ಚಿಲ್ಲರೆ ಬುದ್ದಿಯೂ ಐನ್‌ಸ್ಟೈನ್‌ ಹೆಂಡತಿಯ ಮಾತೂ
ಪರಿಶ್ರಮ
ಪ್ರಜ್ವಲ್‌ ಈಶ್ವರ‍್
@.
ಕನಿಡೆನ್ಸ್ ಬೆಳೆಸಿಕೊಳ್ಳ ಬೇಕಾಗಿರೋ ಏಜ್ ಅಲ್ಲೇ  ಬೆಳೆಸಿಕೊಳ್ಳಿ ಇಲ್ಲ ಅಂದ್ರೆ ಕನ್ಯೂಷನ್ ಡಾಮಿನೇಟ್ ಮಾಡಿ ಕ್ರಿಯೇಟಿವಿಟಿ ಸೈಡ್ ಟ್ರ್ಯಾಕ್ ಆಗಿ, ಕಷ್ಟ ಅನ್ನೋದು ಎಂಟ್ರಿಗೆಬಂದು ಕಣ್ಣೀರು ಅನ್ನೋದು ಜೊತೆಯಾಗಿ, ಬೇಸರ ಅನ್ನೋದು ಪಾರ್ಟನರ್ ತರಹದ ಹತಾಶೆ ಅನ್ನೋದು ನಿಮ್ಮ ಲೈಫ್ ಪಾರ್ಟನರ್ ತರಹ ನಡೆದು ಬಿಡುತ್ತದೆ.
ಜೀವನ ಯಾತ್ರೆಯಲ್ಲಿ    ಇದ್ದೇ ಇರುತ್ತದೆ. ಕೆಲವು ಸಲ ಬೀಳುತ್ತೀವಿ, ಬಹಳಷ್ಟು ಜನ ಎದ್ದೇಳಕ್ಕೆ ಆಗದೆ ಬಿದ್ದೇ ಹೋಗುತ್ತಾರೆ. ಕೆಲವರುಎದ್ದೇಳುತ್ತಾರೆ. ಮೇಲೆ ಬರುತ್ತಾರೆ. ಕಷ್ಟದ ನಡುವೆ, ದರಿದ್ರದ ನಡುವೆ, ಅವಮಾನದ ನಡುವೆ, ತಾವೇನು ಅಂತ ಬೆಳೆದು ತೋರಿಸುತ್ತಾರೆ.  ಮಾಡ್ತಾರೆ ಅವರನ್ನ ಅವರು ಪ್ರೆಸೆಂಟ್ ಮಾಡ್ಕೋತಾರೆ. ಈ ಜಗತ್ತಿನಲ್ಲಿ ಎರಡು ತರಹದ ಮನುಷ್ಯರು ಇದ್ದಾರೆ. ಬ್ರಾಂಡೆಡ್ ಬಟ್ಟೆ ಹಾಕೋರು, ಅವರ ಹೆಸರನ್ನೇ ಬ್ರಾಂಡ್ ಮಾಡೋದು. ಈ ಜಗತ್ತಿನಲ್ಲಿ ಎರಡು ತರಹ ಜನ ಇದ್ದಾರೆ.
