ಕುಡಿದು ಹೈ ಆಗಿರುವವರ ಹಾಡು ಇಳಿಸು ಬಾ, ತಾಯಿ ಇಳಿಸು ಬಾ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡಮಧ್ಯರಾತ್ರಿ ಖೇಮು ಆಟೋ ಓಡಿಸಿಕೊಂಡು ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ಹೆಂಗಸು ನಿಂತ್ಕೊಂಡು ಕೈ ತೋರಿಸಿ ಅಡ್ಡ ಹಾಕಿದಳು. ಹೆಣ್ಣುಮಗಳುಅಂತ ಗಾಡಿ ನಿಲ್ಲಿಸಿದ ಖೇಮು.
ಅವಳ ಮುಖ ಯಾಕೋ ತುಂಬಾ ಗಂಭೀರವಾಗಿತ್ತು. ಅಲ್ಲದೆ, ಕಂಪ್ಲೀಟ್ ವೈಟ್ ಸೀರೆ ಹಾಕಿಕೊಂಡಿದ್ದಳು. ಮೈಮೇಲೆ ಒಂದೂ ಆಭರಣ ಇರಲಿಲ್ಲ. ಈ ರೋಡಲ್ಲಿದೆವ್ವಗಳ ಕಾಟ ಅಂತ ಗೊತ್ತಿದ್ರೂ ಯಾಕಪ್ಪಾ ನಿಲ್ಲಿಸಿದೆ ಅಂತ ಒಳಗೊಳಗೇ ಹೆದರಿಕೊಂಡ ಖೇಮು. ಆದರೆ ಆ ಹೆಣ್ಣು ಅಣ್ಣಾ ತುಂಬಾ ತಡ ಆಗಿದೆಕಕೊಂಡ್ ಹೋಗಿ ಅಂದಾಗ, ಇಲ್ಲ ಅನ್ನೋಕಾಗದೆ ಕೂರಿಸಿಕೊಂಡ. ಹಿಂದೆ ಕೂತಿರೋದು ದೆವ್ವ ಅನ್ನೋ ಭಯದಲ್ಲೇ ಗಾಡಿ ಓಡಿಸುತ್ತಿದ್ದ ಖೇಮು. ತಗ್ಗು ದಿನ್ನೆ,ಹಂಪ್‌ಗಳ ಮೇಲೂ ಅವನಿಗೆ ಗಮನ ಇರಲಿಲ್ಲ. ಬೇಗ ಮನೆಗೆ ತಲುಪಿದರೆ ಸಾಕು ಅಂತ ಸ್ಪೀಡಾಗಿ ಹೋಗುತ್ತಿದ್ದ ಖೇಮು.
ಸ್ವಲ್ಪ ದೂರ ಹೋದ ಮೇಲೆ ಸುಮ್ಮನೆ ಅನುಮಾನದಿಂದ ಹಿಂದೆ ತಿರುಗಿ ನೋಡಿದರೆ, ಹುಡುಗಿಯ ಮುಖದಲ್ಲಿ ಒಂದಿಷ್ಟು ಕೆಂಪನೆ ಬಣ್ಣ ಕಾಣುತ್ತಿತ್ತು. ಅದು ರಕ್ತ ಅಂತ ಗೊತ್ತಾಯಿತು ಖೇಮುಗೆ. ಮತ್ತೆ ಮುಂದೆ ಹೋಗಿ, ಮತ್ತೆ ತಿರುಗಿ ನೋಡಿದ. ಹೀಗೆ ಪ್ರತಿ ಸಾರಿ ತಿರುಗಿ ನೋಡಿದಾಗಲೂ ಆಕೆಯ ಮುಖದ ಮೇಲಿನ ರಕ್ತ ಜಾಸ್ತಿ ಆಗ್ತಾ ಬಂತು. ಖೇಮುಗೆ ಹಾರ್ಟ್ ಅಟ್ಯಾಕ್ ಆಗೋದೊಂದ್ ಬಾಕಿ. ಕೊನೆಗೆ ಆಕೆಯ ಮುಖ ಸಂಪೂರ್ಣ ರಕ್ತ ಆಗಿದ್ದನ್ನು ನೋಡಿ, ಥಟ್ಟನೆ ಆಟೋ ನಿಲ್ಲಿಸಿ, ದಯವಿಟ್ಟು ನನ್ನ ಬಿಟ್ಟು ಬಿಡು, ನನಗೆ ಹೆಂಡ್ತಿ ಮಕ್ಳಿದ್ದಾರೆ.
