ಬಂದೂಕು ಕೈಗೆತ್ತಿಕೊಂಡ ಮೇಸ್ಟ್ರು !
ಶಶಾಂಕಣ
ಶಶಿಧರ ಹಾಲಾಡಿ
.@.
ಕೆಲವು ಹೋರಾಟಗಳೇ ಹಾಗೆ, ಹೆಚ್ಚು ಪ್ರಚಾರವೇ ದೊರಕುವುದಿಲ್ಲ. ಇನ್ನು ಕೆಲವು ಹೋರಾಟಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ದೊರಕುತ್ತದೆ! ಈ ಅಧ್ಯಾಪಕರು ಮಾಡಿದ ಹೋರಾಟವು ಮೊದಲನೆಯದಕ್ಕೆ ಒಂದು ಉದಾಹರಣೆ.
ನಿಜ, ಯುವಕರ ಪಡೆ ಕಟ್ಟಿಕೊಂಡು, ಬಂದೂಕನ್ನು ಕೈಗೆತ್ತಿಕೊಂಡು ಸರಕಾರದ ವಿರುದ್ಧಸಶಸಹೋರಾಟವನ್ನು ಈ ಅಧ್ಯಾಪಕರು ಕೈಗೊಂಡಿದ್ದರು! ಸುಮಾರು ಎಂಬತ್ತರಿಂದ ನೂರು ಭದ್ರತಾ ಸಿಬ್ಬಂದಿಯನ್ನು ಸಹ ಇವರ ತಂಡ ಮುಗಿಸಿತ್ತು. ಪ್ರಭುತ್ವದ ವಿರುದ್ಧ ಇವರು ಸಾರಿದ ಹೋರಾಟಕ್ಕೆ ಆಗಿನ ಕಾಲಮಾನಕ್ಕೆ ಹೋಲಿಸಿದರೆ, ಅಭೂತಪೂರ್ವ ಯಶಸ್ಸು ದೊರಕಿತ್ತು. ಆದರೆ, ಬೇರೆ ಬೇರೆ ವಲಯಗಳಿಂದ ಸೂಕ್ತ ಬೆಂಬಲ ದೊರಕದೇ ಇದ್ದುದರಿಂದ ಮತ್ತು ಅವರ ಸ್ನೇಹಿತರೇಕೈಕೊಟ್ಟದ್ದರಿಂದ, ಈ ಮೇಸ್ಟ್ರಿಗೆ ಕೊನೆಗೆ ದೊರೆತದ್ದು ಗಲ್ಲುಶಿಕ್ಷೆ!
ಇವರ ಹೆಸರು ಸೂರ್ಯ ಸೇನ್. ಗಣಿತ ಅಧ್ಯಾಪಕರು. ಬ್ರಿಟಿಷ್ ಸರಕಾರ ನೀಡುತ್ತಿದ್ದ ಸಂಬಳವನ್ನು ನೆಚ್ಚಿ ಕೊಂಡು, ನೆಮ್ಮದಿಯಾಗಿ ಸಂಸಾರ ನಡೆಸಿಕೊಂಡು ಹೋಗಬಹುದಿತ್ತು. ಅವರ ತಂದೆ ರಾಮನಿರಂಜನ ಸೇನ್ ಸಹ ಅಧ್ಯಾಪಕರು. ಬಂಗಾಳದ ಬೆಹರಾಂಪುರ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಓದುವ ಸಮಯ. ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸರಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು, ದೇಶವನ್ನು ದಾಸ್ಯದಿಂದ ಬಿಡಿಸಬೇಕು ಎಂದು ಇವರೂ ಕಂಕಣ ತೊಟ್ಟರು. ಆ ಕಾಲದಲ್ಲಿ ಬಂಗಾಳದಲ್ಲಿ ಅನುಶೀಲನ ಸಮಿತಿ ಎಂಬ ಸಮಿತಿಯು ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆ ನಡೆಸುತ್ತಿತ್ತು. ಅರವಿಂದರು ಸಹ ತಮ್ಮ ಪೂರ್ವಾಶ್ರಮದಲ್ಲಿ ಈ ಸಮಿತಿಯೊಂದಿಗೆ ತೊಡಗಿಕೊಂಡು, ಬ್ರಿಟಿಷರ ವಿರುದ್ಧಸಶಸಹೋರಾಟವನ್ನು ಜಾರಿಯಲ್ಲಿಟ್ಟಿದ್ದರು. ಅವರ ಹಲವು ಶಿಷ್ಯರು ಬ್ರಿಟಿಷ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದರು.
