ಏನಿದೆ ಹಿಜಾಬ್’ನ ಮೂಲ ವ್ಯಾಖ್ಯಾನ ?
ಸೌಮ್ಯ ಗಾಯತ್ರಿ
ಹಿಜಾಬ್ ವಿವಾದ ಕರುನಾಡಿನಲ್ಲಿ ಭುಗಿಲೆದ್ದು ರಾಷ್ಟ್ರಕ್ಕೆ ರಾಷ್ಟ್ರವೇ ಕುತೂಹಲದಿಂದ ನ್ಯಾಯಾಲದ ತೀರ್ಪಿನತ್ತ ಮುಖಮಾಡಿ ಕುಳಿತಿದೆ. ಏನಿದು ಹಿಜಾಬ್? ಧರ್ಮದ ಪರಿವಿಧಿಯಲ್ಲಿ ಇದರ ವ್ಯಾಖ್ಯಾನ ಏನು? ಕುರಾನ್‌ನಲ್ಲಿದೆಯೇ? ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರ್ ಆನ್‌ನಲ್ಲಿ ಹಿಜಾಬ್ ಎಂಬ ಪದವುಉಲ್ಲೇಖವಾಗಿದೆ. ಆದರೆ ಅದು ಮಹಿಳೆಯರ ಉಡುಪುಗಳನ್ನು ಉಖಿಸುವುದಿಲ್ಲ, ಬದಲಿಗೆ ಮೂಲ ಅರ್ಥ ‘ಪ್ರಾದೇಶಿಕ ವಿಭಜನೆ’ ಅಥವಾ ‘ಪರದೆ’ಎಂಬುದನ್ನು ಸೂಚಿಸುತ್ತದೆ. ಇದು ಧರ್ಮದ ಅನುಸರಣೆಯ ಕಡ್ಡಾಯವಿಧಿಎಂದು ಎಲ್ಲಿಯೂಉಲ್ಲೇಖವಾಗಿಲ್ಲ.
ಹೇಗೆ ಬಳಕೆ? ಮೂಲತಃ ಕುರಾನ್ ಮತ್ತು ಹದೀಸ್ ಪ್ರಕಾರ ಅರೇಬಿಕ್‌ನಲ್ಲಿ ‘ಖಿರ್ಮಾ’ ಎಂದರೆ ಶಿರಸಾಣ ಮತ್ತು ‘ಹಿಜಾಬ್’ ಎಂದರೆ ವಿಭಜನೆ ಅಥವಾ ಪರದೆ ಎಂಬ ಅರ್ಥ ಸೂಚಿಸಲು ಬಳಸಲಾಗಿದೆ. ಪವಿತ್ರ ಗುರು ಮುಹಮ್ಮದ್ ಪೈಗಂಬರ್ ಅವರ ಪತ್ನಿಯರನ್ನು ಅವರ ಮನೆಗೆ ಭೇಟಿ ನೀಡುವ ಅನೇಕ ಪರ ಪುರುಷರುಗಳಿಂದ ಪ್ರತ್ಯೇಕಿಸುವ ಪರದೆಯನ್ನುಉಲ್ಲೇಖಿಸುವ ಪದ್ಯದಲ್ಲಿ ಅಕ್ಷರಶಃ ಈ ಹಿಜಾಬ್ ಶಬ್ದದ ಬಳಕೆಯಾಗಿದೆ.
ಕುರಾನ್‌ನ ವ್ಯಾಖ್ಯಾನದ ಪ್ರಕಾರ ಈ ಹಿಜಾಬ್ (ಅಂದರೆ ಪರದೆ) ಪದವು ದೇವತೆ ಮತ್ತು ಮನುಷ್ಯರ ನಡುವಿನ, ತಪ್ಪು ಮಾಡುವವರ ಮತ್ತು ನೀತಿ ವಂತರ, ಭಕ್ತರ ಮತ್ತು ನಂಬಿಕೆಯಿಲ್ಲದವರನ್ನು ಪ್ರತ್ಯೇಕಿಸುವ ಪದ.