ಅಂದ. ಅದಕ್ಕೆ ಆಕೆ ಗಂಭೀರವಾಗಿ ಸ್ವಲ್ಪ ಸಿಟ್ಟಿನಿಂದಲೇ ಹೇಳಿದಳು, ಅಯ್ಯೋ, ನಿನ್ ಮುಖ ಮುಚ್ಚಾ, ಅವಾಗಿಂದ ಅಷ್ಟೊಂದ್ ಸ್ಪೀಡಾಗಿ ಓಡಿಸ್ತಾ ಇದೀಯಾ. ಹಂಪ್, ತಗ್ಗು ಬಂದಾಗ ಸಡನ್ ಆಗಿ ಬ್ರೇಕ್ ಹಾಕ್ತೀಯಾ, ಪ್ರತಿ ಸಾರಿ ನೀನು ಬ್ರೇಕ್ ಹಾಕಿದಾಗಲೂ ನನ್ನ ಮುಖ ಮುಂದಿನ ಮೆಟಲ್ ಬಾರ್ ಗೆ ಹೊಡೆದುಕೊಂಡು ಹಿಂಗೆ ರಕ್ತ ಬರ್ತಾ ಇದೆ. ಬೇಗ ಆಸ್ಪತ್ರೆಗೆ ಕಕೊಂಡ್ ಹೋಗು
ಲೂಸ್ ಟಾಕ್ವಿರಾಟ್ ಕೊಹ್ಲಿ (ಕಾಲ್ಪನಿಕ ಸಂದರ್ಶನ)?ಏನ್ ಕೊಹ್ಲಿ ಅವರೇ, ನಾಯಕತ್ವ ಬಿಟ್ಟುಕೊಟ್ಟ ಮೇಲೆ ಹೆಂಗಿದೆ ಜೀವನ?-ಹಲೋ, ನನ್ನ ಬಗ್ಗೆ ಇನ್ನೂ ಯಾರೂ ಬಯೋಪಿಕ್ ಮಾಡಿಲ್ಲ, ಹಂಗಾಗಿ ಸದ್ಯಕ್ಕೆ ನಾನೇ ನಾಯಕ ಕಣ್ರೀ.?ಸರಿ, ಆದ್ರೆ ಈ ನಾಯಕತ್ವ ಬಿಡೋಕೆ ಏನಾದ್ರೂ ಗಂಭೀರ ಕಾರಣ ಇರಬೇಕಲ್ವಾ?-ರೀ, ಗಂಭೀರ್ ಗೂ ಇದಕ್ಕೂ ಏನ್ರೀ ಸಂಬಂಧ? ನಾನೇ, ಪ್ಲೇಯರ್ ಮತ್ತೆ ಕ್ಯಾಪ್ಟನ್ ಅಂತ ಜಾಸ್ತಿ ದಿನ ಡಬಲ್ ರೋಲ್ ಮಾಡೋಕಾಗಲ್ಲ ಅಂತ ಬಿಟ್ಟೆ ಅಷ್ಟೆ.?ಎಲ್ಲನೂ ಸಿನಿಮಾ ಸ್ಟೈಲಲ್ಲೇ ಮಾತಾಡ್ತಾ ಇರೋದ್ ನೋಡಿದ್ರೆ, ನೀವೇ ಸಿನಿಮಾ ಮಾಡೋ ಪ್ಲ್ಯಾನ್ ಇದ್ದಂಗಿದೆ-ಯಾಕಿರಬಾರದು. ಕ್ರಿಕೆಟ್ ಗೂ ಸಿನಿಮಾಗೂ ಅಷ್ಟೇನೂ ವ್ಯತ್ಯಾಸ ಇಲ್ಲ ಬಿಡಿ. ಎರಡೂ ಕಡೆ ರಾತ್ರೋರಾತ್ರಿ ಸ್ಟಾರ್ ಆಗಬಹುದು. ಎರಡೂ ಕಡೆ ಸ್ಪೆಕ್ಟೇಟರ್ಸ್ಇರ್ತಾರೆ. ಎರಡೂ ಕಡೆ ನೋಡೋಕೆ ಟಿಕೆಟ್ ಇರುತ್ತೆ, ಕ್ಯಾಮೆರಾ ಮನ್ ಇರ್ತಾರೆ, ಅಲ್ಲಿ ಇಂಟರ್ ವಲ್, ಇಲ್ಲಿ ಇನ್ನಿಂಗ್ಸ್ ಬ್ರೇಕ್, ಮಳೆ ಬಂದ್ರೆ ಅಲ್ಲಿ ಕಲೆಕ್ಷನ್ ಡಲ್ಲು, ಇಲ್ಲಿ ಮ್ಯಾಚ್ ಕ್ಯಾನ್ಸಲ್ಲು, ಎರಡೂ ಕಡೆ ಚೇಸಿಂಗ್ ಇರುತ್ತೆ, ಎರಡೂ ಕಡೆ, ಓಪನಿಂಗ್ ಮತ್ತೆ ಲಾಸ್ಟ್ ೨೦ ಮಿನಿಟ್ಸ್ ತುಂಬಾ ಮುಖ್ಯ, ಎರಡೂ ಕಡೆ ಫಿಫ್ಟಿ ಮತ್ತೆ ಸೆಂಚುರಿಗೆ ಪ್ರಾಮುಖ್ಯತೆ ಜಾಸ್ತಿ,?