ಹವಾನಾ ಸಿಂಡ್ರೋಮ್ ಎಂಬ ನಿಗೂಢ ಕಾಯಿಲೆ
ವೈದ್ಯ ವೈವಿಧ್ಯ
ಡಾ.ಎಚ್‌.ಎಸ್‌.ಮೋಹನ್
@.
ಒಮ್ಮೆಲೇ ಆರಂಭವಾಗುವ ಶಬ್ದ ಅಥವಾ ಒತ್ತಡ ಒಂದು ಕಿವಿ ಅಥವಾ ಎರಡೂ ಕಿವಿಗಳ ಬದಿಯ ಭಾಗದಲ್ಲಿ ಅಥವಾ ತಲೆಯ ಬದಿಯ ಭಾಗದಲ್ಲಿ, ತಲೆತಿರುಗುವ ಅನುಭವ, ಸಮತೋಲನ ಕಳೆದುಕೊಳ್ಳುವುದು, ಜತೆಗೆ ಕಿವಿಯ ಭಾಗದಲ್ಲಿ ನೋವು. ಈ ಅಧ್ಯಯನದಲ್ಲಿ ೫ ಕಾರಣಗಳ ಬಗ್ಗೆ ಗಮನ ಹರಿಸಿದ್ದಾರೆ.
ನೀವು ಹವಾನಾ ಸಿಂಡ್ರೋಮ್ ಬಗ್ಗೆ ಕೇಳಿದ್ದೀರಾ? 10 ದಿನಗಳ ಮೊದಲು ನಾನೂ ಇದರ ಬಗ್ಗೆ ಕೇಳಿರಲಿಲ್ಲ. ಇತ್ತೀಚಿನ ‘ದಿ ಹಿಂದೂ’ ಪತ್ರಿಕೆ ಓದಿದಾಗಲೇ ಇಂತಹುದೊಂದು ಕಾಯಿಲೆ ಇದೆ ಎಂದು ಗೊತ್ತಾಗಿದ್ದು. ನಂತರ ಅಂತರ್ಜಾಲದಲ್ಲಿ ಹುಡುಕಿದಾಗ ಬಹಳಷ್ಟು ವಿವರಗಳು ತೆರೆದುಕೊಂಡವು.
ಈತ ಅಮೆರಿಕದ ಎಂಬಸ್ಸಿ ಕಚೇರಿಯ ಅಧಿಕಾರಿ. ರಾತ್ರಿ ಮಲಗಿದ ಇವರಿಗೆ ಏನೋ ವಿಪರೀತ ಶಬ್ದದ ಅನುಭವ ಆಗಿ ನಿದ್ರೆಯಿಂದ ಎದ್ದು ಕುಳಿತರು. ಮುಖದ ಆಚೆ ಮತ್ತು ಈಚೆ ಒಂದು ರೀತಿಯ ವಿಶಿಷ್ಟ ಒತ್ತಡದ ಅನುಭವ. ಯಾರೋ ಯಾವುದರಿಂದಲೋ ಇರಿದ ಹಾಗೆ ಅನಿಸಿತು. ನಂತರ ಒಂದು ರೀತಿಯ ತಡೆಯಲಾರದ ನೋವು, ವಾಂತಿ ಬರುವ ರೀತಿ, ನಂತರ ತಲೆ ಭಾರ, ತಲೆ ತಿರುಗುವ ಅನುಭವ. ಸ್ವಲ್ಪ ಹೊತ್ತಿನ ನಂತರ ಎಲ್ಲವೂ ಸ್ವಲ್ಪ ಸ್ವಲ್ಪ ಕಡಿಮೆಯಾಯಿತು. ಆದರೆ ಸಂಪೂರ್ಣ ಇಲ್ಲ ಎಂದಾಗಲಿಲ್ಲ. ತಲೆಭಾರ ಮತ್ತು ತಲೆ ತಿರುಗುವ ಅನುಭವ ಮುಂದುವರಿಯಿತು.
ಯಾವುದೇ ವಸ್ತುವಿನ ಮೇಲೆ ಗಮನ ಕೇಂದ್ರೀಕರಿಸಿ ಎಂಬಸ್ಸಿಯಲ್ಲಿ ಕೆಲಸ ಮಾಡು ವುದು ತುಂಬಾ ಕಷ್ಟವಾಯಿತು. 2016ರಲ್ಲಿ ಕ್ಯೂಬಾದ ಹವಾನಾದಲ್ಲಿ ಮೇಲಿನ ಅನುಭವವಾದ ಇವರಿಗೆ ನಿಜವಾಗಿಯೂ ಏನಾಗಿತ್ತು? ಏನಾಗಿರಬಹುದು ಎಂದು ಹೇಳುವುದು ಕಷ್ಟ. ಇದೇ ರೀತಿಯ ಹಾಗೂ ಸ್ವಲ್ಪ ಭಿನ್ನ ರೀತಿಯ ಅನುಭವಗಳು ಹವಾನಾದಲ್ಲಿದ್ದ ಹಲವಾರು ಅಮೆರಿಕದ ರಾಜತಾಂತ್ರಿಕರಿಗೆ ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿದ್ದ ಅಮೆರಿಕದ ರಾಜತಾಂತ್ರಿಕ ಮತ್ತು ಗೂಢಚರ್ಯೆ ಅಧಿಕಾರಿಗಳಿಗೆ ಅನುಭವ ಆಗಿವೆ. ಈ ರೀತಿಯ ಅನುಭವ ವಾದ ಹೆಚ್ಚಿನವರಿಗೆ ವಿಚಿತ್ರ ರೀತಿಯ ಶಬ್ದ ಕೇಳುವುದು – ಈ ಲಕ್ಷಣ ಎಲ್ಲರಲ್ಲಿಯೂ ಇತ್ತು.
ನಂತರ ತಲೆಯ ಭಾರ, ಒತ್ತಡದ ಅನುಭವ ಮತ್ತು ಕೆಲವು ವರ್ಣಿಸಲು ಸಾಧ್ಯವಿಲ್ಲದ ರೀತಿಯ ದೈಹಿಕ ಅನುಭವಗಳು. ಹಾಗಾದರೆ ಇವುಗಳಿಗೆ ಕಾರಣ ಏನಿರಬಹುದು? 2016 ರಲ್ಲಿ ಹವಾನಾದಲ್ಲಿ ಸುಮಾರು 16 ಜನರಿಗೆ ಈ ಬಗೆಯ ಅನುಭವ ಆಗಿದೆ ಎಂದು ಹೇಳಲಾ ಗಿದೆ. ಎಲ್ಲರಲ್ಲಿಯೂ ಮೇಲಿನದೇ ರೀತಿಯ ಲಕ್ಷಣ ಗಳಿರಲಿಲ್ಲ. ಆದರೆ ಹೆಚ್ಚಿನವರಲ್ಲಿ ವಿಚಿತ್ರ ಶಬ್ದ, ನಂತರ ನೋವು, ನಂತರ ತಲೆ ಮತ್ತು ಕಿವಿಯ ಭಾಗದಲ್ಲಿ ತೀವ್ರ ರೀತಿಯ ಒತ್ತಡ – ಇವು ಇದ್ದೇ ಇದ್ದವು.
ನಂತರ ಎಲ್ಲರಲ್ಲಿಯೂ ಮಾನಸಿಕ ಗಲಿಬಿಲಿ, ತಮ್ಮ ಇರುವಿಕೆಯ ಬಗೆಗೆ ತಪ್ಪು ಕಲ್ಪನೆಗಳು – ಹೀಗೆ ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ – ಎರಡೂ ರೀತಿಯ ವಿಚಿತ್ರ ಅನುಭವಗಳು ಆಗುತ್ತಿದ್ದವು. ಇವು ಹೆಚ್ಚಿನವರಿಗೆ ಅವರವರ ಮನೆಯ ಆಗಿವೆ. ಈ ಅನುಭವಗಳ ನಂತರ ಅವರುಗಳಿಗೆ ದೇಹವನ್ನು ಆಚೀಚೆ ಮಾಡಿ ಚಲಿಸುವಾಗ ಮೊದಲಿನಷ್ಟು ಸುಲಭ ಅನಿಸುತ್ತಿರಲಿಲ್ಲ. ಏನೋ ಕಷ್ಟದಲ್ಲಿ ಈ ಕ್ರಿಯೆ ಮಾಡಬೇಕಲ್ಲ ಅನಿಸುತ್ತಿತ್ತು.
