ವೈದ್ಯಕೀಯ ಗರ್ಭಪಾತ ತಡೆಗಟ್ಟೋಣ
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ವಾಲ್ಮೀಕಿ ರಾಮಾಯಣ, ಸುಂದರಕಾಂಡ, 28ನೆಯ ಸರ್ಗದಲ್ಲಿರುವ ೬ನೇಯ ಶ್ಲೋಕ. ರಾವಣನು ವಿಧಿಸಿರುವ ಗಡುವಿನೊಳಗೆ ಲೋಕನಾಥನು (ರಾಮನು) ಬಂದು ನನ್ನನ್ನು ರಕ್ಷಿಸದಿದ್ದರೆ, ಕ್ಷೌರಿಕನು ತನ್ನ ಹರಿತವಾದ ಆಯುಧದಿಂದ ಹೇಗೆ ಪಿಂಡವನ್ನುಚೂರುಚೂರು ಮಾಡಿ ತೆಗೆಯುತ್ತಾನೋ, ಹಾಗೆ ರಾಕ್ಷಸ ರಾಜನು ನನ್ನನ್ನು ಕತ್ತರಿಸಿ ತುಂಡು ತುಂಡನ್ನಾಗಿ ಮಾಡುತ್ತಾನೆ ಇದು ಶ್ಲೋಕದತಾತ್ಪರ್ಯ.
ಅಶೋಕವನದಲ್ಲಿ ಸೀತೆಯು ಆಡುವ ಮಾತಿದು. ರಾಮಾಯಣದ ಕಾಲದಲ್ಲಿ, ಮಹಿಳೆಯ ಗರ್ಭದಲ್ಲಿ ಬೆಳೆಯು ತ್ತಿರುವ ಅನಗತ್ಯ ಪಿಂಡವನ್ನು ಕ್ಷೌರಿಕರು ತಮ್ಮ ಹರಿತ ಆಯುಧದಿಂದ ತುಂಡುತುಂಡನ್ನಾಗಿ ಮಾಡಿತೆ ಗೆಯುತ್ತಿದ್ದರು ಎನ್ನುವ ವಿಚಾರವು ತಿಳಿದುಬರುತ್ತದೆ. ಇದು ಅಂದಿನ ಶಸ್ತ್ರವೈದ್ಯಕೀಯವು ಸಾಕಷ್ಟುಸುಧಾ ರಿಸಿತ್ತು ಹಾಗೂ ಕ್ಷೌರಿಕರು ಶಸವೈದ್ಯರಾಗಿದ್ದರು ಎನ್ನುವ ವಿಚಾರವನ್ನು ಸ್ಪಷ್ಟಪಡಿಸುತ್ತದೆ.
ಗರ್ಭಸ್ರಾವ ಮತ್ತು ಗರ್ಭಪಾತ ಎನ್ನುವ ಎರಡು ಶಬ್ದಗಳ ಅರ್ಥವನ್ನು ತಿಳಿದುಕೊಳ್ಳಬೇಕು. ಗರ್ಭಸ್ರಾವ ಎಂದರೆ, ಮನುಷ್ಯನ ಯಾವ ಪ್ರಯತ್ನವೂ ಇಲ್ಲದೇ, ಕಟ್ಟಿರುವ ಗರ್ಭವು ತನಗೆತಾನೇ ಜಾರಿ ಹೊರಬರುವುದು. ಗರ್ಭಪಾತವೆಂದರೆ, ಪ್ರಜ್ಞಾಪೂರ್ವಕವಾಗಿ ಬೆಳೆಯುತ್ತಿರುವ ಗರ್ಭವನ್ನು ನಾಶಪಡಿಸಿ ಹೊರಬರು ವಂತೆ ಮಾಡುವುದು. ಗರ್ಭಧಾರಣೆಯಲ್ಲಿ ಎರಡು ವಿಧ. ಯೋಜಿತಗರ್ಭಧಾರಣೆ ಹಾಗೂ ಆಕಸ್ಮಿಕ ಗರ್ಭಧಾರಣೆ. ಜಗತ್ತಿನಲ್ಲಿ ಯೋಜಿತಗರ್ಭಧಾರಣೆಯು ತೀರಾ ಸೀಮಿತ. ಬಹಳಷ್ಟು ಗರ್ಭಧಾರಣೆಗಳು ಅಯೋಜಿತವಾಗಿ ಸಂಭವಿಸುತ್ತವೆ.
