ಈರುಳ್ಳಿ ಮಾರುವವನ ಮಗಳಿಗೆ ಆಗುವುದು ನಮಗೇಕಾಗದು ?
ಪರಿಶ್ರಮ
ಪ್ರದೀಪ್‌ ಈಶ್ವರ್‌
@.
ಸಂಜೀವಿನಿ ಅಗರ್‌ವಾಲ್‌ನಂಥ ಹೆಣ್ಣು ಮಕ್ಕಳೇ ನಮ್ಮ ಸಮಾಜಕ್ಕೆ ನಿಜವಾದ ಸ್ಪೂರ್ತಿ. ಅಂಥವರಿಂದಲೇ ಒಂದು ತಲೆಮಾರಿನ ಹೆಣ್ಣು ಮಕ್ಕಳು ಯಶಸ್ಸನ್ನು ಕಟ್ಟಿಕೊಳ್ಳಬಲ್ಲರು. ಒಂದಲ್ಲ, ಎರಡಲ್ಲ ಸಂಕಷ್ಟಗಳ ಸರಮಾಲೆಗಳ ನಡುವೆಯೇ ಅವೆಲ್ಲವನ್ನೂ ದಾಟಿ, ಗೆದ್ದು ತೋರಿಸಬೇಕು.
ಪರಿಶ್ರಮವೇ ಯಶಸ್ಸಿಗೆ ರಹದಾರಿ. ಪರಿಶ್ರಮ, ನಿರಂತರ ಪ್ರಯತ್ನ, ಚದುರದ ಏಕಾಗ್ರತೆ, ಗೆಲ್ಲಬೇಕೆಂಬ ಹಠ, ಸೋತರೂ ಪರವಾಗಿಲ್ಲ ಮತ್ತೆ ಪುಟಿದೇಳುವೆ ಎಂಬ ಭರವಸೆ ಇದ್ದರೆ ಯಾವುದೇ ವ್ಯಕ್ತಿ ಏನು ಬೇಕಾದರೂ ಸಾಧಿಸಬಹುದು. ಎಂಬುದಕ್ಕೆ ಕೆಲವು ನಿದರ್ಶನಗಳಿವೆ. ವೈದ್ಯಕೀಯ ಪ್ರವೇಶ ಪರೀಕ್ಷೆ ಎಂಬುವುದುದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದು. ವೈದ್ಯ ಪ್ರವೇಶ ಪರೀಕ್ಷೆ ಪಾಸ್ ಆಗಿ ವೈದ್ಯರಾಗುವುದು ಅಷ್ಟು ಸುಲಭದ ಮಾತಲ್ಲ. ಗುರಿಯ ಮತು ಸಾಧನೆಯ ಹಾದಿಯ ಬಗ್ಗೆ ಸ್ಪಷ್ಟತೆ ಇದ್ದರೆ ಮಾತ್ರ ಅಂದುಕೊಂಡಿದ್ದನ್ನ ಸಾಧಿಸಿಯೇ ಸಾಧಿಸುತ್ತೀವಿ. ನೆನಪಿಡಿ, ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ.
ಒಂದು ಒಪ್ಪಿಗೆ, ಇನ್ನೊಂದು ಬದಲಾವಣೆ. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನ ಒಪ್ಪಿಕೊಳ್ಳ ಬೇಕು. ಯಾವುದನ್ನ ಒಪ್ಪಲು ಸಾಧ್ಯವಿಲ್ಲವೋ ಅದನ್ನ ಬದಲಾಯಿಸಬೇಕು. ರಾಜಸ್ಥಾನದ ಜೈಪುರ್ ಸಮೀಪದ ಒಂದು ಸಣ್ಣ ಹಳ್ಳಿ. ಬಡಕುಟುಂಬದ ದಂಪತಿಗೆ ಒಂದು ಮಗಳು. ಆ ಮಗುವಿನ ಹೆಸರು ಸಂಜೀವಿ ಅಗರ್‌ವಾಲ್ ಅಂತ. ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಆ ಮಗುವಿಗೆ ಏನೋ ಸಾಽಸಬೇಕೆಂಬ ತವಕ. ಆದರೂ ಮನೆಯ ಆರ್ಥಿಕ ಪರಿಸ್ಥಿತಿ ಆಕೆಯನ್ನ ಪದೇ ಪದೇ ಸೋಲುವಂತೆ ಮಾಡುತ್ತಿತ್ತು.
