ಸಂಕಷ್ಟದ ಸಮಯದಲ್ಲಿ ಭಾರತದ ಬೆನ್ನಿಗೆ ನಿಂತಿದ್ದು ರಷ್ಯಾ !
ವಿಶ್ಲೇಷಣೆ
ಜಗದೀಶ್ ಮಾನೆ
ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಬಹಳ ಹಿಂದಿನದು. ಅಮೆರಿಕಾ, ಚೀನಾ ಸೇರಿದಂತೆ ದೇಶಗಳು ಭಾರತ ವನ್ನು ವಿಶ್ವ ಸಂಸ್ಥೆಯಲ್ಲಿ ವಿರೋಧಿಸಿದಾಗ ರಷ್ಯಾ ಭಾರತದ ಬೆಂಬಲಕ್ಕೆನಿಂತಿದೆ. ಸದ್ಯ ನಡೆಯುತ್ತಿರುವ ಯುದ್ಧದಲ್ಲಿ ಭಾರತ ರಷ್ಯಾ ಬೆಂಬಲಿಸಬೇಕು ಎನ್ನುವ ವಾದದ ಜೊತೆಗೆ ಯುದ್ಧ ನಿಲ್ಲಿಸುವಂತೆ ಭಾರತ ಸೂಚಿಸಬೇಕು ಎನ್ನುವ ವಾದಗಳು ಕೇಳಿ ಬರುತ್ತಿವೆ.
ಕಳೆದ ಹತ್ತಾರು ದಿನಗಳಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಯುದ್ದ ನಡಿಯು ತ್ತಿದೆ. ಉಕ್ರೇನಿನ ಮೇಲೆ ರಷ್ಯಾ ಮಾಡುತ್ತಿರುವ ಆಕ್ರಮಣವನ್ನು ಅಮೇರಿಕಾದಿಂದ ಹಿಡಿದು ಜಪಾನ್‌ವರೆಗಿನ ವಿಶ್ವದ ಬಹುತೇಕ ರಾಷ್ಟ್ರಗಳು, ಪುಟಿನ್ ಮಾಡುತ್ತಿರುವುದು ತಪ್ಪು ಅಂತ ಬಲವಾಗಿ ಖಂಡಿಸುತ್ತಿವೆ. ಆದರೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾವನ್ನು ಟೀಕಿಸುವ ಗೋಜಿಗೆ ಹೊಗುತ್ತಿಲ್ಲ.
ಭಾರತ ಮಾತ್ರ ತನ್ನ ಚಾಣಾಕ್ಷ ತನದಿಂದ ತಟಸ್ಥ ನೀತಿಯನ್ನು ಅನುಸರಿಸುವ ಮೂಲಕ ರಾಜತಾಂತ್ರಿಕ ಮಾತುಕತೆಯಿಂದಲೇ ಉಕ್ರೇನಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ರಷ್ಯಾಗೆ ಸೂಚಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೂಡ ಭಾರತ ರಷ್ಯಾ ವಿರುದ್ಧ ಮತ ಚಲಾ ವಣೆಯ ಪ್ರಕ್ರಿಯೆಯಿಂದ ದೂರ ಉಳಿದಿದೆ. ಭಾರತ, ರಷ್ಯಾ ಖಂಡಿಸದೇ ಇರುವುದಕ್ಕೆ ಹತ್ತು ಹಲವಾರು ಕಾರಣಗಳಿವೆ. ಅದರಲ್ಲಿ ಭಾರತ ಹಾಗೂ ರಷ್ಯಾ ಮಧ್ಯವಿರುವ ಬಲವಾದ ಸ್ನೇಹವೂ ಒಂದು.
