ಆಪರೇಷನ್‌ ಗಂಗಾ: ರಾಜತಾಂತ್ರಿಕ ಫಲ
ಸಂಪ್ರತ
ಪ್ರಕಾಶ್ ಶೇಷರಾಘವಾಚಾರ್‌
@.
ಇಂದಿನ ಜಾಗತೀಕರಣ ಯುಗದಲ್ಲಿ ಭಾರತೀಯರ ಹೆಜ್ಜೆ ಗುರುತುಗಳು ವಿಶ್ವದ ಅನೇಕ ದೇಶಗಳಲ್ಲಿ ವ್ಯಾಪಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ಆರಂಭವಾಗುವ ತನಕ ಪ್ರಾಯಶಃ ಬಹುತೇಕ ಭಾರತೀಯರಿಗೆ ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯ ವಿದ್ಯಾರ್ಥಿಗಳು ವೈದ್ಯ ಶಿಕ್ಷಣ ಕೈಗೊಳ್ಳುತ್ತಿದ್ದಾರೆ ಎಂಬ ಮಾಹಿತಿಯೇ ಇರಲಿಲ್ಲ.
ರಾಜಕೀಯ ಅಸ್ಥಿರತೆ ಉಂಟಾಗಿ ಯುದ್ಧ ಅಥವಾ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಪರದೇಶದಲ್ಲಿ ಸಿಲುಕಿರುವ ಭಾರತೀಯ ರನ್ನು ಸುರಕ್ಷಿತ ವಾಪಸ್ ಕರೆತರುವುದು ಭಾರತ ಸರಕಾರದ ಕರ್ತವ್ಯ. ಸರಕಾರದ ಅಂಕಿ ಅಂಶಗಳ ಪ್ರಕಾರ 1.33 ಕೋಟಿ ಭಾರತೀಯರು ಉದ್ಯೋಗ ಮತ್ತು ವಿದ್ಯಾಭ್ಯಾಸ ಮುಂತಾದ ಕಾರಣಗಳಿಗೆ ವಿಶ್ವದ 200 ದೇಶಗಳಲ್ಲಿ ನೆಲೆಸಿದ್ದಾರೆ. ಈ ಪೈಕಿ 90 ಲಕ್ಷ ಜನ ಕೇವಲ ಆರೇ ದೇಶಗಳಲ್ಲಿ ನೆಲೆಸಿದ್ದಾರೆ. ಹೀಗೆ ವಿದೇಶ ಗಳಲ್ಲಿ ನೆಲೆಸಿರುವ ಭಾರತೀಯರು ಯುದ್ಧದಂಥ ಸಂಕಷ್ಟಕ್ಕೆ ಸಿಲುಕಿ ಭಾರತಕ್ಕೆ ವಾಪಸಾ ಗಿದ್ದು, ಅವರನ್ನು ಕರತರಲು ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲಲ್ಲ.
ಇರಾಕ್ ಸೇನೆಯು ಕುವೈತ್ ಅನ್ನು ಆಕ್ರಮಿಸಿ ಕೊಂಡ ಸಂದರ್ಭದಲ್ಲಿ ಅಲ್ಲಿ ನೆಲೆಸಿದ್ದ 1.1 ಲಕ್ಷ ಭಾರತೀಯರನ್ನು ವಾಪಸ್ ಕರತರಲಾಗಿತ್ತು. ‘ಆಪರೇಷನ್ ಡೆಸರ್ಟ್ ಸ್ಟ್ರಾಂ’ಗೂ ಮುನ್ನ ಅವರನ್ನು ಭಾರತಕ್ಕೆ ಕರೆ ತರಬೇಕಾಗಿತ್ತು. ಎರಡು ತಿಂಗಳು ಸತತವಾಗಿ ನಡೆದ ಕಾರ್ಯಾಚರಣೆಯಿಂದ ಎಲ್ಲ ಭಾರತೀಯರೂ ಕ್ಷೇಮವಾಗಿ ಹಿಂದಿರುಗಿದ್ದರು. ಈ ಉದಾಹರಣೆಯನ್ನು ಅನೇಕರು ಇತ್ತೀಚೆಗೆ ಪದೇ ಪದೇ ಕೊಡುತ್ತಿದ್ದಾರೆ.
