ರಷ್ಯಾ, ಅಮೆರಿಕದ ಕಣ್ಣಲ್ಲಿ ನನಸಾಗದ ಕನಸುಗಳು !
ಸಮಕಾಲೀನ
ಎಂ.ಜೆ.ಅಕ್ಬರ್‌
ಕಾಬೂಲ್‌ನಲ್ಲಿ ಆದ ಸೂರ್ಯಾಸ್ತ ಕೀವ್ ನಲ್ಲಿ ಮುಸ್ಸಂಜೆಗೆ ಜಾರಿದೆ. ಮುಂದಿನ ಸವಾಲಿನಲ್ಲಿ ವಾಷಿಂಗ್ಟನ್ ಗೆಲ್ಲದಿದ್ದರೆಅಮೆರಿಕದ ಜಾಗತಿಕ ಆಧಿಪತ್ಯದ ಸೌಧ ಕುಸಿದು ಬೀಳಲಿದೆ. ಅದೇನದು ಮುಂದಿನ ಸವಾಲು? ತೈವಾನ್ ವಿಷಯದಲ್ಲಿ ಚೀನಾ ವನ್ನು ಎದುರು ಹಾಕಿಕೊಂಡು ಅಮೆರಿಕ ಗೆಲ್ಲುವುದು.
1990ರ ದಶಕ. ಅಂದರೆ ಸುಮಾರು ಮೂವತ್ತು ವರ್ಷದ ಹಿಂದೆ ಶೀತಲ ಸಮರದಲ್ಲಿ ಗೆದ್ದ ನಂತರ ವಾಷಿಂಗ್ಟನ್ ಮತ್ತು ಅದರಚಿಯರ್ ಲೀಡರ್‌ಗಳು 20ನೇ ಶತಮಾನವನ್ನು ಹೇಗೆ ಅಮೆರಿಕ ಆಳಿತ್ತೋ ಅದೇ ರೀತಿ 21ನೇ ಶತಮಾನವನ್ನೂ ಆಳಲಿದೆ ಎಂದು ಟಾಂಟಾಂ ಹೊಡೆದಿದ್ದರು. ಆದರೆ 2005ರಲ್ಲಿ ಇರಾಕ್ ನಲ್ಲಿ ಅಮೆರಿಕ ದಾರಿತಪ್ಪಿತು. ನಂತರ ಸಿರಿಯಾದಲ್ಲೂ ಅದಕ್ಕೆ ದಾರಿ ಸಿಗಲಿಲ್ಲ. ಆ ಜಾಗ ವನ್ನು ಛಕ್ಕನೆ ವ್ಲಾದಿಮಿರ್ ಪುಟಿನ್ ಆಕ್ರಮಿಸಿಕೊಂಡರು.
2014ರಲ್ಲಿ ಕ್ರಿಮಿಯಾವನ್ನು ಆಕ್ರಮಿಸಿಕೊಳ್ಳುವ ಮೂಲಕ ಪುಟಿನ್ ಯುರೋಪ್‌ನ ನೀರಿಗೆ ಕಲ್ಲೆಸೆದು ಪರೀಕ್ಷೆ ಮಾಡಿದಾಗ ಬರಾಕ್ ಒಬಾಮಾ ನೀಡಿದ ಪ್ರತಿಕ್ರಿಯೆ ಬಹಳ ದುರ್ಬಲ ವಾಗಿತ್ತು. ತನ್ಮೂಲಕ ಕಪ್ಪು ಸಮುದ್ರದ ಮೇಲಿನ ಆಧಿಪತ್ಯ ರಷ್ಯಾದ್ದಾ ಯಿತು. ನಂತರ ಉಕ್ರೇನ್‌ನಲ್ಲಿ ಹೊಸ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದಾದ ಪುಟಿನ್, ನ್ಯಾಟೋ ಪಡೆಗಳು ರಷ್ಯಾದ ಗಡಿಗೆ ಬರುವವರೆಗೆ ಕಾದು ಕುಳಿತರು. ನಂತರ 2021ರ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ಅಮೆರಿಕದ ಸೇನಾಪಡೆಗಳು ಉಗ್ರರ ಕೈಗಿಟ್ಟು ಓಡಿಹೋಗುವುದನ್ನು ಪುಟಿನ್ ಅಕ್ಷರಶಃ ನೋಡುತ್ತ ಸುಮ್ಮನೆ ಕುಳಿತರು. ಆ ಸಮಯದಲ್ಲಿ ರಷ್ಯಾ ಕೊಂಚ ಗಟ್ಟಿ ನಿಲುವು ತಾಳಿದ್ದರೂ ಸಾಕಿತ್ತು, ತಾಲಿಬಾನಿಗಳು ಚಿಗಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಆದರೆ, ಪುಟಿನ್ ತಮ್ಮ ಪಾಡಿಗೆ ತಾವು ಇದ್ದುಬಿಟ್ಟರು. ಫೆಬ್ರವರಿ 24ರ ಗುರುವಾರ ರಾತ್ರಿ, ಉಕ್ರೇನ್‌ನ ಯುವ ಅಧ್ಯಕ್ಷ ವೋಲೋ ದಿಮಿರ್ ಝೆಲೆನ್‌ಸ್ಕಿ ಕೊಂಚ ಸಿಟ್ಟಾಗಿದ್ದರು. ಏಕೆ ಪಶ್ಚಿಮದ ದೇಶಗಳು ನಮ್ಮ ಕೈಬಿಟ್ಟಿವೆ ಎಂದು ಬುಸುಗುಡುತ್ತಿದ್ದರು. ನಂತರದ ಕೆಲವೇ ದಿನಗಳಲ್ಲಿ ಆರಂಭವಾದ ಯುದ್ಧವು ಝೆಲೆನ್‌ಸ್ಕಿ ತಮ್ಮ ಜೀವಮಾನಪೂರ್ತಿ ಕಲಿತಿದ್ದಕ್ಕಿಂತ ಹೆಚ್ಚು ಪಾಠವನ್ನುಅವರಿಗೆ ಕಲಿಸಿತು. ವಾಸ್ತವವಾಗಿ ಫೆಬ್ರವರಿಯಲ್ಲಿ ರಷ್ಯನ್ನರು ಮೂರೂ ದಿಕ್ಕುಗಳಿಂದ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ ಪಶ್ಚಿಮದ ದೇಶಗಳು ಉಕ್ರೇನ್‌ನ ಕೈಬಿಟ್ಟಿದ್ದಲ್ಲ.
