ಬುರ್ಖಾ ತೆಗೆದರೆ ಭವಿಷ್ಯ ಉಜ್ವಲ
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
@.
ಎಂಬಿಎ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ ಮೂಡಿಸುವ ಸಲುವಾಗಿ ಅಮೆರಿಕದಿಂದ ಭಾರತಕ್ಕೆ ಹಿಂತಿರುಗಿದ್ದ ಹಿರಿಯ ಎಂಜಿನಿಯರ್ ರಾಘವ ಮೂರ್ತಿ ಮತ್ತು ನಾನು ಸೇರಿ ಒಂದು ಕೋರ್ಸ್ ನಿರೂಪಿಸಿದ್ದೆವು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅದನ್ನುಪರಿಚಯಿಸಲಾಗಿ, ವಿದ್ಯಾರ್ಥಿಗಳು ಅದರಿಂದ ಅನುಕೂಲವಾಯಿತೆಂದು ದಾಖಲಿಸಿದ್ದರು.
ಭಾಷಣ ಮತ್ತು ಮಾತುಗಾರಿಕೆಯ ಕುರಿತೂ ಅವರಿಗೆ ತಿಳಿವಳಿಕೆ ನೀಡುವಾಗ ಕೇಳುಗರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಅವಶ್ಯಕತೆಯನ್ನು ಮನದಟ್ಟು ಮಾಡಿಸಿದ್ದೆವು. ಆಂಗಿಕ ಭಾಷೆಯ ಪ್ರಾಮುಖ್ಯವನ್ನೂ ವಿವರಿಸಿ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂದೂ ವಿವರಿಸಿದ್ದೆವು. ನಮ್ಮಿಬ್ಬರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಲ್ಲಿ ಶಬ್ನಮ್ ಒಬ್ಬಳು. (ಮುಸ್ಲಿಂ ಮೂಲಭೂತವಾದಿಗಳು ಆಕೆಗೆ ಅಪಾಯ ಉಂಟುಮಾಡದಿರಲೆಂದು ಆಕೆಯ ಗುರುತನ್ನು ಬಹಿರಂಗಗೊಳಿಸದೇ ಹೆಸರನ್ನಷ್ಟೇ ಬದಲಾಯಿಸಿದ್ದೇನೆ, ಧರ್ಮವನ್ನಲ್ಲ.) ಆಕೆಗೂ ಮೂರ್ತಿ ಅವರ ಬಗ್ಗೆ ವಿಶೇಷ ಗೌರವ, ಅಭಿಮಾನ. ತರಗತಿಯ ನಂತರವೂ ರೆಸ್ಟುರಾದಲ್ಲಿ ಕುಳಿತು ಚಾ ಕುಡಿಯುತ್ತ ಹೆಚ್ಚಿನ ಅರಿವಿಗಾಗಿ ನಮ್ಮೊಂದಿಗೆ ಚರ್ಚಿಸುತ್ತಿದ್ದುಂಟು.
ಆ ಸಂದರ್ಭದಲ್ಲಿ ನಾವುಗಳು, ಕಣ್ಣಲ್ಲಿ ಕಣ್ಣಿಟ್ಟು ವ್ಯವಹರಿಸಲು ಸಾಧ್ಯವಾಗಿದ್ದು ಆಕೆ ಬುರ್ಖಾ/ಹಿಜಾಬ/ನಿಕಾಬ್ ಧರಿಸದಿದ್ದುರಿಂದ.ವಸ್ತ್ರಸಂಹಿತೆ ಬಗ್ಗೆ ತರಗತಿಗೆ ಸೂಚ್ಯವಾಗಿ ತಿಳಿಸಿದ್ದೇನಾದರೂ, ಅವರು ಯಾವ ಬಟ್ಟೆ ಧರಿಸಬೇಕೆಂದು ತಿಳಿಯಹೇಳುವುದು ನನ್ನ ಕಾರ್ಯವ್ಯಾಪ್ತಿಗೆ ಬಾರದ ವಿಷಯವಾಗಿತ್ತು. ಬಹಳಷ್ಟು ಬಿ-ಸ್ಕೂಲ್‌ಗಳಲ್ಲಿ ಸಮವಸ್ತ್ರಕಡ್ಡಾಯವಿದೆ. ಕಾಲೇಜಿನ ನಂತರ ನಾನು ಮದರಾಸಿನ ಕಂಪನಿಯೊಂದರಲ್ಲಿ ಸೇಲ್ಸ್  ಎಂಜಿನಿಯರ್ ಆಗಿ ಸೇರಿಕೊಂಡೆ. ನನ್ನ ಬಾಸ್ ವಿಜಯ ಕುಮಾರ್ ದಾಡಿ ಇಲ್ಲದಿದ್ದರೇ ನೀವು ಚೆನ್ನಾಗಿ ಕಾಣು ತ್ತೀರಿ, ಮಿಸ್ಟರ್ ರಾವ್ ಎಂದು ಸೂಚ್ಯವಾಗಿ ಹೇಳಿದರು.
