ಮುಕ್ಕಾಲು ಶತಮಾನದ ರಾಜಕೀಯವೂ, ಮೂರು ಥೀಮ್‌ಗಳೂ…
ವಿಶ್ಲೇಷಣೆ
ಡಾ.ಆರ್‌.ಜಿ.ಹೆಗಡೆ
ramhegde62@.
ಉಳಿದಿರುವ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಬಲವಾದ ಜಗತಿಕ ಶಕ್ತಿಯಾಗುವಂತೆ ಬಲಪಡಿಸಿ ಬಿಟ್ಟರೆ ಅಥವಾ ಅಂತಹ ಸಂಕೇತ ಗಳನ್ನು ದೇಶದ ಮುಂದಿಟ್ಟರೆ ಮೂರನೆಯ ಬಾರಿ ಕೂಡ ಅವರೇ ಗೆದ್ದು ಬಿಡುವ ಸಾಧ್ಯತೆಗಳು ಹೆಚ್ಚಿವೆ. ಅಭಿವೃದ್ಧಿ ರಾಜಕೀಯವನ್ನು ಇನ್ನೂ ಹೆಚ್ಚಿನ ಪ್ರಮಾಣ ದಲ್ಲಿ ‘ಒಳಗೊಳ್ಳುವಿಕೆ’ ಹೊಂದುವಂತೆ ಮಾರ್ಪಡಿಸುತ್ತ ಹೋಗುವುದು. ಒಮ್ಮೆ ಇದನ್ನು ಸಾಧಿಸಲು ಬಿಜೆಪಿ ಯಶಸ್ವಿಯಾದರೆ ಪಕ್ಷ ಬಹುಶಃ ಸುದೀರ್ಘ ಕಾಲ ಆಳಿ ಬಿಡಲಿದೆ.
ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತವನ್ನು ಆಳಿದವರು, ಪಕ್ಷಗಳು ಹಲವು ಇರಬಹುದು. ಆದರೆ ಆಳಿದ ‘ವಸ್ತುಗಳು’(ಥೀಮ್‌ಗಳು) ಮೂರು ಮಾತ್ರ. ರಾಜಕೀಯ ನಿರ್ಧರಿಸಲ್ಪಟ್ಟಿದ್ದು, ಚುನಾವಣೆಗಳು ನಡೆದಿದ್ದು, ಪಕ್ಷಗಳುಗೆದ್ದಿದ್ದು, ಸೋತಿದ್ದು ಇದೇ ವಿಷಯಗಳ ಮೇಲೆ. ಹಾಗಾಗಿ ಇವನ್ನು ಅರ್ಥ ಮಾಡಿಕೊಂಡರೆವರ್ಷಗಳ ರಾಜಕೀಯದ ಒಳಗನ್ನು ಅರಿಯಲು ಒಂದು ದೃಷ್ಟಿಕೋನ ಸಿಗಬಹುದು.
ನೆಹರು ಪ್ರಮುಖ ಸಂಸ್ಥೆಗಳನ್ನು ಕಟ್ಟಿದವರು ಮತ್ತು ಸ್ಥೂಲ ನೀತಿ ನಿರ್ದೇಶನಗಳನ್ನು ನೀಡಲು ಪ್ರಯತ್ನಿಸಿದ ವರು. ಆದರೆ ಅವರ ದೃಷ್ಟಿ ಒಂದು ವಿಷಯದ ಮೇಲೆ ಫೋಕಸ್ ಆಗಿರಲಿಲ್ಲ ಎಂದೇ ಹೇಳಬೇಕು. ಥೀಮ್ ಆಧರಿತ ರಾಜಕೀಯ ಆರಂಭಗೊಂಡಿದ್ದು ಶಾಸ್ತ್ರಿಯವರಿಂದ. ಅವರಿಗೆ ಬಹಳ ಸಮಯವೇನೂ ಇರಲಿಲ್ಲ. ಆದರೂ ಅವರು ತಂದ (ದೇಶದ ಮೊದಲ) ಥೀಮ್ : ‘ಬಡತನ ನಿರ್ಮೂಲನೆ’ (ಜೈಜವಾನ್ ಜೈಕಿಸಾನ್). ಭಾರತದಲ್ಲಿ ಆಗ ತೀವ್ರ ಬಡತನ ಇತ್ತು. ಹೊತ್ತು ಹೊತ್ತಿಗೆ ಕೂಳು ಇಲ್ಲದಂತಹದ್ದು. ಬಟ್ಟೆ ಇಲ್ಲದ್ದು. ಬೇರೆಲ್ಲ ವಿಷಯಗಳನ್ನೂ ಗೌಣವಾಗಿಸಿದ ಬಡತನ ಅದು.