ಎಲ್ಲೆಡೆ ನಿಷೇಧಸೌದಿ ಅರೇಬಿಯಾದಂತಹ ಇಸ್ಲಾಂ ಧರ್ಮ ಪ್ರತಿಪಾದಿಸುವ ರಾಷ್ಟ್ರದಲ್ಲಿನ ಕಾನೂನಿನ ಪ್ರಕಾರ ಸಾರ್ವಜನಿಕ ವಾಗಿ ಹಿಜಾಬ್ ಧರಿಸುವ ಅಗತ್ಯವಿಲ್ಲ. ಈ ಹಿಜಾಬ್ ಧರಿಸುವಿಕೆಯನ್ನು ಪ್ರಪಂಚದಾದ್ಯಂತ ನೋಡಿದಾಗ ಅನೇಕ ರಾಷ್ಟ್ರಗಳಲ್ಲಿ ಇದನ್ನು ನಿಷೇಧಿಸಲಾಗಿದೆ ಮತ್ತು ಆ ರಾಷ್ಟ್ರಗಳ ಮುಸ್ಲಿಂ ಜನಾಂಗ ಈ ನಿರ್ಧಾರವನ್ನು ಸ್ವಾಗತಿಸಿವೆ. ಆಸ್ಟ್ರಿಯಾ, ಡೆನ್ಮಾರ್ಕ್, ಫ್ರಾನ್ಸ್, ಬೆಲ್ಜಿಯಂ, ಬಲ್ಗೇರಿಯಾ, ನೆದರ್ಲ್ಯಾಂಡ್ಸ್, ಚೀನಾ, ಶ್ರೀಲಂಕಾ ಮತ್ತು ಸ್ವಿಟ್ಜರ್ಲೆಂಡ್ ಈ ರಾಷ್ಟ್ರಗಳು ಹಿಜಾಬ್ ಅನ್ನು ನಿಷೇಧಿಸಿವೆ.
ಹದೀಸ್‌ನಲ್ಲಿದೆ ವಸ್ತ್ರಸಂಹಿತೆಕುರಾನ್ ಮುಸ್ಲಿಂ ಮಹಿಳೆಯರು ಮತ್ತು ಪುರುಷರನ್ನು ಸಮಾನವಾಗಿ ಪರಿಗಣಿಸುತ್ತದೆ. ಯೋಗ್ಯ ರೀತಿಯ, ಸ್ವೀಕಾರಾರ್ಹ ಉಡುಗೆ ತೊಡಲಷ್ಟೇ ಅದರಲ್ಲಿಸೂಚಿಸಲಾಗಿದೆ. ಈ ಮಾರ್ಗಸೂಚಿ ಇದ್ದು, ಮೊಹಮ್ಮದ್ ಪೈಗಂಬರರು ಪವಿತ್ರ ಕುರಾನ್‌ನ ಬಹಿರಂಗಪಡಿಸಿದ ಬಳಿಕ ಅಭಿವೃದ್ಧಿಪಡಿಸಲಾದಹದೀಸ್‌ನ ಪಠ್ಯದಲ್ಲಿ ಇವು ಕಂಡುಬರುತ್ತವೆ. ಆದರೆ ಮಹಿಳೆಯರು ಹಿಜಾಬ್ ಧರಿಸಬೇಕೆಂದು ಕುರಾನ್‌ನಲ್ಲಿ ಎಲ್ಲಿಯೂ ಕಡ್ಡಾಯವಾಗಿ ಸೂಚಿಸಿಲ್ಲ.
ಖಿರ್ಮಾ-ಜಿಲ್ಲಾಬ್ಕುರಾನ್‌ನಲ್ಲಿ ಉಡುಗೆಗೆ ಸಂಬಂಧಿಸಿದ ಕೀರ್ತನೆಗಳಲ್ಲಿ ‘ಖಿರ್ಮಾ’ ಎಂದರೆ ಮುಸುಕು ಮತ್ತು ಜಿಲ್ಬಾಬ್ ಎಂದರೆ ಮೇಲಂಗಿ ಎಂಬ ಪದಗಳು ಬಳಕೆ ಯಾಗಿದೆ. ಈ ಜಿಲ್ಬಾಬ್ ಶಬ್ದವನ್ನು ಹಿಜಾಬ್ ಎಂದು ಅರ್ಥೈಸಿರುವುದು ಸ್ವಲ್ಪ ಗೊಂದಲಗಳಿಗೆ ಕಾರಣವಾಗಿದೆ. ಸುಮಾರು6ಸಾವಿರಕ್ಕೂ ಹೆಚ್ಚು ಶ್ಲೋಕಗಳಲ್ಲಿ ಖಿರ್ಮಾ ಮತ್ತು ಜಿಲ್ಬಾಬ್ ಪದಗಳ ಉಖವಿದೆ. ಸುಮಾರು 6 ನಿದರ್ಶನಗಳಲ್ಲಿ ನಿರ್ದಿಷ್ಟವಾಗಿ ಮಹಿಳೆಯು ಸಾರ್ವಜನಿಕವಾಗಿ ಯಾವ ರೀತಿಯ ಉಡುಪು ಧರಿಸಬೇಕೆಂಬುದುಉಲ್ಲೇಖವಾಗಿದೆ. ಕುರಾನ್ ಪ್ರಕಾರ ಮಹಿಳೆಯರು ತಮ್ಮ ಪರಿವಾರದವರಲ್ಲದ ಪರ ಪುರುಷರ ಮುಂದೆ ಬಂದಾಗ ಖಿರ್ಮಾ ಅಂದರೆ ದುಪಟ್ಟಾ ಎಂದು ಹೇಳಬಹುದು, ಅದನ್ನು ಎದೆಯ ಭಾಗವನ್ನು ಮುಚ್ಚುವಂತೆ ಹೊದ್ದು, ಕಣ್ಣಿನ ದೃಷ್ಟಿಯನ್ನು ಕೆಳಮುಖವಾಗಿರಿಸಿ ಕೊಂಡಿರಬೇಕೆಂದು ಹೇಳುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಜಿಲ್ಜಬ್ ಎಂದರೆ ಉದ್ದನೆಯ ನಿಲುವಂಗಿಯನ್ನು ತೊಟ್ಟು ತಮ್ಮ ಸೌಂದರ್ಯವನ್ನು ಪರರನ್ನು ಉದ್ರೇಕಿಸುವಂತೆ ತೋರ್ಪಡಿಕೆ ಮಾಡದೆ ಇರುವಂತೆ ಇರಲು ಸೂಚಿಸುತ್ತದೆ.
