ಕನ್ನಡ ಪತ್ರಿಕೆಗೆ ಅಡಮ್ಸ್, ಕಾರಂತರು ಬೇಕು !
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
@.
ಕಾರಂತರು ಸುಮಾರು ಒಂಬತ್ತು ವರ್ಷಗಳ ಕಾಲ ಬಾಲರ ಪ್ರಶ್ನೆಗಳಿಗೆ ‘ತರಂಗ’ದ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣದಲ್ಲಿ ಉತ್ತರಿಸಿದರು. ಓದುಗರಿಗೆಕಾರಂತರೇ ಉತ್ತರಿಸುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ ಈ ಅಂಕಣಕ್ಕೆ ಇನ್ನಷ್ಟು ಮಾನ್ಯತೆ ಬಂದಿತು. ಓದುಗರ ಎಲ್ಲ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿತ್ತು.
ಕಳೆದ ವಾರ ನಾನು ‘ ’  ’  ಎಂದೇ ಕರೆಯಿಸಿಕೊಂಡ,    ಎಂಬ ಅಂಕಣವನ್ನು ಸುಮಾರುನಲವ ತ್ತೈದು ವರ್ಷಗಳ ಕಾಲ ನಿರಂತರ ಬರೆದ, ಓದುಗರು ಕೇಳುತ್ತಿದ್ದ ಎಲ್ಲ ಪ್ರಶ್ನೆಗಳಿಗೆ ಅತ್ಯಂತ ಸಮರ್ಪಕ ಉತ್ತರ ನೀಡುತ್ತಿದ್ದ, ಸೆಸಿಲ್ ಅಡಮ್ಸ ಎಂಬಾತನ ಬಗ್ಗೆ ಬರೆದಿದ್ದಕ್ಕೆ ನೂರಾರು ಓದುಗರು, ಅಂಥ ವಿಶೇಷ ಮತ್ತು ಅನೂಹ್ಯ ವ್ಯಕ್ತಿಯೊಬ್ಬನ ಪರಿಚಯಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೂಲತಃ ನಾನು ಅಡಮ್ಸ ಪರಮ ಅಭಿಮಾನಿ. ಆತನ ಪುಸ್ತಕಗಳಿಗಾಗಿ ನಾನು ನ್ಯೂಯಾರ್ಕಿನ ಬೀದಿ ಬೀದಿ ಗಳಲ್ಲಿ ಅಲೆದಾಡಿದ್ದೆ. ಬೆಂಗಳೂರಿನ ತರಗು ಪೇಟೆಯ ರದ್ದಿ ಕಾಗದ ಅಂಗಡಿಯಲ್ಲಿ ಆತನ ಪುಸ್ತಕ ಸಿಕ್ಕಿದೆಯೆಂದು ಅಂಗಡಿಯ ಮಾಲೀಕರು ಫೋನ್ ಮಾಡಿ ಹೇಳಿದಾಗ, ಎಲ್ಲ ಕೆಲಸ ಬಿಟ್ಟು, ತಾಪಡೆ ತೋಪಡು ಓಡಿ ಹೋಗಿ, ಅದನ್ನು ತಂದು, ರಾತ್ರೋರಾತ್ರಿ ಓದಿ ಖುಷಿಪಟ್ಟಿದ್ದೆ. ಗೂಗಲ, ಇಂಟರ್ನೆಟ್ ಇಲ್ಲದ ಕಾಲದಲ್ಲಿ ಓದುಗರ ಕೇಳಿದ ಪ್ರಶ್ನೆಗಳಿಗೆಲ್ಲ ತನ್ನ ನೆಲೆಯಲ್ಲಿ ಸಂಶೋಧನೆ ಮಾಡಿ, ಕೆಲವೊಮ್ಮೆ ವಾರ-ತಿಂಗಳುಗಟ್ಟಲೆ ತಡಕಾಡಿ ಉತ್ತರಿ ಸುತ್ತಿದ್ದ ಅಡಮ್ಸನ ಕಾಳಜಿಯನ್ನು ಮೆಚ್ಚಲೇಬೇಕು.