ಭಾರತ- ರಷ್ಯಾ ಸಂಬಂಧ ಸಹಸ್ರಾರು ವರ್ಷಗಳಿಂದ ಅತ್ಯಂತ ಗಾಢವಾಗಿದೆ. 1956ರಲ್ಲಿ ರಷ್ಯಾದ ಅಧ್ಯಕ್ಷರಾಗಿದ್ದ ನಿಕಿತಾ ಕ್ರುಶ್ಚೇವ್ ಅವಧಿಯಲ್ಲಿ ಭಾರತದೊಂದಿಗೆ ಗಣನೀಯ ಆರ್ಥಿಕ ಹಾಗೂ ಸೇನಾ ಸಹಕಾರ ಕೊಟ್ಟಿದ್ದರು. ಇದರಿಂದ 1960ರಲ್ಲಿ ಭಾರತವು ಚೀನಾ ಗಿಂತ ಹೆಚ್ಚಿನ ಸೋವಿಯತ್ ನೆರವು ಪಡೆದುಕೊಂಡ ದೇಶವಾಗಿ ಬೆಳೆಯಲಾರಂಭಿಸಿತು. ಅಲ್ಲದೆ ಮಿಗ್-21Gಯುದ್ಧ ವಿಮಾನ ಗಳನ್ನು ಭಾರತದಲ್ಲಿ ಉತ್ಪಾದಿಸಲು ಬೇಕಿರುವ ಟೆಕ್ನಾಲಜಿಯನ್ನು ಟ್ರಾನ್ಸ್ ಫರ್ ಮಾಡಲು ರಷ್ಯಾ ಒಪ್ಪಿ ಕೊಂಡಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾವುದಾದರೂ ವಿಷಯವಾಗಿ ಬೇರೊಂದು ರಾಷ್ಟ್ರ ಭಾರತದ ವಿರುದ್ಧ ನಿರ್ಣಯ ಮಂಡಿಸಲು ಮುಂದಾದಾಗ ಆ ನಿರ್ಣಯದ ವಿರುದ್ಧ ರಷ್ಯಾ ತನಗಿರುವ ವಿಟೊ ಪವರ್ ಬಳಿಸುವ ಮೂಲಕ ಅದನ್ನು ಬ್ಲಾಕ್ ಮಾಡಿ ಭಾರತಕ್ಕೆ ನೆರವಾಗಿದೆ. ಹೀಗೆ ಒಟ್ಟು ಆರು ಬಾರಿ ರಷ್ಯಾ ತನ್ನ ವಿಟೊ ಪವರನ್ನು ಚಲಾಯಿಸುವ ಮೂಲಕ ಭಾರತವನ್ನು ರಕ್ಷಿಸಿದೆ.
ಮೊದಲ ಬಾರಿ, 1957ರಲ್ಲಿ ಭಾರತವು ತನ್ನ ಕಾಶ್ಮೀರದ ವಿಚಾರವನ್ನು ಬಗೆಹರಿಸಿಕೊಳ್ಳಲು ಯಾವುದೇ ರೀತಿಯ ಪ್ರಯತ್ನ ಕಾಣಿಸದಿದ್ದಾಗ ಅಮೇರಿಕಾ, ಯುಕೆ, ಪ್ರಾನ್ಸ್, ಜರ್ಮನ್, ಚೀನಾ ಹಾಗೂ ಖಾಯಂ ಸದಸ್ಯ ಅಲ್ಲದ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಕೊಲಂಬಿಯಾ, ಕ್ಯೂಬಾ, ಇರಾಕ್ ಫಿಲಿಪೈನ್ಸ್ ದೇಶಗಳು ಭಾರತದ ವಿರುದ್ಧ ಕಾಶ್ಮೀರದಲ್ಲಿ ತಾತ್ಕಾಲಿಕವಾಗಿ ವಿಶ್ವಸಂಸ್ಥೆಯ ಪಡೆ ಗಳನ್ನು ನಿಯೋಜಿಸುವ ನಿ ರ್ಣಯ ಮಂಡಿಸಿ ಮತ ಹಾಕಿದ್ದವು. ಈ ನಿರ್ಣಯಕ್ಕೆ ಅನುಮತಿ ಸಿಕ್ಕರೆ ಭಾರತಕ್ಕೆ ಅಪಾಯಕಾರಿ ಸನ್ನಿವೇಶ ಉಂಟಾಗುತಿತ್ತು. ಆಗ ರಷ್ಯಾ ತನ್ನ ವಿಟೋ ಅಧಿಕಾರ ಬಳಸಿ ಭಾರತಕ್ಕೆ ಸಹಾಯ ಮಾಡಿತ್ತು.
