ಇದು ಗಂಟೆಯ ನೆಂಟ ’ಓ’ ಗಡಿಯಾರದ ಮುಖಸ್ತುತಿ
ತಿಳಿರು ತೋರಣ
ಶ್ರೀವತ್ಸ ಜೋಶಿ
@.
ಅನಾದಿಯೂ ಅನಂತವೂ ಆಗಿರುವಂಥದ್ದು ಯಾವುದು? ಈ ಪ್ರಶ್ನೆಯನ್ನು ಯಕ್ಷನೇ ಕೇಳಬೇಕಂತಿಲ್ಲ. ಯುಧಿಷ್ಠಿರನೊಬ್ಬನೇ ಉತ್ತರ ಕೊಡಬೇಕು ಅಂತನೂಇಲ್ಲ. ‘ಕಾಲ’ ಎಂದು ನಾವೆಲ್ಲರೂ ಹೇಳಬಲ್ಲೆವು. ಟಿವಿಯಲ್ಲಿ ಬಿ.ಆರ್.ಚೋಪ್ರಾ ನಿರ್ಮಿತ ಮಹಾಭಾರತ ಧಾರಾವಾಹಿ ನೋಡಿದ ತಲೆಮಾರಿನವರಾದರೆ- ಪರದೆಯ ಮೇಲೆ ಬ್ರಹ್ಮಾಂಡದಲ್ಲೊಂದು ತಿರುಗುತ್ತಿರುವ ಚಕ್ರ ಮತ್ತು ಪಕ್ಕದಲ್ಲೊಂದು ಋಷಿಯ ತಲೆಯಂಥ ಆಕೃತಿಯನ್ನೂ, ಹರೀಶ್ ಭಿಮಾನಿಯ ಧ್ವನಿಯಲ್ಲಿ‘ಮೈ ಸಮಯ್ ಹೂಂ…’ ವನ್ನೂ ನೆನಪಿಸಿಕೊಳ್ಳಬಲ್ಲೆವು.
ಆದಿ-ಅಂತ್ಯಗಳಿಲ್ಲದ ಕಾಲವನ್ನು ನಮ್ಮ ಗ್ರಹಿಕೆಗೆ ಒಳಪಡಿಸಲು ಮತ್ತು ಅಳೆಯಲು ನಾವು ಮಾಡಿಕೊಂಡಿರುವ ಮಾಪಕಗಳೇ ಪಂಚಾಂಗ, ಗಡಿಯಾರ, ಕ್ಯಾಲೆಂಡರ್ ಮುಂತಾದುವು. ಇವೆಲ್ಲ ಬೆಳೆದು ಬಂದ ರೀತಿಯೋ ಮಿಕ್ಕೆಲ್ಲವೈeನಿಕಬೆಳವಣಿಗೆಗಳಂತೆಯೇ ಅತ್ಯದ್ಭುತ. ‘ಕಾಲವನ್ನು ತಡೆಯೋರು ಯಾರೂ ಇಲ್ಲ…’ ಎನ್ನುತ್ತಲೇ ಕಾಲ ದೊಂದಿಗೆ ಮನುಷ್ಯನ ಓಟ, ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಕಾಲವನ್ನು ಅಳೆಯಲು, ಅಳೆದು ನಿಯಂತ್ರಿಸಲು ಮಾಡಿರುವ ಹೋರಾಟ ಕಮ್ಮಿಯದೇನಲ್ಲ. ಇರಲಿ, ಅಷ್ಟು ಗಹನವಾದ ವಿಚಾರ ನಮಗೀಗ ಬೇಡ. ಅದಕ್ಕಿಂತ, ಲೈಟಾಗಿ ಒಂದು ಲಹರಿಯನ್ನು ಸಮಯ ಸಾಧನಗಳ ಲ್ಲೊಂದಾದ ಗಡಿಯಾರದ ಬಗೆಗೆ ಹರಿಸೋಣ. ಗಡಿಯಾರದ ‘ಮುಖ’ ಎನಿಸಿದ ಡಯಲ್‌ನದೊಂದಿಷ್ಟು ಮುಖಸ್ತುತಿ ಮಾಡೋಣ.
ಸ್ನೇಹಿತ ರಾಘವೇಂದ್ರ ಶರ್ಮ ಮೊನ್ನೆ ಫೇಸ್‌ಬುಕ್‌ನಲ್ಲಿ ಹಳೇ ಗೋಡೆ ಗಡಿಯಾರದ ಚಿತ್ರಹಾಕಿದ್ದರು. ಜೊತೆ ಗೊಂದು ಚಿಕ್ಕ-ಚೊಕ್ಕ ಟಿಪ್ಪಣಿಯನ್ನೂ ಬರೆದಿದ್ದರು. ಅದು ಅವರ ಮನೆಯದೇ ಗಡಿಯಾರ, ಮತ್ತು ಬಹುಶಃ ಈಗ ಅಂತಹ ಗೋಡೆ ಗಡಿಯಾರಗಳನ್ನು ಹಳ್ಳಿಮನೆಗಳಲ್ಲಷ್ಟೇ ಕಾಣಬೇಕೇನೊ. ಅವರು ಜೋಗದ ಬಳಿ ತಲವಾಟ ಎಂಬ ಹಳ್ಳಿಯವರು. ಹದಿನೈದು ವರ್ಷಗಳ ಹಿಂದೊಮ್ಮೆ ನಾನು ಜೋಗ ಜಲಪಾತದ ಮಳೆಗಾಲದ ವೈಭವವನ್ನು ನೋಡಲಿಕ್ಕೆ ಹೋಗಿದ್ದವನು ಆಮೇಲೆ ಶರ್ಮರ ಮನೆಗೂ ಭೇಟಿ ನೀಡಿದ್ದೆ; ಪ್ರೀತಿಭರಿತ ಆತಿಥ್ಯ ಸವಿದಿದ್ದೆ.
