ನಿಲ್ಲದ ಉಡುಪಿ ಶಾಲೆಯ ಹಿಜಾಬ್‌ ವಿವಾದ
ಅಭಿಮತ
ಪ್ರಕಾಶ್ ಶೇಷರಾಘವಾಚಾರ‍್
@.
ತಥಾಕಥಿತ ಉದಾರವಾದಿಗಳು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟು ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದುಆರೋಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿರುವ ಕಾರಣ ಈ ವಿವಾದಕ್ಕೆ ರೆಕ್ಕೆಪುಕ್ಕೆ ಸೇರಿಕೊಂಡಿದೆ ಮತ್ತು ಕೋಮು ಬಣ್ಣ ಸಹಜವಾಗಿ ಬಳಿಯ ಲಾಗಿದೆ.
ಉಡುಪಿಯ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜ್‌ನಲ್ಲಿ6ವಿದ್ಯಾರ್ಥಿನಿಯರು ಕಾಲೇಜ್‌ಗೆ ಹಿಜಾಬ್ ಧರಿಸಿ ಬಂದ ವೇಳೆ ಶಾಲಾ ಆಡಳಿತ ಮಂಡಳಿಯು ‘ಇದು ವಸಸಂಹಿತೆ ಉಲ್ಲಂಘನೆಯಾಗುತ್ತದೆ, ಆದ ಕಾರಣ ತರಗತಿಗೆ ಪ್ರವೇಶ ನೀಡಲಾಗದು’ ಎಂದು ಅವರನ್ನು ತರಗತಿಯಿಂದ ಹೊರಗೆ ಕಳುಹಿಸುತ್ತಾರೆ.
ಈ 6 ವಿದ್ಯಾರ್ಥಿಗಳು ತಾವು ಹಿಜಾಬ್ ಇಲ್ಲದೆ ತರಗತಿ ಪ್ರವೇಶಿಸುವುದಿಲ್ಲ ಎಂದು ಹಠಮಾರಿ ಧೋರಣೆ ತೋರಿ ಕಾಲೇಜಿನ ಮೆಟ್ಟಿಲ ಮೇಲೆ ಕೂತು, ಆ ಚಿತ್ರ ವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಾಲೇಜಿನ ನಿಯಮ ಮುಂದಿಟ್ಟು ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾ ಗುತ್ತಿದೆ’ ಎಂದು ಹುಯಿಲೆಬ್ಬಿಸಿದ್ದಾರೆ. ಈ ಸರಕಾರಿ ಕಾಲೇಜಿನಲ್ಲಿ ೭೫ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ನೆರೆಯ ಲ್ಲಿಯೇ ಇರುವ ಹೈಸ್ಕೂಲ್‌ನಲ್ಲಿ 25 ವಿದ್ಯಾರ್ಥಿನಿಯರು ಓದುತ್ತಿದ್ದಾರೆ.
ಈ ಎಲ್ಲರೂ ಈಗಾಗಲೇ ಒಂದೂವರೆ ವರ್ಷದಿಂದ ಯಾವುದೇ ಸಮಸ್ಯೆ ಇಲ್ಲದೆ ಓದುತ್ತಿದ್ದರು. ಈಗ ಇದ್ದಕಿದ್ದ ಹಾಗೆ ಈ6ವಿದ್ಯಾರ್ಥಿನಿಯರು ಕಾಲೇಜ್‌ಗೆ ಹಿಜಾಬ್ ಧರಿಸಿ ಬರಲು ಆರಂಭ ಮಾಡಿದ್ದಾರೆ. ಹಿಜಾಬ್ ಧರಿಸಲು ಅನುಮತಿಗಾಗಿ ಒತ್ತಾಯಿಸುತ್ತಿರುವ ವಿದ್ಯಾರ್ಥಿನಿಯರ ಪೈಕಿ ಅಲ್ಮಾಸ್ ಎಂಬಾಕೆ, ‘ಹಿಜಾಬ್ ಧರಿಸುವುದು ನಮ್ಮ ಹಕ್ಕು. ದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ನಮ್ಮ ಗುರುತನ್ನು ಅಳಿಸಲು ಹಿಜಾಬ್ ಧರಿಸಲು ನಮಗೆ ಅನುಮತಿ ನಿರಾಕರಿಸಿ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ’ ಎಂಬ ವಾದ ಮುಂದಿಡುತ್ತಾಳೆ.