ಎರಡನೇ ಬಾರಿಗೆ, 1961ರಲ್ಲಿ ಭಾರತ ಸರಕಾರವು ಸೇನಾ ಕಾರ್ಯಾಚರಣೆ ನಡೆಸುವ ಮೂಲಕ ಪೋರ್ಚುಗೀಸರ ವಶದಲ್ಲಿದ್ದ ಗೋವಾ, ದಿವ್, ದಮನ್ ಪ್ರದೇಶಗಳನ್ನು ಭಾರತದೊಂದಿಗೆ ವಿಲೀನಗೊಳಿಸುವುದಕ್ಕೆ ಮುಂದಾದಾಗ ಫ್ರಾನ್ಸ್, ಟರ್ಕಿ, ಯುಕೆ, ಅಮೇರಿಕಾ, ಚೀನಾ ಭದ್ರತಾ ಮಂಡಳಿಯಲ್ಲಿ   ಅನ್ನು ಮಂಡಿಸಿದ್ದವು. ’ಗೋ ವಾ, ದಿವ್ ದಮನ್ ನಲ್ಲಿ ಭಾರತದ ಬಲ ಪ್ರ ಯೋಗ ಖಂಡಿಸುವುದು ಮತ್ತು ಭಾರತ ತನ್ನ ಸೇನೆಯನ್ನು ಕೂಡಲೇ ವಾಪಾಸ್ ಕರೆಸಿಕೊಳ್ಳಬೇಕು’ ಎನ್ನು ವುದು ಈ ನಿರ್ಣಯದ ಮೂ ಲ ಉದ್ದೇಶ ಆಗಿತ್ತು. ಆದರೆ ಸೋವಿಯತ್ ಯೂನಿಯನ್, ಶ್ರೀಲಂಕಾ, ಲಿಬಿಯಾ, ಯು.ಎ.ಇ ದೇಶಗಳು ಮುಖ್ಯವಾಗಿ, ವಿಟೊ ಪವ ರ್ ಇರುವ ಸೋವಿಯತ್ ಯೂನಿಯನ್ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದರಿಂದ ಅದು ಬಿದ್ದು ಹೋಗಿತ್ತು.
1962 ರಲ್ಲಿ ಮತ್ತೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನ ಸರಕಾರಗಳು ಮಾತುಕತೆ ನಡೆಸಿ ಶೀಘ್ರವೇ ಪರಿಹಾರ ಕಂಡು ಕೊಳ್ಳಬೇಕು ಎಂದು ಮೂರನೇ ಬಾರಿಗೆ ಅಮೇರಿಕಾ ಹಾಗೂ ಚೀನಾ ಬೆಂಬಲದೊಂದಿಗೆ ಐರ್ಲೆಂಡ್ ನಿರ್ಣಯ ಮಂಡಿಸಿತ್ತು. ಆಗಲೂ ಈ ನಿರ್ಣ ಯದ ವಿರುದ್ಧವಾಗಿ ಸೊವಿಯತ್ ಯುನಿಯನ್ ವಿಟೊ ಪವರ್ ಉಪಯೋಗಿಸಿದ್ದರಿಂದ ಆನಿರ್ಣಯ ಬಿದ್ದು ಹೋಗಿತ್ತು. 1971ರಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನವನ್ನು ಸ್ವತಂತ್ರಗೊಳಿಸುವ ಉದ್ದೇಶ ದಿಂದ ಭಾರತ ಪಶ್ಚಿಮ ಪಾಕಿಸ್ತಾನ ಜೊತೆಗೆ ಯುದ್ಧಕ್ಕೆ ಇಳಿದಿತ್ತು.