ಯಪ್ಪಾ, ಇಷ್ಟೆಲ್ಲಾ ಮಾತಾಡೋದ್ ನೋಡಿದ್ರೆ ನೀವು ಸಿನಿಮಾ ಸೇರೋದ್ ಗ್ಯಾರಂಟಿ ಬಿಡಿ-ಯಾಕಾಗಬಾರದು? ಕ್ರಿಕೆಟರ್ ಆಗಿ ೩೫ ಪ್ಲಸ್ ಗೆ ರಿಟೈರ್ ಆಗ್ಬಿಟ್ರೆ ಆಮೇಲೆ ಟೈಮ್ ಪಾಸ್ ಮಾಡೋಕೆ ಏನಾರಾ ಮಾಡ್ಬೇಕಲ್ಲ.?ಸರಿ, ಈಗ ನೀವು ಬಿಟ್ಟು ಹೋಗಿರೋ ಕ್ಯಾಪ್ಟನ್ ಜಾಗಕ್ಕೆ ಬರೋ ಬೇರೆಯವರು ಆ ಜಾಗನಾ ಸರಿಯಾಗಿ ನಿಬಾಯಿಸ್ತಾರೆ ಅಂತೀರಾ?-ಅಲ್ರೀ, ಬಸ್ಸಲ್ಲಿ ನಮ್ಮ ಸ್ಟಾಪ್ ಬಂದು ನಾವು ಸೀಟಿಂದ ಎದ್ದು ಹೋದಮೇಲೆ ಆ ಸೀಟಲ್ಲಿ ಯಾರಾದ್ರೂ ಕೂತ್ಕೊಳ್ಳಿ, ನಮಗೇನಾಗಬೇಕಾಗಿದೆ.
ನೆಟ್ ಪಿಕ್ಸ್ಅಮೇಜಾನ್ ಪ್ರೈಮ್ ನಲ್ಲಿ ಪುಷ್ಪ ಸಿನಿಮಾ ಬಿಡುಗಡೆ ಆಗಿದೆ. ಕನ್ನಡದಲ್ಲೂ ಇದು ಲಭ್ಯವಿದೆ. ಸಿನಿಮಾ ಚೆನ್ನಾಗಿದೆ. ಎಲ್ಲೂ ಬೋರು ಹೊಡೆಸದ, ನೋಡಿಸಿಕೊಂಡು ಹೋಗುವ ಚಿತ್ರ. ಓಡಿಸಿಕೊಂಡು ನೋಡುವ ಅಗತ್ಯ ಇಲ್ಲ. ಆದರೂ ಸಿನಿಮಾ ಬಿಡುಗಡೆ ಸಮಯದಲ್ಲಿ ಈ ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಯಾಕೆ ಬಂತೋ ಗೊತ್ತಿಲ್ಲ. ಬಹುಷಃ ಕನ್ನಡ ಅವತರಣಿಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ ಅನ್ನೋ ಕೋಪಕ್ಕೆ ಕನ್ನಡಿಗರು ಅದರ ಬಗ್ಗೆ ಕೆಟ್ಟದಾಗಿ ಮಾತಾಡಿದರೋ ಏನೋ ಗೊತ್ತಿಲ್ಲ. ಆದ್ರೆ ಈ ಸಿನಿಮಾ ಬಗ್ಗೆ ಆಶ್ಚರ್ಯ ಎನಿಸುವ ಒಂದು ವಿಷಯವನ್ನು ಹೇಳಲೇಬೇಕು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಅಷ್ಟು ಜನ ನೋಡಿದ ಮೇಲೂ ಈ ಚಿತ್ರದ ಒರಿಜಿನಾಲಿಟಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಅನ್ನೋದು ಸೋಜಿಗದ ಸಂಗತಿ.
