ಸಂಸಾರದಲ್ಲೂ ವಿರಾಗ ತೋರಿದ ಪರಮಹಂಸರು
ತನ್ನಿಮಿತ್ತ
ಪ್ರವೀಣ ವಿವೇಕ
ಶ್ರೀ ರಾಮಕೃಷ್ಣ ಪರಮಹಂಸರು ಸಂಸಾರದಲ್ಲಿ ಇದ್ದೇ ಅಧ್ಯಾತ್ಮಿಕ ಸಾಧನೆ ಮಾಡಿದ ಮಹಾಪುರುಷರು. ಲೌಕಿಕ ಶಿಕ್ಷಣದಿಂದ ಬದುಕಿಗೆ ಪ್ರಯೋಜನ ವಿಲ್ಲ ಎಂದು ಅದನ್ನು ಧಿಕ್ಕರಿಸಿ ಅಧ್ಯಾತ್ಮದ ಸಾಧನೆಗೆ ತೊಡಗಿಸಿಕೊಂಡು ದೇವರನ್ನು ಕಂಡಿದ್ದೇನೆ, ಮಾತನಾಡಿದ್ದೇನೆ ಎಂದಿದ್ದ ಅವತಾರ ಪುರುಷ. ಪಂಚಾಗದ ಪ್ರಕಾರ ಇಂದು ಶ್ರೀರಾಮಕೃಷ್ಣ ಪರಮಹಂಸರ ಜಯಂತಿ.
ಜಗತ್ತಿನ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಉದ್ದೇಶವಿರುತ್ತದೆ. ಅದು ಆರ್ಥಿಕ ಸಾಧನೆಯಾಗಿರಬಹುದು, ಸೈನ್ಯದಲ್ಲಿ ಬಲವನ್ನು  ಹೊಂದಿರು ವುದು ಆಗಿರಬಹುದು, ವೈಜ್ಞಾನಿಕ ಸಾಧನೆಯಾಗಿರಬಹುದು, ಮತ್ತು ಇನ್ನಿತರ ಭೌತಿಕ ಸಾಧನೆಗಳಾಗಿರಬಹುದು. ಆದರೆ ಇದಾವುದೂ ಭಾರತದಉದ್ದೇಶವಲ್ಲ! ಅಧ್ಯಾತ್ಮಿಕತೆಯೇ ಭಾರತದ ಅಸ್ಮಿತೆ ಆಗಿರುವುದರಿಂದ, ಅಧ್ಯಾತ್ಮದ ಅನುಭೂತಿಯನ್ನು ಜಗತ್ತಿನ ರಾಷ್ಟ್ರಗಳಿಗೆ ನೀಡುವುದು ಭಾರತದ ಉದ್ದೇಶವಾಗಿದೆ. ಈ ಅಧ್ಯಾತ್ಮಿಕ ಮತ್ತು ಧಾರ್ಮಿಕ ಜಗತ್ತಿನಲ್ಲಿ ಬಹುಶಃ ಕಣ್ಣಿಗೆ ಕಾಣದಷ್ಟು, ಕೈಗಳಿಗೆ ನಿಲುಕದಷ್ಟು ಅದ್ಭುತವಾದ ಜ್ಞಾನವನ್ನು ನೀಡಿದವರು ಶ್ರೀರಾಮಕೃಷ್ಣ ಪರಮಹಂಸರು.
ಯಾರ ಮಹಾ ಸಮನ್ವಯ ಸಂದೇಶದಿಂದ ಜಗತ್ತು ಜಾಗೃತವಾಯಿತೋ ಆ ಪರಮಹಂಸರು ಹಿಂದೂ ಪಂಚಾಂಗದ ಪ್ರಕಾರ ದ್ವಿತೀ ಯ ಪಾಲ್ಗುಣ, ಶುಕ್ಲ ಪಕ್ಷ, ವಿಕ್ರಮ ಸಂವಸ್ತರ೧೮೯೨ರಲ್ಲಿ ಪರಮಹಂಸರು ಜನಿಸಿದರು. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಅದು 1839 ನೆ ಯ ಫೆಬ್ರವರಿ 18ನೇಯ ತೇದಿ. ಕೋಲ್ಕತ್ತಾದ ಕಾಮಾರಾಪುಕರದ ಒಂದು ಹುಲ್ಲು ಜೋಪಡಿಯ ಬಡ ಮನೆಯಲ್ಲಿ ಜನಿಸಿದ ಬಾಲಕನಿಗೆ ಮುಂದೆ ಗದಾಧರ ಎಂಬ ನಾಮಾಂಕಿತ ವಾಯಿತು. ಕಾಲಾನಂತರ ಗದಾಧಾರ ತನ್ನ ಜೀವನದ ಮುಂದಿನ ಹಾದಿಯನ್ನು ವಿಚಾರಿಸು ವಾಗ ಬಹಳಷ್ಟು ಆಲೋಚನೆ ಮಾಡಿ ಒಂದು ಇತ್ಯರ್ಥಕ್ಕೆ ಬರಲಾರಂಭಿಸಿದ.
