ಕಾಣದಿರುವ ಮೋದಿಯವರ ಮತ್ತೊಂದು ಮುಖ
ಅಭಿಮತ
ಪ್ರಕಾಶ್ ಶೇಷರಾಘವಾಚಾರ್‌
@.
ಪ್ರಧಾನ ಮಂತ್ರಿಯವರಂತೆಯೇ ಸಿದ್ಧಾಂತವನ್ನು ಹಂಚಿಕೊಳ್ಳುವವರು ಮಾತ್ರವಲ್ಲದೆ ಮೋದಿಯವರ ಸಿದ್ಧಾಂತ ವನ್ನು ಒಪ್ಪದ ಅನೇಕ ಮಂದಿಯೂ ಅವರ ನೆರವು ಪಡೆದವರ ಪಟ್ಟಿಯಲ್ಲಿದ್ದಾರೆ. ಮೋದಿಯವರಿಗೆ ಅಂತಹವರ ವಿಚಾರದ ಬಗ್ಗೆ ತಿಳಿದಾಗ ಅವರಿಗೆ ನೇರವಾಗಿ ಕರೆ ಮಾಡಿದ್ದಾರೆ ಮತ್ತು ಎಲ್ಲ ರೀತಿಯ ನೆರವನ್ನು ನೀಡಿದ್ದಾರೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ-ನಿನಗೆ ನಿನ್ನ ಕರ್ಮ ಮಾಡುವು ದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ.
ಬೆಳೆದು ನಿಂತ ಮಗನನ್ನು ಕಳೆದುಕೊಳ್ಳುವುದಕ್ಕಿಂತ ಆಘಾತ ಮತ್ತು ದುಃಖದ ಸಂಗತಿ ತಂದೆ-ತಾಯಿಗೆ ಮತ್ತೊಂದಿಲ್ಲ. ಜೀವಿತಾ ವಧಿಯವರೆಗೂ ಅವರನ್ನದು ಬಾಧಿಸುತ್ತದೆ. ಹೀಗಾಗಿಯೇ ‘ಪುತ್ರ ಶೋಕಂ ನಿರಂತರಂ’ ಎಂದು ಹೇಳುವುದು. ಯಾವುದೋ ದೇಶದಲ್ಲಿ ಮೃತಪಟ್ಟ ಮಗನ ಮುಖವನ್ನು ಕೊನೆಯ ಬಾರಿ ನೋಡವುದೂ ದುಸ್ತರ ಎಂದಾದಾಗ ಆ ನೋವಿನ ಆಳ ಅಳೆಯಲು ಸಾಧ್ಯವೇ ಇಲ್ಲ. ಇಂತಹ ಕಠಿಣ ಪರಿಸ್ಥಿತಿಯನ್ನು ಯುಕ್ರೇನ್‌ನ ಖಾರ್ಕೀವ್ ನಗರದಲ್ಲಿ ಶೆಲ್ ದಾಳಿಗೆ ಬಲಿಯಾದ ನವೀನ್ ತಂದೆ-ತಾಯಿ ಗಳಾದ ಚಳಗೇರಿಯ ಶೇಖರಪ್ಪ ಮತ್ತು ವಿಜಯಲಕ್ಷ್ಮೀಯವರು ಎದುರಿಸಬೇಕಾಯಿತು.
