ಮರೆಯಬಾರದ ಸೂರ್ಯದೇಗುಲ ಮೊದೆರಾ
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
ಇದರ ಎದುರಿಗೆ ಏಳು ಅಚ್ಚರಿಯಲ್ಲಿ ಒಂದು ಎನ್ನುವ ಹೆಗ್ಗಳಿಕೆಯ ತಾಜ್‌ಮಹಲ್ ಸಪ್ಪೆ. ಕಾರಣ ಮೊದೆರಾದ ಯಾವ ಭಾಗದಲ್ಲಿ ಯಾವ ಜಾಗದಲ್ಲಿಕಲೆಯ ಕುಸುರಿ ಕೆಲಸ ಮಾಡದೆ ಬಿಟ್ಟಿದ್ದಾರೆ ಎಂದೇ ಹುಡುಕಬೇಕು ಆ ಮಟ್ಟಿಗಿನ ತಾದಾತ್ಮ್ಯವಾದ ಶಿಲ್ಪಕಲೆಯ ಕೈ ಚಳಕ ಕಾಲಿ ಟ್ಟಲ್ಲ ತೊಡರುತ್ತದೆ.
ಸತತ ಸಂಪತ್ತಿಗಾಗಿ ಹದಿನೇಳು ಬಾರಿದಂಡಯಾತ್ರೆಗೆ ಸಿಲುಕಿದ ಸೋಮನಾಥ ನಮ್ಮ ನಾಡಿನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು…ಅದರ ಬಗ್ಗೆಗೊತ್ತು, ದೇಶದ ಪಶ್ಚಿಮ ಕರಾವಳಿಯ ದ್ವಾರಕೆ, ವಿಶ್ವ ಶ್ರೇಷ್ಠ ಮರಳುಗಾಡು ಕಛ್ ಮತ್ತು ಬುಝ, ವಾಣಿಜ್ಯ ನಗರಿ ಅಹಮದಾಬಾದ್, ಜಗತ್ತಿಗೆ ಸೀರೆ ಪೂರೈಸುತ್ತ ಮನಸೂರೆಗೊಳ್ಳುವ ಸೂರತ್, ಶಿಸ್ತಿಗೆ ಹೆಸರಾದ ಗಾಂಧಿನಗರ, ಹಸಿರು ಕಾಡಿಗೆ ಪ್ರಸಿದ್ಧಿಯಾದ ಡಾಂಗ, ಶೈಕ್ಷಣಿಕವಾಗಿ ಹೆಸರುವಾಸಿಯಾದ ರಾಜಕೋಟ್, ಅದ್ಭುತ ಕಾಲುವೆ ವ್ಯವಸ್ಥೆಯ ನರ್ಮದೆ ರಾಜ್ಯದ ನಯಾಗರಾ ಎಂದೇ ಪ್ರಸಿದ್ಧಿಯಾದ ಗೀರಾಧೂದ್ ಎಲ್ಲವೂ ಗುಜರಾತಿನ ಹೆಸರಿನೊಂದಿಗೆ ತಳುಕು ಹಾಕಿಕೊಂಡು ಕೇಳಿ ಬರುತ್ತವೆ.
ಆದರೆ, ಸಾವಿರ ವರ್ಷಗಳ ಹಿಂದೆ ನಿರ್ಮಿತವಾಗಿ ದೇಶದ ಕೆಲವೇ ಸೂರ್ಯ ದೇವಾಲಯದಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಿರುವ, ಸೌಂದರ್ಯ ಮತ್ತು ಶಿಲ್ಪಕಲೆಯಲ್ಲಿ ಕೋನಾರ್ಕ್ ಅನ್ನೂ ಮೀರಿಸಿರುವ ಅಗ್ಗಳಿಕೆ ಹೊಂದಿರುವ ಮೊದೆರಾ ಮಾತ್ರ ತಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ. ಕಾರಣ ಅಂದಿನಿಂದ ಇಂದಿನವರೆಗೂ ಗುಜರಾತಿನ ಭವ್ಯತೆ ಯಲ್ಲಿ ಇತರೆ ಬೆರಗುಗಳ ಭರಾಟೆಯಲ್ಲಿ ತನ್ನ ಗುರುತನ್ನು ಕಳೆದುಕೊಳ್ಳುತ್ತಿರುವ ಈ ಭವ್ಯ ಸೂರ್ಯದೇವಾ ಲಯ ಬಹುಶಃ ಪ್ರಚಾರದ ಕೊರತೆ ಬಿಟ್ಟರೆ ಬೇರೆ ಸಮಸ್ಯೆಗೆ ಈಡಾಗಿಲ್ಲ.