‘ಹೆಂಗಸರಿಗೆ ಅದು ಇರುವ ಬಗ್ಗೆ ಒಪ್ಪಿಕೊಳ್ಳಬಹುದು, ಆದರೆ ಗಂಡಸರಿಗೇಕೆ ಮೊಲೆ ತೊಟ್ಟುಗಳಿರುತ್ತವೆ?’ ಎಂಬ ಪ್ರಶ್ನೆಗೆ ಮೂವರು ವೈದ್ಯರು, ಐದು ಶರೀರಶಾಸವಿಜ್ಞಾನಿಗಳನ್ನು ಸಂಪರ್ಕಿಸಿದ್ದ ಅಡಮ್ಸ, ಅವರಿಂದ ಸಮರ್ಪಕ ಮಾಹಿತಿ ಪಡೆದು ಉತ್ತರಿಸಿದ್ದ. ಚಿಕಾಗೋದಲ್ಲಿರುವ ಅತಿ ಎತ್ತರದ ವಿಲ್ಲಿಸ್ ಟವರ್ (ಮೊದಲು ಇದನ್ನು ಸಿಯರ್ಸ್ ಟವರ್ ಎನ್ನುತ್ತಿದ್ದರು) ಕೊನೆಯ ಮಹಡಿಯಿಂದ ಉಚ್ಚೆ ಹಾರಿಸಿದರೆ, ಅದು ಎಷ್ಟು ದೂರ ಹಾರುತ್ತದೆ ಎಂದು ಕಿಡಿಗೇಡಿ ಓದುಗನೊಬ್ಬ ಪ್ರಶ್ನೆ ಕೇಳಿದ್ದ. ಆಗ ಅಡಮ್ಸ್ ಹತ್ತು, ಇಪ್ಪತ್ತೈದು, ನಲವತ್ತು, ಐವತ್ತು, ಅರವತ್ತೈದು ವರ್ಷಗಳ ಗಂಡಸರನ್ನು ಆ ಟವರ್‌ನ ಕೊನೆ ಅಂತಸ್ತಿಗೆ ಕರೆದುಕೊಂಡು ಹೋಗಿ, ಗಾಳಿಯ ದಿಕ್ಕನ್ನು ಗಮನಿಸಿ, ದಿನದ ಬೇರೆ ಬೇರೆ ಸಮಯದಲ್ಲಿ ಮೂರು ಸಲ ಅವರಿಂದ ಮೂತ್ರ ವಿಸರ್ಜಿಸಿ, ಅದು ಎಷ್ಟು ದೂರ ಹಾರುತ್ತದೆ ಎಂಬುದನ್ನು ನಿಖರವಾಗಿ ಲೆಕ್ಕ ಹಾಕಿ, ನಂತರ ಉತ್ತರ ಬರೆದಿದ್ದ!
ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದು ಕಷ್ಟ. ಹಾಗಂತ ಓದುಗರ ಪ್ರಶ್ನೆಗಳಿಗೆ ಹಾರಿಕೆ ಅಥವಾ ಉಡಾಫೆಯ ಉತ್ತರ ಕೊಡುವಂತಿಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ಆದರೆ ಅಡಮ್ಸ ಯಾವ ಪ್ರಶ್ನೆಯನ್ನೂ ತಾತ್ಸಾರದಿಂದ ನೋಡುತ್ತಿರಲಿಲ್ಲ. ತನಗೆ ಗೊತ್ತಿಲ್ಲದಿದ್ದರೆ ಬೇರೆಯವರಿಂದ ತಿಳಿದು, ಸ್ವತಃ ಹತ್ತಾರು ಪುಸ್ತಕಗಳನ್ನು ಓದಿ, ನಂತರವೇ ಬರೆಯುತ್ತಿದ್ದ.         ?ಅಥವಾ        ?ಪ್ರಶ್ನೆಗೆ ಉತ್ತರಿಸುವುದು ಸುಲಭವಾಗಿರಲಿಲ್ಲ. ಇವುಗಳೇನು ತರಲೆ ಪ್ರಶ್ನೆಗಳಲ್ಲ. ಇಂಥ ಪ್ರಶ್ನೆಗಳಿಗೂ ಸಾಧ್ಯವಾದಷ್ಟು ಸಂಯಮದಿಂದ ಉತ್ತರಿಸುತ್ತಿದ್ದ.
ಇನ್ನು ಕೆಲವು ಪ್ರಶ್ನೆಗಳಿಗೆ ತನಗೆ ಉತ್ತರ ಗೊತ್ತಿಲ್ಲ ಎಂದು ಆತ ಒಪ್ಪಿಕೊಂಡಿದ್ದೂ ಇದೆ. ಉದಾಹರಣೆಗೆ,   ’      ?,   ,       ? ಕೆಲವು ಪ್ರಶ್ನೆಗಳು ಅಧ್ಯಯನ, ಸಂಶೋಧನೆಗಳಿಗೆ ನಿಲುಕದವು. ಅಂಥವು ಗಳಿಗೆಅಡಮ್ಸತಮಾಷೆಯ ಉತ್ತರ ನೀಡುತ್ತಿದ್ದ. ಉದಾಹರಣೆಗೆ ಅಂಥ ಕೆಲವು ಪ್ರಶ್ನೆಗಳು –          ?,           ? ಇತ್ಯಾದಿ.