ಇಂತಹ ಬಡತನದ ವಿರುದ್ಧ ಕಹಳೆ ಮೊಳಗಿಸಿದವರು ಲಾಲ್ ಬಹಾದ್ದೂರ್ ಶಾಸ್ತ್ರಿ. ಆದರೆ ‘ಬಡತನ ನಿರ್ಮೂ ಲನೆ’ಯನ್ನು ಒಂದು ಪ್ರಭಲ ‘ರಾಜಕೀಯ ಥೀಮ್ ಆಗಿಸಿದವರು (ಗರೀಬಿ ಹಠಾವೋ) ಇಂದಿರಾಗಾಂಧಿ ಹಸಿರು ಕ್ರಾಂತಿ ಸೃಷ್ಟಿಸಿ ದೇಶವನ್ನು ಆಹಾರದ ವಿಷಯದಲ್ಲಿ ಆತ್ಮನಿರ್ಭರವನ್ನಾಗಿಸಿದವರು. ಅವರ ಇಪ್ಪತ್ತು ಅಂಶಗಳ ಕಾರ್ಯಕ್ರಮ ಹೊಟ್ಟೆಗೆ ಹಿಟ್ಟು ನೀಡುವುದರ ಜತೆಗೇ ಬಟ್ಟೆ, ತಲೆಯ ಮೇಲೊಂದು ಸೂರು, ಶಿಕ್ಷಣ, ಭೂಮಿ, ಮೀಸಲಾತಿ ಇವುಗಳನ್ನೂ ಒದಗಿ ಸಲು ಉದ್ದೇಶಿಸಿದ್ದು. ಬಡತನ ನಿರ್ಮೂಲನೆಯ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು.
ಥೀಮ್ ಅನ್ನು ಚುನಾವಣಾ ವಿಷಯ ಅಗಿ ಕೂಡ ಯಶಸ್ವಿಯಾಗಿ ಬಳಸಿಕೊಂಡ ಇಂದಿರಾ ‘ಬಡವರ ಪಕ್ಷ’ವೆಂಬ ಹೆಗ್ಗುರುತನ್ನು ಕಾಂಗ್ರೆಸ್‌ಗೆ ಒದಗಿಸಿದವರು. ಈ ಅಜೆಂಡಾವನ್ನು ‘ಜತ್ಯತೀತತೆ’ಯ, (ಸೂಕ್ಮವಾದ ಮೈನಾರಿಟಿ ರಾಜಕೀಯ?)ಮತ್ತು ಸಮಾಜವಾದದ ಜತೆ ಬೆರೆಸಿದ್ದ ಶ್ರೀಮತಿ ಗಾಂಧಿ ರಾಜಕೀಯದ ಪರಿಣಾಮ ವಾಗಿಯೇ ಕಾಂಗ್ರೆಸ್ ದೀರ್ಘಕಾಲ ದೇಶವನ್ನು ಆಳಿದ್ದು. ಮತ್ತು ಇಂದಿಗೂ ‘ಅಂದ ಮಾದರಿ’ ರಾಜಕೀಯ ಜೀವಂತವಾಗಿಯೇ ಇದ್ದಿದ್ದು.
ಬಡತನವನ್ನು ಇಂದಿರಾ ಕೇವಲ ರಾಜಕೀಯಕ್ಕಾಗಿ ಬಳಸಿಕೊಂಡರು ಎಂದು ಹೇಳಿದರೆ ತಪ್ಪಾಗುತ್ತದೆ. ಆದರೆ ಅವರಿಗೆ ವಿಷಯದ ರಾಜಕೀಯ ಶಕ್ತಿ ಗೊತ್ತಿತ್ತುಎಂದೇ ಅನಿಸಿಕೆ.(ಬೇರೆ ವರ್ಗಗಳು ಕಾಂಗ್ರೆಸ್ ಅನ್ನು ಬೆಂಬಲಿಸಲೇ ಇಲ್ಲ ಎಂದೇನೂ ಅಲ್ಲ. ಇಂದಿರಾ ಬೇರೆ ಏನೂ ಮಾಡಲೇ ಇಲ್ಲ ಎಂದೂ ಅಲ್ಲ. ಹೇಳುತ್ತಿರು ವುದು ಸ್ಥೂಲವಾಗಿ.) ಈ ಥೀಮ್ ಅನ್ನು ‘ಬಡತನ ನಿರ್ಮೂಲನೆ’ಯ ರಾಜಕೀಯ ಎಂದು ಹೇಳಬಹುದೇನೋ! ಇಂದಿರಾ ರಾಜಕೀಯ ಬಡತನವನ್ನು ಓಡಿಸಲು ಬಹಳ ಮಟ್ಟಿಗೆ ಯಶಸ್ವಿಯಾಗಿದ್ದೂ ನಿಸ್ಸಂಶಯ.
