ಮಿದುಳಿನಲ್ಲಿನ ಚಿಪ್‌: ಪವಾಡ ಮಾಡುವುದೇ ?
ವೈದ್ಯ ವೈವಿಧ್ಯ
ಡಾ.ಎಚ್.ಎಸ್‌.ಮೋಹನ್
@.
ನೆನೆದರೆ ಸಾಕು, ಸ್ಮಾರ್ಟ್ ಫೋನ್ ಚಾಲೂ ಆಗುತ್ತದೆ ! ಮಿದುಳಿಗೇ ಚಿಪ್ ಅಳವಡಿಕೆ, ಕೋತಿ, ಹಂದಿಯ ಮೇಲಿನ ಪ್ರಯೋಗ ಯಶಸ್ವಿ – ‘ವಿಶ್ವ ವಾಣಿ’ಯ ಈವರದಿ ನನ್ನ ಗಮನ ಸೆಳೆಯಿತು.
ಅದನ್ನು ಪರಿಶೀಲಿಸಿದಾಗ – ಅಮೆರಿಕದ ವಾಷಿಂಗ್ಟನ್‌ನಿಂದ ಈ ವರದಿ ಬಂದಿದ್ದು, ಇದು ಜಗತ್ತಿನ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್‌ರ ನ್ಯೂರಾ ಲಿಂಕ್ ಕಂಪನಿಯ ಸಾಹಸದ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಈ ಕಂಪನಿ ಇತ್ತೀಚೆಗೆ ಗೆರ್ ಟ್ರೂಡ್ ಎಂಬ ಹಂದಿಯ ಮಿದುಳಿನಲ್ಲಿ ೨ ತಿಂಗಳ ಹಿಂದೆ ಅಳ ವಡಿಸಿದ ಒಂದು ಸಣ್ಣ ನಾಣ್ಯದ ಗಾತ್ರದ ಕಂಪ್ಯೂಟರ್ ಮೈಕ್ರೋ ಚಿಪ್ ಬಗ್ಗೆ ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ರೀತಿಯಲ್ಲಿ ಪ್ರದರ್ಶಿಸಲಾಯಿತು.
ಮನುಷ್ಯರ ಮಿದುಳಿನಲ್ಲಿ ಇದೇ ರೀತಿಯ ಮೈಕ್ರೋಚಿಪ್ ಅಳವಡಿಸುವ ಬಗ್ಗೆ ಇದು ಆರಂಭದ ಹೆಜ್ಜೆ ಎನ್ನಲಾ ಗಿದೆ. ೨೦೧೬ರಲ್ಲಿ ಸ್ಥಾಪಿಸಲ್ಪಟ್ಟ ಈ ನ್ಯೂರಾಲಿಂಕ್ ಕಂಪನಿಯು ಎಲಾನ್ ಮಸ್ಕ್‌ನ ಇತರ ಕಂಪನಿಗಳಾದ ಟೆಸ್ಲಾ ಇನ್‌ಕ್, ಸ್ಪೇಸ್‌ಎಕ್ಸ್ ಸಿಇಒ ಮಸ್ಕ್ ಕಂಪನಿಗಳ ಸಹ ಕಂಪನಿ. ಮಾನವ ಮಿದುಳಿನಲ್ಲಿ ವೈರ್ ಸಂಪರ್ಕ ಇಲ್ಲದ ಮೆದುಳು – ಕಂಪ್ಯೂಟರ್ ಇಂಟರ್ ಸ್ಪೇಸ್ ಸಂವಹನ ಸಾಧ್ಯವಾಗಿಸುವ ಮೈಕ್ರೋಚಿಪ್‌ಗಳನ್ನು ಇರಿಸುವ ಯೋಜನೆಯನ್ನು ಈ ಕಂಪನಿ ಹಮ್ಮಿಕೊಂಡಿದೆ. ಈ ಚಿಪ್‌ಗಳಲ್ಲಿ ತುಂಬಾ ಸಣ್ಣ ಗಾತ್ರದ ಸಾವಿರಾರು ಎಲೆಕ್ಟ್ರೋಡ್‌ಗಳಿರುತ್ತವೆ.