ಇಂತಹ ಪ್ರತಿ 10 ಅಯೋಜಿತ ಗರ್ಭಧಾರಣೆಗಳಲ್ಲಿ 6 ಗರ್ಭಗಳು ಗರ್ಭಪಾತಕ್ಕೆ ಒಳಗಾಗುತ್ತವೆ ಎನ್ನುತ್ತದೆ ವಿಶ್ವಸಂಸ್ಥೆಯ ಅಂಕಿಅಂಶಗಳು. 97% ಗರ್ಭಪಾತಗಳು ಮುಂದುವರೆದ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ನಡೆಯುತ್ತದೆ. ಇವುಗಳಲ್ಲಿ ೪೫% ಗರ್ಭಪಾತಗಳು ಅಸುರಕ್ಷಿತ ವಿಧಾನಗಳ ಮೂಲಕ, ಅಸುರಕ್ಷಿತ ಪರಿಸರದಲ್ಲಿ ನಡೆಯುತ್ತವೆ. ಈ ಕಾರಣ ಪ್ರತಿವರ್ಷ ಸುಮಾರು 47000 ತಾಯಂದಿರ ಮರಣವಾಗುತ್ತಿದೆ. ಅನಗತ್ಯ ಆಸ್ಪತ್ರೆಯ ದಾಖಲು, ಶಾರೀರಿಕ ಹಾಗೂ ಮಾನಸಿಕ ಆಘಾತಗಳು ಹೆಚ್ಚುತ್ತವೆ. ಈ ಹಿನ್ನೆಲೆಯಲ್ಲಿ ಯಾವಾಗಲೂ ಸುರಕ್ಷಿತಗರ್ಭಪಾತವನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.
ಗರ್ಭಪಾತವು ಅನಾದಿ ಕಾಲದ್ದು. ಪ್ರಾಚೀನ ಭಾರತದಲ್ಲಿ ಗರ್ಭಪಾತಕ್ಕೆ ವಿರೋಧವಿತ್ತು. ಆದರೂ ಗರ್ಭಪಾತಗಳು ನಡೆಯುತ್ತಿದ್ದವು ಎನ್ನುವುದಕ್ಕೆ ರಾಮಾ ಯಣದ ಶ್ಲೋಕವು ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಭಾರತೀಯ ಧರ್ಮಶಾಸ್ತ್ರಗಳು ಗರ್ಭಪಾತವನ್ನು ನಿಷೇಽಸುತ್ತವೆ. ಏಕೆಂದರೆ ಅಂಡಾಣು ಮತ್ತುವೀರ್ಯಾಣುಗಳ ಸಂಯೋಗ ಸಮಯದಲ್ಲಿ ಆತ್ಮನ ಪ್ರವೇಶವಾಗುತ್ತದೆ ಎನ್ನುವುದು ಶಾಸಗಳ ನಂಬಿಕೆ. ಹಾಗಾಗಿ ಭ್ರೂಣಹತ್ಯೆಯು ನರಹತ್ಯೆಗೆ ಸಮನಾಗುತ್ತದೆ. ಪ್ರಜ್ಞಾಪೂರ್ವಕ ಗರ್ಭಪಾತವು ಮಹಾಪಾಪವೆಂಬ ನಂಬಿಕೆಯಿದೆ.
ಬೌದ್ಧಧರ್ಮವು ಗರ್ಭಪಾತವನ್ನು ಮಾನ್ಯ ಮಾಡುವುದಿಲ್ಲ. ಏಕೆಂದರೆ ಅಂಡಾಣು ಮತ್ತು ವೀರ್ಯಾಣುಗಳ ಸಂಗಮ ಸಮಯದಲ್ಲಿ ಜೀವೋತ್ಪತ್ತಿಯಾಗುತ್ತದೆ. ದಲಾಯಿ ಲಾಮರವರು ಗರ್ಭಪಾತಕ್ಕೆ ವಿರುದ್ಧ ನಿಲುವನ್ನು ತಳೆದಿದ್ದರೂ ಸಹ, ನಿಗದಿತ ಪ್ರಕರಣಗಳಲ್ಲಿ ಗರ್ಭಪಾತವನ್ನು ಒಪ್ಪುತ್ತಾರೆ. ಅಹಿಂಸೆಯನ್ನು ತನ್ನ ಉಸಿರನ್ನಾಗಿ ಪರಿಗಣಿಸುವ ಜೈನ ಧರ್ಮವು ಗರ್ಭಪಾತವನ್ನು ಸುತರಾಂ ಒಪ್ಪುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭವನ್ನು ಮುಂದುವರೆಸುವುದರಿಂದ ತಾಯಿಯ ಜೀವಕ್ಕೆ ಅಪಾಯವು ಉಂಟಾಗುವ ಹಾಗಿದ್ದರೆ, ಗರ್ಭಪಾತವನ್ನು ಮಾಡಲು ಒಪ್ಪಿಗೆಯನ್ನು ನೀಡುವ ಪದ್ಧತಿಯು ಬೆಳೆಯುತ್ತಿದೆ.
