ಇಂದು ಹಿಜಾಬ್; ನಾಳೆ ಬುರ್ಖಾ !
ವೀಕೆಂಡ್ ವಿತ್‌  ಮೋಹನ್
ಮೋಹನ್ ವಿಶ್ವ
@.
ಶಾಲೆಯೆಂಬುದು ‘ಸರ್ವ ಜನಾಂಗದ ಶಾಂತಿಯ ತೋಟ’. ಈ ತೋಟದಲ್ಲಿ ಸರ್ವ ಜನಾಂಗದವರೂ ಒಂದೇ ಸೂರಿನಡಿಯಲ್ಲಿ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆಯುತ್ತ, ವಿದ್ಯಾ ಪಾರಾಯಣ ಮಾಡುತ ಭವಿಷ್ಯದ ಬದುಕಿನ ಕನಸನ್ನು ಈಡೇರಿಸುವೆಡೆಗೆ ಮಗ್ನರಾಗಿರುತ್ತಾರೆ.
ಬಡವ, ಸಾಹುಕಾರ, ಹಿಂದೂ ,ಮುಸ್ಲಿಂ, ಕ್ರಿಶ್ಚಿಯನ್ ಧರ್ಮವೆಂಬ ಭೇದವಿಲ್ಲದೆ ಎಲ್ಲರೊಳಗೂಡಿ ಕಲಿಯುವ ದೇವಸ್ಥಾನವಿದು. ಶಾಲೆಯ ಪರಿಕಲ್ಪನೆಯೇ ಹಾಗಿದೆ. ಇಂಥ ಶಾಲೆಗಳಲ್ಲಿ ಸಮವಸವೆಂಬುದು ಸಮಾಜದಲ್ಲಿ ವಿದ್ಯಾರ್ಥಿಯನ್ನು ಪ್ರತಿನಿಧಿಸುವ ಪ್ರಮುಖ ‘ಐಡೆಂಟಿಟಿ’. ಶಾಲಾ- ಕಾಲೇಜುಗಳಲ್ಲಿನ ಆಡಳಿತ ಮಂಡಳಿಯು ತನ್ನ ವಿದ್ಯಾರ್ಥಿಗಳು ಬಳಸಬಹುದಾದ ಸಮವಸದ ಬಗ್ಗೆ ನಿರ್ಧರಿಸುತ್ತವೆ. ಸಮವಸದ ಜತೆಗೆ ಶಾಲಾ ಕಾಲೇಜಿನ ಆವರಣದೊಳಗೆ ವಿದ್ಯಾರ್ಥಿ ಗಳು ನಡೆದುಕೊಳ್ಳಬೇಕಾದಂತಹ ರೀತಿ ನೀತಿಗಳ ಬಗ್ಗೆಯೂ ಆಡಳಿತ ಮಂಡಳಿ ನಿರ್ಧರಿಸುತ್ತದೆ.
ಆಡಳಿತ ಮಂಡಳಿಯು ಶಾಲಾ ಕಾಲೇಜಿನ ಅವರಣದೊಳಗಿನ ಶಿಸ್ತಿಗೆ ಅತಿ ಹೆಚ್ಚು ಪ್ರಾಮುಖ್ಯ ನೀಡುತ್ತವೆ. ಕಾರಣ ಅಲ್ಲಿನ ಶಿಸ್ತಿನ ನಿಯಮಗಳು ವಿಧ್ಯಾರ್ಥಿಯು ಪ್ರತಿನಿಧಿಸುವ ಶಾಲೆಯ ಮೇಲೆ ಸಮಾಜದಲ್ಲಿ ನೇರ ಪರಿಣಾಮ ಬೀರುತ್ತದೆ. ಉಡುಪಿ ಜಿಲ್ಲೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಸಲ್ಮಾನ್ ವಿದ್ಯಾರ್ಥಿನಿ ಯರು ‘ಹಿಜಬ’ ಧರಿಸಿ ಶಾಲೆಯೊಳಗೆ ಬರುವುದರ ಬಗ್ಗೆ ಬಹುದೊಡ್ಡ ಮಟ್ಟದಲ್ಲಿ ಚರ್ಚೆ ಯಾಗುತ್ತಿದೆ. ಮೊದಮೊದಲು ಸಣ್ಣದಾಗಿ ಕಂಡ ಈ ಚರ್ಚೆ ದಿನೇ ದಿನೇ ರಾಜಕೀಯ ತಿರುವುಗಳನ್ನು ಪಡೆಯುತ್ತಿದೆ.