ಕೆಲವು ಪ್ರಶ್ನೆಗಳಿಗೆ ಉತ್ತರಿಸುವಾಗ, ಆತ ‘ನಾವು’ ಎಂದು ಉತ್ತರಿಸುತ್ತಿದ್ದ. ಇದನ್ನು ನೋಡಿ, ಆತ ರೀಸರ್ಚ್ ಉದ್ದೇಶಕ್ಕಾಗಿ, ಒಂದು ತಂಡವನ್ನು ಇಟ್ಟುಕೊಂಡಿರ ಬಹುದಾ ಎಂಬ ಸಂದೇಹ ಬರುತ್ತಿತ್ತು. ಆದರೆ ಆತನೇ ಹೇಳಿದಂತೆ, ಕೆಲವೊಮ್ಮೆ ಆತ ತನ್ನ ಭಾವನನ್ನು ಸಹಾಯಕ್ಕಾಗಿ ಕರೆಯುತ್ತಿದ್ದ. ಆತನೇ ಎಡಿಟರ್ ಕೂಡ ಆಗಿದ್ದರಿಂದ, ಅಡಮ್ಸ ಗೆ ಅವನಿಂದ ಸಹಾಯವಾಗುತ್ತಿತ್ತು. ಕೆಲವು ಸಲ ತನ್ನ ಅಂಕಣಕ್ಕಾಗಿ ಬಳಸುತ್ತಿದ್ದ ಚಿತ್ರಕ್ಕಾಗಿ ಆತ ಸ್ಲಗ್ ಸೈನೊರಿನೋ ಎಂಬ ಕಲಾವಿದನ ಸಹಾಯ ಪಡೆಯುತ್ತಿದ್ದ. ಆತನ ಹೆಸರಿನಲ್ಲಿರುವ ಸ್ಲಗ್ ನೋಡಿ, ಅದು ನಿಜವಾದ ಹೆಸರಾ ಎಂದು ಓದುಗರೊಬ್ಬರು ಕೇಳಿದಾಗ, ‘ಇಲ್ಲ, ಅದನ್ನು ನಾವು ಹೇಳುವು ದಿಲ್ಲ’ ಎಂದು ಹೇಳಿ ಮತ್ತಷ್ಟು ಕುತೂಹಲ ಮೂಡಿಸಿದ್ದ.
ಅಡಮ್ಸ ಎಂದಾದರೂ ಸುಳ್ಳು ಹೇಳಿದ್ದು ಇದೆಯಾ? ಅಥವಾ ಸುಳ್ಳು ಹೇಳಿ ಓದುಗರ ಕೈಗೆ ಸಿಕ್ಕಿಬಿದ್ದು ಕ್ಷಮಾಪಣೆ ಕೇಳಿದ್ದಿದೆಯಾ? ಈ ಪ್ರಶ್ನೆಗಳಿಗೆ ಉತ್ತರ – ಇಲ್ಲ. ಹಾಗಂತ ಕೆಲವು ಸಲ ಪ್ರಶ್ನಾರ್ಹ ಸನ್ನಿವೇಶಗಳೂ ಉದ್ಭವಿಸಿದ್ದುಂಟು. ಉದಾಹರಣೆಗೆ, ಒಮ್ಮೆ ಆತ ತನ್ನ ಉತ್ತರದಲ್ಲಿ,      ಎಂದು ಬರೆದಾಗ ಓದುಗರು ಆಕ್ಷೇಪಿಸಿದ್ದರು. ಅದಕ್ಕೆ ಆಡಮ್ಸ ತಮಾಷೆಯಿಂದ ಹೀಗೆ ಉತ್ತರಿಸಿದ್ದ –     ’     .      .
ಪ್ರಶ್ನೆಗಳನ್ನು ನಿಜವಾಗಿಯೂ ಓದುಗರೇ ಕೇಳುತ್ತಿದ್ದರಾ ಅಥವಾ ಅವುಗಳನ್ನು ಅಡಮ್ಸ್ ಸ್ವಂತ ತಯಾರಿಸುತ್ತಿದ್ದನಾ? ತನಗೆ ಉತ್ತರಕ್ಕೆ ಸರಿ ಹೊಂದುವ ಪ್ರಶ್ನೆ ಗಳನ್ನು ಆತ ಕಪೋಲಕಲ್ಪಿತ ವ್ಯಕ್ತಿಗಳ ಹೆಸರನ್ನು ಬರೆದು ಪ್ರಕಟಿಸುತ್ತಿದ್ದನಾ? ಈ ಪ್ರಶ್ನೆಗಳಿಗೂ ಆತ ಉತ್ತರಿಸಿದ್ದಾನೆ – ‘ಸಾಧ್ಯವೇ ಇಲ್ಲ. ಎಲ್ಲ ಪ್ರಶ್ನೆಗಳೂ ಓದುಗರದ್ದೇ. ಕೆಲವು ಸಲ ನಾನೇ ಪ್ರಶ್ನೆಗಳನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ನನ್ನೊಳಗೆ ಬಂದಿದ್ದುಂಟು. ಆದರೆ ಅದನ್ನು ನಾನು ನನ್ನೊಳಗೇಸಾಯಿಸಿಬಿಟ್ಟಿದ್ದೇನೆ. ಎಲ್ಲ ಪ್ರಶ್ನೆಗಳ ಮೂಲ ಲೇಖಕರು ಓದುಗರೇ. ಸೂರ್ಯನ ಕೆಳಗೆ ಮತ್ತು ಮೇಲಿನ ಯಾವುದೇ ಪ್ರಶ್ನೆಗಳಿಗೆ ಆತ ಉತ್ತರಿಸಿದರೂ, ಸೆಸಿಲ್ ಅಡಮ್ಸ ಇಂದಿಗೂ ಅeತನೇ. ಓದುಗರ ಎಲ್ಲ ಪ್ರಶ್ನೆಗಳಿಗೂ ನಾಲ್ಕೂವರೆ ದಶಕಗಳಿಂದ ಅತ್ಯಂತ ಸಂಯಮ, ಶಿಸ್ತು ಮತ್ತು ಸಮರ್ಪಕವಾಗಿ ಉತ್ತರಿಸುತ್ತಿರುವ ‘ನಾನು ಯಾರು’ ಎಂಬುದನ್ನು ತಾಕತ್ತಿದ್ದರೆ ಕಂಡು ಹಿಡಿಯಿರಿ ನೋಡೋಣ ಎಂದು ಅಡಮ್ಸ್ ಓದುಗರಿಗೆ ಸವಾಲು ಹಾಕುತ್ತಿರಬಹುದಾ? ಗೊತ್ತಿಲ್ಲ.
ನಾನು ಸೆಸಿಲ್ ಅಡಮ್ಸ್ ಬಗ್ಗೆ ಯೋಚಿಸಿದಷ್ಟೂ, ಅವನ ಬಗ್ಗೆ ಅಭಿಮಾನ ಮೂಡುತ್ತದೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ, ಒಂದಷ್ಟು ಹುಚ್ಚು, ಶ್ರದ್ಧೆ ಮತ್ತುಜೀವನಾಸಕ್ತಿಯಿಂದ ಈ ಕೆಲಸವನ್ನು ಮಾಡುತ್ತ ಬಂದಿದ್ದಾನೆ. ನಿಮ್ಮ ತಲೆಯಲ್ಲಿ ಹೊಕ್ಕ ಗುಂಗಿ ಹುಳುವನ್ನು ಅವನ ತಲೆಯೊಳಗೆ ಬಿಟ್ಟರೆ ಸಾಕು, ಆತ ಅದಕ್ಕೊಂದು ಗತಿ ಕಾಣಿಸುವವರೆಗೆ ಬಿಡುವುದಿಲ್ಲ. ಇದರಿಂದ ಅವನಿಗೆ ಏನು ಸಿಗುವುದೋ ಗೊತ್ತಿಲ್ಲ. ಆದರೆ, ಪತ್ರಿಕೆ ತನಗೆ ವಹಿಸಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದಾನೆ. ಸೆಸಿಲ್ ಅಡಮ್ಸ ಬಗ್ಗೆ ಯೋಚಿಸಿದಷ್ಟೂ ಕನ್ನಡದಲ್ಲಿ ಇಂಥ ಅಂಕಣಗಳನ್ನು ಯಾರಾದರೂ ಬರೆದಿರಬಹುದಾ ಎಂದು ನನ್ನ ಮನಸ್ಸು ತಲೆ ಕೆಡಿಸಿಕೊಂಡಿತ್ತು. ಥೇಟು ಅಡಮ್ಸ ಥರಾ ಅಲ್ಲದಿದ್ದರೂ, ಅಂಥ ಒಂದಷ್ಟು ಪ್ರಯತ್ನ ಕನ್ನಡದಲ್ಲೂ ಆಗಿರಬಹುದು ಎಂದು ಭಾವಿಸಿದ್ದೆ.
ಈ ಬಗ್ಗೆ ಸ್ವಲ್ಪ ಹುಡುಕಾಟ ನಡೆಸಿದಾಗ, ನನಗೆ ನಿರಾಸೆಯೇನೂ ಆಗಲಿಲ್ಲ. ಆ ನಿಟ್ಟಿನಲ್ಲಿ ಸ್ವಲ್ಪ ಕೆದಕಿದಾಗ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಶಿವರಾಮ ಕಾರಂತರು ‘ತರಂಗ’ ಪತ್ರಿಕೆಯಲ್ಲಿ ಬರೆಯುತ್ತಿದ್ದ, ‘ಬಾಲವನದಲ್ಲಿ ಕಾರಂತಜ್ಜ’ ಅಂಕಣಗಳು ನೆನಪಾಯಿತು. ಆ ಅಂಕಣಗಳಿಗಾಗಿ ನನ್ನ ಸಂಗ್ರಹದಲ್ಲಿರುವ ಹಳೆ ‘ತರಂಗ’ ಪತ್ರಿಕೆಗಳನ್ನು ನೋಡಿದೆ. ಸೆಸಿಲ್ ಅಡಮ್ಸ ಎದುರಿಸಿದಂಥ ಪ್ರಶ್ನೆಗಳನ್ನೇ ಕಾರಂತರೂ ಎದುರಿಸಿದ್ದರು. ಆದರೆ, ಅಡಮ್ಸ್ ನ ಹಾಗೆ ಕಾರಂತರುಸುದೀರ್ಘವಾಗಿ ಉತ್ತರ ಬರೆದಿಲ್ಲ. ಅದಕ್ಕಿಂತ ಮುಖ್ಯವಾಗಿ ಕಾರಂತರಿಗೆ ಪುಟಾಣಿ ಮಕ್ಕಳು ಪ್ರಶ್ನೆಗಳನ್ನು ಕೇಳುತ್ತಿದ್ದರು.
