ದೇವಾಲಯಗಳಿಗೇಕೆ ದೊಣೆನಾಯಕರ ಅಪ್ಪಣೆ ?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ದೇಗುಲಗಳು ಬರಿಯ ಗಂಟೆ, ತೀರ್ಥ, ಮಂಗಳಾರತಿಗಳ ಕೇಂದ್ರವಾಗಿರಲಿಲ್ಲ. ಭವ್ಯ ವ್ಯವಸ್ಥೆಯಡಿಯಲ್ಲಿ ವಿದ್ಯಾಲಯ-ವೈದ್ಯಾಲಯ-ನ್ಯಾಯಾಲಯ-ಗ್ರಂಥಾಲಯ-ಅನಾಥಾಲಯ-ಯೋಗಾಲಯ-ಸಂಸ್ಕಾರ ಕೇಂದ್ರ-ಸತ್ಸಂಗ ಕೇಂದ್ರ – ಗೋಶಾಲೆ – ಪಾಕಶಾಲೆ – ಕಲ್ಯಾಣಮಂಟಪಗಳೆಲ್ಲವೂ…
ಕಳೆದ ತಿಂಗಳು ಪಾಕಿಸ್ತಾನದಲ್ಲಿ ಮುಸ್ಲಿಂಮೇತರನೊಬ್ಬ ಕುರಾನ್‌ಗೆ ಸಂಬಂಧಿಸಿದ ವಾಕ್ಯಗಳಿರುವ ಕಾಗದವನ್ನು ಹರಿದು ಕಸದಬುಟ್ಟಿಗೆ ಹಾಕಿದನೆಂಬ ಕಾರಣಕ್ಕೆ ಅಲ್ಲಿನ ಜಿಹಾದಿಗಳು ಆತನನ್ನು ಬೆಂಕಿಯಿಟ್ಟು ಸುಟ್ಟರು.
ಹಿಂದೂಗಳಿಬ್ಬರು ಇಸ್ಲಾಂ ಕಟ್ಟುಪಾಡನ್ನು ಪಾಲಿಸದೇ ಹೋದದ್ದಕ್ಕೆ ಅಲ್ಲಿನ ದೇವಾಲಯದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದರು. ಇದೆಲ್ಲವೂ ಧಾರ್ಮಿಕ ಹಕ್ಕುಗಳಿಗಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮರ ತಳೆದಿರುವ ನಿಲುವು. ಆದರೆ ಇತಿಹಾಸದಲ್ಲಿ ಇಸ್ಲಾಂ ದಾಳಿಕೋರರು ದೇವಾಲಯಗಳ ಮೇಲೆ ದಾಳಿ ಮಾಡಿದ್ದೇಷ್ಟೋ. ಬೆಂಕಿಯಿಟ್ಟು, ಭಗ್ನಗೊಳಿಸಿ ಅಲ್ಲಿಂದ ದೋಚಿದ್ದೆಷ್ಟೋ. ಮತ್ತು ಅದೇ ದೇವಾಲಯಗಳ ತಳಪಾಯ, ಕಂಬ ಗಳನ್ನು ಬಳಸಿ ಅದರ ಮೇಲೆಯೇ ಮಸೀದಿ, ದರ್ಗಾ, ಸಮಾದಿಗಳನ್ನು ನಿರ್ಮಿಸಿರುವುದು ಕಣ್ಮುಂದೆಯೇ ಇದೆ.