ಆರು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ಕರಾವಳಿ ಭಾಗದಲ್ಲಿ ಕೋಮುಸೌಹಾರ್ದ ಹಾಳುಗೆಡವುವ ಹುನ್ನಾರ ಗಳು ನಡೆಯುತ್ತಿವೆ. ನಿನ್ನೆ ಮೊನ್ನೆಯವರೆಗೂ ಹಿಜಬ್ ಇಲ್ಲದೆಯೇ ಕಾಲೇಜಿಗೆ ಬರುತ್ತಿದ್ದಂತಹ ವಿದ್ಯಾರ್ಥಿನಿಯರು ಇದ್ದಕ್ಕಿದ್ದ ಹಾಗೆ ತಮ್ಮ ಮನಸ್ಸು ಬದಲಾಯಿಸಿ ‘ಹಿಜಬ’ ಇಲ್ಲದೇ ಶಾಲೆಯೊಳಗೆ ಬರುವುದಿಲ್ಲವೆಂದು ಹಠವಿಡಿದುಕೊಂಡು ಕುಳಿತಿದ್ದಾರೆ. ಕಾಂಗ್ರೆಸಿನ ವಿದ್ಯಾರ್ಥಿ ಘಟಕ ’’ ಇವರ ಪರವಾಗಿ ನಿಂತು ಶಾಲೆಯ ಆಡಳಿತ ಮಂಡಳಿಗೆ ಪತ್ರವನ್ನು ಬರೆಯುತ್ತದೆ. ಕರಾವಳಿ ಭಾಗದಲ್ಲಿ ಗಲಭೆಗಳಿಗೆ ಹೆಸರುವಾಸಿಯಾಗಿರುವ ‘’’ ಹಾಗು ‘’’ ಬೆಂಬಲಿತ ಸಂಘಟನೆ ವಿದ್ಯಾರ್ಥಿನಿಯರ ಪರವಾಗಿ ನಿಲ್ಲುತ್ತದೆ.
ಆಡಳಿತ ಮಂಡಳಿಯ ವಿರುದ್ಧ ನ್ಯಾಯಾಲಯದಲ್ಲಿ ‘ರಿಟ್ ಅರ್ಜಿ’ ಸಲ್ಲಿಸಲು ಈ ಸಂಘಟನೆಗಳು ಮುಂದಾಗಿವೆ. ಕೇರಳದಲ್ಲಿ ಕಳೆದ ವಾರ ಇದೇ ರೀತಿಯ ಘಟನೆ ಯೊಂದು ನಡೆದಿದೆ. ಅಲ್ಲಿನ ಕಮ್ಯುನಿಸ್ಟ್ ಸರಕಾರ, ವಿದ್ಯಾರ್ಥಿನಿಯರು ಶಾಲೆಯ ಆಡಳಿತ ಮಂಡಳಿ ಸೂಚಿಸಿರುವ ಉಡುಗೆಯನ್ನು ಮಾತ್ರ ಹಾಕಿಕೊಂಡು ಬರಬೇಕು ‘ಹಿಜಬ್’ಧರಿಸುವ ಹಾಗಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಕೇರಳದಲ್ಲಿ ಪ್ರತಿ ಪಕ್ಷದಲ್ಲಿರುವ ಕಾಂಗ್ರೆಸ್ ಅಲ್ಲಿನ ಕಮ್ಯುನಿಸ್ಟ್ ಸರಕಾರದ ವಿರುದ್ಧ ತಮ್ಮ ಬಾಲಂಗೋಚಿಗಳನ್ನು ಮಾತನಾಡಲು ಬಿಟ್ಟಿಲ್ಲ. ಆದರೆ, ಉಡುಪಿಯ ಪ್ರಕರಣದಲ್ಲಿ ಮಾತ್ರ ತಮ್ಮ ಬಾಲಂಗೋಚಿಗಳನ್ನು