ಮನುಷ್ಯನ ನರಮಂಡಲದ ಕಾಯಿಲೆಗಳಾದ ಆಲ್ಜೀಮರ್ಸ್, ಡಿಮೆನ್ಷಿಯಾ, ಬೆನ್ನು ಹುರಿಯ ಅಪಘಾತಗಳಲ್ಲಿ – ಈ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣ ಪಡಿಸುವುದು ಇದರ ಮುಖ್ಯ ಉದ್ದೇಶ. ಇದರ ದೂರಗಾಮಿ ಉದ್ದೇಶ ಎಂದರೆ ಮಾನವನ ಮಿದುಳಿಗೆ ಕೃತಕ ಬುದ್ಧಿಮತ್ತೆಯನ್ನು ಜೋಡಿಸಿ ಹಲವು ಅಸಾಧ್ಯ ಎನ್ನುವ ಕಾರ್ಯಗಳನ್ನು ನೆರವೇರಿಸುವುದು. ಈ ತರಹದ ಕಂಪ್ಯೂಟರ್ ಚಿಪ್ ಮಿದುಳಿನಲ್ಲಿ ಇರಿಸುವುದರಿಂದ ಮರೆ ಗುಳಿತನ, ಕಿವುಡುತನ, ಮಾನಸಿಕ ಖಿನ್ನತೆ ( ಡಿಪ್ರೆಷನ್), ನಿದ್ರೆ ಬಾರದಿರುವ ಸಮಸ್ಯೆ – ಈ ತರಹದ ಹಲವು ನರಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನಲಾಗಿದೆ.
ಈಗಾಗಲೇ ಕೋತಿ, ಹಂದಿ ಹೀಗೆ ಕೆಲವು ಪ್ರಾಣಿಗಳಲ್ಲಿ ಈ ಚಿಪ್ ಗಳನ್ನು ಅಳವಡಿಸಿರುವ ನ್ಯೂರಾಲಿಂಕ್ ಸದ್ಯದಲ್ಲಿಯೇ ಮಾನವರಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭಿಸುತ್ತದೆ. ಆರಂಭದ ಕ್ಲಿನಿಕಲ್ ಟ್ರಯಲ್‌ನಲ್ಲಿ ಕೆಲವೇ ಸಂಖ್ಯೆಯ ಸ್ವಯಂ ಸೇವಕರಲ್ಲಿ ಪಾರ್ಶ್ವವಾಯು ಅಥವಾ ಎರಡೂ ಕಾಲುಗಳಲ್ಲಿ ನಿಸ್ತೇಜತನ ಇದ್ದ ರೋಗಿಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ ಎಂದು ಯೋಜನೆಯ ಮುಖ್ಯ ಸರ್ಜನ್ ಡಾ ಮ್ಯಾಥ್ಯೂ ಮ್ಯಾಕ್ ಡುಗಾಲ್ ನುಡಿಯುತ್ತಾರೆ. ಈ ಯೋಜನೆಗೆ ಏನೂ ಸಂಬಂಧವಿಲ್ಲದ ನರಶಾಸದ ವಿಜ್ಞಾನಿಗಳು – ನ್ಯೂರಾಲಿಂಕ್ ಈ ದಿಸೆಯಲ್ಲಿ ಅಸಾಧ್ಯ ಹೆಜ್ಜೆ ಇಟ್ಟು ಒಳ್ಳೆಯ ಪ್ರಗತಿ ಸಾಧಿಸಿದೆ ಎನ್ನುವುದು ಹೌದಾದರೂ ಈ ತರಹದ ಪ್ರಯೋಗಗಳಿಗೆ ತುಂಬಾ ದೀರ್ಘವಾದ ಅಧ್ಯಯನದ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ.
ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಎಲಾನ್ ಮಸ್ಕ್, ಮಿದುಳಿನಲ್ಲಿ ಚಿಪ್ ಅಳವಡಿಸಿದ ಗೆರ್‌ಟ್ರೂಡ್ ಎಂಬ ಹಂದಿ ಮತ್ತು ಇನ್ನೆರಡು ಹಂದಿಗಳನ್ನು ಪ್ರದರ್ಶಿಸಿದರು. ಈ ಮೂರೂ ಹಂದಿಗಳಲ್ಲಿ ಒಂದೊಂದಕ್ಕೆ ಎರಡು ಮಿದುಳಿನ ಚಿಪ್‌ಗಳನ್ನು ಅಳವಡಿಸಲಾಗಿದೆ. ಅವು ಆರೋಗ್ಯವಾಗಿವೆ, ಸಂತೋಷವಾಗಿವೆ. ಹಾಗೆಯೇ ಬೇರೆಯಹಂದಿಗಳಿಗೂ ಮತ್ತು ಇವುಗಳಿಗೂ ವ್ಯತ್ಯಾಸವಿರುವುದು ಗೊತ್ತಾಗವುದೇ ಇಲ್ಲ ಎಂದು ಎಲಾನ್ ಮಸ್ಕ್ ನುಡಿಯುತ್ತಾರೆ. ಸುಮಾರು೨೩ಮಿ ಮೀ ವ್ಯಾಸವಿರುವ ಈ ಕಂಪ್ಯೂಟರ್ ಚಿಪ್‌ಗಳು ಮಿದುಳಿನಲ್ಲಿ ಅಸಾಧ್ಯ ಕಾರ್ಯನಿರ್ವಹಿಸುತ್ತವೆ.
ಕೆನಡಾದ ಟೊರಾಂಟೋ ವಿಶ್ವವಿದ್ಯಾನಿಲಯದ ಗ್ರೇಮ್ ಮೊಘಾಟ್ ಅವರು ಎಲಾನ್ ಮಸ್ಕ್‌ರ ನ್ಯೂರಾಲಿಂಕ್ ಅಸಾಧ್ಯ ಪ್ರಗತಿ ಸಾಧಿಸಿದೆ. ಮುಖ್ಯವಾಗಿ ಅದರ ಸಣ್ಣ ಸೈಜ್, ಸಾಗಾಟಕ್ಕೆ ಸುಲಭವಾಗಿರುವುದು, ಅದರಲ್ಲಿನ ಇಂಧನ ವ್ಯವಸ್ಥೆ , ಯಾವುದೇ ತಂತಿಗಳಿಲ್ಲದೆ ನಿರ್ವಹಿಸಿರುವುದು… ಈ ಎಲ್ಲ ಕಾರಣಗಳಿಂದವೈeನಿಕವಾಗಿ ಇದು ಮುಂದಿದೆ ಎಂದು ಅಭಿಪ್ರಾಯ ಪಡುತ್ತಾರೆ. ಹಲವಾರು ಹಂದಿಗಳಲ್ಲಿ ಈ ಸಂಸ್ಥೆ ನಡೆಸಿದ ಪ್ರಯೋಗ ನಿಜಕ್ಕೂ ಶ್ಲಾಘನೀಯ ಎಂದು ಅಮೆರಿಕದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲ ಯದ ನರಶಾಸವಿಜ್ಞಾನಿ ಸ್ಟರ್ಜಿ ಸ್ಟಾವರ್ಕಿ ನುಡಿಯುತ್ತಾರೆ. ಈ ಮಿದುಳಿನ ಚಿಪ್‌ನ ಇನ್ನೊಂದು ಧನಾತ್ಮಕ ಅಂಶ ಎಂದರೆ ಇದು ಮಿದುಳಿನ ತರಂಗಗಳನ್ನು ಓದಬಲ್ಲದು. ತನ್ಮೂಲಕ ಮಿದುಳಿನ ಹಲವು ಕಾಯಿಲೆಗಳನ್ನು ಇನ್ನೂ ಚೆನ್ನಾಗಿ ನಾವು ಅರ್ಥಮಾಡಿಕೊಳ್ಳಬಹುದು ಎಂದು ಮತ್ತೊಬ್ಬ ವಿಜ್ಞಾನಿಯವರ ಅಭಿಪ್ರಾಯ.
