ಹಿಜಾಬ್‌ಗೆ ಏಕಿಲ್ಲ ಪ್ರಗತಿಪರರ ಜಾತ್ಯತೀತ ಜವಾಬ್ !?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ತಮ್ಮ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಸಿಕ್ಕರೆ ಸಾಕೆಂಬ ದೃಷ್ಟಿಯಲ್ಲಿ ಎಲ್ಲವನ್ನೂ ಒಪ್ಪಿಕೊಂಡು ಹೋಗುತ್ತಿರುವಾಗ ಹೀಗೆ ಉಡುಪಿಯ ಕಾಲೇಜಿನ ವಿದ್ಯಾರ್ಥಿಗಳು ಸಮಾನತೆಯ ನೀತಿಯ ವಿರುದ್ಧ ವರ್ತಿಸುತ್ತಿದ್ದರೂ ಜವಾಬ್ದಾರಿಯುತ ಸಮಾಜದಲ್ಲಿ ಯಾವ ಗಂಡುಗಲಿಯೂ ಅವರಿಗೆ ತಿಳಿ ಹೇಳುವ ಮಾನಸಿಕ ಸ್ಥಿತಿಯಲ್ಲಿಲ್ಲದಿ ರುವುದು ದುರದೃಷ್ಟಕರ.
ಊಹಿಸಿಕೊಳ್ಳಿ, ಬೆಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ನಾವುಗಳು ಇನ್ನು ಮುಂದೆ ಕೇಸರಿ ಶಾಲು, ಕೇಸರಿ ರುಮಾಲು ಧರಿಸಿಕೊಂಡೇ ತರಗತಿಗೆಬರುತ್ತೇವೆ. ಅದು ನಮ್ಮ ಸಂಪ್ರದಾಯ. ಅದಕ್ಕೆ ಅವಕಾಶ ನೀಡಲೇ ಬೇಕು ಎಂದು ಕೇವಲ ಒಂದು ದಿನ ಆಗ್ರಹಿ ಸಲಿ. ಆಗ ನೋಡಿ, ನೀತಿಗೆಟ್ಟ ರಾಜಕಾರಣಿಗಳು, ಬರಗೆಟ್ಟ ಬಕೆಟ್ ಸಾಹಿತಿಗಳು, ಹೊಟ್ಟೆಪಾಡಿನ ಸಂಘಟನೆ ಗಳು, ಪೋಸ್ಟ್‌ಪೇಯ್ಡ್ -ಪ್ರೀಪೇಯ್ಡ್ ಗಿರಾಕಿಗಳು, ಹಿಂಸಾತ್ಮಕ ನಟರು, ವಿಚಾರ ವ್ಯಾದಿಗಳು, ಲದ್ದಿ ಜೀವಿಗಳು ಸೇರಿದಂತೆ ಮಾಡಲು ಕೆಲಸವಿಲ್ಲದವರೆಲ್ಲ ಇದೇ ವಿಚಾರವನ್ನು ಮುಂದಿಟ್ಟುಕೊಂಡು ‘ಅಯ್ಯೋ, ಇದು ಮೋದಿಯ ಷಡ್ಯಂತ್ರ, ಕೋಮುವಾದಿಗಳ ಕುತಂತ್ರ, ಮನುವಾದಿಗಳ ತಂತ್ರ, ಆರ್ ಎಸ್‌ಎಸ್‌ನ ಅಜೆಂಡಾ, ಜಾತ್ಯತೀ ತತೆಯ ಅತ್ಯಾಚಾರ, ಸಂವಿಧಾನದ ಅಪಚಾರ, ಸಮಾನತೆಯ ಕಗ್ಗೊಲೆ, ಬಹು ಸಂಖ್ಯಾತ ಹಿಂದೂಗಳ ದರ್ಪ’ ಎಂದೆಲ್ಲ ಬಾಯಿಬಡಿದುಕೊಳ್ಳು ಶುರುವಿಟ್ಟುಕೊಳ್ಳುತ್ತಾರೆ.
