ಆಕಾಶವಾಣಿ ನಿರ್ದೇಶಕಿಗೆ ಬಹಿರಂಗ ಪತ್ರ
ಶ್ರೋತೃಗಳಿಗೆ ಆಕಾಶವಾಣಿ ಬರೀ ಟೈಂಪಾಸ್ ಮಾಧ್ಯಮ ಅಲ್ಲ. ಅದರ ಜತೆ ಒಂದು ಭಾವನಾತ್ಮಕ ಸಂಬಂಧ ಇದೆ ಅದನ್ನು ಹಾಳುಗೆಡವಲುಹೋಗ ಬೇಡಿ. ಸದಭಿರುಚಿಯ, ವಿವೇಚನಾಯುಕ್ತ, ಸೃಜನಶೀಲ ಕಾರ್ಯಕ್ರಮಗಳ ಪ್ರಸಾರ ಮಾಡುವುದರ ಕಡೆ ನಿಮ್ಮ ಗಮನ ಹರಿಯಲಿ.
ನಿರ್ಮಲಾ ಸಿ ಎಲಿಗಾರ್‌ರವರೇ, ‘ಏನೋ ಮಾಡಲು ಹೋಗಿ ಏನೋ ಮಾಡಿದೆ ನಾನು’ ಇದು ತಮಗೆ ತುಂಬಾ ಸೂಕ್ತವಾದ ವಾಕ್ಯ. ಯಾಕೆ ಅಂದ್ರೆ ಆಕಾಶವಾಣಿ ಕಥೆ ಆಗಿರೋದು ಹೀಗೆ. ಅಷ್ಟು ಚೆನ್ನಾಗಿದ್ದ ಮಾಧ್ಯಮವನ್ನು ಹಾಳು ಮಾಡಿದ, ಮಾಡ್ತಾ ಇರುವ ಕೀರ್ತಿ ನಿಮ್ಮದು. ಹಲವು ಉತ್ತಮಕಾರ್ಯಕ್ರಮಗಳನ್ನು ಬೇಡ ಎಂಬ ಪಟ್ಟಿಗೆ ಸೇರಿಸಿ, ಬೇಡವಾದ ಕಾರ್ಯಕ್ರಮಗಳನ್ನು ಅದರಲ್ಲೂ ತಮಗೆ ಇಷ್ಟವಾದ ಕಾರ್ಯಕ್ರಮಗಳನ್ನು ಇರಲೇ ಬೇಕಾದ ಪಟ್ಟಿಗೆ ಸೇರಿಸಿ ನನ್ನಂತ ಶ್ರೋತೃಗಳಿಗೆ ನಿರಾಸೆ ಉಂಟು ಮಾಡಿರುವ ಯಶ ಸಹ ನಿಮ್ಮದು.
‘ನಮಸ್ಕಾರ, ಇದು ಆಕಾಶವಾಣಿ ಬೆಂಗಳೂರು’ ಅಂತ ಒಂದು ಸಂಗೀತದಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ ೧೧.೦೫ ರ ತನಕ ಬರುತ್ತಿದ್ದ ಹಲವು ಕಾರ್ಯಕ್ರಮಗಳನ್ನು ಕೇಳಿಯೇ ನನ್ನ ಬಾಲ್ಯ ಕಳೆದದ್ದು. ಸರಿ ಸುಮಾರು ಇಡೀ ದಿನ ರೇಡಿಯೋ ಹಾಕಿಯೇ ಇರುತ್ತಿತ್ತು ನಮ್ಮ ಮನೆಯಲ್ಲಿ. ನಿರ್ಮಲ ಅಕ್ಕ, ಮಾಲತಿ ಅಕ್ಕ, ಕೃಷ್ಣಮೂರ್ತಿ ಸರ್ ಮತ್ತಿತರ ಉದ್ಘೋಷಕರ ಕಾರ್ಯಕ್ರಮಗಳು ಮರೆಯುವಂತೆ ಇರಲಿಲ್ಲ. ಈಗಲೂ ಆಕಾಶವಾಣಿ ಅಂದ್ರೆ ಜ್ಞಾಪಕ ಬರೋದು ಅವರುಗಳೇ. ವಿಶೇಷ ಸಂದರ್ಶನಗಳು ಸಾಹಿತಿಗಳ ಜತೆ,ಬಾಲ ಜಗತ್, ಹಕ್ಕಿಯ ಬಳಗ, ವನಿತಾ ವಿಹಾರ, ನಾಟಕಗಳು, ಸಂದರ್ಶನ, ಆರೋಗ್ಯ ಕಾರ್ಯಕ್ರಮ…ನಮಗೆ ಹೆಚ್ಚಿನ ಮಾಹಿತಿ ಸಿಗುತ್ತಿದ್ದುದು ಸಹ ಇದರಿಂದಲೇ. ಎಂಥ ಅಚ್ಚುಕಟ್ಟಾದ ಒಳ್ಳೊಳ್ಳೆ ಕಾರ್ಯಕ್ರಮ ಕೊಡ್ತಾ ಇದ್ದರು. ಟಿವಿ ಬಂದಾಗಲೂ ಸಹ ನಾವು ಕೆಳುತ್ತಿದ್ದುದ್ದು ರೇಡಿಯೋವನ್ನೇ. ಆದರೆ ಈಗ ರೇಡಿಯೋ ಯಾಕೆ ಹಾಕಬೇಕು ಅನ್ನೋ ಯೋಚನೆ ತುಂಬಾ ಬರುತ್ತೆ.
ಈಗ ನಿಮಗೆ ಒಂದಷ್ಟು ಪ್ರಶ್ನೆಗಳು೧. ನಿಮಗೇಕೆ ಚಿತ್ರಗೀತೆಗಳ ಹುಚ್ಚು. ಸರಿ ನಿಮಗಿದ್ದರೆ ಇರಲಿ, ಅದನ್ನು ನಮಗೇಕೆ ಹೇರುತ್ತಿದ್ದೀರ? ಚಿತ್ರಗೀತೆ ಪ್ರಸಾರದ ಅವಧಿ ಆಕಾಶವಾಣಿಯಲ್ಲಿ ಹೆಚ್ಚಾಗಿರುವುದು ಯಾಕೆ? ಅದಕ್ಕೋಸ್ಕರ ವಿವಿಧ ಭಾರತಿ ಮತ್ತೆ  ಇದೆಯಲ್ಲ. ಅದು ನೀವು ಬೆಳಗ್ಗೆ ೯.೪೦ರಿಂದ ಹನ್ನೊಂದು ಗಂಟೆಯವರೆಗೆ  ನ ಚಿತ್ರಗೀತೆ ಕಾರ್ಯಕ್ರಮ ವನ್ನು ನಿಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡ್ತಾ ಇರೋದು ಯಾಕೆ?
೨.ಮೊದಲು ಬೆಳಗ್ಗೆ ೧೦.೦೦ ರಿಂದ ೧೧.೦೦ರ ತನಕ ಕರ್ನಾಟಕ ಶಾಸೀಯ ಸಂಗೀತ ೫ ದಿನ ಮತ್ತು ಒಂದು ದಿನ ಹಿಂದೂಸ್ತಾನಿ ಶಾಸೀಯ ಸಂಗೀತ ಬರ್ತಾ ಇತ್ತು. ಅದನ್ನು ೧೦.೩೦ ರಿಂದ ೧೧.೦೦ ಗಂಟೆ (ಅರ್ಧ ಗಂಟೆ) ಮಾಡಿ ಈಗ ಪೂರ್ತಿ ಶಿಫ್ಟ್ ಡಿಲೀಟ್ ಮಾಡಿದ್ದು ಯಾಕೆ? ೩.ಜಾನಪದ ಗೀತೆ ೧.೨೦ಕ್ಕೆ ಬರ್ತಾ ಇತ್ತು. ಸೋಬಾನೆ ಪದ, ರೈತರು ಹಾಡುವ ಪದ, ಜೋಗತಿಯರು ಪದ, ಅಂತ ಗ್ರಾಮೀಣ ಸೊಗಡಿನ ಹಾಡುಗಳು ಬರ್ತಾ ಇತ್ತು.