ಅದಕ್ಕೂ ಮೊದಲು, ರಷ್ಯಾದ ಸೇನಾ ಪಡೆಗಳು ಉಕ್ರೇನ್‌ನ ಗಡಿಯಲ್ಲಿ ಮದ್ದುಗುಂಡುಗಳನ್ನು ಶೇಖರಿಸತೊಡಗಿದ್ದನ್ನು ನೋಡಿದ ಮೇಲೂ 2021ರ ಡಿಸೆಂಬರ್ ಮೊದಲ ವಾರದಲ್ಲಿ ರಷ್ಯಾಕ್ಕೆ ಅಮೆರಿಕವು ಕೇವಲ ನಿರ್ಬಂಧದ ಎಚ್ಚರಿಕೆ ನೀಡಿತ್ತಲ್ಲ, ಆಗಲೇ ಅದು ಉಕ್ರೇನ್‌ನ ಕೈಬಿಟ್ಟಾಗಿತ್ತು. ಬರಾಕ್ ಒಬಾಮಾರಂತೆ ಅಧ್ಯಕ್ಷ ಜೋ ಬೈಡನ್ ಕೂಡ ಬಹಳ ನಾಜೂಕಾಗಿ ಮಾತ ನಾಡಿ ತಮ್ಮ ದೌರ್ಬಲ್ಯವನ್ನು ಕೋಟಿನ ಕಿಸೆಯೊಳಗೆ ಮುಚ್ಚಿಟ್ಟುಕೊಳ್ಳುವ ಯತ್ನ ಮಾಡಿದರು.
ಜೋ ಬೈಡನ್ ಎಷ್ಟು ದುರ್ಬಲರಾಗುತ್ತಾರೋ ವ್ಲಾದಿಮಿರ್ ಪುಟಿನ್ ಅಷ್ಟೇ ಪ್ರಬಲರಾಗುತ್ತಾರೆ. ಈ ಹಿಂದೆ ಸರಿಯಾದ ತಂತ್ರ ಗಾರಿಕೆ ಇಲ್ಲದೆ ಇರಾಕ್ ನಲ್ಲಿ ಅಮೆರಿಕ ಭರ್ಜರಿ ಹಾನಿ ಅನುಭವಿಸಿತ್ತು. ಆಗಲೇ ಅಮೆರಿಕದ ಯೋಗ್ಯತೆಯೇನು ಎಂಬುದು  ಜಗತ್ತಿಗೆ ಅರ್ಥವಾಯಿತು. ಸೇನಾಪಡೆಗಳನ್ನು ಇರಿಸದೇ ಆ ಸ್ಥಳದ ಮೇಲೆ ನಿಯಂತ್ರಣಸಾಧಿಸುವವ್ಯೂಹಾತ್ಮಕ ಶಕ್ತಿಯನ್ನುಅಮೆರಿಕ ಕಳೆದುಕೊಂಡಿತೇ ಎಂದು ಎಲ್ಲರೂ ಯೋಚಿಸುವಂತಾಯಿತು.
ಲೆನಿನ್ ಹೇಳಿದ ಒಂದು ಮಾತು ಪುಟಿನ್ ಗೆ ಬಹಳ ಇಷ್ಟ ಎಂದು ಹೇಳಲಾಗುತ್ತದೆ:    -    ,   . ಬೇಯೋನೆಟ್ ಅಂದರೆ ಬಂದೂಕಿನ ಮುಂದಿರುವ ಚೂಪಾದ ಚೂರಿ. ಅದನ್ನು ಹಿಡಿದು ಮುನ್ನುಗ್ಗುತ್ತಿರ ಬೇಕು. ಎದುರಿಗೆ ಮೆದುವಾದ ವಸ್ತು ಎಲ್ಲಿಯವರೆಗೆ ಸಿಗುತ್ತಿರುತ್ತದೆಯೋ ಅಲ್ಲಿಯವರೆಗೂ ಮುನ್ನುಗ್ಗುತ್ತಲೇ ಇರಬೇಕು. ಪುಟಿನ್‌ಗೆ ಅವರ ಕೈಲಿರುವ ಬೇಯೋನೆಟ್‌ನಿಂದ ಸಿಕ್ಕ ಸಂದೇಶ ಬಹಳ ಸ್ಪಷ್ಟವಾಗಿದೆ.
ಶ್ವೇತಭವನದಲ್ಲಿ ಈಗ ಹುಲ್ಲು ತಿನ್ನುವವರು ಕುಳಿತಿದ್ದಾರೆ ಎಂಬುದೇ ಆ ಸಂದೇಶ! ಉಕ್ರೇನ್‌ಗೆ ಪುಟಿನ್ ಸೇನೆ ಕಳಿಸಿದಾಗ ಬೈಡನ್ ಪ್ರಾರ್ಥನೆ ಕಳಿಸಿದ್ದು ನೋಡಿ ರಷ್ಯಾದ ಸರ್ವಾಧಿಕಾರಿಗೆ ಬಹಳ ಮಜಾ ಅನ್ನಿಸಿರಬೇಕು. ಪುಟಿನ್‌ಗೆ ಜುಡೋ ಅಂದರೆ ಇಷ್ಟ. ಚೆಸ್ ಕೂಡ ಆಡುತ್ತಾರೆ. ಜುಡೋದಲ್ಲಿ ಒದ್ದ ಒದೆತ ಯಾವಾಗಲೂ ಸರಿಯಾದ ಜಾಗಕ್ಕೇ ಬೀಳಬೇಕು ಎಂದೇನಿಲ್ಲ. ಆದರೆ, ಚೆಸ್ ಬಹಳ ಸಂಕೀರ್ಣ. ಅದು ಆಟಗಾರರಿಗೆ ರೀಚ್ ಮತ್ತು ಓವರ್‌ರೀಚ್ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಕಲಿಸುತ್ತದೆ. ಅವೆರಡರ ನಡು ವಿನ ಕಂದರ ಒಮ್ಮೊಮ್ಮೆ ಕೊಳಕು ಕೀವಿನ ಚರಂಡಿಯೂ ಆಗಬಹುದು. ಜರ್ಮನಿಯ ತತ್ತ್ವಜ್ಞಾನಿ ಜೊಹಾನ್ ವೂಲ್‌ ಗ್ಯಾಂಗ್ ವನ್ ಗೋಯೆತೆ ಹೇಳಿದ ‘ಎಲ್ಲಿಗೆ ನಿಲ್ಲಿಸಬೇಕು ಎಂಬ ತಿಳಿವಳಿಕೆಯೇ ನಿಜವಾದ ಜಾಣ್ಮೆ’ ಎಂಬ ಮಾತನ್ನು ಲೆನಿನ್‌ ರಂತೆ ಪುಟಿನ್ ಕೂಡ ಓದಿಕೊಂಡಿದ್ದಾರೋ ಇಲ್ಲವೋ ಎಂಬುದು ನಮಗೆ ಸದ್ಯದಲ್ಲೇ ಗೊತ್ತಾಗಲಿದೆ.