ಇವೆಲ್ಲವೂ ಸೂರ್ಯ ಸೇನ್ ಅವರ ಗಮನಕ್ಕೆ ಬರುತ್ತಲೇ ಇತ್ತು. ಕಾಲೇಜು ಶಿಕ್ಷಣ ಮುಗಿಸಿ, ಚಿತ್ತಗಾಂಗ್‌ನ ನಂದಕಾನನದಲ್ಲಿದ್ದ ನ್ಯಾಷನಲ್ ಶಾಲೆಯಲ್ಲಿ ಗಣಿತದ ಅಧ್ಯಾಪಕರಾದರು. ಕೆಲಕಾಲ ಚಿತ್ತಗಾಂಗ್ ನ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ್ದರಿಂದಾಗಿ೧೯೨೬ರಿಂದ೧೯೨೮ರ ತನಕ ಜೈಲು ವಾಸ ಅನುಭವಿಸಬೇಕಾಯಿತು. ಬಂಗಾಳದಲ್ಲಿ ಅಸಹಕಾರ ಚಳಚಳಿಯಲ್ಲಿ ತೊಡಗಿಕೊಂಡಿದ್ದ ಚಿತ್ತರಂಜನ್ ದಾಸ್ ಜತೆಯೂ ಸೂರ್ಯ ಸೇನ್ ಸಂಪರ್ಕವಿತ್ತು. ಇತ್ತ ಅನುಶೀಲನ ಸಮಿತಿಯ ಸದಸ್ಯರೊಂದಿಗೆ ಸಾಕಷ್ಟು ಒಡನಾಟವೂ ಇತ್ತು.
ಬ್ರಿಟಿಷರ ವಿರುದ್ಧ ಹೋರಾಟವನ್ನು ಕಾಂಗ್ರೆಸ್ ನವರು ದಶಕಗಳಿಂದ ಚಾಲ್ತಿಯಲ್ಲಿಟ್ಟ ವಿಚಾರ ಇವರ ಗಮನ ಸೆಳೆದಿತ್ತು. ಆದರೆ, ಕಾಂಗ್ರೆಸ್ ಪಕ್ಷವು೧೯೨೯ರತನಕವೂ ಡೊಮಿನಿಯನ್ ಸ್ಥಾನ (ಅಧೀನ ದೇಶ) ವನ್ನು ಮಾತ್ರ ಕೇಳಿದ್ದರೇ ಹೊರತು, ಸಂಪೂರ್ಣ ಸ್ವಾತಂತ್ರ್ಯವನ್ನು ಒತ್ತಾಯಿಸಿರಲಿಲ್ಲ. ಆದರೆ ಸೂರ್ಯ ಸೇನ್ ಸಂಪರ್ಕ ಹೊಂದಿದ್ದ ಅನುಶೀಲನ ಸಮಿತಿಯ ಸದಸ್ಯರು ಅದಕ್ಕೂ ಒಂದೆರಡು ದಶಕಗಳ ಹಿಂದೆಯೇ ದೇಶವನ್ನು ದಾಸ್ಯಮುಕ್ತಗೊಳಿಸಲೆಂದುಸಶಸಹೋರಾಟ ವನ್ನು ಆರಂಭಿಸಿದ್ದರು. ಶಾಂತಿ ಯುತ ಹೋರಾಟವನ್ನು ಮಾಡುತ್ತಾ, ಧರಣಿ ಕೂರುವುದು ಮತ್ತು ಅಸಹಕಾರವನ್ನು ತೋರುತ್ತಾ ಹೋರಾಟವನ್ನು ಮುಂದು ವರಿಸಿದರೆ ಬ್ರಿಟಿಷರು ಎಂದಿಗೂ ಭಾರತವನ್ನು ತೊರೆಯಲಾರರು ಎಂಬ ಚಿಂತನೆಗೆ ಸೂರ್ಯ ಸೇನ್ ಒಲಿದರು. ಬ್ರಿಟಿಷರ ವಿರುದ್ಧ ತಾವೂ ಕಾರ್ಯಾಚರಣೆ ನಡೆಸಬೇಕು ಎಂದು ನಿರ್ಧರಿಸಿದರು.