ಅವನು ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದ, ದೇವರನ್ನು ಕಾಣುವುದು ಹೇಗೆ? ಈ ಲೌಕಿಕ ಶಿಕ್ಷಣದಿಂದ ಆತ್ಮ ಸಾಕ್ಷಾತ್ಕಾರ ಸಾಧ್ಯವೇ? ಈ ಶಿಕ್ಷಣವನ್ನು ಪಡೆಯುವುದರಿಂದ ಅಜ್ಞಾನವೆಂಬ ಕತ್ತಲಿನಿಂದ ಪಾರಾಗಬನೆ? ಎಂಬ ಹಲವು ಪ್ರಶ್ನೆಗಳನ್ನು ಕೇಳಿಕೊಂಡು, ಇಲ್ಲ ಸಾಧ್ಯವಿಲ್ಲ ಎನ್ನುವ ಉತ್ತರವನ್ನು ಪ್ರತಿ ಧ್ವನಿಸುತ್ತಿದ್ದ. ಲೌಕಿಕ ಶಿಕ್ಷಣ ವನ್ನು ಪಡೆಯದೇ ಅನಕ್ಷರಸ್ಥನಾಗಿಯೇ ಉಳಿದುಕೊಂಡು ನೇರವಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸುತ್ತೇನೆ ಎಂಬ ತೀರ್ಮಾನಕ್ಕೆ ಬಂದನು.
ಇದೇ ಸಮಯದಲ್ಲಿ ಕಲ್ಕತ್ತಾದ ದಕ್ಷಿಣೆಶ್ವರದಲ್ಲಿ ಕಾಳಿಮಾತೆಯ ದೇವಸ್ಥಾನ ನಿರ್ಮಾಣವಾಯಿತು. ಗಂಗಾನದಿಯ ತಟದಲ್ಲಿ, ಸುತ್ತ ಲೂ ದಟ್ಟವಾದ ವನರಾಶಿ, ಪ್ರಶಾಂತ ವಾತಾವರಣದ ಮಧ್ಯ ದೇವಾಲಯ ತಲೆಯೆತ್ತಲ್ಪಟ್ಟಿದ್ದರಿಂದ ಗದಾಧರ ಮತ್ತಷ್ಟು ಭಗವತ್ಸಾಕ್ಷಾತ್ಕಾರದ ಕಡೆಗೆ ಹಂಬಲವನ್ನು ಹೆಚ್ಚಿಸಿಕೊಂಡನು. ಜೊತೆಗೆ ಕಾಳಿಮಾತೆ ಅರ್ಚನೆಗಾಗಿ ಗಧಾದರ ಶ್ರೀರಾಮಕೃಷ್ಣರೆಂಬ ಹೆಸರಿನಿಂದ ನೇಮಕಗೊಂಡರು. ಮುಂದೆ ಪರಮಹಂಸರ ಭಗವಂತನ ಸಾಕ್ಷಾತ್ಕಾರದ ಹಾದಿ ಹೇಗಿತ್ತೆಂದರೆ ಆ ಸಾಧನೆಯ ಪ್ರಾರಂಭದಲ್ಲಿ ಮಗು ತನ್ನ ತಾಯಿಗಾಗಿ ಹಂಬಲಿಸುವಂತಹ ವ್ಯಾಕುಲತೆ ಹಾಗೂ ಇಂದ್ರಿಯ ಸುಖದಲ್ಲಿ ಸಂಪೂರ್ಣ ವೈರಾಗ್ಯ ತೋರಿಸುವ ಹಾಗೇ ಇತ್ತು.