ಫಾಲೋವರ್ಸ್, ಲೀಡರ್ಸ್, ಚರಿತ್ರೆ ಓದುವವರು, ಚರಿತ್ರೆ ಬರೆಯುವವರು, ಚಪ್ಪಾಳೆ ತಟ್ಟೋರು, ಚಪ್ಪಾಳೆ ತಟ್ಟುವಂತೆ ಜನರನ್ನ ಮಾಡೋರು, ಅವರ ಕನಸಿ ಗೋಸ್ಕರ ದುಡಿಯೋರು, ಇನ್ನೊಬ್ಬರನ್ನ ಅವರ ಕನಸು ನನಸು ಮಾಡಿಕೊಳ್ಳಲು ಪರಿಶ್ರಮ ಪಡಿಸೋರು. ಜೀವನದಲ್ಲಿ ಒಂದು ನೆನಪಿಟ್ಟುಕೊಳ್ಳಿ ಡಿಯರ್ಸ್,ಜೀವನದಲ್ಲಿ ಏನೇ ಮಾಡಬೇಕೆಂದ್ರು ಒಂದು  ಇರಬೇಕು. ಚಿಕ್ಕ ಪುಟ್ಟ ವಿಚಾರಕ್ಕೆ ಎಡವಬಾರದು. ಕೋಪ ಬರುತ್ತೆ, ಕಣ್ಣೀರು ಬರುತ್ತೆ ಸಹನೆ ಕಳ್ಕೋತೀವಿ, ನನಗೆ ಯಾಕಪ್ಪ ಅನಿಸುತ್ತೆ, ನನಗೆ ಅವಮಾನ ಆಗೋಯ್ತು ಅನಿಸುತ್ತೆ, ಲೈಫ್ ಬೇಡ ಅನಿಸುತ್ತೆ. ಹೀಗೆಲ್ಲಾ ಅನಿಸುತ್ತೆ ಇದು ತಪ್ಪಲ್ಲ, ವಯೋ ಸಹಜ Butಇದರ ಆಚೆ ಯೋಚನೆ ಮಾಡೋದೆ ನಿಜವಾದ .
ಆಲ್ಬರ್ಟ್ ಐನ್ ಸ್ಟೈನ್. ಜಗತ್ತಿನ ಮೇಧಾವಿ ವಿಜ್ಞಾನಿ ಸಾಪೇಕ್ಷ ಸಿದ್ಧಾಂತವನ್ನ ಪ್ರಪಂಚಕ್ಕೆ ಕೊಟ್ಟು, ಇವತ್ತಿಗೂ ಮೋಸ್ಟ್ ಬ್ರಿಲಿಯಂಟ್ ಸೈಂಟಿಸ್ಟ್ ಎಂಬ ಪಟ್ಟವನ್ನ ಅಲಂಕರಿಸಿದಂತಹ ಧೀಮಂತ ವ್ಯಕ್ತಿ. ಒಂದು ತರಹದ ಆಲ್ಬರ್ಟ್ ಐನ್ ಸ್ಟೈನ್ ಲೈಫ್ ಅಲ್ಲೂ ಒಂದು ಚಿಕ್ಕ ಅವಮಾನ ಆಗುತ್ತೆ. ಅವರು ತುಂಬಾ ಡಿಸ್ಟರ್ಬ್ ಆಗುತ್ತಾರೆ. ಆದರೆ ಅದರ ಆಚೆ ಏನಾಗುತ್ತೆದೆ ಅದೇ ಕುತೂಹಲ. ಒಂದು ಸಲ ಆಲ್ಬರ್ಟ್ ಐನ್ ಸ್ಟೈನ್ ಯುನಿ ವರ್ಸಿಟಿಗೆ ಪಾಠ ಮಾಡೋಕೆ ಹೋಗಿರುತ್ತಾರೆ, ಬಸ್ ಹತ್ತಿ ಕಂಡಕ್ಟರ್‌ಗೆ ಹಣ ಕೊಡುತ್ತಾರೆ. ಟಿಕೆಟ್ ತೆಗೆದುಕೊಳ್ಳುತ್ತಾರೆ. ಕಂಡಕ್ಟರ್ ಟಿಕೆಟ್ ಕೊಟ್ಟು ಚಿಲ್ಲರೆ ವಾಪಸ್ಸು ಕೊಡುತ್ತಾನೆ.