ಆದರೆ, ಶಾಲೆಯ ಪ್ರಿನ್ಸಿಪಾಲ್ ರುದ್ರೇಗೌಡರ ಪ್ರಕಾರ 75 ವಿದ್ಯಾರ್ಥಿನಿಯರಲ್ಲಿ 6 ಜನಕ್ಕೆ ಮಾತ್ರ ಈ ಸಮಸ್ಯೆ ಇರುವುದು. ಇವರು ಕೇವಲ ಪ್ರಚಾರ ಪಡೆಯಲು ಹೀಗೆ ಮಾಡುತ್ತಿದ್ದಾರೆ ಎಂಬುದು ಅವರ ದೂರು. ಹಲವಾರು ಸುತ್ತಿನ ಮಾತುಕತೆಯ ತರುವಾಯವೂ ಈ ವಿದ್ಯಾರ್ಥಿನಿಯರು ತಮ್ಮ ಹಠವನ್ನು ಮುಂದು ವರಿಸಿ ದ್ದಾರೆ. ಸದ್ಯ ಶಿಕ್ಷಣ ಇಲಾಖೆಯು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದೆ. ಕಾಲೇಜಿನಲ್ಲಿ ಸಮವಸ ಕಡ್ಡಾಯ. ಹೀಗಾಗಿ ಪ್ರತಿಯೊಬ್ಬರೂ ಸಮವಸ್ತ್ರಧರಿಸುವುದು ಅನಿವಾರ್ಯ. ಯಾರದೋ ಕುಮ್ಮಕ್ಕಿಗೆ ಬಲಿಯಾಗಿರುವ ವಿದ್ಯಾರ್ಥಿನಿಯರು ಏಕಾಏಕೀ ವಿವಾದ ಹುಟ್ಟುಹಾಕಿzರೆಯೇ ವಿನಹ ಇವರ ಸ್ವಂತ ವಿವೇಚನೆಯಿಂದಲ್ಲ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ ಶಾಲಾ ಆಡಳಿತ ಮಂಡಳಿಯ ಸದಸ್ಯರು.
ವಿವಾದವು ಈಗ ರಾಷ್ಟ್ರ ಮಟ್ಟವನ್ನು ತಲುಪಿದೆ. ತಥಾಕಥಿತ ಉದಾರವಾದಿಗಳು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟು ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿರುವ ಕಾರಣ ಈ ವಿವಾದಕ್ಕೆ ರೆಕ್ಕೆಪುಕ್ಕೆ ಸೇರಿಕೊಂಡಿದೆ ಮತ್ತು ಕೋಮು ಬಣ್ಣ ಸಹಜವಾಗಿ ಬಳಿಯಲಾಗಿದೆ. ಶಾಲೆಯ ಆಡಳಿತ ಮಂಡಳಿಯು ಸ್ಪಷ್ಟವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡು ಶಾಲೆಯ ನಿಯಮಾ ವಳಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ವಿದ್ಯಾರ್ಥಿನಿಯರು ಶಾಲೆಗೆ ಬರಬೇಕೆಂದರೆ ಸಮವಸಕಡ್ಡಾಯವೆಂದು ಹೇಳಿದ್ದಾರೆ.