ಅವರ ಇಂಗಿತವನ್ನು ಅರ್ಥಮಾಡಿಕೊಂಡು ಮರುಮಾತಿಲ್ಲದೆ ನಿತ್ಯ ಶೇವ್ ಮಾಡುವುದನ್ನು ಕಲಿತೆ. ನನ್ನ ರೆಬೆಲಿಯಸ್ ಸ್ವಭಾವ ಅಡ್ಡಬರಲಿಲ್ಲ. ಬ್ರಿಟನ್ನಿನ ಮಹಾರಾಣಿ ವಿಕ್ಟೊರಿಯಾ ಗತಿಸಿದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಆಕೆಯ ಜೀವನಾವಧಿಯನ್ನು ಸ್ಥೂಲವಾಗಿ ವಿಕ್ಟೊರಿಯಾ ಯುಗವೆಂದು ಕರೆಯಬಹುದಾದರೂ, ಆ ಕಾಲದ ಆಚಾರ- ವಿಚಾರಗಳಿಂದ ಹೊರಬರಲು ಆ ದೇಶ ದಶಕಗಳನ್ನೇ ತೆಗೆದುಕೊಂಡಿತು. ಕ್ರೀಡಾ ಜಗತ್ತಿಗೆ ಇಂಗ್ಲೆಂಡಿನ ಕೊಡುಗೆಯಾದ ಲಾನ್ ಟೆನ್ನಿಸ್ ಆರಂಭವಾದದ್ದು ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ.
ಭೂಮಿಯ ನಾನಾ ಪದರಗಳಷ್ಟೇ ಪದರಗಳು ಆರಂಭಿಕ ದಿನಗಳ ಟೆನ್ನಿಸ್ ಆಟಗಾರ್ತಿಯರ ಉಡುಗೆಯಲ್ಲಿರುತ್ತಿತ್ತು. ಆಟ ಆಡಿ ಬೆವೆತದ್ದಕ್ಕಿಂತ ಹೆಚ್ಚುಧರಿಸಿದ ಬಟ್ಟೆಗಳಿಂದಲೇ ಬೆವರುತ್ತಿದ್ದರೇನೋ! ಮಹಿಳೆಯರ ಉಡುಗೆತೊಡುಗೆಗಳು ವಿಕ್ಟೊರಿಯಾ ಯುಗದ ಸಂಪ್ರದಾಯಸ್ಥ ನಡೆನುಡಿಗಳಿಗೆ ತಕ್ಕಂತೆ ಇದ್ದವು. ಮಹಾಭಾರತವೇ ನಾದರೂ ಅಂದಿನ ಇಂಗ್ಲೆಂಡಿನಲ್ಲಿ ಘಟಿಸಿದ್ದರೆ, ದ್ರೌಪದಿಯ ರಕ್ಷಣೆಗೆ ಶ್ರೀಕೃಷ್ಣ ಧಾವಿಸಬೇಕಾಗುತ್ತಿರಲಿಲ್ಲ. ದುಶ್ಶಾಸನ ನಂತೂ ಸುಸ್ತಾಗಿ ಕುಸಿದುಬೀಳುತ್ತಿದ್ದನೇನೋ!