ಇವರ ಹೇಳಿಕೆಗಳು ಟ್ವಿಟ್ಟರ್ ಹ್ಯಾಶ್‌ಟ್ಯಾಗ್‌ಗಳಾಗಿ ಬೀದಿ ಪ್ರತಿಭಟನೆಗಳು ನಡೆದು ಅಂತಾರಾಷ್ಟ್ರೀಯ ಸುದ್ದಿ ಯಾಗುವಂತೆ ಮಾಡಿಬಿಡುತ್ತಿದ್ದರು. ಆದರೆ, ಕಳೆದ ಇಪ್ಪತ್ತು ದಿನಗಳಿಂದ ಉಡುಪಿಯ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆರು ಮುಸ್ಲಿಂ ವಿದ್ಯಾರ್ಥಿನಿಯರು ಏಕಾಏಕಿ ತಮ್ಮ ಧರ್ಮದ ಹಿಜಾಬ್ ಧಾರ್ಮಿಕ ತೊಡುಗೆಯಲ್ಲೇ ತರಗತಿಗೆ ಅವಕಾಶ ನೀಡಬೇಕೆಂದು ಹಠಹಿಡಿದು ಕುಳಿತಿದ್ದಾರೆ. ಆಶ್ಚರ್ಯವೆಂದರೆ ಇದೇ ವಿದ್ಯಾರ್ಥಿನಿಯರು ಕಳೆದ ಒಂದೂವರೆ ವರ್ಷದಿಂದ ಮೊನ್ನೆಯವರೆಗೂ ಕಾಲೇಜಿನ ನಿಗದಿತ ಸಮವಸ್ತ್ರದಲ್ಲೇ ತರಗತಿಯಲ್ಲಿ ಪಾಲ್ಗೊಂಡಿದ್ದಾರೆ.
ಸಂಪೂರ್ಣ ಮಹಿಳಾ ಕಾಲೇಜಾಗಿದ್ದರೂ ಪುರುಷ ಶಿಕ್ಷಕರ ಕಾರಣವನ್ನೂ ನೀಡಿ ಇಪ್ಪತ್ತು ದಿನಗಳಿಂದಷ್ಟೇ ಇಂಥ ಬೇಡಿಕೆಗೆ ಆಗ್ರಹಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಪೋಷಕರೊಂದಿಗಿನ ಸಂಧಾನವೂ ವಿಫಲವಾಗಿದೆ. ಧರ್ಮಗಳನ್ನೂ ಮೀರಿ ಶಿಕ್ಷಣ ಪಡೆಯುವುದಕ್ಕಾಗಿಯೇ ಶಿಕ್ಷಣಕ್ಷೇತ್ರದಲ್ಲಿ ಸಮವಸ್ತ್ರವೆಂಬ ಸಮಾನತೆಯ ನೀತಿಯಿದೆ. ಆದರೆ, ಅದನ್ನು ಧಿಕ್ಕರಿಸಿ ಹೀಗೆ ಸಮಾನ ಶಿಕ್ಷಣದಲ್ಲಿ ಧರ್ಮವನ್ನು ಬೆರೆಸುತ್ತಿರುವುದು ತಪ್ಪೆಂದು ಯಾವ ಪುಣ್ಯಾತ್ಮನೂ ವಿದ್ಯಾರ್ಥಿನಿ ಯರಿಗಾಗಲಿ ಅವರ ಪೋಷಕರಿಗಾಗಲಿ ತಿಳಿಹೇಳುವ ಕನಿಷ್ಠ ಪ್ರಜ್ಞೆ ತೋರದಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಯಶಪಾಲ್ ಅವರೇ ಹೇಳಿದಂತೆ ಕಳೆದ ಒಂದೂವರೆ ವರ್ಷದಿಂದ ಇಲ್ಲದ ಇಂಥ ಬೇಡಿಕೆ, ಇಂದು ಕೇವಲ ಆರುವಿದ್ಯಾರ್ಥಿನಿಯರಿಂದ ಬಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ‘ಕಾಲೇಜಿನ ಶಿಕ್ಷಣದ ಗುಣಮಟ್ಟದಲ್ಲೇನಾದರು ಕೊರತೆಯಾದರೆ ನಾವುಗಳು ಸರಿಪಡಿಸುತ್ತೇವೆ. ಆದರೆ ಆರು ವಿದ್ಯಾರ್ಥಿಗಳಿಗಾಗಿ ಇಡೀ ಶಿಕ್ಷಣನೀತಿಯನ್ನು ಬದಲಾಯಿಸುವುದು ಹೇಗೆ ಸಾಧ್ಯ?’ ಎನ್ನುತ್ತಾರೆ. ಇಂಥ ಬೆಳವಣಿಗೆಯ ಹಿಂದಿನ ಉದ್ದೇಶವೇನೆಂಬುದನ್ನು ಅರಿಯಲು ಹೊರಟರೆ ಧರ್ಮಾಧಾರಿತ ರಾಜಕೀಯದ ಸಂಚು ಗೋಚರಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಈ ವಿಚಾರವಾಗಿ ಯಾವೊಬ್ಬ ರಾಜಕಾರಣಿಯೂ ಮತ್ತು ಮೇಲೆ ಹೇಳಿದಂಥ ಡೋಂಗಿ ಗಿರಾಕಿಗಳಾರೂ ಇದನ್ನು ಖಂಡಿಸಿ ಹೇಳಿಕೆಯನ್ನು ನೀಡಿಲ್ಲ.
ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಮವಸ ಪಾಲನೆಯು ಸಂವಿಧಾನದ ಮಹತ್ತರ ಆಶಯವೆಂಬುದು ಅರಿವಿದ್ದರೂ ಇಂಥ ಘಟನೆಗಳನ್ನು ತಮಗಿರುವ ರಾಜಕಾರಣದ ಮುತ್ಸದ್ಧಿತನದಿಂದ ಖಂಡಿಸಿ ಸದರಿ ವಿದ್ಯಾರ್ಥಿನಿಯರಿಗೆ ವ್ಯವಸ್ಥೆಯನ್ನು ಮೀರಿದ ಅಂಥ ಅವಕಾಶ ನೀಡಬಾರದು ಎಂಬ ಒಂದು ಹೊಣೆಗಾರಿಕೆ ಯುಳ್ಳ ಹೇಳಿಕೆಯನ್ನೂ ನೀಡಿಲ್ಲ. ಆದರೆ ಕಳೆದ ವರ್ಷ ವಿಜಯಪುರದ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಆಯುಧ ಪೂಜೆಯ ಸಂಭ್ರಮದಲ್ಲಿ ಕೇಸರಿ ಶಾಲು, ಬಿಳಿ ಟೊಪಿ, ಕುರ್ತಾ ಪೈಜಾಮ ಧರಿಸಿ ಸಾಮೂಹಿಕವಾಗಿ ಪೋಟೊ ತೆಗೆಸಿಕೊಂಡಿದ್ದಕ್ಕೆ ಇದೇ ಡೋಂಗಿಗಳು ಅದನ್ನು ದೊಡ್ಡ ಮಟ್ಟದಲ್ಲಿ ಖಂಡಿಸಿ ಹೇಳಿಕೆಗಳನ್ನು ನೀಡಿದ್ದರು.
