ಮುಂದಿನ ವರ್ಷ ಇವರಿಗೆಲ್ಲ ಮತದಾನದ ಹಕ್ಕಿದೆ !
ಪ್ರಸ್ತುತ
ಪ್ರಕಾಶ್ ಶೇಷರಾಗವಾಚಾರ್‌
@.
ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ, ಹಿಜಾಬ್ ಮತ್ತು ಕೇಸರಿ ಶಾಲಿನ ನಡುವಿನ ಹೋರಾಟಕ್ಕೆ ತಾತ್ಕಾಲಿಕ ವಿರಾಮವನ್ನು ನೀಡಿದೆ. ಅಂತಿಮ ಆದೇಶ ಬರುವವರೆಗೂ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸುವುದನ್ನು ತಡೆ ಹಿಡಿಯಲಾಗಿದೆ.
ಒಂದರ್ಥದಲ್ಲಿ ಹಿಜಾಬ್ ಹೋರಾಟಗಾರರಿಗೆ ಉಂಟಾಗಿರುವ ಹಿನ್ನಡೆಯೇ ಇದು. ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಗೊಂದಲ ಸೃಷ್ಟಿ ಮಾಡುವ ಮುನ್ನ ಮೂರು ಬಗೆಯ ವ್ಯವಸ್ಥೆ ಯಾವುದೇ ತಕರಾರು ಇಲ್ಲದೆ ನಡೆಯುತ್ತಿತ್ತು. ಮೊದಲನೆಯದು ಶಾಲಾ ಮತ್ತು ಕಾಲೇಜಿನಲ್ಲಿಸಮವಸ್ತ್ರಕಡ್ಡಾಯವಿಲ್ಲದಿರುವ ಕಡೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದರು; ಯಾರಿಂದಲೂ ಆಕ್ಷೇಪವಿರಲಿಲ್ಲ.
ಎರಡನೆಯದುಸಮವಸ್ತ್ರಕಡ್ಡಾಯವಿರುವ ಅನೇಕ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹೋಗುತ್ತಿದ್ದರು; ಯಾರೂ ಆಕ್ಷೇಪಿಸುತ್ತಿರಲಿಲ್ಲ. ಮೂರನೆಯದುಸಮವಸ್ತ್ರಕಡ್ಡಾಯವಿರುವ ಶಾಲೆಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶವಿರಲಿಲ್ಲ; ಯಾರೂ ಪ್ರಶ್ನಿಸಿರಲಿಲ್ಲ. ಈಗ ಹೈಕೋರ್ಟ್ ಆದೇಶ ದಿಂದ ತಾತ್ಕಲಿಕವಾಗಿ ಯಾವ ಶಾಲೆಗೂ ಹಿಜಾಬ್ ಧರಿಸಿ ಹೋಗದಂತಾಗಿದೆ.
ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ 2003ರಿಂದಸಮವಸ್ತ್ರಕಡ್ಡಾಯವಾಗಿತ್ತು ಮತ್ತು ಹಿಜಾಬ್ ಧರಿಸಿ ದವರಿಗೆ ತರಗತಿಗೆ ಪ್ರವೇಶವಿರಲಿಲ್ಲ. ಕ್ಷೇತ್ರದ ವಿಧಾನಸಭಾ ಸದಸ್ಯರು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಿರುತ್ತಾರೆ. ೨೦೧೩ರಿಂದ ೨೦೧೮ರವರೆಗೆ ಈ ಶಾಲೆಗೆ ಕಾಂಗ್ರೆಸ್ ವಿಧಾನಸಭಾ ಸದಸ್ಯ ಪ್ರಮೋದ್ ಮಧ್ವರಾಜ್ ಅವರು ಅಧ್ಯಕ್ಷರಿದ್ದರು. ಆ ಸಂದರ್ಭದಲ್ಲಿಯೂ ಹಿಜಾಬ್ ಧರಿಸಿದವರಿಗೆ ತರಗತಿಗೆ ಪ್ರವೇಶ ನೀಡಿರಲಿಲ್ಲ.