2016ರಲ್ಲಿ ಹವಾನಾದ ನಂತರ 2017 ರಲ್ಲಿ ಚೀನಾದಲ್ಲಿನ ಗ್ವಾಂಗ್ ಜೌ ನಲ್ಲಿನ ಅಮೆರಿಕದ ಕಾನ್ಸುಲೇಟ್ ಅಧಿಕಾರಿಯೊಬ್ಬರಿಗೆ ಇದೇ ರೀತಿಯ ಅನುಭವ ಆಯಿತು. ಅದರ ನಂತರ ರಷ್ಯಾದಲ್ಲಿ, ಮಧ್ಯಪ್ರಾಚ್ಯದ ವಿವಿಧ ದೇಶಗಳ ನಂತರ ಯುರೋಪಿನ ಹಲವಾರು ದೇಶಗಳ ಅಮೆರಿಕದ ಅಧಿಕಾರಿಗಳಿಗೆ, ಮಿಲಿಟರಿಯವರಿಗೆ, ಗೂಢಚರ್ಯೆ ಕೆಲಸ ಮಾಡುತ್ತಿದ್ದವರಿಗೆ, ಹಾಗೆಯೇ ಅವರ ಸಂಸಾರದ ಇತರ ಸದಸ್ಯರುಗಳಿಗೂ ಈ ರೀತಿಯ ಅನುಭವಗಳಾಗಿವೆ. 2021ರ ಸೆಪ್ಟೆಂಬರ್ ನಲ್ಲಿ ಅಮೆರಿಕದ ಸಿಐಏ ನಿರ್ದೇಶಕ ಬಿಲ್ ಬರ್ನ್ಸ್ ಅವರ ಜತೆಗೆ ಭಾರತದಲ್ಲಿ ಸಂಚರಿಸುತ್ತಿದ್ದ ಅಧಿಕಾರಿಯೊಬ್ಬರಿಗೂ ಇದೇ ರೀತಿಯ ಅನುಭವ ಆಗಿತ್ತು. ಅದಕ್ಕೆ ಒಂದು ತಿಂಗಳು ಮೊದಲುಆಗಸ್ಟ್ 2021ರಲ್ಲಿ ವಿಯೆಟ್ನಾಂ ಗೆ ಭೇಟಿ ನೀಡಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಭೇಟಿ ಸ್ವಲ್ಪ ಮುಂದೆ ಹಾಕಲಾಗಿತ್ತು.
ಹನಾಯ್ ದಲ್ಲಿ ಒಬ್ಬ ಮುಖ್ಯ ಅಮೆರಿಕದ ರಾಜತಾಂತ್ರಿಕರಿಗೆ ದೇ ರೀತಿಯ ಅಸಹಜ ಅನುಭವ ಆಗಿದ್ದೇ ಅದಕ್ಕೆ ಕಾರಣ. ಹಾಗಾದರೆ ಈ ಎಲ್ಲ ವಿಚಿತ್ರ ಲಕ್ಷಣಗಳು ಏನನ್ನು ಸೂಚಿಸುತ್ತವೆ? ಇವುಗಳ ಕಾರಣಗಳ ಬಗ್ಗೆ ಹಲವು ಭಿನ್ನ ಅಭಿಪ್ರಾಯಗಳಿವೆ. ಆದರೆ ಮುಖ್ಯವಾಗಿ ಈ ವ್ಯಕ್ತಿಗಳ ಮೆದುಳಿಗೆ ಒಂದು ರೀತಿಯಲ್ಲಿ ಅಟ್ಯಾಕ್ ಅಥವಾ ದಾಳಿಯಾಗಿದೆ ಎಂಬುದು ಒಂದು ವಿವರಣೆ. ಮೆದುಳಿನ ಎಂ ಆ ಐ ಸ್ಕ್ಯಾನ್ ನಲ್ಲಿ ಮೆದುಳಿಗೆ ಹಾನಿಯಾಗಿದ್ದು ಗೊತ್ತಾಗಿದೆ. ಈ ದಾಳಿಯ ಹಿಂದೆ ಯಾರಿದ್ದಾರೆ? ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ.