ಗುಜರಾತಿನ ವಾಣಿಜ್ಯ ನಗರಿ ಅಹಮದಾಬಾದಿನಿಂದ ಹೆದ್ದಾರಿಯ ಮೇಲೆ ಬಲಕ್ಕೆ ಚಲಿಸಿದರೆ ಸಿಗುವ ಮತ್ತೊಂದು ಜಿ ಮೆಹಸಾಣ. ಬಿಸಿಲ ಪ್ರಖರತೆ ಮತ್ತು ಗುಜ್ಜರ ಸಾಂಪ್ರದಾಯಿಕತೆಗೆ ಹೆಸರಾದ ಮೆಹಸಾಣದಿಂದ 30 ಕಿ.ಮೀ. ದೂರದಲ್ಲಿದೆ ಮೊದೆರಾ ಸೂರ್ಯ ದೇವಾಲಯ. ಈ ದೇವಾಲಯಕ್ಕೆ ವಿವರಣೆ ಬೇಕಿಲ್ಲ. ಸ್ಥಳದ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಶಿಲ್ಪಕಲೆ ತಾನಾಗಿಯೇ ನಮ್ಮನ್ನು ಹಂತ ಹಂತವಾಗಿ ಇತಿಹಾಸ ಮತ್ತು ಸಾಂಸ್ಕೃತಿಕ ನಗರಿಯೊಳಕ್ಕೆ ಎಳೆದೊಯ್ಯುತ್ತವೆ.
ಬಹುಶಃ ದೇವರು ನಮ್ಮ ಭಕ್ತಿ ಮತ್ತು ಧ್ಯಾನದ ಕಾರಣಕ್ಕೆ ನಮ್ಮನ್ನು ರಕ್ಷಿಸುತ್ತಾನೆ ಎಂದು ಮೆಹಸಾಣದ ಪಂಡಿತರು ನಂಬಿ ಕೂರದೆ ಕೈಗೆ ಶಸವನ್ನೂ ಎತ್ತಿಕೊಳ್ಳುವ ಅಭ್ಯಾಸ ಮಾಡಿದ್ದರೆ, ಕೆಲವೇ ಕೆಲವು ನೂರು ಜನ ಮುಸ್ಲಿಂ ದಾಳಿಕೋರರ ಕೈಗೆ ಸಿಕ್ಕು ಸಾಲುಸಾಲು ಹೆಣವಾಗುವುದರೊಂದಿಗೆ ದೇವರ  ಸಹಿತ ಲೆಕ್ಕಕ್ಕೆ ಸಿಗದಷ್ಟು ಅಗಾಧ ಸಂಪತ್ತನ್ನೂ ಇಲ್ಲಿ ಉಳಿಸಿಕೊಳ್ಳಬಹುದಿತ್ತು. ಆದರೆ ಅದ್ಯಾಕೋ ಭಾರತ ದುದ್ದಕ್ಕೂ ಗುರುಕುಲದಲ್ಲಿ ಅಗತ್ಯವಾಗಿ ಕಲಿಸಬೇಕಾಗಿದ್ದಶಾಸ್ತ್ರದ ಜತೆ ಶಸವನ್ನೂ ಹಿಡಿಯುವ ಕಲೆ ಮೊದಲಿನಿಂದಲೂ ಬರಲೇ ಇಲ್ಲ. ನಮ್ಮ ಪುಣ್ಯಕ್ಕೆ ಕನ್ನಡ ಮೊದಲ ಸಾರ್ವಭೌಮಸಾಮ್ರಾಜ್ಯ ಸ್ಥಾಪಿಸಿದ ಮಯೂರ ಶರ್ಮ ಕದಂಬ ಮೂಲತಃ ಬ್ರಾಹ್ಮಣನಾದರೂ ಸ್ವತಃ ಪಂಡಿತನಾದರೂ ತೀರ ಐನ್ ಟೈಮಿನಲ್ಲಿ ಕೈಗೆ ಕತ್ತಿ ಎತ್ತಿ ಕೊಂಡು ಬಿಟ್ಟ ನೋಡಿ.