ನವೀನ್4ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ. ಜೂನ್‌ನಲ್ಲಿ8ನೇ ಸೆಮಿಸ್ಟರ್ ಪರೀಕ್ಷೆ ಬರೆದದ್ದು ಇಂಟರ್ನ್‌ಶಿಪ್ ಮಾಡಬೇಕಾಗಿತ್ತು. ದುರ್ದೈವ ಬಳಿ ಯಿದ್ದ ಆಹಾರ ಖಾಲಿಯಾಯಿತೆಂದು ಸಮೀಪದ ಸೂಪರ್ ಮಾರ್ಕೆಟ್‌ನಲ್ಲಿ ಖರೀದಿ ಸಲು ಸರತಿಯಲ್ಲಿ ನಿಂತಿದ್ದಾಗ ಶೆಲ್ ಬಡಿದು ಮೃತಪಟ್ಟ. ಯುಕ್ರೇನ್ ಯುದ್ಧ ಆರಂಭವಾದ ತರುವಾಯ ಅಲ್ಲಿ ಸಿಲುಕಿದ್ದ22500ಭಾರತೀಯ ವಿದ್ಯಾರ್ಥಿಗಳನ್ನು ‘ಆಪರೇಷನ್ ಗಂಗಾ’ ಹೆಸರಲ್ಲಿ ಕರೆ ತರಲಾಯಿತು.
ಕ್ರೂರ ವಿಧಿಯಾಟ ಕೇವಲ ನವೀನ್‌ನೊಬ್ಬನೇ ಹಿಂದಕ್ಕೆ ಬಾರದ ಲೋಕಕ್ಕೆ ತೆರಳಿ ಬಿಟ್ಟ. ದುಃಖತಪ್ತ ತಂದೆಗೆ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿಯ ಕರೆ ಮಾಡಿ ಸಂತೈಸುತ್ತಾರೆ. ತಂದೆ ಶೇಖರಪ್ಪನವರು ಮತ್ತು ತಾಯಿ ವಿಜಯಲಕ್ಷ್ಮೀಯವರು ತಮ್ಮ ಮಗನನ್ನು ಜೀವಂತವಾಗಿ ನೋಡಲಂತೂ ಆಗಲಿಲ್ಲ, ಕಡೆಯ ಪಕ್ಷ ಅವನ ಮೃತದೇಹವನ್ನಾದರು ಭಾರತಕ್ಕೆ ವಾಪಸ್ ತಂದರೆ ಮಗನ ಮುಖವನ್ನು ಕಡೆಯಬಾರಿ ನೋಡಬಹುದು ಎಂದು ಮೋದಿಯವರಲ್ಲಿ ವಿನಂತಿಸಿದರು.
ಪ್ರಧಾನಿಯವರು ನವೀನ ಮೃತದೇಹ ಹಿಂದಕ್ಕೆ ಕರತರಲು ಸರ್ವ ಪ್ರಯತ್ನ ಮಾಡಲಾಗುವುದೆಂಬ ವಾಗ್ದಾನ ಮಾಡುತ್ತಾರೆ.ಇಷ್ಟಕ್ಕೆ ನಿಲ್ಲುವುದಿಲ್ಲ. ನವೀನ್ ಮೃತದೇಹ ತರಲು ಪ್ರಧಾನಿಯವರು ಖುದ್ದು ಸಂಬಂಧಪಟ್ಟವರಿಗೆ ಸೂಚಿಸುತ್ತಾರಲ್ಲದೇ. ಅದರನ್ವಯವೇ ವಿದೇಶಾಂಗ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಾರೆ. ನವೀನ್ ಕಳೆಬರಹವನ್ನು ವಾಪಸ್ ತರುವ ಸಾಹಸ ಮಯ ಕಥನ ಆರಂಭವಾಗುತ್ತದೆ.