ಎಲ್ಲೆಲ್ಲಿನಿಷೇಧವಿದೆ?2021 ಮಾರ್ಚ್‌ನಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ‘ಬುರ್ಖಾ’ ಅಥವಾ ‘ನಿಖಾಬ’ ಸೇರಿದಂತೆ ಸಾರ್ವಜನಿಕವಾಗಿ ತಲೆ ಮೇಲೆಧರಿಸುವ ಸ್ಕಾರ್ಫ್ ನಿಷೇಧ. 2011 ರಲ್ಲಿ ಫ್ರಾನ್ಸ್ ಹಿಜಾಬ್ ಅಥವಾ ಬುರ್ಖಾ ನಿಷೇಧಿಸಿದ ಯೂರೋಪಿನ ಮೊದಲ ದೇಶ. 2011 ರಲ್ಲಿ ಬೆಲ್ಜಿಯಂಸಾರ್ವಜನಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಽಸಿತು.
2012 ಜನವರಿ ನೆದರ್ಲ್ಯಾಂಡ್ ನಲ್ಲಿ ಬುರ್ಖಾ ನಿಷೇಧ ಜಾರಿಗೆ ಬಂದಿತು. 2015 ಮೇ ಕಾಂಗೋ ಗಣರಾಜ್ಯ ಬುರ್ಖಾ ನಿಷೇಧವನ್ನು ಜಾರಿಗೆ ತಂದ ಆಫ್ರಿಕಾದ ಮೊದಲ ದೇಶ. 2017 ರಲ್ಲಿ, ಧಾರ್ಮಿಕ ಉಗ್ರವಾದದ ವಿರುದ್ಧದ ಶಿಸ್ತುಕ್ರಮದ ಅಂಗವಾಗಿ ಚೀನಾ, ಪ್ರಧಾನವಾಗಿ ಮುಸ್ಲಿಂ ಪ್ರಾಂತ್ಯದಲ್ಲಿ ಬುರ್ಖಾಗಳು, ಮುಸುಕುಗಳು ಮತ್ತು ಉದ್ದನೆಯ ಗಡ್ಡವನ್ನು ನಿಷೇಽಸಿತು.
2017 ರಲ್ಲಿ ಜರ್ಮನಿ ಮತ್ತು ಆಸ್ಟ್ರಿಯಾ ಮುಖ ಮುಚ್ಚುವ ಮುಸುಕುಗಳನ್ನು ನಿಷೇಽಸುವ ಕಾನೂನನ್ನು ಹೊರ ತಂದಿತು. 2018 ಆಗಸ್ಟ್‌ನಲ್ಲಿ ಡೆನ್ಮಾಕ್ ನಲ್ಲಿ, ಬುರ್ಖಾಗಳನ್ನು ಮೊದಲು ನಿಷೇಧಿಸಲಾಯಿತು. 2018 ರಲ್ಲಿ ನಾರ್ವೆ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬುರ್ಖಾವನ್ನು ನಿಷೇಧಿಸ ಲಾಯಿತು. 2019ರ ಡಿಸೆಂಬರ್ ಸ್ವೀಡನ್‌ನಲ್ಲಿ ಇಸ್ಲಾಮಿಕ್ ಮುಸುಕುಗಳನ್ನು ನಿಷೇಧಿಸಲಾಯಿತು. 2016 ರಲ್ಲಿ, ಬಲ್ಗೇರಿಯಾವು ಸಾರ್ವಜನಿಕವಾಗಿ ಮುಖ ಮುಚ್ಚುವ ಬಟ್ಟೆಗಳನ್ನು ನಿಷೇಧಿಸಿತು.