ನಿಮ್ಮ ತಪ್ಪಿಗೆ ವಿದ್ಯಾರ್ಥಿಗಳಿಗೇಕೆ ತೊಂದರೆ ?
ಸಂಗತ
ವಿಜಯ್‌ ದರ್‌ಡ
ದೇಶೀಯವಾಗಿ ವೈದ್ಯ ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತನ್ನು ಸರಳೀಕರಿಸುವ ಕೆಲಸವನ್ನು ಸರಕಾರ ಮಾಡಿದ್ದಲ್ಲಿ ವಿದ್ಯಾರ್ಥಿಗಳುವಿದೇಶಗಳಿಗೇಕೆ ಹೋಗುತ್ತಿದ್ದರು? ದುರದೃಷ್ಟಕರವೆಂದರೆ ವಿಶ್ವದ ಅತ್ಯುತ್ತಮ 200 ವಿದ್ಯಾಸಂಸ್ಥೆ ಗಳಲ್ಲಿ ಭಾರತದ ಒಂದು ಸಂಸ್ಥೆಯೂ ಇಲ್ಲ!
ಭಾರತ ಸರಕಾರ ‘ಆಪರೇಶನ್ ಗಂಗಾ’ ಕಾರ್ಯಾಚರಣೆಯ ಮೂಲಕ ಯುದ್ಧೋನ್ಮಾದ ದಲ್ಲಿರುವ ಉಕ್ರೇನ್‌ನಲ್ಲಿದ್ದ ಭಾರತೀಯ ರನ್ನು ಕರೆತರುವಲ್ಲಿ ಯಶಸ್ವೀ ಕೆಲಸ ಮಾಡಿದೆ. ಇದು ಶ್ಲಾಘನೀಯ. ಬೇರಾವ ದೇಶವೂ ಉಕ್ರೇನಿನಲ್ಲಿರುವ ತಮ್ಮ ನಾಗರಿಕರನ್ನು ಕರೆಸಿ ಕೊಳ್ಳುವಲ್ಲಿ ಇಂತಹದೊಂದು ಕೆಲಸ ಮಾಡಿಲ್ಲ. ವಿಷಾದದ ಸಂಗತಿಯೆಂದರೆ ಒಬ್ಬ ಭಾರತೀಯ ಮೆಡಿಕಲ್ ವಿದ್ಯಾರ್ಥಿ ಉಕ್ರೇನ್-ರಷ್ಯಾ ನಡುವಣ ಸಮರದಲ್ಲಿ ಜೀವ ತೆತ್ತಿ ದ್ದಾನೆ.
ಈಗ ಭಾರತಕ್ಕೆ ಮರಳಿರುವ ವಿದ್ಯಾರ್ಥಿಗಳು ಅಲ್ಲಿ ಅನುಭವಿಸಿರ ಬಹುದಾದ ಅಸಹಾಯಕ ಸ್ಥಿತಿ ಮತ್ತು ಯಾತನೆ ಊಹೆಗೂ ನಿಲುಕದ್ದು. ಸರಕಾರದಿಂದ ಯುದ್ಧದ ಸೂಚನೆ ಸಿಕ್ಕಾಕ್ಷಣ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶಕ್ಕೆ ಮರಳುವ ಮನಸ್ಸು ಮಾಡಿ ದ್ದರೆ ಈ ಎಲ್ಲ ತೊಂದರೆ ಗಳು ಎದುರಾಗುತ್ತಲೇ ಇರಲಿಲ್ಲ. ನಾನು ಕಳೆದ ಬಾರಿಯ ನನ್ನ ಲೇಖನದಲ್ಲಿ ಇದನ್ನು ಬರೆದಿದ್ದೆ. ರಷ್ಯಾ ಮತ್ತು ಉಕ್ರೇನ್ ನಡುವೆ ೫,೦೦೦ ಕಿಮೀ ವ್ಯಾಪ್ತಿ ಯಲ್ಲಿ ನಡೆಯುತ್ತಿರುವ ಯುದ್ಧವಾಗಿದ್ದರೂ ಸಹ, ಈ ಯುದ್ಧದಿಂದ  ಬಾಧಿತವಾಗುವ ರಾಷ್ಟಗಳಲ್ಲಿ ಭಾರತ ಕೂಡ ಒಂದು. ವಿದ್ಯಾರ್ಥಿಗಳು ಭಾರತಕ್ಕೆ ಮರಳುವ ಹಾದಿಯಲ್ಲಿ ಅನುಭವಿಸಿದ ಕಷ್ಟಗಳು ಕೂಡ ಇದರ ಒಂದು ಭಾಗವೇ. ಇದು ತುಂಬಾ ಸೂಕ್ಷ್ಮವಾದ ಮತ್ತು ಅಷ್ಟೇ ಜಟಿಲ ಸಮಸ್ಯೆ. ಹಲವಾರು ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅಥವಾ ಸಂಶೋಧನೆಗೆಂದು ವಿದೇಶಗಳಿಗೆ ಹೋಗುವುದು ಸಾಮಾನ್ಯ. ಆದರೆ ಮೆಡಿಕಲ್ ಅಥವಾ ಇತರ ಶಿಕ್ಷಣಗಳಿಗೂ ನಮ್ಮ ವಿದ್ಯಾರ್ಥಿಗಳು ವಿದೇಶಗಳಿಗೆ ಯಾತಕ್ಕೆ ಹೋಗುತ್ತಿzರೆ. ಈ ನಡುವೆ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯಲಿದೆ ಎಂಬ ಮುನ್ಸೂಚನೆ ಸಿಕ್ಕಾಗಲೂ ವಿದ್ಯಾರ್ಥಿಗಳು ಅ ಯಾಕೆ ಉಳಿದರು? ಅಲ್ಲಿರುವ ವಿದ್ಯಾರ್ಥಿಗಳೆಲ್ಲ ಮರಳಿ ಬನ್ನಿ ಎಂಬ ಸಂದೇಶವನ್ನು ಭಾರತ ಸರಕಾರ ಸ್ಪಷ್ಟವಾಗಿ ಕೊಟ್ಟಿದ್ದಾಗ್ಯೂ ಮರಳದೇ ಅ ಉಳಿದುಕೊಂಡಿರುವ ವಿದ್ಯಾರ್ಥಿ ಗಳ ಮನಸ್ಥಿತಿ ನನಗಿನ್ನೂ ಅರ್ಥವಾಗುತ್ತಿಲ್ಲ. ಸರಕಾರ ವಿದ್ಯಾರ್ಥಿಗಳನ್ನು ಅಲ್ಲಿಂದ ಕರೆತರುವಲ್ಲಿ ವಿಳಂಬ ಮಾಡಿದೆಯೇ? ಎಂಬುದು ಮೂರನೆಯ ಪ್ರಶ್ನೆ. ಭಾರತ ಸರಕಾರದಂತೆ ಬೇರೆಲ್ಲ ದೇಶಗಳ ಸರಕಾರಗಳು ಕೂಡ ತಂತಮ್ಮ ದೇಶದ ನಾಗರಿಕರಿಗೆ ಸೂಚನೆ ನೀಡಿ ಉಕ್ರೇನಿನಿಂದ ಮರಳುವಂತೆ ಸೂಚಿಸಿದ್ದರು.