ಸಕ್ರಿಯ ಯುದ್ಧ ಪ್ರದೇಶವಾದ ಕಾರಣ ಖಾರ್ಕೀವ್ ನಿಂದ ಶವವನ್ನು ಹೊರತರುವುದು ಸುಲಭದ ಕೆಲಸವಾಗಿರಲಿಲ್ಲ. ಪ್ರಧಾನಿ ಕಾರ್ಯಾಲಯ ಸತತ ಸಂಪರ್ಕದಲ್ಲಿದ್ದು ಶವವನ್ನು ಪೊಲೆಂಡ್‌ಗೆ ತರುಲು ಬೇಕಾದ ಅನುಮತಿ, ಸಾರಿಗೆ ವ್ಯವಸ್ಥೆಯ ಬಗ್ಗೆ ಗಮನ ಹರಿಸಿತು. ಸ್ವತಃ ಪ್ರಧಾನಿಯವರು ಯುಕ್ರೇನ್ ಮತ್ತು ರಷ್ಯದೊಡನೆ ಮಾತನಾಡಿ, ಮತ್ತಾವುದೆ ಅನಾಹುತ ಹಾಗೂ ಅಡ್ಡಿಯಾಗದ ಹಾಗೆ ನವೀನ್ ಶವ ಸುರಕ್ಷಿತವಾಗಿ ಪೊಲೆಂಡ್ ತಲುಪುವ ದಾರಿ ಸುಗುಮಗೊಳಿಸಿದ್ದರು.
ನವೀನ್ ತಂದೆ-ತಾಯಿಗೆ ಕೊಟ್ಚ ವಾಗ್ದಾನದಂತೆ, ಕಡೆಯ ಬಾರಿ ಮಗನ ಮುಖ ನೋಡುವಂತೆ ಮಾಡಲು ಮೋದಿಯವರು ಕೈಗೊಂಡ ಪ್ರಯತ್ನದ ಫಲ ಕೊನೆಗೂ ನವೀನ್ ಪಾರ್ಥಿವ ಶರೀರ ಚಳಗೇರಿ ತಲುಪಿತು. ಪ್ರಧಾನಿಯವರ ವೈಯಕ್ತಿಕ ಪ್ರಯತ್ನ ದಿಂದ ಮಾತ್ರ ಅಂತಹ ಭೀಕರ ಯುದ್ಧ ನಡೆಯುತ್ತಿರುವ ಸನ್ನಿವೇಶದಲ್ಲಿಯೂ ಮೃತದೇಹ ವಾಪಸ್ ತರಲು ಸಾಧ್ಯವಾಗಿದ್ದು ಎನ್ನುತ್ತಾರೆ ನವೀನ್ ಮೃತ ದೇಹ ಪಡೆಯಲು ಕೇಂದ್ರದೊಡನೆ ಸತತ ಸಂಪರ್ಕದಲ್ಲಿದ್ದ ರಾಜ್ಯದ ಅಧಿಕಾರಿಗಳು.
ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದಾಗಲಿಂದಲೂ ಅನೇಕರ ಕಷ್ಟಕ್ಕೆ ನೆರವಾಗಿzರೆ. ಅವರು ಚಾಚಿರುವ ಅದೆಷ್ಟೋ ನೆರವಿನ ಹಸ್ತ ಗೌಪ್ಯವಾಗಿಯೇ ಉಳಿದುಕೊಂಡಿದೆ. ಎಂದೂ ತಾವು ಮಾಡಿರುವ ಇಂಥ ಸಹಾಯವನ್ನು ಅವರು ಪ್ರಚಾರಕ್ಕೆ ಬಳಕೆ ಮಾಡಿಕೊಂಡಿಲ್ಲ. ‘ನ್ಯೂಸ್ ೧೮’ ಸಮೂಹದ ಸಲಹಾ ಸಂಪಾದಕ ಬ್ರಜೇಶ್ ಕುಮಾರ್ ಸಿಂಗ್, ಮೋದಿಯವರು ಸದ್ದಿಲ್ಲದೇ ಹಲವರಿಗೆ ಸಹಾಯ ಮಾಡಿರುವ ನಿದರ್ಶನಗಳನ್ನು ತಮ್ಮ ಲೇಖನದಲ್ಲಿ ಬಯಲು ಮಾಡಿದ್ದಾರೆ. ತಮ್ಮ ವಿರೋಧಿ  ಪತ್ರಕರ್ತ ರಿಗೂ ಅವರ ಸಂಕಷ್ಟದಲ್ಲಿ ಮಾಡಿರುವ ಸಹಾಯ ಮರೆಯಲಾಗದಂತಹದು ಎನ್ನುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ವಿರೋಧಿಗಳು ಸದಾ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತ ಅವರಿಗೆ ಕೆಟ್ಟ ಹೆಸರು ತರುವಂತಹ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಪ್ರಧಾನಿಗಳ ಕಣ್ಣೀರಿನಲ್ಲಿಯೂ ‘ರಾಜಕೀಯ’ವನ್ನು ನೋಡುವ ಮನಸ್ಥಿತಿಯನ್ನು ಹೊಂದಿದ್ದಾರೆ. ಆದರೆ, ಪ್ರಧಾನಮಂತ್ರಿಗಳ ನಿಜವಾದ ವ್ಯಕ್ತಿತ್ವವು ಈ ಟೀಕಾಕಾರರನ್ನು ಮೀರಿ ನಿಂತಿದೆ.