ಪಿಎಫ್ಐನ ಅಂಗ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಈ ಕಾಲೇಜಿನ ಹನ್ನೆರಡು ವಿದ್ಯಾರ್ಥಿಗಳನ್ನು ತನ್ನ ಸದಸ್ಯರನ್ನಾಗಿ ಮಾಡಿದ ತರವಾಯ ಡಿಸೆಂಬರ್ ಕೊನೆಯ ವಾರದಿಂದ ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಆರಂಭಿಸಿದರು.ಸಮವಸ್ತ್ರನೀತಿ ಉಲ್ಲಂಘನೆಯಾದ ಕಾರಣ ಶಾಲೆಯ ಆಡಳಿತ ಮಂಡಳಿಯು ತರಗತಿಗೆ ಪ್ರವೇಶ ನಿರಾಕರಿಸಿದ ತರುವಾಯ ಹಿಜಾಬ್ ವಿವಾದ ದೇಶವ್ಯಾಪಿ ಚರ್ಚೆಗೆ ಆಹಾರವಾಯಿತು.
ಈ ವಿವಾದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೊಂಡೊಯ್ಯಲಾಗಿದೆ. ಪಾಕಿಸ್ತಾನವು, ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಧರ್ಮ ಸಹಿಷ್ಣುತೆಯ ಪಾಠವನ್ನು ಹೇಳಿಕೊಡಲು ಮುಂದಾಗಿದೆ. ಹೇಗೆ ಮತಾಂಧರ ಅಜೆಂಡಾಗಳು ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಪ್ರಾಯಶಃ 2012ರಲ್ಲಿ ಈ ವಿವಾದ ಉದ್ಭವವಾಗಿದ್ದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರತರಗತಿಯಲ್ಲಿ ಹಿಜಾಬ್ ಧರಿಸುವುದಕ್ಕೆ ನಿಶ್ಚಿತವಾಗಿ ಅನುಮತಿ ನೀಡುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಅನುಮತಿ ದೊರೆಯುವುದು ದುಸ್ತರ ಎಂಬು ದನ್ನು ಈ ವಿವಾದ ಹುಟ್ಟುಹಾಕಿದ ಕಾಣದ ಶಕ್ತಿಗಳ ಗಮನಕ್ಕೆ ಬರಲಿಲ್ಲವೇನೊ.
ಸಮನಾದಸಮವಸ್ತ್ರನೀತಿಯನ್ನು ಎತ್ತಿ ಹಿಡಿದ ರಾಜ್ಯ ಸರ್ಕಾರ ತತ್ಸಂಬಂಧ ಸರ್ಕಾರಿ ಆದೇಶವನ್ನು ಹೊರಡಿಸಿತು. ಉಡುಪಿಯಲ್ಲಿ ಹಚ್ಚಿದ ಹಿಜಾಬ್ ಕಿಚ್ಚು ದೇಶವ್ಯಾಪಿ ಹಬ್ಬಿಸಿ ರಾಜ್ಯ ಬಿಜೆಪಿ ಸರಕಾರಕ್ಕೆ ಮುಜುಗರವುಂಟು ಮಾಡಿ ಮುಸ್ಲಿಂ ಮಹಿಳೆಯರಿಗೆಸಮವಸ್ತ್ರದ ನೆಪವನ್ನು ಮುಂದಿಟ್ಟು ಶಿಕ್ಷಣ ದಿಂದ ವಂಚಿತರನ್ನಾಗಿಸುವ ಪಿತೂರಿ ಮಾಡಲಾಗುತ್ತಿದೆ ಎಂದು ಬಿಂಬಿಸುವ ಷಡ್ಯಂತರದ ಭಾಗವಾಗಿದೆ.
ಹಿಜಾಬ್ ಧರಿಸಿದೊಡನೆ ಕೇಸರಿ ಶಾಲುಗಳು ಕೇಸರಿ ಪೇಟಗಳು ಧುತ್ತನೆ ಹೊರಬಂದಿತ್ತು. ಶಾಲಾ ಆವರಣದಿಂದ ಆರಂಭವಾದ ಗೊಂದಲ ರಾಜ್ಯದ ಅನೇಕ ಜಿಗಳಿಗೆ ಹಿಜಾಬ್ ಕೇಸರಿ ವಾರ್ ಕಾಳ್ಗಿಚ್ಚಿನಂತೆ ಹರಡಿತು. 17 ರಿಂದ 18 ವಯಸ್ಸಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಹಿಜಾಬ್ ವಿರೋಧಿಸಿ ಪ್ರತಿ ಹೋರಾಟದ ಕಣಕ್ಕೆ ಧುಮುಕಿದರು. ಉಡುಪಿ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆಯುಶಾಂತವಾಗಿದ್ದ ಶೈಕ್ಷಣಿಕ ವಾತವರಣವನ್ನು ಕದಡಿ ಬಿಟ್ಚರು.
ಪರ ಮತ್ತು ವಿರೋಧದ ಪ್ರತಿಭಟನೆಯು ಹಿಜಾಬ್ ಮತ್ತು ಕೇಸರಿಯ ಶಾಲು ಧರಿಸಿ ಆರಂಭವಾಯಿತು. ತಟಸ್ಥ ನಿಲುವು ತಾಳಲು ನಿರ್ಧರಿಸಿದ್ದ ಕಾಂಗ್ರೆಸ್ ಈ ವಿವಾದದ ಆರಂಭದಲ್ಲಿ ಹೆಚ್ಚು ಮೂಗು ತೂರಿಸಲಿಲ್ಲ. ಡಿ.ಕೆ.ಶಿವಕುಮಾರ್‌ರವರ ತಟಸ್ಥ ನಿಲುವು ಅವರಿಗೆ ಲಾಭದಾಯಕವಾಗುವ ಲಕ್ಷಣಗಳು ಕಂಡು ಬರುವ ವೇಳೆಯಲ್ಲಿ ಯಥಾಪ್ರಕಾರ ಸಿದ್ದರಾಮಯ್ಯ ಬಿಜೆಪಿಯ ಹೆಸರನ್ನು ಮುಂದಿಟ್ಟುಕೊಂಡು ಹಿಂದೂಗಳ ಮೇಲೆ ಹರಿಹಾಯ್ದರು. ಈ ವಿಷಯದ ಬಗ್ಗೆ ಯಾರು ಹೇಳಿಕೆ ಕೊಡಬೇಡಿ ಎಂಬ ಡಿಕೆಶಿ ಆರ್ತನಾದ ಸಿದ್ದರಾಮಯ್ಯನವರ ಕಿವಿಗೆ ತಲುಪಲೇ ಇಲ್ಲ. ಇದ್ಯಾವ ಹಿಡೆನ್ ರಾಜಕೀಯ ತಂತ್ರಗಾರಿಕೆಯೂ ಗೊತ್ತಿಲ್ಲ.
ಇಸ್ಲಾಂ ಧರ್ಮದ ಪ್ರಕಾರ ಹಿಜಾಬ್ ಧರಿಸುವುದು ಒಂದು ಪದ್ಧತಿ. ಕುರಾನ್‌ನಲ್ಲಿಯೂ ಇದರ ಉಲ್ಲೇಖವಿದೆ. ಎಂದು ಸಿದ್ದರಾಮಯ್ಯ ಹಿಜಾಬ್ ಪರವಾಗಿ ಬಲವಾಗಿ ವಕಾಲತ್ತು ವಹಿಸಿದ್ದಾರೆ. ಇವರ ವಾದದ ಸರಣಿಯನ್ನು ಕಂಡರೆ ನಾವೇನಾದರು ಧಾರ್ಮಿಕ ಗ್ರಂಥದ ಆಧಾರದ ಮೇಲೆ ಈ ದೇಶದ ಆಡಳಿತ ನಡೆಯುತ್ತಿರುವುದೋ ಅಥವಾ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿರುವುದಾ ಎಂದು ಅನುಮಾನವಾಗುತ್ತಿದೆ. ಈ ವಿವಾದವನ್ನು ಆರಂಭಿಸಿದ ಕ್ಯಾಂಪಸ್ ಫ್ರಂಟ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಎದೆಗಾರಿಕೆಯನ್ನು ಕಾಂಗ್ರೆಸ್ ತೋರಿಸಿ ಪದೇ ಪದೇ ಹೇಳಿಕೊಳ್ಳುವ ನೈಜ ಜಾತ್ಯತೀತ ಸಿದ್ಧಾಂತಕ್ಕೆ ಬದ್ಧರಾಗಬೇಕಿತ್ತು. ಬದಲಿಗೆ ಬಿಜೆಪಿ ಈ ವಿವಾದವನ್ನು ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಮತ್ತು ಈ ವಿವಾದವನ್ನು ಬೆಳಸಿ ವಿದ್ಯಾರ್ಥಿಗಳಲ್ಲಿ ಕಂದಕ ನಿರ್ಮಿಸುತ್ತಿದೆ ಎಂದು ಆರೋಪಿಸಿ ಪಿಎ-ಐ ನ ಷಡ್ಯಂತರಕ್ಕೆ ಪರೋಕ್ಷವಾಗಿ ಬೆಂಬಲ ನೀಡುವ ಆಘಾತಕಾರಿ ನಿಲುವುತೆಗೆದುಕೊಂಡಿತು.
