ನಮ್ಮ ಹೊಸ ವರ್ಷನ್‌ ಡೌನ್‌ಲೋಡ್‌ ಹೇಗೆ ?
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
@.
ಇಸ್ರೇಲಿನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಹೇಳಿದ ಒಂದು ಮಾತು ನನ್ನ ಕಂಪ್ಯೂಟರ್ ಸ್ಕ್ರೀನ್ ಮೇಲೆ ಆಗಾಗ ಬಂದು ಹೋಗುತ್ತಿರುತ್ತದೆ& ’       ,       . ನೀವು ಇಂದು ಅಪ್ ಟು ಡೇಟ್ ಆಗಿದ್ದರೆ ಸಾಲದು, ನಾಳೆಯೂ ಹಾಗೇ ಇರಬೇಕು.
ನಾಡಿದ್ದೂ ಹಾಗೇ ಇರಬೇಕು. ದಿನದಿಂದ ದಿನಕ್ಕೆ ಈ ಚಾಳಿ, ಅಭ್ಯಾಸವನ್ನು ಮುಂದುವರಿಸಿಕೊಂಡು ಹೋಗಬೇಕು. ಒಂದು ದಿನ ಹಿಂದೆ ಬಿದ್ದರೆ, ಪ್ರಗತಿ ವೇಗದಲ್ಲಿ ಅಷ್ಟರಮಟ್ಟಿಗೆ ಹಿಂದೆ ಬಿದ್ದಂತೆ. ನಾನು ಕೆಲವು ದಿನಗಳ ಹಿಂದೆ ಬರೆದ ಅಂಕಣದ ಶೀರ್ಷಿಕೆ ಕೂಡ ಹೆಚ್ಚು ಕಮ್ಮಿ ಇದೇ ಅರ್ಥ ಕೊಡುವಂತಿತ್ತು – ’ನೀವು  ಆಗದಿದ್ದರೆ  ಆಗುತ್ತೀರಾ.’ ಆಪಲ್ ಕಂಪನಿಯ ಸ್ಟೀವ್ ಜಾಬ್ಸ್ ನಂತರ, ಹೊಸ ಪೀಳಿಗೆಯ ಯುವಕರಲ್ಲಿ ಕಲ್ಪನೆಯ ಕಾರಂಜಿ ಚಿಮ್ಮಿಸಿದ ಟೆಸ್ಲಾ ಸಂಸ್ಥೆ ಮುಖ್ಯಸ್ಥ ಇಲಾನ್ ಮಸ್ಕ ಹೇಳಿದ್ದೂ ಇದನ್ನೇ – ’          -,    !
ಈ ಮಾತು ಕೇವಲ ಕಂಪ್ಯೂಟರ್, ಮೊಬೈಲ್, ಸೋಪು, ಹಲ್ಲುಪುಡಿ, ಕನ್ನಡಕ, ಕಾರು, ಕೊಳಾಯಿ…ಗೆ ಮಾತ್ರ ವಲ್ಲ, ಪ್ರತಿಯೊಂದಕ್ಕೂ ಅನ್ವಯ. ಖ್ಯಾತ ಬರಹ ಗಾರ  ಚರ್ಬೆಲ್ ತಾಡ್ರೋಸ್ ಎಂಬಾತ ಹೇಳಿದ ಮಾತು ಆಗಾಗ ನೆನಪಾಗುತ್ತಿರುತ್ತದೆ –            …  …  ಯಾವತ್ತೂ ಶಾಶ್ವತವೆಂದು ಭಾವಿಸುವ ಧರ್ಮವೂ ಸಹ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರಬೇಕು. ಇಲ್ಲದಿದ್ದರೆ ಅದೂ  ಆಗುತ್ತದೆ.