ಅಲ್ಲಿಗೆ ಕರ್ಣಾಟ ಬಲ ಎಂಬ ಹೆಸರಿನ ಈ ಪ್ರದೇಶ ಕುಂತಳದ ಹೃದಯ ಭಾಗವಾದ ವೈಜಯಂತಿಪುರ ತನ್ನ ಪತಾಕೆಯನ್ನು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲು ಸಾಧ್ಯವಾಯಿತು. ಹೀಗಾಗದೆ ಉಳಿದ ಪರಿಣಾಮ ಮೊದೆರಾದಂತಹ ವಿಶ್ವವಿಖ್ಯಾತವಾಗಬಹುದಾಗಿದ್ದ ಪ್ರಾಂಗಣಗಳು ಇವತ್ತು ಆಯ ರಾಜ್ಯಕ್ಕೆ ಸೀಮಿತವಾಗುತ್ತಿವೆ.
ಇದರ ಎದುರಿಗೆ ಏಳು ಅಚ್ಚರಿಯಲ್ಲಿ ಒಂದು ಎನ್ನುವ ಹೆಗ್ಗಳಿಕೆಯ ತಾಜ್‌ಮಹಲ್ ಸಪ್ಪೆ ಸಪ್ಪೆ. ಕಾರಣ ಮೊದೆರಾದ ಯಾವ ಭಾಗದಲ್ಲಿ ಯಾವ ಜಾಗದಲ್ಲಿ ಕಲೆಯ ಕುಸುರಿ ಕೆಲಸ ಮಾಡದೆ ಬಿಟ್ಟಿzರೆ ಎಂದೇ ಹುಡುಕಬೇಕು ಆ ಮಟ್ಟಿಗಿನ ತಾದಾತ್ಮ್ಯವಾದ ಶಿಲ್ಪಕಲೆಯ ಕೈ ಚಳಕ ಕಾಲಿಟ್ಟಲ್ಲ ತೊಡರುತ್ತದೆ. ಶಿಲ್ಪ ಕಲಾಕೃತಿಯ ಅದ್ಭುತ ಕೈಚಳಕ ಸ್ಕಂದ ಮತ್ತು ಬ್ರಹ್ಮ ಪುರಾಣದ ಕಥಾನಕಗಳ ಚಿತ್ರಣ ಈ ದೇವಾಲಯದ ಇಂಚು ಇಂಚಿನಲ್ಲೂ ಕಂಗೊಳಿಸುವುದು ಎದ್ದು ಕಾಣುವ ಕಸಬುಗಾರಿಕೆ. ಸೂರ್ಯನ ಮೊದಲ ಕಿರಣಗಳು ನೇರವಾಗಿ ದೇವಾಲಯ ಮೂರ್ತಿಯ ಮೇಲೆ ನಿರಂತರವಾಗಿ ಬೀಳುವಂತೆ ಪ್ರವೇಶ ದ್ವಾರವನ್ನು ನಿರ್ಮಿಸಿರುವ ಹೆಗ್ಗಳಿಕೆಯಲ್ಲಿ ಬದಲಾಗುವ ಸೂರ್ಯನ ಪಥದ ವ್ಯತ್ಯಾಸದಲ್ಲೂ ಕಿರಣಗಳು ವ್ಯತ್ಯಾಸವಾಗದ ತಂತ್ರeನ ಇಲ್ಲಿನ ದೇಗುಲದ್ದಾಗಿದೆ.