ಬೇರೆಲ್ಲ ದೇಶಗಳ ಬಹುತೇಕ ನಾಗರಿಕರು ಯುದ್ಧಕ್ಕೆ ಮುನ್ನವೇ ಮರಳಿ ಬಂದಿzರೆ ಕೂಡ. ಆದರೆ ನಮ್ಮ ವಿದ್ಯಾರ್ಥಿಗಳು ಮಾತ್ರ ಸರಕಾರದ ಸೂಚನೆಯನ್ನು ಕಡೆಗಣಿಸಿ ಅ ಉಳಿದರು. ಭಾರತೀಯ ರಾಯಭಾರ ಕಚೇರಿ ಯಾಕೆ ಸಕಾಲಿಕವಾಗಿ ಈ ಬಗ್ಗೆ ಕ್ರಮ ವಹಿಸಲಿಲ್ಲ? ಇದಕ್ಕೆ ಭಾರತೀಯ ದೂತಾವಾಸ ಉತ್ತರ ಕೊಡಬೇಕು? ಎಲ್ಲವನ್ನೂ ಪ್ರಧಾನಮಂತ್ರಿಗಳೇ ಮಾಡಬೇಕು ಎಂದು ಬಯಸುವುದು ಮಹಾತಪ್ಪು. ವ್ಯವಸ್ಥೆ ಈ ಕುರಿತು ಕ್ರಮವಹಿಸಿ ಕೆಲಸ ಮಾಡಬೇಕು. ಈ ಕಾರ್ಯದಲ್ಲಿ ನಮ್ಮ ವ್ಯವಸ್ಥೆ ಸೋತಿದೆ ಎಂಬುದು ಸುಸ್ಪಷ್ಟ. ಆಡಳಿತಾಂಗದಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿದ್ದರೆ ಈ ಕಾರ್ಯಕ್ಕೆ ಸಚಿವರನ್ನು ಕಳುಹಿಸ ಬೇಕಾದ ಅಗತ್ಯವೇ ಬರುತ್ತಿರಲಿಲ್ಲ. ಈ ಎಲ್ಲ ವಿಚಾರಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇನೆ, ಮತ್ತು ವ್ಯವಸ್ಥೆಯ ಪ್ರಮಾದ ಇಲ್ಲಿ ಎದ್ದು ಕಾಣಿಸುತ್ತಿದೆ.
ನಾನು ಹಿಂದೆ ಪಿ.ವಿ.ನರಸಿಂಹರಾವ್ ಪ್ರಧಾನಿಗಳಾಗಿzಗ ಅವರ ಜತೆಗೆ ಒಮ್ಮೆ ಯುಎಸ್‌ಗೆ ಪ್ರಯಾಣಿಸಿದ್ದೆ. ಅಲ್ಲಿ ಕ್ಯಾಮೆರಾ ತಂಡದ ಕ್ಯಾಮೆರಾಘಟಕಕ್ಕೆ ಡ್ಯಾಮೇಜ್ ಆಯಿತು. ಆ ಕ್ಷಣದಲ್ಲಿ ಬಾಡಿಗೆ ಕ್ಯಾಮೆರಾ ತರಿಸುವುದೇ ಅಥವಾ ಬೇರೇನು ಮಾಡು ವುದು ಎಂಬುದರ ಕುರಿತು ತ್ವರಿತ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಬಹಳ ಕಾಲ ಚರ್ಚೆ ಯ ಕಳೆದು ಹೋಗಿತ್ತು. ಈ ಹಂತದಲ್ಲಿ ಒಂದು ಕಾರ್ಯಕ್ರಮದ ಫೋಟೋ ತೆಗೆಯುವುದು ಸಾಧ್ಯವಾಗಲೇ ಇಲ್ಲ. ನ್ಯೂಯಾರ್ಕಿನಿಂದ ವಾಪಸು ಬಂದ ಮೇಲೆ ನಾನು ಈ ಘಟನಾವಳಿ ಬಗ್ಗೆ ಲೇಖನವೊಂದನ್ನು ಬರೆದಿದ್ದೆ. ಹೌದು ಉಕ್ರೇನಿನಿಂದ ವಿದ್ಯಾಥಿಗಳನ್ನು ಕರೆತರುವಲ್ಲಿ ಕೊಂಚ ವಿಳಂಬ ವಾಗಿದೆ. ಏರ್ ಇಂಡಿಯಾದ ಮೊದಲ ವಿಮಾನ ಉಕ್ರೇನಿನಿಂದ ಹಾರಿದ ತಕ್ಷಣ ರಷ್ಯಾ, ಉಕ್ರೇನಿನ ಮೇಲೆ ದಾಳಿ ಶುರು ಮಾಡಿತ್ತು.