ಸೂರ್ಯ ಸೇನ್ ಅವರು ಚಿತ್ತಗಾಂಗ್‌ನಲ್ಲಿದ್ದ ಬ್ರಿಟಿಷರಶಸಾಸಸಂಗ್ರಹಾಲಯ ಅಥವಾ ಕೋಠಿಯನ್ನು ಲೂಟಿ ಮಾಡಲು ಯೋಜನೆ ತಯಾರಿಸಿದರು. ಗಣೇಶ್ ಘೋಷ್, ಲೋಕೆನಾತ್, ಅನಂತ ಸಿಂಗ್ ಮೊದಲಾದವರನ್ನು ಹುರಿದುಂಬಿಸಿ ತಂಡ ಕಟ್ಟಿದರು. ಬ್ರಿಟಿಷರು ಸಂಗ್ರಹಿಸಿದ್ದ ಬಂದೂಕುಗಳನ್ನು ವಶಪಡಿಸಿಕೊಂಡು, ಅದನ್ನು ಕ್ರಾಂತಿಕಾರಿಗಳಿಗೆ ಹಂಚಿ, ಹೋರಾಟದ ಮೂಲಕ ಬ್ರಿಟಿಷರನ್ನು ಓಡಿಸುವುದು ಸೂರ್ಯ ಸೇನ್‌ರ ಯೋಜನೆ. ೧೮ ಎಪ್ರಿಲ್ ೧೯೩೦ರಂದು ಸೂರ್ಯ ಸೇನ್ ಅವರ ನೇತೃತ್ವದಲ್ಲಿ ಚಿತ್ತಗಾಂಗ್ ಪಟ್ಟಣದ ಮೇಲೆ ಇವರ ತಂಡ ದಾಳಿ ನಡೆಸಿತು.
‘ಇಂಡಿಯನ್ ರಿಪಬ್ಲಿಕನ್ ಆರ್ಮಿ’ ಎಂಬ ಹೆಸರಿನಲ್ಲಿ ಸುಮಾರು೬೫ಜನ ಸದಸ್ಯರು ಈ ದಾಳಿಯಲ್ಲಿ ಭಾಗವಹಿಸಿದ್ದರು. ಇವರ ಸದಸ್ಯರು ಆರು ತಂಡಗಳನ್ನು ರಚಿಸಿಕೊಂಡು ಸಾಕಷ್ಟು ವ್ಯವಸ್ಥಿತವಾಗಿ ಬ್ರಿಟಿಷ್ ಅಧಿಕಾರಿ ಶಾಹಿ ವಿರುದ್ಧ ಹೋರಾಟವನ್ನು ಕೈಗೊಂಡರು. ಅಲ್ಲಿನ ತಂತಿ ಮಾರ್ಗಗಳನ್ನು ಧ್ವಂಸ ಗೊಳಿಸಿ, ಇತರಸಂಪರ್ಕ ಸಾಧನಗಳನ್ನು ಸ್ಥಗಿತಗೊಳಿಸಿದರು. ಬಂಗಾಳಕ್ಕೆ ಸಂಪರ್ಕ ನೀಡುತ್ತಿದ್ದ ರೈಲು ಸಂಪರ್ಕವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಚಿತ್ತಗಾಂಗ್‌ನಲ್ಲಿಯುರೋಪಿಯನ್ ಜನರಿಗೆ ಮಾತ್ರ ಮೀಸಲಾಗಿದ್ದ ಯುರೋಪಿಯನ್ ಕ್ಲಬ್ ಕಟ್ಟಡವನ್ನು ವಶಪಡಿಸಿಕೊಂಡರು.