ಪಿಎಫ್ಐನ ವಿದ್ಯಾರ್ಥಿ ಘಟಕವಾದ ‘ಕ್ಯಾಂಪಸ್ ಫ್ರಂಟ್’ ಈ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಿ ತಪ್ಪು ದಾರಿಗೆ ಕರೆದ್ಯೊಯುತ್ತಿದೆ. ಜಮಾತೆ ಇಸ್ಲಾಂ ಪತ್ರಿಕಾ ಗೋಷ್ಠಿ ನಡೆಸಿ ಹಿಜಾಬ್ ಧರಿಸುವುದಕ್ಕೆ ಅಡ್ಡಿ ಪಡಿಸುವುದು ಸಂವಿಧಾನದಲ್ಲಿ ದತ್ತವಾದ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಪ್ರತಿಪಾ ದಿಸಿದ್ದಾರೆ. ಸಂವಿಧಾನದ 25ನೇ ವಿಧಿಯು ಎಲ್ಲರಿಗೂ ಅವರವರ ಧರ್ಮಾಚರಣೆಗೆ ಅವಕಾಶ ನೀಡುತ್ತದೆ. ಹಾಗೆಯೇ ಸಂವಿಧಾನದ 19ನೇ ವಿಧಿಯು ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಸ್ವಾತಂತ್ರ್ಯವನ್ನೂ ನೀಡಿದೆ.
ಆದರೆ ದ್ವೇಷ ಹುಟ್ಟಿಸುವುದಕ್ಕೆ ಅಥವಾ ಮತ್ತೊಬ್ಬರನ್ನು ನಿಂದಿಸುವುದಕ್ಕೆ ಅವಕಾಶವಿಲ್ಲ ಹಾಗೆಯೇ ಧಾರ್ಮಿಕ ಆಚರಣೆಯೂ ಸಹಾ ಮತ್ತೊಬ್ಬರಿಗೆ ಅಥವಾಸುವ್ಯವಸ್ಥೆ ಕೆಡಿಸುವುದಕ್ಕೆ ಆಸ್ಪದ ನೀಡುವುದಿಲ್ಲ. ಇದೇ ರೀತಿಯ ವಿವಾದವು ಚಿಕ್ಕಮಗಳೂರಿನ ಕೊಪ್ಪ ತಾಲೂಕು ಬಾಲಗಡಿಯ ಕಾಲೇಜಿನಲ್ಲಿ ಇತ್ತೀಚೆಗೆ ಉಂಟಾಗಿತ್ತು. ಆ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದಾಗ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಕಾಲೇಜ್‌ಗೆ ಬರತೊ ಡಗಿದರು. ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಕಾಲೇಜಿನ ವಾತಾವರಣ ತಿಳಿ ಗೊಳಿಸಿದ್ದರು.
ಹಿಜಾಬ್ ವಿವಾದವು ಇದೇ ಮೊದಲೇನಲ್ಲ. ಮೂರು ವರ್ಷದ ಕೆಳಗೆ ಇದೇ ಕಾಲೇಜಿನಲ್ಲಿ ಇಂಥದ್ದೇ ವಿವಾದ ತಲೆ ಎತ್ತಿತ್ತು. ಆಗ ಪ್ರತಿಯೊಬ್ಬರೂ ಕಾಲೇಜಿನ ಡ್ರಸ್ ಕೋಡ್ ಪಾಲಿಸಲು ಕಟ್ಟುನಿಟ್ಟಾಗಿ ಸೂಚಿಸಿ ಸಮಸ್ಯೆ ಬಗೆಹರಿಸಲಾಗಿತ್ತು. ಕೇರಳ ವಿದ್ಯಾರ್ಥಿ ಪೊಲೀಸ್ ಪಡೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಸೇರ್ಪಡೆನಿರಾಕರಿಸಲಾಗಿದೆ. ಅಲ್ಲಿಯೂ ತಮ್ಮ ಧಾರ್ಮಿಕ ಆಚರಣೆಯನುಸಾರ ತಮಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದರು. ಆದರೆ ಕೇರಳ ಸರಕಾರ ಈ ಬೇಡಿಕೆ ಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ಕಳೆದ ವಾರ ಕೋಲಾರ ಜಿಲ್ಲೆಯ ಮುಳಬಾಗಿಲು ಸಮೀಪದ ಸೋಮೇಶ್ವರ ಪಾಳ್ಯದಲ್ಲಿ ಸರಕಾರಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡಿ ದೊಡ್ಡ ವಿವಾದ ಹುಟ್ಟು ಹಾಕಿದ್ದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಘಟನೆಯ ಕುರಿತು ತನಿಖೆ ಮಾಡಿ ನಮಾಜ್ ಮಾಡಲು ಅನುಮತಿ ನೀಡಿದ ಶಾಲೆಯ ಹೆಡ್ ಮಾಸ್ಟರ್ ಅಮಾನತಾಗಿದ್ದಾರೆ. ಸಮಾಜದ ಸಾಮರಸ್ಯ ಕೆದಕುವ ಅನಗತ್ಯ ವಿವಾದ ಹುಟ್ಟು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಸಾಮಾಜಿಕ ತಾಣಗಳ ದುರ್ಬಳಕೆ ಮಾಡಿಕೊಂಡು ಈ ವಿವಾದಾತ್ಮಕ ವಿಚಾರಗಳಿಗೆ ದೇಶವ್ಯಾಪಿ ಪ್ರಚಾರ ಬರುವಂತೆ ಮಾಡುವ ಶಕ್ತಿಗಳ ಗುರಿಯು ಬಿಜೆಪಿ ಸರಕಾರಕ್ಕೆ ಮಸಿ ಬಳಿಯುವ ದುರುದ್ದೇಶ ಮಾತ್ರ. ಹೊರತಾಗಿ ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತವಲ್ಲ. ಶಾಲೆಗಳು ವಿದ್ಯೆ ಕಲಿಯುವ ತಾಣ. ಅಲ್ಲಿ ಎಲ್ಲರೂ ಸಮಾನರು ಮತ್ತು ಪ್ರತಿಯೊಬ್ಬರೂ ಶಾಲೆಯ ಶಿಸ್ತು ಮತ್ತು ನಿಯಮವನ್ನು ಕಾಪಾಡಬೇಕು. ಶೈಕ್ಷಣಿಕ ವಾತಾವರಣದಲ್ಲಿ ಪ್ರತಿ ಧರ್ಮೀಯರೂ ತಮ್ಮ ಧಾರ್ಮಿಕ ಚಟುವಟಿಕೆ ನಡೆಸಲು ಆರಂಭಿಸಿದರೆ ಶಾಲೆಯ ವಾತಾವರಣ ಕಲುಷಿತಗೊಂಡು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದು ನಿಶ್ಚಿತ.
ನೆರೆಯ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿ ಲಾವಣ್ಯಾ, ಹಾಸ್ಟೆಲ್ ವಾರ್ಡನ್ ಕ್ರೈಸ್ತ ಮತಕ್ಕೆ ಮತಾಂತರವಾಗಲು ಒತ್ತಾಯಿಸಿ ನಿರಂತರ ನೀಡುತ್ತಿದ್ದ ಕಿರುಕುಳ, ಹಿಂಸೆ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಲ್ಲಿನ ಚರ್ಚ್ ಗಳನ್ನು ಎದುರು ಹಾಕಿಕೊಳ್ಳಲು ಸಿದ್ಧವಿಲ್ಲದ ರಾಜ್ಯ ಸರಕಾರ, ಪ್ರಕರಣವನ್ನು ಮುಚ್ಚಿಹಾಕಿ ಮತಾಂತರಕ್ಕೆ ಯಾವ ಬಲವಂತವೂ ನಡೆದಿಲ್ಲ ಎಂಬ ಅಭಿಪ್ರಾಯ ಮೂಡಿಸಲು ಕಸರತ್ತು ನಡೆಸುತ್ತಿದೆ.
ಕೇವಲ ಬಿಜೆಪಿ ಲಾವಣ್ಯಾ ಸಾವಿಗೆ ನ್ಯಾಯ ದೊರಕಿಸಲು ಹೋರಾಡುತ್ತಿದೆ. ದುರ್ದೈವ ತಮಿಳುನಾಡಿನ ಯಾವ ರಾಜಕೀಯ ಪಕ್ಷಗಳಿಗೂ ಲಾವಣ್ಯಾ ಸಾವುಬೇಡದ ವಿಷಯವಾಗಿದೆ. ತಮಿಳುನಾಡು ಸರಕಾರ, ಬಲವಂತ ಮತಾಂತರ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿ ಆತ್ಮಹತ್ಯೆಗೂ ದೂಡುವ ನೀಚ ಪ್ರವೃತ್ತಿಯನ್ನು ಖಂಡಿಸುವ ಎದೆಗಾರಿಕೆಯು ಇಲ್ಲದೆ ತಪ್ಪಿತಸ್ಥರನ್ನು ಕಾಪಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.