ಹಾಗಾಗಿ ವೈಮಾನಿಕ ಯಾನ ಸ್ಥಗಿತಗೊಂಡಿತ್ತು ಮತ್ತು ಎರಡನೇ ವಿಮಾನ ಉಕ್ರೇನಿನಿಂದ ಹೊರಡುವುದು ಸಾಧ್ಯವಾಗಲಿಲ್ಲ. ತದನಂತರದಲ್ಲಿ ವಿದ್ಯಾರ್ಥಿಗಳಿಗೆ ಉಕ್ರೇನಿನ ಬಾರ್ಡರ್ ದಾಟಿಕೊಂಡು ಬರುವಂತೆ ಸೂಚಿಸಲಾಯಿತು. ಯುದ್ಧೋನ್ಮಾದ ದಲ್ಲಿರುವ ಆ ಭಾಗದಲ್ಲಿ ಹೊರಕ್ಕೆ ಕಾಲಿಡುವುದು ಎಷ್ಟು ಭಯದ ಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿರಬಹುದು ಎಂಬು ದನ್ನು ಊಹೆ ಮಾಡುವುದು ಕಷ್ಟ. ಒಂದೊಮ್ಮೆ ಆಪರೇಶನ್ ಗಂಗಾ4-5ದಿನಗಳ ಮುನ್ನವೇ ಶುರು ವಾಗಿದ್ದಲ್ಲಿ, ಪರಿಸ್ಥಿತಿ ಇಷ್ಟೊಂದು ಭೀಕರವಾಗಿರುತ್ತಿರಲಿಲ್ಲ.
ಭಾರತಕ್ಕೆ ಮರಳುವ ವಿದ್ಯಾರ್ಥಿಗಳನ್ನು ತಮ್ಮ ದೇಶದೊಳಕ್ಕೆ ಯಾವುದೇ ವೀಸಾ ಅಗತ್ಯವಿಲ್ಲದೇ ಬಿಟ್ಟುಕೊಂಡ ಉಕ್ರೇನಿನ ಅಕ್ಕಪಕ್ಕದ ರಾಷ್ಟಗಳ, ಅದರಲ್ಲೂ ಪೋಲೆಂಡಿನ ಸಹಕಾರಕ್ಕೆ ನಾವು ಋಣಿಗಳಾಗಿರಬೇಕು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಾಮಾಣಿಕ ಪ್ರಯತ್ನವನ್ನು ನಾನು ಶ್ಲಾಸುತ್ತೇನೆ. ಭಾರತಕ್ಕೆ ಮರಳಿದ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಸಂದೇಶ ಕಳುಹಿಸಿ, ಪ್ರತಿ ಸಣ್ಣ ವಿಚಾರವನ್ನೂ ಅವರು ಗಮನವಿಟ್ಟು ಮಾಡುತ್ತಿದ್ದ ರೀತಿ ವಿಶೇಷವಾಗಿತ್ತು.ಈಗ ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ ಎಂದರೆ, ನಮ್ಮ ದೇಶದ ವಿದ್ಯಾರ್ಥಿಗಳು ಸಾಮಾನ್ಯ ಶಿಕ್ಷಣಕ್ಕೂ ವಿದೇಶ ಗಳಿಗೆ ಹೋಗುವುದ್ಯಾಕೆ? ವಿಚಿತ್ರವೆಂದರೆ ಚೀನಾ ಒಂದರ 23 ಸಾವಿರ ಭಾರತೀಯ ವಿದ್ಯಾರ್ಥಿಗಳು ಓದುತ್ತಿದ್ದಾರೆಂಬ ಮಾಹಿತಿ ನನಗೆ ಬಂದಿದೆ.