ಮೂರ್ನಾಲ್ಕು ವರ್ಷದ ಮಕ್ಕಳಿಂದ ಹದಿನೈದು ವರ್ಷದವರು ಮಾತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಆಡಮ್ಸ್ ಗೆ ಯಾರು ಬೇಕಾದರೂ ಪ್ರಶ್ನೆ ಕೇಳಬಹು ದಾಗಿತ್ತು. ‘ಬಾಲವನದಲ್ಲಿ ಕಾರಂತಜ್ಜ’ದ ಪ್ರಶ್ನೆಗಳನ್ನು ನೋಡಿದರೆ, ಅವುಗಳಿಗೆ ಉತ್ತರಿಸುವುದು ಅಷ್ಟು ಸುಲಭವಲ್ಲ ಎಂಬುದು ಗೊತ್ತಾಗುತ್ತದೆ. ಮಕ್ಕಳ ಪ್ರಶ್ನೆ ಗಳು ಸಹಜವಾಗಿರುತ್ತವೆ ಮತ್ತು ಉತ್ತರಿಸಲು ಸುಲಭವಾಗಿ ಇರುವುದಿಲ್ಲ. ಅವರಿಗೆ ತಿಳಿಯುವಂತೆ, ಅರ್ಥವಾಗುವಂತೆ, ಉತ್ತರಿಸುವುದೂ ಕಷ್ಟವೇ. ಈ ನಿಟ್ಟಿನಲ್ಲಿ ನೋಡಿದರೆ ಕಾರಂತರು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಹೇಳಬಹುದು. ಮಕ್ಕಳ ಪ್ರಶ್ನೆಗಳಿಗೆ ಕಾರಂತರು ಸುದೀರ್ಘ ಉತ್ತರ ನೀಡುತ್ತಿರಲಿಲ್ಲ.
ಕೆಲವು ಸಲ ಒಂದು ಸಾಲಿನ ಉತ್ತರ ಕೊಡುತ್ತಿದ್ದರು. ಅಗತ್ಯವಿದ್ದಾಗ ವಿವರಿಸುತ್ತಿದ್ದರು. ಆದರೆ, ಅವರ ಉತ್ತರದಲ್ಲಿ ಅವರು ಅನೇಕ ಪುಸ್ತಕಗಳನ್ನು ಓದಿದ, ಸಂಶೋಧನೆ ಮಾಡಿದ, ಆಕರ ಗ್ರಂಥಗಳನ್ನು ಉದ್ಧರಿಸಿದ ಯಾವ ನಿದರ್ಶನವೂ ಸಿಗುವುದಿಲ್ಲ. ಕಾರಂತರು ತಮ್ಮ ಅನುಭವದ ಮೂಸೆಯಲ್ಲಿ ಮತ್ತು ವೈಜ್ಞಾನಿಕ ವಾಗಿ ಉತ್ತರ ನೀಡುತ್ತಿದ್ದರು. ‘ಪ್ರಪಂಚದಲ್ಲಿ ಮೊಟ್ಟ ಮೊದಲು ಹುಟ್ಟಿದ ಕಣಕ್ಕೆ ಜೀವ ಹೇಗೆ ಬಂತು?’ ಎಂಬ ಪ್ರಶ್ನೆಗೆ ಕಾರಂತರು ಹೀಗೆ ಉತ್ತರಿಸಿದ್ದರು – ‘ಜೀವ ಎಂಬುದು ಒಂಟಿ ಕಣವಲ್ಲ. ಅದು ಹಲವು ಕಣಗಳ ಸಮೂಹ. ಚಾಲನೆ ಮುಂತಾದ ಗುಣಗಳನ್ನು ತೋರಿಸಬಲ್ಲ ಕಣಗಳ ಕೂಟ.