ತಂದೆ ತಳ್ಳುಗಾಡಿಯಲ್ಲಿ ಈರುಳ್ಳಿ ಮಾರುತ್ತಿದ್ದರು. ತಾಯಿ ಅನಾರೋಗ್ಯದಿಂದ ನರುಳುತ್ತಿರುವವಳು.10ನೇ ತರಗತಿಯಲ್ಲಿ ಪರಿಶ್ರಮ ಪಟ್ಟು ಓದಿದ ಆಕೆ ಶೇ. 88 ಅಂಕಗಳನ್ನು ಗಳಿಸಿದ್ದಳು. ನಂತರ ಅವರ ಕುಟುಂಬ ಜೈಪುರಕ್ಕೆ ಬಂದು ಅಲ್ಲಿಯೇ ವಾಸ ಆರಮಭಿಸಿತು. ಅಲ್ಲಿಯೂ ತಂದೆ ಪ್ರತಿದಿನ ಈರುಳ್ಳಿ ಮಾರುವು ದನ್ನು ಮುಂದುವರಿಸಿದರು. ಈಕೆ ಜೈಪುರದ ಒಂದು ಸರಕಾರಿ ಕಾಲೇಜಿಗೆ ದಾಖಲೆ ಪಡೆದು, ಅಧ್ಯಯನ ಮಾಡಲು ಪ್ರಾರಂಭಿಸಿದಳು. ಪ್ರತಿದಿನ ಮುಂಜನೆ ಕಾಲೇಜು ಆರಂಭಕ್ಕೆ ಮುನ್ನ ಮತ್ತು ಸಂಜೆ ತರಗತಿ ಮುಗಿದ ಬಳಿಕ ತಂದೆಗೆ ಸಹಾಯಮಾಡಲು ಆಕೆ ಸಹ ಈರುಳ್ಳಿ ಮಾರಲು ಹೋಗುತ್ತಿದ್ದಳು.
ಅಪ್ಪನಿಗೆ ಸಹಾಯವಾಗಿ ನಿಲ್ಲುತ್ತಿದ್ದಳು. ಎಲ್ಲವೂ ಒಮದು ಹಂತಕ್ಕೆ ನಡೆಯುತಿದೆ ಎನ್ನುವಾಗ, ದುರದೃಷ್ಟ ಹುಡುಕಿ ಬಂದಿತು. ಪ್ರಥಮ ಪಿಯುಸಿಯ ಕೊನೆಯಲ್ಲಿ ಇದ್ದಾಗಲೇ, ತಂದೆ ಮೃತಪಟ್ಟರು. ನಿಜಕ್ಕೂ ಮನೆಯ ಪರಿಸ್ಥಿತಿ ಈಗ ತುಂಬ ಸಂಕಷ್ಟಕ್ಕೆ ಸಿಲುಕಿತು. ಮೊದಲೇ ಆರ್ಥಿಕ ಚೈತನ್ಯ ವಿರಲಿಲ್ಲ. ಮುಂದೇನೆಂಬ ಯಕ್ಷ ಪ್ರಶ್ನೆಗೆ ಉತ್ತರವಿಲ್ಲದೇ ತೊಳಲಾಟಕ್ಕೆ ಇಟ್ಟುಕೊಂಡರು. ಅಮ್ಮನ ಅನಾರೋಗ್ಯ ಒಂದು ಕಡೆ, ಅಪ್ಪನ ಸಾವು ಇನ್ನೊಂದು ಕಡೆ. ಬದುಕಿನಲ್ಲಿ ಏನೋ ಸಾಧಿಸ ಬೇಕೆಂಬ ತೀರ್ಮಾನ ಒಂದು ಕಡೆ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ. ಏನು ಮಾಡಬೇಕೆಂಬುದು ಆಕೆಗೆ ದಿಕ್ಕೇ ತೋಚಲಿಲ್ಲ.