ಅಲ್ಲೂ ನಿಮಗೆ ಚಿತ್ರಗೀತೆ ಬೇಕು ಯಾಕೆ? ೪. ‘ಕ್ಷಿತಿಜ’ ಅಂತ ಒಂದು ಒಳ್ಳೆಯ ಕಾರ್ಯಕ್ರಮ ಪ್ರಾರಂಭ ಮಾಡಿದ್ದೀರ. ಅದು ಸಾಹಿತಿಗಳ ಜತೆಗಿನಸಂವಾದ. ಅಲ್ಲಿ ಅವರಿಂದ ವಿಷಯಗಳನ್ನು ತಿಳಿಯುವ ಕಾರ್ಯಕ್ರಮ ಮುಖ್ಯ ಆಗಬೇಕಿತ್ತು ಆದರೆ ನಿಮಗೆ ಅಲ್ಲೂ ಚಿತ್ರಗೀತೆ(ಇತ್ತೀಚೆಗೆ ಭಾವಗೀತೆ) ಬೇಕು. ಅದೂ ಪೂರ್ತಿ ಹಾಡು ಬೇಕು. ಯಾವ ಕರ್ಮ ಇದು. ಆ ಸಾಹಿತಿಯ ಬಗ್ಗೆ ಗೊತ್ತಿರದ ವಿಷಯಗಳು ಗೊತ್ತಾಗಬೇಕು ಆದರೆ ನೀವು ಸುಮ್ಮನೆ ಮೇಲ್ಪದರದ ಪ್ರಶ್ನೆಗೆ ಸೀಮಿತ ಆಗಿದ್ದೀರ. ಯಾಕೆ? ೫. ಮಾಹಿತಿಯುಕ್ತ ಕಾರ್ಯಕ್ರಮಗಳು ತುಂಬಾ ಕಮ್ಮಿ ಆಗಿದೆ ಯಾಕೆ? ೬.ಟೀಮ್ ಲೀಡರ ಆಗಿರುವವರು ತಂಡವನ್ನು ಕಟ್ಟಬೇಕು ಮತ್ತು ಬೆಳೆಸಬೇಕು ಅದು ನಿಮ್ಮಲ್ಲಿ ಇಲ್ಲ ಯಾಕೆ? ‘ಕ್ಷಿತಿಜ’ ಕಾರ್ಯಕ್ರಮ ಬೇರೆಯವರು ನಡೆಸಲು ಸಾಧ್ಯವಿಲ್ಲವೇ ಅದಕ್ಕೆ ನೀವೇ ಆಗಬೇಕೇ?ಅದೂ ಚಿತ್ರಗೀತೆ ಗಳೊಂದಿಗೆ?
೭. ಈಗ ಇದನ್ನು ಮೊಬೈಲ್  ನಲ್ಲಿಯೂ ಕೇಳಬಹುದು. ಹಾಗಿzಗ ನಿಮ್ಮ ಕಾರ್ಯಕ್ರಮಗಳ ಗುಣಮಟ್ಟ ಹೆಚ್ಚಾಗಬೇಕು ಅಲ್ಲವೇ. ಆದರೆ ಅದುಕುಸಿಯುತ್ತಿದೆ ಯಾಕೆ?
೮.ಅಐ ( ) ಬಗ್ಗೆ ಭಾನುವಾರ ಬೆಳಗ್ಗೆ ಬರುವ ಅತ್ಯುತ್ತಮ ಕಾರ್ಯಕ್ರಮ ಮರುಪ್ರಸಾರ ಆಗೋದಿಲ್ಲ ಯಾಕೆ?೯.ನಿಮ್ಮಲ್ಲಿ ಕಾರ್ಯಕ್ರಮಗಳ ಕೊರತೆಯೇ. ಸೃಜನಶೀಲತೆ, ರಚನಾತ್ಮಕ ವಿಷಯಗಳ, ವ್ಯಕ್ತಿಗಳ ಕೊರತೆಯೇ? (ನೀವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರಬೇಕು) ನಮ್ಮಲ್ಲಿ ಅಂತಹವರ ಗಣಿಯೇ ಇದೆ. ದಯವಿಟ್ಟು ಕಣ್ಣು ಹಾಯಿಸಿ.