ಸೂರ್ಯ ಯಾವುದೇ ದಿಕ್ಕಿಗೆ ಚಲಿಸಲಿ ಬೀಳುವ ಬಿಸಿಲಿನ ಕಿರಣಗಳು ನೇರವಾಗಿ ಗರ್ಭಗುಡಿ ಪ್ರವೇಶಿಸುತ್ತವೆ. ಪ್ರಸ್ತುತದಲ್ಲಿ ದೇವರ ಮೂರ್ತಿ ಅಲ್ಲಿ ಇಲ್ಲದಿದ್ದರೂ ಪ್ರಾಚೀನ ತಾಂತ್ರಿಕತೆಗೆ ವ್ಯತ್ಯಾಸವಾಗಿಲ್ಲ. ಅಗಾಧ ವಿಸ್ತಿರ್ಣ ಪ್ರದೇಶದಲ್ಲಿ ಹರಡಿಕೊಂಡಿರುವ ಮೊದೆರಾ ಕ್ರಿ.ಶ.1026ರಲ್ಲಿ ಸೂರ್ಯ ನನ್ನು ಕುಲದೇವರನ್ನಾಗಿ ಸ್ವೀಕರಿಸಿದ್ದ ಸೊಲಂಕಿ ರಾಜ ವಂಶಸ್ಥ ಭೀಮದೇವನಿಂದ ಕಟ್ಟಲ್ಪಟ್ಟ ಅಪರೂಪದ ಶಿಲ್ಪ ಕಲಾಕೃತಿ. ಇತಿಹಾಸದಲ್ಲಿಮೊಹೆರ್‌ಕಪುರ, ಧರ್ಮಾರಣ್ಯ, ಸತ್ಯಮಂದಿರ ಮತ್ತು ವೇದ ಭವನ ಇತ್ಯಾದಿ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಮೊದೆರಾ ಸುಮಾರು ಮೂರು ಲಕ್ಷ ಬ್ರಾಹ್ಮಣ ಮತ್ತು ಬನಿಯ ಕುಟುಂಬಗಳ ತಾಯ್ನಾಡಾಗಿತ್ತು. ದೇವತೆ ಮಾತಂಗಿ ಇಲ್ಲಿ ನೆಲೆಸಿದ್ದಳೆನ್ನುವುದು ಪ್ರತೀತಿ. ರಾಜಪುತರ ಕೊನೆಯ ಅರಸುಕರ್ಣದೇವ ವಾಘೇಲಾ1356ರಲ್ಲಿ ಮುಸ್ಲಿಂ ಸೇನಾಪತಿ ಅಫ್ಜಲ್‌ಖಾನನಿಂದ ಪರಾಭವಗೊಂಡ ಮೇಲೆ ಈ ಪ್ರದೇಶ ಅವನತಿಯತ್ತ ಸಾಗಿತು.
ಮುಸ್ಲಿಂ ಆಳ್ವಿಕೆಗೊಳಪಟ್ಟಲ್ಲ ನಡೆದ ದಾಳಿಗಳಂತೆ ಇಲ್ಲೂ ಸಂಪತ್ತಿಗಾಗಿ ದೌರ್ಜನ್ಯ ನಡೆಯಿತು. ಸಿಕ್ಕ ದೇವಾಲಯವನ್ನೆಲ್ಲ ಹಾಳುಗೆಡವಿದ ಮುಸ್ಲಿಂ ಸೈನ್ಯದ ಮುಂದಿನ ಗುರಿ ಈ ಮೊದೆರಾ ಆಗಿತ್ತು. ಆದರೆ ಮೋಧಾ ಬ್ರಾಹ್ಮಣರು ಮತ್ತು ಬನಿಯಾಗಳು ಜಂಟಿಯಾಗಿ ಸಮರ್ಥವಾಗಿ ವರ್ಷಗಳ ಕಾಲಮೊದೆರಾಗೆ ಕಾಲಿಡದಂತೆ ಮುಸ್ಲಿಮ್ ಸೈನ್ಯವನ್ನು ತಡೆದರು. ಜೇಸ್ಠಿಮಲ್ಲ ಎಂಬ ಬ್ರಾಹ್ಮಣ ಮುಖಂಡ, ಅಖಂಡ ಒಂದು ವರ್ಷ ಕಾಲ ಒಬ್ಬೇ ಒಬ್ಬ ಮುಸ್ಲಿಂ ಧಗಾಕೋರ ಒಳನುಸುಳದಂತೆ ತಡೆದ.