ಎರಡನೆಯ ಥೀಮ್ ‘ಅಭಿವೃದ್ಧಿಯ ರಾಜಕೀಯ’. (ಮಧ್ಯಮ ವರ್ಗ ಅದನ್ನು ಹಾಗೆ ಗ್ರಹಿಸುತ್ತದೆ.)ಅದು ಆಗಮಿಸಿದ್ದು ಎಂಬತ್ತರ ದಶಕದಲ್ಲಿ. (ಹಿಂದುಳಿದ  ವರ್ಗ  ‘ಅಭಿವೃದ್ಧಿಯ ರಾಜಕೀಯ’ವನ್ನು ಬೆಂಬಲಿಸಲೇ ಇಲ್ಲ ಎಂದೇನೂ ಅಲ್ಲ. ಹೇಳುತ್ತಿರುವುದು ಸ್ಥೂಲವಾಗಿ.) ವ್ಯಂಗ್ಯವೆಂದರೆ ಇಂದಿರಾ ರಾಜಕೀಯದ ಫಲಶ್ರುತಿ ಯಾಗಿ ಹುಟ್ಟಿಕೊಂಡ ವರ್ಗವೇ ಅದಕ್ಕೆ ವಿರುದ್ಧವಾದ ಥೀಮ್ ಅನ್ನು ಸೃಷ್ಟಿಸಿ ಬಿಟ್ಟಿದ್ದು. ಈಗ ಜನತೆಯ ದೊಡ್ಡ ಭಾಗ ಕ್ರಮೇಣ ಹಿಂದಿನ ರೀತಿಯ ಬಡತನದಿಂದಹೊರಬರುತ್ತ ಹೋಯಿತು. ಮಧ್ಯಮ ವರ್ಗ ಹುಟ್ಟಿಕೊಳ್ಳಲಾರಂಭಿಸಿತು. ಈ ವರ್ಗಕ್ಕೆ ‘ಬಡತನ ನಿರ್ಮೂಲನದ ರಾಜಕೀಯ’ ಮತ್ತು ಆ ಹೆಸರಿನಲ್ಲಿ ಹುದುಗಿದ್ದ ಬೇರೆ ವಿಷಯಗಳು (ಮೈನಾರಿಟಿ ರಾಜಕೀಯ?) ಸೇರಿಬರಲೇ ಇಲ್ಲ.
ಸಬ್ಸಿಡಿ ಸಂಸ್ಕೃತಿಗೂ ವರ್ಗ ತೀವ್ರ ವಿರೋಧ ಆರಂಭಿಸಿತು. ಕಾಂಗ್ರೆಸ್‌ನ ಪತನ ಆರಂಭವಾಗಿದ್ದು ಬಹುಶಃ ಇಲ್ಲಿಂದಲೇ. ಹೀಗಾಗಿಯೇ. ‘ಅಭಿವೃದ್ಧಿಯ ರಾಜಕೀಯ’ ಮೊದಲು ಹುಟ್ಟಿಕೊಂಡಿದ್ದು ಶಹರಗಳ ಮಧ್ಯಮ ವರ್ಗದ ಕೇಂದ್ರಗಳಲ್ಲಿ. ಕ್ರಮೇಣ ಬೇರೆಡೆಗೂ ಹರಡಿಕೊಂಡ ಈ ವರ್ಗ1977ರ ಸುಮಾರಿಗೆ ಒಂದು ರಾಜಕೀಯ ಶಕ್ತಿಯಾಗಿ ತನ್ನ ಪ್ರತ್ಯೇಕ ಅಜೆಂಡಾವನ್ನು ಗುರುತಿಸಿಕೊಳ್ಳಲು ಆರಂಭಿಸಿತು. ಇಂದಿರಾ ಸೋತ ಎಪ್ಪತ್ತೇಳರ ಚುನಾವಣೆಯನ್ನು ನವಮಧ್ಯಮ ವರ್ಗದ ರಾಜಕೀಯದ ಮೊದಲ ಗೆಲುವು ಎಂದು ಹೇಳಬಹುದು. ಇಲ್ಲಿ ಆ ರಾಜಕೀಯ ಶಕ್ತಿಗಳು ಕಾಂಗ್ರೆಸ್ ವಿರುದ್ಧ ಒಂದಾಗಿದ್ದವು.(ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟ ಇತ್ಯಾದಿ ವಿಷಯಗಳು ಮಧ್ಯಮ ವರ್ಗದ ರಾಜಕೀಯ ಅಜೆಂಡಾಗಳು.) ಎಂಬತ್ತರಲ್ಲಿ ಮತ್ತೆ ಇಂದಿರಾ ಗೆದ್ದಿದ್ದಕ್ಕೆ ಕಾರಣ ಕೂಡಿಕೊಂಡಿದ್ದ ರಾಜಕೀಯ ಶಕ್ತಿಗಳು ವಿದಳನಗೊಂಡಿದ್ದು.
ಮಧ್ಯಮ ವರ್ಗ ಸ್ಥೂಲವಾಗಿ ಎರಡು ವಿಷಯಗಳನ್ನು ಬೇಡುತ್ತದೆ. ಒಂದು. ಆರ್ಥಿಕ ಮತ್ತು ಮೂಲಭೂತ ಸೌಲಭ್ಯದ ಅಭಿವೃದ್ಧಿ. ಇದರಲ್ಲಿ ಜಗತೀಕರಣ, ಆಧುನೀ ಕರಣ ಮತ್ತು ಖಾಸಗೀಕರಣಗಳೂ ಸೇರಿವೆ. ಎರಡು. ತನ್ನ ಸಂಸ್ಕೃತಿಯ ರಕ್ಷಣೆ ಹಾಗೂ ಅದರ ಸಂಕೇತಗಳ ಅಭಿವೃದ್ಧಿ. ಐಡೆಂಟಿಟಿಯ ರಾಜಕೀಯ. ಸಹಜವಾಗಿ ಮಧ್ಯಮ ವರ್ಗದ ಮನಸ್ಸಿನಲ್ಲಿ ಈಗ ಬಂದ ಪ್ರಶ್ನೆ ದೇಶ ಹೇಗಿರಬೇಕು? ಎನ್ನುವುದು. ಹಾಗಾಗಿಯೇ ‘ಭಾರತದ ಪರಿಕಲ್ಪನೆ’ಯ ಕುರಿತಾದ ದೊಡ್ಡ ಚರ್ಚೆ ಆರಂಭ ವಾಗಿದ್ದು.
ಸಂವಿಧಾನ ರಚನೆಯ ಸಂದರ್ಭದಲ್ಲಿ ಚರ್ಚೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆದರೆ ಈಗ ಅದು ನಡೆದಿದ್ದು ಜನರ ನಡುವೆ. ಎರಡು ಪರಿಕಲ್ಪನೆಗಳು ಆಯ್ಕೆಗೆ ಇಲ್ಲಿ ಲಭ್ಯವಿದ್ದವು. ಒಂದು ಕಾಂಗ್ರೆಸ್ ಹೇಳಿದ ರೀತಿಯ ‘ಜತ್ಯತೀತ’ ದೇಶ. ಎರಡನೆಯದು ಬಿಜೆಪಿ ಎತ್ತಿಡಿದ ‘ಹಿಂದುತ್ವ’ ಪ್ರಧಾನವಾದ ‘ಸಾಂಸ್ಕೃತಿಕ ರಾಷ್ಟ್ರೀಯತೆ’. ಹಿಂದೂ ಸಂಸ್ಕ್ರೃತಿ ದೇಶದ ಪರಿಕಲ್ಪನೆಯ ಕೇಂದ್ರ ಬಿಂದು ಎಂದು ಬಿಜೆಪಿ ವಾದಿಸಿತು. ಜತ್ಯತೀತತೆ ‘ಓಲೈಸುವಿಕೆಯ ತಂತ್ರ ’ಎಂದು ಹೇಳಿತು. ರಾಷ್ಟ್ರೀಯತೆದೇಶದ ಅಭಿವೃದ್ಧಿಯ ಭಾಗ ಎಂಬ ನಿಲುವನ್ನು ಅದು ತಳೆಯಿತು. ಚರ್ಚೆಯ ಅಂಗವಾಗಿಯೇ ನಡೆದಿದ್ದು ಆಡ್ವಾಣಿಯವರ ರಥಯಾತ್ರೆ ಮತ್ತು ರಾಮಮಂದಿರಚಳವಳಿ. ಕ್ರಮೇಣ ಜನತೆ ಬಿಜೆಪಿಯ ವಾದವನ್ನು (ವರ್ಗಾತೀತವಾಗಿ) ಒಪ್ಪಿಕೊಳ್ಳುತ್ತಲೇ ಹೋಯಿತು.
ಹಾಗಾಗಿ ಎಂಬತ್ತರ ದಶಕದಲ್ಲಿದ್ದ ‘ಗರೀಬಿ ಹಟಾವೋ’ ರಾಜಕೀಯ ಹಿಂದೆ ಸರಿದು ‘ಅಭಿವೃದ್ಧಿ ರಾಜಕೀಯ’ ಮುನ್ನೆಲೆಗೆ ಬಂತು.(ಬಿಜೆಪಿಯನ್ನು ಆರ್ಥಿಕವಾಗಿಹಿಂದುಳಿದ ವರ್ಗಗಳು ಬೆಂಬಲಿಸಲೇ ಇಲ್ಲ ಎಂದೇನೂ ಅಲ್ಲ. ಹೇಳುತ್ತಿರುವುದು ಸ್ಥೂಲವಾಗಿ) ಇಂತಹ ಬೆಳವಣಿಗೆಗೆ ಬಹುಶಃ ನಾಲ್ಕು ಕಾರಣಗಳಿವೆ.