ಎಲೆಕ್ಟ್ರಾನಿಕ್ ತರಂಗಗಳಿಂದ ನರಗಳನ್ನು ಮತ್ತು ಮಿದುಳಿನ ಭಾಗಗಳನ್ನು ಉತ್ತೇಜಿಸುವ ಸಣ್ಣ ಪ್ರಮಾಣದ ಉಪಕರಣಗಳು ಈಗಾಗಲೇ ಕಿವುಡುತನ ಮತ್ತು ಪಾರ್ಕಿನ್ಸನ್ ಕಾಯಿಲೆಗಳಲ್ಲಿ ಬಹಳ ವರ್ಷಗಳಿಂದ ಉಪಯೋಗದಲ್ಲಿವೆ. ಹಾಗೆಯೇ ಮೆದುಳು ಬಳ್ಳಿಗೆ ಹೊಡೆತ ಬಿದ್ದು ತೊಂದರೆ ಮತ್ತು ಪಾರ್ಶ್ವವಾಯುವಿನ ತೊಂದರೆ – ಇಂತಹವರಲ್ಲಿ ಈಗಾಗಲೇ ಬಳಕೆಯಲ್ಲಿವೆ.
ಔಷಧಗಳಿಗೆ ಬಗ್ಗದ ಸೋಂಕುಗಳು:೨೦೧೯ರಲ್ಲಿ ಜಗತ್ತಿನಾದ್ಯಂತ ಆಂಟಿಬಯೋಟಿಕ್ ಔಷಧಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳ ಸೋಂಕಿನಿಂದ೧.೨ಮಿಲಿ ಯನ್‌ಗಿಂತಲೂ ಅಧಿಕ ಜನರು ಮೃತರಾಗಿದ್ದಾರೆ. ಇತ್ತೀಚಿನ ಈ ಜಾಗತಿಕ ವರದಿ ಯಾರನ್ನಾದರೂ ದಂಗು ಬಡಿಸುತ್ತದೆ ಮಲೇರಿಯಾ ಮತ್ತು ಏಡ್ಸ್ ಕಾಯಿಲೆ ಗಳಿಂದ ಸಾಯುತ್ತಿರುವ ಜನಗಳಿಗಿಂತ ಇದು ತುಂಬಾ ಜಾಸ್ತಿ ಎನ್ನಲಾಗಿದೆ. ಮತ್ತೊಂದು ವಿಚಾರ ಎಂದರೆ ಜಗತ್ತಿನ ಬಡ ದೇಶಗಳಲ್ಲಿ ಈ ರೀತಿಯ ಮರಣ ಹೆಚ್ಚು ಎಂದು ಅದೇ ವರದಿಯಲ್ಲಿ ತಿಳಿಸುತ್ತದೆಯಾದರೂ ಇದು ಜಗತ್ತಿನ ಇತರ ದೇಶಗಳಿಗೂ ಅಪಾಯದ ಕರೆಗಂಟೆ ಎನ್ನಬಹುದು.
ಸಣ್ಣ ಸಣ್ಣ ಸೋಂಕುಗಳಿಗೂ ಅತಿಯಾಗಿ ಆಂಟಿಬಯೋಟಿಕ್ ಔಷಧಗಳನ್ನು ಅನಗತ್ಯವಾಗಿ ಉಪಯೋಗಿಸುತ್ತಿರುವುದರಿಂದ ಗಂಭೀರ ಸೋಂಕುಗಳಿಗೆ ಈ ಆಂಟಿ ಬಯೋಟಿಕ್‌ಗಳನ್ನು ಉಪಯೋಗಿಸಿದಾಗ ಅವು ಪರಿಣಾಮವನ್ನೇ ಬೀರುವುದಿಲ್ಲ. ಹಾಗಾಗಿ ಈಗ ಉಪಯೋಗಿಸುತ್ತಿರುವ ಆಂಟಿಬಯೋಟಿಕ್ ಔಷಧಗಳನ್ನು ತುಂಬಾ ಯೋಚನೆ ಮಾಡಿ ತೀರಾ ಅಗತ್ಯವಿದ್ದಾಗ ಮಾತ್ರ ಉಪಯೋಗಿಸಬೇಕು. ಹಾಗೆಯೇ ಹೊಸ ಹೊಸ ಆಂಟಿಬಯೋಟಿಕ್‌ಗಳನ್ನು ಶೋಧಿಸುವಲ್ಲಿ ಹೆಚ್ಚುಬಂಡವಾಳ ಹಾಕಬೇಕು ಎಂದು ಈ ಬಗೆಗಿನ ತಜ್ಞರ ಅಭಿಪ್ರಾಯ.