ಮೊನ್ನೆ ತಾನೇ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಬಿದ್ದ ಸಾನಿಯಾ ಮಿರ್ಜಾ, ವಸದ ವಿಷಯದದರೂ ಕಾಲಕ್ಕೆ ತಕ್ಕಂತೆ ಬದಲಾಗದಿದ್ದಲ್ಲಿ ಈ ವರ್ಷದ ಕೊನೆಗೆ ನಿವೃತ್ತಿಯಾಗುವುದರ ಬದಲು ಹಿಂದೆಂದೋ ನಿವೃತ್ತಿಯಾಗಿರುತ್ತಿದ್ದರು. ಅಥವಾ, ಟೆನ್ನಿಸ್ ಕೋರ್ಟನ್ನು ಪ್ರವೇಶಿಸುತ್ತಿದ್ದುದೇ ಡೌಟು. ಹೆಂಗಸ ರಿಗೆವಸ್ತ್ರಸಂಹಿತೆ ವಿಧಿಸಲಿಕ್ಕೆ ವಿರಚಿತವಾದದ್ದೇ ಎಂಬಂತಿರುವ ಹೆಣ್ಣು ಎಂದರೆ ಹೀಗಿರಬೇಕು ಎಂಬ ಹಳೆಯ ಚಿತ್ರಗೀತೆಯ ಒಂದು ಸಾಲು ಮೈತುಂಬ ಸೆರಗನ್ನು ಹೊದ್ದಿರಬೇಕು ಎಂದು ಬೋಧಿಸುತ್ತದೆ.
ಚಿತ್ರಮಾಧ್ಯಮ ಸಾಮಾನ್ಯ ಪ್ರೇಕ್ಷಕರ ಮೇಲೆ ತನ್ನದೇ ಪ್ರಭಾವ ಬೀರುತ್ತದೆ ನಿಜ. ಅದರಲ್ಲೂ ಪ್ರಭಾವೀ ನಟ ರಾಜ್ ಕುಮಾರ್ ಅವರೇ ನಟಿಸಿದ ಪಾತ್ರದ ಹಾಡೆಂದ ಮೇಲೆ ಅದರ ಪರಿಣಾಮ ಪ್ರೇಕ್ಷಕರ ಮೇಲೆ ನಾಟಿರುತ್ತದೆ. ಆದರೂ, ಈ ಸಿನೆಮಾ ಬಂದ ಹತ್ತು ವರ್ಷದಲ್ಲಿ ಚೂಡಿದಾರ್ ಕರ್ನಾಟಕ ಸೇರಿದಂತೆ ದಕ್ಷಿಣಭಾರತವನ್ನು ಆಕ್ರಮಿಸಲಾರಂಭಿಸಿತು. ಇದಕ್ಕೆ ಒಂದು ಮುಖ್ಯ ಕಾರಣ ಧರಿಸುವವರಿಗೆ ಅದು ನೀಡುವ ಅನುಕೂಲ. ಕಟ್ಟಾ ಸಂಪ್ರದಾಯಸ್ಥ ಹೆಂಗಸರೂ ಇಂದು ಚೂಡಿದಾರ್ ಧರಿಸಲು ಹಿಂಜರಿಯುವುದಿಲ್ಲ. ಪಂಜಾಬೀ ಪೋಷಾಕೆಂದು ಕರೆಯಲಾಗುವ ಇದರ ಮೂಲ ಮಧ್ಯಪ್ರಾಚ್ಯವೆಂದ  ತ್ರಕ್ಕೆ ಹಿಂದೂ ಮಹಿಳೆಯರೇನೂ ಅದನ್ನು ತಿರಸ್ಕರಿಸಿಲ್ಲ.