ಇನ್ನುಳಿದಂತೆ, ರಷ್ಯಾ, ಉಕ್ರೇನ್, ಕಜಕಿಸ್ತಾನ್, ಜಾರ್ಜಿಯಾ, ಅರ್ಮೇನಿಯಾ, ಪೋಲೆಂಡ್‌ನಂತಹ ದೇಶಗಳಲ್ಲಿ ಎಂಬಿಬಿಎಸ್ ಓದುವುದಕ್ಕೆಂದು ಹೋಗಿರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ದೊಡ್ಡದಿದೆ. ಅಲ್ಲಿ ಮೆಡಿಕಲ್ ಎಜ್ಯುಕೇಶನ್ ೨೫-೩೦ ಲಕ್ಷ ರು.ಗಳ ಒಳಗೆ ದಕ್ಕುತ್ತದೆ. ನಮ್ಮ ದೇಶದಲ್ಲಿ ೫೫೦ ವೈದ್ಯಕೀಯ ಕಾಲೇಜುಗಳಿದ್ದರೆ, ವಿದ್ಯಾರ್ಥಿಗಳ ಸಂಖ್ಯೆ ೮೫ ಸಾವಿರದಷ್ಟಿದೆ. ಈ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಆದ ನಂತರದಲ್ಲಿ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಸಿಗದೇ ಇದ್ದರೆ ಖಾಸಗಿ ಮೆಡಕಲ್ ಕಾಲೇಜುಗಳಲ್ಲಿ ಓದುವುದಕ್ಕೆ ಅವಕಾಶವಿದೆ. ಆದರೆ ಖಾಸಗಿ ಕಾಲೇಜುಗಳ ಫೀಸು ಭರಿಸುವುದು ಬಹುತೇಕರಿಗೆ ಸಾಧ್ಯವಿಲ್ಲದ ಸಂಗತಿ. ಅದು ಕೋಟಿಗಳ ಲೆಕ್ಕಾಚಾರ.
ಹೀಗಾಗಿ ಭಾರತದ ಸಣ್ಣಪುಟ್ಟ ಪಟ್ಟಣಗಳ ಹಳ್ಳಿಗಳ ವಿದ್ಯಾರ್ಥಿಗಳು ವಿದೇಶದತ್ತ ಮುಖಮಾಡುತ್ತಾರೆ. ಪ್ರತಿವರ್ಷ ಇದು ನಡೆಯುತ್ತದೆ. ಒಂದು ಅಂದಾಜಿನ ಪ್ರಕಾರ 11 ಲಕ್ಷಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ವಿದೇಶಿ ಯುನಿವರ್ಸಿಟಿಗಳಲ್ಲಿ ಓದುತ್ತಿದ್ದಾರೆ. ಇದಕ್ಕಾಗಿ ಮಿಲಿಯಗಟ್ಟಲೆ ಹಣ ಡಾಲರ್ ರೂಪದಲ್ಲಿ ಹರಿದು ಹೋಗುತ್ತದೆ. ಸರಿಸುಮಾರು ೨.೧೨ ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿ ಓದುತ್ತಿದ್ದರೆ ೨.೧೬ ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿ ಓದುತ್ತಿದ್ದಾರೆ.
ದೇಶೀಯವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತನ್ನು ಸರಳೀಕರಿಸಿಕೊಡುವ ಕೆಲಸವನ್ನು ಸರಕಾರ ಮಾಡಿದ್ದಲ್ಲಿ ಅವರು ಇಲ್ಲಿಯೇ ಓದುತ್ತಿದ್ದರು. ವಿದೇಶಗಳಿಗೆ ಯಾಕೆ ಹೋಗುತ್ತಿದ್ದರು? ದುರದೃಷ್ಟಕರವೆಂದರೆ ನಾವು ನಮ್ಮ ಜಿಡಿಪಿಯ ಶೇ.೩ ರಷ್ಟನ್ನು ಮಾತ್ರ ಉನ್ನತ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತೇವೆ. ವಿಶ್ವದ ಅತ್ಯುತ್ತಮ ೨೦೦ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದು ಸಂಸ್ಥೆಯೂ ಇಲ್ಲ. ನಮ್ಮ ಸರಕಾರ ಈ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲವೇ? ನಮ್ಮ ಐಟಿ ಉದ್ಯಮ ಕ್ಷೇತ್ರ ವಿಶ್ವದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿ ಹೆಸರುವಾಸಿಯಾಗಿದೆ. ಆದರೆ ಅದಾಗಿರುವುದು ಸರಕಾರದಿಂದಲ್ಲ, ಈ ನಿಟ್ಟಿನಲ್ಲಿ ಖಾಸಗಿ ರಂಗದ ಕೊಡುಗೆ ಅತ್ಯುನ್ನತವಾದದ್ದು.