ಅಮೆರಿಕದಲ್ಲಿನ ಹೆಚ್ಚಿನವರು ಇದು ರಷ್ಯಾ, ಕ್ಯೂಬಾ, ಚೀನಾದವರು ಇದರ ಹಿಂದೆ ಇzರೆ ಎಂದು ಸಂಶಯ ಪಡುತ್ತಾರೆ. ಇದುವರೆಗೆ ಜಗತ್ತಿನಾದ್ಯಂತ 1000 ಕ್ಕೂ ಹೆಚ್ಚಿನವರಿಗೆ ಈ ಅನುಭವವಾಗಿದೆ ಎಂಬುದು ಒಂದು ಅಂದಾಜು. ಇದರಲ್ಲಿ ಅಮೆರಿಕದವರೇ ಅಲ್ಲದೆ 2018ರಲ್ಲಿ ಹವಾನಾದಲ್ಲಿನ ಕೆನಡಾ ಎಂಬಸ್ಸಿಯ ಕೆಲವು ಅಧಿಕಾರಿಗಳಿಗೂ ಇದೇ ರೀತಿಯ ಅನುಭವಗಳಾಗಿವೆ ಎನ್ನಲಾಗಿದೆ.ಇತ್ತೀಚೆಗೆ ಈ ಬಗೆಗೆ ಅಮೆರಿಕದ ಗುಪ್ತಚರ ಇಲಾಖೆಯ ವರದಿ ಪ್ರಕಟವಾಗಿದೆ. ಇದು ಬಹುಶಃ   magneticenergyಅಥವಾ   – ಇದರಿಂದ ಆಗಿರಬಹುದು ಎಂಬುದು ಅದರಲ್ಲಿನ ಮುಖ್ಯಾಂಶ.
ಆದರೆ ಸ್ವಲ್ಪ ಮೊದಲು ಅಂದರೆ ಜನವರಿ 2022 ರಲ್ಲಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ () ಕೊಟ್ಟ ವರದಿ ಸ್ವಲ್ಪ ಭಿನ್ನವಾಗಿತ್ತು. ಹೊರಗಿನ ದೇಶದವರು ಯಾರೂ ಇದಕ್ಕೆ ಕಾರಣರಲ್ಲ. ಸಾಮಾನ್ಯ ದೈಹಿಕ ಕಾರಣವಿರಬಹುದು ಅಥವಾ ತೀವ್ರ ಮಾನಸಿಕ ಒತ್ತಡದಿಂದ ಹೀಗೆ ಆಗಿರಬಹುದು ಎಂಬುದು ಇದರ ಸಾರಾಂಶ. ಆದರೆ, ಮೊದಲು ತಿಳಿಸಿದ ಇತ್ತೀಚಿನ ಅಧ್ಯಯನದಲ್ಲಿ ಸಾವಿರಕ್ಕೂ ಹೆಚ್ಚು ಭಿನ್ನ ರೀತಿಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅವರ ಪ್ರಕಾರ ಈ ರೀತಿಯ ಅನುಭವಗಳು, ಲಕ್ಷಣಗಳನ್ನುವಾತಾವರಣ ಅಥವಾ ವೈದ್ಯಕೀಯ ಸಮಸ್ಯೆಗಳು ಎಂದು ಹೇಳಲು ಬರುವುದಿಲ್ಲ. ಯಾವುದೋ ಒಂದು ಹೊರಗಿನ ಶಕ್ತಿ ಅಥವಾ ಉಪಕರಣದಿಂದ ಹೀಗೆ ಆಗಿರಬೇಕು, ಆಗ್ತಾ ಇರಬೇಕು. ಈ ಅಧ್ಯಯನದಲ್ಲಿ ಇವರು 4 ಮುಖ್ಯ ಲಕ್ಷಣಗಳನ್ನು ಹೆಸರಿಸುತ್ತಾರೆ. ಒಮ್ಮೆಲೇ ಆರಂಭವಾಗುವ ಶಬ್ದ ಅಥವಾ ಒತ್ತಡ ಒಂದು ಕಿವಿ ಅಥವಾ ಎರಡೂ ಕಿವಿಗಳ ಬದಿಯ ಭಾಗದಲ್ಲಿ ಅಥವಾ ತಲೆಯ ಬದಿಯ ಭಾಗದಲ್ಲಿ, ತಲೆತಿರುಗುವ ಅನುಭವ, ಸಮತೋಲನ ಕಳೆದುಕೊಳ್ಳುವುದು, ಜತೆಗೆ ಕಿವಿಯ ಭಾಗದಲ್ಲಿ ನೋವು.