ಹಾಗಾಗಿ ಫೇಸ್‌ಬುಕ್ ಪೋಸ್ಟ್ ನೋಡಿದಾಗ ನನಗೆ ಆ ಭೇಟಿ ನೆನಪಾಯ್ತು. ಅಂತೆಯೇ ನಮ್ಮೂರಿನಲ್ಲಿ ನಮ್ಮನೆಯಲ್ಲಿದ್ದ ಗೋಡೆಗಡಿಯಾರವೂ. ಅಲ್ಲದೇ ಆ ಟಿಪ್ಪಣಿ ಓದಿದರೆ ಯಾರಿಗೇ ಆದರೂ ಗೋಡೆ ಗಡಿಯಾರದ ನೆನಪು ಬರುವಂತೆಯೇ ಇತ್ತು: ‘ಗೋಡೆಗಡಿಯಾರ ಒಂದು ಕಾಲದಲ್ಲಿ ಟಿಕ್ ಟಿಕ್ ಗೆಳೆಯ ಅಂತಲೇ ಪ್ರಖ್ಯಾತ. ಇಂಥದೊಂದು ಗಡಿಯಾರವನ್ನು ಕುರಿತೇ ‘ಗಂಟೆಯ ನೆಂಟನೆ ಓ ಗಡಿಯಾರ…’ ಪದ್ಯ ಇದ್ದದ್ದು. ಬರೆದವರು ಯಾರು ಅಂತ ನನಗೆ ಗೊತ್ತಿಲ್ಲ, ಆದರೆ ಆ ಪದ್ಯವಂತೂ ನಮಗೆ ಬೇರೊಂದು ಲೋಕವನ್ನೇ ತೋರಿಸುತ್ತಿತ್ತು.
ಎಳವೆಯಲ್ಲಿ ಈ ರೀತಿಯ ಕೀಕೊಡುವ ಗಡಿಯಾರದಲ್ಲಿ ಗಂಟೆ ನೋಡಲು ಕಲಿಸುವುದು ದೊಡ್ಡವರ ಮಾಮೂಲಿ ಅಭ್ಯಾಸ. ದೊಡ್ಡವರು ಗಂಟೆ ಎಷ್ಟು ನೋಡಾ ಎಂದರೆ ‘ಉದ್ದಮುಳ್ಳು ಹನ್ನೆರಡಕ್ಕೆ, ಗಿಡ್ಡಮುಳ್ಳು ಐದಕ್ಕೆ’ ಎಂದು ಉತ್ತರಿಸುವುದರಿಂದ ಗಡಿಯಾರ ನೋಡುವುದರ ಕಲಿಕೆ ಶುರು. ಗಡಿಯಾರ ನೋಡಿಗಂಟೆ ಹೇಳಲು ಬಂತೆಂದರೆ ಮೊದಲ ಹಂತದ ಕಲಿಕೆಮುಕ್ತಾಯ. ನನಗೆಗಂಟೆ ನೋಡಲಿಕ್ಕೆ ಬರುತ್ತದೆ ಎಂಬುದು ಬಾಲ್ಯದ ಹೆಮ್ಮೆಗಳಲ್ಲೊಂದು. ಕಾಲ ಗತಿಸಿದಂತೆಗಡಿಯಾರದ ವಿಷಯದಲ್ಲಿ ಕ್ರಾಂತಿಯೇ ಆಯಿತು. ಪುಟ್ಟಪುಟ್ಟ ಕೈಗಡಿಯಾರದಿಂದ ಹಿಡಿದು ಗೋಡೆ ಗಡಿಯಾರದ ತನಕವೂ ವಿಶಿಷ್ಟವೇ. ಐವತ್ತು ವರ್ಷಗಳ ಹಿಂದೆ ಬ್ಯಾಟರಿ ಚಾಲಿತ ಗಡಿಯಾರಗಳು ಭಾರತ ಪ್ರವೇಶಿಸಿರಲಿಲ್ಲ.
ಆಗೆಲ್ಲ ಕೀಕೊಟ್ಟು ಪೆಂಡುಲಮ್ ಅಲ್ಲಾಡುವ ಗಡಿಯಾರವೇ ವಿಶೇಷ. ಗೋಡೆಗೆ ಅದೊಂದು ಭೂಷಣ. ಈಗ ಎಲ್ಲವೂ ವಿದ್ಯುತ್‌ಮಯ. ಹಾಗಾಗಿ ವಾರಕ್ಕೊಮ್ಮೆಟರ್ರ್ ಎಂದು ಸದ್ದು ಮಾಡುತ್ತಾ ಕೀ ಕೊಡುವ ಗಡಿಯಾರಗಳ ಸಂಖ್ಯೆ ಕಡಿಮೆ. ಅದು ಬಾರಿಸುವ ಢಣ್ ಢಣ್ ಎಂಬಸದ್ದೂ ಅಡಗಿದೆ. ಆದರೆ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ ಮತ್ತು ಬಾಲ್ಯವನ್ನು ನೆನಪಿಸುತ್ತವೆ.’ -ಎಂದು ಬರೆದಿದ್ದರು.