ಆಂಟಿಬಯೋಟಿಕ್‌ಗಳಿಗೆ ಬಗ್ಗದ ಬ್ಯಾಕ್ಟೀರಿಯಾ ಸೋಂಕುಗಳು ಈಗಾಗಲೇ ಜಗತ್ತನ್ನು ಕಾಡುತ್ತಿರುವ ಕೋವಿಡ್‌ನಂತೆ ಮತ್ತೊಂದು ಸಾಂಕ್ರಾಮಿಕವಾಗಿ ನಮ್ಮನ್ನು ಕಂಗೆಡಿಸಬಹುದೆಂದು ಯುನೈಟೆಡ್ ಕಿಂಗ್‌ಡಮ್‌ನ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಜಗತ್ತಿನ೨೦೪ದೇಶಗಳಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ತಜ್ಞರ ನೇತೃತ್ವದಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಮೊದಲು ತಿಳಿಸಿದ ಅಂಕಿ ಅಂಶಗಳು ಹೊರಬಂದಿವೆ. ಇದು ಇತ್ತೀಚಿನ ಪ್ರತಿಷ್ಠಿತ ಆರೋಗ್ಯದ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾಗಿದೆ. ಅದರ ಮುಂದುವರಿದ ವಿವರಗಳೆಂದರೆ ಆಂಟಿಬಯೋಟಿಕ್‌ಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳ ಸೋಂಕು ರೋಗಗಳು ೧.೨ ಮಿಲಿಯನ್ ಜನರ ಮರಣಕ್ಕೆ ನೇರವಾಗಿ ಕಾರಣವಾಗಿದ್ದಲ್ಲದೆ ಪರೋಕ್ಷವಾಗಿ ಮತ್ತೂ ೫ ಮಿಲಿಯನ್ ಜನರ ಮರಣಕ್ಕೂ ಕಾರಣವಾಗಿದೆ.
ಅದೇ ೨೦೧೯ ರಲ್ಲಿ ಏಡ್ಸ್ ನಿಂದ ಮಡಿದವರ ಸಂಖ್ಯೆ ೮,೬೦,೦೦೦ ಅಂತಾದರೆ ಮಲೇರಿಯಾದಿಂದ ೬,೪೦,೦೦೦ ಜನರುಮೃತಪಟ್ಟಿದ್ದಾರೆ. ಹೆಚ್ಚಿನ ಈ ತರಹದ ಸೋಂಕುಗಳು ಶಾಸಕಾಂಗ ವ್ಯೂಹದ ಸೋಂಕು ಉದಾ: ಎಂದರೆ ನ್ಯುಮೋನಿಯಾ ಮತ್ತು ರಕ್ತದಲ್ಲಿನ ಸೋಂಕಿನಿಂದ ಆಗಿವೆ. ಇವುಗಳ ಮುಂದುವರಿದ ಪರಿಣಾಮ ಎಂದರೆ ಒಮ್ಮೆಲೇ ದೇಹದಲ್ಲಿ ತೀವ್ರ ಸೋಂಕು ಕಾಣಿಸಿಕೊಂಡು ವ್ಯಕ್ತಿಯ ಪ್ರತಿರೋಧ ವ್ಯವಸ್ಥೆ ಶಿಥಿಲಗೊಂಡು ವ್ಯಕ್ತಿ ಮರಣ ಹೊಂದುತ್ತಾನೆ. ಇದರಲ್ಲಿ ಮುಖ್ಯವಾಗಿ ಮೆಥಿಸಿಲಿನ್ ರೆಸಿಸ್ಟಂಟ್ ಸ್ಟ-ಲೋಕಾಕಸ್ ಆರಿಯಸ್ ಎಂಬ ಬ್ಯಾಕ್ಟೀರಿಯಾ ಈ ತರಹದ ಸೋಂಕಿಗೆ ಹೆಚ್ಚು ಕಾರಣವಾಗುವುದಾದರೂ ಈ ಕೋಲೈ ಮತ್ತು ಇನ್ನಿತರ ಬ್ಯಾಕ್ಟೀರಿಯಾಗಳು ಕೆಲವೊಮ್ಮೆ ಕಾರಣವಾಗುತ್ತವೆ.