ಸಿಖ್ ಧರ್ಮದಲ್ಲಿ ಗರ್ಭಪಾತದ ನೇರ ಪ್ರಸ್ತಾಪವಿಲ್ಲ. ಸಾಮಾನ್ಯವಾಗಿ ಸಿಖ್ಖರೂ ಸಹ ಗರ್ಭಪಾತವನ್ನು ವಿರೋಽಸುವುವರೆ! ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೀಭ್ರೂಣಹತ್ಯೆಯು ತೀವ್ರವಾಗಿರುವ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಪ್ರತಿರೋಧ ಹೆಚ್ಚುತ್ತಿದ್ದರೂ ಸಹ, ಸಿಖ್ಖರಲ್ಲಿ ಸಾಮಾನ್ಯವಾಗಿ ಗರ್ಭಪಾತಗಳು ನಡೆಯುತ್ತಿವೆ.ಸಾಂಪ್ರದಾಯಿಕ ಯಹೂದಿ ಧರ್ಮವನ್ನು ಪರಿಪಾಲಿಸುವವರು ಗರ್ಭಪಾತವನ್ನು ಒಪ್ಪುವುದಿಲ್ಲ. ಅದರಲ್ಲೂ ೪೦ ದಿನಗಳಿಗಿಂತಲೂ ಹೆಚ್ಚಿನ ವಯಸ್ಸಾಗಿರುವ ಪಿಂಡವನ್ನು ತೆಗೆಯಬಾರದು ಎನ್ನುವುದು ಅವರ ನಂಬಿಕೆ. ಆದರೆ ಗರ್ಭಧಾರಣೆಯ ಕಾರಣ, ತಾಯಿಯ ಆರೋಗ್ಯವು ಏರುಪೇರಾಗುವ ಅಥವಾ ಮರಣಿಸುವ ಸಾಧ್ಯತೆಯಿದೆಯೆಂದಲ್ಲಿ, ಗರ್ಭಪಾತವನ್ನು ಒಪ್ಪುತ್ತದೆ. ಪ್ರಾಚೀನ ಕ್ರೈಸ್ತಧರ್ಮವು ಗರ್ಭಪಾತವನ್ನು ತಿರಸ್ಕರಿಸುತ್ತಿತ್ತೇ ಇಲ್ಲವೇ ಪುರಸ್ಕರಿಸುತ್ತಿತ್ತೇ ಎನ್ನುವುದಕ್ಕೆ ಪಂಡಿತರಲ್ಲಿ ಭಿನ್ನಾಭಿಪ್ರಾಯಗಳಿವೆ.