ಅವನ ಜೊತೆಗೂಡಿದ ವಿಠಲೇಶ್ವರ್ ಎಂಬ ಬನಿಯ ಇನ್ನಷ್ಟು ಕಾಲ ದಾಳಿಯಿಂದ ಹಿಮ್ಮೆಟ್ಟಿಸಿದ. ಕೊನೆಗೂ ಮುಸ್ಲಿಂ ಭಂಡರು ಮೋಸತನಕ್ಕಿಳಿದರು. ಮೊದೆರಾ ಸಂಪರ್ಕವನ್ನೆ ಕತ್ತರಿಸಿ ವರ್ಷಾನುಗಟ್ಟಲೆ ಕಾಯ್ದು ಕೂತ ಸೈನ್ಯದೊಂದಿಗೆ ರಾಜಿಗೆ ಮುಂದಾಗಬೇಕಾಯಿತು. ಸತತ ಸೋಲಿನಿಂದ ಕಂಗೆಟ್ಟಿದ್ದ ಮುಸ್ಲಿಂ ಮುಖಂಡ ಘಜನಿ, ಸಂಧಾನಕ್ಕೆ ಕರೆ ಕಳುಹಿಸಿದ. ಅದರ ಪ್ರಕಾರ ಐನೂರು ಚಿನ್ನದ ನಾಣ್ಯವನ್ನು ಮೊದೆರಾ ಸೂರ್ಯ ದೇವಾಲಯದಲ್ಲಿ ನೀಡಿ ಯುದ್ಧ ನಿಲ್ಲಿಸುವ ಸೂಚನೆ ಕೊಟ್ಟ. ಆ ಮೂಲಕ ಮೊದೆರಾವರೆಗೂ ಪ್ರವೇಶ ದೊರಕಿಸಿಕೊಳ್ಳುವ ಮೋಸದ ಯತ್ನಕ್ಕೆ ಯಶಸ್ಸು ಸಿಕ್ಕಿತ್ತು.
ಇತ್ತ ಮೊದೆರಾದ ಬಾಗಿಲು ತೆರೆದು ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದರೆ ಮೋಸದ ದಾಳಿ ನಡೆಸಿದ ಮುಸ್ಲಿಂ ಸೇನಾಪತಿ ಮೊದೆರಾದೊಳಕ್ಕೆ ಸೈನ್ಯ ನುಗ್ಗಿಸಿದ. ಮತ್ತೆ ಮೂರು ತಿಂಗಳು ಕಾಲ ಹಿಮ್ಮೆಲ್ಪಟ್ಟ ಸೈನ್ಯದಿಂದ ತಪ್ಪಿಸಲು ಮೊದೆರಾ ಸೂರ್ಯ ವಿಗ್ರಹವನ್ನು ಎದಿರುಗಿನ ಕುಂಡದಲ್ಲಿ ಮುಳುಗಿಸಿದ ಮೋಧರು’ ಪ್ರಾಣದ ಹಂಗು ತೊರೆದು ಬಡಿದಾಡಿದರು. ಬದುಕುಳಿದವರು ವಲಸೆ ಹೋಗಿ ಗುಜ್ಜರ ಇತರ ಸ್ಥಳಕ್ಕೆ ಸೇರ್ಪಡೆ ಯಾದರು. ಆದರೆ ಅಂದು ಘಾಸಿಗೊಳಿಸಿದ ಮುಸ್ಲಿಂ ದಾಳಿಯಿಂದ ಚೇತರಿಸಿಕೊಳ್ಳದ ಮೊದೆರಾ ನಂತರ ಬಂದ ಬರೋಡಾದ ಸಯಾಜಿರಾವ್ ಗಾಯಕ್ವಾಡ್ ವಂಶದವರೆಗೂಹಾಳುಬಿದ್ದಿತ್ತು. ಸಯ್ಯಾಜಿರಾವ್ ಮೊದೆರಾದ ಚೇತರಿಕೆಗೆ ಬಹ್ವಂಶ ಪ್ರಯತ್ನಪಟ್ಟನಾದರೂ ಮೊದಲಿನ ಖದರಿಗೆ ಹಿಂದಿರುಗಲಿಲ್ಲ.