ನಿಮಗೆ ನಿಜವಾಗಿಯೂ ಕಾಣದಿದ್ದಲ್ಲಿ  ನಲ್ಲಿ ಹಾಕಿರುವ ಕಾರ್ಯಕ್ರಮಗಳನ್ನೇ ಮರು ಪ್ರಸಾರ ಮಾಡಬಹುದಲ್ಲ?!. ಅದು ನಿಮ್ಮ ಚಿತ್ರಗೀತೆ ಗಿಂತಲೂ ಚೆನ್ನಾಗಿ ಇರುತ್ತದೆ. ಈ ಬಗ್ಗೆ ಯೋಚನೆ ಮಾಡ ಬಹುದಲ್ಲ?
೧೦.ಒಂದು ೫ ನಿಮಿಷ ಸಮಯ ಸಿಕ್ಕರೂ ಚಿತ್ರಗೀತೆಯೇ ಯಾಕೆ?
೧೧.ದೆಹಲಿಯಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦-೧೧.೦೦ ಗಂಟೆಯವರೆಗೆ ಕರ್ನಾಟಕಶಾಸ್ತ್ರೀಯಮತ್ತು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಇರುತ್ತದೆ. ಆದರೆ ದಕ್ಷಿಣ ಭಾರತದ ನಿಮ್ಮ ಕೇಂದ್ರದಲ್ಲಿ ಅದರ ಸುದ್ದಿಯೇ ಇಲ್ಲ ಯಾಕೆ?
೧೨.ನೀವು ಹೊಸತನ ಅನ್ನೋ ಹಪಾಹಪಿಯಲ್ಲಿ ಹಳೆಯದೆಲ್ಲವನ್ನೂ ಗುಡಿಸಿ ಬಿಸಾಡುತ್ತಿರುವುದು ಯಾಕೆ?  ನಮ್ಮ ಮನೆಯಲ್ಲಿ ಹಿರಿಯರು, ಹಳೆ ಪಾತ್ರೆಗಳು, ವಸ್ತುಗಳು ಇನ್ನೂ ಇದೆ.
೧೩.ಯಾರು ಕೇಳುವುದಿಲ್ಲ ಅಂತ ನೀವೇ ಅಂದುಕೊಂಡು ನಿಮಗೆ ಏನು ಬೇಕೋ ಅದನ್ನು ಮಾಡುವ ಸ್ವಾತಂತ್ರ್ಯದ ದುರುಪಯೋಗ ಆಗ್ತಾ ಇದೆ ನಿಮ್ಮಿಂದ ಅಂತ ನಿಮಗೆ ಯಾವತ್ತೂ ಅನ್ನಿಸಿಲ್ಲವೆ? ನನಗೆ ತಿಳಿದಂತೆ ಆಕಾಶವಾಣಿ ವಾಣಿಜ್ಯ ಉದ್ದೇಶಕ್ಕೆ ಪ್ರಾರಂಭ ಆದುದಲ್ಲ. ಇಲ್ಲಿ ನಿಜವಾದ ಸುದ್ದಿ, ಮಾಹಿತಿ, ತೂಕಬದ್ದ ಮಾತುಗಳು, ವಿಚಾರ ವಿಮರ್ಶೆ ಈ ಹಿನ್ನೆಲೆಯ ಕಾರ್ಯಕ್ರಮಗಳಿಗೆ ಮಹತ್ವ ನೀಡುತ್ತಿದ್ದ ಕೇಂದ್ರ. ಆದರೆ ಆದರೆ ದಿಢೀರನೆ ಅದರ ಮೂಲವನ್ನೇ ಬದಲಾಯಿಸಿ, ಹೊಸ ಹೂರಣವನ್ನು ತುಂಬುವುದರ ಆತುರದಲ್ಲಿ ಅದರ ಸತ್ವವನ್ನೇ ಕಳೆದುಕೊಂಡ ಶಿಥಿಲವಾದ ಒಂದು ಮರದಂತೆಕಾಣ್ತಾ ಇದೆ ಮತ್ತೆ ಆ ದೃಶ್ಯ ಖಂಡಿತಾ ಚೆನ್ನಾಗಿಲ್ಲ.