ಹಗಲು ಕಾಳಿ ದೇವಿಯ ಪೂಜೆ- ಪ್ರಾರ್ಥನೆಗಳಲ್ಲಿ ಕಳೆದರೆ ಸಾಯಂಕಾಲ ಆ ಗಂಗೆಯ ತಟದಲ್ಲಿ ಧ್ಯಾನ. ನಿಜಕ್ಕೂ ಈ ಕಾಳಿಮಾತೆ ಇರುವವಳೇ? ಇರು ವವಳಾಗಿದ್ದರೆ ಎಲ್ಲಿರುವಳು? ಆಕೆ ಕಣ್ಣಿಗೆಕೇ ಕಾಣದಾಗಿದ್ದಾಳೆ? ಎಂಬುದು ಪರಮಹಂಸರ ನಿರಂತರ ತುಡಿತವಾಗಿತ್ತು. ಶ್ರೀರಾಮಕೃಷ್ಣರು ಕಾಳಿ ಮಾತೆಯ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ದೇವಿಯ ಮುಂದೆ ಕುಳಿತುಕೊಂಡು ಅಮ್ಮ ಒಂದು ದಿನ ವ್ಯರ್ಥವಾಗಿ ಹೋಯಿತು, ಆದರೂ ನಿನ್ನ ದರ್ಶನವಾಗಲಿಲ್ಲ, ಕ್ಷಣಿಕ ಜೀವನದ ಒಂದು ದಿನ ಕಳೆದು ಹೋಯಿತಲ್ಲಮ್ಮ ಎಂದು ಹೇಳುತ್ತಿದ್ದರು.
ಒಂದು ದಿನ ಪರಮಹಂಸರ ತಾಳ್ಮೆಯ ಕಟ್ಟೆಯೊಡೆದು ಭಗವತಿಯ ಸಾಕ್ಷಾತ್ಕಾರವಾಗದಿದ್ದ ಮೇಲೆ ಬದುಕಿಯಾದರು ಏನು ಪ್ರಯೋಜನ ಎಂದು ಕಾಳೀದೇವಿಯ ಪಕ್ಕದಲ್ಲಿದ್ದ ಖಡ್ಗವನ್ನು ತಗೆದುಕೊಂಡು ತಲೆಯನ್ನು ಕತ್ತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕಾಳೀ ಮಾತೇ ಪ್ರತ್ಯಕ್ಷಳಾದಳು!
ರಾಮಕೃಷ್ಣ ಪರಹಂಸರು ಬಾಹ್ಯ ಪ್ರಜ್ಞೆಯನ್ನು ಮೀರಿದರು.ಒಂದು ದಿನ ಪೂಜಾರಿಯೊಬ್ಬರು ಕೃಷ್ಣನ ವಿಗ್ರಹವನ್ನು ಸ್ನಾನ ಮಾಡಿಸುತ್ತಿದ್ದಾಗ ಅದು ಕೆಳಗೆ ಬಿದ್ದು ಮೂರ್ತಿಯ ಕಾಲು ಮುಕ್ಕಾ ಯಿತು. ಅಲ್ಲಿದ್ದ ರಾಸಮಣಿ ರಾಣಿಗೆ ಆ ವಿಗ್ರಹ ಪೂಜೆಗೆ ಅರ್ಹವೋ? ಅನರ್ಹವೋ? ಎಂಬ ಪ್ರಶ್ನೆ ಉದ್ಭವ ವಾಯಿತು. ಹಾಗಾಗೀ ಅಲ್ಲಿದ್ದ ಒಬ್ಬಶಾಸ್ತ್ರಿಯವರನ್ನು ವಿಚಾರಿಸಿದಾಗ ಅವರು ಮೂರ್ತಿ ಪೂಜೆಗೆ ಅನರ್ಹವೆಂದು ಬಿಟ್ಟರು. ಆದರೆ ಇದನ್ನು ಒಪ್ಪದ ರಾಣಿ ಪರಮಹಂಸರ ಹತ್ತಿರ ಬಂದು ತಮ್ಮ ಸಂಶಯವನ್ನು ಹೇಳಿಕೊಂಡಾಗ ರಾಮಕೃಷ್ಣರು ಹೀಗೆ ಹೇಳಿದರು, ನಿಜಕ್ಕೂ ಶಾಸ್ತ್ರಿಯವರ ನಡೆ ಹಾಸ್ಯಾಸ್ಪದವಾದದ್ದು. ಆಕಸ್ಮಾತಾಗಿ ರಾಣಿಯ ಅಳಿಯನ ಕಾಲು ಮುರಿದರೆ ಅಳಿಯನನ್ನು ಹೊಳೆಗೆಸೆದು ಮತ್ತೊಬ್ಬ ಅಳಿಯನನ್ನು ತರಲು ಸಾಧ್ಯವೇ?ಇಲ್ಲ. ಕಾಲು ಮುರಿದವನ ಶುಶ್ರೂಷೆ ಮುಖ್ಯ ಹೊರತು ಅದನ್ನು ತಿರಸ್ಕರಿಸುವುದಲ್ಲ. ಅದರಂತೆಯೇ ವಿಗ್ರಹವನ್ನು ಸರಿ ಮಾಡಿಸಿ ಪೂಜಿಸಿದರಾಯಿತು ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟರು.