1945ರ ನಂತರ ಜಗತ್ತಿನ ಎರಡು ಧ್ರುವಗಳನ್ನು ಅಮೆರಿಕ ಮತ್ತು ರಷ್ಯಾ ತಮ್ಮ ಕಬ್ಜಾದಲ್ಲಿಟ್ಟುಕೊಂಡು ಕುಳಿತಿವೆ. ಸೋವಿ ಯತ್ ಒಕ್ಕೂಟದ ಪತನದ ನಂತರವೂ ಈ ಹಿಡಿತವನ್ನು ಅವು ಬಿಟ್ಟುಕೊಟ್ಟಿಲ್ಲ. ಆದರೆ, ಅದರ ಪರಿಣಾಮಗಳನ್ನು ಸಮರ್ಥ ವಾಗಿ ನಿಭಾಯಿಸಲು ಅವುಗಳಿಂದ ಸಾಧ್ಯವಾಗಿಲ್ಲ. ಇಬ್ಬರಿಗೂ ಈಗ ಸುಸ್ತಾದಂತಿದೆ. ತಮ್ಮದೇ ಮಹತ್ವಾಕಾಂಕ್ಷೆ ಮತ್ತು ತಪ್ಪು ಲೆಕ್ಕಾ ಚಾರಗಳಿಂದಾಗಿ ಎರಡೂ ದೇಶಗಳು ಗಾಯಗೊಂಡಿವೆ. ಆ ಗಾಯದಿಂದ ರಕ್ತ ಸೋರುತ್ತಿದೆ. 1990ರ ದಶಕದಲ್ಲಿ ಅಮೆರಿಕದ ಹವಾ ಬಹಳ ಜೋರಾಗಿತ್ತು. ಪೆಂಟಗನ್-ವಾಲ್‌ಸ್ಟ್ರೀಟ್-ಶ್ವೇತಭವನ ಪ್ರಣೀತ ಉದಾರವಾದಿ ಸಿದ್ಧಾಂತದ ಎದುರು ಸೋವಿಯತ್‌ನ ಕಮ್ಯುನಿಸಂ ಪತನಗೊಳ್ಳುವುದರೊಂದಿಗೆ ಒಂದು ಇತಿಹಾಸವೇ ಮುಕ್ತಾಯಗೊಂಡಿತ್ತು. ಅಮೆರಿಕಕ್ಕೆ ಗೆಲ್ಲಲು ಇನ್ನಾವ ಜಗತ್ತೂ ಉಳಿದಿರಲಿಲ್ಲ. ಅಮೆರಿಕದ ಸಂವಿಧಾನ ಮತ್ತು ಅಲ್ಲಿನ ಆಡಳಿತವೇ ಅತ್ಯಂತ ಪರ್ ಫೆಕ್ಟ್ ಮಾದರಿ ಎಂದು ಜಾಗತಿಕ ಸಮಾಜ ಒಪ್ಪಿಕೊಂಡಿತ್ತು. ಅದೇ ಸಮಯದಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಫ್ರಾನ್ಸಿಸ್ -ಕುಯಾಮಾ ‘ದಿ ಎಂಡ್ ಆಫ್ ಹಿಸ್ಟರಿ ಆಂಡ್ ದಿ ಲಾಸ್ಟ್ ಮ್ಯಾನ್’ ಎಂಬ ಬಹಳ ಪ್ರಸಿದ್ಧ ಪುಸ್ತಕ ಬರೆದರು.
ಸೀಸರ್‌ನ ರೀತಿ ಅಮೆರಿಕ ಬೀಗತೊಡಗಿತು. ಆದರೆ, ‘ಶತ್ರು ಕೇವಲ ಸೋತರೆ ಸೋತಂತಲ್ಲ, ಸೋಲನ್ನು ಒಪ್ಪಿಕೊಂಡಾಗ ಮಾತ್ರನಿಜವಾಗಿಯೂ ಸೋತಂತೆ’ ಎಂಬ ಬೀಜ ಮಂತ್ರವನ್ನು ಅಮೆರಿಕ ಮರೆತುಬಿಟ್ಟಿತ್ತು. ಅಂತಹ ಸಂಕಷ್ಟದ ಸಮಯದಲ್ಲಿ ರಷ್ಯಾಕ್ಕೆ ಸಿಕ್ಕವನೇ ಪುಟಿನ್. ಆತ ಸೋಲೊಪ್ಪಿಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ತನ್ನ ಸುತ್ತಮುತ್ತ ಇರುವವರೆಲ್ಲ ಒಂದು ಕಾಲದ ಪ್ರಬಲ ಸಿದ್ಧಾಂತದ ಅವಶೇಷಗಳನ್ನು ಹೊತ್ತು ದೆವ್ವಗಳಂತೆ ಓಡಾಡುತ್ತ ಯಾವುದೇ ಪ್ರಯೋಜನಕ್ಕೆ ಬಾರದಿದ್ದರೂ ಪುಟಿನ್ ಮಾತ್ರ ಸೋಲೊಪ್ಪಿಕೊಳ್ಳುತ್ತಿರಲಿಲ್ಲ.
ಅಮೆರಿಕ ಕಾಣುತ್ತಿರುವುದು ಅಸಾಧ್ಯ ಕನಸು. ರಷ್ಯಾವನ್ನು ಮಣಿಸಲು ಅದಕ್ಕೆ ಸಾಧ್ಯವಿಲ್ಲ. 21ನೇ ಶತಮಾನದ ಜಾಗತಿಕ ಚಕ್ರವರ್ತಿಯಾಗಲು ಅಮೆರಿಕಕ್ಕೆ ಸಾಧ್ಯವೇ ಇಲ್ಲ. ಇನ್ನು, ಸೋವಿಯತ್ ಒಕ್ಕೂಟ ಇದ್ದ ಸಮಯದಲ್ಲಿ ರಷ್ಯಾಕ್ಕಿದ್ದ ತಾಕತ್ತು, ಆ ಪ್ರಭಾವ ಪುಟಿನ್‌ಗೆ ಬೇಕಿದೆ. ಅದೂ ಕೂಡ ಅಸಾಧ್ಯವೇ. ಅಮೆರಿಕ ಎದುರಿಗಿದೆ ಎಂಬ ಕಾರಣಕ್ಕಲ್ಲ, ಬದಲಿಗೆ ಈ ಪ್ರದೇಶವೇ ಮೂಲಭೂತವಾಗಿ ಬದಲಾಗಿಬಿಟ್ಟಿದೆ ಎಂಬ ಕಾರಣಕ್ಕೆ. ಹಳೆಯ ಸೋವಿತ್ ಒಕ್ಕೂಟದ ದೇಶಗಳು ಇಂದು ಸ್ವಾತಂತ್ರ್ಯದ ಅರ್ಥ ವನ್ನು ತಿಳಿದುಕೊಂಡಿವೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಅಮೆರಿಕದ ಸ್ನೇಹಿತ ರಾಷ್ಟ್ರಗಳು ತಾವು ಅಮೆರಿಕದ ಮೇಲೆ ಎಲ್ಲಿಯವರೆಗೆ ಅವಲಂಬಿತರಾಗಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿವೆ.