ಜಗತ್ತಿನಾದ್ಯಂತ ದೊರಕುವ ಆಸ್ಪತ್ರೆಯ ದಾಖಲೆಗಳು, ಅಧ್ಯಯನಗಳು ಮತ್ತು ಮತ್ತಿತರ ವಿವರಗಳಿಂದ ಸಂಶೋಧಕರು ಸಣ್ಣ ಮಕ್ಕಳಲ್ಲಿ ಈ ತರಹದ ಸೋಂಕು ಹೆಚ್ಚು ಕಂಡುಬರುತ್ತದೆ ಎನ್ನುತ್ತಾರೆ. ಒಂದು ಅಂದಾಜಿನ ಪ್ರಕಾರ ಒಟ್ಟೂ ಮರಣಗಳಲ್ಲಿ ೧/೫ ನೇ ಭಾಗ (ಶೇ.೨೦) ೫ ವರ್ಷಗಳ ಒಳಗಿನ ಮಕ್ಕಳು ಎನ್ನುತ್ತದೆಈ ವರದಿ. ಹಾಗೆಯೇ ಈ ಮರಣ ಆಫ್ರಿಕಾ ಖಂಡದ ಬಡ ದೇಶಗಳಲ್ಲಿ ಮತ್ತು ದಕ್ಷಿಣ ಏಷ್ಯಾದ ಹಲವೆಡೆ ೧ ಲಕ್ಷದಲ್ಲಿ ೨೪ ಜನರು ಹೀಗೆ ಮರಣ ಹೊಂದುತ್ತಿದ್ದರೆ ಅದೇ ಶ್ರೀಮಂತ ದೇಶಗಳಲ್ಲಿ ಈ ಸಂಖ್ಯೆ ೧ ಲಕ್ಷದಲ್ಲಿ ೧೮ ಎನ್ನಲಾಗಿದೆ.
ಇದು ಜಾಗತಿಕ ಮಟ್ಟದಲ್ಲಿ ಆಂಟಿಬಯೋಟಿಕ್ ಔಷಧಗಳಿಗೆ ಪರಿಣಾಮ ಬೀರದ ಸೋಂಕು ರೋಗಗಳ ನೈಜ ಪರಿಸ್ಥಿತಿಯನ್ನು ಬಿಸುತ್ತದೆ. ಹಾಗೆಯೇ ಕೆಲವು ನಿರ್ದಿಷ್ಟ ಕ್ರಮಗಳ ತೀರಾ ಅಗತ್ಯವನ್ನು ಇದು ತೋರಿಸುತ್ತದೆ ಎಂದು ಈ ವರದಿ ರೂಪಿಸಿದ ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ಆಫ್ ಹೆಲ್ತ್ ಮೆಟ್ರಿಕ್ಸ್ ಮತ್ತು ಇವಾಲ್ಯುಯೇಷನ್ ನ ಮುಖ್ಯಸ್ಥ ಪ್ರೊ.ಕ್ರಿಸ್ ಮರ್ರೆ ಅಭಿಪ್ರಾಯ ಪಡುತ್ತಾರೆ. ಜಗತ್ತಿನ ಎಲ್ಲ ದೇಶಗಳಲ್ಲಿ ಈ ಬಗೆಯ ನೈಜ ಸರ್ವೆ ಮತ್ತು ವರದಿಯ ತೀವ್ರ ಅಗತ್ಯವಿದೆಯೆಂದು ಜಗತ್ತಿನ ಹಲವಾರು ತಜ್ಞರು ಅಭಿಪ್ರಾಯ ಪಡುತ್ತಾರೆ. ಯಾವುದೇ ಗಂಭೀರ ಕಾಯಿಲೆಯ ಬಗ್ಗೆ ನಾವು ಹೇಗೆತುರ್ತಾಗಿ ಕ್ರಮ ಕೈಗೊಳ್ಳಲು ಮುಂದಾಗುತ್ತವೆಯೋ ಹಾಗೆಯೇ ಇದರ ಬಗ್ಗೆಯೂ ಎಮರ್ಜೆನ್ಸಿ ರೀತಿಯ ಕ್ರಮಗಳಿಗೆ – ಅಂದರೆ ಈಗಾಗಲೇ ಇರುವ ಆಂಟಿ ಬಯೋಟಿಕ್ ಔಷಧಗಳನ್ನು ಬಹಳ ಹುಷಾರಾಗಿ ಉಪಯೋಗಿಸುವುದು ಮತ್ತು ಹೊಸ ಆಂಟಿಬಯೋಟಿಕ್ ಶೋಧಕ್ಕೆ ತೀವ್ರ ಪ್ರಮಾಣದ ಸಂಶೋಧನೆ ಮತ್ತು ಹಣಕಾಸಿನ ವ್ಯವಸ್ಥೆಯನ್ನು ಕೈಗೊಳ್ಳುವುದು.