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಹೂಡಿಕೆಯ ಹರಿವು ದೇಶೀಯವಾಗಿ ಹರಡಿದ್ದಲ್ಲಿ, ಅದಾಗಿರುವುದು ಜನರಿಂದಲೇ ಎಂಬುದನ್ನು ಮರೆಯುವಂತಿಲ್ಲ. ಖಂಡಿತವಾಗಿಯೂ ಸರಕಾರ ಅದಕ್ಕೆ ಬೇಕಾದ ವಾತಾವರಣ ನಿರ್ಮಿಸುವಲ್ಲಿ ಕೆಲಸ ಮಾಡಿದೆ. ಉಕ್ರೇನಿನಿಂದ ಭಾರತಕ್ಕೆ ಮರಳಿದ ೧೮ ಸಾವಿರ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಪಾಡೇನು? ಎಲ್ಲಿ ಸೀಟುಗಳು ಖಾಲಿಇವೆಯೋ ಅಲ್ಲ ಅವರನ್ನು ಸೇರಿಸಿಕೊಳ್ಳಬೇಕು ಎಂಬ ಮಾತೂ ಕೇಳಿಬರುತ್ತಿದೆ. ಇಂಟರ್ನ್‌ಶಿಪ್ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ ತಮ್ಮ ಕೋರ್ಸ್ ಪೂರ್ಣಗೊಳಿಸದ ವಿದ್ಯಾರ್ಥಿಗಳ ಕಥೆ ಏನು? ಇಲ್ಲಿ ನನ್ನದೊಂದು ಸಲಹೆ.
ದೇಶೀಯವಾಗಿ ಹೆಚ್ಚೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಕಡಿಮೆದರದಲ್ಲಿ ಸರಕಾರ ಭೂಮಿ ಒದಗಿಸಿಕೊಡಬೇಕು. ಇದಕ್ಕೆ ಸಿಎಸ್‌ಆರ್ -ಂಡಿನ ಹರಿವು ಬರುವಂತೆ ವ್ಯವಸ್ಥೆ ಮಾಡಬೇಕು ಮತ್ತು ಹೆಚ್ಚು ಅನುದಾನಗಳು ಸಿಗುವಂತೆ ನೋಡಿಕೊಳ್ಳಬೇಕು. ನನ್ನ ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಆಗ ಎಲ್ಲಿಯೂ ಕೊರತೆ ಬಾರದು. ನಮ್ಮ ದೇಶದಲ್ಲಿ ವೈದ್ಯ ಕೀಯವಿಜ್ಞಾನದಕೋರ್ಸುಗಳ ೨ರಿಂದ ೫ ವರ್ಷಗಳ ವರೆಗಿನ ಶುಲ್ಕಗಳನ್ನು ಅತ್ಯಂತ ಕಡಿಮೆ ಮಾಡಬಹುದು.ಹಾಗಿದ್ದಾಗ ಭಾರತೀಯರು ವಿದೇಶಗಳಲ್ಲಿ ಓದಲು ಮಿಲಿಯಗಟ್ಟಲೆ ಡಾಲರ್ ವ್ಯಯಿಸಬೇಕಿಲ್ಲ.
ಹೆಚ್ಚು ವೈದ್ಯರಿದ್ದಲ್ಲಿ ಸ್ಪರ್ಧೆ ಕೂಡ ಹೆಚ್ಚು ಇರುತ್ತದೆ. ಆಗ ಯಾವ ವೈದ್ಯನೂ ತಾನು ಹಳ್ಳಿಗೆ ಹೋಗಲಾರೆ ಎಂದು ಹೇಳಲಾರ.  ಆತ ಹಳ್ಳಿಗೂ ಹೋಗಲೇಬೇಕಾದ ಅನಿವಾರ್ಯ ಬರುತ್ತದೆ. ಗ್ರಾಮೀಣ ಭಾಗದಲ್ಲೂ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತದೆ. ಅಲ್ಲ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ಒದಗಣೆಯಾಗಿ ಗ್ರಾಮೀಣ ಜನರು ಅದರ ಪ್ರಯೋಜನ ಪಡೆಯುವುದು ಸಾಧ್ಯವಾಗುತ್ತದೆ.ಸರಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ ಕಾರ್ಯೋನ್ಮುಖವಾಗುವುದಕ್ಕೆ ಇದು ಅತ್ಯಂತ ಸೂಕ್ತ ಕಾಲ.