ಯಾಕಂದ್ರೆ ಕೆಲವು ವರ್ಷಗಳ ಹಿಂದೆ, ಹಿಂದಿಯಲ್ಲಿ ಬಂದ ಶಾರೂಖ್ ಖಾನ್ ಅಭಿನಯದ ರಾಯೀಸ್ ಚಿತ್ರದ ಅನಾಮತ್ತು ನಕಲು ಈ ಪುಷ್ಪ. ಶಾರೂಖ್ ಖಾನ್ ಅವರ ಕ್ಯಾರೆಕ್ಟರೈಸೇಷನ್‌ನಿಂದ ಹಿಡಿದು ಎಲ್ಲವೂ ನಕಲು. ಕಥೆಯಂತೂ ಅಲ್ಲಿ ಗುಜರಾತ್ ನಲ್ಲಿ ಬ್ಯಾನ್ ಆಗಿರುವ ಆಲ್ಕೋಹಾಲ್ ಕಳ್ಳ ಸಾಗಣೆ, ಇಲ್ಲಿ ರಕ್ತ ಚಂದನ ಆಗಿದೆ ಅನ್ನೋದು ಬಿಟ್ಟರೆ ಸೇಮ್ ಟು ಸೇಮ್. ರಾಯೀಸ್ ಚಿತ್ರದ ನಾಯಕ ಇಲ್ಲೀಗಲ್ ದಂಧೆ ಮಾಡುವವರ ಜತೆ ಮಾಮೂಲಿ ಕೆಲಸಗಾರನಾಗಿ ಸೇರಿಕೊಂಡು, ತನ್ನ ಕಳ್ಳಸಾಗಣೆಯ ಹೊಸ ಟೆಕ್ನಿಕ್ ತೋರಿಸಿ, ಅವರನ್ನು ಇಂಪ್ರೆಸ್ ಮಾಡಿ, ಬೆಳೆದು ನಂತರ ಅವರನ್ನೇ ಸಪ್ರೆಸ್ ಮಾಡಿ ಬೆಳೆದು, ಮುಖ್ಯ ಡೀಲರ್ ಜತೆ ಡೈರೆಕ್ಟ್ ಡೀಲಿಂಗ್ ಮಾಡುವ ಮಟ್ಟಕ್ಕೆ ಬೆಳೆಯೋದು ಕಥೆ. ಅದನ್ನೇ ಇಲ್ಲಿ ಭಟ್ಟಿ ಇಳಿಸಲಾಗಿದೆ.
ಕಳ್ಳ ಸಾಗಣೆಯ ದೃಶ್ಯಗಳು, ಪೊಲೀಸ್ ಚೆಕಿಂಗ್‌ನ ಅನೇಕ ದೃಶ್ಯಗಳು ಯಥಾವತ್ತು ನಕಲು. ಅಲ್ಲಿ ಪೊಲೀಸ್ ಪಾತ್ರದಲ್ಲಿರುವ ನವಾಜುದ್ದೀನಿ ಸಿದ್ದಿಖಿ ಅವರ ಪಾತ್ರ ಇಲ್ಲಿ-ಬಾದ್ -ಜಿಲ್ರೂಪದಲ್ಲಿ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೂ ಮುನ್ನ ಇನ್ನೊಬ್ಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲೂ ಸಾಕಷ್ಟು ಹೋಲಿಕೆ ಇದೆ. ಇಲ್ಲಿ-ಹಾದ್ -ಜಿಲ್ಕೊನೆಯಲ್ಲಿ ಬರ್ತಾರೆ ಅನ್ನೋದೊಂದೇ ವ್ಯತ್ಯಾಸ. ಆದರೆ ಪುಷ್ಪ ಚಿತ್ರದ ಎರಡನೇ ಭಾಗ ಬರೋದ್ರಿಂದ, ರಾಯಿಸ್ ಚಿತ್ರದಲ್ಲಿ ಶಾರುಖ್ ಖಾನ್ ಗೆ ಹಾವಳಿ ಕೊಡುವ ನವಾಜುದ್ದೀನ್ ಸಿದ್ದಿಖಿ ಪಾತ್ರದ ಕೆಲಸವನ್ನು-ಹಾದ್ -ಸಿಲ್ಎರಡನೇ ಭಾಗದಲ್ಲಿ ಮಾಡಬಹುದು.