ಆಗ ಪಾಕಿಸ್ತಾನದ ಪರವಾಗಿ ಅಮೇರಿಕಾ ಮತ್ತು ಚೀನಾ ದೇಶಗಳು ಯುದ್ಧಕ್ಕೆ ಬರುವ ಆತಂಕವಿತ್ತು. ಆದರೆ ಯುದ್ಧಕ್ಕೂ ಮೊದಲೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯುದ್ಧದ ಸಮಯದಲ್ಲಿ ಚೀನಾ ಅಥವಾ ಅಮೇರಿಕಾ ಪಾಕಿಸ್ತಾನವನ್ನು ಬೆಂಬ ಲಿಸಿದರೆ, ರಷ್ಯಾ ಭಾರತದ ಸಹಾಯಕ್ಕೆ ಬರುವಂತಹ ಒಪ್ಪಂದ ಮಾಡಿಕೊಂಡಿದ್ದರು. ಯುದ್ಧ ನಡೆದ ಸಂದರ್ಭದಲ್ಲಿ ಅಮೇರಿಕಾ, ಚೀನಾ, ಜಪಾನ್ ಇಟಲಿ, ಬೆಲ್ಜಿಯಂ, ಅರ್ಜಂಟೀನಾ, ಸಿರಿಯಾ ದೇಶಗಳು, ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮವನ್ನು ಘೋಷಿ ಸುವ ನಿರ್ಣಯವನ್ನು ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದವು. ಆ ನಿರ್ಣಯದ ರಷ್ಯಾವಿಟೊ ಪವರ್ ಚಲಾಯಿಸಿತ್ತು.
ಆ ನಿರ್ಣಯ ಬಿದ್ದು ಹೋದ ಮಾರನೇ ದಿನವೇ ಅಮೇರಿಕಾ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಕದನ ವಿರಾಮ ಘೋಷಿಸಿ ನಿರಾಶ್ರಿತರು ವಾಪಾಸ್ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಮತ್ತೊಂದು ನಿರ್ಣಯ ಮಂಡಿ ಸಿತ್ತು. ಆದರೆ, ಯು.ಎಸ್. ಎಸ್.ಆರ್ ಅದನ್ನು ವಿರೋಧಿಸಿದ್ದರಿಂದ ಆ ನಿರ್ಣಯ ಕೂಡಾ ಭದ್ರತಾ ಮಂಡಳಿಯಲ್ಲಿ ಸೋತುಹೋಯಿತು. ಇದರಿಂದ ಹತಾಶೆಗೊಂಡ ಅಮೇರಿಕಾ ಮತ್ತು ಚೀನಾ ಮರುದಿನವೇ ’ಭಾರತ ಮತ್ತು ಪಾಕಿಸ್ತಾನ ಸರಕಾರಗಳು ತಕ್ಷಣ ಕದನ ವಿರಾಮ ಘೋಷಿಸಬೇಕು ಎನ್ನುವ ನಿರ್ಣಯ ಮಂಡಿಸಿದ್ದವು. ಆಗಲೂ ಸೋವಿಯತ್ ಯೂನಿಯನ್ ಮತ ಚಲಾಯಿಸಿ ಭಾ ರತವನ್ನು ರಕ್ಷಿಸಿತ್ತು.
ಸೋವಿಯತ್ ಅಧ್ಯಕ್ಷರಾಗಿದ್ದ ಮಿಖಾಯಿಲ್ ಗೋರ್ಬಚೇವ್ ಚೀನಾ ಕಟ್ಟಿ ಹಾಕಲು ಏಷ್ಯಾದಲ್ಲಿ ನ್ಯಾಟೊ ತರಹದ ಸೆಕ್ಯೂರಿಟಿ ಟ್ರೀಟಿಯ ನ್ನು ಮಾಡಲು ರಾಜೀವ ಗಾಂಧಿಗೆ ಆಗ್ರಹಿಸಿದ್ದರು. ಆದರೆ ಅದಕ್ಕೆ ರಾಜೀವ ಗಾಂಧಿ ಅವರು ಸರಿಯಾಗಿ ಸ್ಪಂದಿಸಿರಲಿಲ್ಲ.ಭಾರತದ ಸೇನಾ ಸಾಧನಗಳ ಆಮದಿನಲ್ಲಿ ಶೇ.70ರಷ್ಟು ರಷ್ಯಾದ ಪಾಲಿದೆ.