ಸಕಲ ವೇದಗಳ ಸಾರವನ್ನು ಸಂಸ್ಕೃತದ ಒಂದು ಶ್ಲೋಕವು ತನ್ನ ಹೊಟ್ಟೆಯಲ್ಲಿಟ್ಟುಕೊಂಡಿದ್ದು ಸರಿತಪ್ಪುಗಳನ್ನು ಕುರಿತು ಹಿಂದೂಗಳಿಗೆ ಅದು ಕೈದೀವಿಗೆಯಾಗಿದೆ: ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಮ. ಪರಪೀಡಕರಲ್ಲಿ ಮುಖ್ಯವಾಗಿ ಗಂಡಸರೇ ಕಂಡುಬರುತ್ತಾರೆ. ಅದರಲ್ಲೂ ಮುಖ್ಯವಾಗಿ ದರ್ಜಿಗಳು. ಗಂಡಿನ ಹೃದಯಕ್ಕೆ ಲಗ್ಗೆ ಹಾಕಲು ಸುಲಭವಾದ ಮಾರ್ಗ ಹೊಟ್ಟೆ ಎನ್ನುತ್ತಾರೆ. ಹೆಣ್ಣನ್ನು ಒಲಿಸಿಕೊಳ್ಳಲು ಒಬ್ಬ ಟೈಲರ್‌ಗೆ ಸಾಧ್ಯ. ಅವನು ಸರಿ ಇರೀ, ನನ್ನ ಬ್ಲೌಸ್ ಕೆಡಿಸಿಬಿಟ್ಟ ಅಂತ ಅಲವತ್ತುಕೊಳ್ಳುವ ಹೆಂಗಸರು ಪ್ರತಿ ಬೀದಿಯಲ್ಲೂ ಹಿಂಡುಹಿಂಡಾಗಿ ಸಿಗುತ್ತಾರೆ.ಕೊಟ್ಟ ಅಳತೆಗೆ ತಕ್ಕಂತೆ ಹೊಲಿಯುವ ಟೈಲರ್ ಸಿಗದೇ ಸಂತ್ರಸ್ತರಾದ ಹೆಂಗಸರ ಜೀವನದ ನೆಮ್ಮದಿಯೇ ಹಾಳಾಗಿರುತ್ತೆ.
ಒಳ್ಳೆಯ ಗಂಡ ಸಿಗುವುದೂ ಅಷ್ಟು ಕಷ್ಟವಲ್ಲ ಅನ್ಸುತ್ತೆ, ಒಳ್ಳೇ ಟೈಲರನ್ನು ಪಡೆಯೋದು ಕಂಕಣಭಾಗ್ಯ ಕೂಡಿಬರೋದಕ್ಕಿಂತ ಕಷ್ಟ. ಮತ್ತು ಒಮ್ಮೆ ಸರಿಯಾಗಿ ಹೊಲಿದುಕೊಟ್ಟ ಅಂತ ಅವನಿಗೇ ಮುಖ್ಯವಾದ ಸಮಾರಂಭಕ್ಕೆ ಮುಂಚೆ ಹೊಲೀಲಿಕ್ಕೆ ಕೊಟ್ಟ ಬ್ಲೌಸನ್ನು ಕೆಡಿಸದಿದ್ರೆ ಕೇಳಿ. ಮುಖ್ಯವಾದ ಮ್ಯಾಚುಗಳಲ್ಲಿ ನೆಚ್ಚಿಕೊಂಡ ಬ್ಯಾಟ್ಸ್‌ಮನ್ ಕೈಕೊಡೋ ಹಾಗೇನೇ ಈ ಟೈಲರ್ ಗಳ ಹಣೇಬರಾನು. ಅದೇ ಕೊರಗಿನಲ್ಲಿ ನಿದ್ದೆ ಕಳೆದುಕೊಂಡು,ಆರೋಗ್ಯ ಹಾಳುಮಾಡಿಕೊಂಡ ಹೆಂಗಸರ ಸಂಖ್ಯೆಗೇನೂ ಕಡಿಮೆಯಿಲ್ಲ. ನನ್ನ ಅಂದಾಜಿನಂತೆ ಬುರ್ಖಾ ಧಾರಿಣಿಯರಿಗೆ ಈ ಸಮಸ್ಯೆ ಇಲ್ಲವೆನ್ನಿಸುತ್ತೆ.