ಅಲ್ಲಿದ್ದ ಎಲ್ಲರೂ ಅದರೊಳಗಿದ್ದ ತರ್ಕವನ್ನು ಒಪ್ಪಿಕೊಂಡರು. ಈ ಹೊತ್ತಿಗೆ ಜಯರಾಂಬಾಟಿಯಲ್ಲಿ ರಾಮಕೃಷ್ಣರಿಗೆ ಹುಚ್ಚು ಹಿಡಿದುಬಿಟ್ಟಿದೆ ಎಂದು ಪ್ರಚಾರವಾಗಿಬಿಟ್ಟಿತು. ಈಗ ರಾಮಕೃಷ್ಣರ ತಾಯಿ ಮಗನಿಗೆ ಮದುವೆ ಮಾಡಿದರೆ ಸರಿ ಹೋಗಿಬಿಡುತ್ತಾನೆ ಎಂದು ತಿಳಿದು,1859 ರಲ್ಲಿ ಜಯರಾಂ ಬಾಟಿಯ ಶ್ರೀ ಯುತ ರಾಮಚಂದ್ರ ಮುಖ್ಯೋಪಾಧ್ಯಾಯನ ಪ್ರೀತಿಯ ಪುತ್ರಿಯಾದ ಶಾರದಾ ಮಣಿದೇವಿ ಎಂಬ ಕನ್ಯೆಯನ್ನು ಹುಡುಕಿ ಮದುವೆ ಮಾಡಿದರು. ಇದಾದ ಮೇಲೆ ಒಂದೂವರೆ ವರ್ಷ ರಾಮಕೃಷ್ಣರು ತಮ್ಮ ತಾಯಿ ಚಂದ್ರಾದೇವಿ ಹತ್ತಿರವಿದ್ದರು.
ಶಾರದಾದೇವಿಯವರು ಒಂದು ದಿನ ರಾಮಕೃಷ್ಣರಿಗೆ ನೀವು ಯಾವ ದೃಷ್ಟಿಯಿಂದ ನನ್ನನ್ನು ಕಾಣುತ್ತೀರಿ ಎಂದು ಕೇಳಿದಾಗ, ತಕ್ಷಣವೇ ಪರಮಹಂಸರುಮಂದಿರದಲ್ಲಿ ಪೂಜಿಸ್ಪಲಡುತ್ತಿರುವ ಜಗನ್ಮಾತೆಯ ದೃಷ್ಟಿಯಲ್ಲಿ ನೋಡುತ್ತೇನೆ, ನಾನು ನಿನ್ನಲ್ಲಿ ಯಾವಾಗಲೂ ಆನಂದ ಮಯಿಯಾದ ಜಗನ್ಮಾತೆಯೇ ಮೈದೆಳೆದು ಬಂದಿರುವಂತೆ ಕಾಣುತ್ತಿದ್ದೇನೆ ಎಂದು ಹೇಳಿದರು. ತಮ್ಮ ಜೀವನದುದ್ದಕ್ಕೂ ರಾಮಕೃಷ್ಣರು ಗೃಹಸ್ಥರಾಗಿದ್ದರೂ ಪತಿ ಮತ್ತು ಪತ್ನಿಗೆ ಇರಬಹುದಾದ ಲೌಕಿಕ ಸಂಬಂಧವನ್ನು ಮೀರಿ ಅಧ್ಯಾತ್ಮಿಕ ಜೀವನದಲ್ಲಿ ಸಾಧನೆ ಮಾಡಿದರು.