S400, ,    ,  &30mk1,    , &90S , , &2  ,  22m  , -29 ಇವೆಲ್ಲವೂ ಕೂಡಾ ಭಾರತ ರಷ್ಯಾ ದೊಂದಿಗಿನ ಸಂಬಂಧವನ್ನುಸೂಚಿಸುತ್ತವೆ.
ಕೆಲವುಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಿಕೊಳ್ಳಲು ಪರಸ್ಪರ ಒಪ್ಪಂದ ಮಾಡಿಕೊಂಡಿದೆ. ಭಾರತ ಹಾಗೂ ರಷ್ಯಾದ ರಕ್ಷಣಾ ಒಪ್ಪಂದಗಳು ಕೇವಲ ಖರೀದಿಗೆ ಮಾತ್ರ ಸಿಮೀತವಾಗದೇ, ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಹಾಗೂ ಜಂಟಿ ನೌಕಾ ಅಭ್ಯಾಸ, ಸೇನಾ ಸಮರ ಅಭ್ಯಾಸಗಳನ್ನು ನಡೆಸುತ್ತಿವೆ. ಔಷಧಿ, ಎಲೆಕ್ಟ್ರಾನಿಕ್ ವಸ್ತುಗಳು, ಮಷಿನ್ ಎಂಜಿನ್ಸ್,ಪಂಪ್, ಕಾಫಿ, ಟೀ, ಸಾಂಬಾರು ಪದಾರ್ಥಗಳು, ಬಟ್ಟೆ , ರತ್ನ, ಅಮೂಲ್ಯವಾದ ಲೋಹಗಳು ಸೇರಿ ಇತ್ಯಾದಿ ವಸ್ತುಗಳು ವ್ಯಾಪಾರ  ಎರಡು ದೇಶಗಳ ನಡುವೆ ನಡೆಯುತ್ತದೆ.
2025ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರದ ಒಟ್ಟು ಮೊತ್ತ 30 ಬಿಲಿಯನ್ ಡಾಲರ್ ತಲುಪುವ ಗುರಿಯನ್ನು ಎರಡು ದೇಶಗಳು ಹೊಂದಿವೆ. 2030ರ ಹೊತ್ತಿಗೆ ಭಾರತದಲ್ಲಿ ಸುಮಾರು 20ಕ್ಕೂ ಹೆಚ್ಚು ’ ’ ಗಳನ್ನು ನಿರ್ಮಿಸುವ ಗುರಿ ಹೊಂದಿದ ರಷ್ಯಾ ಈಗಾಗಲೇ ಈ ಕಾರ್ಯ ಆರಂಭಿಸಿದೆ. ವಿಜ್ಞಾನ, ತಂತ್ರಜ್ಞಾನ, ಇಂಧನ, ಸಾರಿಗೆ ಕ್ಷೇತ್ರದಲ್ಲಿಯೂ ಕೂಡಾ ಒಪ್ಪಂದ ಮಾಡಿ ಕೊಂಡಿದೆ. ಒಟ್ಟಾರೇ ರಷ್ಯಾದಿಂದ ಭಾರತಕ್ಕೆ ಹೆಚ್ಚು ಲಾಭ ವಾಗಿದೆ. ಹೀಗಾಗಿ ಉಕ್ರೇನ್ ರಷ್ಯಾ ಯುದ್ಧದ ಸಂದರ್ಭದಲ್ಲಿ ಭಾರತ ನೇರವಾಗಿ ರಷ್ಯಾ ಪರವಾಗಿ ನಿಲ್ಲಬೇಕಿತ್ತು ಅನ್ನುವುದು ಅನೇಕರ ಅಭಿಪ್ರಾಯ.