ಆದರೆ ಇರಾಕ್ ಅಂದು ಕುವೈತ್ ಆಕ್ರಮಿಸಿಕೊಂಡ ಹನ್ನೆರೆಡು ದಿನಗಳು ಕಳೆದರೂ ಭಾರತ ಸರಕಾರ ಯಾವ ವ್ಯವಸ್ಥೆಯನ್ನೂ ಮಾರೆಲಾಗಿರಲಿಲ್ಲ. ಇರಾಕ್ ಭಾರತದ ಮಿತ್ರ ರಾಷ್ಟ್ರವಾಗಿದ್ದರೂ ಭಾರತೀಯ ನಾಗರಿಕರು ನಾನಾ ತೊಂದರೆಯನ್ನು ಅನು ಭವಿಸಿದ್ದರು. ಅಂದಿನ ವಿದೇಶಾಂಗ ಸಚಿವ ಐ.ಕೆ.ಗುಜ್ರಾಲ್ ಅವರು ಇರಾಕ್‌ಗೆ ತೆರಳಿ ಭಾರತೀಯರಿಗೆ ಸುರಕ್ಷಿತ ದಾರಿ ನೀಡಲು ಮನವಿ ಮಾಡಿದ ತರುವಾಯವೇ ಹಾದಿ ಸುಗುಮವಾಗಿದ್ದು.
2011ರಲ್ಲಿ ಲಿಬಿಯಾದಲ್ಲಿ ಅಂತರ್ಯದ್ಧ ನಡೆದಾಗ ಭಾರತ 15 ಸಾವಿರ ನಾಗರಿಕರನ್ನು ಭಾರತಕ್ಕೆ ವಾಪಸ್ ಕರತರಲು ‘ಆಪರೇಷನ್ ಹೋಂ ಕಮಿಂಗ್’ ಕೈಗೊಳ್ಳಲಾಗಿತ್ತು. 2014 ರಲ್ಲಿ ಇರಾಕ್ ಮತ್ತು ಐಸಸ್ ಇಸ್ಲಾಮಿಕ್ ಉಗ್ರಗಾಮಿಗಳ ನಡುವೆಯುದ್ಧ ಆರಂಭವಾದಾಗ ಇರಾಕ್ನಲ್ಲಿ ನೆಲೆಸಿದ್ದ ೯ ಸಾವಿರ ಭಾರತೀಯರನ್ನು ವಾಪಸ್ ಕರೆತರಲಾಗಿತ್ತು. 44 ನರ್ಸ್‌ಗಳು ಇರಾಕ್‌ನ ಆಸ್ಪತ್ರೆಯೊಂದರಲ್ಲಿ ಒತ್ತೆಯಾಳುಗಳಾಗಿದ್ದರು. ಅವರನ್ನು ಕೂಡ ಸುರಕ್ಷಿತವಾಗಿ ಹಿಂದಕ್ಕೆ ಕರೆತರಲಾಯಿತು.
೨೦೧೫ರಲ್ಲಿ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದಾಗ ‘ಆಪರೇಷನ್ ಮೈತ್ರಿ’ ಹೆಸರಲ್ಲಿ ಭಾರತೀಯ ಸೇನೆ ಭೂಕಂಪ ಪೀಡಿತರಿಗೆ ನೆರವು ನೀಡಿ ನೇಪಾಳದಲ್ಲಿ ಸಿಲುಕಿದ್ದ 43 ಸಾವಿರ ಭಾರತೀಯರನ್ನು ವಾಪಸ್ ಕರತಂದಿತ್ತು. 2015ರಲ್ಲಿ ಯೆಮನ್ ಹಾಗೂ ಹೌತಿ ಬಂಡುಕೋರರ ನಡುವೆ ಭೀಕರ ಕಾಳಗ ಆರಂಭವಾಗಿತ್ತು. ಇದರೊಂದಿಗೆ ಸೌದಿ ಅರೇಬಿಯಾವು ಯೆಮನ್ ನಗರ ಗಳ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿತ್ತು. ಯೆಮನ್‌ನಲ್ಲಿ ಸಿಲುಕಿಕೊಂಡ ಸಾವಿರಾರು ಭಾರತೀಯರು ತಾಯಿ ನಾಡಿಗೆ ವಾಪಸ್ ಬರಲು ತುದಿಗಾಲಿನಲ್ಲಿ ನಿಂತಿದ್ದರು. ಕೊನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾ ದೊರೆಯೊಂದಿಗೆ ಮಾತನಾಡಿ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು.