ಶ್ರೀರಾಮಕೃಷ್ಣರು ಮೊದಲ ಸಲ ನರೇಂದ್ರನನ್ನು ನೋಡಿದಾಗಲೇ ತಮ್ಮ ದಿವ್ಯ ಸಂದೇಶಗಳನ್ನು ಜಗತ್ತಿಗೆ ಹರಡಬೇಕಾದವನು ಇವನೇ ಎಂದರು. ನರೇಂದ್ರನು ಮೊದಲ ಬಾರಿಗೆ ರಾಮಕೃಷ್ಣ ಪರಮಹಂಸರ ಹತ್ತಿರ ಬಂದು ನೀವು ದೇವರನ್ನು ಕಂಡಿದ್ದಿರಾ? ಎಂದಾಗ ನಿಸ್ಸಂಶಯವಿಲ್ಲದೆ ದೇವರನ್ನು ಕಂಡಿದ್ದೇನೆ ಎಂದುಬಿಟ್ಟರು. ಇದು ಬಾಲಕ ನರೇಂದ್ರನನ್ನು ದಿಗ್ಭ್ರಮೆಗೊಳಿಸಿಬಿಟ್ಟಿತು. ಮುಂದಿನ ದಿನಗಳಲ್ಲಿ ರಾಮಕೃಷ್ಣರು ತಮ್ಮೊಳಗಿದ್ದ ಅಪಾರ ವಾದ ಜ್ಞಾನದ ಕಣಜವನ್ನು ವಿವೇಕಾನಂದರಿಗೆ ನೀಡಿದರು.
ವಿವೇಕಾನಂದರು ವಿದೇಶದ ನೆಲದಲ್ಲಿ ನಿಂತು ತಮ್ಮ ಗುರುಗಳಾದ ರಾಮಕೃಷ್ಣರ ಬಗ್ಗೆ ಮಾತನಾಡುವಾಗ ನನ್ನಂತಹ ಸಾವಿರಾರು ವಿವೇಕಾನಂದರನ್ನು ತಯಾರು ಮಾಡ ಬಲ್ಲಂತ ಹ ಅಪಾರವಾದ ಶಕ್ತಿ ರಾಮಕೃಷ್ಣರಲ್ಲಿದೆ ಎಂದು ಹೇಳಿದ್ದರು. ಮುಂದೊಂದು ದಿನ ವಿವೇಕಾನಂದರು ನೀವು ನಿಜವಾಗಿಯ ಭಗವಂತನ ಸ್ವರೂಪವೇ ಎಂದು ಕೇಳಿದಾಗ, ರಾಮಕೃಷ್ಣ ಪರಮಹಂಸರು ಈ ಹಿಂದೆ ಯಾರು ರಾಮನಾಗಿದ್ದಾನೋ, ಯಾರು ಶ್ರೀ ಕೃಷ್ಣನಾಗಿದ್ದನೋ ಅವನೇ ಈಗ ಈ ನರ ಶರೀರದಲ್ಲಿ ರಾಮಕೃಷ್ಣ ರೂಪಿಯಾಗಿದ್ದಾನೆ ಎಂದು ಹೇಳಿದಾಗ ವಿವೇಕಾನಂದರ ಸಂಶಯ ಉರಿದುಹೋಗಿತ್ತು.