೧.ಮಧ್ಯಮ ವರ್ಗದ ಉದಯ ಮತ್ತು ‘ಅಭಿವೃದ್ಧಿ ರಾಜಕೀಯ’ವನ್ನು ಅದು ಬಯಸಿದ್ದು.
೨. ಕಾಂಗ್ರೆಸ್‌ನ ಹೊಸ ನಾಯಕತ್ವ ‘ಕಾಂಗ್ರೆಸ್ ಅಜೆಂಡಾ’ಕ್ಕಿಂತ ‘ಬಿಜೆಪಿ ಅಜೆಂಡಾ’ಕ್ಕೇ ಹತ್ತಿರವಾಗಿರುವಂತೆ ತೋರಿ ಬಂದಿದ್ದು.
ಅಭಿವೃದ್ಧಿ ರಾಜಕೀಯದ ಫಲಗಳ ರುಚಿ ತೋರಿಸಿ ಹೋದವರು ರಾಜೀವ್. (ಟೆಲಿಕಾಮ್, ಟೆಲಿವಿಶನ್ ಮತ್ತು ಕಂಪ್ಯೂಟರ್ ಇತ್ಯಾದಿ ನೀತಿಗಳ ಮೂಲಕ).ಜಗತೀಕರಣ ಮತ್ತು ಮುಕ್ತ ಆರ್ಥಿಕತೆಯ ಬೀಜಗಳನ್ನು ಬಿತ್ತಿದವರು ಅವರು. ದೇಶದ ಅಭಿವೃದ್ಧಿಯ ವಿಷಯ ಬಂದಾಗ ರಾಜೀವ್ ಅವರನ್ನು ಕೃತಜ್ಞತೆಯಿಂದ ನೆನೆಯಲೇಬೇಕು.ಆದರೆ ಬಹುಶಃ ಇದರಿಂದಾಗಿ ಕಾಂಗ್ರೆಸ್ ಒಂದು ಐಡೆಂಟಿಟಿ ಕ್ರೈಸಿಸ್ ನಲ್ಲಿ ಸಿಲುಕಿ ಹೋಯಿತು.
ಅಂದರೆ ‘ಹಳೆಯ’ ಮತ್ತು ‘ಹೊಸ ಥೀಮ್’ಗಳ ನಡುವೆ ತಾನು ಎಲ್ಲಿ ನಿಂತಿದ್ದೇನೆ ಎನ್ನುವ ಸಷ್ಟತೆಯನ್ನು ಬಹುಶಃ ಕಳೆದುಕೊಂಡಿತು. ಪಕ್ಷ ಬಿಜೆಪಿ ನಿಲುವಿಗೇ ಹತ್ತಿರವಾಗಿದೆ ಎಂಬ ಭಾವನೆ ಬಹುಶಃ ಅದರ ಪರಂಪರಾಗತ ಬೆಂಬಲಿತ ವರ್ಗಗಳಲ್ಲಿ ಬಂದು ಹೋಯಿತು. ಪರಿಣಾಮವಾಗಿ ‘ಬಡವರ ಪಕ್ಷ ’ಎನ್ನುವ ಗುರುತನ್ನೇ ಬಹುಶಃ ಕಾಂಗ್ರೆಸ್ ಕಳೆದುಕೊಂಡುಬಿಟ್ಟಿತು. ಮತ್ತು ‘ವರ್ಗ’ ಕಾಂಗ್ರೆಸ್‌ಗೆ ತಾನು ನೀಡಿದ್ದ ಬೆಂಬಲ ವಾಪಸ್ ಪಡೆದು ಪ್ರಾದೇಶಿಕ ಪಕ್ಷಗಳಿಗೆ ನೀಡಿಬಿಟ್ಟಿತು.
ಇದರಿಂದಾಗಿಯೇ ಮುಲಾಯಂ ಸಿಂಗ್, ಲಾಲೂ ಯಾದವ್, ಮಾಯಾವತಿಯಂಥವರು ರಾಜಕೀಯದಲ್ಲಿ ಬೆಳೆದದ್ದು. ಇದನ್ನು ಅರಿತೇ ವಿ.ಪಿ.ಸಿಂಗ್‌ಅಗಿನಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಭಿನ್ನವಾದ, ಹಳೆಯ ಕಾಂಗ್ರೆಸ್ ಯುಗವನ್ನು ಮರಳಿ ತರಲು ಪ್ರಯತ್ನಿಸಿದ್ದು. ಪರಿಣಾಮವಾಗಿ ಸಿಂಗ್ ವಿರುದ್ಧ ತೀವ್ರವಾಗಿ ಮುನಿಸಿಕೊಂಡ ಮಧ್ಯಮ ವರ್ಗ ರಾಷ್ಟ್ರೀಯವಾಗಿ ಒಂದುಗೂಡಿ ಬಿಜೆಪಿಯ ಬಲವರ್ಧನೆಗೆ ಕಾರಣವಾಗಿ ಹೋಯಿತು.