ಪುಷ್ಪದ ಎರಡನೇ ಭಾಗದಲ್ಲಿ-ಹಾದ್ -ಸಿಲ್ಅಲ್ಲು ಅರ್ಜುನ್ ವ್ಯವಹಾರಕ್ಕೆ ಅಡ್ಡಗಾಲು ಹಾಕಿ ಅವನನ್ನು ತುಳಿದರೆ, ಅಲ್ಲು ಅರ್ಜುನ್ ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸಿದರೆ, ಕೊನೆಯಲ್ಲಿ-ಹಾದ್ -ಸಿಲ್ಕೈಯಲ್ಲಿ ಸತ್ತರೆ, ಅಲ್ಲಿಗೆ ರಾಯೀಸ್ ಚಿತ್ರದ ಸಂಪೂರ್ಣ ಕಾಪಿ ಕೆಲಸ ಮುಗಿದಂತೆ. ಇಷ್ಟೇ ಅಲ್ಲದೆ ಇಲ್ಲಿ ಸಮಂತಾ ಅವರ ಐಟಂ ಸಾಂಗ್ ಅನ್ನು ಸನ್ನಿ ಲಿಯೋನ್ ಮಾಡಿದ್ದಾರೆ. ಕೇವಲ ಡಾಲಿ ಧನಂಜಯನಂಥ ಕೆಲವು ಕ್ಯಾರೆಕ್ಟರ್ ಗಳು ಮತ್ತು ಅವುಗಳ ವರ್ತನೆ ಮಾತ್ರ ಬದಲಾಗಿದೆ.
ಅದೆಲ್ಲಾ ಸರಿ, ಆದ್ರೆ ಯಾರೊಬ್ಬರೂ ಈ ವಿಷಯ ಮಾತಾಡದೇ ಇರೋದು ನೋಡಿದ್ರೆ ರಾಯೀಸ್ ತೀರಾ ಅಷ್ಟು ಪ್ಲಾಪ್ ಸಿನಿಮಾನಾ ಅಂತ ಅನುಮಾನ ಬರುತ್ತೆ.
ಲೈನ್ ಮ್ಯಾನ್
?ವೀಕೆಂಡ್ಕ-ಟಾಕ್ಸ್-ಊರಿಗೆ ಬಂದ ಕರೋನಾ, ರಾಜಕಾರಣಿಗಳ ರ್ಯಾಲಿಗೆ ಬರದೇ ಇರುತ್ತಾ??ರಾಜಕೀಯ ಪಕ್ಷಗಳಿಗೊಂದು ನ್ಯಾಯ,ಜನ ಸಾಮಾನ್ಯರಿಗೊಂದು ನ್ಯಾಯಅನ್ನೋಕೆ, ಕರೋನಾ ಏನು ರಾಜಕಾರಣಿನಾ?-ಏನೇ ಆಗ್ಲಿ, ಕರೋನಾದೇ ಒಂಥರಾ ಸಖತ್ ಲೈ- ವಾರದ ೫ ದಿನ ರಜ,ವೀಕೆಂಡಲ್ಲಿ ೨ ದಿನ ಮಾತ್ರ ಕೆಲ್ಸ.?ಇಸ್ಪೀಟ್ ಕಾರ್ಡ್ ಗಳನ್ನು ರಾಶಿ ಹಾಕಿ, ಅದರಲ್ಲಿ ಒಂದನ್ನು ಎತ್ತಿಕೋ ಅಂತಹೇಳೋದು-ಎಲೆಕ್ಷನ್?ವಯಸ್ಸಾದ ಸಕ್ಕೂಬಾಯಿಯನ್ನು ಏನಂತಾರೆ ?-ಸುಕ್ಕೂ ಬಾಯಿ?ಮಠ ಗುರು ಪ್ರಸಾದ್ ಅವರ ಜೊತೆ ಕೆಲಸ ಮಾಡಿದ ಅಸಿಸ್ಟೆಂಟ್ ಡೈರೆಕ್ಟರ್ ಗಳಕನಸು-ಗುರುಥರ ಸಾಧನೆ ಮಾಡಬೇಕು ಅನ್ನೋದು?ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವವನು-ರೋಲ್ ಮಾಡೆಲ್?ಜೈಲಲ್ಲಿ ನೇಣಿಗೇರಿಸುವ ಕೆಲಸ ಮಾಡುವವನದು-ಉರುಳು ಸೇವೆ?ಕುಡಿದು ಹೈ ಆಗಿರುವವರ ಹಾಡು-ಇಳಿಸು ಬಾ, ತಾಯಿ ಇಳಿಸು ಬಾ?ಪುಷ್ಪ ಚಿತ್ರದಿಂದ ಬಂದ ಲಾಭದಲ್ಲಿ ಅಲ್ಲು ಅರ್ಜುನ್ ಒಂದು ವಿಮಾನತಗೊಂಡ್ರೆ ಅದು-ಪುಷ್ಪ ಕಾ ವಿಮಾನ