ಇವು ಮುಖ್ಯವಾಗಿ ಕಡಿಮೆ ಅವಧಿಯಲ್ಲಿ ಆಗಬೇಕು ಎಂದು ವಾಷಿಂಗ್ಟನ್ ನ ಸೆಂಟರ‍್ –  ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಪಾಲಿಸಿಯ ನಿರ್ದೇಶಕಡಾ.ರಮಣನ್ ಲಕ್ಷ್ಮೀನಾರಾಯಣನ್ ಅಭಿಪ್ರಾಯ ಪಡುತ್ತಾರೆ. ಆಂಟಿಬಯೋಟಿಕ್ ಹಿನ್ನೋಟ: ೧೯೨೮ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ಪೆನಿಸಿಲಿನ್ ಶೋಧಿಸು ವುದರೊಂದಿಗೆ ಆಂಟಿಬಯೋಟಿಕ್‌ಗಳ ಯುಗ ಆರಂಭವಾಯಿತು. ೧೯೪೦ರ ಸುಮಾರಿಗೆ ಗಂಭೀರವಾದ ಸೋಂಕುಗಳಲ್ಲಿ ಆಂಟಿಬಯೋಟಿಕ್‌ಗಳ ಉಪಯೋಗ ಹೆಚ್ಚು ಜನಪ್ರಿಯಗೊಂಡಿತು. ಆಗ ನಡೆಯುತ್ತಿದ್ದ ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ಹಲವಾರು ಸೈನಿಕರನ್ನು ಚಿಕಿತ್ಸೆ ಮಾಡಲು ಈ ಪೆನಿಸಿಲಿನ್ ಔಷಧ ತುಂಬಾ ಸಹಾಯ ಮಾಡಿತು. ೧೯೫೦ರ ಹೊತ್ತಿಗೆ ಆಂಟಿಬಯೋಟಿಕ್ ಗಳಿಗೆ ಬಗ್ಗದ ಸೋಂಕು ಗಮನಕ್ಕೆ ಬರಲಾರಂಭಿಸಿತು.
೧೯೭೨ರ ಹೊತ್ತಿಗೆ ವ್ಯಾಂಕೋಮೈಸಿನ್ ಎಂಬ ಆಂಟಿಬಯೋಟಿಕ್ ಶೋಧವಾದಾಗ ಅದಕ್ಕೆ ಉಳಿದ ಆಂಟಿಬಯೋಟಿಕ್‌ಗಳ ಹಾಗೆ ರೆಸಿಸ್ಟನ್ಸ್ ಬರುವುದಿಲ್ಲ ವೆಂದು ತಿಳಿಯಲಾಗಿತ್ತು. ಆದರೆ ನಂತರ ಅಂದಿನಿಂದ ಇಂದಿನವರೆಗೂ ಈ ಆಂಟಿಬಯೋಟಿಕ್‌ಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತಿವೆ, ಗಂಭೀರ ಸಮಸ್ಯೆಯನ್ನು ಹುಟ್ಟು ಹಾಕುತ್ತಿವೆ.