ಆಗ ಆಲ್ಬರ್ಟ್ ಐನ್ ಸ್ಟೈನ್ ಕೇಳುತ್ತಾರೆ. ಕಂಡಕ್ಟರ್ ನನ್ನ ನೀನು ಚಿಲ್ಲರೆ ತಪ್ಪು ಕೊಟ್ಟಿದೀಯ ಅಂತ. ಆಗ ಕಂಡಕ್ಟರ್ ವಾಪಸು ಇಸ್ಕೊಂಡು ಲೆಕ್ಕ ಹಾಕಿ ಮತ್ತೆ ಕೊಡುತ್ತಾನೆ. ಇಲ್ಲ ಸರ್ ಚಿಲ್ಲರೆ ಕರೆಕ್ಟಾಗೆ ಇದೆ ಅಂತ ಮತ್ತೆ ಆಲ್ಬರ್ಟ್ ಐನ್ ಸ್ಟೈನ್ ಹೇಳ್ತಾನೆ. ಇಲ್ಲ ಇಲ್ಲ ನೀನು ತಪ್ಪು ಕೊಟ್ಟಿದಿಯ ಅಂತ ಐನ್ ಸ್ಟೈನ್ವಾದಿಸುತ್ತಾರೆ. ಚಿಲ್ಲರೆ ಕರೆಕ್ಟಾಗಿದೆ ಅಂತ ಕಂಡಕ್ಟರ್ ವಾದಿಸುತ್ತಾನೆ. ಆಲ್ಬರ್ಟ್ ಐನ್ ಸ್ಟೈನ್ ಕೊನೆಯದಾಗಿ ವಾದಿಸುತ್ತಾರೆ, ನೀನು ಚಿಲ್ಲರೆ ತಪ್ಪು ಕೊಟ್ಟಿದ್ದೀಯ ಇನ್ನೂ ಕೊಡು ನನಗೆ ಅಂತ. ಕಂಡಕ್ಟರ್ ಎಲ್ಲರನ್ನು ಮುಂದೆ ಹಾಕಿ ನೋಡಿಸಿ ಈತನಿಗೆ ನೊಬೆಲ್ ಪ್ರೈಸ್ ಕೊಟ್ಟೋನು ಯಾವನು, ಕರೆಕ್ಟಾಗಿ ಚಿಲ್ಲರೆ ಕಾಸು ಲೆಕ್ಕ ಹಾಕಕ್ಕೆ ಬರಲ್ಲ ಅಂತ ಬೈತಾನೆ.
ಸರಿ ಆಲ್ಬರ್ಟ್ ಐನ್ ಸ್ಟೈನ್ ರಿಯಾಕ್ಟ್ ಆಗಲ್ಲ. ಯೂನಿವರ್ಸಿಟಿಗೆ ಹೋಗ್ತಾರೆ. ಹಗಲೆಲ್ಲಾ ಕಾಲೇಜಿನಲ್ಲಿ ಇರಕ್ಕಾಗಲ್ಲ. ಊಟ ಮಾಡೋಕೆ ಆಗಲ್ಲ. ಏನೋ ಏನೋ ಕಳೆದುಕೊಂಡ ಭಾವನೆ. ಬೆಳಗ್ಗೆ ಅವಮಾನ ಆಗೋಯ್ತಲ್ಲ ಅನ್ನೋ ಪ್ರಶ್ನೆ. ಎಲ್ಲೂ ಇರುವುದಕ್ಕೆ ಆಗಲ್ಲ, ಊಟ ಮಾಡೋಕೆ ಆಗಲ್ಲ. ಸಂಜೆ ವಾಪಸು ಮನೆಗೆಬರುತ್ತಾರೆ. ಹೆಂಡತಿ ಹತ್ತಿರ ಬಂದು ನಿಂತುಕೊಳ್ಳುತ್ತಾರೆ. ಯಾಕೋ ಮುಖ ಸಪ್ಪೆಯಾಗಿರುತ್ತೆ. ಹೆಂಡತಿ ಬಂದು ಕೇಳುತ್ತಾಳೆ, ರೀ ಏನಾಯ್ತು ಅಂತ, ಏನೂ ಇಲ್ಲ ಚಿನ್ನ ಅಂತ  ಮಾಡುತ್ತಾರೆ. ಇಲ್ಲ ಹೇಳಿ ನನ್ನ ಹತ್ತಿರ ಶೇರ್ ಮಾಡಿ ಅಂತ, ಅವಾಗ ಐನ್‌ಸ್ಟೈನ್ ಹೇಳುತ್ತಾರೆ ಬೆಳಗ್ಗೆ ನಾನು ಹೀಗೆ ಬಸ್‌ನಲ್ಲಿ ಹೋಗು ವಾಗ ಚಿಲ್ಲರೆ ಸರಿಯಾಗಿ ಲೆಕ್ಕ ಹಾಕಿಲ್ಲ ಅಂತ ಕಂಡಕ್ಟರ್ ಅವಮಾನ ಮಾಡಿದ.