ಇಷ್ಟಾದರೂ ಹಿಂದೂಗಳು ಏನೂ ಮಾಡದೇ, ಮಾಡಲಾಗದೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಿದ್ದಾರೆ, ಹೋಗುತ್ತಿದ್ದಾರೆ. ಇದು ಧಾರ್ಮಿಕ ಗುಲಾಮಗಿರಿಯ ಸಂಕೇತ ಅಲ್ಲವೇ ಅಲ್ಲ. ಇಷ್ಟಾಗಿಯೂ ದೇವಾಲಯ ಗಳನ್ನು ಸರಕಾರದಿಂದ ಸ್ವತಂತ್ರವಾಗಿ ಪಡೆಯುವುದು ಕೋಮುವಾದಿತನ, ಕೇಸರಿಕರಣವೆಂದು ಬಾಯಿ  ಬಡಿದುಕೊಂಡು ವಿರೋಽಸುತ್ತಿರುವುದು ಮಾತ್ರ ಈ ಡೋಂಗಿ ಹಿಂದೂಗಳೇ. ಅವಿವೇಕಿ ರಾಜಕಾರಣಿಯೊಬ್ಬ ಹೇಳುತ್ತಾನೆ ದೇವಾಲಯಗಳು ಸರಕಾರದಿಂದ ಮುಕ್ತಗೊಳಿಸುತ್ತಿರುವುದು ಕೇಸರಿಕರಣದ ಹುನ್ನಾರ ಎಂದು. ಇಡೀ ದೇವಾಲಯವೇ ಹಿಂದೂಗಳದ್ದಾಗಿರುವಾಗ ಕೇಸರಿಕರಣವೆಲ್ಲಿಂದ ಬಂತು? ಇತಿಹಾಸದಲ್ಲಿ ದೇವಾಲಯ ಗಳು ದಾಳಿಗೊಳಗಾಗಿದ್ದೇ ಅಲ್ಲಿ ಹಿಂದೂಗಳ ಆತ್ಮಾಭಿಮಾನ ಇತ್ತೆಂಬುದಕ್ಕೆ.
ತಾನು ಜೀವಿಸುವ ಸೂರಿಗಿಂತ ದೇವಾಲಯಗಳೇ ಶಾಶ್ವತವಾಗಿ ಉಳಿಯಲಿ ಎಂಬ ಒತ್ತಾಸೆಯಲ್ಲಿ ಬದುಕಿದ್ದವರು ಹಿಂದೂಗಳು. ಆದ್ದರಿಂದಲೇ ಹಂಪಿ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಲ್ಲಿ ಈಗಲೂ ದೇವಾಲಯಗಳ ಕುರುಹುಗಳು, ದೈವಮೂರ್ತಿಗಳ ಭಗ್ನಾವಶೇಷಗಳು ಈ ನೆಲದಡಿಯಿಂದ ಮೇಲೆದ್ದು ಬರುತ್ತಿವೆಯೇ ಹೊರತು ನಾಗರಿತಕತೆ ಸಾರುವ ಮನೆ- ಮಹಲುಗಳಲ್ಲ. ತಮ್ಮ ಹೊಟ್ಟೆಗೆ ಕಡಿಮೆಯಾದರೂ ದೇವರ ಹರಕೆಯ ರೂಪದಲ್ಲಿ ಹುಂಡಿ ತುಂಬಿಸುತ್ತಿದ್ದರು, ಕಾಣಿಕೆ ಗಳನ್ನು ಅರ್ಪಿಸುತ್ತಿದ್ದರು. ರಾಜಾಡಳಿತವು ಸಾಮ್ರಾಜ್ಯದ ಐಶ್ವರ್ಯವನ್ನು ಸಂಗ್ರಹಿಸಿಡುತ್ತಿದ್ದದ್ದು ದೇವಾಲಯಗಳಲ್ಲೇ.
ಇಡೀ ಸಾಮ್ರಾಜ್ಯ ನಶಿಸಿಹೋದರೂ ದೇವಾಲಯಗಳನ್ನು ನಾಗರಿಕರು ರಕ್ಷಿಸಿಕೊಳ್ಳುತ್ತಾರೆ ಎಂಬ ಅಚಲ ನಂಬಿಕೆ ಇದರ ಹಿಂದಿತ್ತು. ಹೀಗೆ ಹಿಂದೂಗಳ ನಂಬಿಕೆ ಮತ್ತು ಶ್ರದ್ಧಾ ಸ್ಥಳಗಳಾದ ದೇವಾಲಯಗಳನ್ನು ಇಸ್ಲಾಂ ಆಕ್ರಮಣರರ ನಂತರ ಬಂದ ಬ್ರಿಟಿಷರು ತಮ್ಮ ಸುಪರ್ದಿಗೆ ಪಡೆದುಕೊಂಡರು. ಹಿಂದೂಗಳ ಸಂಪತ್ತುಮತ್ತು ಆತ್ಮಾಭಿಮಾನಗಳನ್ನು ಕಬಳಿಸುವುದಕ್ಕಾಗಿಯೇ ಮುಜರಾಯಿ ಇಲಾಖೆಯನ್ನು ಸೃಷ್ಟಿಸಿದ್ದು. ನೆನಪಿರಲಿ ಈ ಕಾನೂನಿಗೂ ಸಂವಿಧಾನಕ್ಕೂ ಸಂಬಂಧವೇ ಇರಲಿಲ್ಲ. ಹೀಗೆ ಆನೆಯ ಕಾಲಿಗೆ ಕಟ್ಟಿದ ಸರಪಳಿಯಂತೆ ಇಂದಿಗೂ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಆ ಇಲಾಖೆಯ ಅಧಿಕಾರಿಶಾಹಿಯಡಿಯೇ ಉಳಿದು ಬಂದಿದೆ.
ವಾಸ್ತವದಲ್ಲಿ ಮಸೀದಿ ಮತ್ತು ಚರ್ಚ್‌ಗಳಿಗೆ ಸರಕಾರದಿಂದ ಯಾವುದೇ ನಿಯಮ, ಕಟ್ಟುಪಾಡುಗಳಿಲ್ಲ. ಅವೆಲ್ಲವೂ ಆಯಾ ಸಮುದಾಯದವರಿಂದ ಸಂಪೂರ್ಣ ಸ್ವತಂತ್ರವಾಗಿ ನಡೆಸಲ್ಪಡುತ್ತಿವೆ. ಆದರೆ, ಮಾತೆತ್ತಿದ್ದರೆ ಸಮಾನತೆಯ ಹೆಸರಲ್ಲಿ ಬೊಬ್ಬೆಯಿಡುವ ಎಡಬಿಡಂಗಿಗಳಿಗೆ ಹಿಂದೂಗಳ ಶ್ರದ್ಧಾಸ್ಥಳಗಳನ್ನು ಮಾತ್ರ ಸರಕಾರದ ಸರಪಳಿಯಿಂದ ಮುಕ್ತಿಗೊಳಿಸಕೂಡದು. ಅಸಲಿಗೆ ಈ ವಿಚಾರಕ್ಕೂ ರಾಜಕೀಯ ಅಜೆಂಡಾಗಳಿಗೂ ಸಂಬಂಧವೇ ಇಲ್ಲ. ಆದರೂ ಮುಜರಾಯಿಇಲಾಖೆಯಿಂದ ದೇವಾಲಯಗಳನ್ನು ಮುಕ್ತಗೊಳಿಸುವ ರಾಜ್ಯ ಸರಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಇವರ ಮಲೀನ ಮನಃಸ್ಥಿತಿ. ಇಂಥ ಪುಢಾರಿಗಳು ಲೋಕಮಾನ್ಯ ಬಾಲಗಂಗಾಧರ ತಿಲಕರ ಕಾಲದಲ್ಲೇನಾದರು ಇದ್ದಿದ್ದರೆ ತಿಲಕರ ಧಾರ್ಮಿಕ ಸಂಘಟನೆಯ ಸಾಮಾಜಿಕ ಗಣೇಶೋತ್ಸವ ಹತ್ತಿಕ್ಕಲು ಬ್ರಿಟಿಷರಿಗಿಂತ ಇವರುಗಳೇ ಮುಂದಾಗುತ್ತಿದ್ದರೇನೋ.
ದೇವಾಲಯಗಳು ಇಲಾಖೆಯ ಅಧೀನದಲ್ಲಿದ್ದರೆ ಏನೆಲ್ಲ ಅವ್ಯವಸ್ಥೆಗಳಾಗುತ್ತದೆಂಬುದಕ್ಕೆ ನಮ್ಮ ಹಂಪಿಯ ಅದಿದೈವ ಪಂಪಾವಿರೂ ಪಾಕ್ಷೇಶ್ವರ ದೇವಾಲಯವೇ ನಿದರ್ಶನ. ಈ ದೇವಾಲಯ ಪಂಪಾಪುರಾಣ, ಸ್ಕಂದಪುರಾಣ, ರಾಮಾಯಣದ ಕಿಷ್ಕಿಂದ, ವಿದ್ಯಾರಣ್ಯ, ಹರಿಹರಬುಕ್ಕರ ಇತಿಹಾಸ, ವಾಸ್ತಶಿಲ್ಪ ಕಲೆ ಮತ್ತುವಿಜ್ಞಾನಗಳಲ್ಲೂ ಈ ದೇಗುಲದ ಪ್ರಸ್ತಾಪವಿದೆ.