ಈ ಅಧ್ಯಯನದಲ್ಲಿ 5 ಕಾರಣಗಳ ಬಗ್ಗೆ ಗಮನ ಹರಿಸಿದ್ದಾರೆ. ಶ್ರವಣದ ತರಂಗಗಳು ( ), ವಾತಾವರಣದ ಅಂಶ ಗಳು, ರೇಡಿಯೋ ಫ್ರೀಕ್ವೆನ್ಸಿ ಮತ್ತು ವಿದ್ಯುತ್ ಅಯಸ್ಕಾಂತೀಯ ಶಕ್ತಿ. ಹಾಗೆಯೇ ಯಾವುದೋ ಹುದುಗಿಸಿಟ್ಟ ಅಥವಾ ಮುಚ್ಚಿಟ್ಟ ಉಪ ಕರಣವು ಈ ರೀತಿಯ ರೋಗ ಲಕ್ಷಣಗಳಗಳಿಗೆ ಕಾರಣವಾಗಿರಬಹುದೇ? ಎಂಬುದನ್ನು ಪರಿಶೀಲಿಸಿದ್ದಾರೆ.
ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಈ ಲಕ್ಷಣಗಳನ್ನು ಉಂಟುಮಾಡಲಾರವು. ಆದರೆ ಅವು ಉಂಟಾದ ಸಮಸ್ಯೆಯನ್ನು ಸಂಕೀರ್ಣಗೊಳಿಸಬಹುದು. ಈ ವಿಶಿಷ್ಟ    ಬಹುಶಃ ಹೊರಗಿನ ಯಾವುದೋ ಕಾರಣ ಅಥವಾ ಶಕ್ತಿ ಯಿಂದ ಉಂಟಾಗಿದೆ. ಹಾಗಾಗಿ ಮೊದಲು ತಿಳಿಸಿದ ಪಲ್ಸ ಡ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಎನರ್ಜಿ ಅದರಲ್ಲೂ ಮುಖ್ಯವಾಗಿ ರೇಡಿಯೋ ಫ್ರೀಕ್ವೆನ್ಸಿ ರೇಂಜ್ ನಂತಹುದು ಕಾರಣವಾಗಿರಬಹುದು. ಈ ತರಹದ ಶಕ್ತಿ ಒಂದು ಪ್ರಭಲವಾದ ಆಂಟೆನಾಗಳಿಂದ ಆಗಿರಬಹುದು ಎಂಬುದೊಂದು ಸಾಧ್ಯತೆ. ಇದನ್ನು ಬಚ್ಚಿಟ್ಟ ತಾಣದಿಂದ ಹೊರಹಾಕಿರಬಹುದು. ಹಾಗೆಯೇ ಇದಕ್ಕೆ ಬಹಳ ಕಡಿಮೆ ಶಕ್ತಿ ( )  ಬೇಕಾಗುತ್ತದೆ. ಇದು ಗಾಳಿಯಲ್ಲೂ ಚಲಿಸಬಹುದು, ಕಟ್ಟಡಗಳ ಗೋಡೆಗಳನ್ನು ತೂರಿಕೊಂಡು ಹೋಗಬಹುದು.