ಮೋದಿಯವರು ಅಧಿಕೃತವಾಗಿ ಮತ್ತು ವೈಯಕ್ತಿಕವಾಗಿ ಲಕ್ಷಾಂತರ ಜನರಿಗೆ ನೆರವಾಗಿದ್ದಾರೆ. ಜನರ ದುಃಖದ ಸಮಯದಲ್ಲಿ ಬೆಂಬಲವಾಗಿ ನಿಂತಿದ್ದಾರೆ ಮತ್ತು ಇದನ್ನು ಸಾಬೀತು ಪಡಿಸಲು ಸಾವಿರಾರು ನಿದರ್ಶನಗಳು ನಮ್ಮ ಮುಂದಿವೆ ಎಂದು ಕೆಲವು ಪ್ರಮುಖ ಘಟನೆಗಳನ್ನು ಬ್ರಜೇಶ್ ಕುಮಾರ್ ಸಿಂಗ್ ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ಎಬಿಪಿ ನ್ಯೂಸ್ ನಿರೂಪಕಿ ರುಬಿಕಾ ಲಿಯಾಖತ್ ಅವರ ತಾಯಿಯವರು ಅಂಗಾಗ ವೈ-ಲ್ಯದಿಂದ ಉದಯಪುರದ ಪಾರಸ್ ಆಸ್ಪತ್ರೆಗೆ ದಾಖಲಾಗುತ್ತಾರೆ.
ಮೋದಿಯವರು ರುಬಿಕಾರವರಿಗೆ ಕರೆ ಮಾಡಿ ಮಾತನಾಡಿ ಧೈರ್ಯ ತುಂಬುತ್ತಾರೆ. ಅಷ್ಟೇ ಅಲ್ಲದೆ ಅವರ ತಾಯಿಯವ ರೊಂದಿಗೂ ಮಾತನಾಡಿ ಆತ್ಮವಿಶ್ವಾಸ ಹೆಚ್ಚಿಸುತ್ತಾರೆ. ಇಷ್ಟಕ್ಕೇ ಸೀಮಿತರಾಗುವುದಿಲ್ಲ. ಅವರ ತಾಯಿಯವರ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಲ್ಲದೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ ಪರಿಣಿತ ವೈದ್ಯರು ಪಾರಸ್ ಆಸ್ಪತ್ರೆಯ ವೈದ್ಯ ರೊಂದಿಗೆ ಸಮಾಲೋಚನೆ ಮಾಡಿ ಚಿಕಿತ್ಸಾ ಕ್ರಮಗಳ ಬಗ್ಗೆ ಗಮನ ನೀಡುವ ಹಾಗೆ ಮಾಡುತ್ತಾರೆ.