16 ರಿಂದ 18ರ ವಯಸ್ಸಿನ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಹಿಜಾಬ್ ಧರಿಸುವುದಕ್ಕೆ ಪ್ರತಿರೋಧ ತೋರುತ್ತಿದ್ದರೆ ಅವರ ಹಿಂದೆ ಅಡಗಿರುವ ಆಕ್ರೋಶವನ್ನು ಅರ್ಥೈಸಿಕೊಳ್ಳುವ ಸಣ್ಣ ಪ್ರಯತ್ನವನ್ನು ಸಿದ್ದರಾಮಯ್ಯನವರಾಗಲಿ ಮತ್ತು ಡಿಕೆಶಿಯವರು ಮಾಡಲಿಲ್ಲ. ಶಿವಮೊಗ್ಗ ಕಾಲೇಜಿನಲ್ಲಿ ರಾಷ್ಟ್ರಧ್ವಜವನ್ನು ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂದು ಸೂಕ್ತ ಮಾಹಿತಿ ಪಡೆಯದೇ ಸುಳ್ಳು ಮಾಹಿತಿಯ ಆಧಾರದ ಮೇಲೆ ಡಿಕೆಶಿ ಟೀಕಿಸಿ ಆ ಯುವಕರ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿದು ಅವರನ್ನು ಕೆಣಕಿದರು ಮತ್ತು ಇದೊಂದು ಪುಡಾಟಿಕೆಯ ವರ್ತನೆಯೆಂದು ಕಾಂಗ್ರೆಸ್ ಟ್ವೀಟ್ ಮೂಲಕ ಹದಿಹರೆಯದ ಯುವಕರ ಅತಿ ಉತ್ಸಾಹದ ಕೃತ್ಯಕ್ಕೆ ಗೂಂಡಾಗಳು ಎಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ.
ಮಂಡ್ಯ ಜಿಲ್ಲೆಯ ಕಾಲೇಜ್ ವಿದ್ಯಾರ್ಥಿಗಳು ಹಿಜಾಬ್ ವಿರುದ್ದ ತಿರುಗಿ ಬಿದ್ದಿದ್ದಾರೆ. ರಬಕವಿಯಂತಹ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಕೇಸರಿ ಶಾಲು ಧರಿಸಿ ತಮ್ಮ ಅಧ್ಯಾಪಕರೊಬ್ಬರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತೀವ್ರವಾದ ಪ್ರತಿಭಟನೆ ಕೈಗೊಳ್ಳುತ್ತಾರೆ ಮತ್ತು ಇಡಿ ಮಲೆನಾಡಿನ ಜಿಲ್ಲೆಗಳಲ್ಲಿ ಈ ಹೋರಾಟದ ಕಿಚ್ಚು ಪ್ರಖರವಾಗಿ ಕಾಣಬಹುದಾಗಿದೆ.
ಜೈ ಶ್ರೀರಾಮ್ ಕೂಗಿದಕ್ಕೆ ಪ್ರತಿಯಾಗಿ ಅ ಹೋ ಅಕ್ಬರ್ ಎಂದು ಧೈರ್ಯದಿಂದ ಕೂಗು ಹಾಕಿದ ಮಸ್ಕಾನ್ ಳನ್ನು ವೀರ ವನಿತೆಯ ರೀತಿ ಬಿಂಬಿಸಿ ಹಿಜಾಬ್ ಹೋರಾಟದಲ್ಲಿಯೂ ಹಿಂದೆ ನಡೆದ ಸಿಎಎ ಹೋರಾಟದ ತಂತ್ರಗಾರಿಕೆಯನ್ನೇ ಬಳಸಿ ಈಕೆಯನ್ನು ಬಹು ದೊಡ್ಡ ಸಾಹಸಿ ಎಂದು ಹಣೆಪಟ್ಟಿ ಕಟ್ಟಿ ಮೆರೆಸುವ ಪ್ರಯತ್ನ ನಡೆದಿದೆ. ಈಕೆಗೆ ಜಮಾತೆ ಎ ಉಲಿಮಾ ಸಂಘಟನೆಯು ೫ಲಕ್ಷ ರು. ಬಹಮಾನವನ್ನೂ ಘೋಷಿಸಿದೆ. ಕಾವೇರಿ ನೀರಿಗಾಗಿ ರಾಜ್ಯದ