ನಂಬರ್ 1 ಆಗುವುದು ದೊಡ್ಡದಲ್ಲ, ಆದರೆ ಸದಾ ಅದೇ ಸ್ಥಾನವನ್ನು ಕಾಪಾಡಿಕೊಳ್ಳುವುದು ಬಹಳ ದೊಡ್ಡದು. ಮೊಬೈಲ್ ಫೋನ್‌ಗಳು ವರ್ಷಕ್ಕೊಮ್ಮೆ ಅಥವಾ ಎರಡು ಸಲ ಬದಲಾಗುತ್ತವೆ. ಅಂದರೆ ಹೊಸ ವರ್ಷನ್‌ಗಳಲ್ಲಿ ಹೊಸ ರೂಪ ಪಡೆಯುತ್ತವೆ. ಆದರೆ ಪ್ರತಿ ಕ್ಷಣವೂ ಹೊಸ ವರ್ಷನ್ ಗೆ ಬದಲಾಗುವವನು ಮತ್ತು ಅಪ್ಡೇಟ್ ಆಗುವವನು ಮನುಷ್ಯನೊಬ್ಬನೇ. ನಾನು ಬದಲಾಗುವುದಿಲ್ಲ ಎನ್ನುವಂತೆಯೇ ಇಲ್ಲ. ಹಾಗೆ ಹೇಳಿದ ಕ್ಷಣದಿಂದಲೇ  ಆದಂತೆಯೇ.     .        ಎಂದು ಕಂಪ್ಯೂಟರ್ ಗೀಕ್‌ ನೊಬ್ಬ ಹೇಳಿದರೆ, ಮತ್ತೊಬ್ಬ     …    ಎಂದಿದ್ದು ನೆನಪಾಗುತ್ತಿದೆ.
ಇದನ್ನೇ ಕವಿ ಜಿ.ಎಸ್. ಶಿವರುದ್ರಪ್ಪನವರು, ‘ಕಾಲನ ಜತೆ ಹೆಜ್ಜೆ ಹಾಕುವುದರಲ್ಲಿ ಸೋತರೆ ಏನು, ಕಾಲು-ಕೀಲು ಮುರಿದುಕೊಂಡು ಬಿದ್ದಂತಲ್ಲವೇ ನೀನು’ ಎಂದು ತಮ್ಮ ಕವನವೊಂದರ ಸಾಲುಗಳಲ್ಲಿ ಹೇಳಿದ್ದು. ಇದೇ ಅರ್ಥ ಕೊಡುವ ವಕ್ರತುಂಡೋಕ್ತಿಯೊಂದಿದೆ – ‘ನೀನು ಇತ್ತೀಚಿನ ದಿನಗಳಲ್ಲಿ ಬಹಳ ಬದಲಾಗಿದ್ದೀಯ ಎಂದು ಯಾರಾದರೂ ಹೇಳಿದರೆ, ಬೇಸರಿಸಿಕೊಳ್ಳಬಾರದು, ಹೌದು, ನಾನು ಇತ್ತೀಚೆಗಷ್ಟೇ ನನ್ನ ಹೊಸ ವರ್ಷನ್‌ಗೆ ಬದಲಾಗಿದ್ದೇನೆ ಎನ್ನಬೇಕು.’ ನಮ್ಮಬ್ರಹ್ಮಾಂಡದಲ್ಲಿರುವ ಸೂರ್ಯನನ್ನು ಗಮನಿಸಿ, ಪ್ರಕೃತಿಯನ್ನು ನೋಡಿ.. ಯಾವುದೂ ಹಿಂದಿನ ಕ್ಷಣದಲ್ಲಿದ್ದಂತೆ ಈಗಿರುವುದಿಲ್ಲ. ಕ್ಷಣ ಕ್ಷಣಕ್ಕೂ ಎಲ್ಲವೂ ಬದಲಾ ಗುತ್ತಲೇ ಇರುತ್ತವೆ.