ಇನ್ನೊಂದು ಪ್ರಕರಣ ಗಮನಿಸಿ, ಮಾಹಿತಿ ಆಯೋಗದ ಹಾಲಿ ಆಯುಕ್ತರಾದ ಉದಯ್ ಮಾತೂರ್‌ಕರ್ ಅವರ ಪತ್ನಿ ಸ್ಮಿತಾ ಮಾತೂರ್‌ಕರ್ ಅವರು ಕೋವಿಡ್೧೯ಎರಡನೇ ಅಲೆಯ ವೇಳೆ ತೀವ್ರ ಅಸ್ವಸ್ಥರಾಗುತ್ತಾರೆ. ತುರ್ತು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಬೇಕಾಗುತ್ತದೆ. ಮಾತೂರ್‌ಕರ್, ಮೋದಿಯವರ ಆಪ್ತ ಸಹಾಯಕರನ್ನು ಸಂಪರ್ಕಿಸುತ್ತಾರೆ. ಮೋದಿಯವರಿಗೆ ವಿಷಯ ತಲಪಿದ ಕೂಡಲೆ ಐದು ನಿಮಿಷಗಳಲ್ಲಿ ಉದಯ್ ಮಾತೂರ್‌ಕರ್ ಅವರಿಗೆ ಕೇಂದ್ರ ಆರೋಗ್ಯ ಸಚಿವರಾದ ಡಾ.ಹರ್ಷ ವರ್ಧನ್ ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಎ. ಕೆ. ಸಿಂಗ್ ರಾಣ ಅವರ ಕರೆ ಬರುತ್ತದೆ.
ಏಪ್ರಿಲ್7ರಂದು ಸ್ಮಿತಾ ಮಾತೂರ್‌ಕರ್ ಅವರು ಆಸ್ಪತ್ರೆಗೆ ದಾಖಲಾಗಿ ಕೋವಿಡ್-19ಕ್ಕೆ ಸೂಕ್ತ ಚಿಕಿತ್ಸೆ ಪಡೆದ ನಂತರ ಏಪ್ರಿಲ್26ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಾರೆ. ಆಸ್ಪತ್ರೆಯಲ್ಲಿದ್ದ19ದಿನಗಳಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ದಲ್ಲಿ ಪ್ರಧಾನಿ ಮೋದಿ ಅವರೇ ಸ್ವತಃ ಎರಡು ಬಾರಿ ಕರೆ ಮಾಡಿ ಸ್ಮಿತಾ ಅವರ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿಕೊಂಡಿ ದ್ದಾರೆ. ಇಷ್ಟೇ ಅಲ್ಲದೇ, ಪ್ರಧಾನಮಂತ್ರಿಗಳ ಕಚೇರಿಯ ಅಧಿಕಾರಿಗಳು ಉದಯ್ ಅವರೊಂದಿಗೆ ನಿರಂತರವಾಗಿ ಸಂಪರ್ಕ ದಲ್ಲಿದ್ದುಕೊಂಡು ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು.