ಹಾಗೆಂದು ಇದು ಯಾವ ಉಪಕರಣ ಇರಬಹುದು ಎಂಬುದರ ಬಗ್ಗೆ ಈ ವರದಿಯಲ್ಲಿ ಸ್ಪಷ್ಟತೆ ಇಲ್ಲ. ಹಾಗೆಯೇ ಇದು ತೊಂದರೆ ಉಂಟು ಮಾಡಲು ಮಾಡಿದ ಕೃತ್ಯವೇ ಅಥವಾ ಒಂದು ರೀತಿಯ ಗೂಢಚರ್ಯೆಯ ರೀತಿಯೇ – ಈ ಬಗೆಗೂ ಸ್ಪಷ್ಟತೆ ಇಲ್ಲ. ಹಾಗೆಯೇ ಮತ್ತೊಂದು ಸಂಶಯದ ಪ್ರಕಾರ ಅಲ್ಟ್ರಾಸೌಂಡ್ ಎನರ್ಜಿ ಕಾರಣವಾಗಿರಬಹುದು. ಆದರೆ ಇದು ಕಟ್ಟಡದ ಒಳಗಡೆ ತೂರುವುದು ಕಷ್ಟ ಎನ್ನಲಾಗುತ್ತದೆ.ಈ ಬಗ್ಗೆ ಇನ್ನೂ ವಿವರವಾದ ಅಧ್ಯಯನ ಮತ್ತು ಸತ್ಯ ಶೋಧನೆ ಅಗತ್ಯವಿದೆಯೆಂದು ಇಬ್ಬರು ಹಿರಿಯ ಅಮೆರಿಕದ ಅಧಿಕಾರಿಗಳು ಅಭಿಪ್ರಾಯಪಟ್ಟು, ತಾವು ಇದರ ಕಾರಣವನ್ನು ಕಂಡು ಹಿಡಿದೇ ಹಿಡಿಯುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.
ಹಾಗೆಯೇ ಇದರಿಂದ ತೊಂದರೆ ಅನುಭವಿಸಿದ, ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸೂಕ್ತ ಪರಿಹಾರ, ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳು ತ್ತೇವೆ ಎಂದು ಅವರ ಅಭಿಮತ. ಈ ಕಾಯಿಲೆಗೆ ಹವಾನಾ ಸಿಂಡ್ರೋಮ ಎನ್ನುವುದು ಸರಿಯಲ್ಲ. ಏಕೆಂದರೆ 2016ರ ಮೊದಲೂ ಹಲವರಿಗೆ ಇದರ ಅನುಭವವಾಗಿದೆ ಎಂದು ವಾಷಿಂಗ್ಟನ್‌ನ ವಕೀಲ ಮಾರ್ಕ್ ಜೈಡ್ ಅಭಿಪ್ರಾಯಪಡುತ್ತಾರೆ. ಇವರು ಈ  ಸಿಂಡ್ರೋಮ್‌ ನಿಂದ ತೊಂದರೆಗೊಳಗಾದ ಹಲವರ ಕೇಸ್ ಗಳನ್ನುಳ ಕೋರ್ಟ್‌ನಲ್ಲಿ ಪ್ರತಿನಿಽಸಿವ್ಯಾಜ್ಯ ಹೂಡಿ ವಾದಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಮೈಖೆಲ್ ಬೆಕ್ ಅವರು ಯಾವುದೋ ದೇಶದಲ್ಲಿ (ದೇಶದ ಹೆಸರು ತಿಳಿಸಲು ಅವರು ಇಚ್ಛೆ ಪಡುವುದಿಲ್ಲ) ಕೆಲಸ ಮಾಡುತ್ತಿದ್ದಾಗ ಅವರಿಗೆ 1996ರಲ್ಲಿಯೇ ಈ ರೀತಿಯ ಅನುಭವವಾಗಿತ್ತು.