ನಿಜ. ರಾಘವೇಂದ್ರ ಶರ್ಮರು ನೆನಪಿಸಿಕೊಂಡ ‘ಗಂಟೆಯ ನೆಂಟನೆ ಓ ಗಡಿಯಾರ’ ಪದ್ಯ ಬರೆದದ್ದು ದಿನಕರ ದೇಸಾಯಿ ಯವರು. ನನ್ನ ನೆಚ್ಚಿನ ಕವಿ. ಅದರಲ್ಲಿ ಅವರು ‘ಹಗಲೂ ಇರುಳೂ ಒಂದೇ ಬಾಳು| ನೀನಾವಾಗಲು ದುಡಿಯುವ ಆಳು| ಕಿವಿಯನು ಹಿಂಡಲು ನಿನಗದು ಕೂಳು| ಟಿಕ್ ಟಿಕ್ ಗೆಳೆಯ ಟಿಕ್ ಟಿಕ್ ಟಿಕ್’ಎಂದು ಗಡಿಯಾರವನ್ನು ಕೊಂಡಾಡುತ್ತಾರೆ. ಹಗಲೂ ಇರುಳೂ ಒಂದೇ ಸಮನೆ ದುಡಿಮೆ ಗೈಯುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. ಕಿವಿಯನ್ನು ಹಿಂಡುವು ದೆಂದರೆ ವಾರಕ್ಕೊಮ್ಮೆ ಕೀಕೊಡುವು ದೆಂದರ್ಥ. ಅದೇ ಗಡಿಯಾರಕ್ಕೆ ಕೂಳು.
ಇನ್ನೊಂದು ಚರಣದಲ್ಲಿ ‘ಮುಖ ಒಂದಾದರು ದ್ವಾದಶ ನೇತ್ರ! ಎರಡೇ ಕೈಗಳು ಏನು ವಿಚಿತ್ರ! ಯಂತ್ರ ಪುರಾಣದ ರಕ್ಕಸ ಪುತ್ರ!’ ಎಂದು ಆಶ್ಚರ್ಯಪಡುತ್ತಾರೆ. ಮತ್ತೊಂದು ಚರಣದಲ್ಲಿ ‘ಟಿಕ್ ಟಿಕ್ ಎನ್ನುತ ಹೇಳುವೆಯೇನು? ನಿನ್ನೀ ಮಾತಿನ ಒಳಗುಟ್ಟೇನು? ಕಾಲವು ನಿಲ್ಲದು ಎನ್ನುವಿಯೇನು?’ ಅಂತ ಪ್ರಶ್ನಿಸುತ್ತಾರೆ. ಕೊನೆಯಲ್ಲಿ ‘ದುಡಿಯುವುದೊಂದೇ ನಿನ್ನಯ ಕರ್ಮ| ದುಡಿಸುವುದೊಂದೇ ನಮ್ಮಯ ಧರ್ಮ| ಇಂತಿರುವುದು ಕಲಿಯುಗದೀ ಧರ್ಮ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಇದೊಂಥರ ಜೀತದಾಳುವಿನ ಬವಣೆಯನ್ನು ಬಣ್ಣಿಸುವ ಚಿತ್ರಣ. ಗೆಳೆಯಾ ಎಂದು ಕರೆಯುತ್ತಲೇ, ಮಕ್ಕಳ ಪದ್ಯವೆಂದು ಭಾಸವಾಗುವಂತೆ ಬರೆ ಯುತ್ತಲೇ, ಗಡಿಯಾರವನ್ನು ಬಳಸಿಕೊಂಡು ಗಹನವಾದ ಸಾಮಾಜಿಕ ವಿಚಾರವನ್ನು ದೇಸಾಯಿಯವರು ಮಂಡಿಸಿದ್ದಾರೆ ಎಂದು ಕೆಲವಿಮರ್ಶಕರ ಅಂಬೋಣ.
ಆದರೆ ಗಡಿಯಾರವನ್ನು ಗಡಿಯಾರವೆಂದೇ ಪರಿಗಣಿಸಿ, ಮಗುವೊಂದು ಗಡಿಯಾರದೊಡನೆ ಸಂಭಾಷಿಸಿರುವಂತೆ ದಿನಕರ ದೇಸಾಯಿಯವರು ಬರೆದಿದ್ದಾರೆ ಅಂದುಕೊಂಡರೇನೇ ನಾವು ಆ ಪದ್ಯವನ್ನು ಹೆಚ್ಚು ಆನಂದಿಸುತ್ತೇವೆ. ಅದೊಂದೇ ಅಂತಲ್ಲ ಆಗಿನ ಪದ್ಯಗಳೇ ಹಾಗೆ. ಜೀವಂತಿಕೆಯಿಂದ ನಳನಳಿಸುವಸಾಹಿತ್ಯ ಕುಸುಮಗಳು. ಅವುಗಳ ಒಂದೊಂದು ಸಾಲು, ಒಂದೊಂದು ಪದವೂ ಎಷ್ಟು ಅರ್ಥಪೂರ್ಣ, ಎಷ್ಟು ಪ್ರಾಸಬದ್ಧ!