ದೇಗುಲದ ಹಿಂಬದಿಯಲ್ಲಿ ವಿಜಯನಗರ ಸ್ಥಾಪಕ ವಿದ್ಯಾರಣ್ಯರ ಪರಂಪರಾಗತ ಮಠವಿದೆ. ಆ ಮಠದ ಯತಿಗಳೇ ಹಿಂದಿನಿಂದಲೂ ಸ್ಥಳೀಯ ಭಕ್ತಾದಿಗಳ ಸಹಾಯದಿಂದ ಪೂಜೆಪುನಸ್ಕಾರಗಳನ್ನು ನಡೆಸಿಕೊಂಡು ಬರುತ್ತಿರುವುದು. ಈ ಮಧ್ಯೆ೧೯೫೦ರಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ಮೇಲೆ ದೇವಾಲಯದ ಅಭಿವೃದ್ಧಿಯೇ ಸ್ಥಗಿತಗೊಂಡಿತು. ಇಲ್ಲಿಗೆ ಬರುವ ಪ್ರವಾಸಿಗರು ಹೊಸಪೇಟೆಯ ಹೋಟೆಲ್, ಲಾಡ್ಜ್‌ಗಳಲ್ಲಿ ಉಳಿದುಕೊಂಡು ಹಂಪಿಯನ್ನು ಸುತ್ತಿ ವಾಪಸಾ ಗುತ್ತಾರೆ. ಹಂಪಿ ಧಾರ್ಮಿಕ ಸ್ಥಳವೂ ಆಗಿರುವುದರಿಂದ ಬಹಳಷ್ಟು ಮನೆತನಕ್ಕೆ ಮನೆದೇವರು ಸಹ.
ಹೀಗಾಗಿ ಪ್ರವಾಸಿಗಳಲ್ಲದೇ, ಹರಕೆ ಹೊತ್ತವರು, ದೇವರಿಗೆ ನಡೆದುಕೊಳ್ಳುವವರೂ ಲಿಗೆ ಬರುತ್ತಿರುತ್ತಾರೆ. ಇಂಥವರಿಗೆ ತಂಗಲು ಕೊಠಡಿ, ಶೌಚಾಲಯ, ಉಪಹಾರದ ವ್ಯವಸ್ಥೆಗಳೇ ಇಲ್ಲ. ಮಠದ ಶ್ರೀಗಳು ಭಕ್ತರಿಗಾಗಿ ಮೂಲಸಸೌಕರ್ಯ ಕಲ್ಪಿಸಲು ಸರಕಾರದ ಅಪ್ಪಣೆ ಪಡೆಯಬೇಕು. ಅದು ದೇಗುಲದ ಕಾರ್ಯ ನಿರ್ವಹಣಾಧಿಕಾರಿಯಿಂದ ಆರಂಭಿಸಿ ಸಂಬಂಽಸಿದ ಇಲಾಖಾ ಸಚಿವರವರೆಗೆ ಹೋಗಿ ಸಹಿಯಾಗಿ ಬರುವ ಹೊತ್ತಿಗೆ ದೇಗುಲದ ಅಧಿಕಾರಿಯೇ ವರ್ಗವಾಗಿರು ತ್ತಾನೆ. ಮತ್ತೆ ಯೋಜನೆ ನನೆಗುದಿಗೆ ಬೀಳುತ್ತದೆ.