ಮುನ್ನೆಲೆಗೆ ಬಿಟ್ಟಿದೆ. ಹಣೆಗೆ ಬಟ್ಟಿಟ್ಟು ಕೊಂಡರೆ ವಿದ್ಯಾರ್ಥಿನಿಯ ಮುಖವೇನು ಮುಚ್ಚಿಹೋಗು ವುದಿಲ್ಲವಲ್ಲ? ಮೂಗಿಗೆ ಬಟ್ಟಿಟ್ಟುಕೊಂಡರೆ ವಿದ್ಯಾರ್ಥಿನಿಯ ಮುಖವೇನು ಮುಚ್ಚಿ ಹೋಗುವುದಿಲ್ಲವಲ್ಲ? ಮುಡಿಯಲ್ಲಿ ಹೂವು ಮೂಡಿದರೆ ವಿದ್ಯಾರ್ಥಿನಿಯ ಮುಖವೇನು ಮುಚ್ಚಿಹೋಗುವುದಿಲ್ಲವಲ್ಲ? ಮುಸಲ್ಮಾನ್ ಹೆಣ್ಣು ಮಕ್ಕಳು ಧರಿಸುವ ‘ಸಂಪೂರ್ಣ ಹಿಜಬ’ನ ಭಾಗವೇ ‘ಬುರ್ಖಾ’.
ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಸಂಪೂರ್ಣ ಹಿಜಬ್ ಧರಿಸಿದರೆ ಪಾಠ ಹೇಳುವ ಶಿಕ್ಷಕರಿಗೆ ವಿದ್ಯಾರ್ಥಿನಿಯ ಗುರುತಾದರು ಪತ್ತೆಯಾಗುವುದು ಹೇಗೆ? ತರಗತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಹಿಜಬ್ ಧರಿಸಿರುವ ವಿದ್ಯಾರ್ಥಿನಿಯ ಮುಖವನ್ನು ಪ್ರತಿನಿತ್ಯ ಗುರುತಿಸದೆಯೇ ಪಾಠ ಮಾಡಬೇಕೇ? ವಿದ್ಯಾರ್ಥಿ ನಿಯ ಮುಖವನ್ನು ಗುರುತಿಸದೆಯೇ ಪ್ರಶ್ನೆಗಳನ್ನು ಕೇಳಬೇಕೆ ? ಆಕೆಯ ಮುಖವನ್ನು ಗುರುತಿಸದೆಯೇ ಉತ್ತರಗಳನ್ನು ಕೇಳಬೇಕೆ? ಉತ್ತಮ ಸಾಧನೆಮಾಡುತ್ತಿರುವ ವಿದ್ಯಾರ್ಥಿನಿಯರನ್ನು ಗುರುತಿಸಿ ಸಮಾಜದ ಮುಂದೆ ನಿಲ್ಲಿಸುವ ಮಹಿಳಾ ಸಬಲೀಕರಣಕ್ಕೆ ‘ಹಿಜಬ’ ಬಹುದೊಡ್ಡ ಪೆಟ್ಟು ನೀಡುವುದಿಲ್ಲವೇ?ನೂರಾರು ವರ್ಷಗಳ ಹಿಂದಿನ ಕಟ್ಟರ್ ಮುಸಲ್ಮಾನ್ ಸಂಪ್ರದಾಯಕ್ಕೆ ಕಟ್ಟುಬಿದ್ದು ಮುಸಲ್ಮಾನರು ಮನೆಯಲ್ಲಿ ಆಚರಿಸುವ ಹಿಜಬ್ ಸಂಸ್ಕೃತಿಯನ್ನು ಶಾಲೆಗೆ ತಂದರೆ ಆ ವಿದ್ಯಾರ್ಥಿನಿಯ ಸಾಧನೆಗಳನ್ನು ಸಮಾಜದಲ್ಲಿ ಹೇಗೆ ತಾನೆ ಗುರುತಿಸಲು ಸಾಧ್ಯ? ಸಾನಿಯಾ ಮಿಜ ‘ಬುರ್ಖಾ’ ಧರಿಸಿ ಟೆನ್ನಿಸ್ ಅಡಿದ್ದಿದ್ದರೆ ಆಕೆಯ ಸಾಧನೆಯನ್ನು ಗುರುತಿಸಲು ಸಾಧ್ಯವಾಗುತ್ತಿತ್ತೇ? ಖ್ಯಾತ ಬಾಲಿವುಡ್ ನಟಿಯರಾದ ದಿಯಾಮಿರ್ಜಾಹಾಗೂ ಸಾರ ಅಲಿ ಖಾನ್ ಬುರ್ಖಾ ಧರಿಸಿದ್ದರೆ ಅವರ ಸಿನೆಮಾಗಳನ್ನು ನೋಡಲಾಗುತ್ತಿತ್ತೇ? ಅಮಿರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್‌ಖಾನ್‌ರನ್ನು ಆದರ್ಶವಾಗಿ ತೆಗೆದುಕೊಳ್ಳುವ ಮುಸಲ್ಮಾನ್ ಗಂಡು ಮಕ್ಕಳು, ಮುಸ್ಲಿಂ ನಟಿಯರ ಸಾಧನೆಯನ್ನು ಯಾಕೆ ಆದರ್ಶವನ್ನಾಗಿ ತೆಗೆದುಕೊಳ್ಳುವುದಿಲ್ಲ? ಉಡುಪಿಯ ಆರು ವಿದ್ಯಾರ್ಥಿನಿಯರು ತಮ್ಮ ಮೇಲೆ ಕಾಲೇಜಿನಲ್ಲಿ ಪುರುಷರ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಯಿದ್ದು ಅದಕ್ಕಾಗಿ ಹಿಜಬ್ ಧರಿಸಿ ಶಾಲೆಗ ಬರುತ್ತೇವೆಂದು ಹೇಳಿಕೊಂಡಿದ್ದಾರೆ.
ವಿಪರ್ಯಾಸವೆಂದರೆ ‘ಮದರಸಾ’ಗಳಲ್ಲಿ ಪಾಠ ಮಾಡುವ ಮೌಲ್ವಿಗಳು ಸಂಪೂರ್ಣ ಬುರ್ಖಾ ಧರಿಸಿರುವ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿರುವ ಪ್ರಕರಣ ಗಳ ಬಗ್ಗೆ ಇವರಿಗೆ ಯಾವ ಭಯವೂ ಇಲ್ಲ. ಮೌಲ್ವಿಗಳು ಮದರಸಾಗಳಲ್ಲಿ ಪುಟ್ಟ ಮಕ್ಕಳನ್ನು ಅತ್ಯಾಚಾರ ಮಾಡಿರುವ ಹಲವು ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಹೆಣ್ಣನ್ನು ಒಂದು ಫಲವತ್ತಾದ ಭೂಮಿಗೆ ಹೋಲಿಸಿ, ಗಂಡೊಬ್ಬ ತನಗಿಷ್ಟಬಂದಂತೆ ಬಳಸಿಕೊಳ್ಳಬಹುದೆಂದು ಹೇಳಿರುವ ಧರ್ಮದ ಬಗ್ಗೆ ಇವರಿಗೆ ಭಯವೇ ಇಲ್ಲ!!