ಒಮ್ಮೆ ಬಾಯಿಪಾಠ ಮಾಡಿದರೆ ಅದೇ ಜೀವನವಿಡೀ ದಾರಿದೀಪ. ದಿನಕರ ದೇಸಾಯಿಯವರ ಗಡಿಯಾರ ಪದ್ಯದಲ್ಲಿ ಇನ್ನೂ ಒಂದು ಅಚ್ಚರಿ ಅಡಗಿದೆ. ಪದ್ಯದ ಮೊದಲ ಸಾಲಿನಲ್ಲಿ ಗಂಟೆಯ ನೆಂಟನನ್ನು ‘ಓ ಗಡಿಯಾರ’ ಅಂತ ಕರೆದಿದ್ದಾರಲ್ಲ, ಅದರಲ್ಲಿ ಏನೋ ಒಂದು ಸೋಜಿಗವಿದೆ. ಓ ಗಡಿಯಾರ ಎಂದರೆಗಡಿಯಾರವನ್ನು ಸಂಬೋಧನೆ ಮಾಡಿರುವುದೇ? ಓ ಅಂತನೇ ಅಲ್ವಾ ನಾವು ಯಾರನ್ನಾದರೂ ಕರೆಯುವುದು? ದೇವರನ್ನೂ ನಾವು ‘ಓ ದೇವರೇ’ ಅಂತಲೇ ಕರೆಯುತ್ತೇವೆ. ‘ಓ ದ್ಯಾವ್ರೇ ನಿನ್ನ ಅಂದಚಂದವೇನೋ ಒಂದೂ ನಾ ಕಾಣೆ…’ ಎಂದು ಸಿನೆಮಾ ಹಾಡಾಗಿಯೂ ಹಾಡುತ್ತೇವೆ.
ಕನ್ನಡದಲ್ಲಿ ಮಾತ್ರವಲ್ಲ ‘ಓ ಮೈ ಗಾಡ್!’ ಎನ್ನುವ ಇಂಗ್ಲಿಷ್ ಆಶ್ಚರ್ಯದಲ್ಲೂ ಆರ್ತನಾದದಲ್ಲೂ ‘ಓ’ ಇದೆ. ದಿನಕರ ದೇಸಾಯಿಯವರು ಬರೆದದ್ದು ಶಿಶುಗೀತೆ,ಹಾಗಾಗಿ ಪುಟ್ಟಮಗುವೊಂದು ಗಡಿಯಾರವನ್ನು ‘ಗಂಟೆಯ ನೆಂಟನೆ ಓ ಗಡಿಯಾರ…’ ಎಂದು ಕರೆಯುತ್ತಿರುವಂತೆ ಬರೆದಿರಬಹುದು. ‘ಓ’ ಎಂದು ಸಂಬೋಧನೆಗೆಬಳಕೆಯಾಗಿರುವುದಾದರೆ ಅಲ್ಲೂ ಒಂದು ಸ್ವಾರಸ್ಯವಿದೆ. ಯಾರನ್ನಾದರೂ ಕರೆಯುವುದಕ್ಕೆ ಓ ಎಂದು ಹೇಗೆ ಬಳಸುತ್ತೇವೋ ಅದಕ್ಕೆ ಅವರ ಸ್ಪಂದನ ಸಹ ಓ ಎಂದೇ ಇರಬಹುದು. ಕರೆಗೆ ಓ ಗೊಡುವುದು ಎಂದರೆ ಅದೇತಾನೆ? ಓ ಎನ್ನುವುದು ಒಂದು ದ್ವಿಮುಖ ಸಂವಾದದ ಪದ.
ಆದ್ದರಿಂದ ‘ಗಂಟೆಯ ನೆಂಟನೆ’ ಎಂದು ಮಗು ಸಂಬೋಧಿಸಿದ್ದಕ್ಕೆ ಗಡಿಯಾರವೇ ‘ಓ’ ಎಂದು ಸ್ಪಂದಿಸಿದೆ ಅಂತಲೂ ಅರ್ಥೈಸಿಕೊಳ್ಳಬಹುದು. ಆದರೆ, ಗಡಿಯಾರ ಪದ್ಯದಲ್ಲಿರುವ ಈ ‘ಓ’ ಸಂಬೋಧನೆಯೂ ಅಲ್ಲ, ಸ್ಪಂದನವೂ ಅಲ್ಲ. ಪದ್ಯದ ಎರಡನೆಯ ಸಾಲಿನಲ್ಲಿ ‘ಬೆಳ್ಳಿಯ ಬಣ್ಣದ ಗೋಲಾಕಾರ’ ಅಂತಿದೆಯಲ್ಲಾ, ಅದನ್ನೇ ಮೊದಲಸಾಲಿನಲ್ಲಿಯೂ ಸೂಚ್ಯವಾಗಿ ತಿಳಿಸಿದ್ದಾರೆ ದೇಸಾಯಿಯವರು. ಹೇಗೆ ಗೊತ್ತೇ? ‘ಓ’ವನ್ನು ಇಂಗ್ಲಿಷ್‌ನ  ಎಂದುಕೊಳ್ಳಿ. ‘ಗಂಟೆಯ ನೆಂಟನೆ  ಗಡಿಯಾರ’ ಎಂದು ಓದಿನೋಡಿ. ಆಗ ಗಡಿಯಾರದ ಉರುಟಾದಡಯಲ್ ನಿಮಗೆ ಪದ್ಯದ ಮೊದಲ ಸಾಲಿನಲ್ಲಿಯೇ ಕಾಣಿಸಿಕೊಳ್ಳುತ್ತದೆ!