ಪ್ರಧಾನ ಮಂತ್ರಿಯವರಂತೆಯೇ ಸಿದ್ಧಾಂತವನ್ನು ಹಂಚಿಕೊಳ್ಳುವವರು ಮಾತ್ರವಲ್ಲದೆ ಮೋದಿಯವರ ಸಿದ್ಧಾಂತವನ್ನು ಒಪ್ಪದ ಅನೇಕ ಮಂದಿಯೂ ಅವರ ನೆರವು ಪಡೆದವರ ಪಟ್ಟಿಯಲ್ಲಿದ್ದಾರೆ. ಮೋದಿಯವರಿಗೆ ಅಂತಹವರ ವಿಚಾರದ ಬಗ್ಗೆ ತಿಳಿದಾಗ ಅವರಿಗೆ ನೇರವಾಗಿ ಕರೆ ಮಾಡಿದ್ದಾರೆ ಮತ್ತು ಎಲ್ಲ ರೀತಿಯ ನೆರವನ್ನು ನೀಡಿದ್ದಾರೆ. ಮೋದಿಯವರು ತಮ್ಮ ಟೀಕಾಕಾರರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ದೆಹಲಿಯ ಆಂಗ್ಲ ದೈನಿಕದ ಸ್ಥಾನಿಕ ಸಂಪಾದಕರಾಗಿರುವ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆಡಳಿತ ವಿರೋಧಿ ನಿಲುವಿಗೆ ಹೆಸರಾಗಿರುವ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಸಹಪಾಠಿ ಪತ್ರಕರ್ತರೊಬ್ಬರಿಂದ ಪ್ರಧಾನಿ ಮೋದಿಯವರು ಅನಾರೋಗ್ಯದ ವಿಷಯವನ್ನು ತಿಳಿಸಿದರು, ಆರೋಗ್ಯಪರೀಕ್ಷೆಗೆಂದು ತೆರಳುತ್ತಿದ್ದ ಈ ಪತ್ರಕರ್ತರಿಗೆ ಕರೆ ಬಂದಿತ್ತು ‘ಪ್ರಧಾನಮಂತ್ರಿಗಳು ನಿಮ್ಮೊಂದಿಗೆ ಮಾತನಾಡಲು ಬಯಸಿzರೆ’ ಎಂದು ಹೇಳಿದರು.
ಒಬ್ಬ ಪತ್ರಕರ್ತನಿಗೆ ಇದೊಂದು ಹೊಸ ಅನುಭವವಾಗಿತ್ತು.2014ರಿಂದ ಕೆಲವು ಕಾರ್ಯಕ್ರಮಗಳಲ್ಲಿ ಪ್ರಧಾನಿಯನ್ನು ಭೇಟಿ ಆಗುವ ಅವಕಾಶಗಳು ಈ ಪತ್ರಕರ್ತನಿಗೆ ಒದಗಿದ್ದವು. ಆದರೆ, ಪ್ರಧಾನಿಯಿಂದ ಎಂದಿಗೂ ದೂರವಾಣಿ ಕರೆ ಬಂದಿರಲಿಲ್ಲ. ಇಬ್ಬರ ಸಿದ್ಧಾಂತಗಳೂ ಬೇರೆ ಬೇರೆಯಾಗಿದ್ದವು ಮತ್ತು ಅವರು ಮೋದಿಯವರನ್ನು ಟೀಕಿಸಿ ಹಲವು ಸುದ್ದಿಗಳನ್ನು ಬರೆದಿದ್ದರು. ಮೋದಿ ಯವರ ಕರೆ ಬಂದಾಗ ಪತ್ರಕರ್ತರಿಗೆ ಆಶ್ಚರ್ಯವಾಗಿ ಅವರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ತೋಚದಂತಾಗಿತ್ತದೆ.
ಮೋದಿಯವರು ಅವರ ಆರೋಗ್ಯ ವಿಚಾರಿಸಿದರು ಮತ್ತು ಎಲ್ಲ  ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.ಮೋದಿಯವರ ಒಂದು ಕರೆಯು ತನ್ನ ಕಾಯಿಲೆಯ ವಿರುದ್ಧ ತೀವ್ರವಾಗಿ ಹೋರಾಡುವ ಶಕ್ತಿಯನ್ನು ಮತ್ತಷ್ಟು ನೀಡಿತ್ತು ಎಂದು ಅವರು ಹೇಳುತ್ತಾರೆ. ಪ್ರಧಾನಿ ಮೋದಿಯವರು ಮಾಡಿದ ಈ ಕರೆಯು ಪತ್ರಕರ್ತನಿಗೆ ಸಂತೋಷ ಮತ್ತು ತಾನು ಅನಾರೋಗ್ಯಕ್ಕೆ ತುತ್ತಾದಾಗ ಇಷ್ಟು ಬೇಗ ಕರೆ ಮಾಡಿದ್ದು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ನಮ್ಮಂತಹ ಪತ್ರಕರ್ತನಿಗೆ ಮೋದಿಯವರ ಸಹಾಯದ ಅಗತ್ಯವಿಲ್ಲ ಎಂದು ಚೆನ್ನಾಗಿ ತಿಳಿದಿತ್ತು. ಆದರೂ ಅವರು ತೋರಿದ ಕಾಳಜಿ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ.