ಪೊಲೀಸ್ ಸಮವಸ್ತ್ರ ಬದಲಾಗಿದೆಯೇ? ಕೇಸರಿ ಧರಿಸಿರುವುದು ಪೂರ್ವನಿಯೋಜಿತವೇ? ಎಂದೆಲ್ಲ ಪ್ರಶ್ನಿಸಿದ್ದರು. ಅದೇ ರೀತಿ ಈಗಲೂ ಹಿಜಾಬ್‌ಗಾಗಿ ಆಗ್ರಹಿಸು ತ್ತಿರುವ ವಿದ್ಯಾರ್ಥಿ ನಿಯರನ್ನು ತರಾಟೆಗೆ ತೆಗೆದುಕೊಂಡು, ‘ನೋಡ್ರಮ್ಮಾ, ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೀಗೆ ಧಾರ್ಮಿಕ ಹಕ್ಕನ್ನು ಕೇಳಬಾರದು ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ಬೇಡ್ರಮ್ಮಾ ಮೊದಲು ಹಿಜಾಬ್ ಅನ್ನು ಮನೆಯಲ್ಲಿಟ್ಟು ಕಾಲೇಜಿನ ನೀತಿಯನ್ನು ಪಾಲಿಸ್ರಮ್ಮ’ ಎಂದು ಹೇಳಬಹುದಲ್ಲವೇ?ಇದುವರೆಗೂ ಅನೇಕ ಪರಿಜ್ಞಾನರಹಿತ ಹಿಂದೂಗಳಿಗೆ ಅರಿವಿಗೇ ಬಾರದ ವಿಚಾರಗಳೆಂದರೆ ಕಾನ್ವೆಂಟ್ ಶಾಲೆಗಳಲ್ಲಿ ಹೆಣ್ಣುಮಕ್ಕಳು ಜಡೆ ಹಾಕಬಾರದು, ಹೂವು ಮುಡಿಯ ಬಾರದು, ಹಣೆಗೆ ಕುಂಕುಮವಿಡಬಾರದು, ಕೈಗೆ ಬಳೆಗಳನ್ನು ತೊಡಬಾರದು, ಕಾಲಿಗೆ ಗೆಜ್ಜೆ ಧರಿಸಬಾರದು, ಸಮವಸ್ತ್ರದಲಂಗ ಮಂಡಿ ಕಾಣು ವಂತಿರಬೇಕು ಎಂಬ ಕಟ್ಟುಪಾಡುಗಳನ್ನು ವಿಽಸುತ್ತ ಬಂದರೂ ಅದನ್ನು ಪ್ರತಿಷ್ಠೆ ಎಂಬಂತೆ ಈಗಲೂ ಪಾಲಿಸಿಕೊಂಡು ಬರಲಾಗಿದೆ. ಪೋಷಕರು ಎಂಥಅವೈಜ್ಞಾನಿಕವನ್ನೂ ಒಪ್ಪಿ ಪಾಲಿಸಿಕೊಂಡು ಬರುತ್ತಿದ್ದಾರೆಂಬುದಕ್ಕೆ ಉದಾಹರಣೆ ನೋಡಿ.
ಇಂಗ್ಲೆಂಡಿನಲ್ಲಿ ಸದಾ ಹಿಮ ಮತ್ತು ಚಳಿ ಇರುವುದರಿಂದ ಅಲ್ಲಿ ಶಾಲೆಗಳಿಗೆ ಬೆಚ್ಚನೆಯ ಕೋಟ್‌ನ್ನು ಧರಿಸಿಕೊಳ್ಳುವ ಅನಿವಾರ್ಯವಿದೆ. ಅದು ಚಳಿಗೋ ಅಥವಾ ಆ ದೇಶದ ಪ್ರತಿಷ್ಠೆಗೋ ಅದು ಬೇರೆ ವಿಚಾರ. ಆದರೆ ಇಲ್ಲಿನ ಮಕ್ಕಳು ಸುಡುಬೇಸಿಗೆಯ ಕಾಲದಲ್ಲೂ ಕೋಟು