ಕ್ಷಮಿಸಿ, ಇದು ನನ್ನ ಸಂಶೋಧನೆಯಲ್ಲ, ಪದಚಮತ್ಕಾರವೂ ಅಲ್ಲ. ಗಂಟೆಯ ನೆಂಟನನ್ನು  ಗಡಿಯಾರ ಎಂದು ಕರೆದವರು ಗಿರೀಶ್ ಕಾರ್ನಾಡ್! ಅವರೂ ಹೀಗೆ ಪನ್-ಫನ್ಪದವಿನೋದ ಎಲ್ಲ ಮಾಡುತ್ತಾರೆಯೇ? ಹೌದು, ಕಾರ್ನಾಡರೂ ಆಗೊಮ್ಮೆ ಈಗೊಮ್ಮೆ ಹೀಗೆ ಅಕ್ಷರದಾಟ ಆಡುತ್ತಾರೆ ಎಂದು ಅವರ ‘ಆಗೊಮ್ಮೆ ಈಗೊಮ್ಮೆ’ ಬರಹ ಸಂಗ್ರಹದ ಒಂದು ಲಲಿತ ಪ್ರಬಂಧದಲ್ಲಿ ಸಾಬೀತು ಪಡಿಸಿದ್ದಾರೆ. ದೇಸಾಯಿಯವರ ಗಡಿಯಾರ ಪದ್ಯವನ್ನು ಕಾರ್ನಾಡರು ವಿಭಿನ್ನ ದೃಷ್ಟಿ ಕೋನದಿಂದ ವಿಮರ್ಶಿಸಿದ್ದಾರೆ. ಗಡಿಯಾರ, ಗೋಲಾಕಾರ, ಶೂನ್ಯ, ಬ್ರಹ್ಮಾಂಡಗಳನ್ನೆಲ್ಲ ತಳುಕು ಹಾಕಿ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ.
‘ಓ ಗಡಿಯಾರ’ದ ಬಗ್ಗೆ ಕಾರ್ನಾಡರ ವ್ಯಾಖ್ಯಾನವನ್ನೋದಿ ನನಗೆ ಇನ್ನೊಂದು ತೆರನಾದ ಐಡಿಯಾ ಹೊಳೆದಿದೆ. ಇಂಗ್ಲಿಷ್‌ನಲ್ಲಿ ಸಮಯ ಸೂಚಿಸುವಾಗ ನಾವು  ’ ,  ’  ಅಂತ ಹೇಳ್ತೇವಲ್ಲಾ, ದಿನಕರ ದೇಸಾಯಿಯವರು ಬಹುಶಃ ಅದನ್ನೇ ಕನ್ನಡೀಕರಿಸಿ ‘ಓ ಗಡಿಯಾರ’ ಎಂದಿರ ಬಾರದೇಕೆ!?ಅಂದ ಹಾಗೆ ಇಂಗ್ಲಿಷ್‌ನಲ್ಲಿ ’  ಎನ್ನುವ ರೂಢಿಗೂ ಇತಿಹಾಸವಿದೆ. ಹದಿನೇಳನೆಯ ಶತಮಾನಕ್ಕೂ ಮೊದಲು ಅದನ್ನು    ಎಂದು ಪೂರ್ಣರೂಪದಲ್ಲಿ ಹೇಳುವ ಕ್ರಮವಿತ್ತಂತೆ.
‘ಹನ್ನೆರಡು ಗಂಟೆಗೆ ಊಟಮಾಡುವಾ’ ಅಂತಹೇಳೋದಕ್ಕೆ ’    12    ಎನ್ನುತ್ತಿದ್ದರಂತೆ. ಕ್ರಮೇಣ ಅದು ’   ಎಂಬ ಹ್ರಸ್ವ ರೂಪ ಪಡೆಯಿತು. ದಿನಕರ ದೇಸಾಯಿಯವರು ಬದುಕಿದ್ದು 20ನೆಯ ಶತಮಾನದಲ್ಲಿ. ಹಾಗಾಗಿ ‘ಓ ಗಡಿಯಾರ’ ಪದಪ್ರಯೋಗವು ’  ಪದ ಪುಂಜದ ಕನ್ನಡೀಕರಣ ಎಂಬವಾದ ಹುರುಳಿಲ್ಲದ್ದಲ್ಲ. ಆಯ್ತಪ್ಪಾ, ಆ ವಾದ ನಿಮಗೆ ಇಷ್ಟವಿಲ್ಲವಾದರೆ, ಓ ಗಡಿಯಾರ ಎಂದರೆ ಓಲ್ಡ್ ಗಡಿಯಾರವೆಂದೋ ಓಬಿರಾಯನ ಕಾಲದ ಗಡಿಯಾರವೆಂದೋ ದೇಸಾಯಿಯವರ ಇಂಗಿತ ಇರಲಿಕ್ಕೂ ಸಾಕು!