ಉಕ್ರೇನ್‌ನ ಬಿಕ್ಕಟ್ಟು ಜಗತ್ತಿನ ವಿನ್ಯಾಸವನ್ನು ಬದಲಾಯಿಸಲು ಆರಂಭಿಸಿದೆ. 20ನೇ ಶತಮಾನದ ಎರಡು ಆಧಾರ ಸ್ತಂಭಗಳೆಂದು ಭಾವಿಸಿದ್ದ ಅಮೆರಿಕ ಮತ್ತು ರಷ್ಯಾ ದೇಶಗಳ ಪ್ರಭಾವ ಈ ಹೊಸ ಜಗತ್ತಿನಲ್ಲಿ ಕಡಿಮೆಯಿರುತ್ತದೆ. ಉಕ್ರೇನ್ ಯುದ್ಧದಲ್ಲಿ ಮೊದಲು ಸತ್ತಿದ್ದು ಅಮೆರಿಕದ ನಂಬಿಕೆ. ಅಮೆರಿಕದ ಸ್ನೇಹಿತ ರಾಷ್ಟ್ರಗಳಿಗೆಲ್ಲ ಸಿಗಬೇಕಾದ ಸಂದೇಶ ಈ ಯುದ್ಧದಿಂದ ಸಿಕ್ಕಿದೆ. ಚಂಡಮಾರುತದ ವೇಗದಲ್ಲಿ ಬಿಕ್ಕಟ್ಟು ಎದುರಾದರೆ ‘ವ್ಯೂಹಾತ್ಮಕ ಗೊಂದಲ’ದ ಹಿಂದೆ ಅಡಗಿಕೊಳ್ಳುವ ಬೈಡನ್ ಕ್ಷಿಪಣಿಗಳ ಬದಲು ಜಾಣತನದ ಹೇಳಿಕೆಗಳನ್ನು ಹಾರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.
ಶಕ್ತಿಶಾಲಿ ಪೆಂಟಗನ್ ಈಗ ಮೇಯಲು ಬಿಟ್ಟ ಬೋಳು ಸ್ಯಾಮ್ಸನ್ ಆಗಿದೆ. ಸ್ಯಾಮ್ಸನ್ ಕತೆ ಯಾವತ್ತೂ ಅವನ ಮನೆಯ ಮಟ್ಟಿಗೆ ಸುಖಾಂತ್ಯವಾಗುವುದಿಲ್ಲ. ಕೊನೆಯ ದೃಶ್ಯದಲ್ಲಿ ಆ ಮನೆ ಕುಸಿದು ಬೀಳುತ್ತದೆ. ಅಲ್ಲಿ ಆಶ್ರಯ ಪಡೆದಿದ್ದವರು ಅದನ್ನು ಮತ್ತೆ ಕಟ್ಟಬೇಕಾಗುತ್ತದೆ. ಅವರಿಗೆ ಬೇರೆ ಆಯ್ಕೆ ಇರುವುದಿಲ್ಲ. ಇವೆಲ್ಲದರ ಬಗ್ಗೆ ಮೊಟ್ಟಮೊದಲು ಎಚ್ಚರಿಕೆ ನೀಡಿದ್ದ ಪ್ರಬಲ ಜಾಗತಿಕ ನಾಯಕನೆಂದರೆ ಜಪಾನ್‌ನ ದೀರ್ಘಕಾಲದ ಪ್ರಧಾನಿ ಶಿಂಜೋ ಅಬೆ. ಎಂಟು ವರ್ಷದ ಆಡಳಿತದ ನಂತರ ಅನಾರೋಗ್ಯದ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಕೀವ್‌ಗಾಗಿ ನಡೆಯುತ್ತಿದ್ದ ಮೇಲಾಟದ ನಡುವೆಯೇ ಟೀವಿ ಚಾನೆಲ್‌ಗೆ ನೀಡಿದ್ದಸಂದರ್ಶನದಲ್ಲಿ ಅಬೆ ವಾಷಿಂಗ್ಟನ್‌ಗೆ ‘ವ್ಯೂಹಾತ್ಮಕ ಗೊಂದಲ’ ತೊರೆದು, ಚೀನಾ ಏನಾದರೂ ದಾಳಿ ನಡೆಸಿದರೆ ತೈವಾನನ್ನು ಉಳಿಸಿಕೊಳ್ಳಲು ಮುಂದೆ ಬರುವುದಾಗಿ ಘೋಷಿಸಬೇಕೆಂದು ಸಲಹೆ ನೀಡಿದ್ದರು.