ಆದರೆ ಸಮಕಾಲೀನ ಕ್ಯಾಥೋಲಿಕ್ ಚರ್ಚ್, ಈಸ್ಟರ್ನ್ ಆರ್ಥೋಡಾಕ್ಸ್ ಚರ್ಚ್, ಇವಾಂಜೆಲಿಕಲ್ ಪ್ರಾಟಿಸ್ಟಾಂಟ್ಸ್ ಸಮುದಾಯಗಳು ಗರ್ಭಪಾತವನ್ನುಸಂಪೂರ್ಣವಾಗಿ ನಿಷೇಧಿಸುತ್ತವೆ. ಮೆಥಾಡಿಸ್ಟ್ ಚರ್ಚ್, ಯುನೈಟೆಡ್ ಚರ್ಚ್ ಆ-ಕ್ರೈಸ್ಟ್, ಪ್ರೆಸ್ಬೈಟೆರೇನಿಯನ್ ಚರ್ಚ್, ಇವಾಂಜೆಲಿಕಲ್ ಲೂದರ್ನ್ ಚರ್ಚ್ ಸಮುದಾಯಗಳು ಗರ್ಭಪಾತವನ್ನು ಅಷ್ಟು ತೀವ್ರವಾಗಿ ವಿರೋಧಿಸುವುದಿಲ್ಲ. ಹಾಗಾಗಿ ಗರ್ಭಪಾತದ ಬಗ್ಗೆ ಕ್ರೈಸ್ತರಲ್ಲಿ ಎರಡೂ ರೀತಿಯ ಅನಿಸಿಕೆಗಳಿವೆ ಎನ್ನಬಹುದು. ಇಸ್ಲಾಮಿನ ಎಲ್ಲ ಪಂಥಗಳು, ಗರ್ಭಧಾರಣೆಯಿಂದ ತಾಯಿಯ ಆರೋಗ್ಯಕ್ಕೆ ಧಕ್ಕೆಯುಂಟಾಗುವ ಹಾಗಿದ್ದರೆ, ಗರ್ಭಪಾತವನ್ನು ಮಾನ್ಯಮಾಡುತ್ತವೆ. ಆತ್ಮವು ಪಿಂಡದೊಳಗೆ ಯಾವ ಹಂತದಲ್ಲಿ ಪ್ರವೇಶಿಸುತ್ತದೆ ಎನ್ನುವ ಬಗ್ಗೆ ಭಿನ್ನಾಭಿಪ್ರಾಯವಿದೆ.
ಕೆಲವರು ಗರ್ಭಧಾರಣೆಯಾದ 40 ದಿನಗಳ ತರ ಆತ್ಮವು ಪ್ರವೇಶಿಸುತ್ತದೆ ಎಂದರೆ, ಉಳಿದವರು 120 ದಿನಗಳಾದ ನಂತರ ಪ್ರವೇಶಿಸುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿರುವರು. 120 ದಿನಗಳ ನಂತರ ಪಿಂಡದಲ್ಲಿ ಆತ್ಮವು ಇರುವಕಾರಣ, ಗರ್ಭಪಾತವನ್ನು ಮಾಡಬಾರದು ಎನ್ನುತ್ತದೆ. ಆದರೂ, ಗರ್ಭವನ್ನು ಮುಂದುವರೆಸುವುದರಿಂದ ತಾಯಿಯ ಜೀವಕ್ಕೆತೊಂದರೆಯಾಗುತ್ತದೆ ಎಂದಾದರೆ, ಗರ್ಭಪಾತಕ್ಕೆ ಅನುಮತಿಯನ್ನು ನೀಡುತ್ತದೆ. ಇರಾನಿನ ಅಯಾತೊಲ್ಲ ಅಲಿ ಖೊಮೇನಿಯವರುಥಲಾಸ್ಸೀಮಿಯ ಇರುವ ಪಿಂಡವನ್ನು ೧೦ ವಾರಗಳಲ್ಲಿ ಗರ್ಭಪಾತದ ಮೂಲಕ ನಿವಾರಿಸಬಹುದು ಎಂದಿರುವರು. ಬಹಾಯಿ ಧರ್ಮವು ಗರ್ಭಪಾತವನ್ನು ವಿರೋಧಿಸುತ್ತದೆ.
ಆದರೆ ಯಾವುದಾದರೂ ವೈದ್ಯಕೀಯ ಕಾರಣಗಳಿದ್ದರೆ, ಗರ್ಭಪಾತವನ್ನು ಮಾನ್ಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಆಯಾಕುಟುಂಬವು ತಮ್ಮ ಧಾರ್ಮಿಕ ತಿಳಿವಳಿಕೆಯ ಹಿನ್ನೆಲೆಯ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುವ ನಿಲುವನ್ನು ವ್ಯಕ್ತಪಡಿಸುತ್ತದೆ. ಮನುಕುಲ ಇತಿಹಾಸದತ್ತ ಒಂದು ಪಕ್ಷಿನೋಟವನ್ನು ಹರಿಸಿದಾಗ, ಎಲ್ಲಕಾಲದ ಎಲ್ಲ ದೇಶಗಳ ವೈದ್ಯರು ಸುರಕ್ಷಿತಗರ್ಭ ಪಾತ ವಿಧಾನವನ್ನು ರೂಪಿಸಲು ಹೆಣಗಿರುವುದನ್ನು ನಾವು ನೋಡಬಹುದು. ಪ್ರಾಚೀನ ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಗರ್ಭಪಾತ ವಿಧಾನಗಳನ್ನು ಮೂರುರೀತಿಯಲ್ಲಿ ವಿಂಗಡಿಸಬಹುದು.