ಬುರ್ಖಾ ಹೊಲಿಯುವುದಕ್ಕೆ ಕುಪ್ಪಸ ಹೊಲಿಯುವುದಕ್ಕೆ ಬೇಕಾದ ಪರಿಣತಿ ಬೇಡ. ಹಾಗಂತ ಮುಸ್ಲಿಂ ಮಹಿಳೆಯರಿಗೆ ತಲೆನೋವಿಲ್ಲ ಅಂತಲ್ಲ.ತ್ರಿ-ತಲಾಖ್ ಪದ್ಧತಿಯನ್ನು ಕಾನೂನಾತ್ಮಕವಾಗಿ ರದ್ದುಪಡಿಸುವವರೆಗೂ ಅದಕ್ಕೆ ಮುಖ್ಯ ಕಾರಣ ಬುರ್ಖಾ ಇದ್ದಿರಲಿಕ್ಕೂ ಸಾಧ್ಯ. ಬುರ್ಖಾ ಧರಿಸಿದಾಗ ಕಾಣದ ನ್ಯೂನತೆಗಳು ಬುರ್ಖಾ ತೆಗೆದಾಗ ಕಂಡುಬಂದು ಆ ಕಾರಣಕ್ಕೆ ಗಂಡ ವಿಚ್ಛೇದನ ಪಡೆಯಲು ಮುಂದಾಗಿರಬಾರದೇಕೆ? ಈ ಕಾರಣಕ್ಕೆ ಕೂಡ, ತ್ರಿವಳಿ ತಖ್ ಎಂಬ ಶೋಷಕ ಪದ್ಧತಿಯಿಂದ ಮುಸ್ಲಿಂ ಮಹಿಳೆಯರಿಗೆ ವಿಮುಕ್ತಿ ಒದಗಿಸಿದ ಪ್ರಸಕ್ತ ಸರಕಾರ ಬುರ್ಖಾ ನಿಷೇಧ ಕುರಿತೂ ಕಾನೂನು ತರುವುದು ಸೂಕ್ತ.
ಎಲ್ಲ ಸುಧಾರಣೆಗಳಂತೆ, ಮುಸ್ಲಿಂ ಸಮಾಜವನ್ನು ಮೇಲೆತ್ತ ಬೇಕಾದ ಸುಧಾರಣಾ ಆಂದೋಲನಕ್ಕೂ ಸರಕಾರವನ್ನೇ ನೆಚ್ಚಿಕೊಳ್ಳುವುದು ಸರಿಯಲ್ಲ. ಸುಧಾರಣೆಯತ್ತ ಮೊದಲ ಹೆಜ್ಜೆಯನ್ನು ಆ ಜನಾಂಗವೇ ತೆಗೆದುಕೊಳ್ಳಬೇಕು. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಪ್ರತಿ ಮುಸ್ಲಿಂ ಪ್ರಜೆಯೂ ಕೇಳಿಕೊಳ್ಳಬೇಕಾದ ಪ್ರಶ್ನೆ ಇಂದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಓಲೈಕೆಯಿಂದಯಾವುದೇ ಸಮಾಜವನ್ನು ಮೇಲೆತ್ತಲಾಗುವುದಿಲ್ಲ.