ಏಕೆಂದರೆ, ದೇಸಾಯಿಯವರ ಕಾಲಕ್ಕೇ ಇಲೆಕ್ಟ್ರಾನಿಕ್ ವಾಚುಗಳು, ಕ್ವಾರ್ಟ್ಸ್ ಗಡಿಯಾರಗಳು ಭಾರತದಲ್ಲೂ ಮಾರುಕಟ್ಟೆಗೆ ಬಂದಿದ್ದವು. ಇಂಗ್ಲೆಂಡ್, ಅಮೆರಿಕ ದಂಥ ಮುಂದುವರಿದ ದೇಶಗಳಲ್ಲಂತೂ ಹಳೆಯ ಗೋಡೆ ಗಡಿಯಾರಗಳನ್ನು ’  ಎಂದೇ ಗುರುತಿಸಲಾರಂಭಿಸಿದ್ದರು. ಹಾಗಂತ ಅವುಗಳ ಬಗ್ಗೆತುಚ್ಛ ಭಾವನೆಯೇನೂ ಇರಲಿಲ್ಲ. ಗಡಿಯಾರ ಹಳೆಯದಾದಷ್ಟೂ ಅದರ ಬಗ್ಗೆ ಹೆಚ್ಚು ಗೌರವ. ಆಂಟಿಕ್ ಪೀಸ್ ಎಂದು ಹೆಚ್ಚು ಬೆಲೆ. ತಮಾಷೆ ಅಂದ್ರೆ, ’  ಎಂಬ ಬಳಕೆ ಹೇಗೆ ಶುರುವಾಯ್ತು ಎನ್ನುವುದಕ್ಕೂ ಒಂದು ಕಥೆಯಿದೆ. ಇಂಗ್ಲೆಂಡ್‌ನ ನಾರ್ತ್ ಯಾರ್ಕ್‌ಶೈರ್‌ನಲ್ಲಿ ಜಾರ್ಜ್ ಹೊಟೆಲ್ ಎಂಬ ಒಂದು ಲಾಡ್ಜ್ ಇತ್ತಂತೆ. ಅದರ ಮಾಲೀಕರು ಜೆನ್ ಕಿನ್ ಬ್ರದರ‍್ಸ್ ಎಂಬ ಇಬ್ಬರು ಸಹೋದರರು.
ಜಾರ್ಜ್ ಹೊಟೆಲ್‌ನ ವರಾಂಡದಲ್ಲಿ ಆಳೆತ್ತರದ ಒಂದು ಗಡಿಯಾರ ಇತ್ತು. ಕರಾರುವಾಕ್ಕಾದ ಸಮಯ ತೋರಿಸಿ ಅದು ಜನಮನ್ನಣೆಗಳಿಸಿತ್ತು. ಒಂದು ದಿನ ಜೆನ್ಕಿನ್ ಸೋದರರ ಪೈಕಿಚಿಕ್ಕವನು ಅಕಾಲ ಮೃತ್ಯುವಿಗೀಡಾದನು. ಗಡಿಯಾರಕ್ಕೆ ಅದೇನಾಯ್ತೋ ಆವತ್ತಿಂದ ಅದು ಸಮಯ ಪಾಲನೆಯಲ್ಲಿ ಹಿಂದುಳಿಯಿತು. ಹಲವು ಮೆಕ್ಯಾನಿಕ್‌ಗಳೆಲ್ಲ ಅದೆಷ್ಟು ಪ್ರಯತ್ನಿಸಿದರೂ ಗಡಿಯಾರ ರಿಪೇರಿಯಾಗಲೇ ಇಲ್ಲ.
ಆದರೂ ಗಡಿಯಾರದ ಮೇಲಿನ ಪ್ರೀತಿ-ಗೌರವಗಳಿಂದಾಗಿ, ಬದುಕುಳಿದಿದ್ದ ಜೆನ್‌ಕಿನ್ ಬ್ರದರ್ ಅದಕ್ಕೆ ವಾರಕ್ಕೊಮ್ಮೆ ಚಾವಿಕೊಟ್ಟು ಚಾಲನೆಯಲ್ಲಿಟ್ಟಿದ್ದ.ಮುಂದೊಂದು ದಿನ ಅವನೂ ಕೊನೆಯುಸಿರೆಳೆದ. ಆಶ್ಚರ್ಯದಲ್ಲಿ ಪರಮಾಶ್ಚರ್ಯವೆಂಬಂತೆ, ಅವನ ಪ್ರಾಣಪಕ್ಷಿ ಹಾರಿಹೋದ ಆ ಕ್ಷಣದಲ್ಲೇ ಗಡಿಯಾರವೂ ತನ್ನ ಚಲನೆಯನ್ನು ನಿಲ್ಲಿಸಿಬಿಟ್ಟಿತು! ಮುಂದೆ ಅದು ಎಂದಿಗೂ ಚಲಿಸಲೇ ಇಲ್ಲ. ಹೊಟೆಲ್‌ನ ಹೊಸ ಮಾಲೀಕ ಅದರ ರಿಪೇರಿಗೂ ಮನಸ್ಸು ಮಾಡಲಿಲ್ಲ.1875ರಲ್ಲಿಅಮೆರಿಕದ ಪ್ರಸಿದ್ಧ ಕವಿ ಹೆನ್ರಿ ವರ್ಕ್ ಎಂಬುವವ ಇಂಗ್ಲೆಂಡ್ ಪ್ರವಾಸದ ವೇಳೆ ಅದೇ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಸಂದರ್ಭ ಬಂತು. ಅಲ್ಲಿ ಆ ಗಡಿಯಾರ ವನ್ನು ನೋಡಿ ಅದರ ಕಥೆಯನ್ನು ಕೇಳಿ ಆತ ಭಾವುಕನಾದನು. ಅಮೆರಿಕಕ್ಕೆ ವಾಪಸಾದವನೇ ಆ ಗಡಿಯಾರದ ಬಗ್ಗೆಯೇ ಒಂದು ಕವಿತೆ ಬರೆದನು.