ಆ ದಿನ ಗುಡ್ -ಡೆಯಾದ್ದರಿಂದ ಹೆಚ್ಚು ಮಂದಿ ಕ್ಲಬ್‌ನಲ್ಲಿ ಇರಲಿಲ್ಲ. ಎಪ್ರಿಲ್ ೧೮ರ ರಾತ್ರಿ ಇವರ ಒಂದು ತಂಡವನ್ನು ಗಣೇಶ್ ಘೋಷ್ ಮುನ್ನಡೆಸಿದ್ದು, ಅದು ಪೊಲೀಸ್ ಕೋಠಿಯ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿತು. ಈ ತಂಡದ ಹೋರಾಟದಲ್ಲಿ ಇದೊಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಏಕೆಂದರೆ, ಅಂದು ಇವರು ನಮ್ಮ ದೇಶದ ಧ್ವಜವನ್ನು ಹಾರಿಸಿ, ಹಂಗಾಮಿ ಭಾರತ ಸರಕಾರವನ್ನು ಸಹ ಘೋಷಿಸಿದರು ಮತ್ತು ಸೂರ್ಯ ಸೇನ್ ಗೌರವ ಧ್ವಜವಂದನೆ ಸ್ವೀಕರಿಸಿದರು. ಅಂದು ಅವರು ಧರಿಸಿದ್ದ ದಿರಿಸೆಂದರೆ ಖಾದಿವಸ,ಗಾಂಧಿ ಟೋಪಿ!
ಇದೇ ಸಮಯದಲ್ಲಿ ಲೋಕೆನಾಥ್ ಎಂಬಾತನ ನೇತೃತ್ವದಲ್ಲಿ ಹತ್ತು ಜನರ ತಂಡವು, ಚಿತ್ತಗಾಂಗ್‌ನಶಸಾಸಕೋಠಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಯಿತು. ಅಲ್ಲಿದ್ದ೩೦೩ಆರ್ಮಿ ರೈಫಲ್ ಮತ್ತು ಲೀವಿಸ್ ಗನ್‌ಗಳನ್ನು ಸಂಗ್ರಹಿಸಿದ ಈ ತಂಡವು, ಕತ್ತಲೆಯಲ್ಲಿ ಪರಾರಿಯಾಯಿತು. ಆದರೆ, ಆಶಸಗಳನ್ನು ಬಳಸಿ ಬ್ರಿಟಿಷ್ ಅಧಿಕಾರಿಗಳ ಮೇಲೆ ಗುಂಡು ಹಾರಿಸುವಲ್ಲಿ ಇವರಿಗೊಂದು ಪ್ರಾಥಮಿಕ ತೊಡಕು ಎದುರಾಯಿತು. ಏಕೆಂದರೆ, ಆ ರೈಫಲ್‌ಗಳಿಗೆ ಸರಿಹೊಂದುವ ಮದ್ದು ಗುಂಡುಗಳು ಇವರ ಕೈಗೆ ಸಿಗಲೇ ಇಲ್ಲ!
ಸಾಕಷ್ಟು ಗುಂಡುಗಳ ಸಂಗ್ರಹವಿಲ್ಲದೇ, ಬ್ರಿಟಿಷರನ್ನು ನೇರಾನೇರ ಎದುರಿಸುವುದು ಕಷ್ಟ ಎಂದು ಅರಿತ ಸೂರ್ಯ ಸೇನ್, ಕೆಲವು ದಿನ ಕಾದು ನೋಡುವ ತಂತ್ರಅನುಸರಿಸಿದರು. ಚಿತ್ತಗಾಂಗ್ ಪಟ್ಟಣವನ್ನು ತೊರೆದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತ್ತು ಜಲಾಲಾಬಾದ್ ಬೆಟ್ಟಗಳ ಪ್ರದೇಶಕ್ಕೆ ಇವರ ತಂಡ ಸಾಗಿ, ಅಲ್ಲಿ ಅಡಗಿಕೊಂಡಿತು. ಆದರೆ ಇಷ್ಟು ಹೊತ್ತಿಗೆ ಬ್ರಿಟಿಷ್ ಆಡಳಿತಶಾಹಿ ಎಚ್ಚರಗೊಂಡಿತ್ತು. ಬೇರೆ ಬೇರೆ ಕಡೆಗಳಿಂದ ಪೊಲೀಸ್ ಮತ್ತು ಸೇನಾ ಸಿಬ್ಬಂದಿಗಳನ್ನು ಚಿತ್ತಗಾಂಗ್ ಗೆ ಕರೆಸಿಕೊಂಡಿತು. ಸಾವಿರಕ್ಕೂ ಮಿಕ್ಕ ರಕ್ಷಣಾ ಪಡೆಯು ಕೂಂಬಿಂಗ್ ನಡೆಸುತ್ತಾ, ಸೂರ್ಯಸೇನ್ ಅವರ ಸಂಗಾತಿಗಳನ್ನು ೨೨ ಎಪ್ರಿಲ್ ೧೯೩೦ ರಂದು ಸುತ್ತುವರಿದರು.