ಪ್ರತಿ ಕ್ಷಣವೂ ನವನವೀನ, ಹೊಸ ವರ್ಷನ್! ಬದಲಾವಣೆಗೆ ಪ್ರಕೃತಿಗಿಂತ ಬೇರೆ ಹೋಲಿಕೆ, ನಿದರ್ಶನ ಬೇಕೇ?! ಬದಲಾವಣೆಗೆ ಮುಖ ಮಾಡದಿದ್ದರೆ, ಕಾಲನ ಜತೆ ಹೆಜ್ಜೆ ಹಾಕದಿದ್ದರೆ, ನಾವು ಇದ್ದಲ್ಲಿಯೇ ಇರುತ್ತೇವೆ. ನಮ್ಮ ಜತೆಗಿದ್ದವರು ನಮ್ಮನ್ನು ಹಿಂದಕ್ಕೆ ಹಾಕಿ, ಮುನ್ನಡೆಯುತ್ತಿರುತ್ತಾರೆ. ನಾನು ನಿನ್ನೆ ತನಕ ನಂಬರ್ ಒಂದನೇ ಸ್ಥಾನದಲ್ಲಿದ್ದೆ, ಇಂದು ಬೇರೆಯವರು ನನ್ನ ಸ್ಥಾನ ಆಕ್ರಮಿಸಿದರು ಎಂದು ಪಶ್ಚಾತ್ತಾಪ ಪಟ್ಟರೆ ಯಾರೂ ಕಂಬನಿ ಮಿಡಿಯುವುದಿಲ್ಲ. ಹೆಚ್ಚೆಂದರೆ ಮರುಕ ಪಡಬಹುದಷ್ಟೆ. ಈ ಪೈಪೋಟಿಯುಗದಲ್ಲಿ ಅಪ್ಡೇಟ್ ಆಗುವುದೆಂದರೆ ನಮ್ಮನ್ನೇ ನಾವು ಆವಿಷ್ಕಾರ ಮಾಡಿಕೊಳ್ಳುವುದು. ನಮ್ಮೊಳಗೇ ನಾವು ಗಣಿಗಾರಿಕೆ ಮಾಡಿಕೊಳ್ಳುವುದು, ಉತ್ಖನನ ಮಾಡಿಕೊಳ್ಳುವುದು. ಪೈಪೋಟಿಯಲ್ಲಿ ಸ್ಥಾನ ಉಳಿಸಿಕೊಳ್ಳಬೇಕೆಂದರೆ, ನಮ್ಮನ್ನು ಬೇರೆ ಬೇರೆ ಸಾಧ್ಯತೆಗಳಿಗೆ ಒಡ್ಡಿಕೊಳ್ಳು ವುದು, ಅವಕಾಶಗಳಿಗೆ ತೆರೆದುಕೊಳ್ಳುವುದು.
ಇದು ಒಂದು ದಿನದ ಕೆಲಸವಲ್ಲ. ಇದು ನಿರಂತರ ಪ್ರಕ್ರಿಯೆ. ಯಾರಾದರೂ ಹೇಳಿದ್ದನ್ನೇ ಹೇಳುತ್ತಾರೆ ಅಂದ್ರೆ, ಹಳೆ ನಿದರ್ಶನಗಳನ್ನೇ ಮತ್ತೆ ಮತ್ತೆ ಕೊಡುತ್ತಾರೆ ಅಂದ್ರೆ ಅವರು ಅಪ್ಡೇಟ್ ಆಗಿಲ್ಲ, ತಮ್ಮ ಹೊಸ ವರ್ಷನ್ ಅನ್ನು ಡೌನ್ ಲೋಡ್ ಮಾಡಿಕೊಂಡಿಲ್ಲ ಎಂದರ್ಥ. ಇನ್ನೂ ಹಳೆಯ ವರ್ಷನ್ ಅನ್ನು ಬಳಸುತ್ತಿದ್ದಾರೆ ಅಂದ್ರೆ ಅವರಿಗೆ ತಮ್ಮ ಸುತ್ತ ಆದ ಬದಲಾವಣೆ ಮತ್ತು ಅದರ ಫಲಶ್ರುತಿ ಇನ್ನೂ ದಕ್ಕಿಲ್ಲ ಎಂದರ್ಥ. ಅವರು ಇನ್ನೂ ಹಿಂದೆ ಇದ್ದಾರೆಂದರ್ಥ. ಭಾರತದಂಥ ದೇಶದಲ್ಲಿ ಜಾತಿಯಲ್ಲಿ ಹಿಂದುಳಿದರೆ  ಆಗಬಹುದು, ಆದರೆ ಹಿಂದುಳಿದ ವರ್ಷನ್ ಅನ್ನೇ ಇನ್ನೂ ಬಳಸುತ್ತಿದ್ದರೆ  ಆಗುವುದು ಸಾಧ್ಯವೇ ಇಲ್ಲ. ಕಳೆದ ಒಂದು ವರ್ಷದಿಂದ ನಿಮ್ಮ ಬಯೋಡಾಟದಲ್ಲಿ ಏನೂ ಬದಲಾವಣೆ ಆಗಿಲ್ಲವೆಂದರೆ, ಹೊಸತೇನನ್ನೂ ಸೇರಿಸಿಲ್ಲವೆಂದರೆ, ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂದರ್ಥ.
ಹೊಸ ವರ್ಷನ್ ಬಂದಾಗಲೆಲ್ಲ ನಿಮ್ಮ ಮೊಬೈಲನ್ನು ಅಪ್ಡೇಟ್ ಮಾಡದಿದ್ದರೆ, ಮೊಬೈಲ್  ಆಗುತ್ತದೆ. ನೀವೂ ಅಪ್ಡೇಟ್ ಆಗದಿದ್ದರೂ ಹಾಗೇ ಆಗುತ್ತೀರಾ. ಇದಕ್ಕೆ ನಮ್ಮ ಮುಂದೆ ಅನೇಕ ನಿದರ್ಶನಗಳಿವೆ. ಕಾಲನಿಗೆ ಮುಖ ಮಾಡದವರು, ಕಾಲನ ಕಾಲಿನ ಕೆಳಗೆ ಕಮರಿ ಹೋಗಿದ್ದನ್ನು ನೋಡಿದ್ದೇವೆ. ಪೇಜರ್, ಟೇಪ್ ರೆಕಾಡರರ್, ಫೋನ್ ಬೂತ್, ವಾಕ್ಮನ್, ಐಪೋಡ್, ಅರ್ಲಾಮ್, ಲ್ಯಾಂಡ್ ಲೈನ್, ಗ್ರಾಮೋಫೋನ್, ಕ್ಯಾಲೆಂಡರ್, ಡೈರಿ, ಟಾರ್ಚ್ ಮುಂತಾದವುಗಳೆಲ್ಲ ನಮ್ಮ ಮುಂದೆಯೇ ದೈನೇಸಿಯಾಗಿ ಮ್ಯೂಸಿಯಂ ಸೇರುವಾಗ, ಅವುಗಳನ್ನು ತಯಾರಿಸಿದವರ ಸ್ಥಿತಿ ದ್ರೌಪದಿಯ ವಸಾಪಹರಣವಾಗುವಾಗ ಅಸಹಾಯಕರಾಗಿ ನೋಡುತ್ತ ಕುಳಿತ ಪಾಂಡವರಂತಾಗಿತ್ತು. ಇದಕ್ಕೆ ಕಾರಣ ಈ ಗ್ಯಾಜೆಟ್ಟುಗಳನ್ನು ರೂಪಿಸಿದವರು ಅವುಗಳನ್ನು ಕಾಲಕಾಲಕ್ಕೆ ಉತ್ತಮಪಡಿಸುವ ಗೋಜಿಗೆ ಹೋಗಿರಲಿಲ್ಲ.
ಅವುಗಳಿಲ್ಲದಿದ್ದರೆ ಅನಿವಾರ್ಯವನ್ನು ಸೃಷ್ಟಿಸಿರಲಿಲ್ಲ. ಪ್ರತಿ ಸಲ ಅವುಗಳನ್ನು ಹಿಡಿದಾಗ, ಬೆರಗು ಮೂಡಿಸುವ ಫೀಚರುಗಳನ್ನು ಸೇರಿಸಿರಲಿಲ್ಲ. ಇಲಿ ಪಾಷಾಣ ಮಾರುವ ತಳ್ಳುಗಾಡಿಯೊಂದೇ ಶತಮಾನ ಕಳೆದರೂ ಅಪ್ಡೇಟ್ ಆಗದೇ ಇರುವಂಥದ್ದು. ಉಳಿದುದೆಲ್ಲವೂ ಆಯಾ ಕಾಲಕ್ಕೆ ತೇರ್ಗಡೆಯಾಗುತ್ತಲೇ ಸಾಗಿದೆ.ಇಂದು ಸೂಜಿ, ದಾರ, ಬಟನ್ (ಅಂಗಿ ಗುಂಡಿ), ಬಕಲ, ಹೇರ್‌ಪಿನ್, ಟಿಕ್ಲಿ, ಹೇರ್ ಬ್ಯಾಂಡ್, ಕ್ಲಿಪ್, ಸುತ್ತಿಗೆ, ದಬ್ಬಣ, ಬಲ್ಬು, ಚಿಮ್ಮಟ, ನೇಲ್ ಕಟರ್‌ಗಳಿಂದ ಹಿಡಿದು ವಿಮಾನದ ತನಕ ಎಲ್ಲವೂ ಬದಲಾಗಿದೆ. ಈ ರೂಪಾಂತರದ ಹಿಂದೆ, ಕಾಲಕ್ಕನುಗುಣವಾಗಿ ಪರಿವರ್ತನೆಯಾಗುವ ಚಲನಶೀಲ ಭಾವ, ಸುಧಾರಣೆ ಯಾಗುವ ಗುಣ ಅಡಕವಾಗಿದೆ.
ಯಾವುದೇ ವಸ್ತುವಿನ ವಿನ್ಯಾಸವೂ ಅಂತಿಮವಲ್ಲ. ಅದು ಕಾಲಕ್ಕನುಗುಣವಾಗಿ ಬದಲಾಗಲೇಬೇಕು. ಅದು ತನ್ನ ಅವಶ್ಯಕತೆಯ ಸಾಧ್ಯತೆಯನ್ನು ವಿಸ್ತರಿಸಿಕೊ ಳ್ಳುತ್ತಲೇ ಹೋಗಬೇಕು. ಅದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ಮೊಬೈಲ್, ಅದು ಜನ್ಮ ತಾಳಿದಾಗ ಬರೀ ಫೋನ್ ಆಗಿತ್ತು. ಅದು ಇಂದು ಸ್ಮಾರ್ಟ್ ಫೋನ್ ಆಗುವ ತನಕ ರೂಪಾಂತರವಾಗಿದೆ. ಅದು ಇಂದು ಹಲವಾರು ಸಾಧ್ಯತೆಗಳ-ಅಗತ್ಯಗಳ ಉಪಕರಣವಾಗಿದೆ. ಇಂದು ಅದಿಲ್ಲದೇ ನಮ್ಮ ಜೀವನವೇ ಇಲ್ಲ. ಇಂದು ಅದೇ ನಮ್ಮನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದೆ.
ನಾನು ಇಷ್ಟೆಲ್ಲ ಹೇಳಲು ಕಾರಣವಿದೆ. ನಿನ್ನೆ ಬೆಳಗ್ಗೆ ಪತ್ರಿಕೆಯನ್ನು ಓದುವಾಗ ಒಂದು ಸುದ್ದಿ ಕಣ್ಣಿಗೆ ಬಿತ್ತು.    :        ಎಂಬ ಹೆಡ್ ಲೈನ್ ನೀಡಿತ್ತು. ಇನ್ನೊಂದು ಪತ್ರಿಕೆ, ‘ಬ್ಲ್ಯಾಕ್ ಬೆರ್ರ‍ಿ-ನ್ನಿಧನ : ಓಂ ಶಾಂತಿ’ ಎಂದು ಶೀರ್ಷಿಕೆ ನೀಡಿತ್ತು. ಈ ಎರಡೂ ಶೀರ್ಷಿಕೆಗಳನ್ನು ನೋಡಿ ಯಾಕೋ ಬಹಳ ವ್ಯಥೆಯಾಯಿತು. ಒಂದು ಕಾಲಕ್ಕೆ ಬ್ಲ್ಯಾಕ್ ಬೆರ್ರ‍ಿ ಫೋನ್ ಬಳಸುವುದು ಪ್ರತಿಷ್ಠೆಯಾಗಿತ್ತು. ಎಲ್ಲ ಸಿಇಒಗಳು, ಸಂಸ್ಥೆಯ ಮುಖ್ಯಸ್ಥರು, ಉನ್ನತ ಹುzಯಲ್ಲಿರುವವರು, ವೃತ್ತಿಪರರು ಈ ಫೋನನ್ನೇ ಬಳಸುತ್ತಿದ್ದರು.
ಬೋರ್ಡ್ ರೂಮ, ಏರ್ ಪೋರ್ಟ್, ಬಿಸಿನೆಸ್ ಲೌನ್ಜ್ ಗಳಲ್ಲಿ ಈ ಫೋನ್ ಹಿಡಿದವರೇ ಇರುತ್ತಿದ್ದರು. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಕೂಡ ತಾವು ಬ್ಲ್ಯಾಕ್ ಬೆರ್ರಿ ಉಪಯೋಗಿಸುವುದಾಗಿ ಅಭಿಮಾನದಿಂದ ಹೇಳಿಕೊಂಡಿದ್ದರು. ಅವರ ಆ ಒಂದು ಮಾತಿನಿಂದಾಗಿ ಬ್ಲ್ಯಾಕ್ ಬೆರ್ರಿ ಅದೃಷ್ಟವೂ ಖುಲಾಯಿಸಿತು. ಅನಂತರ ಅನೇಕರು ಬ್ಲ್ಯಾಕ್ ಬೆರ್ರಿ ಮೊರೆ ಹೋದರು. ಭದ್ರತಾ ಕಾರಣಕ್ಕೆ ತಾವು ಬೇರೆ ಫೋನನ್ನು ಬಳಸುತ್ತಿರುವುದಾಗಿ ಒಬಾಮ ಹೇಳಿಕೆ ಕೊಡಬೇಕಾಯಿತು. ಆದರೂ ಅವರು ಅಧ್ಯಕ್ಷರಾಗಿರುವ ತನಕವೂ ಬ್ಲ್ಯಾಕ್ ಬೆರ್ರಿ ಫೋನನ್ನೇ ಉಪಯೋಗಿಸುತ್ತಿದ್ದರು. ಈ ಬಗ್ಗೆ ಅವರು ತಮ್ಮ    ಕೃತಿಯಲ್ಲೂ ಬರೆದುಕೊಂಡಿದ್ದಾರೆ.