ದೇಗುಲಕ್ಕೆ ವಾರ್ಷಿಕ ಕೋಟ್ಯಂತರ ರು.ಆದಾಯ ಬರುತ್ತಿದ್ದರೂ ಬರುವ ಭಕ್ತರಿಗೆ ಒಪ್ಪೊತ್ತಿನ ಅನ್ನಪ್ರಸಾದ ವ್ಯವಸ್ಥೆ ಜಾರಿಯಾಗಿರಲಿಲ್ಲ. ಕೊನೆಗೆ ಬೇಸತ್ತ ಮಠದ ಇಂದಿನ ಪೀಠಾಧಿಪತಿ ವಿದ್ಯಾರಣ್ಯಭಾರತೀ ಸ್ವಾಮೀಜಿ ಮುಂದೆ ನಿಂತು ತಾವೇ ಪ್ರತಿ ಅಮಾವಸ್ಯೆಯಂದು ಸಾವಿರಾರು ಮಂದಿಗೆ ಅನ್ನಪ್ರಸಾದ ಯೋಜನೆಆರಂಭಿಸಿದರು. ಅದು ಈಗ ನಿತ್ಯಪ್ರಸಾದವಾಗಿದೆ. ಬಡಪಾಯಿ ಅರ್ಚಕರು ನಿತ್ಯ ದೇವರ ಸೇವೆ ಮಾಡಿ ದೇಗುಲವನ್ನು ಅಚ್ಚುಕಟ್ಟಾಗಿಡುತ್ತಾರೆ. ಆದರೆ ಅವರಿಗೆ ಇಲಾಖೆ ನೀಡುವ ಸಂಬಳ, ಮನೆ ನಿಭಾಯಿಸುವಷ್ಟೂ ಇಲ್ಲ. ತಿಂಗಳಿಗೆ ಏಳುಸಾವಿರ ರು. ಈಗಿನ ದಿನಮಾಣದಲ್ಲಿ ಯಾವುದಕ್ಕೆ ಆದೀತು? ಹೀಗಾಗಿ ಭಕ್ತರು ಹಾಕುವ ತಟ್ಟೆಯ ಕಾಸನ್ನೇ ಐದಾರು ಅರ್ಚಕರು ಹಂಚಿಕೊಳ್ಳುತ್ತಾರೆ.
ಆದರೆ ಇಲಾಖೆ, ಇದಕ್ಕೂ ತ್ಯಾಮಾನ ತಂದಿದ್ದು, ಅರ್ಚಕರು ತಟ್ಟೆಕಾಸನ್ನೂ ಹುಂಡಿಗೆ ಹಾಕಬೇಕೆಂಬ ನಿಯಮ ಜಾರಿಗೊಳಿಸಿದೆ. ಕೊನೆಗೆ ಸ್ವಾಮೀಜಿಗಳುಎಚ್ಚರಿಸಿದ ಮೇಲೆ ವಿರೂಪಾಕ್ಷನ ಪಕ್ಕದ ಹುಂಡಿಯನ್ನು ತೆಗೆಯಲಾಯಿತು. ಪ್ರತಿ ದೇಗುಲ ಮತ್ತು ಮಠಗಳಿಗೆ ಅದರದೇ ಆದ ಪರಂಪರೆ, ಇತಿಹಾಸ, ನೀತಿ- ನಿಯಮಗಳಿರುತ್ತವೆ. ದೇಗುಲ-ಮಠ-ಭಕ್ತರು ಇವು ನೈಜವಾಗಿರಬೇಕಾದ ಸಂಬಂಧಗಳು. ಸರಕಾರಿ ಇಲಾಖೆಯ ಅಽನದಲ್ಲಿ ಇಂಥ ಸಂಬಂಧದ ಸಾರ್ಥಕ ತೆಗೆ ಧಕ್ಕೆ ಬಂದಿದೆ. ಹೀಗಾಗಿ ಹಂಪಿ ಇಂದಿಗೂ ಹಾಳು ಹಂಪಿ ಎಂದೇ ಕರೆಸಿಕೊಂಡಿದೆ.