ಭಾರತದ ವಿಮಾನ ಹಾರಾಟಕ್ಕೆ ಸುರಕ್ಷಿತ ಕವಚಕ್ಕೆ ಒಪ್ಪಿಗೆ ಪಡೆದಿದ್ದರು. ‘ಆಪರೇಷನ್ ರಾಹತ್’ ಹೆಸರಲ್ಲಿ ಕಾರ್ಯಾಚರಣೆ ನಡೆದಿತ್ತು. ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರನ್ನು ಯೆಮನ್‌ಗೆ ಕಳುಹಿಸಿ ಕೊಡಲಾಯಿತು. ಅವರ ನೇತೃತ್ವ ದಲ್ಲಿ ಹಡುಗು ಮತ್ತು ವಿಮಾನದ ಮೂಲಕ 4640 ಭಾರತೀಯರು ಮತ್ತು 41 ದೇಶಗಳಿಗೆ ಸೇರಿದ್ದ 963 ವಿದೇಶಿ ನಾಗರಿಕರನ್ನುಸುರಕ್ಷಿತವಾಗಿ ಕರತರಲಾಯಿತು. ಭಾರತವು ಹೊಂದಿದ್ದ ಉತ್ತಮ ರಾಜತಾಂತ್ರಿಕ ಸಂಬಂಧವು ಭಾರತೀಯರನ್ನು ಕಾಪಾಡಲು ಅಂದು ಬಹುಮುಖ್ಯ ಭೂಮಿಕೆಯನ್ನು ನಿರ್ವಹಿಸಿತ್ತು. ಅಂದು ಸಹ ಭಾರತೀಯ ನಾಗರಿಕರಿಗೆ ಏಡೆನ್ ಬಂದರು ಮತ್ತು ವಿಮಾನ ನಿಲ್ದಾಣಕ್ಕೆ ಬಂದು ಸೇರಲು ಸೂಚಿಸಲಾಗಿತ್ತು. ಪರಿಸ್ಥಿತಿಯ ಅರಿವು ಅವರಿಗೆಲ್ಲ ಇದ್ದ ಕಾರಣ, ಈಗ ಕೆಲವು ವಿದ್ಯಾರ್ಥಿಗಳು ಮಾತನಾಡಿದ ಹಾಗೆ ಯಾರು ಅಪಸ್ವರ ತೆಗೆದಿರಲಿಲ್ಲ.
2016ರಲ್ಲಿ ದಕ್ಷಿಣ ಸೂಡಾನ್‌ನ ಅಂರ್ತಯುದ್ಧ ತಾರಕಕ್ಕೆ ಹೋದಾಗ ಅಲ್ಲಿ ನೆಲೆಸಿದ್ದ 1400 ಭಾರತೀಯರು ಮತ್ತು ವಿದೇಶಿ ನಾಗರಿಕರನ್ನು ‘ಆಪರೇಶನ್ ಸಂಕಟಮೋಚನ’ ಹೆಸರಲ್ಲಿ ಭಾರತೀಯ ವಾಯುಸೇನೆ ಸಹಾಯದಿಂದ ಹಿಂದಕ್ಕೆ ಕರತರಲಾಗಿತ್ತು.ತೀರಾ ಇತ್ತೀಚೆಗೆ, ಕೋವಿಡ್ ಸಂಕಷ್ಟದಲ್ಲಿ ಪ್ರಪಂಚದನಾನಾ ದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ‘ವಂದೇ ಭಾರತಮ್ ಮಿಷನ್’ ನಡಿಯಲ್ಲಿ 1819734 ಜನರನ್ನು 11523 ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತರಲಾಯಿತು.
ಸವಾಲಿನ ಕಾರ್ಯಾಚರಣೆಯೆಂದರೆ ಕೊರೋನಾ ವೈರಸ್‌ನ ಕೇಂದ್ರ ಬಿಂದು ಚೀನಾದ ವುಹಾನ್‌ನಲ್ಲಿ ನೆಲೆಸಿದ್ದ ಭಾರತೀಯ ವಿದ್ಯಾರ್ಥಿಗಳನ್ನು ವಿಶೇಷ ವಿಮಾನದ ಮೂಲಕ ವಾಪಸ್ ಭಾರತಕ್ಕೆ ಕರತಂದಿದ್ದು. ವುಹಾನ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿ ಗಳನ್ನು ಹಿಂದಕ್ಕೆ ಕರತರಲು ಭಾರತೀಯ ದೂತಾವಾಸದ ಅಧಿಕಾರಿಗಳು ಬಹುದೊಡ್ಡ ಕಸರತ್ತು ಮಾಡಬೇಕಾಯಿತು. ಚೀನಾದಲ್ಲಿ ನೆಲೆಸಿದ್ದ ಭಾರತೀಯರನ್ನು ದೂತಾವಾಸದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಿರಲಿಲ್ಲ.
ಹೀಗಾಗಿ ಭಾರತೀಯರ ಪಟ್ಟಿ ದೂತಾವಾಸದ ಬಳಿ ಇರಲಿಲ್ಲ. ಕೊನೆಗೂ ಇತರ ಭಾರತೀಯ ನಾಗರಿಕರ ಸಹಾಯದಿಂದ ಎಲ್ಲರನ್ನೂ ಸಂಪರ್ಕಿಸಿ ಹೂಬೈ ಮತ್ತು ವುಹಾನ್ ಪ್ರಾಂತ್ಯಗಳಲ್ಲಿದ್ದ 628 ವಿದ್ಯಾರ್ಥಿಗಳನ್ನು ಬಾಡಿಗೆಗೆ ಬಸ್ಸ್ ಪಡೆದು ನಿಗದಿತಸ್ಥಳಕ್ಕೆ ಕರೆತಂದು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಸುರಕ್ಷಿತವಾಗಿ ಭಾರತಕ್ಕೆ ಕರತರಲಾಯಿತು. ಈ ಹಿಂದೆ ಗಲ ಯುದ್ಧದ ವೇಳೆ ಅತಿ ಹೆಚ್ಚು ನಾಗರಿಕರನ್ನು ವಾಪಸ್ ಕರೆತಂದು ದಾಖಲೆಯನ್ನು ಮುರಿಯಲಾಯಿತು. ಆನಂತರ, ಮೊನ್ನೆಮೊನ್ನೆಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತ ಸ್ಥಾಪನೆ ಯಾದಾಗಲೂ ೧೫೦೦ ಭಾರತೀಯರನ್ನು ಹಿಂದಕ್ಕೆ ಕರತರಲಾಗಿದೆ.
ದೂತಾವಾಸದಲ್ಲಿ ಸಿಲುಕಿದ್ದ ಭಾರತೀಯ ನಾಗರಿಕರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ತಾಲೀಬಾನ್ ಆಡಳಿತ ದೊಂದಿಗೆ ಮಾತುಕತೆ ನಡೆಸಿ ಸುರಕ್ಷಿತ ರಹದಾರಿಯ ಆಶ್ವಾಸನೆ ಪಡೆದು ಸ್ವದೇಶಕ್ಕೆ ಮರಳಿಸಲಾಯಿತು. ಇದೀಗ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರನ್ನು ಕರತರುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಿ ರುಮೇನಿಯಾ, ಪೊಲೆಂಡ್ ಗಡಿ ತಲುಪಿದ್ದಾರೆ.
ಅಲ್ಲಿಂದ ಅವರನ್ನು ವಿಮಾನದ ಮೂಲಕ ಭಾರತಕ್ಕೆ ಕರತರಲಾಗುತ್ತಿದೆ. ರಷ್ಯ ಪಡೆಗಳು ಈಗಾಗಲೇ ಉಕ್ರೇನ್‌ನ ಪ್ರಮುಖ ನಗರಗಳನ್ನು ಪ್ರವೇಶಿಸಿ ಭೀಕರ ಕಾಳಗದಲ್ಲಿ ತೊಡಗಿವೆ. ಇಂತಹ ದುರ್ಗಮ ಸವಾಲಿನ ನಡುವೆ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರತರುವುದು ಒಂದು ಸಾಹಸಯುಕ್ತ ಕಾರ್ಯಾಚರಣೆಯೇ ಸರಿ. ದೂತಾವಾಸದ ಅಧಿಕಾರಿಗಳು ಭಾರತೀ ಯರ ಪಟ್ಟಿ ಸಿದ್ಧಪಡಿಸಿ ಅವರನ್ನು ಸಂಪರ್ಕಿಸಿ ಅವರಿರುವ ಜಾಗದ ಮಾಹಿತಿ ಪಡೆಯಬೇಕು. ಸತತ ಸಂಪರ್ಕದ ಮೂಲಕ ಅವರಿಗೆ ಧೈರ್ಯ ತುಂಬ ಬೇಕಾಗುತ್ತದೆ.
ರಾಜತಾಂತ್ರಿಕ ಮೂಲಗಳಲ್ಲಿ ಕರೆ ತರಲು ಅನುಮತಿ ಪಡೆಯಬೇಕು ಮತ್ತು ಅವರು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ತಲುಪಲು ಸ್ಥಳೀಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಬೇಕಾಗುತ್ತದೆ. ಯುದ್ಧದ ಸಂದರ್ಭದಲ್ಲಿ ದೂತಾವಾಸದವರು ವಾಹನ ವ್ಯವಸ್ಥೆ ಮಾಡೋಣವೆಂದರೆ ಶೆಲ್ಲಿಂಗ್ ನಡೆಯುತ್ತಿರುವ ಭಾಗಕ್ಕೆ ಚಾಲಕರು ಬರುವ ಖಾತರಿ ಇರುವುದಿಲ್ಲ. ಕೀವ್‌ನಲ್ಲಿ ರೈಲು ಹತ್ತಲು ಸ್ಥಳೀಯರು ಬೇರೆ ದೇಶದ ನಾಗರಿಕರಿಗೆ ಅಡ್ಡಿ ಪಡಿಸುತ್ತಿರುವ ಗಂಭೀರ ಪರಿಸ್ಥಿತಿಯಿರುವಾಗ ದೂರದಲ್ಲಿರುವ ದೂತಾವಾಸದ ಅಽಕಾರಿಗಳಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವೆ ಇಲ್ಲ. ಸಂಕಷ್ಚದ ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ತಲುಪುವುದು ಮುಖ್ಯವೇ ವಿನಹ ಅಲ್ಲಿ ಪಡಬೇಕಾದ ಸಣ್ಣ ಪುಟ್ಟ ತೊಂದರೆಗಳು ಸಹಜ ಮತ್ತು ಅದನ್ನು ನಿರೀಕ್ಷಿತವೂ ಕೂಡ.
ಉಕ್ರೇನ್ ತನ್ನ ಆಗಸದಲ್ಲಿ ನಾಗರಿಕ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ. ರಷ್ಯ ಅಥವಾ ಉಕ್ರೇನ್ ಹಾರಿಸುವ ಮಿಸೈಲ್‌ ಗಳು ವಿಮಾನಕ್ಕೆ ಅಪಾಯವೊಡ್ಡುವ ಪರಿಸ್ಥಿತಿಯ ಕಾರಣ, ವಿಮಾನ ಹಾರಾಟ ಸಾಧ್ಯವಿಲ್ಲದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಗಡಿ ಭಾಗಕ್ಕೆ ಬರುವುದು ಅನಿವಾರ್ಯ. ಭಾರತೀಯರನ್ನು ಕಾಪಾಡುವ ಹೊಣೆ ಕೇಂದ್ರ ಸರಕಾರದ ಮೇಲೆ ಇರುವುದು ನಿಜ. ಸರಕಾರ ಉಪಕಾರ ಮಾಡುತ್ತಿಲ್ಲ, ಬದಲಿಗೆ ತನ್ನ ಕರ್ತವ್ಯ ಮಾಡುತ್ತಿದೆ. ಆದರೆ ತನ್ನ ಕರ್ತವ್ಯವನ್ನು ಅಚ್ಚುಕಟ್ಚಾಗಿ, ವೇಗವಾಗಿ ಸರಕಾರಿ ಬಾಬುಗಳ ಸಂಸ್ಕೃತಿಯಿಲ್ಲದ, ವೃತ್ತಿಪರತೆಯಿಂದ ತೆರವು ಕಾರ್ಯಾಚರಣೆ ಮೂಲಕ ನಿರ್ವಹಿಸುತ್ತಿರುವುದನ್ನು ಪ್ರಶಂಸಿಸಲೇ ಬೇಕಿದೆ.
ಕೇವಲ ಪ್ರಧಾನಿ ಮತ್ತು ಇತರ ಸಚಿವರನ್ನಲ್ಲ, ಈ ಯಶಸ್ಸಿನ ಹಿಂದೆ ಹಗಲೂ ರಾತ್ರಿ ಶ್ರಮವಹಿಸಿ ಕಾರ್ಯನಿರತರಾಗಿರುವ ಅನೇಕ ಅಧಿಕಾರಿಗಳಿಗು ಮತ್ತು ಸಿಬ್ಬಂದಿಗಳಿಗೂ ಈ ಪ್ರಶಂಸೆ ಸಲ್ಲುತ್ತದೆ. ಗಮನಾರ್ಹ ವಿಷಯವೆಂದರೆ ಯುದ್ಧ ಆರಂಭವಾಗಿ ಹತ್ತು ದಿನಗಳ ತರುವಾಯ ಚೀನಾ, ಉಕ್ರೇನ್‌ನಲ್ಲಿ ಸಿಕ್ಕಿ ಬಿದ್ದಿರುವ ತನ್ನ ನಾಗರಿಕರ ರಕ್ಷಣೆಗೆ ಧಾವಿಸಿದ್ದು. ಆದರೆ ಭಾರತ ತನ್ನ ನಾಗರಿ ಕರ ರಕ್ಷಿಸುವುದರಲ್ಲಿ ಮೊದಲ ದಿನದಿಂದಲೂ ಮೂಂಚೂಣಿಯಲ್ಲಿದೆ. ಸ್ವತಃ ನಾಲ್ವರು ಕೇಂದ್ರ ಸಚಿವರ ಮೇಲ್ವಿಚಾರಣೆ ಯಲ್ಲಿ ಕಾರ್ಯಾಚರಣೆ ನಡೆಯುತ್ತಿರುವುದು ಸರಕಾರ ನೀಡಿರುವ ಪ್ರಾಮುಖ್ಯ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಈ ಬದ್ಧತೆ ಯಿಂದಲೇ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಕೇಂದ್ರ ಸರಕಾರವು ಎಡವಟ್ಟು ಮಾಡುವುದಿಲ್ಲ ಎಂಬ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೂಡಿರುವುದು.
ಈಗಾಗಲೇ 63 ವಿಶೇಷ ವಿಮಾನಗಳಲ್ಲಿ 13ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಒಮ್ಮೆಗೆ ಹೆಚ್ಚು ಜನರನ್ನು ಹೊತ್ತು ತರಬಲ್ಲ ಭಾರತೀಯ ವಾಯುಪಡೆಯ ಇ-17 ವಿಮಾನವನ್ನು ಕೂಡ ಕಾರ್ಯಾಚರಣೆಯಲ್ಲಿ ಳಸಲಾಗಿದೆ.ನರೇಂದ್ರ ಮೋದಿಯವರು ಪ್ರಧಾನಿಯಾದ ತರುವಾಯ ಹಲವಾರು ದೇಶಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡಲು ಕೈಗೊಂಡ ವಿದೇಶ ಪ್ರವಾಸವನ್ನು ದೂರದೃಷ್ಟಿಯ ಅಭಾವದಿಂದ ಲೇವಡಿ ಮಾಡುತ್ತಿದ್ದವರು ಇಂದು ಅನಿವಾರ್ಯವಾಗಿ ಬಾಯಿಗೆ ಬೀಗ ಹಾಕಿಕೊಳ್ಳುವಂತಾಗಿದೆ.
‘ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆ ತರುತ್ತಿರುವುದನ್ನು ಬಹುದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ, ಹಿಂದೆಯು ಭಾರತೀಯರನ್ನು ಕರತರಲಾಗಿದೆ ಇದೇನು ಹೊಸದಲ್ಲ’ ಎಂದು ಟೀಕಿಸುತ್ತಿರುವವರು ಆಪರೇಷನ್ ಗಂಗಾ ಕಾರ್ಯಾಚರಣೆ ಯಲ್ಲಿ ಸರಕಾರದೊಂದಿಗೆ ತಾವು ನಿಂತಿದ್ದೇವಾಎಂದು ಪ್ರಶ್ನಿಸಿಕೊಳ್ಳಬೇಕು. ಪ್ರತಿಪಕ್ಷಗಳು ಉಕ್ರೇನ್ ಸಂಕಟವನ್ನು ಮೋದಿಯವರನ್ನು ಹಳಿಯಲು ದುರುಪಯೋಗ ಮಾಡಿಕೊಂಡಾಗ ಸರಕಾರ ಯಶಸ್ವಿಯಾಗಿ ಕೈಗೊಳ್ಳುತ್ತಿರುವ ಕಾರ್ಯಾಚರಣೆಯ ಬಗ್ಗೆ ಪ್ರಚಾರ ಪಡೆಯುವುದು ಸಾಮಾಜಿಕ ತಾಣದ ಯುಗದಲ್ಲಿ ಅನಿವಾರ್ಯವಾಗಿದೆ.