ಹೀಗೆ ನೀಡುವುದಕ್ಕೆ ಅವರ ಬಳಿ ಇನ್ನಷ್ಟು ಸಲಹೆಗಳಿದ್ದವು. ಜಗತ್ತಿನಲ್ಲೇ ಪರಮಾಣು ಅಸದಿಂದ ಅತ್ಯಂತ ಘೋರ ಹಾನಿ ಅನುಭವಿಸಿದ ದೇಶ ಜಪಾನ್. ಈಗ ಜಪಾನ್ ಪರಮಾಣು ತಾಟಸ್ಥ್ಯ ತೊರೆದು ‘ಪರಮಾಣುಅಸ್ತ್ರಗಳನ್ನು ಹಂಚಿಕೊಳ್ಳುವ’ ದೇಶವಾಗಿ ಬದಲಾಗಬೇಕು. ಜಪಾನ್‌ನಲ್ಲಿ ಪರಮಾಣು ಅಸಗಳು ಇರುವುದಕ್ಕೆ ಅಡ್ಡಿಯಿಲ್ಲ ಎಂಬ ನಿಲುವು ಹೊಂದಿರುವ ನ್ಯಾಟೋದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದೂ ಅಬೆ ಹೇಳಿದ್ದರು. ಅವರದೇ ಮಾತುಗಳಲ್ಲಿ ಇದನ್ನು ಹೇಳುವುದಾದರೆ, ‘ಪರಮಾಣು ನಿಶ್ಶಸೀಕರಣ ಒಪ್ಪಂದಕ್ಕೆ ಜಪಾನ್ ಸಹಿ ಹಾಕಿದೆ. ಅಲ್ಲದೆ ತನ್ನದೇ ಆದ ಮೂರು ಅಣ್ವಸೇತರ ನೀತಿಗಳನ್ನು ಹೊಂದಿದೆ. ಹಾಗಂತ ಜಗತ್ತನ್ನು ಸುರಕ್ಷಿತವಾಗಿ ಇಡುವುದು ಹೇಗೆಂಬ ಚರ್ಚೆಯಿಂದ ಜಪಾನ್ ಹೊರಗುಳಿಯುವುದಕ್ಕೆ ಈ ಪರಮಾಣು ತಾಟಸ್ಥ್ಯವೇ ನೆಪವಾಗಬಾರದು. ಜಗತ್ತು ಹೇಗೆ ಸಾಗುತ್ತಿದೆ ಎಂಬ ವಾಸ್ತವದ ಅರಿವು ಜಪಾನ್‌ಗೆ ಇರಬೇಕು.’
ಜಪಾನ್‌ನ ಭದ್ರತೆಯನ್ನು ಅಮೆರಿಕಕ್ಕೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ನ್ಯೂಕ್ಲಿಯರ್ ಬಟನ್ ಮೇಲೆ ಜಪಾನ್ ತನ್ನದೇ ಬೆರಳು ಇಟ್ಟುಕೊಂಡಿರಬೇಕು. ಶಿಂಜೋ ಅಬೆ ಮಾತಿನ ಅರ್ಥವೇನು? ಪರಮಾಣುನಿಶ್ಶಸ್ತ್ರೀಕರಣ ಒಪ್ಪಂದ (ಎನ್‌ಪಿಟಿ) ಕೊನೆಗೊಳ್ಳಬೇಕು ಎಂದೇ ಅವರು ಸೂಕ್ಷ್ಮವಾಗಿ ಹೇಳುತ್ತಿದ್ದಾರೆ. ಈ ಒಪ್ಪಂದಕ್ಕೆ ಭಾರತ ಸಹಿಯನ್ನೇ ಹಾಕಿಲ್ಲ. ಏಕೆಂದರೆ ಇದು ತಾರತಮ್ಯದಿಂದ ಕೂಡಿದ ಒಪ್ಪಂದವಾಗಿತ್ತು.
ಜಪಾನ್ ಬಳಿ ಸಾಕಷ್ಟು ಪ್ಲುಟೋನಿಯಂ ಇದೆ. ಜತೆಗೆ, ಬೇಕಾದಷ್ಟುಅಣ್ವಸ್ತ್ರಕ್ಷಿಪಣಿಗಳನ್ನು ಒಂದೇ ವರ್ಷದಲ್ಲಿ ತಯಾರಿಸಿ ಗುಡ್ಡೆ ಹಾಕುವ ರಾಕೆಟ್ ತಂತ್ರಜ್ಞಾನವಿದೆ. ಅಮೆರಿಕ ಮತ್ತು ರಷ್ಯಾ ಸೃಷ್ಟಿಸಿರುವ ನಿರ್ವಾತದಲ್ಲಿ ಹೊಸ ಜಾಗತಿಕ ಹೊಂದಾ ಣಿಕೆಯೊಂದನ್ನು ಜಪಾನ್ ಮತ್ತು ಜರ್ಮನಿ ತಮ್ಮ ರಾಜತಾಂತ್ರಿಕ ಮುಂದಾಳತ್ವದಲ್ಲಿ ಒಟ್ಟಾಗಿ ಸೃಷ್ಟಿಸಿ ಕುಳ್ಳಿರಿಸಲು ಸಾಧ್ಯ ವಿದೆ. ಅದಕ್ಕೆ ಫ್ರಾನ್ಸ್ ಮತ್ತು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳ ಸಹಕಾರ ಪಡೆಯಬಹುದು. ಇದೊಂದು ಸುದೀರ್ಘ ಪ್ರಕ್ರಿಯೆ. ಒಂದಲ್ಲ ಒಂದು ಹಂತದಲ್ಲಿ ವಿಶ್ವಸಂಸ್ಥೆಯೆಂಬ ಪೊಳ್ಳು ವ್ಯವಸ್ಥೆಯನ್ನು ಕೂಡ ಇದು  ಪರಾಮರ್ಶಿಸಬೇಕಾಗುತ್ತದೆ.
ಆಗ ವಿಶ್ವಸಂಸ್ಥೆ ಚುರುಕಾಗುತ್ತದೆ. ಅಲ್ಲಿ ಭಾರತ, ಜರ್ಮನಿ ಮತ್ತು ಜಪಾನ್‌ನ ರಾಜತಾಂತ್ರಿಕ ಅಜೆಂಡಾಗಳಿಗೆ ಅತಿಹೆಚ್ಚು ಬೆಲೆ ಸಿಗುತ್ತದೆ. ಈಗಿನ ಭದ್ರತಾ ಮಂಡಳಿ ತನ್ನಅವಧಿಗಿಂತಹೆಚ್ಚು ಕಾಲ ಬದುಕಿ ಆಗಿದೆ. ಈಗ ಅದು ಒಡೆದ ಮನೆ. ರೂಪಾಂತರ ವೆಂಬುದು ಬಹಳ ಕುತೂಹಲಕರ ಪ್ರಕ್ರಿಯೆ; ಕೆಲ ಸಮಯದವರೆಗೆ ಅಲ್ಲಿ ಏನೂ ಆಗುವುದಿಲ್ಲ, ನಂತರ ಇದ್ದಕ್ಕಿದ್ದಂತೆಎಲ್ಲವೂ ಆಗಿಬಿಡುತ್ತದೆ.