ಓಲೈಸಿದವರ ಬೇಳೆ ಬೇಯುತ್ತದೆ ಅಷ್ಟೆ. ಓಲೈಸಲ್ಪಟ್ಟ ವರ್ಗದ ಮುಂಚೂಣಿಯಲ್ಲಿರುವವರಿಗೆ ಬಲಾಢ್ಯರಾದೆವೆಂಬ ಭ್ರಮೆ ಅವರಲ್ಲಿರಬಹುದಾದ ಕ್ರಿಯಾಶೀಲತೆಗೆ ಹಾಸಿಗೆ, ದಿಂಬು, ಕಂಬಳಿ ಕೊಟ್ಟು ಮಲಗಿಸುತ್ತದೆ. ಓಲೈಸುವವರಿಗೆ ಓಲೈಸಲ್ಪಡುವವರ ಮತ ಮುಖ್ಯವಾಗುತ್ತೆ, ಅವರ ಹಿತವಲ್ಲ. ಇದನ್ನು ಮುಸ್ಲಿಮರು ಅರಿಯುವಂತಹ ಪ್ರe ಬೆಳೆಸಿಕೊಳ್ಳಬೇಕು. ತಾವು ಮತಕ್ಕಾಗಿ ಮಾರಾಟಕ್ಕಿಟ್ಟ ನಿರ್ಜೀವ ವಸ್ತುಗಳಲ್ಲ ಎಂಬ ಅಂತರ್ಬೋಧೆ ಅವರಿಗೆ ಇನ್ನಿಲ್ಲದಂತೆ ಜರೂರಿದೆ. ಹಾಗಾಗಲು ಬುರ್ಖಾ ಅಡ್ಡಬರುತ್ತದೆ. ಬುರ್ಖಾಧಾರಣೆಯ ಒತ್ತಾಯ ಇಸ್ಲಾಮ್ ಧರ್ಮದಲ್ಲಿಲ್ಲ ಎಂದು ಮುಸ್ಲಿಮ ರಾದ ಕೇರಳದ ರಾಜ್ಯಪಾಲರ ಮಾತು ಬುರ್ಖಾ ಹೊರಗೇ ಉಳಿಯುತ್ತದೆ.
ಓಲೈಕೆ ಪರಿಣಿತರ ತುಷ್ಟೀಕರಣ-ಪ್ರೇರಿತ ಪ್ರಚೋದನೆ ಪ್ರಿಯವಾಗುತ್ತದೆ. ಅದರ ಫಲಿತಾಂಶ ತಮ್ಮನ್ನು ಸಮಾಜದ ಮುಖ್ಯವಾಹಿನಿಯಿಂದ ಮತ್ತಷ್ಟು ದೂರಮಾಡುತ್ತದೆ ಎಂಬ ವಿವೇಕ ಕೈಕೊಡುತ್ತದೆ. ಮೂರು ವರ್ಷಗಳ ಹಿಂದೆ, ಮೈಸೂರಿನಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಮೀನಾ ಎಂಬ ಮಹಿಳೆಯ ಕೈಯಿಂದ ಮೈಕ್ ಕಿತ್ತುಕೊಳ್ಳುವ ಭರದಲ್ಲಿ ಆಕೆಯ ದುಪ್ಪಟ್ಟಾವನ್ನೂ ಎಳೆದಿದ್ದರು. ಅದುನಿಂದನೀಯ, ಖಂಡನೀಯ.
ಎಂದಿನಂತೆ, ದುರ್ವರ್ತನೆಯ ಆ ಪ್ರಕರಣಕ್ಕೆ ಅವಳು ನಮ್ಮ ಪಕ್ಷದವಳೇ, ೧೫ ವರ್ಷಗಳಿಂದ ಆಕೆಯನ್ನುಬಎಂಬ ಸಿದ್ಧರಾಮಯ್ಯನವರ ತಿಪ್ಪೆ ಸಾರಿಸುವ ಹೇಳಿಕೆಯ ಮೂಲಕ ತೆರೆ ಎಳೆಯಲಾಯಿತು. ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅನುಮತಿ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸುವ ಮುಸ್ಲಿಮರ ನಡೆ ಈ ಕಾರಣಕ್ಕೂ ಪ್ರಾಮಾಣಿಕವಲ್ಲ. ನಿಮ್ಮ ಆಕ್ರೋಶಕ್ಕೆ ತತ್ವದ ಬಲವಿಲ್ಲ. ತರಲೆ ರಾಜಕಾರಣದ ಅಡ್ಡವಾಸನೆಯಿದೆ. ಸಮಾನತೆಯ ಅರಿವು ಮೂಡಿಸುವುದೇಸಮವಸ.ಸಮವಸವನ್ನು ಕಡ್ಡಾಯಗೊಳಿಸುವುದರಲ್ಲಿ ಅಸಮಾನತೆಯನ್ನು ಕಾಣಬಯಸುವ ಸಾಹಿತಿ ದೇವನೂರು ಮಹದೇವರು ಅದನ್ನು ದುರಹಂಕಾರವೆಂದು ಹೇಳಿದ್ದಾರೆ.