ಮೂರು ಮದುವೆಗಳನ್ನು ಮಾಡಿಕೊಂಡು ಕೇವಲ ಒಂದು ಟೆಲಿಫೋನ್ ಕರೆಯ ಮೂಲಕ ವಿಚ್ಛೇದನ ನೀಡುವವರನ್ನು ಕಂಡರೆ ಇವರಿಗೆ ಅಲ್ಪ ಸ್ವಲ್ಪ ಭಯವೂ ಇಲ್ಲ. ‘ತ್ರಿವಳಿ ತಲಾಕ್ ರದ್ದದು’ ಕಾಯಿದೆಯನ್ನು ಜರಿಗೆ ತರುವಾಗ ಬೆಂಬಲಿಸದವರು ಇಂದು ಶಾಲೆಯಲ್ಲಿ ಯಾರ ಕಣ್ಣು ಬೀಳಬಾರದೆಂದು ‘ಹಿಜಬ’ ಧರಿಸಿ ಬರುತ್ತೇವೆಂದು ಹೇಳುತ್ತಿರುವ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತಿರುವುದನ್ನು ನೋಡಿದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ಶಾಲೆ ಯಲ್ಲಿನ ವಿದ್ಯಾರ್ಥಿನಿಗೆ ‘ಐಡೆಂಟಿಟಿ’ ನೀಡಲಾಗದವರು ಸಮಾಜದಲ್ಲಿ ಹೇಗೆ ತಾನೆ ಆಕೆಗೆ ಒಂದು ಐಡೆಂಟಿಟಿ ನೀಡಲು ಸಾಧ್ಯ? ಮಹಿಳಾ ಸಬಲೀಕರಣದ ಬಗ್ಗೆ ಉದ್ದುದ್ದವಾಗಿ ಮಾತನಾಡುವವರು, ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ತಮ್ಮ ಸಾಧನೆಯ ಐಡೆಂಟಿಟಿಯನ್ನು ಮರೆಮಾಚುವತ್ತ ಸಾಗಿದ್ದಾರೆ.
ಮುಸಲ್ಮಾನರು ಅತೀ ಹೆಚ್ಚಿರುವ ಕಾಶ್ಮೀರದಲ್ಲಿ ನಾನೇ ಸ್ವತಃ ಕಂಡ ಹಾಗೆ ಬುರ್ಖಾ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದವರು ಬೆರಳೆಣಿಕೆಯಷ್ಟು ಮಾತ್ರ. ಹೆಚ್ಚಿನ ಮುಸಲ್ಮಾನ್ ಹೆಣ್ಣು ಮಕ್ಕಳು ಶ್ರೀನಗರದಂತಹ ಸ್ಥಳದಲ್ಲಿ ಕೊರೆಯುವ ಚಳಿಯಲ್ಲಿಯೂ ಬುರ್ಖಾ ಧರಿಸದೇ ಓಡಾಡುತ್ತಿರುತ್ತಾರೆ. ಕಟ್ಟರ್ ಮುಸಲ್ಮಾನ್ ಜನರಿರುವ ಕಾಶ್ಮೀರದಲ್ಲಿ ಕಣ್ಣಿಗೆ ಕಾಣದ ಸಂಸ್ಕೃತಿ ಇತರ ರಾಜ್ಯಗಳಿಗೆ ಮಾತ್ರ ಅನ್ವಯವೇಕೆ ? ಬಹುಶಃ ಕಾಶ್ಮೀರದಲ್ಲಿನ ಬಹುತೇಕರು ಮುಸಲ್ಮಾನರಾಗಿ ರುವುದರಿಂದ ಮುಸಲ್ಮಾನ್ ಗಂಡಸರ ಮುಂದೆ ಸಂಪೂರ್ಣ ಹಿಜಬ್ ಧರಿಸಲಿಲ್ಲವೆಂದರೆ ಏನೂ ಆಗುವುದಿಲ್ಲವೆಂಬ ಆತ್ಮವಿಶ್ವಾಸ ಅವರಲ್ಲಿರಬಹುದು!
ಆದರೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಮುಸಲ್ಮಾನ್ ಗಂಡಸರ ಮುಂದೆಯೂ ಸಂಪೂರ್ಣ ಹಿಜಬ್ ಧರಿಸಿಯೇ ಮುಸಲ್ಮಾನ್ ಹೆಣ್ಣುಮಕ್ಕಳು ಓಡಾಡಬೇಕಿದೆ. ಇಂದು ‘ಹಿಜಬ’ ಧರಿಸಿ ಬರುತ್ತೇವೆಂದು ಹೇಳುವ ವಿದ್ಯಾರ್ಥಿನಿಯರು ಮುಂದೆ ‘ಸಂಪೂರ್ಣ ಹಿಜಬ’ ಧರಿಸಿ ಬರುತ್ತೇವೆಂದು ಪ್ರತಿಭಟನೆಗೆ ಕುಳಿತರೆಆಶ್ಚರ್ಯ ಪಡಬೇಕಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ನಡೆದ ಘಟನೆಯ ಬಗ್ಗೆ ತುಟಿ ಬಿಚ್ಚದ ಸಂಘಟನೆಗಳು ಉಡುಪಿಯ ಘಟನೆಯ ಬಗ್ಗೆ ಮಾತ್ರ ಬಹಳ ಆಸಕ್ತಿ ವಹಿಸಿವೆ.
‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು, ಘಟನೆಯ ವಿವರ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ಕೇರಳದಲ್ಲಿ ನಡೆದ ಘಟನೆಯಲ್ಲಿ ಕಾಣದ ಮಾನವ ಹಕ್ಕುಗಳ ಉಲ್ಲಂಘನೆ ಕರ್ನಾಟಕದಲ್ಲಿನ ಘಟನೆಗೆ ಮಾತ್ರ ಅನ್ವಯವಾಗಿದೆ. ಸಾಧು ಸಂತರ ಹತ್ಯೆಯಲ್ಲಿ ಕಾಣದ ಮಾನವ ಹಕ್ಕುಗಳ ಉಲ್ಲಂಘನೆ ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಬ್ ವಿಚಾರದಲ್ಲಿ ಮಾತ್ರ ಕಂಡುಬಂದಿದೆ. ಕರಾವಳಿ ಭಾಗದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಕಾಣದ ಮಾನವ ಹಕ್ಕುಗಳ ಉಲ್ಲಂಘನೆ ಹಿಜಬ್ ವಿಚಾರದಲ್ಲಿ ಮಾತ್ರ ಕಾಣುತ್ತಿರುವುದೇಕೆ ? ಶಾಲೆಯಲ್ಲಿನಸಮವಸ್ತ್ರ, ಉಡುಗೆ ತೊಡುಗೆಗಳ ಬಗ್ಗೆ ನಿರ್ಧರಿಸಬೇಕಿರುವುದು ಆಯಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಾಲೆಗೆ ಸೇರಿಸುವ ಮುನ್ನ ಅಲ್ಲಿನಆಡಳಿತ ಮಂಡಳಿಯ ನಿಯಮಗಳನ್ನು ಪಾಲಿಸುತ್ತೇವೆಂದು ಹೇಳಿಯೇ ಸೇರಿರುತ್ತೇವೆ.
ಆಯಾ ಶಾಲೆಯ ನಿಯಮಗಳನ್ನು ಪಾಲಿಸುವುದು ಅಲ್ಲಿ ಓದಲು ಬರುವ ವಿದ್ಯಾರ್ಥಿಗಳ ಕರ್ತವ್ಯ.ಸಮವಸ್ತ್ರವಿರುವ ಶಾಲೆಯ ಹಿಂದೂ ಹೆಣ್ಣುಮಕ್ಕಳು ಪ್ರತಿನಿತ್ಯ ಕೇವಲ ‘ಸೀರೆ’ ಯುಟ್ಟುಕೊಂಡು ಕಾಲೇಜಿಗೆ ಬರುತ್ತೇವೆಂದು ಪ್ರತಿಭಟನೆ ನಡೆಸಿದ ಘಟನೆ ಎಂದಾದರೂ ನಡೆದಿತ್ತೇ? ಮಂಗಳವಾರದಂದು ತಲೆಯ ಕೂದಲು ಕತ್ತರಿಸಲಾಗದೆಂದು ಶಾಲೆಯ ನಿಯಮ ಮೀರಿ ಹಿಂದೂ ವಿದ್ಯಾರ್ಥಿಗಳು ತಖೆಗೂದಲು ಕತ್ತರಿಸದೇ ತರಗತಿಗೆ ಬಂದರೆ ಶಾಲಾ ಆಡಳಿತ ಮಂಡಳಿ ಸುಮ್ಮನಿರ ಬೇಕೇ? ಇವೆಲ್ಲ ಸಹ ಜತಿ ಹಾಗು ಧರ್ಮವನ್ನು ಮೀರಿ ಕಾಲೇಜು ಆಡಳಿತ ಮಂಡಳಿಯವರು ರೂಪಿಸಿರುವ ನಿಯಮಗಳು. ಅದನ್ನು ಪಾಲಿಸಿಕೊಂಡು ಶಾಲೆ ಯೊಳಗಿರ ಬೇಕಾಗಿರುವುದು ಅಲ್ಲಿನ ವಿದ್ಯಾರ್ಥಿಗಳ ಕರ್ತವ್ಯ.
ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಶಾಲಾ ಕಾಲೇಜುಗಳಲ್ಲಿ ಹಿಂದೂ ಧರ್ಮದ ವಿದ್ಯಾರ್ಥಿಗಳು ಏಸು ಕ್ರಿಸ್ತನ ಗೀತೆಯನ್ನು ಹಾಡುವುದರ ಬಗ್ಗೆ ಈ ಸಂಘಟನೆ ಗಳು ಧ್ವನಿ ಎತ್ತಿರುವ ಒಂದೇ ಒಂದು ಉದಾಹರಣೆಯಿಲ್ಲ. ಉಡುಪಿಯ ‘ಹಿಜಬ’ ಪ್ರಕರಣ ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದವನ್ನು ಕೆಣಕಿ, ಎರಡು ಕೋಮು ಗಳ ನಡುವೆ ಮತ್ತಷ್ಟು ಅಂತರವನ್ನು ಹೆಚ್ಚಿಸಿ ತಮ್ಮ ರಾಜಕೀಯ ಮತಬ್ಯಾಂಕ್ ಹೆಚ್ಚು ಮಾಡಿಕೊಳ್ಳುವ ಷಡ್ಯಂತ್ರ. ಮುಸಲ್ಮಾನರ ವೋಟಿಗಾಗಿ ಕಾಂಗ್ರೆಸ್ ಹಾಗೂ SDPIಪಕ್ಷಗಳು ಕಳೆದೆರಡು ವರ್ಷಗಳಿಂದ ಜಿದ್ದಿಗೆ ಬಿದ್ದು ರಾಜಕೀಯ ಮಾಡುಠ್ಛಿ ಬಂದಿವೆ. ತಮ್ಮ ಪಾಲಿನ ಮತಬ್ಯಾಂಕಿನ ಪ್ರಮಾಣವನ್ನು ಹೆಚ್ಚಿಸಿ ಕೊಳ್ಳಲು ಎರಡೂ ಪಕ್ಷಗಳು ಸಣ್ಣ ವಿಷಯವೊಂದನ್ನು ದೊಡ್ಡದಾಗಿ ಬಿಂಬಿಸಿ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ರಾಷ್ಟ್ರೀಯ ಮಟ್ಟದ ಸುದ್ದಿಯಾಗಿಸಿವೆ. ಹೇಗಿದ್ದರೂ ಕಮ್ಯುನಿಸ್ಟರ ಬೆಂಬಲ ಇಂತಹ ಪ್ರಕರಣಗಳಿಗೆ ಇದ್ದೇ ಇರುತ್ತದೆ.
ತಮ್ಮದೇ ಆಡಳಿತವಿರುವ ಕೇರಳದಲ್ಲಿ ಹಿಜಬ್ ಧರಿಸಿನ ವಿರುದ್ಧವಿರುವ ಕಮ್ಯುನಿಸ್ಟರು ಉಡುಪಿಯಲ್ಲಿ ಮಾತ್ರ ಹಿಜಬ್ ದಿರಿಸಿನ ಪರವಾಗಿದ್ದಾರೆ. ಅಂತಿಮವಾಗಿಹಿಂದೂ, ಮುಸಲ್ಮಾನ್, ಕ್ರಿಶ್ಚಿಯನ್ ಎಂಬ ಭೇದ ಭಾವವಿಲ್ಲದೆ ಕಾಲೇಜಿನ ನಿಯಮವನ್ನು ಪಾಲಿಸುವುದು ವಿದ್ಯಾರ್ಥಿಗಳ ಕರ್ತವ್ಯ. ಅವರ ಆಚರಣೆಗಳನ್ನುಬೆಂಬಲಿಸುವ ಬೇರೆ ಕಾಲೇಜುಗಳಿರುವುದರಿಂದ ಅವರ ಬೆಂಬಲಕ್ಕೆ ನಿಂತ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು.