’ಅಂದ’ ಕಾಲತ್ತಿಲ್‌ ನಾನೂ ಸುಂದರವಾಗಿದ್ದೆ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಒಂದೆರಡು ವಾರಗಳ ಹಿಂದೆ ಪುಷ್ಪಾ ಚಿತ್ರಕ್ಕೂ ಹಿಂದಿಯ ರಾಯಿಸ್ ಚಿತ್ರಕ್ಕೂ ಇರೋ ಹೋಲಿಕೆ ಬಗ್ಗೆ ಬರೆದಿದ್ದೆ. ಈಗ ಪುಷ್ಪ ಚಿತ್ರದ ಹಾಡೊಂದರ ಬಗ್ಗೆಹೇಳಲೇಬೇಕು. ಪುಷ್ಪ ಸಿನಿಮಾದ ‘ಜೋಕೆ ಜೋಕೆ ಮೇಕೆ’ ಹಾಡು ಕೇಳ್ದಾಗ್ಲೆಲ್ಲ ಎಲ್ಲಾ ಕೇಳಿದ್ದೀನಲ್ಲ ಈ ಹಾಡನ್ನ ಅನ್ನಿಸ್ತಿತ್ತು. ಆ ಹಾಡಿನ ಧಾಟಿ, ಸಾಹಿತ್ಯ ಎಲ್ಲವೂ ಪರಿಚಿತ ಅನ್ನಿಸುತ್ತಿತ್ತು.
ಸ್ವಲ್ಪ ನೆನಪಿನ ಬುತ್ತಿಯನ್ನು ಕೆದಕಿದ ಮೇಲೆ ಒಂದು ಹಾಡು ಸಿಕ್ತು. ಅದು ಎಎಂಆರ್ ರಮೇಶ್ ನಿರ್ದೇಶನದ ‘ಮಿಂಚಿನ ಓಟ’ ಚಿತ್ರದ ಹಾಡು.೨೦೦೮ರ ‘ಮಿಂಚಿನ ಓಟ’ ಚಿತ್ರದ ‘ಜಲೆ, ಜಲೆ ಜಲೆ’ ಅನ್ನೋ ಈ ಹಾಡು ಮತ್ತು ಪುಷ್ಪದ ‘ಜೋಕೆ ಜೋಕೆ ಮೇಕೆ’ ಎರಡೂ ಹಾಡುಗಳನ್ನ ಪೂರ್ತಿಯಾಗಿ ಕೇಳಿದ ಮೇಲೆ ಅನ್ನಿಸಿದ್ದು, ಎರಡೂ ಹಾಡುಗಳಲ್ಲಿ ಒಂದೇ ಭಾವ, ಒಂದೇ ಫೋರ್ಸ್, ಆಲ್ ಮೋಸ್ಟ್ ಒಂದೇ ಟ್ಯೂನ್. ಸಾಹಿತ್ಯ ಕೂಡ ಒಂದೇ ರೀತಿಯದ್ದು. ನೀವೂ ಈ ಎರಡೂ ಹಾಡುಗಳನ್ನು ಒಂದ್ಸಲ ಕೇಳಿ. ಪಕ್ಕಾ ಕಾಪಿ ಅಲ್ಲದಿದ್ರೂ, ಸಿಕ್ಕಾಪಟ್ಟೆ ಹೋಲಿಕೆ ಇದೆ ಅನ್ನಿಸದೇ ಇದ್ರೆ ಹೇಳಿ. ಈ ಹೋಲಿಕೆ ಅಷ್ಟಕ್ಕೇ ಮುಗಿಯಲ್ಲ. ಮಿಂಚಿನ ಓಟ ಚಿತ್ರದ ಹಾಡಲ್ಲಿ ‘ಜಲೆ, ಜಲೆ’ ಅಂತ ಸಾಹಿತ್ಯ ಬರೆದಿದ್ದಾರೆ.
ಇವ್ರು ಪುಷ್ಪ ಅಂದ್ರೆ ‘-ರ್’ ಅಂದಿದ್ದು ಇದಕ್ಕೇ ಇರಬಹುದಾ? ಅಂತನೂ ಅನುಮಾನ ಬರುತ್ತೆ. ಇನ್ನೊಂದು ಹೋಲಿಕೆ ಅಂದ್ರೆ, ಈ ಎರಡೂ ಹಾಡುಗಳನ್ನ  ಹಾಡಿರೋದು ವಿಜಯ್ ಪ್ರಕಾಶ್. ಮಿಂಚಿನ ಓಟ ಚಿತ್ರದ ಸಂಗೀತ ವಿ. ಮನೋಹರ್ ಅವರದ್ದು. ಪುಷ್ಪ ಚಿತ್ರದ ಸಂಗೀತ ದೇವಿಶ್ರೀಪ್ರಸಾದ್ ಅವರದ್ದು. ಈಗ ಎರಡೂ ಹಾಡುಗಳನ್ನು ಕೇಳಿದ ಮೇಲೆ ದೇವಿಶ್ರೀ ಪ್ರಸಾದ್ ಅವರು ಮನೋಹರ್ ಅವರ ಹಾಡಿನಿಂದ ಇನ್ಸ್‌ಪೈರ್ ಆದ್ರಾ ಅಥವಾ ಇಬ್ಬರೂ ಇನ್ಯಾವುದೋ ಒಂದೇ ಮೂಲದಿಂದ ಇನ್ಸ್‌ಪೈರ್ ಆಗಿ ಈ ಹಾಡುಗಳನ್ನು ಮಾಡಿದ್ರಾ ಅಂತ ಸಂದೇಹ ಅಂತೂ ಬರುತ್ತೆ. ಅಂದಹಾಗೆ, ಈ ಮಿಂಚಿನ ಓಟ ಚಿತ್ರ ಜಲೆ ಜಲೆ ಹಾಡುಡಿ ಞ್ಠoಜ್ಚಿಮತ್ತುomಟಠಿಜ್ಛಿqsನಲ್ಲಿ ಇದೆ.ಟ್ಠಠ್ಠಿಚಿಛಿನಲ್ಲಿ ಇಲ್ಲ. ಸಾಧ್ಯವಾದರೆ ಒಮ್ಮೆ ಕೇಳಿ ನೋಡಿ.
ಲೂಸ್ ಟಾಕ್ಕಾಲೇಜ್ ಸ್ಟೂಡೆಂಟ್ (ಕಾಲ್ಪನಿಕ ಸಂದರ್ಶನ)?ಏನ್ ಗುರೂ, ಕರೋನಾ ಲಾಕ್‌ಡೌನು, ಇವುಗಳ ಮಧ್ಯೆ ಹೆಂಗ್ ನಡೀತಿದೆಜೀವನ?ಅಯ್ಯೋ, ಏನ್ ಜೀವ್ನಾನೋ ಏನೋ, ಕ್ಲಾಸಲ್ಲಿ ಸರಿಯಾಗಿ ಓದಿಲ್ಲ ಅಂದ್ರೆ ಮೇಷ್ಟ್ರು ಒದ್ದು ಹೊರಗಾಕ್ತಾರೆ, ಲಾಕ್‌ಡೌನ್ ಟೈಮಲ್ಲಿ ಹೊರಗ್ ಹೋದ್ರೆಪೊಲೀಸ್ನೋರು ಒದ್ದು ಒಳಗ್ ಹಾಕ್ತಾರೆ.
?ಸರಿ, ಈ ಲಾಕ್‌ಡೌನ್ ನಿಮಗೆ ಬೇಕಾ,ಬೇಡ್ವಾ?ಅಯ್ಯೋ, ಬೇಕು ಕಣ್ರೀ, ಬೇಕು, ಖಂಡಿತಾ ಬೇಕು.
?ಯಾಕಪ್ಪಾ ಕಂದ, ಇಷ್ಟ್ ಗಾಬರಿ ಆಗಿದಿಯಾ, ಲಾಸ್ಟ್ ಸೆಮಿಸ್ಟರ್‌ನಲ್ಲಿ ೬ ಸಬ್ಜೆಕ್ಟ್ ಎಕ್ಸಾಮ್ ಬರೆದ್ಯ, ರಿಸಲ್ಟ್ ಏನಾಯ್ತು?ಪರವಾಗಿಲ್ಲ ಚೆನ್ನಾಗೇ ಆಗಿದೆ ಕಣ್ರೀ.. ೩ಹೋಗಿದಾವೆ, ೩ ಆಗಿಲ್ಲ, ಅಷ್ಟೇ..
?ಓ, ಹಂಗೆ ವಿಷ್ಯ, ಎಲ್ಲ ಸಬ್ಜೆಕ್ಟೂ ಹೊಗೆ. ಇವಾಗ್ ಗೊತ್ತಾಯ್ತು ಲಾಕ್‌ಡೌನ್ಯಾಕ್ ಬೇಕು ಅಂತ. ಎಕ್ಸಾಮ್ ಬರಿದೇನೇ ಪಾಸ್ ಆಗಿಬಿಡಬಹುದು ಅಂತ ಅಲ್ವಾ?
ಹೌದು, ಈ ರಾಜಕಾರಣಿಗಳು ಎಲೆಕ್ಷನ್‌ನಲ್ಲಿ ಅವಿರೋಧವಾಗಿ ಆಯ್ಕೆ ಆಗ್ತಾರೆ ಅಲ್ವಾ, ಆ ಥರ ನಾವ್ಯಾಕ್ ಆಗ್ಬಾರದು?
?ಬುದ್ಧಿವಂತ, ಸರಿ, ಹಂಗೇ ಕ್ಯಾಂಪಸ್ ಇಂಟರ್‌ವ್ಯೂನಲ್ಲೂ ಹಿಂಗೇ ಕೆಲಸ ಗಿಟ್ಟಿಸೋಐಡಿಯಾ ಏನಾದ್ರೂ ಇದೆಯಾ?ಯಾಕಾಗ್ಬಾರದು? ಕ್ಯಾಂಪಸ್ ಇಂಟರ್‌ವ್ಯೂ ಕೂಡ ನಿಮ್ಮ ಕಾಲ್ಪನಿಕ ಸಂದರ್ಶನದ ಥರ ಇದ್ರೆ ಅದೂ ಆಗುತ್ತೆ.
ನೆಟ್‌ಪಿಕ್ಸ್ಖೇಮು ಒಂದ್ಸಲ ಟ್ರೈನ್‌ನಲ್ಲಿ ದೂರ ಪ್ರಯಾಣ ಮಾಡ್ತಾ ಇದ್ದ. ಟ್ರೈನ್ ತುಂಬಾ ರಷ್ ಇತ್ತು. ಖೇಮುಗೆ ಹೆಂಗೋ ಒಂದು ಬೋಗಿಯಲ್ಲಿ ಸೀಟು ಸಿಕ್ತು. ಬೋಗಿತುಂಬಾ ರಷ್ ಇತ್ತು. ಜನ ನಿಂತ್ಕೊಂಡು ಪ್ರಯಾಣ ಮಾಡ್ತಾ ಇದ್ರು. ಸರಿ, ಲಾಂಗ್ ಜರ್ನಿ ಆದ್ರಿಂದ ಕತ್ತಲಾಗುವ ಹೊತ್ತಿಗೆ ಎಲ್ಲರೂ ಮಲಗೋ ಸಿದ್ಧತೆ ಮಾಡ್ಕೊತಾ ಇದ್ರು. ಆದ್ರೆ ಅವರಲ್ಲಿ ಹಾಡು ಹೇಳೋ ಚಟ ಇರೋ ಒಬ್ಬ ಮಧ್ಯ ವಯಸ್ಕ ಇದ್ದ.
ಅವನ ಜತೆ ಒಂದಿಬ್ಬರು ಗೆಳೆಯರು. ಆ ವ್ಯಕ್ತಿ ಅವರ ಜತೆ ಸೇರಿಕೊಂಡು ಹಾಡು ಹೇಳ್ತಾ ಎಲ್ಲರಿಗೂ ಡಿಸ್ಟರ್ಬ್ ಮಾಡ್ತಾ ಇದ್ದ. ಜತೆಗೆ ಅವನ ಹಾಡು, ಕಂಠಕರ್ಕಶವಾಗಿತ್ತು. ಆದರೆ, ಅದಕ್ಕೆ ಅವನ ಗೆಳೆಯರ ಎನ್ ಕರೇಜ್‌ಮೆಂಟು. ಜತೆಗೆ ಪ್ರತಿ ಹಾಡು ಹಾಡಿದ ಮೇಲೂ ಪಕ್ಕದಲ್ಲಿದ್ದ ಇತರ ಪ್ರಯಾಣಿಕರನ್ನ, ಹೆಂಗಿತ್ತುಹಾಡು, ಚೆನ್ನಾಗ್ ಹಾಡ್ತೀನಾ? ಅಂತ ಕೇಳಿ ಕಿರಿಕಿರಿ ಮಾಡ್ತಾ ಇದ್ದ. ಅವರೂ ಪಾಪ ಇವನಿಗೆ ಯಾಕೆ ಬೇಜರು ಮಾಡೋದು ಅಂತ ಹ್ಞೂ ಅಂತಿದ್ರು. ಇದು ಹಿಂಗೇನಡೀತಾ ಇತ್ತು. ಎಲ್ಲರಿಗೂ ಕಿರಿಕಿರಿ ಆಗ್ತಾ ಇದ್ರೂ ಯಾರೂ ಅವನಿಗೆ ಹಾಡಬೇಡ ನಿಲ್ಸಪ್ಪ, ಕೆಟ್ಟದಾಗಿ ಹಾಡ್ತೀಯಾ ಅಂತ ಹೇಳೋಕೆ ಧೈರ್ಯ ಮಾಡಲಿಲ್ಲ. ಖೇಮು ಕೂಡ ತುಂಬಾ ಹೊತ್ತಿನವರೆಗೂ ಅವನ ಹಾಡು ಕೇಳಿ, ತಲೆ ಕೆಡಿಸಿಕೊಂಡಿದ್ದ.
ಕೊನೆಗೊಮ್ಮೆ ತಡೆಯಲಾರದೆ ಹಾಡುತ್ತಿದ್ದ ಆ ವ್ಯಕ್ತಿಯನ್ನ ಮಾತಾಡಿಸಿ ಕೇಳೇಬಿಟ್ಟ ‘ಏನ್ ಸಾರ್, ನೀವ್ಯಾಕೆ ರೇಡಿಯೋದಲ್ಲಿ ಹಾಡಬಾರದು?’. ತಗೊಳ್ಳಿ, ಮಂಗನಿಗೆ ಹೆಂಡ ಕುಡಿಸಿದಷ್ಟೇ ಸಂತೋಷ ಆಗಿ, ಆ ವ್ಯಕ್ತಿ, ‘ಸಾರ್, ಅಷ್ಟೊಂದ್ ಚೆನ್ನಾಗ್ ಹಾಡ್ತೀನಾ ನಾನು?’ ಅಂತ ಕೇಳಿದ. ಅದಕ್ಕೆ ಖೇಮು ಹೇಳಿದ ‘ಹಂಗೇನಿಲ್ಲ, ರೇಡಿಯೋ ಆಗಿದ್ರೆ ಆಫ್ ಮಾಡಬೋದಿತ್ತು’.
ಲೈನ್ ಮ್ಯಾನ್
?ಯಲ್ಲಮ್ಮನ ದೇವಸ್ಥಾನದ ಹುಂಡಿ ಕಳ್ಳತನ-ಸುದ್ದಿ-ಯಲ್ಲಮ್ಮನ್ ದುಡ್ಡು, ಯಾರ್ದೋ ಜತ್ರೆ?ರಸ್ತೆ ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ-ಜೀವ್ನ ರೋಡಿಗ್ ಬರೋದು ಅಂದ್ರೆ ಇದೇನಾ??ಸಂಸ್ಕೃತ ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಏನಂತಾರೆ ?– ‘ಅಯ್ಯರ್’ ಎಜ್ಯುಕೇಶನ್?ವಿರಾಟ್ ಕೊಹ್ಲಿ ಪುಷ್ಪ ಚಿತ್ರದ ಡೈಲಾಗ್ ಹೊಡೆದ್ರೆ ಹೆಂಗಿರುತ್ತೆ?-ಹೆಸರಲ್ಲಿಅSಅಂತಿರೋದ್ ನೋಡಿ, ಐಅS ಅಂದ್ರೆ ಇಲಿ ಅಂದ್ಕೊಂಡ್ರಾ, ಹುಲಿ.. ಹುಲಿ..
?ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಾವು ನೆಮ್ಮದಿಯಾಗಿ ಮಲಗಬೇಕು ಅಂತಮನೆ ಮುಂದಿನ ರೋಡಲ್ಲಿ ವಾಹನಗಳು ಓಡಾಡದಂತೆ ಬ್ಯಾರಿಕೇಡ್ ಹಾಕಿಸ್ತಾರಂತೆ-ಸುದ್ದಿ-ಇಷ್ಟೆಲ್ಲ ಆಗ್ತಾ ಇದ್ರೂ ಇಲ್ಲಿನ ಶಾಸಕರೇನು ನಿದ್ದೆ ಮಾಡ್ತಾ ಇದ್ದಾರಾ ಅಂತ ಕೇಳಂಗಿಲ್ಲ.
?ಯಾರಿಗೋ ಸರಿಯಾಗಿ ಹೊಡೆದು ಅರೆಸ್ಟ್ ಆದ ಕನ್ನಡ ಹೋರಾಟಗಾರನ ಇಷ್ಟದಸಾಲುಗಳು-‘ಬಾರಿಸು’ ಕನ್ನಡ ಡಿಂಡಿಮವ.
-ಕನ್ನಡಕ್ಕಾಗಿ ‘ಕೈ ಎತ್ತು’, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.?ರೈತರ ಜೀವನದ ಸ್ಲೋಗನ್-‘ಹೊಲವೆ’ ಜೀವನ ಸಾಕ್ಷಾತ್ಕಾರ?ಮುದುಕ ಮುದುಕಿಯರು ತಮ್ಮ ಯೌವನದ ಸೌಂದರ್ಯವನ್ನು ನೆನಪಿಸಿಕೊಳ್ಳೋದು ಹೇಗೆ?-‘ಅಂದ’ ಕಾಲತ್ತಿಲ್ ನಾನೂ ಸುಂದರವಾಗಿದ್ದೆ.
?ಸಾನಿಯಾ ಮಿಜ ನಿವೃತ್ತಿಈ ಟೆನ್ನಿಸ್ ಪ್ಲೇಯರ್‌ಗಳ ಕತೆನೇ ಇಷ್ಟು, ಇವ್ರ ರಿಟೈರ್ ಆಗೋ ವಯಸ್ಸಲ್ಲಿ, ನಮ್ಮ ಎಷ್ಟೋ ಗಂಡ್ ಹುಡುಗ್ರಿಗೆ ಇನ್ನೂ ಕೆಲಸಾನೇ ಸಿಕ್ಕಿರಲ್ಲ.?ಟೆನ್ನಿಸ್ ಆಡುವವರು ಎಲ್ಲರನ್ನೂ ಪ್ರೀತಿಸುವ ವಿಶ್ವಮಾನವರು-ಯಾಕಂದ್ರೆ ಅವರು ‘ಲವ್ ಆಲ’ ಅಂತಾನೇ ಮ್ಯಾಚ್ ಶುರು ಮಾಡೋದು