ಶ್ರೀಮಂತರ ಮನೆಗೆ ಚಿಕ್ಕ ಮಗುವನ್ನು ನೋಡಿಕೊಳ್ಳಲು ಬರುವ ಹೆಣ್ಣು ಮಗಳು ಶ್ರೀಮಂತರ ಮನೆಯ ಆ ಮಗುವನ್ನು ಅದೆಷ್ಟೇ ಪ್ರೀತಿಯಿಂದ ನೋಡಿ ಕೊಂಡರು, ಅವಳ ಮನಸ್ಸು ಮಾತ್ರ ತನ್ನ ಗರ್ಭದಿಂದ ಜನಿಸಿದ ಮಗುವಿನ ಕಡೆಗೆ ಇರುತ್ತದೆ. ಹಾಗೆಯೇ ಮನು ಷ್ಯನು ಕೂಡಾ ಲೌಕಿಕ ಜೀವನದಲ್ಲಿ ಅದೆಷ್ಟೇ ತೇಲಿದರೂ ಭಗವಂತನ ನಾಮ ಸ್ಮರಣೆಯನ್ನು ಬಿಡಬಾರದು. ಇದನ್ನು ಸಾಧಿಸಲು ಯಾವುದೇ ಧರ್ಮವಾದರೂ ಸರಿಯೇ! ಪ್ರಪಂಚದಲ್ಲಿರುವ ಎಲ್ಲ ಧರ್ಮಗಳೂ ಭಗವಂತನನ್ನು ಸೇರಲಿರುವ ಪಥಗಳು ಎಂಬ ಮಹತ್ತಾದ ತತ್ವವನ್ನು ಜಗತ್ತಿಗೆ ನೀಡಿದ ಯುಗ ಪುರುಷ, ಅವತಾರ ಪುರುಷರು ಶ್ರೀರಾಮಕೃಷ್ಣರು.
ಶ್ರೀಮಂತರ ಮನೆಯ ಮಕ್ಕಳನ್ನು ನೋಡಿಕೊಳ್ಳಲು ಬರುವ ಮಹಿಳೆ ಆ ಮಗುವನ್ನು ಪ್ರೀತಿಯಿಂದ ಆಟವಾಡಿಸಿ, ಅದಕ್ಕೆ ಉಣ ಬಡಿಸುವ ಕಾರ್ಯ ಮಾಡುತ್ತಾಳೆ. ಆದರೆ, ಅವಳು ಅದೇಷ್ಟೋ ಪ್ರೀತಿಯಿಂದ ಆ ಮಗುವನ್ನು ನೋಡಿಕೊಂಡರೂ, ಅವಳ ಮನಸ್ಸು ಮಾತ್ರ ತನ್ನ ಸ್ವಂತ ಮಗನ ಹತ್ತಿರವೇ ಇರುತ್ತದೆ. ಹಾಗೆಯೇ ಮನುಷ್ಯ ಬೇರೆ ವಿಷಯಗಳ ಕಡೆಗೆ ತನ್ನನ್ನು ತಾನೂ ವಾಲಿಸಿಕೊಂಡರೂ ತನ್ನ ಅಂತಿಮ ಗುರಿ ಮಾತ್ರ ಭಗವಂತನನ್ನು ಕಾಣು ವುದೇ ಆಗಿರಬೇಕು ಎನ್ನುವ ಚಿಂತನೆಯನ್ನು ರಾಮಕೃಷ್ಣರು ನೀಡಿದ್ದರು. ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವಾಗ ನನ್ನಂಹತ ಕೋಟ್ಯಾಂತರ ಯುವಕರನ್ನು ನಿರ್ಮಿಸುವ ಶಕ್ತಿ ಸಾಮರ್ಥ್ಯ ನನ್ನ ಗುರುಗಳಾದ ರಾಮಕೃಷ್ಣ ಪರಮಹಂಸರಲ್ಲಿದೆ ಎಂದು ಹೇಳಿದ್ದರು.
ಭಾರತದ ಹಿರಿಮೆ ಗರಿಮೆಗಳನ್ನು ಜಗತ್ತಿನ ರಾಷ್ಟ್ರಗಳ ಮುಂದೆ1893ರಲ್ಲಿ ವಿವೇಕಾನಂದರು ಪ್ರಚುರಪಡಿಸಿದರಲ್ಲವೆ? ಅದೆಲ್ಲವೂ ಗುರು ಶ್ರೀರಾಮಕೃಷ್ಣರ ಆಶೀರ್ವಾದದ ಫಲ. ರಾಮಕೃಷ್ಣರ ಪ್ರೇರಣೆಯಿಂದ ಆರಂಭವಾದ ರಾಮಕೃಷ್ಣ ಮಠಗಳು ಇಂದು ದೇಶ ವಿದೇಶದಲ್ಲಿ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ, ಅಧ್ಯಾತ್ಮಿಕ ಜ್ಞಾನವನ್ನು ಉಣ ಬಡಿಸುವ ಕಾರ್ಯ ಮಾಡುತ್ತಿವೆ.