ಅಂಥ ಕಣಕೂಟ ಎಂದು ಹುಟ್ಟಿತು, ಹೇಗೆ ಹುಟ್ಟಿತು ಎಂಬ ವಿಚಾರವನ್ನು ಕಂಡವರಿಲ್ಲ. ಊಹೆಯಿಂದ ಹಾಗೆ – ಹೀಗೆ ಎನ್ನುವ ಸಂಗತಿ ಇದು. ನನಗೇ ಹೇಗೆ ಜೀವ ಬಂತು ಎಂದು ನಾನೇ ಹೇಳಲಾರೆ. ನಿನಗೆ ಜೀವ ಇದ್ದರೂ ನೀನೂ ಅದನ್ನು ಹೇಳಲಾರೆ.’ ಮತ್ತೊಂದು ಪ್ರಶ್ನೆ – ‘ಮನುಷ್ಯ ಪಕ್ಷಿಪ್ರಿಯ. ಆದರೆ ಯಾರೂ ಕಾಗೆ ಯನ್ನು ಸಾಕುವುದಿಲ್ಲ, ಏಕೆ?’ ಈ ಪ್ರಶ್ನೆಗೆ ಕಾರಂತರು ತುಸು ಹಾರಿಕೆಯ ಉತ್ತರ ನೀಡಿದ್ದರು – ‘ಸಾಕದೆಯೇ ಅದು ಬಂದು ನಿನ್ನ ಭೇಟಿ ಮಾಡುವಾಗ, ಅದನ್ನೇಕೆ ಸಾಕಬೇಕು ಹೇಳು? ಅದರಿಂದ ನಿನಗೆ ಏನಾದರೂ ಕೆಲಸ ಆಗಬೇಕೆ?’ ಇನ್ನೊಂದು ಪ್ರಶ್ನೆ – ‘ಆಹಾರ ತಿನ್ನುವಾಗ ಹಸು ಬಾಲ ಅಡಿಸುತ್ತದೆ, ಏಕೆ?’ ಇದಕ್ಕೆ ಕಾರಂತರ ಉತ್ತರ – ಹಸು ಬಾಲ ಅಡಿಸುವುದು ನೊಣ ಮೈಮೇಲೆ ಕುಳಿತಿರದಂತೆ ಮಾಡಲು.
ಅದರ ಊಟಕ್ಕೂ, ಬಾಲಕ್ಕೂ ಸಂಬಂಧ ಇಲ್ಲ.’ ‘ಇರುವೆಗಳು ಸಾಲಾಗಿಯೇ ಹೋಗುವುದೇಕೆ?’ ಎಂಬ ಪ್ರಶ್ನೆಗೆ ಕಾರಂತರು ಉತ್ತರಿಸಿದ್ದರು – ‘ಅವು ಒಂದ ನ್ನೊಂದು ಅನುಸರಿಸುವುದು, ಮುಂದಿರುವ ಇರುವೆಯ ವಾಸನೆ ಹಿಡಿದು. ಅವು ತಮ್ಮ ಪಂಗಡದ ದೂರ ಸರಿದ ಪ್ರಾಣಿಗಳನ್ನು ಕಾಣಲಾರವು. ಸಾವಿರಾರು ಇರುವೆಗಳು ಒಂದು ಕಡೆಯಿಂದ, ಇನ್ನೊಂದು ಕಡೆಗೆ ಹೋಗುವಾಗ, ಸಾಲು ಹಿಡಿದೇ ಹೋಗಬೇಕು. ಯುದ್ಧಕ್ಕೆ ಹೋಗುವ ಸೈನಿಕರೂ ಹಾಗೆ ಮಾಡುತ್ತಾರೆ.’ ಈ ಪ್ರಶ್ನೆಯನ್ನು ಓದಿದ ಬಾಲಕನೊಬ್ಬ ಕಾರಂತರಿಗೆ ಮರು ಪ್ರಶ್ನೆ ಹಾಕಿದ್ದ – ‘ಕಾರಂತಜ್ಜ, ಇರುವೆಗಳು ಒಂದನ್ನೊಂದನ್ನು ಅನುಸರಿಸುವುದು ಮುಂದಿರುವ ಇರುವೆಯ ವಾಸನೆ ಹಿಡಿದು ಎಂದು ಹೇಳಿದ್ದೀರಲ್ಲ.