ಧರಿಸಿಕೊಂಡು ಹೋಗುವುದಿದೆಯಲ್ಲ ಅದೆಂಥಾಹಿಂಸೆಯ ಸಮವಸ ನಿಯಮ ಎಂಬುದರ ಬಗ್ಗೆ ಪೋಷಕರು ಯೋಚಿಸದೆ ಬಲವಂತವಾಗಿ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಖಾಸಗಿ ಶಾಲೆಯೋ ಸರಕಾರಿ ಶಾಲೆಯೋ ಒಟ್ಟಿನಲ್ಲಿ ತಮ್ಮ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಸಿಕ್ಕರೆ ಸಾಕೆಂಬ ದೃಷ್ಟಿಯಲ್ಲಿ ಎಲ್ಲವನ್ನೂ ಒಪ್ಪಿಕೊಂಡು ಹೋಗುತ್ತಿರುವಾಗ ಹೀಗೆ ಉಡುಪಿಯ ಕಾಲೇಜಿನ ವಿದ್ಯಾರ್ಥಿಗಳು ಸಮಾನತೆಯ ನೀತಿಯ ವಿರುದ್ಧ ವರ್ತಿಸುತ್ತಿದ್ದರೂ ಜವಾಬ್ದಾರಿಯುತ ಸಮಾಜದಲ್ಲಿ ಯಾವ ಗಂಡುಗಲಿಯೂ ಅವರಿಗೆ ತಿಳಿಹೇಳುವ ಮಾನಸಿಕ ಸ್ಥಿತಿಯಲ್ಲಿಲ್ಲದಿರುವುದು ದುರದೃಷ್ಟಕರ.
ಇವರದ್ದೇನಿದ್ದರೂ ಹಿಂದೂಗಳ ಮತ್ತು ಅವರ ಸಂಸ್ಕೃತಿಯ ವಿರುದ್ಧವೇ ಹೊರತು ನೈಜ ಜಾತ್ಯತೀತ ಮತ್ತು ಸಮಾನತೆಯ ರಕ್ಷಣೆಯಲ್ಲವೇ ಅಲ್ಲ. ಹೇಳಿಕೇಳಿ ಮಂಗಳೂರು ಕೋಮು ಸಂಘರ್ಷದ ಸೂಕ್ಷ್ಮ ಪ್ರದೇಶ. ಅಲ್ಲಿ ಈಗಾಗಲೇ ಅನೇಕ ಗಲಭೆಗಳು, ಸಂಘರ್ಷಗಳು, ಕೊಲೆಗಳು, ಗೋಲಿಬಾರುಗಳು ನಡೆದುಹೋಗಿವೆ.ವಿದ್ಯಾರ್ಥಿಗಳ ಮಟ್ಟದಲ್ಲೇ ಕೋಮು ದ್ವೇಷವನ್ನು ಬಿತ್ತುವ ಪಿತೂರಿ ನಡೆಯುತ್ತಿದೆ. ಈಗಿನ ಆರು ವಿದ್ಯಾರ್ಥಿನಿಯ ಬೇಡಿಕೆಯ ವಿಚಾರವಾಗಿ ಜವಾಬ್ದಾರಿಯುತ ಪುಢಾರಿಗಳೂ ಮುಂದೆ ಬಂದು ಸಾಮಾಜಿಕ ಸಮಾನತೆ, ಸೌಹಾರ್ದ ರಕ್ಷಿಸುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ತರಗತಿಯಿಂದ ಹೊರಗೆ ಕೂತು ಕಲಿಯುವ ನಾಟಕ ಹೆಚ್ಚಾಗಿ ಅದು ಪರೋಕ್ಷವಾಗಿ ಮುಸ್ಲಿಂ ಸಂಘಟನೆಗಳ ಅನುಕಂಪ ಗಿಟ್ಟಿಸಿಕೊಳ್ಳುತ್ತದೆ.