ಇದೊಂಥರಾ ಐತಿಹಾಸಿಕ ಚೋದ್ಯ. ಹಿಂದೆ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಒಟ್ಟಾಗಿ ೨ನೇ ವಿಶ್ವ ಮಹಾಯುದ್ಧ ದಲ್ಲಿ ಜರ್ಮನಿ ಮತ್ತು ಜಪಾನನ್ನು ಹೊಸಕಿಹಾಕಿದ್ದವು.ಫ್ಯಾಸಿಸಂಎಂಬುದು ಆತ್ಮಹತ್ಯೆಯಿದ್ದಂತೆ ಹಾಗೂ ದಬ್ಬಾಳಿಕೆ ಯೆಂಬುದು ಸತ್ತು ಹೋಗಿದೆ ಎಂಬುದನ್ನು ಜಪಾನ್ ಮತ್ತು ಜರ್ಮನಿಗೆ ಅನುಭವವೇ ಕಲಿಸಿಕೊಟ್ಟಿದೆ. 21ನೇ ಶತಮಾನ ಪರಸ್ಪರ ಸಹಕಾರದ ಶತಮಾನವಾಗಬೇಕು. ದೇಶ-ದೇಶಗಳ ನಡುವೆ ಉದಾರವಾದಿ, ಪ್ರಜಾಪ್ರಭುತ್ವವಾದಿ ಹಾಗೂ ಕೊಡುಕೊಳ್ಳುವಿಕೆಯ ವಾತಾವರಣ ನಿರ್ಮಾಣವಾಗ ಬೇಕು. ಈ ಸಮಯ ಅದಕ್ಕೆ ಪ್ರಶಸ್ತವಾಗಿದೆ. ಈ ಸುಸ್ಥಿರ ವಿನ್ಯಾಸಕ್ಕೆ ಭಾರತ ಪ್ರಮುಖ ವಾಸ್ತುಶಿಲ್ಪಿಯಾಗಲಿದೆ.
ಭಾರತದ ಪ್ರಜಾಪ್ರಭುತ್ವ, ಇಲ್ಲಿನ ಉದಾರವಾದಿ ಸಂವಿಧಾನ ಹಾಗೂ ತನ್ನ ಗಡಿಗಳನ್ನೂ ಮೌಲ್ಯಗಳನ್ನೂ ರಕ್ಷಿಸಿಕೊಳ್ಳುವ ಸಾಮರ್ಥ್ಯಗಳು ಹೊಸ ಜಾಗತಿಕ ನಾಯಕತ್ವದ ವ್ಯವಸ್ಥೆಗೆ ಹೇಳಿಮಾಡಿಸಿದಂತಿವೆ. ಈ ಹೊಸ ವ್ಯವಸ್ಥೆಯಲ್ಲಿಶಸ್ತ್ರಾಸ್ತ್ರಗಳಿಗೆ ರಕ್ಷಣೆ ಬೇಕು. ಶಿಂಜೋ ಅಬೆ ಅದನ್ನೂ ಬಾಯಿಬಿಟ್ಟೇ ಹೇಳಿದ್ದಾರೆ; ಜರ್ಮನಿಗೆ ಎಲ್ಲವೂ ತಾನು ಹೇಳಿದಂತೆಯೇ ಆಗಬೇಕು. ಆದರೆ ಆ ದೇಶದ ಮಿಲಿಟರಿ ಮತ್ತೆ ಶಕ್ತಿಶಾಲಿಯಾಗಲು ಬಹಳ ಕಾಲವೇ ಹಿಡಿಯುತ್ತದೆ.16ವರ್ಷಗಳ ಕಾಲ ಏಂಜೆಲಾ ಮಾರ್ಕೆಲ್ ಉಕ್ಕಿನ ಕಣ್ಣು ಹಾಗೂ ಪ್ಲಾಸ್ಟಿಕ್ ಮುಷ್ಟಿಯ ಮೂಲಕ ನಡೆಸಿದ ಆಡಳಿತವೇ ಅದಕ್ಕೆ ಕಾರಣ. ದೇಶಕ್ಕೆ ಆರ್ಥಿಕ ಮುಗ್ಗಟ್ಟು ಎದುರಾ ದಾಗಲೆಲ್ಲ ಆಕೆ ರಕ್ಷಣಾ ಬಜೆಟ್ ಕಡಿತಗೊಳಿಸಿದರು. ಆ ಕಡಿತವನ್ನು ಯಾವತ್ತೂ ತುಂಬಿಕೊಳ್ಳಲಿಲ್ಲ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದಾಗ ಜರ್ಮನ್ ಸೇನೆಯ ಹಾಲಿ ಮುಖ್ಯಸ್ಥ ಅಲೋನ್ಸ್ ಮೇಸ್‌ಗೆ ಚಡಪಡಿಕೆ ತಡೆದು ಕೊಳ್ಳಲು ಆಗಲಿಲ್ಲ. ‘ನನ್ನ ಸೇನೆ ಹೆಚ್ಚುಕಮ್ಮಿ ಖಾಲಿ ಕೈಲಿ ಓಡಾಡುತ್ತಿದೆ. ನ್ಯಾಟೋ ಮೂಲಕ ನಾವು ನೀಡಬಹುದಾದ ಸಹಕಾರ ತುಂಬಾ ಕಡಿಮೆ. ಅಕ್ಷರಶಃ ನಾನು ನಿಸ್ಸಹಾಯಕನಾಗಿದ್ದೇನೆ’ ಎಂದು ಬಹಿರಂಗವಾಗಿ ಹೇಳಿದರು. ಮನಸ್ಸು ಮಾಡಿದರೆ ಅವರೀಗ ಸುಧಾರಣೆಯತ್ತ ಗಮನ ಹರಿಸಲು ಸಾಧ್ಯವಿದೆ. ಯುದ್ಧ ಶುರುವಾದಾಗ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳು ಬಿದ್ದರೂ ಫೈಟರ್ ಜೆಟ್ ಮತ್ತು ಅತ್ಯಾಧುನಿಕ ಶಸಾಸಗಳನ್ನು ತಯಾರಿಸುವ ಬಿಎಇ ಸಿಸ್ಟಂ ಕಂಪನಿಯ ಷೇರುಗಳು ಮಾತ್ರ ಶೇ.೧೦ರಷ್ಟುಜಿಗಿದು ಮೇಲೆದ್ದವು. ಅಂತಾರಾಷ್ಟ್ರೀಯಶಸ್ತ್ರಾಸ್ತ್ರಮಾರುಕಟ್ಟೆಯ ನೇತಾರರು ಈಗಾಗಲೇ ಬೋರ್ಡ್ ಮೀಟಿಂಗುಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾರುಕಟ್ಟೆಗೆ ತಾನೇನು ಮಾಡುತ್ತಿದ್ದೇನೆಂಬುದು ಗೊತ್ತಿದೆ.