ಹಾಗಾದರೆ ತಮ್ಮ ಸಾಲಿನ ಅತ್ಯಂತ ಮುಂದೆ ಇರುವ ಇರುವೆ ಯಾರ ವಾಸನೆಯನ್ನು ಹಿಡಿದು ಮುಂದೆ ಸಾಗುತ್ತದೆ?’ ಇದಕ್ಕೆ ಕಾರಂತರು, ‘ತಾಳು, ಆ ಇರುವೆ ಯನ್ನು ಕೇಳಿ ಹೇಳುತ್ತೇನೆ’ ಎಂದು ಬರೆದಿದ್ದರು. ‘ಕಾರಂತಜ್ಜಾ, ನೀನು ಸಿಗರೇಟು ಸೇದುತ್ತಿರುವ ಫೋಟೋ ನೋಡಿದೆ. ಸಿಗರೇಟು ಸೇದುವುದು ಕೆಟ್ಟದ್ದಲ್ಲವೇ?’ ಎಂದು ಏಳನೇ ವಯಸ್ಸಿನ ಬಾಲಕಿಯೊಬ್ಬಳು ಕೇಳಿದ್ದಳು. ಅದಕ್ಕೆ ಕಾರಂತಜ್ಜರು ಹೇಳಿದ್ದರು – ‘ಹಿಂದೆ ನಾನು ಸಿಗರೇಟು ಸೇದುತ್ತಿದ್ದೆ. ಈಗ ಬಿಟ್ಟಿದ್ದೇನೆ. ನನ್ನಿಂದ ಸಿಗರೇಟಿಗೂ ಕೆಟ್ಟದ್ದಾಯಿತು. ನನ್ನಿಂದ ಅದು ಸುಟ್ಟೇ ಹೋಯಿತು.’
ಕಾರಂತರಿಗೆ ಓದುಗರು ಕೇಳಿದ ಪ್ರಶ್ನೆಗಳನ್ನು ಗಮನಿಸಬೇಕು. ರಾತ್ರಿಯೆಲ್ಲ ಸೂರ್ಯ ಉದಯಿಸಬಾರದೇ?, ನಾವು ಅಳುವಾಗ ಕಣ್ಣೀರ ಜತೆ ಸಿಂಬಳಬರುವುದೇಕೆ?, ಆಲಿಕಲ್ಲು ಹೇಗೆ ಉಂಟಾಗುತ್ತದೆ?, ಹುಬ್ಬುಗಳ ಕೂದಲುಗಳೇಕೆ ಉದುರುವುದಿಲ್ಲ? ಪ್ರಾಣಿ, ಪಕ್ಷಿಗಳೇಕೆ ಕನ್ನಡಕ ಹಾಕಿಕೊಳ್ಳುವುದಿಲ್ಲ? ಕೋಳಿ ಯಾಕೆ ಮೂತ್ರ ವಿಸರ್ಜನೆ ಮಾಡುವುದಿಲ್ಲ?, ತಲೆಯ ಅಡಿಗೆ ದಿಂಬನ್ನಿಟ್ಟು ಏಕೆ ಮಲಗುತ್ತಾರೆ?, ನೀರಿನಲ್ಲಿ ಕೈಅಡ್ಡಿ ಚಪ್ಪಾಳೆ ಹೊಡೆದಾಗ ಶಬ್ದ ಬರುವುದಿಲ್ಲ ಏಕೆ?, ರಾಮ, ಲಕ್ಷ್ಮಣರು ಯಾವ ಭಾಷೆಯಲ್ಲಿ ಮಾತಾಡುತ್ತಿದ್ದರು?, ನಾಗರಹಾವಿಗೆ ಮಾತ್ರ ಹೆಡೆ ಇರುತ್ತದೆ, ಏಕೆ?, ಗಂಡಸರಿಗೆ ತಲೆ ಬೋಳಾಗುತ್ತದೆ, ಆದರೆ ಹೆಂಗಸರಿಗೆ ಆಗುವುದಿಲ್ಲ, ಏಕೆ?, ಕಾಗೆಗೆ ಹಲ್ಲಿಲ್ಲ, ಆದರೂ ನಾವು ಚಕ್ಕುಲಿ, ಕೋಡುಬಳೆ ಹಾಕಿದಾಗ ಚೆನ್ನಾಗಿ ತಿನ್ನುತ್ತದಲ್ಲ, ಹೇಗೆ?, ಪ್ರಾಣಿಗಳಿಗೆ ಯಾರು ಕೂದಲು ಕತ್ತರಿಸಿ (ಹೇರ್ ಕಟ್) ಕೊಡುತ್ತಾರೆ ಮತ್ತುಉಗುರುಗಳನ್ನು ಕಟ್ ಮಾಡಿ ಕೊಡುತ್ತಾರೆ?, ಎಲ್ಲ ಬಣ್ಣದ ಹೂವುಗಳಿವೆ.