ನಿನಗೆ ಹೇಗೆ ನೊಬೆಲ್ ಪ್ರೈಸ್ ಬಂತು ಎಂದು ಲೇವಡಿ ಮಾಡಿದ ಅಂತ ಕೇಳಿದರು. ಆಗ ಹೆಂಡತಿ ಹೇಳುತ್ತಾಳೆ ರೀ ನೀವು ಚಿಲ್ಲರೆ ಕಾಸಿಗೆ ಆಸೆ ಪಟ್ಟಿದ್ದರೆ ನೊಬೆಲ್ ಪ್ರೈಸ್ ಬರುತ್ತಿರಲಿಲ್ಲ. ಚಿಲ್ಲರೆ ಆಸೆ ಪಡದೇ ಇರೋದಕ್ಕೆ ನಿಮಗೆ ನೊಬೆಲ್ ಪ್ರೈಸ್ ಬಂತು. ಈ ಕಥೆ ಉದ್ದೇಶ ಇಷ್ಟೇ ಡೀಯರ್ಸ್, ಕಾಲೇಜು ದಿನಗಳಲ್ಲಿ ಚಿಲ್ಲರೆ ಕೆಲಸ ಮಾಡೋಕೆ ಹೋಗುತ್ತೇವೆ. ಚಿಲ್ಲರೆ ಆಟ ಆಡುತ್ತೀವಿ. ಡಿಗ್ರಿಗೆ ಬಂದ ಮೇಲೆ ಚಿಲ್ಲರೆ ತಲೆಹರಟೆ ಮಾಡುತ್ತೀವಿ. ಚಿಲ್ಲರೆ ತುಂಟುತನ ಮಾಡು ತ್ತೀವಿ. ಬೆಳೆಯುತ್ತ ಬೆಳೆಯುತ್ತ ಪ್ರೊಫೆಷನ್‌ಗೆ ಬರ್ತೀವಿ. ಅಲ್ಲೂ ಚಿಲ್ಲರೆ ಬುದ್ಧಿ ಇರುತ್ತೆ. ಜೀವನದಲ್ಲಿ ಏನೋ ಆಗಿಹೋಗುತ್ತದೆ. ಕಾನಿಡೆನ್ಸ್ ಬೆಳೆಸಿಕೊಳ್ಳ ಬೇಕಾಗಿರೋ ಏಜ್‌ನಲ್ಲೇ  ಬೆಳೆಸಿಕೊಳ್ಳಿ.
ಇಲ್ಲ ಅಂದ್ರೆ ಕನ್ಯೂಷನ್ ಡಾಮಿನೇಟ್ ಮಾಡಿ ಕ್ರಿಯೇಟಿವಿಟಿ ಸೈಡ್ ಟ್ರ್ಯಾಕ್ ಆಗಿ, ಕಷ್ಟ ಅನ್ನೋದು ಎಂಟ್ರಿಗೆ ಬಂದು ಕಣ್ಣೀರು ಅನ್ನೋದು ಜೊತೆಯಾಗಿ, ಬೇಸರ ಅನ್ನೋದು ಪಾರ್ಟನರ್ ತರಹ ಆಗಿ, ಹತಾಶೆ ಅನ್ನೋದು ನಿಮ್ಮ ಲೈಫ್ ಪಾರ್ಟನರ್ ತರಹ ನಡೆದು ಬಿಡುತ್ತದೆ. ಬದುಕು ಬದಲಾಯಿಸಲು ಕೆಲ ಹಿತನುಡಿಗಳು ?ಭಗವದ್ಗೀತೆಯನ್ನ ಕೋರ್ಟ್‌ಗಳಲ್ಲಿ ಶಪಥವಿಧಿಗೆ ಉಪಯೋಗಿಸುತ್ತಾರೆ!. ಆದರೆ ಭಗವದ್ಗೀತೆಯನ್ನು ಶಾಲೆಯಲ್ಲಿ ಕಲಿಸುವುದಿಲ್ಲ! ಕಲಿಸಿದ್ದರೆ ಕೋರ್ಟ್‌ಗೆಹೋಗುವ ಅಗತ್ಯವಿರುತ್ತಿರಲಿಲ್ಲ . ?ಯಾರ ಮೇಲೂ ಹೆಚ್ಚು ಅವಲಂಬಿತರಾಗಬೇಡಿ, ನಿಮ್ಮ ಹೆಣ ಹೊರುವಾಗಲೂ ಜನ ಹೆಗಲು ಬದಲಿಸುತ್ತಾರೆ!