ಹಿತ ಕಾಯಲು ಬೀದಿಗಿಳಿಯುತ್ತಿದ್ದ ಮಂಡ್ಯದ ಯುವಕರು, ಇಂದು ಹಿಜಾಬ್ ವಿರುದ್ದ ಸಿಡಿದೆದ್ದು ಹೋರಾಟದ ಹಾದಿ ತುಳಿದಿರುವ ಹಿಂದಿನ ಸಿಟ್ಟು ಒಂದು ಸಮುದಾಯದವರು ತಮ್ಮ ಮತಾಂಧತೆಯ ನೀತಿಗೆ ಸರಕಾರ ತಲೆಬಾಗಬೇಕು ಎಂದು ಆಗ್ರಹಿಸಿ ತೋರುತ್ತಿರುವ ಹಠಮಾರಿ ಧೋರಣೆಯುಮಂಡ್ಯದ ಯುವಕರನ್ನು ತೀವ್ರವಾಗಿ ರೊಚ್ಚಿಗೆಬ್ಬಿಸಿದೆ. ಪ್ರಿಯಾಂಕ ವಾದ್ರಾ ತಮ್ಮ ಟ್ವೀಟ್ ಮೂಲಕ ಮಹಿಳೆಯರು ಬಿಕನಿಯಾಗಲೀ ಗೂಂಗಟ್ ಮತ್ತು ಜೀನ್ಸ್ ಧರಿಸುವುದು ಅವರಿಚ್ಛೆ ಎಂದಾಗ ಅದಕ್ಕೆ ಮಂಡ್ಯ ಸಂಸದೆ ಸುಮಲತಾರವರು ಬಿಕನಿ ಧರಿಸುವುದು ಬೀಚ್‌ನಲ್ಲಿ ಶಾಲೆಯಲ್ಲಿ ಅಲ್ಲ ಪ್ರತಿ ಯೊಂದು ಸ್ಥಳಕ್ಕೂ ಸಂಬಂಧಪಟ್ಟಂತೆವಸಸಂಹಿತೆ ಎಂಬುದು ಇದೆ ಎಂದು ತಿರುಗೇಟು ನೀಡಿರುವ ಸಂಸದೆ ಜಿಲ್ಲೆಯ ಯುವಕರ ಭಾವನೆಗೆ ಪೂರಕವಾಗಿ ನಡೆದುಕೊಂಡು ಜಾಣ್ಮೆ ತೋರಿದ್ದಾರೆ.
ಕಾಂಗ್ರೆಸ್ ಕಾನೂನು ಘಟಕದ ಮುಖ್ಯಸ್ಥ ದೇವದಾಸ್ ಕಾಮತ್ ರಾಜ್ಯ ಹೈಕೋರ್ಟ್‌ನಲ್ಲಿ ಹಿಜಾಬ್ ಪರ ವಕಾಲತ್ತು ವಹಿಸಿದರೆ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ರವರು ಮುಸ್ಲಿಂ ಮಹಿಳೆಯರನ್ನು ಹಿಜಾಬ್ ನೆಪವೊಡ್ಡಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ ಇದೊಂದು ಗಂಭೀರ ವಿಷಯ ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ವಾದ ಮುಂದಿಟ್ಟರು. ಅಯೋಧ್ಯೆ ರಾಮ ಮಂದಿರದ ಪ್ರಕರಣದ ತ್ವರಿತ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಮುಂದಾದ ಸಂದರ್ಭದಲ್ಲಿಯೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅದನ್ನು ವಿರೋಧಿಸಿ ವಿಚಾರಣೆಗೆ ಅಡ್ಡಿಪಡಿಸಲು ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ತಡೆಯೊಡ್ಡುವ ಕುತಂತ್ರ ನಡೆಸಿದ್ದರು.