ಮಹ ದೇವರ ತೋಟದ ಸಿಂಧೂರಿ ಮಾವಿನಹಣ್ಣನ್ನು ನಾನು ಸವಿದಿದ್ದೇನೆ. ಮೇಲಿನ ಪ್ರಸಂಗದಲ್ಲಿ ಸಿದ್ಧರಾಮಯ್ಯನವರ ವರ್ತನೆ ಮಹದೇವರ ಕಣ್ಣಿಗೆ ದುರಹಂಕಾರವಾಗಿ ಕಾಣದಿದ್ದುದು ವಿಪರ್ಯಾಸ. ಆಯ್ದಂತೆ ಕೆಟ್ಟದ್ದನ್ನು ಖಂಡಿಸುವ ಅವರ ರೀತಿ ಮಾವಿನ ಸಿಹಿಯನ್ನು ಪೂರ್ವಾನ್ವಯಿಕವಾಗಿಕಡಿಮೆ ಮಾಡಿದೆ. ಭಾರತೀಯ ಮುಸ್ಲಿಮರ ಬಗ್ಗೆ ಜಬರದಸ್ತ್ ನಿಲುವು ತಳೆದಿದ್ದ ಬಾಬಾ ಸಾಹೇಬ್ ಅಂಬೇಡ್ಕರರ ಎಚ್ಚರಿಕೆಯನ್ನು ಮರೆತು ಮುಸ್ಲಿಂ ಉಗ್ರವಾದದ ಪರ ನಿಂತ ದಲಿತ ನಾಯಕರ ಕ್ರಮ ನಿರೀಕ್ಷಿತವೇ ಆದರೂ ಅವರ ಸಮುದಾಯದ ಒಳಿತಿಗಾದರೂ ಅವರು ವಿಭಿನ್ನವಾಗಿ ವರ್ತಿಸಬಹುದಿತ್ತು.
ಹಿಜಾಬನ್ನು ಮೊತ್ತ ಮೊದಲು ರದ್ದುಪಡಿಸಿದ ದೇಶ-ನ್ಸ್. ರದ್ದಾಗಿ ಹತ್ತು ವರ್ಷಗಳ ಮೇಲಾಯಿತು. ಆದರೀಗ ಅಲ್ಲಿನ ಮುಸ್ಲಿಂ ಫುಟ್ಬಾಲ್ ಆಟಗಾರ್ತಿ ಯರು ಹಿಜಾಬ್ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಿಯಂತೆ, ಅಲ್ಲೂ ಚುನಾವಣೆ ಹತ್ತಿರವಾಗುತ್ತಿದೆ. ವಿವಾದ ಬೇಕಲ್ಲ. ಅಲ್ಲ ಹು ಅಕ್ಬರ್ ಕೂಗಿದ ಯುವತಿಗೆ ಪ್ರೋತ್ಸಾಹಧನವಾಗಿ ಇಲ್ಲಿ ಐದು ಲಕ್ಷ ಘೋಷಣೆಯಾದಂತೆ, ಹಿಜಾಬ್ ಧರಿಸಿದರೆ ಸರಕಾರಕ್ಕೆ ತೆತ್ತಬೇಕಾದ ದಂಡವನ್ನು ತಾನು ಪಾವತಿಸುವುದಾಗಿ ಅಲ್ಲಿಯ ಇಸ್ಲಾಮ್ ಪಕ್ಷ ಮುಂದೆ ಬಂದಿದೆ. ಹೆಂಗಸರ ಉಡುಗೆತೊಡುಗೆಗಳ ಮೇಲೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳೆರಡರ ಪ್ರಭಾವವೂ ಆಗಿದೆ.