ಆದರೆ, ಈ ತಂಡ ಸುಮ್ಮನೆ ಶರಣಾಗುವ ಹೇಡಿಗಳ ತಂಡ ಆಗಿರಲಿಲ್ಲ. ಜೀವದ ಆಸೆ ಬಿಟ್ಟು ಹೋರಾಡಿದರು. ಪ್ರತಿಫಲವೆಂದರೆ, ೧೨ ಜನ ಕ್ರಾಂತಿಕಾರಿಗಳ ಮರಣ! ಆದರೆ, ಅದೇ ವೇಳೆ ಬ್ರಿಟಿಷ್ ಪಡೆಯ ೮೦ ಜನ ರಕ್ಷಣಾ ಸಿಬ್ಬಂದಿಯನ್ನು ಸಾಯಿಸಿದ್ದರು. ಇನ್ನೂ ವಿಶೇಷವೆಂದರೆ, ಈ ಪ್ರತಿಭಟನೆಯ ನಾಯಕತ್ವ ವಹಿಸಿದ್ದ ಸೂರ್ಯ ಸೇನ್ ಮತ್ತು ಇತರ ಕೆಲವು ಸದಸ್ಯರು ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದರು.
ಸುತ್ತ ಮುತ್ತಲಿನ ಹಳ್ಳಿಗಳಲ್ಲಿ, ಪರಿಚಿತರ ಮತ್ತು ಅಪರಿಚಿತರ ಮನೆಯಲ್ಲಿ ಅಡಗಿಕೊಂಡಿದ್ದು, ಬ್ರಿಟಿಷ್ ಪಡೆಯ ಮೇಲೆ ತಮ್ಮ ದಾಳಿಯನ್ನು ಮುಂದುವರಿಸಿದರು. ಅವರು ಅನುಸರಿಸಿದ್ದು ಗೆರಿಲ್ಲಾ ತಂತ್ರವನ್ನು. ಅವರ ಈ ಹೋರಾಟಕ್ಕೆ ಆ ಸುತ್ತಮುತ್ತಲಿನ ಹಳ್ಳಿಯ ಜನರ ಸಹಕಾರ ದೊರಕಿತು. ಮಾತ್ರವಲ್ಲ, ಇವರ ಇಂಡಿಯನ್ ರಿಪಬ್ಲಿಕ್ ಆರ್ಮಿಯನ್ನು ಸೇರಲು ಹಲವು ಯುವಕರು ಮಂದೆಬಂದರು. ೨೪ ಸೆಪ್ಟೆಂಬರ್ ೧೯೩೨ರಂದು ಪಹಾರ್ತಲಿ ಯುರೋಪಿಯನ್ ಕ್ಲಬ್‌ಮೇಲೆ ದಾಳಿ ನಡೆಸಿ, ಹಲವು ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿ ದರು. ಗುಂಡಿನ ಚಕಮಕಿಯ ವೇಳೆ ಒಬ್ಬ ಮಹಿಳೆ ಮೃತಪಟ್ಟಳು. ಗಾಯಗೊಂಡ ಒಬ್ಬ ಸದಸ್ಯನು ಪೊಲೀಸರ ಕೈಗೆ ಸಿಕ್ಕಬಾರದೆಂದು ಸಯನೈಡ್ ಸೇವಿಸಿದನು. ಈ ಅವಧಿಯಲ್ಲಿ ಒಟ್ಟು ೨೨ ಬ್ರಿಟಿಷ್ ಅಧಿಕಾರಿಗಳನ್ನು ಇವರು ಸಾಯಿಸಿದ್ದರು.ಆದರೆ, ಬ್ರಿಟಿಷರು ತಮ್ಮ ಜಾಲವನ್ನು ಬಿಗಿಗೊಳಿಸಿದರು, ಕೂಂಬಿಂಗ್ ಚುರುಕಾಯಿತು, ಇಡೀ ಅಧಿಕಾರಶಾಹಿಯು ಸೂರ್ಯ ಸೇನ್ ಮತ್ತು ಅವನ ತಂಡವನ್ನು ಹಿಡಿಯುವಲ್ಲಿ ತೊಡಗಿಕೊಂಡರು. ಹಲವು ಸದಸ್ಯರನ್ನು ಕಳೆದುಕೊಂಡಿದ್ದ ಸೂರ್ಯ ಸೇನ್ ತಂಡಕ್ಕೆ ಕ್ರಮೇಣ ಹಿನ್ನಡೆ ಯಾಯಿತು. ಆದರೂ ಸೂರ್ಯ ಸೇನ್ ಸೆರೆಯಾಗಿರಲಿಲ್ಲ, ಅವರ ಜತೆಗಾರರಲ್ಲಿ ಹಲವರು ಸಿಕ್ಕಿಬಿದ್ದಿದ್ದರು.