ಒಂದೊಮ್ಮೆ ವಿರೂಪಾಕ್ಷ ದೇಗುಲದಂತೆ ಕಡಲೆಕಾಳು ಸಾಸಿವೆ ಗಣಪ, ಬಡವಿ ಲಿಂಗ, ಬಾಲಕೃಷ್ಣ ದೇಗುಲ, ಮಾಲ್ಯವಂತ ರಘನಾಥ, ಹಜಾರರಾಮ, ಪ್ರಸನ್ನ ವಿರೂಪಾಕ್ಷ ದೇಗುಲಗಳಲ್ಲಿ ಪೂಜೆಪುನಸ್ಕಾರಗಳು ಆರಂಭವಾದದ್ದೇ ಆದರೆ ವಿಜಯನಗರ ಅರಸರ ಮತ್ತು ಅಂದಿನ ನಾಗರಿಕರ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ. ಇನ್ನು ದೇವಾಲಯಗಳಿಗೆ ನೀಡಲುದ್ದೇಶಿಸಿರುವ ಸ್ವಾತಂತ್ರ್ಯ ಸಾರ್ಥಕ ದಿಕ್ಕಿನಲ್ಲಿ ಸಾಗಬೇಕಿದ್ದಲ್ಲಿ ಒಂದಷ್ಟು ಹೊಣೆಗಾರಿಕೆಗಳಿವೆ. ಮೊದಲಿಗೆದೇವಾಲಯದಿಂದ ಬರುವ ಆದಾಯವನ್ನು ದೇವಾಲಯಕ್ಕೇ ಬಳಸಿ, ಕಟ್ಟಡಗಳ ನಿರ್ವಹಣೆ, ವಾಸ್ತುಶಿಲ್ಪಗಳ ಸಂರಕ್ಷಣೆಗಳಿಗೆ ಮೂಲಭೂತವಾಗಿ ಬಳಸಬೇಕಿದೆ.
ಸ್ಥಳೀಯ ಪರಂಪರೆಗೆ ಅನುಗುಣವಾಗಿ ಜಾತ್ರೆ, ರಥೋತ್ಸವ, ಹಬ್ಬಹರಿದಿನಗಳಲ್ಲಿ ಯೋಜನೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತೆ ಬರಬೇಕು. ಆಯಾ ಪ್ರದೇಶದ ರಸ್ತೆಗಳಂಥ ಅಗತ್ಯ ಮೂಲಸೌಕರ್ಯಗಳು, ಸುತ್ತಮುತ್ತಲಿನ ಶಾಲೆಗಳು, ಕೆರೆ ಕಟ್ಟೆ, ನೀರಾವರಿ, ಶೌಚಾಲಯಗಳಂಥ ಊರಿನ ಅಭಿವೃದ್ಧಿಗೂ ದೇಗುಲದ ಹಣ ಬಳಕೆಯಾಗಬಹುದು. ಜತೆಗೆ ಊರಿನ ಅಸಹಾಯಕ ಕುಟುಂಬದ ಮಕ್ಕಳ ವಿವಾಹವನ್ನು ಖುದ್ದು ದೇವಾಲಯದವತಿಯಿಂದಲೇ ನಡೆಸ ಬಹುದು.
ಎಲ್ಲಕ್ಕಿಂತ ಮಿಗಿಲಾಗಿ ದೇವಾಲಯಗಳಲ್ಲಿ ಸಮಾನತೆ ಸ್ಥಾಪಿಸಿ, ನೈಜ ದೈವ ಕೃಪೆ ಸಮಾಜದ ಮೇಲಾಗುವಂತಾಗಬೇಕು. ಇಂಥವೆಲ್ಲ ಧಾರ್ಮಿಕ ಕೇಂದ್ರದಿಂದ ಆದಾಗ ಮಾತ್ರವೇ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈಗಿನ ಸರಕಾರಿ ವ್ಯವಸ್ಥೆಯಲ್ಲಿ ಇದಾವುದೂ ಸಾಧ್ಯವಾಗುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಚರ್ಚ್ಗಳು, ಕಾನ್ವೆಂಟಗಳು, ಬೈಬಲನ ಬೋಧನೆಯಿದೆ. ಮುಸಲ್ಮಾನರಿಗೆ ಅವರದ್ದೇ ಆದ ಧಾರ್ಮಿಕ ಕೇಂದ್ರಗಳು, ಮದರಸಾದಂಥವುಗಳಲ್ಲಿ ಶಿಕ್ಷಣ ವ್ಯವಸ್ಥೆ, ಕುರಾನ್ ಬೋಧನೆ ವ್ಯವಸ್ಥೆ ಇದೆ. ಆದರೆ ನಮ್ಮ ಸರಕಾರಿ ವ್ಯವಸ್ಥೆಗೊಳಪಟ್ಟ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಇಂತವುಗಳಿಲ್ಲ. ಆದರೆ ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಭಗವದ್ಗೀತೆ ಕಲಿಸಿದರೆ, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಸೂರ್ಯನಮಸ್ಕಾರ ಮಾಡಿಸಿದರೆ ಕೇಸರಿಕರಣ ಎಂದು ಎದೆಬಡಿದುಕೊಳ್ಳುತ್ತಾರೆ. ಹಿಂದೂಗಳು ತಮ್ಮ ಸಹಜ ಧಾರ್ಮಿಕ ಸ್ವಾಂತಂತ್ರಕ್ಕೆ ಅಂಗಲಾಚಿದರೆ ಅದನ್ನು ಧರ್ಮೋಕ್ರಸಿ ಎಂದು ಮಹಾ ದೊಣೆನಾಯಕನಂತೆ ಮಾತನಾಡುತ್ತಾರೆ.