?ಬದುಕು ಕ್ರಿಕೆಟ್ ಇದ್ದಂತೆ. ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ… ನಮ್ಮ ಸೋಲಿಗಾಗಿಯೇ ಕಾದುಕುಳಿತಿರುತ್ತಾರೆ ಅನ್ನೋದು ಸತ್ಯ.?ಇರುವೆ ನಿಮ್ಮ ಕಾಲಿಗೆ ಕಚ್ಚಿತೆಂದು, ನೀವೂ ಅದರ ಕಾಲಿಗೆ ಕಚ್ಚಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ನೀವು ಯಾರನ್ನೂ ಕಡಿಮೆ ಎಂದು ಭಾವಿಸಬೇಡಿ. ಅವರು ಮಾಡುವುದನ್ನ ಬಹುಶಃ ನೀವು ಮಾಡಲಾರಿರಿ…
?ಸಿಟ್ಟು ಮಾಡಿಕೊಳ್ಳುವುದೆಂದರೆ – ನಾವು ವಿಷ ಕುಡಿದು ಇನ್ನೊಬ್ಬರು ಸಾಯಲಿ ಎಂದು ಹಾರೈಸಿದಂತೆ..?ಬದಲಾವಣೆ ಅನಿವಾರ್ಯ ಎನ್ನುವಷ್ಟು ದೊಡ್ಡ ಪೆಟ್ಟು ಬಿದ್ದಾಗ ಮಾತ್ರ ಮನುಷ್ಯ ಬದಲಾಗುತ್ತಾನೆ.
?ಅಗತ್ಯವಿದ್ದಾಗ ಮಾತ್ರ ಜನ ನೆನಪಿಸಿಕೊಳ್ಳುತ್ತಾರೆ ಎಂದು ಕೊರಗಬೇಡಿ ಕತ್ತಲು ಆವರಿಸದಾಗ ಮಾತ್ರ ಜನಕ್ಕೆ ಮೇಣದ ಬತ್ತಿಯ ಅವಶ್ಯಕತೆ ಇರುತ್ತದೆ.
?ವಂಚಕರಿಗೆ ಕಿರೀಟವಾಗುವುದಕ್ಕಿಂತ ಉತ್ತಮರಿಗೆ ಪಾದ ರಕ್ಷೆಯಾಗುವುದು ಮೇಲು.
?ಕಾಲೆಳೆಯುವವರ ನಾಯಕನಾಗುವುದಕ್ಕಿಂತ ಕೈ ಹಿಡಿದವರ ಸೇವಕನಾಗುವುದೇ ಮೇಲು…
? ಗೆದ್ದಾಗ ಚಪ್ಪಾಳೆ ಹೊಡೆಯುವ ಸ್ನೇಹಿತರನ್ನ ಮರೆತರೂ ಪರವಾಗಿಲ್ಲ, ಬಿದ್ದಾಗ ಕೈ ಹಿಡಿದು ಮೇಲೆತ್ತಿದವರನ್ನ ಮರೆಯಬಾರದು.