ಜೀವ ಉಳಿಸುವ ಯಕೃತ್‌ ಕಸಿ ಚಿಕಿತ್ಸೆ
ಡಾ.ರವೀಂದ್ರ ನಿಡೋಣಿ
ಮನುಷ್ಯನ ದೇಹದಲ್ಲಿ ಯಕೃತ್ತು (ಲಿವರ್) ಬಹಳ ಪ್ರಮುಖ ಅಂಗ. ಇದು ೫೦೦ಕ್ಕೂ ಹೆಚ್ಚು ಕೆಲಸಗಳನ್ನು ಮಾಡುತ್ತದೆ. ನೀವು ಲಿವರ್ ಸಿರೋಸಿಸ್ ಎಂಬ ಕಾಯಿಲೆಯ ಹೆಸರು ಕೇಳಿರಬಹುದು. ಹಾಗೆಂದರೆ ಏನು? ಮೃದುವಾಗಿರುವ ನಮ್ಮ ಯಕೃತ್ತಿನಲ್ಲಿ ಗಂಟುಗಳು ಬೆಳೆಯುವುದು. ಆಗ ಯಕೃತ್ತು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದನ್ನೇ ಲಿವರ್ ಸಿರೋಸಿಸ್ ಎನ್ನುತ್ತೇವೆ.
ಲಿವರ್ ಸಿರೋಸಿಸ್ ಉಂಟಾಗಲು ಹಲವಾರು ಕಾರಣಗಳಿವೆ. ಮುಖ್ಯ ಕಾರಣಗಳೆಂದರೆ ಅಧಿಕ ಆಲ್ಕೋಹಾಲ್ ಸೇವನೆ, ಹೆಪಟೈಟಿಸ್ ಬಿ ಮತ್ತು ಸಿ, ದೀರ್ಘಾವಽ ಅನಿಯಂತ್ರಿತ ಮಧುಮೇಹ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರು ವುದು, ರೋಗನಿರೋಧಕ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿರುವುದು ಹಾಗೂ ಕೆಲ ಜನ್ಮಜಾತ ಆರೋಗ್ಯ ಸಮಸ್ಯೆಗಳು.
ಭಾರತದಾದ್ಯಂತ ಸಾರಾರು ಜನರು ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಮ್ಮೆ ಲಿವರ್ ಸಿರೋಸಿಸ್ ಉಂಟಾದರೆ ಅದರಿಂದ ಇನ್ನಷ್ಟು ಅನಾರೋಗ್ಯದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಮುಖ್ಯವಾಗಿ ಜಾಂಡೀಸ್, ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಕಾಲುಗಳು ಊದಿ ಕೊಳ್ಳುವುದು, ರಕ್ತದ ವಾಂತಿ ಹಾಗೂ ನಿಃಶಕ್ತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದರಿಂದ ಸೋಂಕು ಉಂಟಾಗುವ ಹಾಗೂ ಮೂತ್ರ ಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇಂತಹ ರೋಗಿಗಳು ಪದೇಪದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಕೆಲ ರೋಗಿಗಳಿಗೆ ಆಗಾಗ ಹೊಟ್ಟೆ ಯಿಂದ ನೀರು ತೆಗೆಯಬೇಕಾಗುತ್ತದೆ.
ಆರಂಭದಲ್ಲಿ ಈ ಸಮಸ್ಯೆಗಳನ್ನು ಕಡಿಮೆ ಉಪ್ಪು ಸೇವಿಸುವ ಡಯೆಟ್, ನೀರು ಕಡಿಮೆ ಕುಡಿಯುವುದು, ಔಷಧ ಹಾಗೂ ಇಂಜೆಕ್ಷನ್‌ಗಳ ಮೂಲಕ ನಿಯಂತ್ರಿಸಬಹುದು. ಆದರೆ ಕೆಲ ರೋಗಿಗಳಲ್ಲಿ ಯಕೃತ್ತಿಗೆ ಉಂಟಾದ ಹಾನಿ ಉಲ್ಬಣಗೊಂಡು ಔಷಧಗಳು ಕೆಲಸ ಮಾಡಲಾಗದ ಸ್ಥಿತಿ ಉಂಟಾಗುತ್ತದೆ. ಅಂತಹ ರೋಗಿಗಳಿಗೆ ಇರುವ ಅತ್ಯುತ್ತಮ ಆಯ್ಕೆಯೆಂದರೆ ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಅಥವಾ ಯಕೃತ್ತಿನ ಕಸಿ. ಈ ಶಸಚಿಕಿತ್ಸೆಯಲ್ಲಿ ರೋಗಪೀಡಿತ ಯಕೃತ್ತನ್ನು ತೆಗೆದು ಹೊಸ ಯಕೃತ್ತನ್ನು ದೇಹದೊಳಗೆ ಅಳವಡಿಸಲಾಗುತ್ತದೆ.