ಕೋವಿಡ್-19ಸಂದರ್ಭದಲ್ಲಿ ಸಾವಿರಾರು ಜನರಿಗೆ ಮೋದಿಯವರು ಸ್ಪಂದಿಸಿದ್ದಾರೆ. ಸಂಘದ ಹಿರಿಯ ಪ್ರಚಾರಕರುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವ ವ್ಯವಸ್ಥೆಯನ್ನು ಮಾಡಿದ್ದರು. ಕೋವಿಡ್ ಎರಡನೆಯ ಅಲೆಯ ಉತ್ತುಂಗದ ಸಮಯದಲ್ಲಿಯೂ ಮೋದಿಯವರು ಪಕ್ಷದ ಹಿರಿಯ ನಾಯಕರಿಗಳಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿಕೊಂಡಿದ್ದರು. ನಮ್ಮ ರಾಜ್ಯದಲ್ಲಿ ಡಿ.ಎಚ್. ಶಂಕರಮೂರ್ತಿ ಮತ್ತು ರಾಮಚಂದ್ರ ಗೌಡರಿಗೆ ಕರೆ ಮಾತನಾಡಿದ್ದರು.
ವಿದ್ವಾಂಸರು ಮತ್ತು ಅಧ್ಯಾತ್ಮಿಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ -.ನಾರಾಯಣಾಚಾರ್ಯರು ತೀರಿಕೊಂಡಾಗ ಅವರ ಪತ್ನಿಯವರಿಗೆ ಮೋದಿಯವರು ತಮ್ಮ ಸಂತಾಪವನ್ನು ವ್ಯಕ್ತ ಮಾಡಿ, ನಾರಾಯಣಾಚಾರ್ಯರು ತಮ್ಮ ಬರಹದ ಮೂಲಕ ಮಾಡಿರುವ ಸಾಹಿತ್ಯ ಸೇವೆಯನ್ನು ನೆನದು ಪತ್ರ ಬರೆಯುತ್ತಾರೆ. ನಮ್ಮ ರಾಜ್ಯ ಸರಕಾರವೇ ಮಾಡದ ಕೆಲಸ ಮೋದಿಯವರು ಮಾಡಿದ್ದರು. ಈ ರೀತಿಯ ಸಂವೇದನಾಶೀಲತೆಯನ್ನು ಲಕ್ಷಾಂತರ ಜನರಿಗೆ ಅವರು ತೋರಿದ್ದಾರೆ.
ಮೋದಿಯವರ ಕರುಣಾ ಮುಖದಿಂದ ಉಪಕೃತರಾದವರು ಸಾವಿರಾರು ಮಂದಿಗಳು ಆದರೆ ಬಲಗೈಯಲ್ಲಿ ಮಾಡಿದ್ದು ಎಡಗೈಗೆ ತಿಳಿಯಬಾರದು ಎಂಬ ನೀತಿಯನ್ನು ಅಕ್ಷರಶಃ ಪಾಲಿಸುವ ಕಾರಣ ಅವರು ಮಾಡಿರುವ ಸಹಾಯಕ್ಕೆ ಪ್ರಚಾರ ಪಡೆಯುವುದೇ ಇಲ್ಲ. ಬ್ರಜೇಶ್ ಕುಮಾರ್ ಸಿಂಗ್ ಅವರು ಪತ್ರಕರ್ತರಾದ ಕಾರಣ ಅವರ ಕ್ಷೇತ್ರದ ಹಲವು ಘಟನೆಗಳನ್ನು ಲೇಖನದ ಮೂಲಕ ತಿಳಿಸಿzರೆ.