ಬ್ರಿಟಿಷ್ ನ್ಯಾಯಾಲಯವು ವಿಚಾರಣೆ ನಡೆಸಿ, ೧.೩.೧೯೩೨ ರಂದು ತೀರ್ಪು ನೀಡಿತು. ೧೨ ಜನ ಕ್ರಾಂತಿಕಾರಿಗಳಿಗೆ ಕರಿನೀರಿನ ಶಿಕ್ಷೆಯಾಗಿತ್ತು. ಕಲ್ಪನಾ ದತ್ ಎಂಬ ಮಹಿಳೆಯೂ ಜೀವಾವಽ ಶಿಕ್ಷೆಗೆ ಗುರಿಯಾಗಿದ್ದಳು. ಇತರ ಇಬ್ಬರಿಗೆ ಮೂರು ವರ್ಷದ ಶಿಕ್ಷೆಯಾಯಿತು. ಗಣೇಶ್ ಘೋಷ್, ಲೋಕೆನಾತತ, ಆನಂದ ಗುಪ್ತ (೧೬ ವರ್ಷ), ಅನಂತ ಸಿಂಗ್ ಮೊದಲಾದವರನ್ನು ಅಂಡಮಾನ್ ಜೈಲಿಗೆ ಸಾಗಹಾಕಲಾಯಿತು.  ಇದೇ ಸಮಯದಲ್ಲಿ ಬ್ರಿಟಿಷರು ಒಂದು ಕರಪತ್ರಹೊರಡಿಸಿ, ಸೂರ್ಯ ಸೇನ್‌ನನ್ನು ಹಿಡಿದು ಕೊಟ್ಟವರಿಗೆ ೧೦,೦೦೦ ರೂಪಾಯಿಗಳ ಬಹುಮಾನ ಘೋಷಿಸಿದರು!
ಈಗ ಸೂರ್ಯಸೇನ್‌ನ ಜತೆಗಾರನೊಬ್ಬ ಮೋಸ ಮಾಡಿದ. ನೇತ್ರಸೇನ್ ಎಂಬಾತ ಬಹುಮಾನದ ಹಣದ ಆಸೆಗೋ, ಬೇರೇನೋ ಕಾರಣಕ್ಕೋ, ಸೂರ್ಯ ಸೇನ್ ಇದ್ದ ಜಾಗವನ್ನು ಬ್ರಿಟಿಷ್ ಪೊಲೀಸರಿಗೆ ತಿಳಿಸಿದ. ಬ್ರಿಟಿಷರು ಸೂರ್ಯ ಸೇನ್ ಅಡಗಿದ್ದ ಮನೆಯನ್ನು ಸುತ್ತುವರಿದು, ೧೬ ಫೆಬ್ರವರಿ ೧೯೩೩ರಂದು ಅವರನ್ನು ಬಂಽಸಿದರು. ಜತೆಗೆ ಇತರ ಸದಸ್ಯರೂ ಸಿಕ್ಕಿಬಿದ್ದರು. ಸೂರ್ಯ ಸೇನ್‌ಗೆ ದ್ರೋಹ ಬಗೆದ ನೇತ್ರ ಸೇನ್ ಬಹುಮಾನದ ಹಣವನ್ನು ಪಡೆಯುವ ಮುಂಚೆಯೇ, ಆತನನ್ನು ಇತರ ಕ್ರಾಂತಿಕಾರಿಗಳು ಮುಗಿಸಿದರು.