ಮೊದಲನೆಯದು ಗರ್ಭಪಾತವನ್ನು ಪ್ರಚೋದಿಸುವಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು. ಉದಾಹರಣೆಗೆ ವೇಗವಾಗಿ ನಡೆಯುವುದು, ಓಡುವುದು, ಭಾರವನ್ನುಎತ್ತುವುದು, ಬೆಟ್ಟ ಹತ್ತುವುದು, ಈಜು ಹೊಡೆಯುವುದು, ಉಪವಾಸವಿರುವುದು, ಹೊಟ್ಟೆಯ ಮೇಲೆ ಬಿಸಿನೀರನ್ನು ಸುರಿಯುವುದು, ಹೊಟ್ಟೆಯ ಮೇಲೆ ಬಟ್ಟೆಯನ್ನು ಬಿಗಿಯಾಗಿಕಟ್ಟುವುದು ಇತ್ಯಾದಿ. ಎರಡನೆಯದು ನಾನಾ ರೀತಿಯ ಮೂಲಿಕೆಗಳನ್ನು, ಔಷಧಗಳನ್ನು ಸೇವಿಸುವುದು ಅಥವಾ ಔಷಧವಸ್ತುಗಳನ್ನು ಯೋನಿದ್ವಾರದೊಳಗೆ ಇರಿಸುವುದು ಹಾಗೂ ಮೂರನೆಯದು ಹರಿತವಾದ ವಸ್ತುಗಳನ್ನು ಯೋನಿದ್ವಾರದೊಳಗೆ ತೂರಿಸಿ ಗರ್ಭಪಾತವನ್ನು ಮಾಡಲುಪ್ರಯತ್ನಿಸುವುದು. ಇಂತಹ ಪ್ರಯತ್ನಗಳಲ್ಲಿ ಗರ್ಭಾಶಯಕ್ಕೆ ಪೆಟ್ಟಾಗಿ, ವಿಪರೀತರಕ್ತಸ್ರಾವ ಇಲ್ಲವೇ ನಂಜಿನ ಕಾರಣತಾಯಿಯು ಮರಣಿಸುವ ಸಾಧ್ಯತೆಯು ಅಧಿಕವಾಗಿರುತ್ತಿತ್ತು.
ಭಾರತದಲ್ಲಿ 1971ಕ್ಕಿಂತ ಹಿಂದೆ, ಭಾರತೀಯ ದಂಡಸಂಹಿತೆ 1860 ಅಸ್ತಿತ್ವದಲ್ಲಿ ಇತ್ತು. ಸೆಕ್ಷನ್ 312ರ ಅನ್ವಯ, ಗರ್ಭಪಾತವು ಅಪರಾಧಿ ಕೃತ್ಯವಾಗಿತ್ತು. ಗರ್ಭ ಪಾತಕ್ಕೆ ನೆರವಾಗುವವರಿಗೆ 3 ವರ್ಷ ಶಿಕ್ಷೆ ಅಥವಾ/ಮತ್ತು ದಂಡದ ಜತೆಯಲ್ಲಿ ಗರ್ಭಪಾತವನ್ನು ಮಾಡಿಸಿಕೊಳ್ಳುವ ಮಹಿಳೆಗೆ 7 ವರ್ಷಗಳ ಶಿಕ್ಷೆ ಅಥವಾ/ ಮತ್ತು ದಂಡವನ್ನುವಿಽಸಲಾಗುತ್ತಿತ್ತು. ಕೊನೆಗೆ ವೈದ್ಯಕೀಯ ಗರ್ಭಪಾತ ಅಧಿನಿಯಮ, 1971 ಜಾರಿಗೆ ಬಂದಿತು. ಅದರೊಡನೆ ಗರ್ಭ ಪಾತವನ್ನು ಮಾಡಿಸಿಕೊಳ್ಳು  ವುದು ಹಾಗೂ ಮಾಡುವುದು ಒಂದು ಅಪರಾಧ ಎನ್ನುವ ಅವೈಜ್ಞಾನಿಕ ನಿಲುವು ಕೊನೆಗೊಂಡಿತು. 20 ವಾರಗಳವರೆಗಿನ ಗರ್ಭವನ್ನು ಅರ್ಹ ವೈದ್ಯರು ಗರ್ಭಪಾತವನ್ನು ಮಾಡಬಹುದು ಎಂದಿತು ಈ ಹೊಸ ಅಧಿನಿಯಮ.