ದೃತಿಗೆಡಲಿಲ್ಲ. ಆನಾರೋಗ್ಯ ಪೀಡಿತ ಅಮ್ಮನನ್ನು ಜತೆಗೇ ಕರೆದುಕೊಂಡು ಹೋಗಿ ಮುಂಜನೆ ಮತ್ತು ಸಂಜೆ ಆಕೆ ಈರುಳ್ಳಿ ವ್ಯಾಪಾರ ಮಾಡತೊಡಗಿದಳು. ಬರುವ ಚಿಕ್ಕ ಪುಟ್ಟ ಆದಾಯದ ಹೇಗೋ ಮನೆಯ ಸಂಸಾರ ನಡೆಯಲಾರಂಭಿಸಿತು. ಪ್ರಥಮ ಪಿ ಯುಸಿಯಲ್ಲಿ ಆಕೆ ಶೇ.86ಅಂಕಗಳನ್ನು ಗಳಿಸಿದ್ದಳು. ವೈದ್ಯ ಳಾಗಬೇಕೆಂಬ ಆಸೆ ಬತ್ತದೇ ಉಳಿದಿತ್ತು. ಎಲ್ಲವೂ ಸರಿ ಇದ್ದು ಎಲ್ಲ ತರಬೇತಿ ಸಿಕ್ಕ ನಂತರವೂ ಸೋಲುವ ಎಷ್ಟೋ ಜೀವಗಳ ನಡುವೆ ಈಕೆ ಮಾದರಿ ಎನಿಸು ತ್ತಾಳೆ. ಆರ್ಥಿಕ ಚೈತನ್ಯವಿಲ್ಲದೆ, ಕುಟುಂಬದ ಬೆಂಬಲ ಇಲ್ಲದೆ, ಏಕಾಂಗಿಯಾಗಿ ಹೋರಾಟ ಮಾಡುವುದು ಅಷ್ಟು ಸುಲಭವೇ? ಖಂಡಿತವಾಗಿಯೂ ಇಲ್ಲ.
ಹೀಗಿದ್ದಾಗಲೇ ಒಮ್ಮೆ ಜೈಪುರದ ರಸ್ತೆಗಳಲ್ಲಿ ಆ ಭಾರಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರ‍್ಯಾಂಕ್‌ಗಳಿಸಿದ ವಿದ್ಯಾರ್ಥಿಗಳ ಫೋಟೋಗಳನ್ನ ನೋಡಿದಳು. ಅದರಿಂದ ಆಕೆ ಸೂರ್ತಿ ಪಡೆದಳು. ನಾನೂ ರಾಷ್ಟ್ರಮಟ್ಟದಲ್ಲಿ ಹೀಗೆಯೇ ರ‍್ಯಾಂಕ್‌ಗಳಿಸಿ ನನ್ನ ಫೋಟೋವೂ ಪತ್ರಿಕೆಗಳಲ್ಲಿ ಅಚ್ಚಾಗಬೇಕೆಂದು ಆಕೆ ಕನಸುಕಂಡಳು. ಆದರೆ ಆಲ್ ಇಂಡಿಯಾ ಮಟ್ಟದಲ್ಲಿ ರ‍್ಯಾಂಕ್ ಗಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಷ್ಟೇನೂ ಬುದ್ಧಿವಂತಳಲ್ಲದ ಆಕೆಗೆ ತನ್ನ ಮೇಲೆಯೇ ನಂಬಿಕೆ ಇಡಲು ತುಂಬ ಕಷ್ಟವಾಗಿತ್ತು. ಕಡೆಗೂ ಅಮ್ಮನ ಎದುರು ತನ್ನ ಕನಸನ್ನು ತೆರೆದಿಟ್ಟಳು- ಅಮ್ಮ ನಾನು ವೈದ್ಯಳಾಗುತ್ತೇನೆ. ವೈದ್ಯಳಾಗಿ ದೇಶ ಸೇವೆ ಮಾಡುತ್ತೇನೆ.