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಕರ್ನಾಟಕ ಮೂಲದ ಬಿ.ವಿ. ಶ್ರೀನಿವಾಸ್ ಅವರು ಕೂಡ ಹಿಜಾಬ್ ಪರವಾಗಿ ಸುಪ್ರೀಂಕೋರ್ಟ್ ಕದವನ್ನು ತಟ್ಟಿದ್ದಾರೆ ಯಾರೋ ಎತ್ತಿಕಟ್ಟಿದ ಕೂಡಲೇ ಸಾವಿರಾರು ವಿದ್ಯಾರ್ಥಿಗಳು ಉದ್ವೇಗದಿಂದ ಬೀದಿಗಿಳಿದು ಹೋರಾಟಕ್ಕೆ ಮುಂದಾಗುವುದಿಲ್ಲ. ಬಲವಾದ  ರಣವಿರುವ ಕಾರಣ ಅನೇಕ ಜಿಲ್ಲೆಗಳಲ್ಲಿ ಕೇಸರಿ ಶಾಲು ಧರಿಸಿದ ಯುವಕರ ದಂಡೇ ಬೀದಿಗೆ ಬಂದಿದೆ. ಅನೇಕ ವಿದ್ಯಾರ್ಥಿನಿಯರು ಹಿಜಾಬ್ ವಿರುದ್ಧ ತಮ್ಮ ನಿಲುವನ್ನು ನುರಿತ ರಾಜಕಾರಣಿಗಳನ್ನು ಮೀರಿಸುವ ಪ್ರಬುದ್ಧತೆಯಿಂದ ದೃಶ್ಯ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಎಂತಹವರನ್ನೂ ಚಕಿತಗೊಳಿಸುತ್ತದೆ. ಇವರ ವರಸೆಯನ್ನು ನೋಡಿದರೆ ಭವಿಷ್ಯದ ನಾಯಕರು ಈ ಹೋರಾಟದಿಂದ ಹೊರಹೊಮ್ಮಿದರೆ ಆಶ್ಚರ್ಯವಿಲ್ಲ.
ನೆನ್ನೆ ಮೊನ್ನೆಯವರೆಗೂ ಸ್ನೇಹಿತರಾಗಿದ್ದವರು ತಮ್ಮ ಸಹಪಾಠಿಗಳು ಧಾರ್ಮಿಕ ಆಚರಣೆಯ ನೆಪದಲ್ಲಿ ಪ್ರತ್ಯೇಕತೆಗೆ ಒತ್ತಾಯಿಸುತ್ತಿರುವವರ ವಿರುದ್ದ  ತಮ್ಮ ಸ್ನೇಹವನ್ನು ಮರೆತು ಇವರ ಪ್ರತ್ಯೇಕತಾ ಮನೋಭಾವದ ವಿರುದ್ಧ ಬಲವಾಗಿ ಸಿಡಿದೆದ್ದಿzರೆ ಎಂದರೆ ಪ್ರಾಯಶ: ಇವರಲ್ಲಿ ಮಡುಗಟ್ಟಿದ್ದ ಕೋಪವನ್ನು ಕೇಸರಿ ಶಾಲು ಮೂಲಕ ಹೊರ ಬರುತ್ತಿದೆ ಈ ಸಾವಿರಾರು ಯುವಕ ಯುವತಿಯರ ಪಡೆ ಮುಂದಿನ ವರ್ಷದ ವೇಳೆಗೆ ಮತದಾನದ ಹಕ್ಕು ಪಡೆಯುತ್ತಾರೆ ಅವರ ಸಾತ್ವಿಕ ಕೋಪವನ್ನು ಹಿಗ್ಗಾಮುಗ್ಗಾ ಟೀಕಿಸಿ ಮತಾಂಧತೆಗೆ ಬೆಂಬಲ ಸೂಚಿಸುತ್ತಿರುವ ಮುಖಂಡರನ್ನು ಸಾರಾಸಗಟಾಗಿಇವರು ತಿರಸ್ಕರಿಸುವುದು ನಿಶ್ಚಿತ ಎಂಬುದನ್ನು ಕಾಂಗ್ರೆಸ್ ಮರೆತಿದೆ.
ಅನೇಕ ದಶಕಗಳ ತರುವಾಯ ಕಾಲೇಜ್ ವಿದ್ಯಾರ್ಥಿಗಳು ಹೋರಾಟದ ಹಾದಿಯನ್ನು ತುಳಿದು ಬೀದಿಗೆ ಬಂದಿದ್ದು ಕಾರಣ ಮತೀಯ ವಿಚಾರವೆ ಆಗಿದ್ದರೂ ಇಂದಿನ ಯುವ ಪೀಳಿಗೆಯು ಧರ್ಮದ ಆಧಾರದ ಮೇಲೆ ತಾರತಮ್ಯ ಸಹಿಸುವುದಿಲ್ಲ ಅದಕ್ಕಾಗಿ ತಾವೂ ಕೇಸರಿ ಶಾಲು ಧರಿಸಿ ಹೋರಾಟದ ಅಖಾಡಕ್ಕೆ ಧುಮಕಲು ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.