ಆದರೆ, ಇಂದಿಗೂ ಸಹ ವೈದ್ಯರಲ್ಲದವರು ಅವೈಜ್ಞಾನಿಕ ವಿಧಾನಗಳ ಮೂಲಕ ಗರ್ಭಪಾತವನ್ನು ಮಾಡುವುದು ಅಪರಾಧ ಹಾಗೂ ದಂಡನೀಯ ಕೃತ್ಯವಾಗಿದೆ. ಈಗ ವೈದ್ಯಕೀಯ ಗರ್ಭಪಾತ ಅಧಿನಿಯಮವು 2021ರಲ್ಲಿ ತಿದ್ದುಪಡಿಯಾಯಿತು. ಇದು ಹಲವು ರೀತಿಯಲ್ಲಿ 71 ಅಧಿನಿಯಮಕ್ಕಿಂತಲೂ ಸುಧಾರಿತವಾಗಿದೆ.ಮೊದಲು ಮದುವೆಯಾದ ಮಹಿಳೆಯರು ಮಾತ್ರ, ಸಂತಾನ ನಿರೋಧ ಸಾಧನದವೈ-ಲ್ಯದ ಕಾರಣ ಗರ್ಭಧರಿಸಿದರೆ, ಅದನ್ನು ತೆಗೆಸಲು ಅವಕಾಶವಿತ್ತು. ಈಗ ತಿದ್ದುಪಡಿಯಾದ ಅಧಿನಿಯಮದಡಿಯಲ್ಲಿ ಮದುವೆಯಾಗದ ಮಹಿಳೆಯರೂ ಸಹ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರು ಎಂದಾಗಿದೆ. ಮೊದಲು ಗರ್ಭಪಾತದ ಅವಽಯು ಗರಿಷ್ಠ 20 ವಾರಗಳಾಗಿದ್ದವು. ಈಗ ಅದು 24 ವಾರಗಳವರೆಗೆ ವಿಸ್ತರಿಸಿದೆ. ಆದರೆ ಈ ಅವಽಯ ಗರ್ಭಪಾತಕ್ಕೆ ವೈದ್ಯಕೀಯ ಮಂಡಳಿ ಯಲ್ಲಿರುವ ಪರಿಣತರ ಒಪ್ಪಿಗೆ ಅಗತ್ಯವಾಗಿರುತ್ತದೆ. ಗರ್ಭಪಾತವನ್ನು ಮಾಡಿಸಿಕೊಂಡವರ ವಿವರವನ್ನು, ಕಾನೂನು ಸಂಬಂಽತ ವ್ಯಕ್ತಿಗಳ ಹೊರತಾಗಿ ಇತರರಿಗೆ ತಿಳಿಸಿದರೆ, ಅದು ಅಪರಾಧವಾಗಿ ವೈದ್ಯರಿಗೆ ಒಂದು ವರ್ಷದ ಶಿಕ್ಷೆ ಅಥವ/ ಮತ್ತು ದಂಡ ವಿಽಸಬಹುದಾಗಿದೆ.