೩. ಭಾರತೀಯ ಜನತಾ ಪಕ್ಷದ ಉದಯ ಮತ್ತು ನವಮಧ್ಯಮ ವರ್ಗ ತನ್ನ ಧ್ವನಿಯನ್ನು ಪಕ್ಷದಲ್ಲಿ ಕಂಡುಕೊಂಡಿದ್ದು. ಪಕ್ಷ ಯುವ ಜನರ ಮನಸ್ಸನ್ನು ಸೆಳೆದಿದ್ದು. ವಾಜಪೇಯಿ ಮತ್ತು ಆಡ್ವಾಣಿ ಅವರ ಪ್ರಚಂಡ ಜನಪ್ರಿಯತೆಯಿಂದಾಗಿಯೇ ಪ್ರಾದೇಶಿಕ ಪಕ್ಷಗಳ ಹಿಡಿತ ಕಡಿಮೆಯಾಗಿ ಬಿಜೆಪಿ ಅಧಿಕಾರಕ್ಕೆ ಬರಲಾರಂಭಿಸಿದ್ದು.೪. ಸಮಾಜವಾದಿ ರಾಜಕೀಯದ ಕುಸಿತದಿಂದಾಗಿ ಜಗತಿಕವಾಗಿ ಸೃಷ್ಟಿಯಾಗಿ ಹೋದ ಜಗತೀಕರಣ ಮತ್ತು ಖಾಸಗೀಕರಣದ ವಾತಾವರಣ. ಇಂಗ್ಲೆಂಡ್‌ನಮಾರ್ಗರೆಟ್ ಥ್ಯಾಚರ್ ಮತ್ತು ಅಮೆರಿಕದ ರೋನಾಲ್ಡ್ ರೇಗನ್ ಜಗತಿಕವಾಗಿ ಇಂತಹ ಆರ್ಥಿಕತೆಯ ರೂವಾರಿಗಳು.
ಫಲವಾಗಿ ದೇಶದ ನೀತಿಯೂ ಸಮಾಜವಾದಿ ಬಂಧನಗಳಿಂದ ಹೊರ ಬಂದು ಹೊಸ ಆರ್ಥಿಕತೆಯತ್ತ ಮುಖ ಮಾಡಬೇಕಾಯಿತು. ಇದೆಲ್ಲ ರಾತ್ರಿ ಬೆಳಗಾಗುವು ದರಲ್ಲಿ ನಡೆಯಲಿಲ್ಲ. ಅಧಿಕಾರದತ್ತ ಬಿಜೆಪಿ ಚಲನೆಗೆ ಸಾಕಷ್ಟು ಪ್ರತಿರೋಧವಿತ್ತು. ಒಂದು ‘ವಸ್ತು’ ಹೋಗಿ ಇನ್ನೊಂದು ವಸ್ತು ಮತ್ತು ಪಕ್ಷ ಅಧಿಕಾರಕ್ಕೆ ಬರುವುದು ಸುಲಭವಾಗಿರಲಿಲ್ಲ. ಅದಕ್ಕೆ ವರ್ಷಗಳೇ ಬೇಕಾದವು. ತೊಂಬತ್ತೊಂದರಿಂದ ಆರಂಭಿಸಿ ಮುಂದಿನ ಸುಮಾರು ಎರಡು ದಶಕಕ್ಕೂ ಹೆಚ್ಚಿನ ಕಾಲ ‘ಬಡತನ ನಿವಾರಣೆಯ’ ಮತ್ತು ‘ಅಭಿವೃದ್ಧಿ ರಾಜಕೀಯದ’ ನಡುವಿನ ಸಂಘರ್ಷದ ಸಮಯ. ಈ ಕಾರಣದಿಂದಲೇ ದೇಶದಲ್ಲಿ ಹಲವು ಬಾರಿ ಸಮ್ಮಿಶ್ರ ಸರಕಾರಗಳು ಹುಟ್ಟಿ ಕೊಂಡಿದ್ದು.