ನಮ್ಮ ಇತಿಹಾಸ ಓದುವಾಗ ರಾಜಕೀಯ ಕೈದಿಗಳು ಎಂಬ ಮಾತು ಹಲವು ಬಾರಿ ಬರುತ್ತದೆ. ಕೆಲವು ರಾಜಕೀಯ ಕೈದಿಗಳಿಗೆ ಜೈಲಿನಲ್ಲೇ ಪುಸ್ತಕ ಬರೆಯುವ, ಓದುವ, ತಮ್ಮ ಕುಟುಂಬವನ್ನು ಜತೆಯಲ್ಲಿಟ್ಟುಕೊಳ್ಳುವ ಅವಕಾಶವನ್ನು ಸಹ ಬ್ರಿಟಿಷ್ ಸರಕಾರ ಒದಗಿಸಿತ್ತು. ಆದರೆ ಸೂರ್ಯಸೇನ್‌ನ್ನು ತೀವ್ರ ಚಿತ್ರಹಿಂಸೆಗೆ ಗುರಿಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಅವರ ಉಗುರುಗಳನ್ನು ಸಹ ಕಿತ್ತುಹಾಕಲಾಗಿತ್ತು. ಅವರ ಕೈಕಾಲುಗಳ ಮೇಲೆ ಸುತ್ತಿಗೆಯಿಂದ ಹೊಡೆದದ್ದರಿಂದ, ಅವೆಲ್ಲಾ ಮುರಿದುಹೋಗಿದ್ದವು!
ಕೊನೆಗೆ ವಿಚಾರಣೆ ನಡೆದು, ೧೨ ಜನವರಿ ೧೯೩೪ರಂದು ಸೂರ್ಯ ಸೇನ್‌ರನ್ನು ಬ್ರಿಟಿಷರು ಗಲ್ಲಿಗೆ ಹಾಕಿದರು. ಇವರ ಜತೆಯಲ್ಲೇ ತಾರಕೇಶ್ವರ ದಸ್ತಿಧರ್ ಸಹ -ಶಿ ಶಿಕ್ಷೆಗೆ ಗುರಿಯಾದ. ಬ್ರಿಟಿಷ್ ಪಡೆಯ ಸುಮಾರು ೧೦೦ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ತಂಡವನ್ನು ಮುನ್ನಡೆಸಿದ ಸೂರ್ಯಸೇನ್ ತಂಡದ ಸಾಹಸವು ಬ್ರಿಟಿಷರನ್ನು ಬೆಚ್ಚಿ ಬೀಳಿಸಿತ್ತು!
ಇಲ್ಲಿ ಒಂದು ವಿಚಾರವನ್ನು ಗಮನಿಸಬಹುದು. ಸೂರ್ಯ ಸೇನ್ ತಂಡವು ಹೋರಾಟ ನಡೆಸುತ್ತಿದ್ದ ಸರಿಸುಮಾರು ಸಮಯದಲ್ಲೇ, ಅಂದರೆ ೧೨.೩.೧೯೩೦ರಿಂದ ೬.೪.೧೯೩೦ರ ತನಕ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಬಹಳ ಪ್ರಚಾರ ಪಡೆದ ಉಪ್ಪಿನ ಸತ್ಯಾಗ್ರಹ ನಡೆದಿತ್ತು. ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಹಿಂದೆಗೆದುಕೊಂಡ ಎರಡು ವಾರಗಳ ನಂತರ ಚಿತ್ತಗಾಂಗ್‌ನಲ್ಲಿ ಸೂರ್ಯ ಸೇನ್ ದಾಳಿ ನಡೆಸಿದ್ದರು. ಬ್ರಿಟಿಷರ ವಿರುದ್ಧ ಸಶಸ ಹೋರಾಟ ಮಾಡಬಾರದು ಎಂಬುದನ್ನು ಎಂದಿನಿಂದಲೂ ಗಾಂಧೀಜಿಯವರು ಪ್ರತಿಪಾದಿಸುತ್ತಲೇ ಇದ್ದರು.