1971ರ ಅಧಿನಿಯಮದಲ್ಲಿ ದ್ಯಕೀಯ ಗರ್ಭಪಾತವನ್ನು ಮಾಡಲು ಸಾಮಾನ್ಯವಾಗಿ (ಗರ್ಭಕೊರಳ) ಹಿಗ್ಗಿಸುವಿ  ಮತ್ತು(ಪಿಂಡದ) ಹೆರೆಯುವಿಕೆ (ಡಿ ಅಂಡ್ಸಿ; ಡಯಲಟೇಶನ್ ಮತ್ತುಕ್ಯುರಟಾಜ್) ಎನ್ನುವ ಪ್ರಮಾಣ ಬದ್ಧ ವಿಧಾನವನ್ನು ಮಾತ್ರ ಬಳಸುತ್ತಿದ್ದರು. ತಿದ್ದುಪಡಿಯಾದ ಮೇಲೆ ವೈದ್ಯಕೀಯ ಗರ್ಭಪಾತವನ್ನು ಔಷಧಗಳ ಮೂಲಕ ಇಲ್ಲವೇಶಸವೈದ್ಯಕೀಯದ ಮೂಲಕ ನಡೆಸಬಹುದಾಗಿದೆ. ಗರ್ಭಧಾರಣೆಯನ್ನು ಪ್ರಥಮ ತ್ರೈಮಾಸ, ದ್ವಿತೀಯ ತ್ರೈಮಾಸ ಹಾಗೂ ತೃತೀಯ ತ್ರೈಮಾಸ ಎಂದು ವರ್ಗೀಕರಿಸುವುದುಂಟು. ಸಾಮಾನ್ಯವಾಗಿ ಪ್ರಥಮ ತ್ರೈಮಾಸದಲ್ಲಿ, ೮-೯ ವಾರಗಳವರೆಗಿನ ಗರ್ಭವನ್ನು, ಔಷಧಗಳ ಮೂಲಕ ನಿವಾರಿಸಬಹುದಾಗಿದೆ.
ಇದಕ್ಕಾಗಿ ಭಾರತದಲ್ಲಿ ಎರಡು ಔಷಧಗಳು ಲಭ್ಯವಿವೆ. ಮಿಫಿಪ್ರಿಸ್ಟೋನ್ ಮತ್ತು ಮೈಸೋಪ್ರಾಸ್ಟಾಲ್. ಮಿಫಿಪ್ರಿಸ್ಟೋನ್ ಗರ್ಭದ ಬೆಳವಣಿಗೆಯನ್ನು ತಡೆ ಗಟ್ಟುತ್ತದೆ. ಮೈಸೋಪ್ರಾಸ್ಟಾಲ್ ಗರ್ಭಕೊರಳನ್ನು ಹಿಗ್ಗಿಸಿ, ಅಳಿದ ಪಿಂಡವನ್ನು ಹೊರದೂಡಲು ಗರ್ಭಾಶಯವನ್ನು ಪ್ರಚೋದಿಸುತ್ತದೆ. ಭಾರತದಲ್ಲಿ 81%ರಷ್ಟು ಗರ್ಭಪಾತಗಳು ಈ ವಿಧಾನದ ಮೂಲಕ ನಡೆಯುತ್ತವೆ.ಶಸ್ತ್ರವೈದ್ಯಕೀಯ ವಿಧಾನಗಳಲ್ಲಿ ಸರ್ವಸಾಮಾನ್ಯವಾದದ್ದು ಡಿ ಅಂಡ್ ಸಿ, ಡಿ ಅಂಡ್ ಇ ಮತ್ತು ನಿರ್ವಾತ ವಿಸರ್ಜನ. ೧೪% ರಷ್ಟು ವೈದ್ಯಕೀಯ ಗರ್ಭಪಾತಗಳು ಈಶಸ್ತ್ರವೈದ್ಯಕೀಯ ವಿಧಾನಗಳ ಮೂಲಕ ನಡೆದರೆ, 5% ಗರ್ಭಪಾತಗಳು ನಕಲಿ ವೈದ್ಯರ ಅವೈಜ್ಞಾನಿಕ ವಿಧಾನಗಳಿಂದ ನಡೆಯುತ್ತಿದೆ.
ಇಂದು ವೈದ್ಯಕೀಯ ಗರ್ಭಪಾತವನ್ನುಅಽಕೃತವಾಗಿ ಮಾಡಿಸಿಕೊಳ್ಳಬಹುದು. ಅದು ಹಲವು ಮಡಿವಂತಿಕೆಗಳಿಂದ ಮುಕ್ತವಾಗಿದೆ. ಮೊದಲಿನ ಹಾಗೆ ಸಾವು-ನೋವುಗಳು ಬಹುಪಾಲು ಕಡಿಮೆಯಾಗಿದೆ. ಯೋಜಿತ ಗರ್ಭಧಾರಣೆಯ ಮೂಲಕ ಅಥವಾ ಸಂತಾನ ನಿಯಂತ್ರಣ ಸಾಧನಗಳ ಕ್ರಮಬದ್ಧ ಬಳಕೆಯ ಮೂಲಕಅನಗತ್ಯ ಗರ್ಭಪಾತವನ್ನು ತಪ್ಪಿಸಲು ಸಾಧ್ಯವಾಗಿದೆ.