ಆದರೆ ಕಪ್ಪು ಬಣ್ಣದ ಹೂವುಗಳಿಲ್ಲ, ಏಕೆ?. ಬೆಂಕಿಯಲ್ಲಿ ಹೊಗೆ ಎಲ್ಲಿದೆ?, ಬೆಳ್ಳಿಗೆ ತುಕ್ಕು ಹಿಡಿಯುವುದಿಲ್ಲ ಏಕೆ?, ದೇವರುಗಳೆಲ್ಲ ತಾವರೆ ಹೂವಿನ ಮೇಲೆಯೇ ನಿಂತಿರುತ್ತಾರೆ, ಏಕೆ?, ಸಮುದ್ರದ ನೀರಿನಲ್ಲಿ ಕಪ್ಪೆಗಳೇಕೆ ವಾಸಿಸುವುದಿಲ್ಲ?… ಇತ್ಯಾದಿ. ಈ ಎಲ್ಲ ಪ್ರಶ್ನೆಗಳಿಗೂ ಕಾರಂತರು ಸಮಾಧಾನದಿಂದ ಉತ್ತರಿಸಿದ್ದಾರೆ. ಕಾರಂತರು ಸುಮಾರು ಒಂಬತ್ತು ವರ್ಷಗಳ ಕಾಲ ಆ ಅಂಕಣದಲ್ಲಿ ಪುಟ್ಟ ಬಾಲರ ಪ್ರಶ್ನೆಗಳಿಗೆ ‘ತರಂಗ’ದಲ್ಲಿ ಉತ್ತರಿಸಿದರು. ಓದುಗರಿಗೆ ಕಾರಂತರೇ ಉತ್ತರಿಸುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ ಈ ಅಂಕಣಕ್ಕೆ ಇನ್ನಷ್ಟು ಮಾನ್ಯತೆ ಬಂದಿತು. ಓದುಗರ ಎಲ್ಲ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿತ್ತು. ಆದರೆ, ಅವರು ಯಾರನ್ನು ಕೇಳಿಯೋ, ಪುಸ್ತಕ ಓದಿಯೋ, ಆಕರ ಗ್ರಂಥಗಳನ್ನು ಹುಡುಕಿಯೋ ಉತ್ತರಿಸುತ್ತಿರಲಿಲ್ಲ.
ತಮಗೆ ಆ ಕ್ಷಣಕ್ಕೆ ಹೊಳೆದ ಉತ್ತರವನ್ನು ವೈಜ್ಞಾನಿಕ ಮತ್ತು ಸಾಮಾನ್ಯ ಜ್ಞಾನದ ತಳಹದಿಯ ಮೇಲೆ ನೀಡುತ್ತಿದ್ದರು. ಮಕ್ಕಳನ್ನು ಗಮನದಲ್ಲಿರಿಸಿಕೊಂಡುಉತ್ತರಿಸುತ್ತಿದ್ದುದರಿಂದ ಅವರ ಉತ್ತರಗಳು ಸರಳ ಮತ್ತು ಸಂಕ್ಷಿಪ್ತವಾಗಿರುತ್ತಿದ್ದವು. ವೈಜ್ಞಾನಿಕ ವಿವರಣೆ, ಕ್ಲಿಷ್ಟಪದ ಮತ್ತು ವಿವರಣೆಗಳು ಇರುತ್ತಿರಲಿಲ್ಲ. ಹೀಗಾಗಿ ಆ ಅಂಕಣ ಬಹಳ ಜನಪ್ರಿಯವಾಯಿತು. ಕಾರಂತರಿಗೆ ವಾರ ವಾರ ನೂರಾರು ಪ್ರಶ್ನೆಗಳು ಬರುತ್ತಿದ್ದವಂತೆ.
ಸೆಸಿಲ್ ಅಡಮ್ಸ ಥರಾ ಕಾರಂತರು ಪ್ರಯೋಗ ಮಾಡಲಿಲ್ಲ, ಸುದೀರ್ಘ ಉತ್ತರ ಬರೆಯಲಿಲ್ಲ. ಒಂದು ಪ್ರಶ್ನೆಗಾಗಿ ಹತ್ತಾರು ಜನರ ಜತೆ ಸಂವಾದ ಮಾಡಲಿಲ್ಲ.ಉತ್ತರ ಕಂಡುಹಿಡಿಯಲು ನೂರಾರು ಮೈಲಿ ಪ್ರಯಾಣ ಮಾಡಲಿಲ್ಲ. ಅಡಮ್ಸ ನಲವತ್ತೈದು ವರ್ಷಗಳಿಂದ ಬರೆಯುತ್ತಲೇ ಇzನೆ. ಅಡಮ್ಸ ಸ್ವೀಕರಿಸಿದ ರೀತಿಯಪ್ರಶ್ನೆಗಳನ್ನು ಕಾರಂತರೂ ಸ್ವೀಕರಿಸಿದರು. ಆದರೆ ಉತ್ತರ ಕಂಡುಕೊಳ್ಳಲು ಇಬ್ಬರೂ ಅನುಸರಿಸಿದ ವಿಧಾನ ಮತ್ತು ಧಾಟಿ ಭಿನ್ನವಾಗಿತ್ತು. ಕನ್ನಡಕ್ಕೊಬ್ಬ ಅಡಮ್ಸ ಮತ್ತು ಕಾರಂತರು ಬೇಕು ಎಂದು ಅನಿಸುವುದಿಲ್ಲವೇ?