ನಾನು ವೈದ್ಯಳಾದರೆ ನಿನ್ನ ಸಮಸ್ಯೆಯೆಲ್ಲ ಬಗೆಹರಿಯುತ್ತವೆ. ಆ ತಾಯಿಯಾದರೋ, ಯಾವ ಧೈರ್ಯದ ಮೇಲೆ ಆಕೆಗೆ ಓದು ಎಂದು ಹೇಳುವುದು? ಮನೆಯ ಪರಿಸ್ಥಿತಿ ಸಂಕಷ್ಟದಲ್ಲಿತ್ತು. ಆದರೂ ಆಕೆ ಧೃತಿಗೆಡಲಿಲ್ಲ, ಏಕಾಗ್ರತೆ ಕಳೆದುಕೊಳ್ಳಲಿಲ್ಲ. ಪ್ರತಿದಿನ ಮುಂಜನೆ4 ಗಂಟೆಗೆ ಏಳುತ್ತಿದ್ದಳು. 4 ರಿಂದ 6 ಗಂಟೆಯವರೆಗೂ 2 ತಾಸು ಅಧ್ಯಯನ. ನಂತರ 6 ರಿಂದ 9 ಗಂಟೆಯವರೆಗೆ ಈರುಳ್ಳಿ ವ್ಯಾಪಾರ. ನಂತರ ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಕಾಲೇಜು. ಮತ್ತೆ 4.30 ರಿಂದ 8.30 ರವರೆಗೆ ಈರುಳ್ಳಿ ವ್ಯಾಪಾರ. ರಾತ್ರಿ 8.30ಯಿಂದ ಮಧ್ಯರಾತ್ರಿ ೧ರವರೆಗೆ ನಿರಂತರ ಅಧ್ಯಯನ. ಕಷ್ಟ ಪಟ್ಟು ಓದಿದಳು.
ರಾತ್ರಿ ಹಗಲೆನ್ನದೇ ಪರಿಶ್ರಮ ಪಟ್ಟಳು. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಅರ್ಜಿ ತುಂಬಲೂ ಆಕೆಯ ಬಳಿ ಕಾಸಿರಲಿಲ್ಲ. ಹೇಗೋ ಅಮ್ಮನನ್ನ ಕಾಡಿ, ಬೇಡಿ ಒಂದಷ್ಟು ಕಾಸು ಜೋಡಿಸಿ ಅರ್ಜಿ ಹಾಕಿದಳು. ಪ್ರವೇಶ ಪರೀಕ್ಷೆಯೂ ಬಂತು. ಕಷ್ಟ ಪಟ್ಟು ಓದಿದಳು. ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದಳು. ಅದು ಪರೀಕ್ಷೆಯ ಫಲಿತಾಂಶದ ದಿನ. ಜೈಪುರ ನಿಬ್ಬೆರಗಾಗುವಂತೆ ರ‍್ಯಾಂಕ್ ಪಡೆದಿದ್ದಳು. ರಾಷ್ಟ್ರ ಮಟ್ಟದಲ್ಲಿ 18ನೇ ರ‍್ಯಾಂಕ್ ಗಳಿಸಿದ್ದಳು ಸಂಜೀವಿ ಅಗರ್ವಾಲ! ಮುಮದಿನದೆಲ್ಲವೂ ಇತಿಹಾಸ.
ನಂತರ ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾಳೆ ಸಂಜೀವಿ. ಅಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದಾಳೆ. ಸವಾಲು- ಸೋಲೆಂಬುದು ಎಲ್ಲರಿಗೂ ಬರುತ್ತೆ. ಅದನ್ನ ದಾಟಿ ಗೆಲುವು ಪಡೆಯುವುದೇ ಬದುಕಿನ ನಿಜವಾದ ಆದರ್ಶ. ನನಗೆ ಕಷ್ಟ ಇದೆ. ನಾನು ಬಡ ಕುಟುಂಬದಲ್ಲಿಹುಟ್ಟಿ ಬೆಳೆದೆ. ನನ್ನಿಂದ ಏನು ಸಾಧ್ಯ? ಎಂದು ನೆಪ ಹೇಳುವ ವ್ಯಕ್ತಿಗಳು ಎಂದಿಗೂ ಕಾರಣ ಜನ್ಮರಾಗುವುದಿಲ್ಲ. ಸಮಸ್ಯೆಗಳನ್ನು ದಾಟುವುದರ ನಮ್ಮ ನಿಜವಾದಯಶಸ್ಸಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯ ತಯಾರಿ ನಡೆಸುವ ವಿದ್ಯಾರ್ಥಿಗಳು ತನಗೆ ಭೌತಶಾಸ್ತ್ರಅರ್ಥವಾಗುವುದಿಲ್ಲ, ರಸಾಯನಶಾಸ್ತ್ರಕಷ್ಟ, ಜೀವಶಾಸ್ತ್ರನೆನಪಿನಲ್ಲಿ ಇರುವುದಿಲ್ಲ ಎಂಬಿತ್ಯಾದಿ ಕಾರಣಗಳನ್ನು ಹೇಳಿ, ಸಬೂಬುಗಳಲ್ಲೇ ಕಳೆಯುತ್ತಾರೆ.ಸೋಲುತ್ತಿರುವ ಕಾಲದಲ್ಲಿ ಯಾವುದೇ ಕಾರಣಗಳನ್ನು ಮುಂದಿಡದೆ, ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್ ಗಳಿಸುವುದು ಅಷ್ಟು ಸುಲಭದ ಮಾತೆ? ಸಂಜೀವಿನಿ ಅಗರ್ ವಾಲ್‌ನಂಥ ಹೆಣ್ಣು ಮಕ್ಕಳೇ ನಮ್ಮ ಸಮಾಜಕ್ಕೆ ನಿಜವಾದ ಸ್ಪೂರ್ತಿ. ಅಂಥವ ರಿಂದಲೇ ಒಂದು ತಲೆಮಾರಿನ ಹೆಣ್ಣು ಮಕ್ಕಳು ಯಶಸ್ಸನ್ನು ಕಟ್ಟಿಕೊಳ್ಳಬಲ್ಲರು. ಒಂದಲ್ಲ, ಎರಡಲ್ಲ ಸಂಕಷ್ಟಗಳ ಸರಮಾಲೆಗಳ ನಡುವೆಯೇ ಅವೆಲ್ಲವನ್ನೂ ದಾಟಿ, ಗೆದ್ದು ತೋರಿಸಬೇಕು.
ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನ ನಿಲ್ಲಿಸಲಾಗದು. ಧೈರ್ಯ ಒಂದಿದ್ದರೆ ಗೆದ್ದೇ ಗೆಲ್ಲುವೆ ಎಂಬ ಹಠಕ್ಕೆ ಬಿದ್ದರೆ, ನಿಮ್ಮನ್ನ ಸೋಲಿಸುವ ತಾಕತ್ತು ಆ ವಿಽಗೂ ಸಹ ಕಷ್ಟವೇ. ಹಣೆಬರಹದ, ದುರದೃಷ್ಟದ ಗೆರೆಗಳನ್ನು ಅಳಿಸುವ ತಾಕತ್ತು ನಿಮ್ಮ ಬೆವರಿನ ಹನಿಗಳಿಗಿರುತ್ತವೆ. ಪ್ರಾಮಾಣಿಕ ಪ್ರಯತ್ನ ಇದ್ದರೆ ಗೆದ್ದೇ ಗೆಲ್ಲಬಹುದು. ಪ್ರೀತಿಯ ವಿದ್ಯಾರ್ಥಿಗಳೇ, ನಿಮ್ಮ ಬಡತನ, ನಿಮ್ಮ ಕಷ್ಟ, ಅದರ ಪಾಡಿಗೆ ಅದು ಇರಲಿ. ನಿಮ್ಮ ಏಕಾಗ್ರತೆ ನಿಮ್ಮ ಜತೆಯಿರಲಿ. ಈವತ್ತಲ್ಲ ನಾಳೆ ಗೆದ್ದೇ ಗೆಲ್ಲುತ್ತೀರ.ವಿದ್ಯಾರ್ಥಿಗಳಾಗಲಿ, ಯುವಕರಾಗಲಿ, ಯುವ ಉದ್ಯಮಿಗಳಾಗಲಿ ಸಂಕಲ್ಪಶಕ್ತಿಯಿಂದ ಮುಂದೆ ಸಾಗಬೇಕು. ಬದುಕಿನಲ್ಲಿ ಎಲ್ಲವನ್ನ ಕಳೆದುಕೊಂಡ ಸಂಜೀವಿನಿ ಅಗರ್‌ವಾಲ್ ಅಂಥವರೇ ಒಂದು ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ರಾಂಕ್ ಗಳಿಸಬಹುದಾದರೆ ಬೇರೆಯವರಿಗೆ ಯಾಕೆ ಸಾಧ್ಯವಿಲ್ಲ? ನಮ್ಮ ನಮ್ಮ ಕ್ಷೇತ್ರದಲ್ಲಿ ಅಡೆ ತಡೆಗಳನ್ನ ದಾಟಿದರೆ ಯಾವುದೂ ಅಸಾಧ್ಯವಾದುದಲ್ಲ.