ಆದ್ದರಿಂದ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ೬೦,೦೦೦ ಜನರ ಬಂಧನವಾದರೂ, ಅಧಿಕಾರಶಾಹಿಗೆ ಹೆಚ್ಚಿನ ಹಾನಿಯಾಗಲಿಲ್ಲ. ಆದರೆ, ಬ್ರಿಟಿಷರನ್ನು ಒದ್ದುಓಡಿಸಬೇಕೆಂದು ಅವರ ವಿರುದ್ಧವೇಸಶಸಹೋರಾಟ ನಡೆಸಿದವರನ್ನು ಬ್ರಿಟಿಷರು ಬಿಡಲಿಲ್ಲ. ಸೂರ್ಯಸೇನ್ ಹುತಾತ್ಮನಾದರೇ ಹೊರತು, ರಾಜಕೀಯ ಕೈದಿಯ ಸ್ಥಾನ ಪಡೆದು, ಬದುಕುಳಿಯಲಿಲ್ಲ, ಆ ರೀತಿಯ ಪ್ರಯತ್ನವನ್ನೂ ಮಾಡಲಿಲ್ಲ.
ಚಿತ್ತಗಾಂಗ್‌ನ ಈ ಹೋರಾಟ ಬ್ರಿಟಿಷರ ನಿದ್ದೆಗೆಡಿಸಿತ್ತು, ಇಂತಹ ಹೋರಾಟಗಳು ಇನ್ನಷ್ಟು ನಡೆದರೆ ತಮಗೆ ಕಷ್ಟವಾದೀತೆಂದು ಅವರು ಸ್ಪಷ್ಟವಾಗಿ ಕಂಡುಕೊಂಡಿದ್ದರು. ಆದ್ದರಿಂದಲೇ ಇರಬಹುದು, ಈ ರೀತಿಯ ಹೋರಾಟಗಳಿಗೆ ಅಂದು ಹೆಚ್ಚು ಪ್ರಚಾರ ದೊರಕಲಿಲ್ಲ, ಬದಲಿಗೆ ಅಹಿಂಸಾತ್ಮಕ ಹೋರಾಟಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ದೊರಕಿತ್ತು. ಸೂರ್ಯ ಸೇನ್ ಹೋರಾಟ ನಡೆಸಿದ ಚಿತ್ತಗಾಂಗ್ ಮತ್ತು ಆ ಸುತ್ತಲಿನ ಪ್ರದೇಶಗಳು ಇಂದು ಬಾಂಗ್ಲಾದೇಶಕ್ಕೆಸೇರಿಹೋಗಿವೆ. ಬಾಂಗ್ಲಾ ದೇಶದ ವಿಶ್ವವಿದ್ಯಾನಿಲಯದ ಕೆಲವು ಹಾಲ್‌ಗಳಿಗೆ ಸೂರ್ಯಸೇನ್ ಹೆಸರಿಡಗಾಗಿದೆ. ಆತನನ್ನು ಗಲ್ಲಿಗೆ ಹಾಕಿದ ಸ್ಥಳವನ್ನು ಸ್ಮಾರಕವನ್ನಾಗಿ ರೂಪಿಸಲಾಗಿದೆ.
ನಮ್ಮ ದೇಶದ ಅಂಚೆ ಇಲಾಖೆಯು, ಜನತಾ ಪಕ್ಷ ಅಧಿಕಾರದಲ್ಲಿದ್ದಾಗ, ೧೯೭೮ರಲ್ಲಿ ಇವರ ಗೌರವಾರ್ಥ ಒಂದು ಅಂಚೆ ಚೀಟಿ ಹೊರತಂದಿದೆ. ಆದರೂ,ಸೂರ್ಯ ಸೇನ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಡೆದ ಚಿತ್ತಗಾಂಗ್ ಕೋಠಿಯ ಮೇಲಿನ ದಾಳಿಗೆ ಸಿಗಬೇಕಾದಷ್ಟು ಪ್ರಾಶಸ್ತ್ಯ ಸಿಗಲಿಲ್ಲವೆಂದೇ ಹೇಳಬಹುದು.