣ್ಣಿನ ಹೊರಭಾಗ ತೀವ್ರ ಪ್ರಮಾಣದಲ್ಲಿ ದೊಡ್ಡದಾಗಿತ್ತು. ಆಕೆಗೆ ಆದ ತೀವ್ರ ರೀತಿಯ ಸೋಂಕನ್ನು ಗಮನಿಸಿ ಬಹುಶಃ ಆಕೆ ದೃಷ್ಟಿ ಕಳೆದುಕೊಳ್ಳುತ್ತಾಳೆ ಎಂದು ವೈದ್ಯರು ಭಾವಿಸಿದ್ದರು. ಆಕೆಗೆ ಅಗತ್ಯ ತೀವ್ರ ಪ್ರಮಾಣದ ಆಂಟಿಬಯೋಟಿಕ್ಗಳನ್ನು ಕೊಟ್ಟರೂ ಚಿಕಿತ್ಸೆ ಫಲಿಸಲಿಲ್ಲ.
ಸ್ವಾರಸ್ಯಕರ ವಿಚಾರವೆಂದರೆ 2 ವಾರಗಳ ಮೊದಲು ಆಕೆಯ ಸಾಕಿದ ಬೆಕ್ಕಿನ ಮುಂಗಾಲು ಮತ್ತು ತಲೆಯ ಭಾಗದಲ್ಲಿ ವಿಲಕ್ಷಣ ರೀತಿಯ ಗಾಯಗಳು ಕಾಣಿಸಿಕೊಂಡಿದ್ದವು. ಆಗ ನಾಯಿಯ ಮತ್ತು ಆಕೆಯ ಕಣ್ಣಿನ ಅಂಗಾಂಶಗಳನ್ನು ಲ್ಯಾಬೋರೇಟರಿಯಲ್ಲಿ ಪರೀಕ್ಷಿಸಲಾಗಿ ಅದರಲ್ಲಿ ಇದು ಹಸುವಿನಸಿಡುಬಿನ () ಸೋಂಕು ಎಂದು ದೃಢವಾಯಿತು.
ತುಂಬಾ ಅಪರೂಪದ ಸೋಂಕಾದ ಹಸುವಿನ ಸಿಡುಬು ಹಸುಗಳು, ಬೆಕ್ಕು ಹೀಗೆ ಪ್ರಾಣಿಗಳಿಗೆ ಸೋಂಕು ತರುವುದಲ್ಲದೇ ಮನುಷ್ಯರಿಗೂ ಸೋಂಕು ತರಬಲ್ಲದು. ಇದು ಸಿಡುಬು ಕಾಯಿಲೆ ಅಥವಾ   ತರುವ ವ್ಯಾಕ್ಸೀನಿಯಾ ವೈರಸ್ ಜಾತಿಗೆ ತೀರಾ ಹತ್ತಿರದ ವೈರಸ್. ಇದೇ ವ್ಯಾಕ್ಸೀನಿಯಾ ವೈರಸ್ ಅನ್ನು ಸಿಡುಬು ಕಾಯಿಲೆ ವಿರುದ್ಧದ ವ್ಯಾಕ್ಸೀನ್‌ನಲ್ಲಿ ಸಹಿತ ಉಪಯೋಗಿಸಲಾಗುತ್ತದೆ. ಈ ಹಸುವಿನ ಸಿಡುಬು ಸೋಂಕು ಆ ಮಹಿಳೆಯಲ್ಲಿ   ಎಂಬ ಕಣ್ಣಿನ ಹೊರಭಾಗದ ಸೋಂಕು ಉಂಟುಮಾಡಿತು. ಇದರಲ್ಲಿ ಕಣ್ಣಿನ ಹೊರಭಾಗದ ಮಾಂಸಖಂಡಗಳು, ಕೊಬ್ಬಿನ ಅಂಶ ಎಲ್ಲವೂ ಸೋಂಕಿಗೆ ಒಳಗಾಗಿ ಕಣ್ಣು ಅಸಾಮಾನ್ಯವಾಗಿ ದಪ್ಪಗಾಗಿ ವಿಪರೀತ ನೋವು ಕೊಡುತ್ತಿತ್ತು.
ನೇತ್ರ ವೈದ್ಯರುಶಸ್ತ್ರಕ್ರಿಯೆಮಾಡಿ ಕಣ್ಣಿನ ಹೊರಭಾಗದಲ್ಲಿರುವ ನಿರ್ಜೀವ ಜೀವಕೋಶಗಳನ್ನು ತೆಗೆದರು. ಆನಂತರ ಆಕೆಗೆ  ಎಂಬ ವೈರಸ್ ವಿರುದ್ಧದ ಔಷಧ ಉಪಯೋಗಿಸಿ ಚಿಕಿತ್ಸೆ ಮಾಡಿದರು. ಈ ಅಪರೂಪದ ಔಷಧವನ್ನು ಅಮೆರಿಕದ    ನಿಂದ ತರಿಸಿಕೊಳ್ಳ ಲಾಯಿತು. ಇದು ಸಿಡುಬಿನ ವೈರಸ್ ನಿಂದ ಏನಾದರೂ ಆಜಿಟಠಿಛ್ಟ್ಟಿಟ್ಟ ದಾಳಿ ಆದರೆ ತುರ್ತು ಉಪಯೋಗಕ್ಕೆ ಬೇಕು ಎಂದು ಕಾಯ್ದಿರಿಸಿದ ಔಷಧ. ಈ ಔಷಧದಿಂದ ಈಕೆಯ ಸೋಂಕು ಕಡಿಮೆಯಾಗಿ ಆಕೆ ಸಂಪೂರ್ಣ ಗುಣಹೊಂದಿದಳು ಎಂಬುದು ಸಮಾಧಾನದ ವಿಷಯ. ಈ ವೈದ್ಯ ಕೌತುಕ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಿಯತಕಾಲಿಕದಲ್ಲಿ 2021 ರ ಜೂನ್ ನಲ್ಲಿ ಪ್ರಕಟವಾಗಿದೆ. ಇನ್ನೂ ಹಲವು ವೈದ್ಯ ವಿಸ್ಮಯಗಳನ್ನು ಮುಂದಿನ ವಾರ ಪರಿಶೀಲಿಸೋಣ.