೧೪.ಇತ್ತೀಚೆಗೆ ಬೇರೊಂದು ಕಡೆ ಓದಿದೆ. ಎಲ್ಲ ಕಾರ್ಯಕ್ರಮಗಳು ರಾಜ್ಯಾದ್ಯಂತ ಒಟ್ಟಿಗೆ ಪ್ರಸಾರ ಮಾಡಬೇಕು ಅಂತ. ಹಾಗಾದರೆ ಒಂದು ಕೇಂದ್ರಕ್ಕೆಒಂದೂವರೆ ಗಂಟೆ ಮಾತ್ರ ಸಿಗುತ್ತೆ ಅನ್ನೋದು ನಿಮ್ಮವರದೆ ಅಭಿಪ್ರಾಯ. ಆ ಒಂದೂವರೆ ಗಂಟೆ ಒಬ್ಬರಿಗೊಬ್ಬರ ಪೈಪೋಟಿಯಲ್ಲಿ ಅತ್ಯುತ್ತಮವಾಗಿ ಮೂಡುವುದರ ಕಡೆಗೆ ಇರಬೇಕಲ್ಲವೇ ನಿಮ್ಮ ಗಮನ. ಆದರೆ….. ಚಿತ್ರಗೀತೆಗಳಿಗೆ, ಚಿತ್ರ ಸಾಹಿತಿಗಳಿಗೆ, ಟಿವಿ ಮಾಧ್ಯಮದಲ್ಲಿ ಮತ್ತು  ಗಳಲ್ಲಿ ತುಂಬಾನೇ ಬೇಡಿಕೆ ಇದೆ ಮತ್ತು ಅವರುಗಳಿಗೆ ಮನ್ನಣೆ. ಅವರು ಮಾಡೋದನ್ನೆ ಕಣ್ಣು ಮುಚ್ಕೊಂಡು ನೀವು ಮಾಡೋದರಲ್ಲಿ ಏನು ಅರ್ಥ.
ಇಲ್ಲಿ ಜಾನಪದ, ಭಾವ, ಭಕ್ತಿ ಗೀತೆಗಳು ಪ್ರಸಾರ ಆಗಲಿ. ನಮ್ಮ ರಾಜ್ಯದ ಸೊಗಡು ಎಡೆ ಪಸರಿಸಲಿ. ಹೌದು ಇಲ್ಲಿ ಬರುತ್ತಿದ್ದ ಜಾನಪದ ಹಾಡುಗಳನ್ನು ಹಳ್ಳಿಯಲ್ಲಿ ಮಾತ್ರವೇ ಕೇಳಬಹುದು. ಅದು ಇಲ್ಲಿ ಬರ್ತಾ ಇತ್ತು. ನಿಮ್ಮಿಂದ ಆ ಕಲಾವಿದರಿಗೆ ಮನ್ನಣೆ ಸಿಗಲಿ. ಎಲೆ ಮರೆಯ ಕಾಯಿಗಳನ್ನು ಹೆಕ್ಕಿ ಕರೆತನ್ನಿ. ಕೆಟ್ಟ ಕೆಟ್ಟ ರಾಗಗಳಲ್ಲಿ ಹಾಡಿದ ಅರ್ಥವೇ ಇಲ್ಲದ ಮಾಧುರ್ಯ ಮೈನಸ್ ಆದ ಹಾಡುಗಳಿಗಿಂತ ಅರ್ಥಪೂರ್ಣ ಸಂಗೀತಕ್ಕೆ ನಿಮ್ಮ ಕೇಂದ್ರ ದಲ್ಲಿ ಬೆಲೆ ಸಿಗಬೇಕು.