ವರ್ಷಗಳು ಕಳೆದಂತೆ ವೈದ್ಯಕೀಯ ಲೋಕದಲ್ಲಿ ಯಕೃತ್ತಿನ ಕಸಿ ವಿಧಾನಗಳು ಸಾಕಷ್ಟು ಸುಧಾರಿಸಿವೆ. ವೈದ್ಯರಿಗೆ ಈ ಚಿಕಿತ್ಸೆಯಲ್ಲಿ ಲಭಿಸಿರುವ ಅನುಭವದಿಂದಾಗಿ ಇಂದು ತೀವ್ರತರ ಲಿವರ್ ಸಿರೋಸಿಸ್ ಕಾಯಿಲೆಗೆ ಲಿವರ್ ಕಸಿಯು ಸುರಕ್ಷಿತ ಚಿಕಿತ್ಸಾ ಧಾನವಾಗಿ ರೂಪುಗೊಂಡಿದೆ. ಅದೇ ವೇಳೆ,ಲಿವರ್ ಕಸಿ ಚಿಕಿತ್ಸೆಯು ಜನರ ಕೈಗೆಟಕುವ ಹಾಗೂ ಭಾರತದ ಸಣ್ಣಪುಟ್ಟ ನಗರಗಳಲ್ಲೂ ಲಭಿಸುವ ಚಿಕಿತ್ಸೆಯಾಗಿ ಅಭಿವೃದ್ಧಿಗೊಂಡಿದೆ.
ಯಕೃತ್ ಕಸಿಗೆ ಅಗತ್ಯವಿರುವ ಹೊಸ ಯಕೃತ್ತನ್ನು ಎರಡು ಮೂಲಗಳಿಂದ ಪಡೆದುಕೊಳ್ಳಬಹುದು. ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಮೂಲ ವೆಂದರೆ ಕುಟುಂಬದ ಸದಸ್ಯರು. ಅಂದರೆ ಪತಿ, ಪತ್ನಿ, ತಂದೆ, ತಾಯಿ, ಮಗ, ಮಗಳು, ಇನ್ನಾವುದೇ ಹತ್ತಿರದ ಸಂಬಂಽ ಅಥವಾ ಯಕೃತ್ತನ್ನು ಸ್ವಯಂ ಪ್ರೇರಿತವಾಗಿ ದಾನ ಮಾಡಲು ಮುಂದೆ ಬರುವ ಇನ್ನಾವುದೇ ವ್ಯಕ್ತಿಯಿಂದ ಅರ್ಧ ಲಿವರ್ ಪಡೆದು ಕಸಿ ಮಾಡಬಹುದು. ಇದನ್ನು ಜೀವಂತ ದಾನಿಯ ಯಕೃತ್ ಕಸಿ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಜೀವಂತವಿರುವ ವ್ಯಕ್ತಿಯು ತನ್ನ ಲಿವರ್‌ನ ಅರ್ಧ ಭಾಗವನ್ನು ದಾನ ಮಾಡಿದ ನಂತರ ಆತನ ದೇಹ ದಲ್ಲಿ ಮತ್ತೆ ಲಿವರ್ ಮೊದಲಿನಂತೆ ಬೆಳೆಯುತ್ತದೆ.