‘ಅಸಾಧ್ಯ’ ಎಂಬುದು ಕೇವಲ ಡಿಕ್ಷನರಿಯ ಪದ. ಅದನ್ನು ಅದರ ಪಾಡಿಗೆ ನಿಘಂಟಿನಲ್ಲೇ ಇರಲು ಬಿಟ್ಟುಬಿಡಿ. ಆದರೆ, ಸಾಧ್ಯವೆಂಬುವುದು ನಿಮ್ಮ ಕೈಯಲ್ಲಿರುವ ಸಂಗತಿ. ಆ ‘ಸಾಧ್ಯ’ ಸಾಧನೆಗಾಗಿ ಒಂದಷ್ಟು ನೋವು ಸಹಿಸಿಕೊಳ್ಳುವುದು ಅನಿವಾರ್ಯ. ಈ ಹಂತದಲ್ಲಿ ಕಣ್ಣೀರು ಹರಿಯವುದು ಸಹಜ. ಅದನ್ನು ನಿಯಂತ್ರಿಸಬೇಕು. ಕಷ್ಟ ಬರುವುದೇ ಮನುಷ್ಯರಿಗೆ; ಮರಗಳಿಗಲ್ಲ. ದೊಡ್ಡವರು ಹೇಳುತ್ತಿದ್ದ ಇಂಥ ಮಾತುಗಳು ಪದೇ ಪದೇ ನೆನಪಿಸಿಕೊಳ್ಳಬೇಕು. ಜೀವನದಲ್ಲಿ ಓಡುವವನೇಬೀಳುತ್ತಾನೆ, ನಡೆಯುವವನೇ ಎಡುವುತ್ತಾನೆ. ಬಿದ್ದರೂ ಪರವಾಗಿಲ್ಲ. ಏಳಲೇಬೇಕೆಂಬ ಛಲ ಮಾತ್ರ ಸಾಯಬಾರದು. ಸೋತರೂ ಗೆಲ್ಲುತ್ತೇನೆ ಎಂಬ ಭರವಸೆಸಾಯಬಾರದು. ಎಷ್ಟೇ ಬಾರಿ ಸೋತರೂ ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನ ಪಟ್ಟರೆ ಯಶಸ್ಸಿನ ಸಾಮ್ರಾಜ್ಯಕ್ಕೆ ಅಧಿಪತಿಗಳಾಗುತ್ತೇವೆ.
ಶಿಕ್ಷಕರಿಂದ ಜೀವನ ಕಲಿಸುವ ಪಾಠ ದೊಡ್ಡದು. ಶಿಕ್ಷಕರು ಪಾಠ ಹೇಳಿ ಕೊಟ್ಟು ಪರೀಕ್ಷೆ ಕೊಡುತ್ತಾರೆ. ಹಾಗೆಯೇ ಜೀವನವೂ ಪರೀಕ್ಷೆ ಕೊಟ್ಟು ಪಾಠ ಕಲಿಸಿ ಬಿಡುತ್ತದೆ. ಸೋಲಿನಿಂದ ಪಾಠ ಕಲಿಯಿರಿ. ಮತ್ತೊಂದು ಗೆಲುವಿನ ಪ್ರಯತ್ನಕ್ಕೆ ಮುನ್ನುಡಿಯಾಗಿ ಅದಿರಲಿ. ಏನೇ ಆಗಲಿ ಸೋಲಿನ ನೋವು ಎದೆಗೆ ನಾಟದಿರಲಿ. ಹಾಗೆಯೇ ಗೆಲುವಿನ ಸಂಭ್ರಮವೂ ನೆತ್ತಿಗೆ ಏರದಿರಲಿ. ನಿಮ್ಮ ಬದುಕಿನ ಯಶಸ್ವೀ ಪಯಣ ಮುಂದುವರಿಯಲಿ. ಬೆಟರ್ ಲಕ್ ನೆಕ್ಸ್ಟ್ ಟೈಮ್