ಯೂರೋಪಿನ ಏಳು ದೇಶಗಳ ಪ್ರಧಾನಿ ಮತ್ತು ರಾಷ್ಟ್ರಾಧ್ಯಕ್ಷರು ಸಹ ಈ ಫೋನನ್ನೇ ಬಳಸುತ್ತಿದ್ದರು. ಬ್ಲ್ಯಾಕ್ ಬೆರ್ರಿ ಫೋನ್ ಸುರಕ್ಷಿತ ಮತ್ತು ವೃತ್ತಿಪರರಿಗೆಹೇಳಿ ಮಾಡಿಸಿದ್ದು ಎಂಬ ಭಾವನೆ ಸ್ಥಾಯಿಯಾಗಿ ನೆಲೆ ನಿಲ್ಲಿಸುವಲ್ಲಿ ಇದರ ತಯಾರಕರು ಯಶಸ್ವಿಯಾದರು. ಬ್ಲ್ಯಾಕ್ ಬೆರ್ರಿ ಫೋನಿನ  ಕೀಬೋರ್ಡ್ ಮತ್ತು ‘ಟ್ರ್ಯಾಕ್ ಬಾಲ’ ಸೌಲಭ್ಯ ಅದರ ಪ್ರಮುಖ ಆಕರ್ಷಣೆಗಳಾಗಿದ್ದವು. ಆ ಕೀಬೋರ್ಡ್‌ನಿಂದ ಎರಡೂ ಹೆಬ್ಬೆರಳುಗಳಿಂದ ವೇಗವಾಗಿ ಟೈಪ್ ಮಾಡಬಹು ದಾಗಿತ್ತು. ಟೈ, ಸೂಟು-ಬೂಟು ಧರಿಸಿದ ಎಕ್ಸಿ ಕ್ಯುಟಿವ್ ಕೈಯಲ್ಲಿ ಬ್ಲ್ಯಾಕ್ ಬೆರ್ರಿ ಇರಲೇಬೇಕು ಎನ್ನುವಷ್ಟರಮಟ್ಟಿಗೆ ಅದು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಒಂದು ವರ್ಷ ನಾನೂ ಈ ಬ್ಲ್ಯಾಕ್ ಬೆರ್ರಿ ಫೋನ್ ಬಳಸುತ್ತಿದ್ದೆ. ವಿಶೇಷವಾಗಿ ಇಮೇಲ್‌ನಲ್ಲಿಯೇ ಆಫೀಸಿನ ಕೆಲಸ-ಕಾರ್ಯಗಳನ್ನು ಪೂರೈಸುತ್ತಿದ್ದವರಿಗೆ ಆ ಫೋನ್ ಹೇಳಿ ಮಾಡಿಸಿದಂತಿತ್ತು. ಅದು ತನ್ನದೇ ಆಪರೇಟಿಂಗ್ ಸಿಸ್ಟಮ್ಸ ಹೊಂದಿತ್ತು. ಹೀಗಾಗಿ ಸುರಕ್ಷತೆಯನ್ನೇ ಪ್ರಮುಖವಾಗಿ ಪರಿಗಣಿಸುವವರು ಬ್ಲ್ಯಾಕ್ ಬೆರ್ರಿಯನ್ನೇ ನೆಚ್ಚಿಕೊಳ್ಳುತ್ತಿದ್ದುದು ಸಹಜವಾಗಿತ್ತು.
1999ರಿಂದ ಆಪಲ್ ಐಫೋನ್ ಬರುವ (2007) ತನಕ, ಮೇಲ್ವರ್ಗದ ಜನರು ಹೆಚ್ಚಾಗಿ ಬಳಸುತ್ತಿದ್ದುದು ಬ್ಲ್ಯಾಕ್ ಬೆರ್ರಿಯನ್ನೇ. ನೋಕಿಯಾ ಆಗ ಜನ ಸಾಮಾನ್ಯರ ಫೋನ್ ಆಗಿತ್ತು. 1998ರಲ್ಲಿ ಮೊಟೊರೊಲಾ ಫೋನನ್ನು ಹಿಂದಕ್ಕೆ ಹಾಕಿ ನೋಕಿಯಾ ದಾಪುಗಾಲು ಹಾಕಲು ಆರಂಭಿಸಿತ್ತು. 2007ರಲ್ಲಿ ನೋಕಿಯಾ ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ಆಗ ಐಫೋನ್ ಸುಂಟರಗಾಳಿಯಂತೆ ಬಂದಿತು. ಯಾವಾಗ ಐಫೋನ್ ಆ ಪರಿ ದಾಳಿಯಿಟ್ಟಾಗ, ಆಗ ಬ್ಲ್ಯಾಕ್ ಬೆರ್ರಿ ಎಚ್ಚೆತ್ತುಕೊಳ್ಳಬೇಕಿತ್ತು. ಅಷ್ಟರೊಳಗೆ ಮತ್ತೊಂದು ಆಘಾತ ಬಂದೆರಗಿತು. ಐಫೋನ್ ಬೆನ್ನ ಹಿಂದೆಯೇ ಸ್ಯಾಮ್ ಸಂಗ್ ಸಹ ಬಂದಿತು. ಈ ಎರಡು ದೈತ್ಯರ ಪೈಪೋಟಿಯ ಅಂದಾಜನ್ನು ಗ್ರಹಿಸಲು ನೋಕಿಯಾ ಮತ್ತು ಬ್ಲ್ಯಾಕ್ ಬೆರ್ರಿ ಸೋತವು.