ಸಾಮಾನ್ಯವಾಗಿ ೬ ರಿಂದ ೮ ವಾರಗಳಲ್ಲಿ ಆತನ ಲಿವರ್ ಬಹುತೇಕ ಮೂಲ ಗಾತ್ರಕ್ಕೆ ಬೆಳೆಯುತ್ತದೆ. ಯಕೃತ್ ಕಸಿಗೆ ಹೊಸ ಯಕೃತ್ತನ್ನು ಪಡೆಯುವ ಎರಡನೇ ಮೂಲವೆಂದರೆ ಮೆದುಳು ನಿಷ್ಕ್ರಿಯಗೊಂಡು ಮೃತಪಡುವ (ಬ್ರೇನ್ ಡೆಡ್) ವ್ಯಕ್ತಿಯ ಕುಟುಂಬದವರು ಆತನ ಲಿವರ್ ದಾನ ಮಾಡಲು ಮುಂದೆ ಬಂದರೆ ಅದನ್ನು ಪಡೆದುಕೊಳ್ಳುವುದು. ಇದನ್ನು ‘ಮೃತ ದಾನಿಯ ಯಕೃತ್ ಕಸಿ’ಎಂದು ಕರೆಯಲಾಗುತ್ತದೆ. ರಸ್ತೆ ಅಪಘಾತಗಳಲ್ಲಿ ಮಾರಣಾಂ ತಿಕವಾಗಿ ಗಾಯಗೊಂಡವರು, ಮೆದುಳಿಗೆ ಪೆಟ್ಟು ಬಿದ್ದವರು ಅಥವಾ ಪಾರ್ಶ್ವವಾಯು ಪೀಡಿತರ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಅಂತಹ ವ್ಯಕ್ತಿಗಳು ಬ್ರೇನ್ ಡೆಡ್ ಸ್ಥಿತಿಗೆ ತಲುಪಿ ಐಸಿಯುನಲ್ಲಿರಬಹುದು.
ಅಂತಹ ಸ್ಥಿತಿಯಲ್ಲಿ ಅವರ ಎದೆಬಡಿತ ಇನ್ನೂ ನಿಂತಿರುವುದಿಲ್ಲ. ಹೀಗಾಗಿ ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಮುಂತಾದ ಪ್ರಮುಖ ಅಂಗಗಳಿಗೆ ಮೊದಲಿನಂತೆಯೇ ಆರೋಗ್ಯಕರವಾಗಿ ರಕ್ತದ ಪೂರೈಕೆ ಆಗುತ್ತಿರುತ್ತದೆ. ಆದರೆ, ಆ ವ್ಯಕ್ತಿ ಬದುಕಿ ಮೊದಲಿನಂತಾಗುವ ಸಾಧ್ಯತೆ ಇರುವುದಿಲ್ಲ. ಇದನ್ನುಕುಟುಂಬಸ್ಥರು ಅರ್ಥ ಮಾಡಿಕೊಂಡು ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರಬೇಕು. ಆತ ಮೃತಪಟ್ಟ ಮೇಲೆ ದೇಹದ ಜತೆಗೆ ಈ ಅಂಗಾಂಗಗಳನ್ನೂ ಹೂತುಹಾಕುವುದರಿಂದ ಅಥವಾ ಸುಡುವುದರಿಂದ ಯಾವ ಪ್ರಯೋಜನದೆ? ಭಾರತೀಯರಲ್ಲಿ ಯಕೃತ್ತಿನ ರೋಗಗಳ ಬಗ್ಗೆ, ಲಿವರ್ಸಿರೋಸಿಸ್‌ಗೆ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಹಾಗೂ ಯಕೃತ್ತಿನ ವೈಫಲ್ಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಲ್ಲ.
ಗಾಗಿ ಯಕೃತ್ತಿನ ಕಸಿಯ ಮೂಲಕ ಲಿವರ್ ಸಿರೋಸಿಸ್ ಹಾಗೂ ಲಿವರ್ ವೈಫಲ್ಯದ ಸಮಸ್ಯೆಯನ್ನು ಗುಣಪಡಿಸಬಹುದು ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಲಿವರ್ ಸಿರೋಸಿಸ್ ಅಥವಾ ಯಕೃತ್ ವೈಫಲ್ಯದಿಂದ ಆಂತರಿಕ ರಕ್ತಸ್ರಾವ ಉಂಟಾಗುವುದು, ಜಾಂಡೀಸ್, ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು ಅಥವಾ ಮೂತ್ರ ಪಿಂಡದ ಸಮಸ್ಯೆಗಳು ಕಾಣಿಸಿಕೊಂಡರೆ ಪದೇಪದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತ ನೋವು ಅನುಭವಿಸುವುದರಲ್ಲಿ ಅರ್ಥವಿಲ್ಲ.