ನಾನೇನು ಚಿತ್ರಗೀತೆಯ ವೈರಿಯಲ್ಲ. ಚಿತ್ರಗೀತೆ ಗಳೇ ಜೀವಾಳ  ಚಾನೆಲ್‌ಗಳಿಗೆ. ಇಲ್ಲಿ ಸುಮಾರು ೭  ಚಾನೆಲ್ ಇರಬೇಕು. ಆದರೆ ನೀವು ಯಾಕೆ ಅದರ ಬೆಂಬತ್ತಿ ಹೋಗ್ತಾ ಇದೀರಾ ಅನ್ನೋದು ನನಗೆ ಅರ್ಥ ಆಗಲಿಲ್ಲ.
ಅದನ್ನು ಅವರಿಗೇ ಬಿಡಿ. ಏನೋ ಹೊಸತು ಮಾಡ್ತಾ ಇದ್ದೀನಿ ಅಂದುಕೊಂಡು ಆಕಾಶವಾಣಿಯ ಮೂಲ ಉದ್ದೇಶನ ದಯವಿಟ್ಟು ಹಾಳು ಮಾಡಬೇಡಿ. ಹಳೇ ಬೇರು ಹೊಸ ಚಿಗುರು ಜ್ಞಾಪಕ ಇರಲಿ.
ನಿಮ್ಮಲ್ಲಿ ಉತ್ತಮ ಉದ್ಘೋಶಕರ ಕೊರತೆ ಏನೂ ಇಲ್ಲ. ಅವರನ್ನು ಬೆಳೆಸಿ. (ನಾನು ಹೆಸರು ಹೇಳಬ. ಆದರೆ ಅದನ್ನು ಬೇರೆಯ ರೀತಿಯಲ್ಲಿ ಅರ್ಥ ಮಾಡ್ಕೊತೀರ ಅಂತ ಹೇಳೋಲ್ಲ)ಎಕಾರ್ಯಕ್ರಮ ನೀವೇ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುವುದನ್ನು ಬಿಟ್ಟು ತಂಡ ಕಟ್ಟುವ ಪ್ರಯತ್ನ ಮಾಡಿ.
ನನ್ನ ತರಹದ ಹಲವಾರು ಶ್ರೋತೃಗಳಿಗೆ ಆಕಾಶವಾಣಿ ಬರೀ ಟೈಂಪಾಸ್ ಮಾಧ್ಯಮ ಅಲ್ಲ. ಅದರ ಜತೆ ಒಂದು ಭಾವನಾತ್ಮಕ ಸಂಬಂಧ ಇದೆ (ಯಾವುದೇ ನಿರ್ದೇಶಕರು ಬಂದರೂ) ಅದನ್ನು ಹಾಳುಗೆಡವಲು ಹೋಗಬೇಡಿ. ಸದಭಿರುಚಿಯ, ವಿವೇಚನಾಯುಕ್ತ, ಸೃಜನಶೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ಕಡೆ ನಿಮ್ಮ ಗಮನ ಹರಿಯಲಿ, ಇರಲಿ.
ಇನ್ನು ಇಲ್ಲಿ ಬರೆಯುತ್ತಿರುವ ಉದ್ದೇಶ: ನಾವು ಮತ್ತು ನಮ್ಮವರು ಕಾರ್ಯಕ್ರಮ ಕೇಳಿದ್ದೇನೆ ಅಲ್ಲಿ ಬರೀ ನಿಮ್ಮ ಕಾರ್ಯಕ್ರಮಗಳನ್ನು, ನಿಮ್ಮನ್ನು ಹೊಗಳುವವರ ಪತ್ರಗಳನ್ನಷ್ಟೆ ಓದೋದು. ಬೇರೆಯ ಪತ್ರಗಳನ್ನು ಜಾಣತನದಿಂದ ಜಾರಿಸಿ/ಹಾರಿಸಿ ಬಿಡುತ್ತೀರಿ. ಕಡೆಯಲ್ಲಿ ಒಂದು ಮಾತು.   ಅನ್ನೋ ವಾಕ್ಯ ಜ್ಞಾಪಕ ಇರಲಿನಿಮಗೆ.ವಂದನೆಗಳುಹಿರಣ್ಮಯಿ