ಎರಡು ವರ್ಷಗಳಾದರೂ ನೋಕಿಯಾ ಏನನ್ನೂ ಮಾಡಲಿಲ್ಲ. ಕೊನೆಗೆ ಅದು ಸೋತೆ ಎಂದು ಕೈಚೆಲ್ಲಿತು. ನೋಕಿಯಾ ಪತನದ ನಂತರವಾದರೂ ಬ್ಲ್ಯಾಕ್ ಬೆರ್ರಿಗೆ ಬುದ್ಧಿ ಬರಬೇಕಿತ್ತು. ಅದು ತನ್ನ ಪ್ರಾಡಕ್ಟ್‌ಗಳಲ್ಲಿ ಯಾವುದೇ ಗಹನವಾದ ಆಕರ್ಷಣೆ ಮತ್ತು ಫೀಚರುಗಳನ್ನು ಸೇರಿಸಲಿಲ್ಲ. ಒಂದಷ್ಟು ಬದಲಾವಣೆಗಳನ್ನು ಮಾಡಿದರೂ, ಅವು ಪೈಪೋಟಿಯನ್ನು ತಡೆಯುವಷ್ಟು ಸಮರ್ಥವಾಗಿರಲಿಲ್ಲ. ವರ್ಷದಿಂದ ವರ್ಷಕ್ಕೆ ಬ್ಲ್ಯಾಕ್ ಬೆರ್ರಿ ಸೊರಗಲಾರಂಭಿಸಿತು. ಅದು ತನ್ನ ಪ್ರತಿಸ್ಪರ್ಧಿ ಗಳಿಗಿಂತ ಓಟದಲ್ಲಿ ಬಹಳ ಹಿಂದೆ ಬಿದ್ದಿತು. ಬ್ಲ್ಯಾಕ್ ಬೆರ್ರಿ ಅಪ್ಡೇಟ್ ಆಯಿತೇನೋ ನಿಜ. ಆದರೆ ಯಾವಾಗ ಆಗಬೇಕೋ ಆಗಲಿಲ್ಲ. ಬಹಳ ತಡವಾಗಿ ಅಪ್ಡೇಟ್ ಆಯಿತು. ಅದರ ಪರಿಣಾಮ ಗೋಡೆ ಮೇಲೆ ಬರೆದಷ್ಟು ಸ್ಪಷ್ಟವಾಗಿತ್ತು. ಬೇರೆ ದಾರಿಯೇ ಇರಲಿಲ್ಲ.
ಬಾಗಿಲು ಮುಚ್ಚಿ ಮಲಗಿಬಿಟ್ಟಿತು. ಈ ಮಾತು ಬ್ಲ್ಯಾಕ್ ಬೆರ್ರಿಗೆ ಮಾತ್ರವಲ್ಲ, ನಮಗೂ ಅನ್ವಯ. ಆರಂಭದಲ್ಲಿ ಪ್ರಸ್ತಾಪಿಸಿದ, ಇಸ್ರೇಲ್ ಪ್ರಧಾನಿ ಹೇಳಿದ ಮಾತನ್ನು ಮತ್ತೊಮ್ಮೆ ಓದಿಕೊಳ್ಳಿ.