  ’               …..ಎಂದು ಆರಂಭವಾಗುವ ಆ ಕವಿತೆ ಅಮೆರಿಕದಲ್ಲಿ ಅತ್ಯಂತ ಜನಪ್ರಿಯವಾಯ್ತು. ಅಲ್ಲಿಂದ ಮುಂದೆ ಹಳೇಗಡಿಯಾರಗಳನ್ನು ಅಜ್ಜನ ಗಡಿಯಾರ ಎನ್ನುವುದು ರೂಢಿಯಾಯ್ತು.
ಅಂದಮೇಲೆ, ‘ಓ ಗಡಿಯಾರ’ ಎಂದು ದೇಸಾಯಿಯವರು ಹೇಳಿದ್ದು ‘ಓಬಿರಾಯನ ಕಾಲದ ಗಡಿಯಾರ’ ಎಂದುಕೂಡಇರಬಹುದು! ಅದೆಲ್ಲ ಇರಲಿ, ದಿನಕರ ದೇಸಾಯಿಯವರನ್ನೇ ಈ ಬಗ್ಗೆ ಕೇಳಿದರೆ ಅವರ ಉತ್ತರ ಬೇರೆಯೇ ಇರಬಹುದು. ಛಂದಸ್ಸನ್ನು ಕಟ್ಟುನಿಟ್ಟಾಗಿ ಪಾಲಿಸಿಯೇ ಪದ್ಯ ಬರೆಯುತ್ತಿದ್ದ ದೇಸಾಯಿಯವರು ಆ ಪದ್ಯದ ಪ್ರತಿ ಯೊಂದು ಸಾಲಿನಲ್ಲಿ ಹದಿನೈದು ಮಾತ್ರೆಗಳು ಇರುವಂತೆ ಬ್ಯಾಲೆನ್ಸ್ ಮಾಡಬೇಕಿದ್ದರಿಂದ, ‘ಗಂಟೆಯ ನೆಂಟನೆಗಡಿಯಾರ’ ಎಂದು ಬರೆದಾಗ ಹದಿಮೂರೇ ಮಾತ್ರೆಗಳಾದ್ದರಿಂದ, ನಡುವೆ ‘ಓ’ ಸೇರಿಸಿದ್ದಿರಬಹುದು!
ಅಂದಹಾಗೆ ‘ಅಜ್ಜನ ಗಡಿಯಾರ’ ಎಂದಾಗ ನೆನಪಾಯಿತು. ನನ್ನ ಅಜ್ಜನಮನೆಯಲ್ಲಿ ಸುಮಾರು 150 ವರ್ಷಗಳಿಗಿಂತಲೂ ಹಳೆಯ ಗೋಡೆ ಗಡಿಯಾರವೊಂದು ಈಗಲೂ ಸುಸ್ಥಿತಿಯಲ್ಲಿ ಇದೆ. ಅದು ಢಣ್ ಢಣ್ ಎಂದು ಹನ್ನೆರಡು ಗಂಟೆ ಬಾರಿಸುತ್ತಿರುವಾಗಿನ ವಿಡಿಯೊ ಚಿತ್ರೀಕರಿಸಿ ನನ್ನ ಸೋದರಮಾವ ಯುಟ್ಯೂಬ್’ಗೆ ಏರಿಸಿಟ್ಟಿದ್ದಾರೆ. ಆ ಗಡಿಯಾರದ ಡಯಲ್ ಮೇಲೆ ರೋಮನ್ ಅಂಕಿಗಳು. ಹಳೇ ಕಾಲದ ಗಡಿಯಾರಗಳಲ್ಲಿ ಹೆಚ್ಚಾಗಿ ರೋಮನ್ ಅಂಕಿಗಳೇ ಇರುತ್ತಿದ್ದದ್ದು. ಅದಕ್ಕೆ ಕಾರಣವೂ ಇವೆ. ಒಂದರಿಂದ ಹನ್ನೆರಡವರೆಗಿನ ರೋಮನ್ ಅಂಕಿಗಳನ್ನು ನೇರವಾದ ಕಡ್ಡಿಗಳಿಂದ ರಚಿಸಬಹುದು. ಲೋಹದ ಎರಕದಲ್ಲಿ ಅಂಥಕಡ್ಡಿಗಳ ನಿರ್ಮಾಣ ಸುಲಭ. ಹಿಂದೂ-ಅರೇಬಿಕ್ ಅಂಕಿಗಳಾದರೆ ಹಾಗಲ್ಲ.