ಆದರೆ ಕ್ರಮೇಣ ‘ಅಭಿವೃದ್ಧಿ ರಾಜಕೀಯ’ ಹಿಡಿತ ಸಾಧಿಸುತ್ತ ಹೋಗಿ ಕಾಂಗ್ರೆಸ್ ಹೊಂದಿದ್ದ ಸ್ಥಾನಮಾನವನ್ನು ಬಿಜೆಪಿ ಆಕ್ರಮಿಸುತ್ತ ಹೋಯಿತು. ಮುಂದೆ ಬಂದ ಪ್ರಧಾನಿ ನರಸಿಂಹರಾವ್ ಕೂಡ ಅನಿವಾರ್ಯವಾಗಿ (ಹೆಚ್ಚು ಕಡಿಮೆ ಬಿಜೆಪಿಯ ಅಜೆಂಡಾ) ಜಗತೀಕರಣ ಮತ್ತು ಖಾಸಗೀಕರಣವನ್ನು ದೇಶದಲ್ಲಿ ಬೆಳೆಸಿ ಬಿಟ್ಟವರು. ನರಸಿಂಹರಾವ್ ಮತ್ತು ಅವರ ಹಣಕಾಸು ಸಚಿವ ಮನಮೋಹನ್‌ಸಿಂಗ್ ‘ಅಭಿವೃದ್ಧಿ ರಾಜಕೀಯದ’ ಎರಡು ಕಣ್ಣುಗಳಾಗಿ ಹೋದರು. ಆದರೂ ಕಾಂಗ್ರೆಸ್ ಸೋತ ಕಾರಣ ಪಕ್ಷ ತನ್ನ ಐಡೆಂಟಿಟಿಯನ್ನೇ ಕಳೆದುಕೊಂಡಿದ್ದು.
ಸ್ಪಷ್ಟವಾಗಿದ್ದ ಬಿಜೆಪಿಯ ಥೀಮ್‌ಗೆ ಬೆಂಬಲ ವ್ಯಕ್ತವಾಗುತ್ತ ಹೋಯಿತು. ಈಗ ವಾಜಪೇಯಿ ಅಧಿಕಾರಕ್ಕೆ ಬಂದರು. ಆದರೂ ಗಮನಿಸಬೇಕು. ಭಾರೀ ಜನಪ್ರಿಯ ತೆಯ ವಾಜಪೇಯಿ ಮತ್ತು ಕಾಂಗ್ರೆಸ್‌ನಿಂದ ಬಂದ ಖಾಸಗೀಕರಣದ ರೂವಾರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಂಘನೆಯಾದ ಎಲ್ಲವೂ ಮೈತ್ರಿಸರಕಾರಗಳೇ. ಅಂದರೆ ಬಡತನ ನಿವಾರಣೆಯ ಹಾಗೂ ಅಭಿವೃದ್ಧಿ ರಾಜಕೀಯಗಳ ನಡುನ ಸಂಘರ್ಷಕ್ಕೆ ಸ್ಪಷ್ಟ ಪರಿಹಾರ ಎರಡು ಸಾವಿರದ ಹದಿಮೂರರ ತನಕವೂ ದೊರೆಯಲೇ ಇಲ್ಲ. ಅವೆಲ್ಲವನ್ನೂ ಒಂದು ಅರ್ಥದಲ್ಲಿ ‘ಟ್ರಾನ್ಸಿಶನಲ್ ಸರಕಾರಗಳು’ ಎಂದು ಹೇಳಬಹುದು.
ಗೊಂದಲಗಳು ಹಿಂದಾಗಿ ಹೊಸ ಥೀಮ್ ಹುಟ್ಟಿಕೊಂಡಿದ್ದು ಮತ್ತು ದೇಶದ ನಿರ್ದೇಶನಗಳೇ ಬದಲಾದದ್ದು ನರೇಂದ್ರ ಮೋದಿಯವರಿಂದ. ಗುಜರಾತ್‌ನಲ್ಲಿ ನೀಡಿದ್ದ ಶ್ರೇಷ್ಠ ಆಡಳಿತದಿಂದಾಗಿ ಮೋದಿ ಅಭಿವೃದ್ಧಿ ರಾಜಕೀಯದ ಐಕಾನ್ ಆಗಿದ್ದವರು. ಆದರೂ ಕೇಂದ್ರದಲ್ಲಿ ಮೋದಿಯವರು ಗಳಿಸಿದ ಪ್ರಚಂಡ ಯಶಸ್ಸಿನ ಹಿಂದಿ ರುವುದು ಭಾರತದ ರಾಜಕೀಯಕ್ಕೆ ಅವರು ತಂದ ಹೊಸ (ದೇಶಕಂಡ ಮೂರನೆಯ) ಥೀಮ್. ಅದೆಂದರೆ ಬಿಜೆಪಿಯ ‘ಸಾಂಸ್ಕೃತಿಕ ರಾಜಕೀಯ’ಕ್ಕೆ ಈಗ ಅವರು ಜೋಡಿಸಿದ ‘ಗಟ್ಟಿಯಾದ ರಾಷ್ಟ್ರೀಯತೆ’ಯ(ಅಸ್ಸರ್ಟಿವ್ ನ್ಯಾಶಲಿಸಂ) ಥೀಮ್.