ಅದರ ಹಿಂದೆ ಪುರುಷರ ಕೈಚಳಕವೂ (ಪುರುಷ ದರ್ಜಿಗಳದ್ದು) ಕೈವಾಡಗಳೆರಡೂ ಇವೆ. ಹೆಂಗಸು ಏನನ್ನು ಧರಿಸಬೇಕು, ಧರಿಸಬಾರದು ಎಂಬುದನ್ನು ನಿರ್ಧರಿಸುತ್ತಿರುವುದು ಗಂಡಸೇ. ಹಿಜಾಬಿಗೆ ಇಸ್ಲಾಮ್ ಆದೇಶವಿದೆ ಎನ್ನುವುದು ನಿಜವಾದರೆ, ಅದನ್ನು ಉಲ್ಲಂಸಿದ ಮುಸ್ಲಿಂ ಸಿನೆಮಾ ತಾರೆಯರೇ ಅದೆಷ್ಟು ಮಂದಿಯಿಲ್ಲ! ಹೆಣ್ಣೊಂದು ಕಲಿತರೆ ಒಂದು ಸಂಸಾರವೇ ಕಲಿತಂತೆ ಎಂಬ ನಾಣ್ಣುಡಿ ಸ್ವಾರ್ಥ ನಾಯಕರಿಂದಾಗಿ ಘೋಷಣೆಯಾಗೇಉಳಿದಿದೆ. ಈ ಮಾತಿನ ಮಹತ್ವವನ್ನು ಮುಸ್ಲಿಂ ತಾಯಂದಿರು ತಿಳಿದುಕೊಳ್ಳಬೇಕಾಗಿದೆ. ಅಂಧಕಾರದ ಕುರುಹಾದ ಹಿಜಾಬಿನಿಂದ ವಿಮೋಚನೆ ಪಡೆದರೆ, ನವನಾಗರಿಕ ಸಮಾಜಕ್ಕೆ ಅವರು ಕೊಡಬಹುದಾದ ಕೊಡುಗೆ ಅಪಾರ.
ಅದರ ನಿರೀಕ್ಷೆ ಆಧುನಿಕತೆ ಮತ್ತು ಅವರ ಶ್ರೇಯಸ್ಸನ್ನು ಬಯಸುವ ಎಲ್ಲರಿಗೂ ಇದೆ. ಅದರಲ್ಲಿ ಬಹುಸಂಖ್ಯಾತ ಹಿಂದೂಗಳೂ ಸೇರಿದ್ದಾರೆ. ಮುಸ್ಲಿಂ ಮಹಿಳೆಯರ ಆಯ್ಕೆ ಹಿಜಾಬ್ ಬೇಕೋ ಬೇಡವೋ ಎಂಬಂತಹ ಕ್ಷುಲ್ಲಕ ರಾಜಕೀಯದ ಸುತ್ತ ಗಿರಾಕಿಹೊಡೆಯುವ ವಿಚಾರವೇ ಅಲ್ಲ. ಸಮಾಜದ ಮೇಲ್‌ಸ್ತರಕ್ಕೆ ನಾವು ಪ್ರವೇಶಿಸುತ್ತಿವೆಯೋ ಇಲ್ಲವೋ ಎಂಬುದು ಅವರ, ಅವರ ಸಂತತಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಸ್ವಯಂ ಪ್ರೇರಿತರಾಗಿ ಬುರ್ಖಾ ತ್ಯಜಿಸಿದಲ್ಲಿ ಭವಿಷ್ಯದ ದಾರಿ ಕಾಣಬಲ್ಲದು. ಶಬ್ನಮ್ ಳಂತೆ ನಿಮ್ಮ ಹೆಣ್ಣುಮಕ್ಕಳೂ ಮುಂದೆಬರಲೆಂದು ನನ್ನ ಹಾರೈಕೆ.