ಮೈಖೆಲ್ ಬೆಕ್ ಮತ್ತು ಅವರ ಸಹೋದ್ಯೋಗಿ ಇಬ್ಬರೂ ಒಂದು ಅಪರೂಪದ ರೀತಿಯ ಪಾರ್ಕಿನ್ಸನ್ ಕಾಯಿಲೆಗೆ ನಂತರ ಒಳಗಾದರು. ಇದಕ್ಕೆ ಹಲವು ಕಾರಣಗಳನ್ನು ಹೇಳುತ್ತಾರೆ. ಯಾವುದೋ ಕೀಟನಾಶಕಕ್ಕೆ ಪ್ರತಿ ಕ್ರಿಯೆಯಾಗಿರಬಹುದು, ಉದ್ದೇಶಪಟ್ಟು ವಿಷ ಪ್ರಾಶನ ಮಾಡಿಸಿರಬಹುದು, ಸೋನಿಕ್ ಅಥವಾ ಮೈಕ್ರೋವೇವ್ ಶಸದಿಂದ ದಾಳಿ ಇರಬಹುದು ಅಥವಾ ಯಾವುದೋ ಗೂಢಚರ್ಯೆಯಉಪಕರಣದಿಂದಲೂ ಆಗಿರಬಹುದು. ಜಾರ್ಜ್ ಟೌನ್ ವಿಶ್ವವಿದ್ಯಾನಿಲಯದ ನರರೋಗಶಾಸದಪ್ರೊಫೆಸರ್ ಡಾ. ಜೇಮ್ಸ್ ಗಿಯೋ ರ್ಡಾನೋ ಅವರು ಇದು ಒಂದು ರೀತಿಯಲ್ಲಿ ತಲೆಗೆ ಹೊಡೆತ ಬಿದ್ದಾಗ ಮೆದುಳಿನಲ್ಲಿ ಆಗುವ ತೊಂದರೆ ಇರುವ ಹಾಗೆ ಕಾಣುತ್ತದೆ, ಆದರೆ ಇದರಲ್ಲಿ ಯಾರೂ ತಲೆಗೆ ಹೊಡೆತ ಬಿದ್ದ ಬಗ್ಗೆ ಮಾಹಿತಿ ಕೊಡುವುದಿಲ್ಲವಾದ್ದರಿಂದ ಇದು ಸಂದೇಹವಾಗಿಯೇ ಉಳಿಯುತ್ತದೆ ಎಂದು ನುಡಿಯುತ್ತಾರೆ.
ಇದು ಒಂದು ರೀತಿಯ ಭೌತಿಕ ಉಪಕರಣದ ಪ್ರಭಾವವೇ ಸರಿ, ಬಹುಶಃ ಅಲ್ಟ್ರಾಸೋನಿಕ್ ಅಥವಾ ಮೈಕ್ರೋವೇವ್ ಶಕ್ತಿಯನ್ನು ಹೊರಸೂಸುವ ಉಪಕರಣವಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಹೀಗಾದಾಗ ವ್ಯಕ್ತಿಯ ಕಿವಿಯ ಒಳಗಿನ ದ್ರವದಲ್ಲಿ ವ್ಯತ್ಯಯ ಉಂಟುಮಾಡಿ ಒಂದು ರೀತಿಯ ಗುಳ್ಳೆಗಳು ಹುಟ್ಟುತ್ತವೆ. ಈ ಗುಳ್ಳೆಗಳು ರಕ್ತದ ಮೂಲಕ ಮೆದುಳು ಪ್ರವೇಶಿಸಿ ಈ ರೀತಿಯ ಲಕ್ಷಣಗಳಿಗೆ ಕಾರಣವಾಗುತ್ತವೆ – ಎಂಬುದು ಅವರ ವಿವರಣೆ.
ಇಷ್ಟಲ್ಲ ವಿವರಗಳ ಬಳಿಕವೂ ಇದು ನಿಗೂಢ ಕಾಯಿಲೆಯಾಗಿಯೇ ಉಳಿಯುತ್ತದೆ. ಭವಿಷ್ಯದ ದಿನಗಳಲ್ಲಿ ನಿಜವಾದ ಸತ್ಯ ಗೊತ್ತಾಗಬಹುದು.