ಅದರಿಂದ ಧಾರ್ಮಿಕ ಸೌಹಾರ್ದಕ್ಕೆ ದಕ್ಕೆಯಾಗಿ ಎರಡು ಕೋಮಗಳ ನಡುವಿನ ಪ್ರತಿಷ್ಠೆಯ ವಿಚಾರವಾಗಿ ಬದಲಾಗುವ ಅಪಾಯವಿದೆ. ಈಗಾಗಲೇ ಐವತ್ತುಸಾವಿರಕ್ಕೂ ಹೆಚ್ಚು ಟ್ವೀಟುಗಳಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಸುದ್ದಿಯಾಗಿದೆ. ಇನ್ನು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿಅಪಪ್ರಚಾರ ಮಾಡಿ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಮಸಿಬಳಿಯುವಂತೆ ಮಾಡಿ ದೇಶದ ಘನತೆಯನ್ನು ಹಾಳು ಮಾಡುವಷ್ಟು ವ್ಯವಸ್ಥಿತ ಸಂಚಿಗೆ ಇದು ಖಂಡಿತಾ ಎಡೆ ಮಾಡಿಕೊಡುತ್ತದೆ. ನಮ್ಮ ದೇಶದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಸಮಾನತೆ ಕಾಪಾಡುವ ವಸಸಂಹಿತೆ ಇದೆ.
ಸಾರ್ವಜನಿಕ ಸೇವೆಗಾಗಿ ಚಾಲಕರಿಂದ ಹಿಡಿದು ಪೊಲೀಸರವರೆಗೂ ಖಾಕಿ ಸಮವಸ್ತ್ರವಿದೆ. ಅದನ್ನು ಬಿಟ್ಟು ನಮ್ಮ ಧರ್ಮದ ಸಂಪ್ರದಾಯವೆಂದು ಹೇಳಿ ರೇಷ್ಮೆ ಪಂಚೆ, ಜುಬ್ಬಾ, ಮೈಸೂರು ಪೇಟ ತೊಡುತ್ತೇವೆ. ಮೈಸೂರು ಸಿಲ್ಕ ಕಾಂಚಿಪುರಂ ಸೀರೆಯುಟ್ಟು ನಿತ್ಯ ಪೊಲೀಸ್ ಡ್ಯೂಟಿ ಮಾಡುತ್ತೇನೆಂದರೆ ನಡೆಯುವುದಿಲ್ಲ. ಹಾಗೆಯೇ ನಮ್ಮ ಧಾರ್ಮಿಕ ಹಕ್ಕು ಎಂದು ಹೇಳಿ ತಾಲಿಬಾನ್ ಶೈಲಿಯಲ್ಲಿ ಉಡುಗೆ ತೊಟ್ಟು ಹಿಜಾಬ್ ಬುರ್ಕಾ ಧರಿಸಿ ಪೊಲೀಸ್ ಡ್ಯೂಟಿ ಮಾಡುತ್ತೇನೆಂದರೂ ನಡೆಯುವುದಿಲ್ಲ. ಹೀಗೆಲ್ಲ ಆಗಬಾರದೆಂದೇ ನಮ್ಮ ಪ್ರಜಾಪ್ರಭುತ್ವಕ್ಕೆ ಸಂವಿಧಾನವೆಂಬ ಸಮಾನತೆಯ ಚೌಕಟ್ಟು ಸ್ಥಾಪನೆಗೊಂಡಿದೆ. ಅದನ್ನು ಪ್ರತಿಯೊಬ್ಬರೂ ಗೌರವಿಸಿ ನಡೆದುಕೊಳ್ಳಬೇಕಿದೆ. ಈಗ ನೋಡಿ ಹಿಜಬ್ ಬೇಡಿಕೆಗೆ ಸಮನಾಗಿ ಹಿಂದೂ ವಿದ್ಯಾರ್ಥಿನಿಯರು ಕೇಸರಿ ದುಪಟ್ಟಾ ಧರಿಸುವುದಾಗಿ ಸವಾಲೆಸೆದಿದ್ದಾರೆ.