ಉಡುಪಿ ಶಾಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಯರ ಬೆಂಬಲಕ್ಕೆ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಬಂದು ಆ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸುತ್ತಿದೆ. ಆದರೆ, ತಮಿಳುನಾಡು ಎನ್ ಎಸ್‌ಯುಐ ಘಟಕ ಲಾವಣ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ದಿವ್ಯ ಮೌನವನ್ನು ಕಾಪಾಡಿಕೊಂಡಿದೆ. ಶಾಲಾ ಕಾಲೇಜುಗಳು ಧರ್ಮ ಪ್ರಸಾರ ಕೇಂದ್ರಗಳಲ್ಲ. ಅವು ವಿದ್ಯೆ ಕಲಿಸಿ ಜವಾಬ್ದಾರಿ ಯುತ ನಾಗರಿಕರನ್ನು ತಯಾರು ಮಾಡುವ ಕೇಂದ್ರ ಗಳು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ವೈಯಕ್ತಿಕ ಅಜೆಂಡಾ ಜಾರಿಗೆ ಈ ಅಮಾಯಕ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಅವರ ಭವಿಷ್ಯಕ್ಕೆ ಕುತ್ತು ತರುತ್ತಿದ್ದಾರೆ.
ದೌರ್ಭಾಗ್ಯವೆಂದರೆ ಹಿಜಾಬ್ ಧರಿಸಿಯೇ ನಾವು ತರಗತಿಗೆ ಬರುವುದು ಎಂದು ಹಠಮಾರಿ ಧೋರಣೆ ತೋರುತ್ತಿರುವ ವಿದ್ಯಾರ್ಥಿನಿಯರಿಗೆ ಶಾಲೆಯ ನಿಯಮ ವನ್ನು ಪಾಲಿಸಿ ವಿದ್ಯೆ ಗಳಿಸುವುದು ಮುಖ್ಯ ಎಂಬ ವಿವೇಕಯುತ ಸಲಹೆ ಸಮುದಾಯದ ಹಿರಿಯರು ಹೇಳಲು ತಯಾರಿಲ್ಲ. ಶಾಲೆಯ ಉಳಿದ 94 ವಿದ್ಯಾರ್ಥಿನಿ ಯರಿಗೆ ಇಲ್ಲದ ಸಮಸ್ಯೆಯು ಈ 6 ವಿದ್ಯಾರ್ಥಿನಿಯರಿಗೆ ಮಾತ್ರ ಶೈಕ್ಷಣಿಕ ವರ್ಷ ಮುಗಿಯುವ ವೇಳೆ ಸಮೀಪವಾಗಿರುವಾಗ ಬಂದಿರುವುದು ಇವರ ಉದ್ದೇಶ ಅನುಮಾನಾಸ್ಪದವಾಗಿದೆ.