ಕಾರಣ ಹೆಚ್ಚಿನಂಶ ಮೊದೆರಾ ತೊರೆದಿದ್ದ ಮೂಲ ಬ್ರಾಹ್ಮಣ ಮತ್ತು ಬನಿಯಾಗಳು ಅಲ್ಲಲ್ಲಿ ನೆಲೆನಿಂತು ಬಿಟ್ಟಿದ್ದರು. ಸಯಾಜಿರಾವ್ ಸಾಕಷ್ಟು ಪ್ರಯತ್ನದ ನಂತರ ಮೋಧರು ಸೂರ್ಯದೇವಾಲಯಕ್ಕೆ ಕಾಯಕಲ್ಪ ಕೊಟ್ಟರಾದರೂ ಹಿಂದಿನ ವರ್ಚಸ್ಸು ಮರಳಿ ಪಡೆಯುವಲ್ಲಿ ಮೊದೆರಾ ಸಫಲ ವಾಗಲಿಲ್ಲ. ಕಾರಣ ಮೂಲ ಶಿಲ್ಪಕಲಾ ಶ್ರೇಷ್ಟಿಗಳಾಗಿದ್ದ ಜೇಷ್ಠಿಮಲ್ಲನ ಕುಟುಂಬ ಕೊಲೆಯಾಗಿ ಹೋಗಿತ್ತು.
ಆಧುನಿಕ ಯುಗದಲ್ಲಿ ವಿರಂಗಮ್ನ ನಾಥುಲಾಲ್ ಗಿರಿಧರಲಾಲ್ ಇದರ ಉದ್ಧಾರಕ್ಕೆ ಸಾಕಷ್ಟು ಶ್ರಮಿಸಿದರು. 1962 ರಲ್ಲಿ ಪುರಾತನ ಶೈಲಿಯ  ಪುನರು ಜ್ಜೀವನಗೊಂಡ ಮೊದೆರಾದಲ್ಲಿ ಇವತ್ತಿಗೂ ರಾಜ ಭೀಮದೇವನ ಚಿತ್ರಣ ವೊಂದು ಇದೇ ಕಂಭಗಳ ಮಧ್ಯೆ ಕಂಡೂ ಕಾಣದಂತೆ ಕೊರೆಯಲಾಗಿದೆ. ನಿರ್ದಿಷ್ಟ ಕೋನದಲ್ಲಿ ಮಾತ್ರ ನಿಂತು ನೋಡಿದಾಗ ಮಾತ್ರ ಅವನ ಮುಖದದರ್ಶನವಾಗುವಂತೆ ತಾಂತ್ರಿಕವಾಗಿ ಕಲೆಯಲ್ಲಿ ಕೊರೆದಿರುವ ಜೇಷ್ಠಿಮಲ್ಲನ ಕಲೆಯ ಅಚ್ಚರಿ ಆಗೀನ ಶಿಲ್ಪಕಲೆಯ ಬೆರಗಿಗೊಂದು ಕೈಗನ್ನಡಿ. ನೂರು ಚದರ ಅಡಿಯ ಚಚ್ಚೌಕದ ಸೂರ್ಯಕುಂಡ ದೇವರನ್ನು ಸ್ಥುತಿಸುತ್ತ ತರ್ಪಣ ನೀಡಲು ಅನುಕೂಲವಾಗುವಂತೆ ನಿರ್ಮಿಸಲಾದ ಭಾರಿ ಕೊಳ.