ಆದರೆ ಹಿಜಾಬ್‌ಗಿಂತ ಈ ವಿದ್ಯಾರ್ಥಿನಿಯರೇ ಮೊದಲು ಇಂಥ ಬೇಡಿಕೆಯನ್ನಿಟ್ಟಿದ್ದರೆ ಸುಮ್ಮನಿರುತಿದ್ದರೆ? ಹಿಂದೂಗಳು ತಪ್ಪೆಸಗಿದರೆ ಅವರಿಗೆ ತಿವಿಯಲುನೂರಾರು ಅಪ್ಪಂದಿರು. ಆದರೆ ಅನ್ಯ ಧರ್ಮದವರು ತಪ್ಪೆಸಗಿದರೆ ಅವರನ್ನು ತಬ್ಬಲಿಯನ್ನಾಗಿಸಿ ಇವರೆಲ್ಲ ಮೂರನ್ನೂ (ಕಣ್ಣು-ಕಿವಿ-ಬಾಯಿ) ಮುಚ್ಚಿಕೊಂಡಿರುತ್ತಾರೆ. ಇದ್ಯಾವ ಸೀಮೆಯ ಜಾತ್ಯತೀತತೆ? ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಬಹುಸಂಖ್ಯಾತ ಹಿಂದೂ ಮಕ್ಕಳು ಸಂಸ್ಕೃತ ವೇದ-ಉಪನಿಷತ್ತು-ಭಗವದ್ಗೀತೆ ಯನ್ನು ಕಲಿತರೆ ಅದು ಕೇಸರೀಕರಣವೆಂದು ಎದೆಬಡಿದುಕೊಳ್ಳುವ ಗಂಜಿಗಿರಾಕಿಗಳ ಸಮೂಹವೇ ಇದೆ.
ಆದರೆ ಹೀಗೆ ಹಿಜಾಬ್ ಹಕ್ಕನ್ನು ಪ್ರತಿಪಾದಿಸುವ ವಿದ್ಯಾರ್ಥಿಗಳಿಗಾಗಿಯೇ ವೈಯಕ್ತಿಕ ಧಾರ್ಮಿಕ ಶಿಕ್ಷಣದ ಮದರಾಸಗಳಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಮುಸ್ಲಿಂ ಮಕ್ಕಳಿಗೆ ಅವರದೇ ಆದ ಭಾಷಾ ಮತ್ತು ಧರ್ಮಾಧಾರಿತ ಶಿಕ್ಷಣವನ್ನು ಕಲಿಯುವ ಸ್ವಾತಂತ್ರ್ಯವಿದೆ. ಜತೆಗೆ ವೋಟ್‌ಬ್ಯಾಂಕ್ ರಾಜಕಾರಣವೆಂಬ ಅಸಮಾನತೆಯ ಮಮತೆ ಇದೆ. ಆದ್ದರಿಂದ ಹೊಣೆಗಾರಿಕೆ ಯುಳ್ಳ ರಾಜಕಾರಣಿಗಳು, ಸಾಮಾಜಿಕ ಬದ್ಧತೆಯುಳ್ಳ ಸಂಘಟನೆಗಳು ಕೂಡಲೇ ಇಂಥ ವಿಚಾರಗಳನ್ನು ನಿಭಾಯಿಸಿಜಿಲ್ಲೆಯಲ್ಲಿ ನೈಜ ಕೋಮಸೌಹಾರ್ದ ರಕ್ಷಿಸುವ ಕೆಲಸ ಆಗಬೇಕಿದೆ. ಹಾಗೆಯೇ ಮುಸ್ಲಿಂ ಬಾಂಧವರು ಸಹ ಯಾರ ಸಂಚು- ಕುತಂತ್ರಗಳಿಗೆ ಒಳಗಾಗದೇ ತಮ್ಮ ಮಕ್ಕಳ ಶಿಕ್ಷಣ ಭವಿಷ್ಯವನ್ನು ರೂಪಿಸಲು ಸ್ವತಂತ್ರರಾಗಿ ನಿಲ್ಲುವಂತಾಗಲಿ.