ಕೋವಿಡ್ ಸಂಕಟದಿಂದ ಶೈಕ್ಷಣಿಕ ಕ್ಷೇತ್ರ ನಲುಗಿ ಹೋಗಿದೆ. ಶಾಲಾ ಕಾಲೇಜುಗಳು ಮುಚ್ಚಿ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನವಿಲ್ಲದೆ ತತ್ತರಿಸಿ ಹೋಗಿ ದ್ದಾರೆ. ಆನ್‌ಲೈನ್ ಕ್ಲಾಸ್‌ಗಳು ಮಕ್ಕಳನ್ನು ಮೊಬೈಲ್ ಸಂಸ್ಕೃತಿಯ ದಾಸರನ್ನಾಗಿ ಮಾಡುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಠ ಪ್ರವಚನಗಳಿಗೆ ಆದ್ಯತೆ ನೀಡಬೇಕು ಆದರೆ ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವುದೆ ಪ್ರಮುಖವಾಗಿದೆ. ವಾಸ್ತವವಾಗಿ ಶಾಲೆಗಳಲ್ಲಿ ಸಮವಸ ಕಡ್ಡಾಯ ಮಾಡುವುದರಿಂದ ಸಮಾನತೆ ಸಾಽಸಲು ಸಾಧ್ಯ. ಬಡವರ, ಬಲಿತರ ವಸಗಳು ಒಂದೇ ತೆರನಾಗಿ ಇರುವುದರಿಂದ ವಿದ್ಯಾರ್ಥಿಗಳಿಗೆ ಕೀಳರಿಮೆಇರುವು ದಿಲ್ಲ.ಸಮವಸ್ತ್ರಧರಿಸುವುದರಿಂದ ಅಭ ದ್ರತೆ ಇಲ್ಲವಾಗಿ ಗಮನ ಓದುವುದರ ಮೇಲೆ ಇರುತ್ತದೆ.
ಈಗಿನ ಮಕ್ಕಳು ಹೆಚ್ಚು ಬಟ್ಟೆಗಳನ್ನು ಖರೀದಿಸುವುದರಿಂದ ಯಾವುದನ್ನು ಧರಿಸಬೇಕು ಎಂಬುದಕ್ಕೆ ಸಮಯ ಹಾಳು ಮಾಡಿಕೊಳ್ಳುತ್ತಾರೆ. ಸಮವಸದಿಂದ ಆಯ್ಕೆಯ ಜಂಜಾಟವಿಲ್ಲದ ಕಾರಣ ಸಮಯವೂ ಉಳಿತಾಯವಾಗುತ್ತದೆ. ಸಮವಸಶಿಸ್ತು ಮೈಗೊಡಿಸುವುದು ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಶಾಲೆಯ ಮೇಲಿನ ಸಂಬಂಧ ಗಟ್ಟಿಗೊಳಿಸುತ್ತದೆ ಹಾಗೂ ನಮ್ಮ ಶಾಲೆ ಎಂಬ ಅನುಬಂಧ ಹೆಚ್ಚಾಗುತ್ತದೆ. ದಿನನಿತ್ಯ ಶಾಲೆಗೆ ಸಮವಸ್ತ್ರಧರಿಸುವುದರಿಂದ ದುಬಾರಿಉಡುಪು ಖರೀದಿಸುವ ಚಪಲಕ್ಕೆ ಕಡಿವಾಣ ಬಿದ್ದು, ಹಣದ ಉಳಿತಾಯವಾಗುತ್ತದೆ. ಹೀಗೆ ಸಮವಸ್ತ್ರಧರಿಸುವುದರಿಂದ ಹಲವಾರು ಸಕಾರಾತ್ಮಕಪ್ರಯೋಜನಗಳು ಇರುವುದು.
ಶಾಲಾ ಆಡಳಿತ ಮಂಡಳಿಯು ಸ್ಪಷ್ಟವಾಗಿಸಮವಸ್ತ್ರವಿಲ್ಲದೆ ತರಗತಿಗೆ ಪ್ರವೇಶವಿಲ್ಲ ಎಂದು ತಿಳಿಸಿದೆ. ಈ ವಿಚಾರದಲ್ಲಿ ಧರ್ಮದ ಆಧಾರದ ಮೇಲೆ ರಾಜಿ ಮಾಡಿಕೊಂಡರೆ ನಾಳೆ ಪ್ರಾರ್ಥನೆ ಮಾಡಲು ಸಮಯ ನೀಡಬೇಕು ಎಂಬ ಬೇಡಿಕೆ ಬರುವುದಿಲ್ಲ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈಗ ಉಳಿದಿರುವ ದಾರಿಯು ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡಿ ಶಾಲೆಯ ವಾತಾವರಣವನ್ನು ತಿಳಿಗೊಳಿಸಿ ಮಕ್ಕಳ ಭವಿಷ್ಯವನ್ನುಕಾಪಾಡಬೇಕಾಗಿದೆ.