ಮತ್ತೊಂದೆಡೆ, ಒಂದು ಸಣ್ಣದ ದೇಶದ ಮೇಲೆ ರಷ್ಯಾ ಮಾಡುತ್ತಿರುವ ದಾಳಿ ಸರಿಯಲ್ಲ ಎನ್ನುವುದನ್ನು ಭಾರತ ರಷ್ಯಾಕ್ಕೆ ತಿಳಿಸ ಬೇಕು ಎನ್ನುವ ವಾದವೂ ಇದೆ. ಇತ್ತೀಚಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ, ಭಾರತ ಹಾಗೂ ರಷ್ಯಾ, ಅಮೇರಿಕಾ ಮತ್ತು ಭಾರತ, ಚೀನಾ ಹಾಗೂ ರಷ್ಯಾದ ನಡುವಿನ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಪುಟಿನ್ ರಷ್ಯಾದ ನೇತೃತ್ವ ವಹಿಸಿ ಕೊಂಡ ನಂತರ ಭಾರತಕ್ಕೆ ಯಾವೆಲ್ಲಶಸ್ತ್ರಾಸ್ತ್ರಗಳನ್ನು ಮಾರುತ್ತಿದ್ದರೋ ಅದೇ ಶಸ್ತ್ರಾಸ್ತ್ರಗಳನ್ನು ಇದೀಗ ಚೀನಾ ಮತ್ತು ಪಾಕಿಸ್ತಾನಕ್ಕೂ ಮಾರುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಒಂದು ಕಾಲದಲ್ಲಿ ಅಮೇರಿಕಾ ಭಾರತದ ಕಡು ವಿರೋಧಿ ಆಗಿತ್ತು, ಈ ಮೇಲೆ ತಿಳಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೇರಿಕಾ ಭಾರತಕ್ಕೆ ಯಾವೆಲ್ಲ ಸಂದರ್ಭಗಳಲ್ಲಿ ಅವಮಾನ ಮಾಡಲು ಮುಂದಾದಾಗ ರಷ್ಯಾ ಭಾರತದ ನೆರವಿಗೆ ಬಂದಿದೆ.
ಆದರೆ ಇದೀಗ ಅಮೇರಿಕಾ ಮೇಲಿನ ಭಾರತದ ಆ ವಿರೋಧಿ ಧೋರಣೆ ಕಡಿಮೆ ಆಗಿ ಹತ್ತಾರು ವರ್ಷಗಳಲ್ಲಿ ಭಾರತ ಅಮೇರಿಕಾದ ಕಡೆಗೆ ಹೆಚ್ಚು ವಾಲಿದೆ. ಭಾರತ-ಅಮೇರಿಕಾ ‘&    ’ ಅಣ್ವಸ ತಡೆ ಒಪ್ಪಂದಕ್ಕೆ ಸಹಿ ಹಾಕದಿ ದ್ದರೂ ಕೂಡಾ ಭಾರತದೊಂದಿಗೆ ವಿಶೇಷ ಕಾನೂನನ್ನು ಪಾಸು ಮಾಡಿ ಅಮೇರಿಕಾದ ಸಂಸತ್ತಿನಲ್ಲಿ ನಾಗರಿಕ ಪರಮಾಣು ಒಪ್ಪಂದ ತರುವುದಕ್ಕೆ ಅಮೇರಿಕಾ ಸಾಕಷ್ಟು ಪ್ರಯತ್ನಿಸಿತ್ತು. ಒಬಾಮಾ ಹಾಗೂ ಟ್ರಂಪ್ ಅವರ ಅವಧಿಯಲ್ಲೂ ಭಾರತದೊಂದಿ ಗಿನ ಸಂಬಂಧ ಸುಧಾರಿಸಲು ಸಾಕಷ್ಟು ಪ್ರಯತ್ನಗಳಾಗಿವೆ. ಆದರೆ ಅಮೇರಿಕಾಗೆ, ನಾವು ಭಾರತದೊಂದಿಗೆ ಅದೆಷ್ಟೇ ಕ್ಲೋಸ್ ಆದ್ರೂ ಕೂಡಾ ಅವರಿಗೆ ನಮ್ಮ ಮೇಲೆ ನಂಬಿಕೆಯೇ ಬರುತ್ತಿಲ್ಲವಲ್ಲ ಅನ್ನೋ ಬೇಜಾರು ಭಾರತದ ಮೇಲಿದೆ.