ಬ್ರಿಟನ್ ಜೋರಾಗಿ ಮಾತನಾಡುತ್ತ ತನ್ನ ದೌರ್ಬಲ್ಯ ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತಿದೆ. ಆದರೆ ಅದರ ಬಂಡವಾಳ ಬಯಲಾ ಗಲು ಒಂದೇ ಸಂಗತಿ ಸಾಕು. ಆ ದೇಶದ ಬಳಿ ಹೆಚ್ಚೆಂದರೆ 200 ಯುದ್ಧ ಟ್ಯಾಂಕ್‌ಗಳು ಮಾತ್ರ ಉಳಿದಿವೆ. ಉಕ್ರೇನ್‌ಗೆ ಅದು ಸಾಕಷ್ಟು ಬಾಂಬ್‌ಗಳನ್ನು ಕೂಡ ಕಳಿಸಲಿಲ್ಲ. ಏಕೆಂದರೆ ಅದರ ಬಳಿ ಸಾಕಷ್ಟು ಬಾಂಬ್‌ಗಳಿರಲಿಲ್ಲ. ಈಗ 1945 ಸುದೀರ್ಘ ಕೋಮಾ ದಿಂದ ಯುರೋಪ್ ನಿಧಾನವಾಗಿ ಎದ್ದು ಕುಳಿತುಕೊಳ್ಳಲಿದೆ. ಅಮೆರಿಕದ ಭದ್ರತಾ ಕವಚವೆಂಬುದು ಭ್ರಮೆಯೆಂದು ಗೊತ್ತಾದ ಮೇಲೆ ಎದ್ದೇಳಲೇಬೇಕಲ್ಲವೇ? ಯುರೋಪಿನಾದ್ಯಂತ ರಕ್ಷಣಾ ಬಜೆಟ್ ಮೊತ್ತ ಏರಿಕೆಯಾಗುವಂತೆ ಪುಟಿನ್ ಮಾಡಿ ದ್ದಾರೆ.
ಯುದ್ಧದಿಂದ ಧ್ವಂಸಗೊಂಡಿದ್ದ ಆರ್ಥಿಕತೆಯನ್ನು ಮರಳಿ ಕಟ್ಟಿಕೊಂಡ ನಂತರ ಆ ಆರ್ಥಿಕತೆಗಳನ್ನು ರಕ್ಷಿಸಿಕೊಳ್ಳಲುಯುರೋಪಿಯನ್ ಯೂನಿಯನ್ ಈಗ ತನ್ನ ರಕ್ಷಣಾ ಪಡೆಗಳನ್ನೂ ಮರಳಿ ಕಟ್ಟಬೇಕಿದೆ. ಅದರ ನಡುವೆ ರಷ್ಯಾ ತನ್ನ ಮುಂದಿರುವ ಆಯ್ಕೆಗಳನ್ನು ಮರುವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ವಾಸ್ತವ ಏನು ಎಂಬುದನ್ನು ಅರ್ಥ ಮಾಡಿಕೊಂಡರೆ ಈ ಕೆಲಸ ಮಾಡುವುದು ಹೇಗೆಂಬುದು ರಷ್ಯಾಕ್ಕೆ ತಿಳಿಯುತ್ತದೆ. ನ್ಯಾಟೋ ಪಡೆಗಳನ್ನು ದೂರವಿಡುವ ವಿಷಯದಲ್ಲಿ ಉಕ್ರೇನ್‌ ನಿಂದ ರಷ್ಯಾಕ್ಕೆ ಬೇಕಿರುವ ಬದ್ಧತೆಯೇನೋ ಸಿಗಬಹುದು. ಆದರೆ ರಷ್ಯಾಕ್ಕೆ ತನ್ನ ಸಾಹಸ ಪ್ರವೃತ್ತಿಯೇದೀರ್ಘಾವಧಿಗುರಿ ಗಳನ್ನು ಸಾಧಿಸಲು ಅಡ್ಡಿಯಾಗಬಹುದು. ಪಾಶ್ಚಾತ್ಯ ದೇಶಗಳು ಹೇರಿರುವ ನಿರ್ಬಂಧಗಳ ಬಗ್ಗೆ ರಷ್ಯಾ ಹೆಚ್ಚು ತಲೆಕೆಡಿಸಿ ಕೊಂಡಿಲ್ಲ. ಏಕೆಂದರೆ ಅಮೆರಿಕವಾಗಲೀ ಯುರೋಪ್ ಆಗಲಿ ಗ್ಯಾಸ್ ಪೈಪುಗಳನ್ನು ಬಂದ್ ಮಾಡಲು ಸಿದ್ಧವಿಲ್ಲವೆಂಬುದು ಅದಕ್ಕೆ ಗೊತ್ತು.
ಕಳೆದ ಡಿಸೆಂಬರ್‌ನಲ್ಲಿ 65 ಡಾಲರ್ ಇದ್ದ ಒಂದು ಬ್ಯಾರಲ್ ತೈಲ ಬೆಲೆ ಈಗ 110 ಡಾಲರ್‌ಗೆ ತಲುಪಿದೆ ಎಂಬುದರ ಅರ್ಥ ರಷ್ಯಾಕ್ಕೆ ನಿತ್ಯ ತೈಲ ಮಾರಾಟದಿಂದ ಸಿಗುವ ಲಾಭ ದುಪ್ಪಟ್ಟಾಗಿದೆ. ಅದಕ್ಕಿಂತ ಹೆಚ್ಚಾಗಿ, ರಷ್ಯಾ ಕೂಡ ಬೇರೆ ದೇಶಗಳಿಗೆ ಬಹಳ ಗಟ್ಟಿಯಾಗಿ ಆರ್ಥಿಕ ಹೊಡೆತ ನೀಡುವ ಶಕ್ತಿ ಹೊಂದಿದೆ ಎಂಬುದನ್ನು ನಾವೆಲ್ಲ ಮರೆತು ಬಿಟ್ಟಿದ್ದೇವೆ. ಅದರ ಬಳಿ ಜಗತ್ತಿನಲ್ಲೇ ಅತಿ ಹೆಚ್ಚು ಸಿ೪ ಎ-6 ಗ್ಯಾಸ್ ದಾಸ್ತಾನಿದೆ. ಪಶ್ಚಿಮ ಸೈಬೀರಿಯಾದಲ್ಲಿ ರುವ ‘ಟೈಟಾನಿಯಂ ಕಣಿವೆ’ಯಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಟೈಟಾನಿಯಂ ಅನ್ನು ರಷ್ಯಾ ಉತ್ಪಾದಿಸುತ್ತದೆ. ಸೆನ್ಸರ್‌ಗಳು ಮತ್ತು ಕಂಪ್ಯೂಟರ್ ಮೆಮೊರಿಯಲ್ಲಿ ಬಳಸುವ ಪೆಲಾಡಿಯಂ ಲೋಹವನ್ನು ಅತಿಹೆಚ್ಚು ಪೂರೈ ಸುವ ದೇಶಗಳಲ್ಲಿ ರಷ್ಯಾ ಕೂಡ ಒಂದು. 2018ರಲ್ಲಿ ರಷ್ಯಾದ ಅತಿ ದೊಡ್ಡ ಅಲ್ಯುಮಿನಿಯಂ ಉತ್ಪಾದಕ ಕಂಪನಿಯ ಮೇಲೆ ಪಾಶ್ಚಾತ್ಯ ದೇಶಗಳು ನಿರ್ಬಂಧ ಹೇರಿದ್ದವು.