ಏಕಕಾಲಕ್ಕೆ ಯಾರಿಗೂ ತೊಂದರೆಯಾಗದಂತೆ 108 ಜನರಿಗೆ ವ್ಯವಸ್ಥಿತ ಜಾಗ ಕಲ್ಪಿಸುವ ತರ್ಪಣ ಸ್ಥಳ ಮೊದೆರಾದ ಅಚ್ಚರಿಯ ವಿನ್ಯಾಸಗಳಲ್ಲಿ ಪ್ರಮುಖ ವಾದುದು. 52 ಅಪರೂಪದ ಶಿಲಾ ಕೃತಿಗಳ ಕಂಭಗಳ ಮೇಲೆ ನಿರ್ಮಿಸಲಾಗಿರುವ ಸಭಾಮಂಟಪ, ೫೨ ಕಲಾಕೃತಿಯ ಕಂಭಗಳು ಈಗಲೂ ತಾಂತ್ರಿಕ ವಿಸ್ಮಯದ ಭಾಗ. ಚಿತ್ತಾರದ ಚಿತ್ರಗಳ ಈ ಸಭಾಮಂಟಪದ ಯಾವ ಕೋನದಿಂದಲೂ ಅಷ್ಟದಿಕ್ಕಿನಲ್ಲೂ ನೋಡಬಹುದಾದ ವಿನ್ಯಾಸ ವಿಸ್ಮಯಕಾರಿ. ಅಗಾಧ ಅಳತೆಯ ಕಂಭಗಳಿದ್ದರೂ ನೋಡುಗರಿಗೆ ಎಲ್ಲೂ ಅಡ್ಡವಾಗಿ ನಿಲ್ಲದ ಈ ವಿನ್ಯಾಸ ಮೊದೆರಾದ ಅಗ್ರ ಆಕರ್ಷಣೆಯ ಕೇಂದ್ರ.
ಸೂರ್ಯನನ್ನು ಪ್ರತಿಷ್ಠಾಪಿಸಿದ್ದ ಗುಂಡ ಮಂಟಪ ಕಮಲದ ವಿನ್ಯಾಸದ ಅಡಿಪಾಯ ಹೊಂದಿದ್ದು, ಮಾನವ ಮರಣ ಮತ್ತು ಜನನದ ಸರಣಿಯ ವಿಭಿನ್ನ ನಿಲುವುಗಳು ಚಿತ್ರಣ ಇದಕ್ಕೆ ಆಧಾರಿತ ಶಿಲಾಕೃತಿಗಳಾಗಿ ನಿರ್ಮಿಸಲಾಗಿದೆ. ಹಳೆಯ ವೈಭವವನ್ನು ಮೆರೆಸುವ ಮೊದೆರಾ ಹಬ್ಬ ಪ್ರತಿ ಜನೇವರಿ ಮೂರನೆಯ ವಾರ ಮೂರು ಅಥವಾ ಐದು ದಿನಗಳ ಕಾಲ ನೃತ್ಯ ವೈಭವವನ್ನು ಸಾರುವ ಕಾರ್ಯಕ್ರಮಗಳು ದೇಶಾದ್ಯಂತ ಜನಾಕರ್ಷಣೀಯ.
ಪ್ರವಾಸೋದ್ಯಮ ಮತ್ತು ಮೊದೆರಾವನ್ನು ವೈಭವೀಕರಿಸುವ ಈ ನೃತ್ಯಕಾರ್ಯಕ್ರಮದೊಂದಿಗೆ ಗುಜರಾತಿನ ಆಧುನಿಕತೆ ಹೊಡೆತದಲ್ಲೂ ಉಳಿಸಿ ಕೊಂಡಿರುವ ಸಾಂಪ್ರದಾಯಿಕ ಬದುಕಿನ ವಿಸ್ಮಯಕಾರಿ ಚಿತ್ರಣ ಮತ್ತು ಜನಜೀವನದ ಪರಿಚಯ ಮಾಡಿಕೊಡಲಾಗುತ್ತಿದೆ.