ಹಿಂದೂಗಳ ವಿಚಾರದಲ್ಲಿ ಮಾತ್ರವೇ ಧರ್ಮೋಕ್ರಸಿ, ಮಣ್ಣುಮಸಿಗಳು ನೆನಪಾಗುವುದು. ಹೀಗಿದ್ದಾಗಲೂ ಸಮಾಜದಲ್ಲಿ ಯಾವುದೇ ಧರ್ಮದ ಯಾವುದೇ ಜಾತಿಯ ಹಸಿದ ಹೊಟ್ಟೆಗಳಿಗೆ ಅನ್ನವನ್ನಿಕ್ಕುವುದು ಹಿಂದೂ ದೇಗುಲಗಳು, ಮಠಗಳೇ ಹೊರತು ಮಸೀದಿ, ಚರ್ಚ್‌ಗಳಲ್ಲ ಎಂಬ ಕಠೋರ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಲ್ಲವೇ? ಕೊನೆಗೆ, ಹಂಪಿ ಮಠದ ವಿದ್ಯಾರಣ್ಯಭಾರತೀ ಶ್ರೀಗಳು ಹೇಳುವುದೇನು ಗೊತ್ತೇ? ನಮ್ಮ ಸನಾತನ ಪರಂಪರೆಯ ದೇಗುಲ ಬರಿಯ ಗಂಟೆ ತೀರ್ಥ ಮಂಗಳಾರತಿಯ ಕೇಂದ್ರವಾಗಿರಲಿಲ್ಲ. ದೇಗುಲವೆಂಬ ಭವ್ಯ ವ್ಯವಸ್ಥೆಯಡಿಯಲ್ಲಿ ವಿದ್ಯಾಲಯ- ವೈದ್ಯಾಲಯ- ನ್ಯಾಯಾಲಯ- ಗ್ರಂಥಾಲಯ-ಅನಾಥಾಲಯ- ಯೋಗಾಲಯ- ಸಂಸ್ಕಾರ ಕೇಂದ್ರ- ಸತ್ಸಂಗ ಕೇಂದ್ರಗಳು- ಗೋಶಾಲೆ- ಪಾಕಶಾಲೆಗಳು- ಕಲ್ಯಾಣಮಂಟಪಗಳು ಕಾರ್ಯ ನಿರ್ವಹಿಸುತ್ತಿದ್ದವು.
ಆದರೆ ಅವೆಲ್ಲವೂ ಈಗ ಹೈಟೆಕ್ ಕಾರ್ಪೊರೇಟ್‌ಗಳಾಗಿ ಅಯೋಗ್ಯರ ಅಧೀನಕ್ಕೊಳಪಟ್ಟಿವೆ. ಇಲ್ಲವೇ ಹಾಳು ಸುರಿಯುತ್ತಿವೆ. ದೇವಾಲಯಗಳಲ್ಲಿ ಗಂಟೆನಾದಕ್ಕೂ ಮಂತ್ರಘೋಷಣೆಗೂ ಆಕ್ಷೇಪಣೆಗಳು ಹುಟ್ಟಿಕೊಳ್ಳುತ್ತಿರುವುದು ದುರಂತ. ಬೇಕಲ್ಲವೇ ದೇವಾಲಯಗಳಿಗೆ ಸ್ವಾತಂತ್ರ್ಯ!