ನಂತರ ಜಗತ್ತಿನಾದ್ಯಂತ ಅಲ್ಯುಮಿನಿಯಂ ಬೆಲೆ ಯದ್ವಾತದ್ವಾ ಏರಿಕೆಯಾದಾಗ ಆ ನಿರ್ಬಂಧಗಳನ್ನು ಮುಗುಮ್ಮಾಗಿ ಕೈಬಿಟ್ಟಿ ದ್ದವು. ಅದು ಪುಟಿನ್‌ಗೆ ಚೆನ್ನಾಗಿ ಗೊತ್ತಿದೆ. 1975ರಿಂದ 1991ರವರೆಗೆ ರಷ್ಯಾದ ಗುಪ್ತಚರ ದಳದಲ್ಲಿ ಪುಟಿನ್ಅಧಿಕಾರಿಯಾಗಿದ್ದರು. ಅಷ್ಟೂ ಸಮಯ ಅವರು ಪಶ್ಚಿಮ ದೇಶಗಳ ಜತೆ ವ್ಯವಹರಿಸಿದ್ದಾರೆ. ನಂತರ ರಷ್ಯಾದ ಅಧ್ಯಕ್ಷ ಅಥವಾ ಪ್ರಧಾನಿಯಾಗಿ ಎರಡು ದಶಕಗಳ ಕಾಲ ಪಾಶ್ಚಾತ್ಯರೊಡನೆ ಏಗಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮಾಡುತ್ತಿರುವ ಯುದ್ಧದ ಹಿಂದಿನ ಲೆಕ್ಕಾಚಾರವೇ ತಪ್ಪು ಎಂಬುದು ನಿಜ. ಆದರೆ ಆ ತಪ್ಪು ಕೂಡ ಕ್ರಮೇಣ ಮುಚ್ಚಿಹೋಗುತ್ತದೆ, ಏಕೆಂದರೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ನ್ಯಾಟೋ ದೇಶಗಳ ಪರವಾಗಿ ಹೋರಾಡಿದಂತೆ ಉಕ್ರೇನ್ ಪರ ಹೋರಾಡಲು ಸಿದ್ಧವಿಲ್ಲ ಎಂಬುದು ಪುಟಿನ್‌ಗೆ ಗೊತ್ತಿದೆ.
ಅದಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲಿ ಹೆನ್ರಿ ಕಿಸಿಂಜರ್‌ರಂತಹ ಒಂದಷ್ಟು ಸಂತರಿದ್ದಾರೆ. ಅವರಿಗೆ ಉಕ್ರೇನ್‌ನ ಕಳವಳಗಳು ಹೇಗೆ ಗೊತ್ತಿವೆಯೋ ಹಾಗೆಯೇ ರಷ್ಯಾದ ಕಳವಳಗಳೂ ಗೊತ್ತಿವೆ. ಆದರೆ, ಪುಟಿನ್‌ಗೂ ಪರಿಸ್ಥಿತಿ ತನ್ನ ಕೈಮೀರಿ ಹೋಗಿದೆ ಎಂಬುದು ಅರ್ಥವಾಗಲಿದೆ. ಬಹುತೇಕ ಎಲ್ಲ ಯುದ್ಧಗಳ ಪರಿಣಾಮವೂ ಏನಾಗ ಬೇಕಿತ್ತೋ ಅದೇ ಆಗಿದೆ. ಇತಿಹಾಸದ ಕತೆ ಬೇರೆಯದೇರೀತಿಯಲ್ಲಿರಬಹುದು. ಒಂದನೇ ಮಹಾಯುದ್ಧ ಶುರು ವಾಗಿದ್ದು ಯುರೋಪಿಗೆ ಸವಾಲೆಸೆಯುವುದಕ್ಕಾಗಿ. ಅದು, ಯುರೇಷಿಯಾ ವನ್ನು ಆರು ಶತಮಾನಗಳ ಕಾಲ ನಿಯಂತ್ರಿಸಿದ್ದ ಮೂರು ಸಾಮ್ರಾಜ್ಯಗಳ ಪತನದೊಂದಿಗೆ ಕೊನೆಗೊಂಡಿತು.
ಎರಡನೇ ಮಹಾಯುದ್ಧವೂ ಹೆಚ್ಚುಕಮ್ಮಿ ಇವೇ ಶಕ್ತಿಗಳ ನಡುವಿನ ಇನ್ನೊಂದು ಘರ್ಷಣೆಯಾಗಿ ಆರಂಭಗೊಂಡಿತ್ತು. ಆದರೆ, ಪೂರ್ವ ಹಾಗೂ ಪಶ್ಚಿಮದ ದೇಶಗಳಲ್ಲಿ ವಸಾಹತುಶಾಹಿ ವ್ಯವಸ್ಥೆಯನ್ನು ಛಿದ್ರಗೊಳಿಸುವುದರೊಂದಿಗೆ ಅದು ಕೊನೆಗೊಂಡಿತು. ಆಗ ವಾಷಿಂಗ್ಟನ್ ಮತ್ತು ಮಾಸ್ಕೋ ನೇತೃತ್ವದಲ್ಲಿ ಹೊಸ ಸೂಪರ್ ಪವರ್‌ಗಳು ಹುಟ್ಟಿಕೊಂಡವು. ಈಗ ಉಕ್ರೇನ್‌ನಿಂದ ಮಹಾಯುದ್ಧವೇನೂ ಶುರುವಾಗುವುದಿಲ್ಲ. ಆದರೆ, ಅದು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ಜಗತ್ತು ಮತ್ತೆ ದಿಕ್ಕು ಬದಲಿಸುತ್ತಿದೆ. ಆಶಾವಾದಿಗಳು ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಕಾಯಲು ಅಡ್ಡಿಯಿಲ್ಲ.
(ಲೇಖಕರು ರಾಜ್ಯಸಭೆ ಸದಸ್ಯರು ಹಾಗೂ ಹಿರಿಯ ಪತ್ರಕರ್ತರು)