ಜತೆಗೇ ಪ್ರದಾನಿ ಮೋದಿ ತಮ್ಮ ಪರಿಕಲ್ಪನೆಯ ಗಟ್ಟಿ ರಾಷ್ಟ್ರೀಯತೆಯನ್ನು ಕೃತಿಗಳಿಂದ ಎತ್ತಿ ಹಿಡಿದು ತೋರಿಸಿದ್ದು.(ಯಶಸ್ವಿ ಸರ್ಜಿಕಲ್ ಸ್ಟ್ರ್ರೈಕ್, ನೂರು ಕೋಟಿ ಕರೋನಾ ವ್ಯಾಕ್ಸಿನ್‌ಗಳನ್ನು ಚಿಕ್ಕ ಅವಧಿಯಲ್ಲಿಯೇ ಹಾಕಿದ್ದು ಮತ್ತು ಭಾರತ ಅಪಾರ ಆರ್ಥಿಕ ಬೆಳವಣಿಗೆಯ ಸಾಧ್ಯತೆಗಳನ್ನು ತೋರಿಸಿರುವುದು ಇದಕ್ಕೆ ಉದಾ ಹರಣೆಗಳು.) ಹಾಗಾಗಿಯೇ ಇಂದು ಮೋದಿ ಒಂದು ರೂಪಕ. ಸೂಪರ್ ಪವರ್ ಭಾರತದ ರೂಪಕ. ಅಭಿವೃದ್ಧಿ, ಸಾಂಸ್ಕ್ಕೃತಿಕ ರಾಜಕೀಯ ಹಾಗೂ ಬಲವಾದ ರಾಷ್ಟ್ರೀಯತೆ ಎಲ್ಲವನ್ನೂ ಕೂಡಿಸಿದ ಥೀಮ್‌ನ ಪ್ರತಿಬಿಂಬವಾಗಿರುವವರು ಹಾಗಾಗಿ ಎಲ್ಲ ವರ್ಗಗಳೂ ಮೋದಿಯವರನ್ನು ಬೆಂಬಲಿಸಿವೆ.
ಇಲ್ಲವಾದರೆ ಅವರಿಗೆ ಅಂತಹ ಪ್ರಚಂಡ ಬಹುಮತ ಪ್ರಾಪ್ತವಾಗುತ್ತಿರಲಿಲ್ಲ. ಮುಂದೆ ಏನಾಗುತ್ತದೆ? ಉಳಿದಿರುವ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶ ವನ್ನು ಬಲವಾದ ಜಗತಿಕ ಶಕ್ತಿಯಾಗುವಂತೆ ಬಲಪಡಿಸಿ ಬಿಟ್ಟರೆ ಅಥವಾ ಅಂತಹ ಸಂಕೇತಗಳನ್ನು ದೇಶದ ಮುಂದಿಟ್ಟರೆ ಮೂರನೆಯ ಬಾರಿ ಕೂಡ ಅವರೇ ಗೆದ್ದು ಬಿಡುವ ಸಾಧ್ಯತೆಗಳು ಹೆಚ್ಚಿವೆ. ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿರುವುದು ಈ ಹಿನ್ನೆಲೆ ಯಲ್ಲಿ ಇರಬಹುದು.
ಕಾಂಗ್ರೆಸ್‌ನ ಸಮಸ್ಯೆಯೆಂದರೆ ಅದು ಇನ್ನೂ ಬಹುಶಃ ತನ್ನ ಐಡೆಂಟಿಟಿ ಏನು ಎನ್ನುವುದರ ಕುರಿತು ಸ್ಪಷ್ಟತೆ ಹೊಂದಿಲ್ಲ ಎನ್ನುವ ಭಾವನೆಯನ್ನು ಜನತೆ ಅನುಭವಿಸು ತ್ತಿರುವುದು. ಹಾಗೆಂದು ಬಿಜೆಪಿಗೆ ಕೂಡ ಬಹುಶಃ ಸವಾಲಿದೆ. ಅದೇನೆಂದರೆ ಬಹುಶಃ ಅಭಿವೃದ್ಧಿ ರಾಜಕೀಯವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ‘ಒಳಗೊಳ್ಳುವಿಕೆ’ ಹೊಂದುವಂತೆ ಮಾರ್ಪಡಿಸುತ್ತ ಹೋಗುವುದು. ಒಮ್ಮೆ ಇದನ್ನು ಸಾಧಿಸಲು ಬಿಜೆಪಿ ಯಶಸ್ವಿಯಾದರೆ ಪಕ್ಷ ಬಹುಶಃ ಸುದೀರ್ಘ ಕಾಲ ಆಳಿ ಬಿಡಲಿದೆ.