ವೃತ್ತಗಳು, ಸುರುಳಿಗಳೆಲ್ಲ ಬೇಕಾಗುತ್ತವೆ. ಎರಕ ಹೊಯ್ದು ಮಾಡುವುದು ಕಡ್ಡಿಗಳಷ್ಟು ಸುಲಭವಲ್ಲ. ಗಡಿಯಾರಗಳಲ್ಲಿ ರೋಮನ್ ಅಂಕಿಗಳ ಡಯಲ್ ಗಮನಿಸಿ  ದರೆ ಅಲ್ಲೂ ಕೆಲವು ಕೌತುಕದ ಸಂಗತಿಗಳಿವೆ. ನಾಲ್ಕನ್ನು  ಎಂದು ಬರೆಯುವ ಬದಲಿಗೆ  ಎಂದು ನಾಲ್ಕು ಕಡ್ಡಿಗಳನ್ನು ಬಳಸಿ ಬರೆದದ್ದಿರುತ್ತದೆ. ಹಾಗೇಕೆ ಎನ್ನುವುದಕ್ಕೂ ಬೇರೆಬೇರೆ ಥಿಯರಿಗಳಿವೆ. ಒಂದು ಥಿಯರಿಯ ಪ್ರಕಾರ-ಲ್ಯಾಟಿನ್ ಭಾಷೆಯಲ್ಲಿ ಜ್ಯುಪಿಟರ್ ದೇವತೆಯ ಹೆಸರು  ಎಂದು.ಗಡಿಯಾರದ ಡಯಲ್ ಮೇಲೆ  ಎಂದು ಬರೆದರೆ ಜ್ಯುಪಿಟರ್ ದೇವತೆಯ ಹೆಸರನ್ನು ಮೊಟಕುಗೊಳಿಸಿದ ಪಾಪ ತಟ್ಟಬಹುದು ಎಂದು ರೋಮನ್ನರು ಹೆದರಿದ್ದರು.
ಆದ್ದರಿಂದ ನಾಲ್ಕನ್ನು  ಎಂದು ನಾಲ್ಕುಕಡ್ಡಿಗಳನ್ನು ಬಳಸಿ ಬರೆದರು. ಇನ್ನೊಂದು ಥಿಯರಿಯ ಪ್ರಕಾರ-ತುಂಬಹಿಂದಿನ ಕಾಲದಲ್ಲಿ ಗಡಿಯಾರದಲ್ಲಿ ಗಂಟೆತೋರಿಸುವ ಒಂದೇ ಮುಳ್ಳು ಇರುತ್ತಿದ್ದದ್ದು, ಅದು ಸ್ಥಿರವಾಗಿ ಮೇಲ್ಮುಖವಾಗಿ ಇರುತ್ತಿತ್ತು, ಅಂಕಿಗಳನ್ನು ಬರೆದಡಯಲ್ ಚಲನೆಯಲ್ಲಿರುತ್ತಿತ್ತು. ಯಾವ ಅಂಕಿ ಮೇಲ್ಭಾಗಕ್ಕೆ ಬಂದಿದೆಯೋ ಸಮಯ ಅಷ್ಟುಗಂಟೆ ಎಂದು ಲೆಕ್ಕ. ಅಂಕಿಗಳನ್ನು ಬರೆದ ಡಯಲ್ ಏಕಪ್ರಕಾರವಾಗಿ ತಿರುಗ ಬೇಕಾದರೆ ಅಂಕಿಗಳಿಗಾಗಿ ಬಳಸಿದಕಡ್ಡಿಗಳ ಭಾರ ಸಮತೋಲದಲ್ಲಿರಬೇಕು. ನಾಲ್ಕನ್ನು  ಎಂದು ಬರೆಯುವುದಕ್ಕಿಂತ  ಎಂದು ಬರೆದರೆ ಸಮತೋಲಗಳಿಸಬಹುದಿತ್ತು.
ಇನ್ನೂ ಒಂದು ಥಿಯರಿಯ ಪ್ರಕಾರ- ಹನ್ನೆರಡು ಅಂಕಿಗಳ ರಚನೆಯನ್ನು ಮೂರು ಸಮ ಪ್ರಮಾಣದವಾಗಿ ವಿಂಗಡಿಸುವುದು ಸಾಧ್ಯವಾಗುತ್ತದೆ. ಉದ್ದ ಕಡ್ಡಿಗ ಳನ್ನಷ್ಟೇ ಬಳಸುವ ನಾಲ್ಕು ಅಂಕಿಗಳ ಮೊದಲಗುಂಪು: , ,  ಮತ್ತು . ಎರಡನೆಯ ಗುಂಪು  ಮತ್ತು    ಗಳನ್ನು ಬಳಸುವ ನಾಲ್ಕು ಅಂಕಿ ಗಳು: , , , .
ಮೂರನೆಯ ಗುಂಪು  ಮತ್ತು|ಗಳನ್ನು ಬಳಸುವ ನಾಲ್ಕುಅಂಕಿಗಳದು: , ,  ಮತ್ತು . ಇದೂ ಅಷ್ಟೇ. ಲೋಹದ ಎರಕದಲ್ಲಿ ಕಡ್ಡಿಗಳ ರಚನೆ ಲೆಕ್ಕಾಚಾರ ಸುಲಭವಾಗುವಂತೆ ಏರ್ಪಾಡು. ಮತ್ತೂ ಒಂದು ಥಿಯರಿಯ ಪ್ರಕಾರ 8ನ್ನು  ಎಂದು ಬರೆದಿರುವಾಗ ಸಮಮಿತಿ ಯಲ್ಲಿ ಇತ್ತ ಕಡೆ  ಎಂದು ಇದ್ದರೇನೇ ನೋಡಲಿಕ್ಕೂ ಚಂದ. ಓ ಗಡಿಯಾರದ ಕಥೆ ಇಷ್ಟೆಲ್ಲ ಇದೆಯೇ ಅಂತ ಈಗೊಂದು ಉದ್ಗಾರ ನಿಮ್ಮಿಂದ?